ಎಲ್ಲರಿಗೂ ಆಹಾರ ಕೇವಲ ಒಂದು ಸ್ವಪ್ನವೋ?
ಇಟಲಿಯ ಎಚ್ಚರ! ಸುದ್ದಿಗಾರರಿಂದ
“ಪ್ರತಿಯೊಬ್ಬ ಪುರುಷ, ಸ್ತ್ರೀ ಹಾಗೂ ಮಗುವಿಗೆ ಹಸಿವು ಮತ್ತು ನ್ಯೂನಪೋಷಣೆಯಿಂದ ಸ್ವತಂತ್ರವಾಗಿರುವ ಹಕ್ಕಿದೆ” ಎಂದು ಹಿಂದೆ 1974ರಲ್ಲಿ ಅಮೆರಿಕದ ಆಹಾರ ಮತ್ತು ವ್ಯವಸಾಯ ಸಂಸ್ಥೆ (ಎಫ್ಏಓ)ಯಿಂದ ಪ್ರಾಯೋಜಿಸಲ್ಪಟ್ಟ ಲೋಕ ಆಹಾರ ಸಮ್ಮೇಳನವು ಘೋಷಿಸಿತು. ಆಮೇಲೆ “ದಶಕವೊಂದರೊಳಗೆ” ಲೋಕದಿಂದ ಹಸಿವನ್ನು ನಿರ್ಮೂಲಮಾಡುವುದಕ್ಕಾಗಿ ಒಂದು ಮನವಿಯು ಮಾಡಲ್ಪಟ್ಟಿತು.
ಆದರೂ, ಕಳೆದ ವರ್ಷದ ಅಂತ್ಯಭಾಗದಲ್ಲಿ ಐದು ದಿನದ ಲೋಕ ಆಹಾರ ಶೃಂಗಸಭೆಗಾಗಿ—ರೋಮ್ನ ಎಫ್ಏಓ ಮುಖ್ಯಕಾರ್ಯಸ್ಥಾನದಲ್ಲಿ—173 ರಾಷ್ಟ್ರಗಳ ಪ್ರತಿನಿಧಿಗಳು ಕೂಡಿಬಂದಾಗ, ಅವರ ಉದ್ದೇಶವು, “ಏನು ತಪ್ಪಾಯಿತು?” ಎಂಬುದನ್ನು ಕೇಳುವುದೇ ಆಗಿತ್ತು. ಎಲ್ಲರಿಗೂ ಆಹಾರವನ್ನು ಒದಗಿಸುವುದರಲ್ಲಿ ಒಂದು ವೈಫಲ್ಯ ಮಾತ್ರವಲ್ಲ ಈಗ, ಎರಡಕ್ಕಿಂತಲೂ ಹೆಚ್ಚಿನ ದಶಕಗಳ ಅನಂತರ, ಪರಿಸ್ಥಿತಿಯು ಇನ್ನೂ ಬಿಗಡಾಯಿಸಿದೆ.
ಆಹಾರ, ಜನಸಂಖ್ಯೆ, ಹಾಗೂ ಬಡತನದ ಪ್ರಮುಖ ವಿವಾದಾಂಶಗಳು ಜರೂರಿಯದ್ದಾಗಿವೆ. ಆ ಶೃಂಗಸಭೆಯಲ್ಲಿ ಬಿಡುಗಡೆಗೊಳಿಸಲ್ಪಟ್ಟ ಒಂದು ಸಾಕ್ಷ್ಯದಾಖಲೆಯಲ್ಲಿ ಗಮನಿಸಲ್ಪಟ್ಟಿರುವಂತೆ, ಈ ಸಮಸ್ಯೆಗಳು ಬಗೆಹರಿಸಲ್ಪಡದೇ ಇರುವಲ್ಲಿ, “ಅನೇಕ ದೇಶಗಳ ಹಾಗೂ ಪ್ರಾಂತ್ಯಗಳ ಸಾಮಾಜಿಕ ಸ್ಥಿರತೆಯು ತೀರ ಗಂಭೀರತರವಾಗಿ ಬಾಧಿಸಲ್ಪಡಬಹುದು, ಪ್ರಾಯಶಃ ಲೋಕ ಶಾಂತಿಯ ಮೇಲೆ ಸಹ ಹಾನಿಕಾರಕ ಪರಿಣಾಮವನ್ನು ಬೀರಬಹುದು.” ಒಬ್ಬ ವೀಕ್ಷಕನು ಹೆಚ್ಚು ಸ್ಫುಟವಾಗಿ ವ್ಯಕ್ತಪಡಿಸಿದ್ದು: “ನಾಗರಿಕತೆ ಹಾಗೂ ರಾಷ್ಟ್ರೀಯ ಸಂಸ್ಕೃತಿಗಳ ನಾಶನವನ್ನು ನಾವು ನೋಡಲಿರುವೆವು.”
ಎಫ್ಏಓ ಪ್ರಧಾನ-ನಿರ್ದೇಶಕರಾದ ಸಾಕ್ ಜೂಫ್ ಅವರಿಗನುಸಾರ, “80 ಕೋಟಿಗಿಂತಲೂ ಹೆಚ್ಚು ಜನರಿಗೆ ಇಂದು ಆಹಾರವನ್ನು ಪಡೆದುಕೊಳ್ಳಲು ಸಾಕಷ್ಟು ಅವಕಾಶವಿಲ್ಲ; ಇವರಲ್ಲಿ 20 ಕೋಟಿ ಮಕ್ಕಳು ಸೇರಿದ್ದಾರೆ.” 2025 ವರ್ಷದಷ್ಟರಲ್ಲಿ, 580 ಕೋಟಿಗಳ ಇಂದಿನ ಲೋಕ ಜನಸಂಖ್ಯೆಯು, ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ ಬರುತ್ತಿರುವ ಬಹುಪಾಲು ವೃದ್ಧಿಯೊಂದಿಗೆ 830 ಕೋಟಿಗಳಿಗೆ ಏರಿರುವುದು. ಜೂಫ್ ಪ್ರಲಾಪಿಸುವುದು: “ತಮ್ಮ ಪರಭಾರೆಮಾಡಲಾಗದ ಜೀವಿತದ ಹಕ್ಕು ಹಾಗೂ ಘನತೆಯಿಂದ ವಂಚಿಸಲ್ಪಟ್ಟ ಪುರುಷ, ಸ್ತ್ರೀ ಹಾಗೂ ಮಕ್ಕಳ ಬರಿಯ ಸಂಖ್ಯೆಯು ಅಸ್ವೀಕರಣೀಯವಾಗಿ ಉಚ್ಚವಾಗಿದೆ. ಹಸಿದವರ ರೋದನಗಳು ಶಿಥಿಲ ಮಣ್ಣಿನ, ಶಿಲಾಸ್ತರ ಅರಣ್ಯಗಳ ಹಾಗೂ ಹೆಚ್ಚೆಚ್ಚು ಬರಿದಾಗಿರುವ ಮೀನುಗಾರಿಕೆ ಪ್ರದೇಶಗಳ ಮೂಕ ಅಳಲಿನಿಂದ ಜೊತೆಗೂಡಲ್ಪಟ್ಟಿವೆ.”
ಯಾವ ಪರಿಹಾರವು ಪ್ರಸ್ತಾಪಿಸಲ್ಪಟ್ಟಿದೆ? ಪರಿಹಾರವು ಆಹಾರ-ಕೊರತೆಯಿರುವ ದೇಶಗಳಿಗೆ “ಆಹಾರ ಭದ್ರತೆ”ಯನ್ನು ಹಾಗೂ ಅವರು ಸ್ವತಃ ಸಾಕಷ್ಟು ಆಹಾರವನ್ನು ಒದಗಿಸಿಕೊಳ್ಳಲು ಶಕ್ತರನ್ನಾಗಿ ಮಾಡುವ ಕೌಶಲಗಳು, ಬಂಡವಾಳ, ಹಾಗೂ ತಂತ್ರಜ್ಞಾನವನ್ನು ಒದಗಿಸುತ್ತಾ, “ಧೈರ್ಯಶಾಲಿ ಕ್ರಿಯೆ”ಯಲ್ಲಿಯೇ ಅಡಗಿದೆ ಎಂದು ಜೂಫ್ ಹೇಳುತ್ತಾರೆ.
“ಆಹಾರ ಭದ್ರತೆ”—ನಿಲುಕದ ವಿಷಯವೇಕೆ?
ಶೃಂಗಸಭೆಯಿಂದ ಹೊರತರಲ್ಪಟ್ಟ ಒಂದು ಸಾಕ್ಷ್ಯದಾಖಲೆಗನುಸಾರ, “ಎಲ್ಲ ಜನರಿಗೂ ಎಲ್ಲ ಸಮಯಗಳಲ್ಲಿ, ಸಕ್ರಿಯವೂ ಆರೋಗ್ಯಕರವೂ ಆದ ಜೀವನಕ್ಕಾಗಿ ತಮ್ಮ ಆಹಾರ ಕ್ರಮದ ಅಗತ್ಯಗಳನ್ನು ಹಾಗೂ ಆಹಾರ ಆದ್ಯತೆಗಳನ್ನು ಪೂರೈಸಲಿಕ್ಕಾಗಿ ಸುರಕ್ಷಿತವೂ ಪೌಷ್ಟಿಕವೂ ಆದ ಆಹಾರವನ್ನು ಪಡೆದುಕೊಳ್ಳಲು ಬೇಕಾಗಿರುವಷ್ಟು ಶಾರೀರಿಕ ಹಾಗೂ ಆರ್ಥಿಕ ಮಾರ್ಗವಿರುವಾಗ, ಆಹಾರ ಭದ್ರತೆಯು ಅಸ್ತಿತ್ವದಲ್ಲಿರುತ್ತದೆ.”
ಆಹಾರ ಭದ್ರತೆಯು ಯಾವ ರೀತಿಯಲ್ಲಿ ಗಂಡಾಂತರಕ್ಕೆ ಈಡಾಗಸಾಧ್ಯವಿದೆ ಎಂಬುದು ಸಾಎರ್ನ ನಿರಾಶ್ರಿತ ಬಿಕ್ಕಟ್ಟಿನಿಂದ ದೃಷ್ಟಾಂತಿಸಲ್ಪಟ್ಟಿತು. ರುವಾಂಡದ ಹತ್ತು ಲಕ್ಷ ನಿರಾಶ್ರಿತರು ಹೊಟ್ಟೆಗಿಲ್ಲದವರಾಗಿದ್ದಾಗ, ವಿಶ್ವಸಂಸ್ಥೆ ಇಲಾಖೆಗಳು ಅವರಿಗೆ ಉಣಿಸಲು ಲಭ್ಯವಿದ್ದ ಆಹಾರದ ದಾಸ್ತಾನುಗಳನ್ನು ಹೊಂದಿತ್ತು. ಆದರೆ ಸಾರಿಗೆ ಹಾಗೂ ವಿತರಣಾ ಏರ್ಪಾಡುಗಳಿಗೆ ರಾಜಕೀಯ ಅನುಜ್ಞೆಗಳೂ ಸ್ಥಳಿಕ ಅಧಿಕಾರಿಗಳ—ಅಥವಾ ನಿರಾಶ್ರಿತ ಕ್ಯಾಂಪ್ಗಳನ್ನು ಸ್ಥಳಿಕ ಸೇನಾಪತಿಗಳು ನಿಯಂತ್ರಿಸಿದ್ದಲ್ಲಿ ಅವರ—ಸಹಕಾರವೂ ಬೇಕಾಗಿತ್ತು. ಆಹಾರವು ಲಭ್ಯವಿರುವಾಗಲೂ ಹಸಿದವರಿಗೆ ಉಣಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಎಷ್ಟೊಂದು ಕಷ್ಟವಿದೆ ಎಂಬುದನ್ನು ಸಾಎರ್ನ ತುರ್ತುಪರಿಸ್ಥಿತಿಯು ಪುನಃ ಒಮ್ಮೆ ತೋರಿಸಿತು. ಒಬ್ಬ ವೀಕ್ಷಕನು ಗಮನಿಸಿದ್ದು: “ಏನಾದರೂ ಸಂಭವಿಸುವ ಮುನ್ನ ಹಲವಾರು ಸಂಸ್ಥೆ ಸ್ಥಾಪನೆಗಳು ಸಂಪರ್ಕಿಸಲ್ಪಡಬೇಕು ಹಾಗೂ ಪುಸಲಾಯಿಸಲ್ಪಡಬೇಕು.”
ಅಮೆರಿಕದ ವ್ಯವಸಾಯ ಸಾಕ್ಷ್ಯದ ಇಲಾಖೆಯಿಂದ ಎತ್ತಿತೋರಿಸಲ್ಪಟ್ಟಂತೆ, ಆಹಾರ ಭದ್ರತೆಯು ಎಷ್ಟೇ ಮೂಲ ಕಾರಣಗಳಿಂದ ಗಂಭೀರತರವಾಗಿ ದುರ್ಬಲಗೊಳಿಸಲ್ಪಡಬಹುದು. ನೈಸರ್ಗಿಕ ವಿಪತ್ತುಗಳನ್ನು ಬಿಟ್ಟು, ಇವು ಯುದ್ಧ ಹಾಗೂ ಆಂತರಿಕ ಕಲಹ, ಅನುಚಿತ ರಾಷ್ಟ್ರೀಯ ಕಾರ್ಯನೀತಿಗಳು, ಅಸಮರ್ಪಕ ಸಂಶೋಧನೆ ಹಾಗೂ ತಂತ್ರಜ್ಞಾನ, ಪರಿಸರೀಯ ಸವೆತ, ಬಡತನ, ಜನಸಂಖ್ಯಾ ಬೆಳವಣಿಗೆ, ಲಿಂಗ ಅಸಮಾನತೆ, ಹಾಗೂ ನ್ಯೂನ ಆರೋಗ್ಯವನ್ನು ಒಳಗೊಳ್ಳುತ್ತವೆ.
ಕೆಲವು ಸಾಧನೆಗಳು ಸಾಧಿಸಲ್ಪಟ್ಟಿವೆ. 1970ಗಳಿಂದ ಆಹಾರ ಸೇವನಾ ಸೂಚಕಫಲಕವಾದ, ಸರಾಸರಿ ಪಡಿಭತ್ಯ ಕಾರ್ಯೋದ್ಯುಕ್ತತೆ ಸರಬರಾಯಿಯು ವರ್ಧಿಷ್ಣು ರಾಷ್ಟ್ರಗಳಲ್ಲಿ ಪ್ರತಿ ದಿನಕ್ಕೆ ಪ್ರತಿ ವ್ಯಕ್ತಿಗೆ 2,140ರಿಂದ 2,520 ಕ್ಯಾಲೊರಿಗಳಿಗೆ ಏರಿದೆ. ಆದರೆ ಎಫ್ಏಓಗನುಸಾರ, 2030 ವರ್ಷದಷ್ಟಕ್ಕೆ ನಿರೀಕ್ಷಿಸಲ್ಪಟ್ಟಿರುವ ನೂರಾರು ಕೋಟಿಗಳ ಜನಸಂಖ್ಯಾ ಬೆಳವಣಿಗೆಯು, “ಆಹಾರ ಲಭ್ಯತೆಯ ಪ್ರಸ್ತುತ ಮಟ್ಟಗಳನ್ನು ಕೇವಲ ಕಾಪಾಡಿಕೊಂಡು ಹೋಗಲಿಕ್ಕಾಗಿ, ನಾವೆಲ್ಲರೂ ಅವಲಂಬಿಸಿರುವ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಮಾಡದೆ 75ಕ್ಕಿಂತಲೂ ಹೆಚ್ಚಿನ ಪ್ರತಿಶತಕ್ಕೆ ಸರಬರಾಯಿಗಳನ್ನು ಹೆಚ್ಚಿಸಲಿಕ್ಕಾಗಿ ಕ್ಷಿಪ್ರಗತಿಯೂ ಪೋಷಕವೂ ಆದ ಉತ್ಪಾದಕ ಹೆಚ್ಚಳಗಳನ್ನು ಕೇಳಿಕೊಳ್ಳುವುದು.” ಹೀಗೆ ಹೊಟ್ಟೆಗಿಲ್ಲದ ಜನಸಂಖ್ಯೆಗಳಿಗೆ ಆಹಾರವನ್ನು ಒದಗಿಸುವ ಕೆಲಸವು ಒಂದು ನಿರಾಶಾದಾಯಕ ವಿಷಯವಾಗಿದೆ.
‘ನಮಗೆ ಕ್ರಮತೆಗೆದುಕೊಳ್ಳುವಿಕೆಯು ಬೇಕಾಗಿದೆ, ಹೆಚ್ಚಿನ ಶೃಂಗಸಭೆಗಳಲ್ಲ’
ಲೋಕ ಆಹಾರ ಶೃಂಗಸಭೆಯ ಕಾರ್ಯಕಲಾಪಗಳ ಹಾಗೂ ಅದು ಮಾಡಿದ ಬದ್ಧತೆಗಳ ಕುರಿತು ಅಸಂಖ್ಯಾತ ಟೀಕೆಗಳು ಮಾಡಲ್ಪಟ್ಟವು. ನ್ಯೂನಪೋಷಿತ ಜನರ ಸಂಖ್ಯೆಯನ್ನು, ಈಗಿರುವ ಪ್ರಸ್ತುತ ಮಟ್ಟದ ಕೇವಲ ಅರ್ಧದಷ್ಟಕ್ಕೆ ಕಡಿಮೆಗೊಳಿಸಲು ಮಾಡಲ್ಪಟ್ಟ ವಿಧಿವತ್ತಾದ ಪ್ರತಿಜ್ಞೆಯ “ಅಶಕ್ತತೆ”ಯನ್ನು ಒಬ್ಬ ಲ್ಯಾಟಿನ್ ಅಮೆರಿಕನ್ ಪ್ರತಿನಿಧಿಯು “ನಾಚಿಕೆಗೇಡು” ಎಂದು ಖಂಡಿಸಿದನು. ಶೃಂಗಸಭೆಯಿಂದ ಅನುಮೋದಿಸಲ್ಪಟ್ಟ ಪ್ರಸ್ತಾಪಗಳಿಗೆ ಹದಿನೈದು ರಾಷ್ಟ್ರಗಳು ಅರ್ಥನಿರೂಪಣೆಗಳಲ್ಲಿ ಭಿನ್ನತೆಗಳನ್ನು ವ್ಯಕ್ತಪಡಿಸಿದವು. ಮಿತವಾದ ಘೋಷಣೆ ಹಾಗೂ ಕಾರ್ಯದ ಯೋಜನೆಯನ್ನು ರಚಿಸುವ ಒಂದು ಹಂತವನ್ನು ತಲಪಲು ಕೂಡ, “ಎರಡು ವರ್ಷಗಳ ಅಭಿಮುಖತೆಗಳೂ ಸಂಧಾನಗಳೂ ಆವಶ್ಯಕವಿದ್ದವು. ತೆರೆದ ಗಾಯಗಳು . . . ಪುನಃ ರಕ್ತಸ್ರವಿಸದಿರುವಂತೆ, ಪ್ರತಿಯೊಂದು ಪದವೂ, ಪ್ರತಿಯೊಂದು ಅಲ್ಪವಿರಾಮವೂ ಬಹು ಜಾಗ್ರತೆಯಿಂದ ಪರಿಗಣಿಸಲ್ಪಟ್ಟವು” ಎಂದು ಇಟಲಿಯ ವಾರ್ತಾಪತ್ರಿಕೆಯಾದ ಲಾ ರೆಪುಬ್ಲೀಕಾ ಹೇಳಿತು.
ಶೃಂಗಸಭೆಯ ಸಾಕ್ಷ್ಯದಾಖಲೆಗಳನ್ನು ತಯಾರಿಸಲು ಸಹಾಯಮಾಡಿದ ಅನೇಕ ಜನರು ಫಲಿತಾಂಶಗಳಿಂದ ಅಸಂತೋಷಿತರಾಗಿದ್ದರು. “ಪ್ರಕಟಿಸಲ್ಪಟ್ಟ ಸುಪ್ರಸ್ತಾಪಗಳು ಸಿದ್ಧಿಸಿಕೊಳ್ಳುವವೋ ಇಲ್ಲವೋ ಎಂಬುದರ ಕುರಿತಾಗಿ ನಾವು ತೀರ ಅನಿಶ್ಚಿತಮತಿಗಳಾಗಿದ್ದೇವೆ” ಎಂದು ಒಬ್ಬನು ಹೇಳಿದನು. ಒಂದು “ಹಕ್ಕು” ನ್ಯಾಯಾಲಯಗಳಲ್ಲಿ ಸಮರ್ಥಿಸಲ್ಪಡಸಾಧ್ಯವಿರುವುದರಿಂದ, ಆಹಾರವನ್ನು ಪಡೆದುಕೊಳ್ಳುವ ವಿಷಯವು “ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಹಕ್ಕು” ಎಂದು ಅರ್ಥನಿರೂಪಿಸಲ್ಪಡಲೇಬೇಕೋ ಇಲ್ಲವೋ ಎಂಬುದೇ ವಾದ ವಿಷಯವಾಗಿತ್ತು. ಕೆನಡದ ಒಬ್ಬ ನಿವಾಸಿ ವಿವರಿಸಿದ್ದು: “ಸಂಪದ್ಭರಿತ ರಾಷ್ಟ್ರಗಳು ನೆರವನ್ನು ನೀಡಲು ತಾವು ಒತ್ತಾಯಿಸಲ್ಪಡುವೆವು ಎಂದು ದಿಗಿಲುಗೊಂಡವು. ಈ ಕಾರಣದಿಂದಲೇ ಘೋಷಣೆಯ ವಿಷಯವನ್ನು ಕಡಿಮೆಗೊಳಿಸುವಂತೆ ಅವು ಒತ್ತಾಯಿಸಿದವು.”
ವಿಶ್ವಸಂಸ್ಥೆಯು ಹೊಣೆಹೊತ್ತ ಶೃಂಗಸಭೆಗಳಲ್ಲಿ ಕೊನೆಯಿಲ್ಲದ ಚರ್ಚೆಗಳಿದ್ದುದರಿಂದ, ಯೂರೋಪಿನ ಒಬ್ಬ ಸರಕಾರಿ ಸಚಿವೆಯು ಹೇಳಿದ್ದು: “[ಜನಸಂಖ್ಯಾ ಹಾಗೂ ಅಭಿವೃದ್ಧಿಯ ಬಗ್ಗೆ, 1994ರಲ್ಲಿ ನಡೆಸಲ್ಪಟ್ಟ] ಕೈರೋ ಸಮಾಲೋಚನೆಯಲ್ಲಿ ಅಷ್ಟೆಲ್ಲ ನಿರ್ಧಾರವನ್ನು ತೆಗೆದುಕೊಂಡೆವು ಆದರೂ, ತರುವಾಯದ ಪ್ರತಿಯೊಂದು ಸಮಾಲೋಚನೆಯಲ್ಲಿ ಪುನಃ ಹಿಂದೆ ಅದೇ ಸ್ಥಾನಕ್ಕೆ ಹೋಗುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ.” ಆಕೆ ಶಿಫಾರಸ್ಸುಮಾಡಿದ್ದು: “ಹೆಚ್ಚಿನ ಶೃಂಗಸಭೆಗಳಿಗೆ ಬದಲಾಗಿ, ನಮ್ಮ ಜೊತೆ ಮಾನವರ ಒಳಿತಿಗಾಗಿ ಕಾರ್ಯ ಯೋಜನೆಗಳನ್ನು ನೆರವೇರಿಸುವುದು ನಮ್ಮ ಕಾರ್ಯಸೂಚಿಗಳಲ್ಲಿ ಅಗ್ರಸ್ಥಾನದಲ್ಲಿರಲೇಬೇಕು.”
ಶೃಂಗಸಭೆಯಲ್ಲಿನ ಉಪಸ್ಥಿತಿಯು ಸಹ—ಖರ್ಚನ್ನು ನಿರ್ವಹಿಸಲು ಸಾಧ್ಯವಾಗದ—ಕೆಲವು ದೇಶಗಳಿಗೆ ಒಂದು ಭಾರಿ ವೆಚ್ಚವಾಗಿರುವುದನ್ನು ಪ್ರತಿನಿಧಿಸಿತು ಎಂಬ ವಿಷಯವನ್ನು ಸಹ ವೀಕ್ಷಕರು ಎತ್ತಿತೋರಿಸಿದರು. ಆಫ್ರಿಕದ ಒಂದು ಪುಟ್ಟ ರಾಷ್ಟ್ರವು 14 ಪ್ರತಿನಿಧಿಗಳಿಗೆ ಕೂಡಿಸಿ ಇಬ್ಬರು ಸಚಿವರನ್ನು ರೋಮ್ಗೆ ಕಳುಹಿಸಿತು. ಅವರಲ್ಲಿ ಎಲ್ಲರೂ ಎರಡಕ್ಕಿಂತಲೂ ಹೆಚ್ಚು ವಾರಗಳ ತನಕ ರೋಮ್ನಲ್ಲಿ ತಂಗಿದರು. ಇಟಲಿಯ ಕೋರೀರೇ ಡೇಲಾ ಸೇರಾ ಎಂಬ ವಾರ್ತಾಪತ್ರಿಕೆಯು ವರದಿಸಿದ್ದೇನೆಂದರೆ, ಯಾರ ದೇಶದಲ್ಲಿ ಸರಾಸರಿ ವಾರ್ಷಿಕ ಆದಾಯವು ಪ್ರತಿಯೊಬ್ಬ ವ್ಯಕ್ತಿಗೆ 3,300 ಡಾಲರುಗಳನ್ನು ಮೀರುವುದಿಲ್ಲವೋ ಆ ಆಫ್ರಿಕನ್ ರಾಷ್ಟ್ರಾಧ್ಯಕ್ಷರ ಪತ್ನಿಯು, ರೋಮಿನ ಅತ್ಯಂತ ಫ್ಯಾಷನ್ದಾಯಕ ನಗರದಮಧ್ಯದ ಷಾಪಿಂಗ್ ವಿಭಾಗದಲ್ಲಿ 23,000 ಡಾಲರುಗಳನ್ನು ವಿನೋದಕೇಳಿಯಲ್ಲಿ ವ್ಯಯಿಸುತ್ತಿದ್ದರು.
ಶೃಂಗಸಭೆಯಲ್ಲಿ ಸ್ವೀಕರಿಸಲ್ಪಟ್ಟ ಕಾರ್ಯದ ಯೋಜನೆಯು ಸಫಲಗೊಳ್ಳುವುದು ಎಂಬುದನ್ನು ನಂಬಲು ಯಾವುದಾದರೂ ಕಾರಣವಿದೆಯೋ? ಒಬ್ಬ ಪತ್ರಕರ್ತನು ಉತ್ತರಿಸುವುದು: “ಈಗ ನಾವು ಆಶಿಸಸಾಧ್ಯವಿರುವ ವಿಷಯವೇನೆಂದರೆ, ಸರಕಾರಗಳು ಅದನ್ನು ಗಂಭೀರವಾಗಿ ತೆಗೆದುಕೊಂಡು, ಅದರ ಶಿಫಾರಸ್ಸುಗಳು ಸಾಧಿಸಲ್ಪಡುವುದೆಂಬುದನ್ನು ನೋಡಲು ಕ್ರಮಗಳನ್ನು ತೆಗೆದುಕೊಳ್ಳುವವು ಎಂಬುದೇ. ಅವು ಹಾಗೆ ಮಾಡುವವೋ? . . . ಇತಿಹಾಸವು ಆಶಾವಾದಿತ್ವಕ್ಕೆ ಕಾರಣವನ್ನು ನೀಡುವುದೇ ಇಲ್ಲ.” ಅದೇ ವ್ಯಾಖ್ಯಾನಕಾರನು ಈ ನಿರಾಶಾದಾಯಕ ನಿಜತ್ವವನ್ನು ಸೂಚಿಸಿದೇನಂದರೆ, 1992ರ ರಿಯೊ ಡಿ ಜನಿರೊ ಅರ್ತ್ ಶೃಂಗಸಭೆಯಲ್ಲಿ, ವಿಕಾಸ ನೆರವಿನ ವಂತಿಗೆಗಳನ್ನು ಸಮಗ್ರ ಅಂತರ್ದೇಶೀಯ ಉತ್ಪಾದನೆಯ 0.7 ಪ್ರತಿಶತಕ್ಕೆ ಏರಿಸುತ್ತೇವೆಂದು ಸಮ್ಮತಿಸಿದರೂ “ಕೇವಲ ಕೆಲವೇ ದೇಶಗಳು ಆ ಅನಿರ್ಬಂಧಿತ ಗುರಿಯನ್ನು ತಲಪಿವೆ.”
ಹಸಿದವರಿಗೆ ಯಾರು ಉಣಿಸುವರು?
ಮಾನವಕುಲಕ್ಕೆ ಎಲ್ಲ ಸದುದ್ದೇಶಗಳಿದ್ದಾಗ್ಯೂ “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ. . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂಬ ವಿಷಯವನ್ನು ಇತಿಹಾಸವು ಸಮೃದ್ಧವಾಗಿ ಪ್ರದರ್ಶಿಸಿದೆ. (ಯೆರೆಮೀಯ 10:23) ಆದುದರಿಂದ ಮಾನವರು ತಮ್ಮ ಸ್ವಶಕ್ತಿಯಿಂದ ಎಂದಾದರೂ ಎಲ್ಲರಿಗೂ ಆಹಾರವನ್ನು ಒದಗಿಸುವರೆಂಬುದು ಅಸಂಭವನೀಯ. ಲೋಭ, ಅವ್ಯವಸ್ಥ ನಿರ್ವಹಣೆ ಹಾಗೂ ಆತ್ಮದುರಭಿಮಾನವು ಮಾನವಕುಲವನ್ನು ಕಡಿದಾದ ಪ್ರಪಾತಕ್ಕೆ ನಡೆಸಿದೆ. ಎಫ್ಏಓ ಪ್ರಧಾನ-ನಿರ್ದೇಶಕರಾದ ಜೂಫ್ ಹೇಳಿಕೆಯನ್ನು ನೀಡಿದ್ದು: “ಅಂತಿಮ ವಿಶ್ಲೇಷಣೆಯಲ್ಲಿ ಆವಶ್ಯಕವಾಗಿರುವ ವಿಷಯವು ಏನೆಂದರೆ, ಹೃದಮನಗಳ ಹಾಗೂ ಸಂಕಲ್ಪಗಳ ರೂಪಾಂತರವೇ.”
ಅದು ಕೇವಲ ದೇವರ ರಾಜ್ಯವು ಮಾಡಸಾಧ್ಯವಿರುವ ಒಂದು ವಿಷಯವಾಗಿದೆ. ವಾಸ್ತವದಲ್ಲಿ ಶತಮಾನಗಳ ಹಿಂದೆ, ಯೆಹೋವನು ತನ್ನ ಜನರ ಸಂಬಂಧದಲ್ಲಿ ಪ್ರವಾದನೆಯನ್ನು ನುಡಿದನು: “ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.”—ಯೆರೆಮೀಯ 31:33.
ಯೆಹೋವ ದೇವರು ಮಾನವಕುಲದ ಮೂಲ ಉದ್ಯಾನವನ ಗೃಹವನ್ನು ಸಿದ್ಧಪಡಿಸಿದಾಗ, ಆತನು ಮಾನವನಿಗೆ “ಸಮಸ್ತ ಭೂಮಿಯ ಮೇಲೆ ಬೀಜವುಳ್ಳ ಎಲ್ಲಾ ಪೈರುಗಳನ್ನೂ ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ” ಆಹಾರವಾಗಿ ನೀಡಿದನು. (ಆದಿಕಾಂಡ 1:29) ಆ ಒದಗಿಸುವಿಕೆಯು ಪುಷ್ಕಳವೂ, ಪುಷ್ಟಿದಾಯಕವೂ ಸುಲಭಗಮ್ಯವೂ ಆಗಿತ್ತು. ಮಾನವಕುಲವೆಲ್ಲವೂ ತಮ್ಮ ಆಹಾರ ಅಗತ್ಯಗಳನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ ಅಗತ್ಯವಾದ ವಿಷಯವು ಅದೇ ಆಗಿತ್ತು.
ದೇವರ ಉದ್ದೇಶವು ಬದಲಾಗಿಲ್ಲ. (ಯೆಶಾಯ 55:10, 11) ಎಲ್ಲರಿಗೂ ಆಹಾರವನ್ನು ಒದಗಿಸುತ್ತಾ, ಬಡತನವನ್ನು ನಿರ್ನಾಮಮಾಡುತ್ತಾ, ನೈಸರ್ಗಿಕ ವಿಪತ್ತುಗಳನ್ನು ನಿಯಂತ್ರಿಸುತ್ತಾ, ಮತ್ತು ಸಂಘರ್ಷಣೆಗಳನ್ನು ನಿರ್ಮೂಲಮಾಡುತ್ತಾ, ಕ್ರಿಸ್ತನಿಂದ ಆಳಲ್ಪಡುವ ತನ್ನ ರಾಜ್ಯದ ಮುಖಾಂತರ ಮಾನವನ ಪ್ರತಿಯೊಂದು ಅಗತ್ಯವನ್ನು ತಾನು ಮಾತ್ರವೇ ಪೂರೈಸುವೆನೆಂದು ಬಹಳ ಕಾಲದ ಹಿಂದೆಯೇ ಆತನು ಆಶ್ವಾಸನೆಯನ್ನು ನೀಡಿದನು. (ಕೀರ್ತನೆ 46:8, 9; ಯೆಶಾಯ 11:9; ಹೋಲಿಸಿರಿ ಮಾರ್ಕ 4:37-41; 6:37-44.) ಆ ಸಮಯದಲ್ಲಿ ‘ಭೂಮಿಯು ಒಳ್ಳೇ ಬೆಳೆಯನ್ನು ಕೊಡುವುದು. ದೇವರು, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸುವನು.’ “ಭೂಮಿಯ ಮೇಲೆ ಹೇರಳವಾಗಿ ಧಾನ್ಯವು ದೊರೆಯುವುದು; ಬೆಟ್ಟಗಳ ಮೇಲೆಲ್ಲಾ ಬೆಳೆಯು ತುಂಬಿ ಹರಿಯುವುದು.” (NW)—ಕೀರ್ತನೆ 67:6; 72:16.
[ಪುಟ 23 ರಲ್ಲಿರುವ ಚಿತ್ರ ಕೃಪೆ]
Dorothea Lange, FSA Collection, Library of Congress