ನಮ್ಮ ವಾಚಕರಿಂದ
ಮಾತನಾಡುವ ನಗಾರಿಗಳು “ಆಫ್ರಿಕದ ನಗಾರಿಗಳು ನಿಜವಾಗಿಯೂ ಮಾತನಾಡುತ್ತವೆಯೆ?” (ಆಗಸ್ಟ್ 8, 1997) ಎಂಬ ಅದ್ಭುತಕರವಾದ ಲೇಖನವನ್ನು ಓದಿದ ಬಳಿಕ, ಆ ಕಥೆಯ ಸತ್ಯತೆಯನ್ನು ಪರೀಕ್ಷಿಸಲು ನಾನು, ಶತಾಯುಷಿಯಾಗಿರುವ ನನ್ನ ಅಜ್ಜನ ಬಳಿ ಹೋದೆ. ಅವರು ಅದರ ಪ್ರತಿಯೊಂದು ವಿವರವನ್ನು ದೃಢೀಕರಿಸಿದರು, ಮತ್ತು ನಾನು ಪ್ರಭಾವಿತನಾದೆ!
ಜಿ. ಎಮ್. ಓ., ನೈಜೀರಿಯ
ಇಂಟರ್‌ನೆಟ್ ನಾನು ಕಂಪ್ಯೂಟರ್ ಇಂಜಿನೀಯರಿಂಗ್ ಕಲಿಯುತ್ತಾ ಇದ್ದೇನೆ, ಮತ್ತು “ಇಂಟರ್‌ನೆಟ್—ನಿಮಗೆ ಯೋಗ್ಯವೊ?” (ಆಗಸ್ಟ್ 8, 1997) ಎಂಬ ಲೇಖನಮಾಲೆಗಾಗಿ ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಆ ಲೇಖನಗಳು ಸಂಕ್ಷಿಪ್ತವೂ, ಬೋಧಪ್ರದವೂ ಮತ್ತು ವೈಜ್ಞಾನಿಕವಾಗಿ ನಿಷ್ಕೃಷ್ಟವೂ ಆಗಿದ್ದವು. ಇಂಟರ್‌ನೆಟ್ ಅನ್ನು ಸುತ್ತುವರಿದಿರುವ ಉದ್ದೇಶರಹಿತ ಪೂರ್ವಾಗ್ರಹ ಮತ್ತು ಭೀತಿಯನ್ನು ನೀವು ಅನುಮೋದಿಸಲಿಲ್ಲ. ಇನ್ನೊಂದು ಕಡೆ, ನೀವು ನಿಜವಾದ ಅಪಾಯಗಳನ್ನು ಮರೆಮಾಚಿಸಲಿಲ್ಲ.
ಎಲ್. ಈ., ಇಟಲಿ
ನಾನು ಕಂಪ್ಯೂಟರ್ ಕ್ಲಾಸ್‌ಗಳನ್ನು ನಡಿಸುತ್ತೇನೆ, ಮತ್ತು ನನ್ನನ್ನು ಸದ್ಯೋಚಿತವಾಗಿಡಲು, ನಾನು ಹೆಚ್ಚಾಗಿ ಕಂಪ್ಯೂಟರ್ ಸಂಬಂಧಿತ ಪತ್ರಿಕೆಗಳನ್ನು ಖರೀದಿಸುತ್ತೇನೆ. ಇಂತಹ ಪತ್ರಿಕೆಗಳಲ್ಲಿ ಯಾವುದೇ ಪತ್ರಿಕೆಯೂ, ಇಂಟರ್‌ನೆಟ್‌ನ ಸಾಧಕ ಬಾಧಕಗಳ ಕುರಿತಾಗಿ ಇಷ್ಟು ಮುಚ್ಚುಮರೆಯಿಲ್ಲದೆ ಮಾತಾಡುವ ಸಾಹಸವನ್ನು ಮಾಡಿಲ್ಲ.
ಎ. ಎ. ಎಸ್., ಬ್ರೆಸಿಲ್
ಇತ್ತೀಚೆಗೆ ನಾನು ಇಂಟರ್‌ನೆಟ್‌ನ ಕುರಿತಾಗಿ ತುಂಬ ಕೇಳುತ್ತಿದ್ದೆ, ಆದರೆ ಅದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ಲೇಖನಮಾಲೆಯು, ಆ ವಿಷಯವನ್ನು ತೀರ ಸರಳವಾದ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ವಿಧದಲ್ಲಿ ವಿವರಿಸಿತು.
ಎ. ಎಚ್., ಭಾರತ
ವರ್ಲ್ಡ್ ವೈಡ್ ವೆಬ್‌ನ ಕುರಿತಾಗಿ ಸ್ವಲ್ಪವೇ ತಿಳಿವಳಿಕೆಯುಳ್ಳ ಅಥವಾ ಯಾವುದೇ ತಿಳಿವಳಿಕೆಯಿಲ್ಲದ ವಾಚಕರೂ ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿರುವ ವಿಧದಲ್ಲಿ ನೀವು ಆ ಲೇಖನಗಳನ್ನು ಬರೆದಿದ್ದೀರಿ. ನಾವು ಸ್ವಲ್ಪ ತಡೆದು, ಈ ಸೌಲಭ್ಯವನ್ನು ಉಪಯೋಗಿಸುವುದರ ವೆಚ್ಚವನ್ನು ತೂಗಿನೋಡುವಂತೆಯೂ ನೀವು ನಮಗೆ ಸಹಾಯಮಾಡಿದ್ದೀರಿ.
ಇ. ಕೆ., ಇಥಿಯೋಪಿಯ
ದೂಷಿಸಲ್ಪಡುವುದು ನನಗೆ 15 ವರ್ಷ ಪ್ರಾಯ, ಮತ್ತು “ಯುವ ಜನರು ಪ್ರಶ್ನಿಸುವುದು . . . ಅದು ಯಾವಾಗಲೂ ನನ್ನ ತಪ್ಪೇ ಏಕೆ?” (ಆಗಸ್ಟ್ 8, 1997) ಎಂಬ ಲೇಖನವು, ನನ್ನನ್ನು ಅಳುವಂತೆ ಮಾಡಿತು. ನಾನು ಕುಟುಂಬದಲ್ಲಿ ಎಲ್ಲರಿಗಿಂತಲೂ ಚಿಕ್ಕವನಾಗಿದ್ದೇನೆ ಮತ್ತು ಯಾವಾಗಲೂ ನನ್ನನ್ನೇ ಕಾಡಿಸಲಾಗುತ್ತದೆ. ಇದರ ಕುರಿತು ಬರೆದದ್ದಕ್ಕಾಗಿ ನಿಮಗೆ ಉಪಕಾರ.
ಎನ್. ಎಚ್., ಅಮೆರಿಕ
ಏಳಿಗೆ ಹೊಂದುವ ಮಕ್ಕಳು “ನಿಮ್ಮ ಮಕ್ಕಳು ಏಳಿಗೆ ಹೊಂದುವಂತೆ ಸಹಾಯಮಾಡಿರಿ” (ಸೆಪ್ಟೆಂಬರ್ 8, 1997) ಎಂಬ ಸೊಗಸಾದ ಲೇಖನಮಾಲೆಗಾಗಿ ನಾನು ನಿಮಗೆ ಉಪಕಾರ ಹೇಳಬಯಸುತ್ತೇನೆ. ಅದು ನನಗೆ ತುಂಬ ಪ್ರಯೋಜನಕರ ಮತ್ತು ಪ್ರೋತ್ಸಾಹಕರವಾಗಿತ್ತು. ನನಗೆ ಮೂರು ವರ್ಷ ಪ್ರಾಯದ ಒಬ್ಬ ಮಗನಿದ್ದಾನೆ, ಮತ್ತು ಈ ಲೇಖನವು ನನಗೆ ಅವನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಮತ್ತು ನಾನು ಅವನಿಗೆ ಶಿಸ್ತನ್ನು ನೀಡುವ ವಿಧವನ್ನು ಉತ್ತಮಗೊಳಿಸಲು ಸಹಾಯಮಾಡಿತು. ಈ ಲೇಖನಗಳಿಗಾಗಿ ನಾನು ಯೆಹೋವನಿಗೆ ಗಾಢವಾದ ಉಪಕಾರಗಳನ್ನು ಸಲ್ಲಿಸುತ್ತೇನೆ.
ಪಿ. ಎಸ್., ಇಟಲಿ
“ಬಿರುಸಾದ ಮಾತುಗಳು, ಜಜ್ಜಲ್ಪಟ್ಟ ಮನೋಭಾವಗಳು” ಎಂಬ ಲೇಖನದಿಂದ ನಾನು ಆಳವಾಗಿ ಪ್ರಭಾವಿಸಲ್ಪಟ್ಟೆ. ನನ್ನ ಇಡೀ ಜೀವನದಲ್ಲಿ ನನ್ನ ಕುರಿತಾಗಿ ನಾನು ತುಂಬ ಟೀಕಾತ್ಮಕಳಾಗಿದ್ದೆ. ಕಟುವಾಗಿ ಟೀಕಿಸುವ ಬದಲಿಗೆ, ಇಷ್ಟೊಂದು ಕಷ್ಟಾನುಭವವನ್ನು ತಾಳಿಕೊಂಡಿರುವವರೆಲ್ಲರಿಗೆ ನೀವು ಪ್ರೀತಿಯಿಂದ ಸಹಾಯಮಾಡಲು ಪ್ರಯತ್ನಿಸುತ್ತೀರೆಂಬುದನ್ನು ಕಂಡುಕೊಳ್ಳಲು ನಾನು ಸಂತೋಷಿಸುತ್ತೇನೆ. ಯೆಹೋವನು ನಿಮ್ಮನ್ನು ಆಶೀರ್ವದಿಸುತ್ತಾ ಇರಲಿ, ಮತ್ತು ಇಷ್ಟೊಂದು ಉಪಯುಕ್ತವೂ, ಸಾಂತ್ವನದಾಯಕವೂ ಆಗಿರುವ ಲೇಖನಗಳ ಬರಹವನ್ನು ಮಾರ್ಗದರ್ಶಿಸುತ್ತಾ ಇರಲಿ.
ಎಲ್. ಡಿ., ಕೆನಡ
ಆ ಲೇಖನಗಳು, ನಮ್ಮಲ್ಲಿ ಅನೇಕರು ಅನುಭವಿಸಿರುವ ಆಂತರಿಕ ಸಂಕ್ಷೋಭೆಯ ಮೂಲ ಕಾರಣಕ್ಕೆ ಇತರರ ಕಣ್ಣುಗಳನ್ನು ತೆರೆಯುವುದೆಂದು ನಾನು ನಿರೀಕ್ಷಿಸುತ್ತೇನೆ. ಈ ವಿಷಯವನ್ನು ಸಂಬೋಧಿಸಿದಕ್ಕಾಗಿ ನಿಮಗೆ ಉಪಕಾರ.
ಎಲ್. ಬಿ., ಅಮೆರಿಕ
ಇವುಗಳಂತಹ ಲೇಖನಗಳು, ಒಂದು ನರ್ಸರಿ ಶಾಲೆಯಲ್ಲಿನ ಶಿಕ್ಷಕಿಯಾಗಿ ನನ್ನ ಕೆಲಸವನ್ನು ಉತ್ತಮವಾಗಿ ಪೂರೈಸಲು ನನಗೆ ಸಹಾಯಮಾಡುತ್ತವೆ. ನಮ್ಮನ್ನು ಸದ್ಯೋಚಿತರಾಗಿಟ್ಟಿರುವುದಕ್ಕಾಗಿ ಮತ್ತು ನಾವು ಉತ್ತಮಗೊಳ್ಳುವಂತೆ ಸಹಾಯಮಾಡಿರುವುದಕ್ಕಾಗಿ ನಿಮಗೆ ತುಂಬ ತುಂಬ ಉಪಕಾರ.
ಜಿ. ಆರ್., ಮೆಕ್ಸಿಕೊ
ಆ ಲೇಖನಗಳು ನನಗೆ ಒಂದಿಷ್ಟು ನಿರೀಕ್ಷೆಯನ್ನು ಕೊಟ್ಟವು. ನಾನು ಅಪಸಾಮಾನ್ಯವಾಗಿ ಕಾರ್ಯನಡಿಸುವ ಒಂದು ಕುಟುಂಬದಿಂದ ಬಂದಿರುತ್ತೇನೆ ಮತ್ತು ಯೆಹೋವನನ್ನು ಸೇವಿಸಲು ಯೋಗ್ಯಳಾಗಿರುವ ಅನಿಸಿಕೆಯಾಗುವುದು ಮತ್ತು ನನ್ನ ಚಿಕ್ಕ ಮಗಳನ್ನು ಪರಾಮರಿಸುವುದು ನನಗೆ ಅನೇಕವೇಳೆ ಕಷ್ಟಕರವಾಗಿರುವುದನ್ನು ಕಂಡುಕೊಳ್ಳುತ್ತೇನೆ. ಆ ಲೇಖನದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಅನ್ವಯಿಸಿಕೊಳ್ಳಲು ನಾನು ನನ್ನಿಂದ ಸಾಧ್ಯವಿರುವಷ್ಟನ್ನು ಮಾಡುವೆ. ಕಾಳಜಿವಹಿಸಿರುವುದಕ್ಕಾಗಿ ಉಪಕಾರಗಳು.
ಎ. ಎ., ಅಮೆರಿಕ