ನಮ್ಮ ವಾಚಕರಿಂದ
ಮೂತ್ರಜನಕಾಂಗಗಳು “ನಿಮ್ಮ ಮೂತ್ರಜನಕಾಂಗಗಳು—ಜೀವಪೋಷಕವಾದ ಒಂದು ಶೋಧಕ” (ಸೆಪ್ಟೆಂಬರ್ 8, 1997) ಎಂಬ ಲೇಖನದಿಂದ ನಾನು ಎಷ್ಟೊಂದು ಪ್ರೇರಿಸಲ್ಪಟ್ಟೆನೆಂದು ನಿಮಗೆ ತಿಳಿಸಲು ಬಯಸುತ್ತೇನೆ. ಮೂತ್ರಜನಕಾಂಗದ ಸಮಸ್ಯೆಯು ನನಗಿದೆ ಎಂದು ನನ್ನ ವೈದ್ಯನು ನನಗೆ ತಿಳಿಸಿದ್ದಾನೆ. ಆ ಲೇಖನದಿಂದಾಗಿ, ಈ ಕಾಯಿಲೆಯನ್ನು ಅನುಭವಿಸುತ್ತಿರುವವಳು ನಾನೊಬ್ಬಳೇ ಎಂಬ ಅನಿಸಿಕೆಯು ಈಗ ಕಡಿಮೆಯಾಗಿದೆ.
ವಿ. ಎಮ್., ಅಮೆರಿಕ
ನನಗೆ ಮೂತ್ರಜನಕಾಂಗದ ರೋಗವಿದೆ. ಇದಕ್ಕಾಗಿ ನಾನು ನಾಲ್ಕು ತಿಂಗಳುಗಳ ವರೆಗೆ ಆಸ್ಪತ್ರೆಯಲ್ಲಿದ್ದೆ. ನನ್ನ ದೇಹದ ವಿಷಯದಲ್ಲಿ ನಾನು ಎಷ್ಟೊಂದು ಅಜ್ಞಾನಿಯಾಗಿದ್ದೆ ಎಂಬುದನ್ನು ಗ್ರಹಿಸುವಂತೆ, ನನಗೆ ನಿಮ್ಮ ಲೇಖನದ ವಾಚನವು ಸಹಾಯ ಮಾಡಿತು. ಈಗ ನನ್ನ ಪರಿಸ್ಥಿತಿಯನ್ನು ಇತರರಿಗೆ ನಾನು ಹೆಚ್ಚು ಉತ್ತಮವಾಗಿ ವಿವರಿಸಬಲ್ಲೆ.
ಎಸ್. ಏಚ್., ಜಪಾನ್
ನನ್ನ ಹೆಂಡತಿಗೆ ಮೂತ್ರಜನಕಾಂಗದ ಕ್ಯಾನ್ಸರ್ ಇದೆಯೆಂದು ಹೇಳಲಾದಾಗ ಈ ಲೇಖನವು ಬಂತು. ರೋಗನಿರ್ಣಯವು ನಮ್ಮನ್ನು ತಲ್ಲಣಗೊಳಿಸಿತ್ತಾದರೂ, ಮೂತ್ರಜನಕಾಂಗದ ವಿಭಿನ್ನ ಕಾರ್ಯಾಚರಣೆಗಳನ್ನು ಶಸ್ತ್ರಚಿಕಿತ್ಸಕನು ನಮಗೆ ವಿವರಿಸಿದಾಗ, ನಾವು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದೆವು. ನನ್ನ ಹೆಂಡತಿ ಮೂತ್ರಜನಕಾಂಗದ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಈಗ ಅದರಿಂದ ಚೇತರಿಸಿಕೊಳ್ಳುತ್ತಿದ್ದಾಳೆ.
ಜಿ. ಎಸ್., ಭಾರತ
ದ್ವೇಷ “ಏಕೆ ಇಷ್ಟೊಂದು ದ್ವೇಷ? ಏಕೆ ಇಷ್ಟು ಕಡಿಮೆ ಪ್ರೀತಿ?” (ಅಕ್ಟೋಬರ್ 8, 1997) ಎಂಬ ಲೇಖನಮಾಲೆಯು, ನೀವು ಮುದ್ರಿಸಿರುವ ಅತ್ಯುತ್ತಮ ಮುಖಪುಟಗಳಲ್ಲೇ ಒಂದಾಗಿತ್ತು. ಅಪರಿಚಿತರು ಹಾಗೂ ಬೇರೆ ಸಂಸ್ಕೃತಿಗಳಿಂದ ಬಂದವರ ಮೇಲೆ ಜನರು ಏಕೆ ಭರವಸೆಯಿಡುವುದಿಲ್ಲ ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ನೋಡುವಂತೆ ಈ ಲೇಖನಗಳು ನನಗೆ ಸಹಾಯ ಮಾಡಿದವು.
ಜೆ. ಎಮ್., ಅಮೆರಿಕ
ಶ್ರವಣಶಕ್ತಿಯ ಕೊಡುಗೆ “ನಿಮ್ಮ ಶ್ರವಣಶಕ್ತಿ—ಅಮೂಲ್ಯವೆಂದೆಣಿಸಬೇಕಾದ ಒಂದು ಕೊಡುಗೆ” (ಅಕ್ಟೋಬರ್ 8, 1997) ಎಂಬ ಲೇಖನಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಆ ಲೇಖನವನ್ನು ಓದುವ ಮೊದಲು, ಕಿವಿಯ ಹಲವಾರು ಭಾಗಗಳ ಕಾರ್ಯಾಚರಣೆಗಳು ಹಾಗೂ ನಾವು ಹೇಗೆ ಕೇಳಿಸಿಕೊಳ್ಳುತ್ತೇವೆ ಎಂಬ ವಿಷಯದ ಕುರಿತು ನನಗೆ ಗಣನೀಯ ತಿಳಿವಳಿಕೆ ಇತ್ತೆಂದು ನಾನು ತಿಳಿದುಕೊಂಡಿದ್ದೆ. ಆದರೆ ನಾನೆಷ್ಟು ಅಜ್ಞಾನಿಯಾಗಿದ್ದೆ ಎಂಬುದನ್ನು ನಾನು ಗ್ರಹಿಸಿರಲಿಲ್ಲ. 26ನೆಯ ಪುಟದಲ್ಲಿದ್ದ ಚಿತ್ರವು ಅದ್ಭುತಕರವಾಗಿತ್ತು! ಕಿವಿಯ ಆ ಚಿತ್ರವನ್ನು ಬಿಡಿಸುವುದರಲ್ಲಿ ಒಳಗೊಂಡ ಚಿಂತನ ಹಾಗೂ ಪ್ರಯತ್ನವನ್ನು ನೆನಸಿ ನಾನು ವಿಸ್ಮಯಗೊಂಡೆ. ನಿಜವಾದ ಕಿವಿಯನ್ನು ಸೃಷ್ಟಿಸಿದಾತನ ವಿವೇಕದ ಕುರಿತು ಧ್ಯಾನಿಸಿ ನಾನು ಇನ್ನೂ ಬೆರಗಾದೆ!
ಏ. ಎಸ್., ಅಮೆರಿಕ
ನನ್ನ ಸ್ನೇಹಿತೆ ಹಾಗೂ ನಾನು—ಇಬ್ಬರೂ ವೈದ್ಯಕೀಯ ವಿಶೇಷಜ್ಞರಾಗಿದ್ದು, ನಮ್ಮ ಅನೇಕ ವರ್ಷಗಳ ಐಹಿಕ ಅಧ್ಯಯನದ ಅವಧಿಯಲ್ಲಿ, ಕಿವಿಯನ್ನು ಇಷ್ಟೊಂದು ಸರಳವಾಗಿ ಮತ್ತು ನಿಷ್ಕೃಷ್ಟವಾಗಿ ವರ್ಣಿಸಿದಂತಹ ಲೇಖನವನ್ನು ನಾವೆಂದಿಗೂ ಓದಿಲ್ಲವೆಂದು ನಾವು ಪ್ರಾಮಾಣಿಕವಾಗಿ ನೆನಸುತ್ತೇವೆ. ಈ ಲೇಖನವು, ಕೀರ್ತನೆ 139:14 (NW)ರಲ್ಲಿರುವಂತಹ ಮಾತುಗಳೊಂದಿಗೆ ನಾವು ಸಮ್ಮತಿಸುವಂತೆ ಮಾಡುತ್ತದೆ: “ನಾನು ಭಯಪ್ರೇರಕವಾದ ವಿಧದಲ್ಲಿ ಅದ್ಭುತಕರವಾಗಿ ಸೃಷ್ಟಿಸಲ್ಪಟ್ಟಿದ್ದೇನೆ.”
ಎಮ್. ಬಿ. ಮತ್ತು ಸೆಡ್. ಬಿ., ವೆನೆಸೂಯೆಲ
ಕುಡಿದು ವಾಹನ ಚಲಾಯಿಸಿದ ಚಾಲಕನ ಬಲಿ ನಾನಾಗಿದ್ದೆ. ಅತಿಸುಪ್ತಿ (ಕೋಮಾ)ಯಲ್ಲಿ ಒಂದು ತಿಂಗಳನ್ನು ಕಳೆದ ಬಳಿಕ, ನಾನು ನನ್ನ ಶ್ರವಣಶಕ್ತಿಯನ್ನು ಕಳೆದುಕೊಂಡು, ಪ್ರಜ್ಞಾಸ್ಥಿತಿಗೆ ಮರುಳಿದೆ. 18 ವರ್ಷಗಳ ನಂತರವೂ, ನಾನು ಬಹುಮಟ್ಟಿಗೆ ಕಿವುಡನಾಗಿದ್ದೇನೆ. ಆದರೆ ಶ್ರವಣ ಸಾಧನಗಳ ಸಹಾಯದಿಂದ, ಸ್ವಲ್ಪ ಮಟ್ಟಿಗೆ ನಾನು ಕೇಳಿಸಿಕೊಳ್ಳಲು ಶಕ್ತನಾಗಿದ್ದೇನೆ. ಶ್ರವಣನಷ್ಟವಾಗಿರುವ ವ್ಯಕ್ತಿಗಳಿಗೆ ಶ್ರವಣಶಕ್ತಿಯಿರುವವರು ಅನುಭೂತಿ ತೋರಿಸುವಂತೆ ಈ ಸಮಯೋಚಿತ ಲೇಖನವು ನಿಜವಾಗಿ ಸಹಾಯಮಾಡುತ್ತದೆ.
ಕೆ. ಕೆ., ಅಮೆರಿಕ
ಈ ಲೋಕದ ಭಾಗವಲ್ಲ “ಬೈಬಲಿನ ದೃಷ್ಟಿಕೋನ: ‘ಈ ಲೋಕದ ಭಾಗವಲ್ಲ’—ಇದು ಏನನ್ನು ಅರ್ಥೈಸುತ್ತದೆ?” (ಅಕ್ಟೋಬರ್ 8, 1997) ಎಂಬ ಲೇಖನವನ್ನು ನಾನು ತುಂಬ ಇಷ್ಟಪಟ್ಟೆ. ಅದನ್ನು ಅಭ್ಯಾಸಿಸಿದ ಬಳಿಕ, ಕ್ರೈಸ್ತೇತರರನ್ನು ವರ್ಣಿಸಲು, “ಲೌಕಿಕ ವ್ಯಕ್ತಿ” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸದಿರಲು ನಾನು ನಿರ್ಧರಿಸಿದೆ. ಎಷ್ಟೆಂದರೂ, 30 ವರ್ಷಗಳ ಹಿಂದೆ, ಸ್ವತಃ ನಾನೇ ಒಬ್ಬ ಕ್ರೈಸ್ತಳಾಗಿರಲಿಲ್ಲ. ನನ್ನನ್ನು ಬೈಬಲಿಗೆ ಪ್ರಥಮ ಬಾರಿ ಪರಿಚಯಿಸಿದ ವ್ಯಕ್ತಿಯು, ಇಂತಹ ತಿರಸ್ಕಾರಭಾವವನ್ನು ತಾಳಿಕೊಂಡಿದಿದ್ದರೆ, ಒಬ್ಬ ಸಾಕ್ಷಿಯೊಂದಿಗೆ ಪುನಃ ಮಾತಾಡಲು ನಾನೆಂದಿಗೂ ಬಯಸುತ್ತಿರಲಿಲ್ಲವೇನೋ!
ಬಿ. ಜಿ., ಅಮೆರಿಕ
ಕ್ಲೇಶಮುಕ್ತ ಪ್ರಮೋದವನ ನಾನು ಒಂಬತ್ತು ವರ್ಷ ಪ್ರಾಯದವಳಾಗಿದ್ದು, “ಕ್ಲೇಶಮುಕ್ತ ಪ್ರಮೋದವನ—ಬೇಗನೆ ವಾಸ್ತವಿಕತೆಯಾಗಲಿದೆ” (ನವೆಂಬರ್ 8, 1997) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ಆ ಲೇಖನವು ನಿಜವಾಗಿಯೂ ನನ್ನನ್ನು ಪ್ರಭಾವಿಸಿತು. ನನ್ನ ತಂದೆ ಊರಲ್ಲಿ ಇಲ್ಲ, ಮತ್ತು ರಾತ್ರಿಯಲ್ಲಿ ಯಾರಾದರೂ ನಮ್ಮ ಮನೆಯೊಳಕ್ಕೆ ನುಗ್ಗಬಹುದೆಂಬ ಕಾರಣಕ್ಕಾಗಿ, ಕಿಟಕಿಯನ್ನು ಸಹ ತೆರೆಯಲು ನನ್ನ ತಾಯಿ ಮತ್ತು ನಾನು ಭಯಪಡುತ್ತೇವೆ. ಯೆಹೋವನು ಎಲ್ಲ ಪಾತಕ ಹಾಗೂ ಹಿಂಸಾಚಾರವನ್ನು ತೆಗೆದುಹಾಕಲು ವಾಗ್ದಾನಿಸಿರುವುದನ್ನು ನಾನು ಓದಿದಾಗ, ನನಗೆ ಸಮಾಧಾನವಾಯಿತು.
ಡಿ. ಎಮ್., ಅಮೆರಿಕ