ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 12/8 ಪು. 8-9
  • ಒಂದೇ ಧರ್ಮವು ಉಳಿಯುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದೇ ಧರ್ಮವು ಉಳಿಯುವುದು
  • ಎಚ್ಚರ!—1996
  • ಅನುರೂಪ ಮಾಹಿತಿ
  • ವಿಫಲವಾಗದ ಧೈರ್ಯದ ಮೂಲನು
    ಕಾವಲಿನಬುರುಜು—1994
  • ಪಾರಾಗುವಿಕೆಗಾಗಿ ಶುದ್ಧ ಧರ್ಮವನ್ನು ಆಚರಿಸುವುದು
    ಕಾವಲಿನಬುರುಜು—1992
  • ಸುಳ್ಳು ಧರ್ಮದಿಂದ ಪ್ರತ್ಯೇಕಿಸಿಕೊಳ್ಳುವುದು
    ಕಾವಲಿನಬುರುಜು—1992
  • ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೊ?
    ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೊ?
ಇನ್ನಷ್ಟು
ಎಚ್ಚರ!—1996
g96 12/8 ಪು. 8-9

ಒಂದೇ ಧರ್ಮವು ಉಳಿಯುವುದು

ಭೂಮಿಯ ಎಲ್ಲ ಜನರು ಒಂದು ಧರ್ಮದಲ್ಲಿ, ಒಬ್ಬನೇ ಸತ್ಯ ದೇವರ ಒಂದೇ ಶುದ್ಧಾರಾಧನೆಯಲ್ಲಿ ಐಕ್ಯರಾಗಿದ್ದುದಾದರೆ ಹೇಗಿದ್ದೀತೆಂದು ಕಲ್ಪಿಸಿಕೊಳ್ಳಿರಿ. ಅದೆಂತಹ ಐಕ್ಯದ ಮೂಲವಾಗಿರುತ್ತಿತ್ತು! ಧಾರ್ಮಿಕ ಕಚ್ಚಾಟ, ಜಗಳ, ಅಥವಾ ಯುದ್ಧವು ಇನ್ನಿರುತ್ತಿರಲಿಲ್ಲ. ಇದು ಕೇವಲ ಒಂದು ಕನಸೊ? ಅಲ್ಲ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ವೇಶ್ಯೆಯ ನಾಶನದ ಕುರಿತಾದ ಅಪೊಸ್ತಲ ಯೋಹಾನನ ದರ್ಶನವು, ಅವಳ ನಾಶನದ ಅನಂತರ ಒಂದು ಆರಾಧನಾ ವಿಧವು ಉಳಿಯುವುದೆಂಬುದನ್ನು ಸೂಚಿಸುತ್ತದೆ. ಅದು ಯಾವುದು?

ಯೋಹಾನನು ಪರಲೋಕದಿಂದ ಕೇಳಿಸಿಕೊಂಡ ಆ ವಾಣಿಯು ನಮಗೊಂದು ಸುಳಿವನ್ನು ಕೊಡುತ್ತದೆ: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.” (ಪ್ರಕಟನೆ 18:4) ದೇವರು ತಾನೇ ಇಲ್ಲಿ ತನ್ನ ಜನರೊಂದಿಗೆ ಮಾತಾಡುತ್ತಿರುವುದು ವ್ಯಕ್ತ. ವೇಶ್ಯೆಯು ಒಂದು ಸಭ್ಯ ಜೀವನಕ್ಕೆ ಕ್ರಮಪಡಿಸಿಕೊಳ್ಳುವಂತೆ ನೆರವಾಗುವ ಮೂಲಕ ಅವಳನ್ನು ರಕ್ಷಿಸುವ ಒಂದು ಸಾರ್ವತ್ರಿಕ ಪ್ರಯತ್ನದಲ್ಲಿ ಅವಳೊಂದಿಗೆ ಜತೆಗೂಡುವಂತೆ ಅವನು ತನ್ನ ಜನರಿಗೆ ಆಜ್ಞಾಪಿಸುವುದಿಲ್ಲವೆಂಬುದನ್ನು ಗಮನಿಸಿರಿ. ಇಲ್ಲ, ಅವಳಿಗೆ ಯಾವ ಚಿಕಿತ್ಸೆಯೂ ಇಲ್ಲ. ಆದುದರಿಂದ, ಅವಳ ಘೋರ ಪಾಪಪೂರ್ಣತೆಯಿಂದ ಕಳಂಕಿತರಾಗುವುದನ್ನು ತಪ್ಪಿಸಿಕೊಳ್ಳಲಿಕ್ಕಾಗಿ ಮತ್ತು ಕಟ್ಟಕಡೆಗೆ ತೀರ್ಪಿಗೊಳಗಾಗಿ, ಅವಳೊಂದಿಗೆ ನಾಶವಾಗುವುದನ್ನು ತಪ್ಪಿಸಿಕೊಳ್ಳಲಿಕ್ಕಾಗಿ ಅವಳಿಂದ ಹೊರಬರುವಂತೆ ಆತನು ಅವರಿಗೆ ಆಜ್ಞಾಪಿಸುತ್ತಾನೆ.

“ಅವಳನ್ನು ಬಿಟ್ಟುಬನ್ನಿರಿ” ಎಂಬ ಸ್ವರ್ಗೀಯ ಆಜ್ಞೆಯು, ಪ್ರಾಮಾಣಿಕ ಸತ್ಯಾನ್ವೇಷಕರಿಗೆ ದೇವಜನರನ್ನು ಗುರುತಿಸಲು ಸಹ ಸಹಾಯಮಾಡುತ್ತದೆ. ಅವರು ತಮ್ಮನ್ನು ಹೀಗೆ ಕೇಳಿಕೊಳ್ಳಬಹುದು, ‘ಭೂಮಿಯಲ್ಲಿರುವ ಯಾವ ಜನರು ಇಂದು “ಮಹಾ ಬಾಬೆಲಿ”ಗೆ (NW) ಸಂಬಂಧಿಸಿದ ಯಾವುದೇ ಧರ್ಮ, ಸಂಘಟನೆ, ಅಥವಾ ಆರಾಧಕರ ಗುಂಪನ್ನು ತ್ಯಜಿಸಿಬಿಡುವ ಮೂಲಕ ಈ ಆಜ್ಞೆಯನ್ನು ಪಾಲಿಸಿದ್ದಾರೆ? (ಪ್ರಕಟನೆ 18:2) ಹೀಗೆ ಭೂಮಿಯಲ್ಲಿರುವ ಯಾವ ಜನರು ಸಕಲ ಬಬಿಲೋನ್ಯ ಸಿದ್ಧಾಂತಗಳಿಂದ, ಪಂಗಡಗಳಿಂದ, ಪದ್ಧತಿಗಳಿಂದ ಮತ್ತು ಸಂಪ್ರದಾಯಗಳಿಂದ ತಮ್ಮನ್ನು ಮುಕ್ತಗೊಳಿಸಿಕೊಂಡಿದ್ದಾರೆ?’ ಅದು ಯೆಹೋವನ ಸಾಕ್ಷಿಗಳಲ್ಲದೆ ಮತ್ತಾರು ಆಗಿರಸಾಧ್ಯವಿದೆ? 230ಕ್ಕೂ ಮೇಲ್ಪಟ್ಟ ದೇಶಗಳಲ್ಲಿ, 52 ಲಕ್ಷಕ್ಕೂ ಹೆಚ್ಚಿನ ಸಾಕ್ಷಿಗಳಲ್ಲಿ, ಹುಟ್ಟಿನಿಂದಲೊ ಮತಾಂತರದಿಂದಲೊ ಯಾವುದೊ ಬಬಿಲೋನ್ಯ ಧರ್ಮದಲ್ಲಿ ಜತೆಗೂಡಿದ್ದ ಇವರೆಲ್ಲರು, ಕೆಲವೊಮ್ಮೆ ಸಂಬಂಧಿಕರ, ಮಿತ್ರರ, ಮತ್ತು ಧಾರ್ಮಿಕ ಮುಖಂಡರ ಆಕ್ಷೇಪಣೆಗಳ ಮತ್ತು ವಿರೋಧದ ಮಧ್ಯೆಯೂ, ನಿರ್ದಿಷ್ಟವಾದ ತ್ಯಾಗಪತ್ರವನ್ನಿತ್ತು ಅದರಿಂದ ಹೊರಬಂದಿದ್ದಾರೆ.

ಒಂದು ಉದಾಹರಣೆಯು ದಕ್ಷಿಣ ಆಫ್ರಿಕದ ಹೆನ್ರಿಯೆಂಬ ಒಬ್ಬ ಮನುಷ್ಯನದ್ದು. ಅವನು ತನ್ನ ಚರ್ಚಿನ ಕೋಶಾಧ್ಯಕ್ಷನೂ ಚರ್ಚಿಗೆ ಬಹಳವಾಗಿ ಅಂಟಿಕೊಂಡಿದ್ದವನೂ ಆಗಿದ್ದನು. ಆದರೆ ಅವನು ಸತ್ಯಕ್ಕಾಗಿ ಹುಡುಕುತ್ತಿದ್ದನು, ಮತ್ತು ಒಂದು ದಿನ ಯೆಹೋವನ ಸಾಕ್ಷಿಗಳೊಂದಿಗೆ ಒಂದು ಉಚಿತ ಗೃಹ ಬೈಬಲಭ್ಯಾಸವನ್ನು ಸ್ವೀಕರಿಸಿದನು. ಸಕಾಲದಲ್ಲಿ, ಅವನು ಒಬ್ಬ ಸಾಕ್ಷಿಯಾಗಲು ನಿರ್ಣಯಿಸಿದಾಗ, ತಾನು ಚರ್ಚಿಗೆ ರಾಜೀನಾಮೆ ಕೊಡಲು ಬಯಸುತ್ತೇನೆಂದು, ತನ್ನ ಹತ್ತಿರದ ನೆರೆಯವನೂ ಆಗಿದ್ದ ತನ್ನ ಪಾಸ್ಟರನಿಗೆ ಹೇಳಿದನು.

ಪಾಸ್ಟರನಿಗೆ ಧಕ್ಕೆ ಬಡಿಯಿತು, ತದನಂತರ ಅವನು ಚರ್ಚಿನ ಸಭಾಪತಿಯನ್ನು ಮತ್ತು ಇತರ ಸದಸ್ಯರನ್ನು ಕರೆದುಕೊಂಡು ಹೆನ್ರಿಯನ್ನು ಭೇಟಿಮಾಡಲು ಹೋದನು. ಅವರಿಗನುಸಾರ, ದೇವರ ಪವಿತ್ರಾತ್ಮವಿರದ ಒಂದು ಚರ್ಚಿನ ಸದಸ್ಯನಾಗುವುದಕ್ಕಾಗಿ, ತಮ್ಮ ಚರ್ಚನ್ನು ಅವನು ಬಿಟ್ಟುಬಿಟ್ಟದ್ದೇಕೆಂದು ಅವರು ಅವನನ್ನು ಕೇಳಿದರು. “ಆರಂಭದಲ್ಲಿ ಅವರಿಗೆ ಉತ್ತರಕೊಡಲು ನಾನು ಹೆದರಿದೆ,” ಎಂದನು ಹೆನ್ರಿ. “ಯಾಕಂದರೆ ಅವರು ಯಾವಾಗಲೂ ನನ್ನ ಮೇಲೆ ಮಹಾ ಪ್ರಭಾವವುಳ್ಳವರಾಗಿದ್ದರು. ಆದರೆ ಸಹಾಯಕ್ಕಾಗಿ ನಾನು ಯೆಹೋವನಿಗೆ ಪ್ರಾರ್ಥಿಸಿದೆ, ಮತ್ತು ಈ ಸಮರ್ಥನೆಯನ್ನು ಮಾಡುವಂತೆ ಆತನು ನನ್ನನ್ನು ಶಕ್ತಗೊಳಿಸಿದನು: ‘ಅಂತಾರಾಷ್ಟ್ರೀಯ ಧರ್ಮಗಳೆಲ್ಲವುಗಳಲ್ಲಿ ಯೆಹೋವ ಎಂಬ ದೇವರ ಹೆಸರನ್ನು ಕ್ರಮಬದ್ಧವಾಗಿ ಉಪಯೋಗಿಸುವ ಒಂದೇ ಒಂದು ಧರ್ಮವು ಯಾವುದು? ಯೆಹೋವನ ಸಾಕ್ಷಿಗಳೇ ಅವರಲ್ಲವೆ? ತನ್ನ ಹೆಸರನ್ನು ಅವರು ಧರಿಸುವಂತೆ ಅನುಮತಿಸುವ ದೇವರು ತನ್ನ ಪವಿತ್ರಾತ್ಮವನ್ನು ಸಹ ಅವರಿಗೆ ಕೊಡದಿರುವನೆಂದು ನೀವು ಭಾವಿಸುತ್ತೀರೊ?’” ಚರ್ಚ್‌ ಅಧಿಕಾರಿಗಳು ಈ ತರ್ಕವನ್ನು ತಪ್ಪೆಂದು ಸಿದ್ಧಪಡಿಸಲು ಅಶಕ್ತರಾಗಿದ್ದರು, ಮತ್ತು ಹೆನ್ರಿಯು ಈಗ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದಾನೆ.

ಹೀಗೆ ಪರಲೋಕದಿಂದ ಬಂದ ಒಂದು ವಾಣಿಯು “ಅವಳನ್ನು ಬಿಟ್ಟುಬನ್ನಿರಿ” ಎಂದು ಆಜ್ಞಾಪಿಸುವಾಗ, ಹೋಗಲು ಎಲ್ಲೋ ಒಂದು ಸ್ಥಳವಿದೆಯೆಂಬುದು ನಿಶ್ಚಯ. (ಪ್ರಕಟನೆ 18:4) ಯಾರ ಬಳಿಗೆ ನೀವು ಓಡಿಹೋಗಸಾಧ್ಯವಿದೆಯೊ ಆ ಜನರು, ಸತ್ಯ ದೇವರಾದ ಯೆಹೋವನ ಆರಾಧಕರಾಗಿದ್ದಾರೆ. ಲಕ್ಷಾಂತರ ಜನರು ಓಡಿಹೋಗಿದ್ದಾರೆ. ಯೆಹೋವನ ಸಾಕ್ಷಿಗಳೆಂದು ಜ್ಞಾತರಾದ ಇವರು, 78,600ಕ್ಕೂ ಹೆಚ್ಚಿನ ಸಭೆಗಳಲ್ಲಿ ಸಂಘಟಿತರಾಗಿದ್ದು, ಒಂದು ಅಂತಾರಾಷ್ಟ್ರೀಯ ಕ್ರೈಸ್ತ ಸಹೋದರತ್ವವನ್ನು ರಚಿಸುತ್ತಾರೆ, ಮತ್ತು ಈಗ ಅವರ ಇತಿಹಾಸದಲ್ಲೇ ಅತಿ ದೊಡ್ಡದಾದ ವೃದ್ಧಿಯನ್ನು ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅವರು 12,00,000ಕ್ಕೂ ಹೆಚ್ಚು ಜನರಿಗೆ ದೀಕ್ಷಾಸ್ನಾನವನ್ನು ಮಾಡಿಸಿದ್ದಾರೆ! ದೀಕ್ಷಾಸ್ನಾನಕ್ಕೆ ಮೊದಲು ಇವರೆಲ್ಲರು ಆತ್ಮಿಕವಾಗಿ ಹುರಿದುಂಬಿಸುವ ಒಂದು ಬೈಬಲ್‌ ಅಧ್ಯಯನದ ಪಾಠಕ್ರಮವನ್ನು ಮುಗಿಸಿದ್ದರು. ಇದು, ಇತರ ಯಾವುದೇ ಧರ್ಮಕ್ಕೆ ತಮ್ಮ ಹಿಂದಿನ ಎಲ್ಲ ಅಂಟಿಕೆಯನ್ನು ಅವರು ತ್ಯಜಿಸಿಬಿಡುವಂತೆ ವ್ಯಕ್ತಿಪರವಾದ, ಸಾಧಾರವುಳ್ಳ ನಿರ್ಣಯವನ್ನು ಮಾಡಲು ಅವರನ್ನು ಸಾಧ್ಯಗೊಳಿಸಿತು.—ಚೆಫನ್ಯ 2:2, 3.

ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳೊಂದರಲ್ಲಿನ ಒಂದು ಕೂಟಕ್ಕೆ ನೀವಿನ್ನೂ ಹಾಜರಾಗಿರದಿದ್ದಲ್ಲಿ, ಈ ವಾರ ಹಾಜರಾಗಬಾರದೇಕೆ? ಅಲ್ಲಿ ನೀವು ಏನು ನೋಡುವಿರೊ ಮತ್ತು ಕೇಳಿಸಿಕೊಳ್ಳುವಿರೊ ಅದರಿಂದ ನೀವು ಹಿತಕರವಾಗಿ ಪ್ರಭಾವಿಸಲ್ಪಡಬಹುದು. ಮತ್ತು ಬೈಬಲನ್ನು ತಿಳಿದುಕೊಳ್ಳಲು ನೀವು ಬಯಸುವುದಾದರೆ, ಇತರ ಲಕ್ಷಾಂತರ ಮಂದಿ ಮಾಡಿರುವಂತೆ, ಅದನ್ನು ನಿಮ್ಮೊಂದಿಗೆ ಅಭ್ಯಾಸಿಸುವಂತೆ ಯೆಹೋವನ ಸಾಕ್ಷಿಗಳಲ್ಲೊಬ್ಬರನ್ನು ಯಾಕೆ ಕೇಳಿಕೊಳ್ಳಬಾರದು? ನಿಮ್ಮ ಪ್ರಾರ್ಥನೆಯು ದೇವರ ವಾಕ್ಯದ ಸತ್ಯ ತಿಳಿವಳಿಕೆಗಾಗಿಯೂ, ಆ ವಾಕ್ಯದೊಂದಿಗೆ ಹೊಂದಿಕೆಯಲ್ಲಿನ ಒಂದು ಜೀವನಕ್ರಮಕ್ಕಾಗಿಯೂ ಇರುವುದಾದರೆ, ನಿಮ್ಮ ಪ್ರಾರ್ಥನೆಗೆ ಉತ್ತರವನ್ನು ನೀವು ಕಂಡುಕೊಳ್ಳುವಿರಿ.

[ಪುಟ 0 ರಲ್ಲಿರುವ ಚಿತ್ರಗಳು]

ಲಕ್ಷಾಂತರ ಮಂದಿ ಯೆಹೋವ ದೇವರ ಆರಾಧನೆಯ ಕಡೆಗೆ ತೆರಳುತ್ತಿದ್ದಾರೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ