ಊಹಿಸಲಸಾಧ್ಯವಾದ ಚಿತ್ರಹಿಂಸೆಯ ಸಾಧನಗಳು
“ಸಂಕೋಲೆ,” “ಚಿತ್ರಹಿಂಸೆ,” ಮತ್ತು “ಗಲ್ಲಿಗೇರಿಸುವಿಕೆ”ಯಂತಹ ಪದಗಳು ನಿಮ್ಮನ್ನು ನಡುಗುವಂತೆ ಮಾಡುತ್ತವೊ? ಯೂರೋಪಿನಲ್ಲಿ (13ನೆಯ ಮತ್ತು 19ನೆಯ ಶತಮಾನಗಳ ನಡುವೆ) ಮಠೀಯ ನ್ಯಾಯವಿಚಾರಣೆ ಮತ್ತು ಮಾಟಗಾತಿ ವಿಚಾರಣೆಗಳ ಸಾವಿರಾರು ಮಂದಿ ಬಲಿಗಳಿಗೆ, ಅವು ಒಂದು ವೇದನಾಮಯ ವಾಸ್ತವಿಕತೆಯಾಗಿದ್ದವು. ಜರ್ಮನಿಯಲ್ಲಿನ ರೈನ್ ನದಿಯ ಪಕ್ಕದಲ್ಲಿನ ರೂಡೆಶಿಮ್ ಪಟ್ಟಣದಲ್ಲಿನ ವಸ್ತುಸಂಗ್ರಹಾಲಯಕ್ಕೆ ಸೇರಿರುವ, ಇಲ್ಲಿ ಚಿತ್ರಿಸಲ್ಪಟ್ಟಿರುವ ಸಾಧನಗಳು, ಆ ಸಮಯದವುಗಳಾಗಿವೆ. ಬಲಿಗಳ ಕಷ್ಟಾನುಭವದ ಒಂದಿಷ್ಟು ಸುಳಿವನ್ನು ಅವು ಕೊಡುತ್ತವೆ.
ಆ ಬಡ ಬಲಿಯು, ಚೂಪಾದ ಮುಳ್ಳುಗಳಿಂದ ಆವರಿಸಲ್ಪಟ್ಟ ಮಠೀಯ ನ್ಯಾಯವಿಚಾರಣೆಯ ಕುರ್ಚಿಯ ಮೇಲೆ ನಗ್ನನಾಗಿ ಕುಳ್ಳಿರಿಸಲ್ಪಟ್ಟಾಗ, ವರ್ಣಿಸಲಸಾಧ್ಯವಾದ ಸಂಕಟವನ್ನು ಅನುಭವಿಸಿದನು. ಬಲಿಯ ಕೈಗಳನ್ನು, ಕಾಲುಗಳನ್ನು, ಅಥವಾ ಅಸ್ಥಿ ಸಂಧಿಗಳನ್ನು ಮೊಣಕಾಲು ಸ್ಕ್ರೂಗಳ ಮೂಲಕ ಸಿಗಿದುಹಾಕಲಾಗುತ್ತಿತ್ತು ಅಥವಾ ನಷ್ಟಗೊಳಿಸಲಾಗುತ್ತಿತ್ತು. ಅವನ ಶರೀರವನ್ನು ಚಿಂದಿಯಾಗಿ ಹರಿದುಹಾಕಲು ಬೆಕ್ಕಿನ ಪಂಜವನ್ನು ಉಪಯೋಗಿಸಲಾಯಿತು; ಶರೀರದ ಯಾವುದೇ ಭಾಗವನ್ನು ಬಿಡಲಾಗುತ್ತಿರಲಿಲ್ಲ. ಮುಳ್ಳುಗಳುಳ್ಳ ಕೊರಳಪಟ್ಟಿಯು, ಬಲಿಯಾದ ವ್ಯಕ್ತಿಯ ಕೊರಳು, ಭುಜಗಳು, ಮತ್ತು ದವಡೆಯಲ್ಲಿ ಗ್ಯಾಂಗ್ರೀನ್ ಆಗುವಂತೆ ಮಾಡುತ್ತಿತ್ತು ಮತ್ತು ಇದು ಬೇಗನೆ ರಕ್ತದಲ್ಲಿ ವಿಷ ಹರಡಿಸಿ, ಮರಣಕ್ಕೆ ನಡಿಸುತ್ತಿತ್ತು.
ರೋಮನ್ ಕ್ಯಾಥೊಲಿಕ್ ಚರ್ಚ್ನಿಂದ ನೇಮಿಸಲ್ಪಟ್ಟ ಮಠೀಯ ನ್ಯಾಯವಿಚಾರಣೆಯ ದಂಡನಾಧಿಕಾರಿಗಳು, ಭಿನ್ನಮತೀಯರೊಂದಿಗೆ ವ್ಯವಹರಿಸಲು ಇವುಗಳನ್ನು ಮತ್ತು ಇವುಗಳಿಗೆ ಸಮಾನವಾದ ಸಾಧನಗಳನ್ನು ಉಪಯೋಗಿಸಿದರು. ಈ ಭಿನ್ನಮತೀಯರು, ಅಧಿಕಾಂಶವಾಗಿ ಸಾಧಾರಣ ಜನರಾಗಿದ್ದರು. ಇವರನ್ನು ಖಂಡಿಸಲಾಗಿತ್ತು ಮತ್ತು ಅವರಿಂದ “ಪಾಪನಿವೇದನೆ”ಯನ್ನು ಈಗ ಚಿತ್ರಹಿಂಸೆಯ ಮೂಲಕ ಹೊರಬರಿಸಲಾಗುತ್ತಿತ್ತು. ನಿಜವಾಗಿ, ಪೋಪರ ಅಧಿಕಾರದ ಕೆಳಗೆ ವಾಲ್ಡೆನ್ಸೀಸ್ರವರನ್ನು ಒಳಗೂಡಿದಂತಹ ಮಠೀಯ ನ್ಯಾಯವಿಚಾರಣೆಯ ಸಮಯದಲ್ಲಿ, ಚಿತ್ರಹಿಂಸೆಯ ಸಾಧನಗಳ ಮೇಲೆ, ಪವಿತ್ರ ನೀರು ಕೂಡ ಚಿಮುಕಿಸಲ್ಪಡುತ್ತಿತ್ತು.
ಕ್ರೈಸ್ತಪ್ರಪಂಚವು ಮಠೀಯ ನ್ಯಾಯವಿಚಾರಣೆಗಾಗಿ ದೋಷದ ಭಾರವಾದ ಹೊರೆಯನ್ನು ಹೊತ್ತಿರುತ್ತದೆ. ಇತಿಹಾಸಕಾರ ವಾಲ್ಟರ್ ನಿಗ್ ವಿವರಿಸುವುದು: “ಕ್ರೈಸ್ತಪ್ರಪಂಚವು, ಪಾಷಂಡಮತ ದಂಡನೆಯ ಸಮಯದಲ್ಲಿ ನಡೆಸಿದ ಪಾಪಗಳಿಗಾಗಿ, ಬಹಿರಂಗವಾಗಿ ಮತ್ತು ಗಾಢವಾದ ನಿಶ್ಚಿತಾಭಿಪ್ರಾಯದೊಂದಿಗೆ ಕೊನೆಯಲ್ಲಿ ನಿವೇದಿಸಿಕೊಂಡು, ಧರ್ಮದ ಸಂಬಂಧದಲ್ಲಿ ಪ್ರತಿಯೊಂದು ವಿಧದ ಹಿಂಸಾಚಾರವನ್ನು ಪ್ರಾಮಾಣಿಕವಾಗಿ ಮತ್ತು ಷರತ್ತಿಲ್ಲದೆ ಬಿಟ್ಟುಕೊಡುವ ತನಕ ಇನ್ನು ಹೆಚ್ಚಿನ ಆಶೀರ್ವಾದಗಳನ್ನು ಅನುಭವಿಸದು.”
[ಪುಟ 31 ರಲ್ಲಿರುವ ಚಿತ್ರ]
ಮಠೀಯ ನ್ಯಾಯವಿಚಾರಣೆಯ ಕುರ್ಚಿ
ಮೊಣಕಾಲು ಸ್ಕ್ರೂಗಳು
ಮುಳ್ಳುಗಳುಳ್ಳ ಕೊರಳಪಟ್ಟಿ
ಬೆಕ್ಕಿನ ಪಂಜು
[ಕೃಪೆ]
ಎಲ್ಲ ಚಿತ್ರಗಳು: Mittelalterliches Foltermuseum Rüdesheim/Rhein