ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 3/8 ಪು. 3
  • ಮಸ್ತಿಷ್ಕ ಆಘಾತ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಸ್ತಿಷ್ಕ ಆಘಾತ!
  • ಎಚ್ಚರ!—1998
  • ಅನುರೂಪ ಮಾಹಿತಿ
  • ಅದರ ಪರಿಣಾಮಗಳೊಂದಿಗೆ ಹೆಣಗಾಡುವುದು
    ಎಚ್ಚರ!—1998
  • ಮಸ್ತಿಷ್ಕ ಆಘಾತ—ಅದರ ಕಾರಣ
    ಎಚ್ಚರ!—1998
  • ನಮ್ಮ ವಾಚಕರಿಂದ
    ಎಚ್ಚರ!—1998
  • ಜಗತ್ತನ್ನು ಗಮನಿಸುವುದು
    ಎಚ್ಚರ!—1999
ಇನ್ನಷ್ಟು
ಎಚ್ಚರ!—1998
g98 3/8 ಪು. 3

ಮಸ್ತಿಷ್ಕ ಆಘಾತ!

ಪಾಶ್ಚಾತ್ಯ ಔದ್ಯೋಗೀಕೃತ ಜಗತ್ತಿನಲ್ಲಿ, ಮರಣ ಮತ್ತು ಅಸ್ಥಿಗತವಾದ ದೌರ್ಬಲ್ಯಕ್ಕೆ ಪ್ರಮುಖವಾದ ಕಾರಣವು, ಮಸ್ತಿಷ್ಕ ಆಘಾತವಾಗಿದೆ. “ಮಸ್ತಿಷ್ಕ ಆಘಾತ” ಎಂಬ ಶಬ್ದವು ತಾನೇ ಸೂಚಿಸುವಂತೆ, ಹಠಾತ್ತನೆ “ಮಿದುಳು ಆಘಾತ”ವು ಸಂಭವಿಸುತ್ತದೆ. ಒಂದು ಕ್ಷಣ ನಿಮಗೆ ಚೆನ್ನಾಗಿರುವ ಅನಿಸಿಕೆಯಾಗುತ್ತಿರಬಹುದು, ಮತ್ತೊಂದು ಕ್ಷಣದಲ್ಲಿ, ನಿಮಗೆ ಮಿಂಚಿನ ಬರಸಿಡಿಲು ಬಡಿಯಿತೋ ಎಂಬಂತಹ ಅನಿಸಿಕೆಯಾಗುತ್ತದೆ—ಭಾರಿ ಹಾನಿಕರವಾದ ಮಸ್ತಿಷ್ಕ ಆಘಾತವು ಏಕಾಏಕಿಯಾಗಿ ಮತ್ತು ನಾಟಕೀಯವಾಗಿ ನಿಮ್ಮ ಜೀವಿತವನ್ನು ಬದಲಾಯಿಸಬಲ್ಲದು. ಅದು ನಿಮ್ಮನ್ನು ಕ್ರೂರವಾಗಿ ದುರ್ಬಲರನ್ನಾಗಿಸಿ, ಅಂಗವಿಕಲರನ್ನಾಗಿ ಮಾಡಿ, ನಿಮ್ಮನ್ನು ಮಾತಾಡಲು ಅಸಮರ್ಥರನ್ನಾಗಿ ಮಾಡಿ, ನಿಮ್ಮ ಭಾವನೆಗಳನ್ನು ಭಗ್ನಗೊಳಿಸಿ, ನಿಮ್ಮ ವ್ಯಕ್ತಿತ್ವವನ್ನೂ ಅರಿವಿನ ಸಾಮರ್ಥ್ಯಗಳನ್ನೂ ಮಾರ್ಪಡಿಸಿ, ಈ ಹಿಂದೆ ನೀವೂ ನಿಮ್ಮ ಕುಟುಂಬದವರೂ ಅನುಭವಿಸಿದ ಸಹಜ ಜೀವಿತವನ್ನು ಪುನಃ ಪಡೆದುಕೊಳ್ಳಲಿಕ್ಕಾಗಿರುವ ಅಂತ್ಯರಹಿತ ಹೋರಾಟದಂತೆ ತೋರುವ ಹೋರಾಟವನ್ನು ನಿಮ್ಮ ಮೇಲೆ ಬಲಾತ್ಕಾರದಿಂದ ಹೇರಬಹುದು.

ಇಲನ್‌ ಮಾರ್ಗನ್‌ಳ ಉದಾಹರಣೆಯನ್ನು ಪರಿಗಣಿಸಿರಿ.a ಬುಧವಾರದಂದು, ಇಲನ್‌ 64 ವರ್ಷ ಪ್ರಾಯದ ಒಬ್ಬ ಆರೋಗ್ಯವಂತ, ಕ್ರಿಯಾಶೀಲ ಸ್ತ್ರೀಯಾಗಿದ್ದಳು. ಗುರುವಾರದಂದು, ತನ್ನ ಗಂಡನೊಂದಿಗೆ ಶಾಪಿಂಗ್‌ ಮಾಡುತ್ತಿದ್ದಾಗ, ಥಟ್ಟನೆ ಇಲನ್‌ ತನ್ನ ಮಾತಾಡುವ ಸಾಮರ್ಥ್ಯವನ್ನು ಕಳೆದುಕೊಂಡಳು, ಮತ್ತು ಅವಳ ಮುಖವು ಸೊಟ್ಟವಾಯಿತು. ಅವಳ ದೇಹವು ದುರ್ಬಲವಾಯಿತು, ಮತ್ತು ಅಮಲೇರಿದ ಸ್ಥಿತಿಯಲ್ಲಿದ್ದಾಳೋ ಎಂಬಂತೆ ಅವಳು ಥಟ್ಟನೆ ಒಂದು ಕಡೆಗೆ ಹೊರಳಿದಳು. ಇಲನಳು ಭಾರಿ ಹಾನಿಕರವಾದ ಮಸ್ತಿಷ್ಕ ಆಘಾತದಿಂದ ನರಳುತ್ತಿದ್ದಳು!

ಮಸ್ತಿಷ್ಕ ಆಘಾತದ ಪರಿಣಾಮವಾಗಿ, ಇಲನಳು ಎಷ್ಟು ನಿಶ್ಶಕ್ತಳಾದಳೆಂದರೆ, ಸ್ವತಃ ಸ್ನಾನಮಾಡಿಕೊಳ್ಳುವ ಅಥವಾ ಬಟ್ಟೆಹಾಕಿಕೊಳ್ಳುವಂತಹ ಚಿಕ್ಕಪುಟ್ಟ ಕೆಲಸಗಳನ್ನೂ ಅವಳು ಮಾಡಸಾಧ್ಯವಿರಲಿಲ್ಲ. ಬರೆಯಲು, ಹೆಣೆಯಲು, ಅಥವಾ ಹೊಲಿಯಲು ಅಸಮರ್ಥಳಾಗಿದ್ದರಿಂದ, ಅನಿಯಂತ್ರಿತ ಅಳುವಿಕೆಯ ಸರದಿಗಳು ಹಾಗೂ ತಡೆಯಲಸಾಧ್ಯವಾದ ಆಯಾಸದಿಂದ ಅವಳು ಸಂಕಟಪಡಲಾರಂಭಿಸಿದಳು. ಈ ಸಮಯದಲ್ಲೆಲ್ಲ, ಇಲನಳ ಆಲೋಚನಾ ಕಾರ್ಯಗತಿಯು ದುರ್ಬಲಗೊಂಡಿರಲಿಲ್ಲ; ಆದರೂ, ಇತರರು ತನ್ನನ್ನು ಒಬ್ಬ ಮೂರ್ಖಳನ್ನಾಗಿ ನೋಡುತ್ತಿರಬಹುದೆಂದು ಅವಳಿಗೆ ಅನಿಸಿದಾಗ, ಅವಳಲ್ಲಿ ಮುಜುಗರದ ಅನಿಸಿಕೆಗಳು ಉಂಟಾಗುತ್ತಿದ್ದವು. ಆ ಬಳಿಕ, ಇಲನಳು ವಿವರಿಸಿದ್ದು: “ಈ ಅನಿರೀಕ್ಷಿತ ಬದಲಾವಣೆಯ ಆಘಾತವು, ಒಬ್ಬರನ್ನು ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಹೇಗೆ ಬಾಧಿಸುತ್ತದೆ ಎಂಬುದನ್ನು ಕೆಲವೇ ಜನರು ಅರ್ಥಮಾಡಿಕೊಳ್ಳುತ್ತಾರೆ. ಬಹುಮಟ್ಟಿಗೆ ಇದು ಒಬ್ಬ ವ್ಯಕ್ತಿಯೋಪಾದಿ ನನ್ನ ಅಸ್ತಿತ್ವದ ಕೊನೆಯಾಗಿತ್ತೋ ಎಂಬಂತಹ ಅನಿಸಿಕೆ ನನಗಾಯಿತು.”

ಮಸ್ತಿಷ್ಕ ಆಘಾತವನ್ನು ಯಾವುದು ಉಂಟುಮಾಡುತ್ತದೆ? ಮಸ್ತಿಷ್ಕ ಆಘಾತಕ್ಕೊಳಗಾಗಿರುವ ಪ್ರತಿಯೊಬ್ಬರೂ ಇದೇ ರೀತಿಯಲ್ಲಿ ಬಾಧಿಸಲ್ಪಡುತ್ತಾರೊ? ಅದರಿಂದ ಪಾರಾಗಿರುವವರು ಈ ರೋಗದೊಂದಿಗೆ ಹೇಗೆ ಹೆಣಗಾಡಿದ್ದಾರೆ? ಮಸ್ತಿಷ್ಕ ಆಘಾತದಿಂದ ಪಾರಾಗಿರುವವರ ಕುಟುಂಬಗಳು ಹೇಗೆ ಹೆಣಗಾಡುತ್ತವೆ? ಬೆಂಬಲವನ್ನು ನೀಡಲಿಕ್ಕಾಗಿ ನಾವೆಲ್ಲರೂ ಏನು ಮಾಡಸಾಧ್ಯವಿದೆ? ಎಚ್ಚರ! ಪತ್ರಿಕೆಯು ಅಂತಹ ಪ್ರಶ್ನೆಗಳನ್ನು ಪರೀಕ್ಷಿಸಿ, ತಮ್ಮ ಹೋರಾಟವನ್ನು ಹಂಚಿಕೊಳ್ಳುವ, ಮಸ್ತಿಷ್ಕ ಆಘಾತದಿಂದ ಪಾರಾದವರು ಹಾಗೂ ಅವರ ಕುಟುಂಬಗಳೊಂದಿಗೆ ನಿಮ್ಮನ್ನು ಸಂಪರ್ಕಕ್ಕೆ ತರುತ್ತದೆ.

[ಪಾದಟಿಪ್ಪಣಿ]

a ಈ ರೋಗದಿಂದ ಬಾಧೆಪಡುತ್ತಿರುವವರ ಹಾಗೂ ಅವರ ಕುಟುಂಬಗಳ ಕುರಿತಾದ ಪರಿಗಣನೆಯಿಂದಾಗಿ, ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ