ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 5/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1998
  • ಅನುರೂಪ ಮಾಹಿತಿ
  • ನಮ್ಮ ವಂಶವಾಹಿಗಳಿಂದ ನಾವು ಪೂರ್ವನಿರ್ಣಯಿಸಲ್ಪಡುತ್ತೇವೊ?
    ಎಚ್ಚರ!—1996
  • ಯಾರು ಹೊಣೆ ನೀವೊ ನಿಮ್ಮ ಜೀನ್‌ಗಳೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ನಮ್ಮ ವಾಚಕರಿಂದ
    ಎಚ್ಚರ!—1998
  • ನಮ್ಮ ವಾಚಕರಿಂದ
    ಎಚ್ಚರ!—1998
ಇನ್ನಷ್ಟು
ಎಚ್ಚರ!—1998
g98 5/8 ಪು. 30

ನಮ್ಮ ವಾಚಕರಿಂದ

ವಲಸೆಹೋಗುವಿಕೆ “ವಲಸೆಹೋಗುವುದರ ಕಷ್ಟನಷ್ಟವನ್ನು ಲೆಕ್ಕಿಸಿರಿ!” (ಜೂನ್‌ 8, 1997) ಎಂಬ ಲೇಖನವನ್ನು ನಾನು ನಿಜವಾಗಿಯೂ ಗಣ್ಯಮಾಡಿದೆ. ನೀವು ಯಾವುದರ ಕುರಿತಾಗಿ ಬರೆದಿರೋ ಅದರಲ್ಲಿ ಹೆಚ್ಚಿನಾಂಶವನ್ನು ನಾನು ಅನುಭವಿಸುತ್ತಿದ್ದೇನೆ. ನಾನು ಆಫ್ರಿಕದಿಂದ ಯೂರೋಪಿಗೆ ವಲಸೆಹೋದವನಾಗಿದ್ದು, ಕುಲ, ಭಾಷೆ, ಬಣ್ಣ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಪೂರ್ವಕಲ್ಪಿತ ಅಭಿಪ್ರಾಯಗಳು ಒಳಗೂಡಿರುವ ವೇದನಾಭರಿತ ತೊಂದರೆಗಳನ್ನು ಸತತವಾಗಿ ಎದುರಿಸುತ್ತಿದ್ದೇನೆ. ಜನಪ್ರಿಯ ವಾರ್ತಾಮಾಧ್ಯಮಗಳು, ಆಫ್ರಿಕದವರ ಮತ್ತು ಒಟ್ಟಿನಲ್ಲಿ ವಿದೇಶೀಯರ ಕುರಿತು ಜನರಿಗೆ ತಪ್ಪು ಕಲ್ಪನೆಯನ್ನು ಒದಗಿಸಿವೆ.

ಪಿ. ಎ., ಜರ್ಮನಿ

ಮನೋರಂಜನೆ “ಮನೋರಂಜನೆಗೆ ಏನು ಸಂಭವಿಸಿದೆ?” (ಜೂನ್‌ 8, 1997) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ನಾನು 12 ವರ್ಷಪ್ರಾಯದವಳಾಗಿದ್ದೇನೆ, ಮತ್ತು ನನ್ನ ಶಾಲಾ ರಜಾದಿನಗಳಲ್ಲಿ ನಾನು ತುಂಬ ಟಿವಿ ನೋಡುತ್ತಿದ್ದೆ. ನಾನು ಮಾಡಸಾಧ್ಯವಿರುವ ಇನ್ನಿತರ ಮನೋರಂಜಕ ವಿಷಯಗಳು ಇವೆಯೆಂಬುದನ್ನು ಅವಲೋಕಿಸಲು ಈ ಲೇಖನವು ನನಗೆ ಸಹಾಯ ಮಾಡಿತು.

ಜೆ. ಎಲ್‌., ಇಂಗ್ಲೆಂಡ್‌

ಸಿಂಗಾಪುರ “ಸಿಂಗಾಪುರ—ಏಷಿಯದ ಕಳಂಕಿತ ರತ್ನ” (ಜುಲೈ 8, 1997) ಎಂಬ ಲೇಖನವು, ಈ ಆಧುನಿಕ ಸರಕಾರವು ಶಾಂತಿಪ್ರಿಯ ಕ್ರೈಸ್ತರನ್ನು ಉಪಚರಿಸಿರುವ ಆಘಾತಕರ ವಿಧವನ್ನು ಹೊರಪಡಿಸಿತು. ಅಲ್ಲಿರುವ ಕ್ರೈಸ್ತ ಸ್ತ್ರೀಪುರುಷರಲ್ಲಿ ಅನೇಕರು ನನಗೆ ವೈಯಕ್ತಿಕವಾಗಿ ಪರಿಚಿತರಾಗಿದ್ದಾರೆ, ಮತ್ತು ಅವರೆಲ್ಲರೂ ಒಳ್ಳೆಯ, ಪ್ರೀತಿಪೂರ್ಣ ಜನರಾಗಿದ್ದಾರೆ. ಹಿಂಸೆಯಿದ್ದಾಗ್ಯೂ ಅವರು ಯೆಹೋವನನ್ನು ಸೇವಿಸುತ್ತಿರುವುದು ನನ್ನನ್ನು ಉತ್ತೇಜಿಸುತ್ತದೆ.

ಐ. ಓ., ಮಲೇಶಿಯ

ಕೋಪ “ನಿಮ್ಮ ಕೋಪವನ್ನು ಏಕೆ ಹತೋಟಿಯಲ್ಲಿ ಇಡಬೇಕು?” (ಜುಲೈ 8, 1997) ಎಂಬ ಲೇಖನದಲ್ಲಿ, ಸಿಮೆಯೋನ್‌ ಹಾಗೂ ಲೇವಿಯರು ತಮ್ಮ ತಂದೆಯಿಂದ ಶಪಿಸಲ್ಪಟ್ಟರೆಂದು ನೀವು ಹೇಳುತ್ತೀರಿ. ಯಾಕೋಬನು ಶಪಿಸಿದ್ದು ಅವರ ಕೋಪವನ್ನೇ ಎಂಬುದನ್ನು ನಾನು ಎಲ್ಲಿಯೋ ಓದಿದ್ದೇನೆಂಬ ವಿಷಯದಲ್ಲಿ ನನಗೆ ಖಾತ್ರಿಯಿದೆ.

ಎಸ್‌. ಎಲ್‌., ಅಮೆರಿಕ

ಈ ವಿಷಯದಲ್ಲಿ ನಮ್ಮ ವಾಚಕಳ ಅಭಿಪ್ರಾಯ ಸರಿಯಾಗಿದೆ. ಜೂನ್‌ 15, 1962ರ “ದ ವಾಚ್‌ಟವರ್‌” ಪತ್ರಿಕೆಯು ವಿವರಿಸಿದ್ದು: “ಸಾಯುವ ಸಮಯದಲ್ಲಿ ಯಾಕೋಬನು ಸಿಮೆಯೋನ್‌ ಹಾಗೂ ಲೇವಿಯರನ್ನು ಶಪಿಸಲಿಲ್ಲ. ಅವರ ಕೋಪವನ್ನು ಅವನು ಶಪಿಸಿದನು, ‘ಏಕೆಂದರೆ ಅದು ಕ್ರೂರವಾಗಿದೆ.’ ಅವರ ರೋಷಾವೇಶವನ್ನು ಅವನು ಶಪಿಸಿದನು, ‘ಏಕೆಂದರೆ ಅದು ತೀಕ್ಷ್ಣವಾಗಿ ವರ್ತಿಸುತ್ತದೆ.’”—ಸಂಪಾ.

ಆಹಾರಪಥ್ಯ “ನಿಮ್ಮ ಆಹಾರಪಥ್ಯ—ಅದು ನಿಮ್ಮನ್ನು ಕೊಲ್ಲಸಾಧ್ಯವಿದೆಯೊ?” (ಜುಲೈ 8, 1997) ಎಂಬ ಲೇಖನವು ನನ್ನ ಜೀವವನ್ನು ಕಾಪಾಡಿತು. ಅದನ್ನು ಓದಿದ ಬಳಿಕ, ಆ ಲೇಖನವು ನನ್ನ ಸನ್ನಿವೇಶವನ್ನು ಸಮಗ್ರವಾಗಿ ವರ್ಣಿಸಿದ್ದರಿಂದ, ಆ ಕೂಡಲೆ ವೈದ್ಯರನ್ನು ಕರೆಯುವಂತೆ ನನ್ನ ಹೆಂಡತಿಗೆ ನಾನು ಹೇಳಿದೆ. ನನ್ನನ್ನು ಪರೀಕ್ಷಿಸಿದ ಬಳಿಕ, ಮರುದಿನ ಬೆಳಗ್ಗೆ ನನ್ನ ವೈದ್ಯರು ನನಗಾಗಿ ಶಸ್ತ್ರಚಿಕಿತ್ಸೆಯನ್ನು ಏರ್ಪಡಿಸಿದರು. ಅವರು ಆ ಕೂಡಲೆ ನನ್ನನ್ನು ಆಸ್ಪತ್ರೆಗೆ ಸೇರಿಸಿದರು, ಏಕೆಂದರೆ ನಾನು ಆ ರಾತ್ರಿ ಬದುಕಿ ಉಳಿಯುವುದಿಲ್ಲವೆಂದು ಅವರು ಭಯಗೊಂಡಿದ್ದರು. ಮೂರು ಬೈಪಾಸ್‌ಗಳನ್ನು ಒಳಗೊಂಡ ಶಸ್ತ್ರಚಿಕಿತ್ಸೆಯಿಂದ ಗುಣಮುಖನಾಗುತ್ತಾ, ಈಗ ನಾನು ಮನೆಯಲ್ಲಿದ್ದೇನೆ.

ಎಫ್‌. ಎಸ್‌., ಅಮೆರಿಕ

ಕೆಲವೊಮ್ಮೆ, ಊಟಗಳ ಸಮಯದಲ್ಲಿ ನನ್ನ ಗಂಡನೂ ನಾನೂ ನಮ್ಮನ್ನು ನಿಯಂತ್ರಿಸಿಕೊಳ್ಳುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತೇವೆ. ಆಹಾರಪಥ್ಯದ ಕುರಿತಾದ ಇತರ ಲೇಖನಗಳನ್ನು ನಾನು ಓದಿದ್ದೇನೆ, ಆದರೆ ಈ ಲೇಖನವು ವಿಚಾರಗಳನ್ನು ಒಂದು ಸರಳವಾದ ಹಾಗೂ ಪ್ರಾಯೋಗಿಕ ವಿಧದಲ್ಲಿ ಚರ್ಚಿಸಿತು. ನಿಮ್ಮ ಸಲಹೆಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ, ನಾವು ನಮ್ಮನ್ನು ಒಳ್ಳೆಯ ಆರೋಗ್ಯದಲ್ಲಿ ಇರಿಸಿಕೊಳ್ಳಲು ಶಕ್ತರಾಗುವೆವು ಎಂಬ ಖಾತ್ರಿ ನನಗಿದೆ.

ವಿ. ಎ., ಬ್ರೆಸಿಲ್‌

“ನಿಮ್ಮ ಆಹಾರಪಥ್ಯ—ಚಿಂತಿತರಾಗಿರಬೇಕಾದ ಕಾರಣ” ಎಂಬ ಲೇಖನಮಾಲೆಗಾಗಿ ಉಪಕಾರಗಳು. ಅತಿಯಾದ ತೂಕವಿರುವುದರ ಅಪಾಯಗಳನ್ನು ಅವಲೋಕಿಸಲು ಇದು ನನಗೆ ಸಹಾಯ ಮಾಡಿತು. ನಾನು ಅದರಲ್ಲಿರುವ ಎಲ್ಲ ಸಲಹೆಗಳನ್ನು ಅನುಸರಿಸಲು ಆರಂಭಿಸಿದ್ದೇನೆ, ಮತ್ತು ಯೆಹೋವನ ಸಹಾಯದಿಂದ, ನಾನು ನನ್ನ ತಿನ್ನುವಿಕೆಯನ್ನು ನಿಯಂತ್ರಿಸುವೆನೆಂದು ನನಗೆ ಗೊತ್ತು.

ವಿ. ವೈ. ಡಿ., ಲೈಬೀರಿಯ

ಡ್ರಾಗನ್‌ ಫ್ಲೈಗಳು “ನದೀತೀರದ ರತ್ನಗಳು” (ಜುಲೈ 8, 1997) ಎಂಬ ಸಂಪೂರ್ಣವಾಗಿ ಆನಂದಿಸಸಾಧ್ಯವಿರುವ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರ. ಅದು ನನ್ನ ಅಚ್ಚುಮೆಚ್ಚಿನ ಗಾಳಿಯ ಪ್ರದರ್ಶಕರಲ್ಲಿ ಒಂದಾದ ಡ್ರಾಗನ್‌ ಫ್ಲೈನ ಕುರಿತಾಗಿತ್ತು. ನನ್ನ ತೋಟದಲ್ಲಿ ನಾನು ಕೆಲಸಮಾಡುವಾಗ, ಒಂದು ಡ್ರಾಗನ್‌ ಫ್ಲೈ ಬಹುಮಟ್ಟಿಗೆ ಯಾವಾಗಲೂ ಸಮೀಪದಲ್ಲೇ ಸುಳಿದಾಡುತ್ತಿರುತ್ತದೆ ಅಥವಾ ಕುಳಿತಿರುತ್ತದೆ. ಭೂದೃಶ್ಯವನ್ನು ಚಿತ್ರಿಸುವ ಒಬ್ಬ ವ್ಯಕ್ತಿಯೊಂದಿಗೆ ನಾನು ಇದಕ್ಕೆ ಕಾರಣವನ್ನು ಕೇಳಿದೆ. ಡ್ರಾಗನ್‌ ಫ್ಲೈನ ಆಹಾರದಲ್ಲಿ ಸೊಳ್ಳೆಗಳು ಸೇರಿವೆ ಮತ್ತು ಆ ಸೊಳ್ಳೆಗಳು ಜನರ ಕಡೆಗೆ ಆಕರ್ಷಿತವಾಗಿವೆ ಎಂದು ಅವನು ಹೇಳಿದನು. ಆದುದರಿಂದ ಈಗ ನಾನು ಈ ವರ್ಣರಂಜಿತ ಸೃಷ್ಟಿಜೀವಿಯನ್ನು, ಒಂದು ರೀತಿಯ ವೈಯಕ್ತಿಕ ಅಂಗರಕ್ಷಕನೋಪಾದಿ ದೃಷ್ಟಿಸುತ್ತೇನೆ!

ಜೆ. ಎಫ್‌., ಅಮೆರಿಕ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ