ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 7/8 ಪು. 3
  • ಆಹಾರಪಥ್ಯ ಚಿಂತೆಯ ವಿಷಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಹಾರಪಥ್ಯ ಚಿಂತೆಯ ವಿಷಯ
  • ಎಚ್ಚರ!—1997
  • ಅನುರೂಪ ಮಾಹಿತಿ
  • ನಾನು ತೂಕ ಕಳೆದುಕೊಂಡರೆ, ಯಾವನೂ ಕಳೆದುಕೊಳ್ಳ ಬಲ್ಲನು!
    ಎಚ್ಚರ!—1993
  • ಆರೋಗ್ಯಕರವಾದ ಆಹಾರಪಥ್ಯದ ಆಯ್ಕೆಮಾಡುವುದು
    ಎಚ್ಚರ!—1997
  • ಹಿತ ಮಿತ ಆಹಾರ ಆರೋಗ್ಯಕ್ಕೆ ಆಧಾರ
    ಯುವಜನರ ಪ್ರಶ್ನೆಗಳು
  • ಹೆಚ್ಚು ದಪ್ಪಗಿರುವುದು ಹೆಚ್ಚು ಆರೋಗ್ಯಕರವಲ್ಲದಿರುವಾಗ
    ಎಚ್ಚರ!—1997
ಇನ್ನಷ್ಟು
ಎಚ್ಚರ!—1997
g97 7/8 ಪು. 3

ಆಹಾರಪಥ್ಯ ಚಿಂತೆಯ ವಿಷಯ

“ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು” ಎಂಬುದಾಗಿ ಪ್ರಸಂಗಿ 9:7ರಲ್ಲಿ ಬೈಬಲು ಹೇಳುತ್ತದೆ. ನಿಜವಾಗಿಯೂ, ತಿನ್ನುವುದು ಒಂದು ಆವಶ್ಯಕತೆಯಾಗಿದೆ ಮಾತ್ರವಲ್ಲ, ಜೀವಿತದಲ್ಲಿನ ಅತ್ಯಂತ ಪ್ರಮುಖ ಸುಖಾನುಭವಗಳಲ್ಲಿ ಒಂದಾಗಿದೆ.

34 ವರ್ಷ ಪ್ರಾಯದ ಥಾಮಸ್‌ನನ್ನು ಪರಿಗಣಿಸಿರಿ. ಮಾಂಸ ತಿನ್ನುವುದನ್ನು ಅವನು ಇಷ್ಟಪಡುತ್ತಾನೆ. ಮತ್ತು ಅವನು ಅದನ್ನು ದಿನಾಲೂ—ಅನೇಕವೇಳೆ ಒಂದು ದಿನದಲ್ಲಿ ಹಲವಾರು ಬಾರಿ—ತಿನ್ನುತ್ತಾನೆ. ಅವನ ಕ್ರಮವಾದ ಬೆಳಗಿನ ಉಪಾಹಾರದಲ್ಲಿ, ಹಾಲು, ಕೆಲವಾರು ಮೊಟ್ಟೆಗಳು, ಬೆಣ್ಣೆಯಿಂದಾವೃತವಾದ ಬ್ರೆಡ್‌ ಅಥವಾ ಟೋಸ್ಟ್‌, ಹಾಗೂ ಸಾಸೆಜ್‌ ಅಥವಾ ಸುಟ್ಟ ಹಂದಿಮಾಂಸ ಸೇರಿರುತ್ತದೆ. ಫಾಸ್ಟ್‌-ಫುಡ್‌ ಮಾರಾಟದ ಸ್ಥಳಗಳಲ್ಲಿ, ಅವನು ಚೀಸ್‌ಬರ್ಗರ್‌ಗಳು, ಕರಿದ ಆಲೂಗಡ್ಡೆಗಳು, ಮತ್ತು ಮಿಲ್ಕ್‌ ಶೇಕ್‌ಗಳನ್ನು ಆರ್ಡರ್‌ಮಾಡುತ್ತಾನೆ. ರೆಸ್ಟೊರಂಟ್‌ನಲ್ಲಿ ಊಟಮಾಡುವಾಗ, ಅವನು ಬೀಫ್‌ಸ್ಟೇಕ್‌ (ಗೋಮಾಂಸದ ತುಂಡು) ಅನ್ನು ಮುಖ್ಯಖ್ಯಾದವಾಗಿ ಆರಿಸಿಕೊಳ್ಳುತ್ತಾನೆ. ಅವನ ಅಚ್ಚುಮೆಚ್ಚಿನ ರೆಸ್ಟೊರಂಟ್‌, ಅವನಿಗೆ ಇಷ್ಟವಾದಂತಹ ರೀತಿಯಲ್ಲಿಯೇ, 680 ಗ್ರ್ಯಾಮ್‌ಗಳಷ್ಟು ಸ್ಟೇಕನ್ನೂ, ಹುಳಿ ಕ್ರೀಮ್‌ ಹೇರಿ ಬೇಕ್‌ಮಾಡಿದ ಆಲೂಗಡ್ಡೆಯನ್ನೂ ಸರಬರಾಯಿಮಾಡುತ್ತದೆ. ಚಾಕೊಲೆಟ್‌ ಐಸ್‌ಕ್ರೀಮ್‌ ಮೇಲಾವರಣವುಳ್ಳ ಚಾಕೊಲೆಟ್‌ ಕೇಕ್‌, ಅವನ ಅಚ್ಚುಮೆಚ್ಚಿನ ಸೀಭಕ್ಷ್ಯವಾಗಿದೆ.

ಥಾಮಸ್‌ 178 ಸೆಂಟಿಮೀಟರುಗಳಷ್ಟು ಎತ್ತರವಿದ್ದು, 89 ಕಿಲೊಗ್ರಾಮ್‌ಗಳಷ್ಟು ತೂಕವುಳ್ಳವನಾಗಿದ್ದಾನೆ; 1995ರ ಅಮೆರಿಕ ಸರಕಾರದ ಆಹಾರಪಥ್ಯದ ಮಾರ್ಗದರ್ಶನಗಳಿಗನುಸಾರ, ಅವನು 9 ಕಿಲೊಗ್ರಾಮ್‌ಗಳಷ್ಟು ಅಧಿಕ ತೂಕವುಳ್ಳವನಾಗಿದ್ದಾನೆ. “ನನ್ನ ತೂಕದ ವಿಷಯದಲ್ಲಿ ನಾನು ಚಿಂತಿಸುವುದಿಲ್ಲ” ಎಂದು ಥಾಮಸ್‌ ಹೇಳುತ್ತಾನೆ. “ನನ್ನ ಆರೋಗ್ಯವು ಅತ್ಯುತ್ತಮವಾಗಿದೆ. ಕಳೆದ 12 ವರ್ಷಗಳಲ್ಲಿ ನಾನು ಒಂದು ದಿನವೂ ಕೆಲಸವನ್ನು ತಪ್ಪಿಸಿಲ್ಲ. ಸಾಮಾನ್ಯವಾಗಿ ನನಗೆ ಹಿತಕರವಾದ ಹಾಗೂ ಕಾರ್ಯಶಕ್ತಿಯುಳ್ಳ ಅನಿಸಿಕೆಯಾಗುತ್ತದೆ—680 ಗ್ರ್ಯಾಮ್‌ಗಳಷ್ಟು ಸ್ಟೇಕ್‌ ತಿಂದ ಬಳಿಕ ಹಾಗೆ ಅನಿಸುವುದಿಲ್ಲ ಎಂಬುದು ನಿಶ್ಚಯ.”

ಆದರೂ, ಥಾಮಸ್‌ನ ಆಹಾರಪಥ್ಯವು, ಅವನಿಗೆ ಹೆಚ್ಚು ಕೆಟ್ಟ ಪರಿಣಾಮವನ್ನುಂಟುಮಾಡುತ್ತಾ, ನಿಧಾನವಾಗಿ ಅವನನ್ನು ಹೃದಯಾಘಾತದ ಒಬ್ಬ ಅಭ್ಯರ್ಥಿಯನ್ನಾಗಿ ಮಾಡಸಾಧ್ಯವಿತ್ತೊ? ಡಾ. ಶೆರ್ವಿನ್‌ ನ್ಯೂಲೆಂಡ್‌, ನಾವು ಸಾಯುವ ವಿಧ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ, ‘ಆತ್ಮಘಾತುಕವಾಗಿರುವ ಜೀವನ ವೈಶಿಷ್ಟ್ಯಗಳ’ ಕುರಿತಾಗಿ ಮಾತಾಡುತ್ತಾರೆ ಮತ್ತು ಅವುಗಳಲ್ಲಿ ‘ಕೆಂಪು ಮಾಂಸ, ಸುಟ್ಟ ಹಂದಿಮಾಂಸದ ದೊಡ್ಡ ಹೋಳುಗಳು ಹಾಗೂ ಬೆಣ್ಣೆ’ಯ ಆಹಾರಪಥ್ಯವನ್ನು ಸೇರಿಸುತ್ತಾರೆ.

ಕೆಲವೊಂದು ಆಹಾರಗಳು ಅನೇಕರಲ್ಲಿ ಹೃದ್ರೋಗವನ್ನು ಹೇಗೆ ಉಂಟುಮಾಡುತ್ತವೆ? ಅಪಾಯವನ್ನು ಉಂಟುಮಾಡುವಂತಹ ಯಾವ ವಸ್ತು ಅವುಗಳಲ್ಲಿದೆ? ಈ ಪ್ರಶ್ನೆಗಳನ್ನು ಚರ್ಚಿಸುವುದಕ್ಕೆ ಮೊದಲು, ಅಧಿಕ ತೂಕವುಳ್ಳವರಾಗಿರುವುದರಿಂದ ಉಂಟಾಗುವ ಆರೋಗ್ಯದ ಅಪಾಯಗಳ ಕಡೆಗೆ ನಾವು ನಿಕಟ ನೋಟವನ್ನು ಹರಿಸೋಣ.

[ಪುಟ 4 ರಲ್ಲಿರುವ ಚಿತ್ರ]

ಇಂತಹ ಆಹಾರಪಥ್ಯವು ಚಿಂತೆಯ ವಿಷಯವಾಗಿದೆ ಏಕೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ