ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 9/8 ಪು. 8-10
  • ಜಾಹೀರಾತಿನ ಪ್ರಭಾವಶಕ್ತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಾಹೀರಾತಿನ ಪ್ರಭಾವಶಕ್ತಿ
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಗ್ರಾಹಕ ಸಂಸ್ಕೃತಿ
  • ನಿಮ್ಮ ಮೇಲೆ ಅದು ಬೀರುವ ಪ್ರಭಾವ
  • ಜಾಹೀರಾತಿನ ಕಡಲಲ್ಲಿ ಕೊಚ್ಚಿಕೊಂಡು ಹೋಗುವುದು
    ಎಚ್ಚರ!—1998
  • ಮನವೊಪ್ಪಿಸುವ ಕಲೆ
    ಎಚ್ಚರ!—1998
  • ತಂಬಾಕು ಮತ್ತು ದೋಷ ವಿಮರ್ಶನಾಧಿಕಾರ
    ಎಚ್ಚರ!—1990
  • ಆಧ್ಯಾತ್ಮಿಕ ಮೌಲ್ಯಗಳನ್ನು ಬೆನ್ನಟ್ಟುವುದರಿಂದ ಸಿಗುವ ಪ್ರಯೋಜನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಎಚ್ಚರ!—1998
g98 9/8 ಪು. 8-10

ಜಾಹೀರಾತಿನ ಪ್ರಭಾವಶಕ್ತಿ

“ಈಗ ನಮ್ಮ ಪ್ರಾಯೋಜಕರಿಂದ ಕೆಲವು ಮಾತುಗಳು” ಎಂಬ ಮಾತಿನೊಂದಿಗೆ, ಅನೇಕ ವರ್ಷಗಳ ಹಿಂದೆ ಒಂದು ಟಿವಿ ಕಮರ್ಷಿಯಲ್‌ ಬ್ರೇಕನ್ನು ಪರಿಚಯಿಸಲಾಗುತ್ತಿತ್ತು. ತಮ್ಮ ಉತ್ಪಾದನೆಗಳನ್ನು ಜಾಹೀರುಪಡಿಸಲಾಗುವಂತೆ ಹಣಕೊಡುವ ಕಂಪನಿಗಳೇ ಪ್ರಾಯೋಜಕರಾಗಿದ್ದಾರೆ. “ನಮ್ಮ ಪ್ರಾಯೋಜಕರಿಂದ ಕೆಲವು ಮಾತುಗಳು” ಎಂಬುದು ಒಂದು ಸಾಗರವಾಗಿ ಪರಿಣಮಿಸಿರುವಾಗಲೂ, ಪ್ರಾಯೋಜಕರು ಟೆಲಿವಿಷನ್‌, ಪತ್ರಿಕೆಗಳು, ವಾರ್ತಾಪತ್ರಿಕೆಗಳು, ಮತ್ತು ರೇಡಿಯೊದಂತಹ ವಾರ್ತಾ ಮತ್ತು ಮನೋರಂಜನಾ ಮಾಧ್ಯಮಕ್ಕೆ ಹಣಕಾಸಿನ ಬೆಂಬಲವನ್ನು ಈಗಲೂ ನೀಡುತ್ತಾರೆ. ಫಲಸ್ವರೂಪವಾಗಿ, ಮಾಧ್ಯಮದಲ್ಲಿ ಪ್ರದರ್ಶಿಸಲಾಗುವ ಮತ್ತು ಪ್ರದರ್ಶಿಸಲ್ಪಡದ ವಿಷಯಗಳನ್ನು ನಿಯಂತ್ರಿಸಲು ಪ್ರಾಯೋಜಕರು ಪ್ರಯತ್ನಿಸುತ್ತಾರೆ.

ದೃಷ್ಟಾಂತಕ್ಕೆ: 1993ರಲ್ಲಿ, ಬಹುಬೆಲೆಯ ಒಂದು ಜರ್ಮನ್‌ ಕಾರನ್ನು ತಯಾರಿಸಿದ ಒಂದು ಕಂಪನಿಯು, 30 ಪತ್ರಿಕೆಗಳಿಗೆ ಹೀಗೆ ಆದೇಶನೀಡುತ್ತಾ ಬರೆಯಿತು. ಅವರ ಕಾರನ್ನು ಜಾಹೀರುಪಡಿಸುವ ಜಾಹೀರಾತುಗಳು “ಯೋಗ್ಯವಾದ ಸಂಪಾದಕೀಯ ಪರಿಸರದಲ್ಲಿ ಮಾತ್ರ” ಪ್ರಸ್ತುತಗೊಳಿಸಲ್ಪಡತಕ್ಕದ್ದು. ಆ ಕಾರಿನ ಜಾಹೀರಾತುಗಳುಳ್ಳ ಪತ್ರಿಕೆಯ ಸಂಚಿಕೆಗಳು, ಆ ಕಾರನ್ನು, ಜರ್ಮನ್‌ ಉತ್ಪಾದನೆಗಳನ್ನು, ಇಲ್ಲವೆ ಸ್ವತಃ ಜರ್ಮನ್‌ ದೇಶವನ್ನು ಟೀಕಿಸುವ ಯಾವುದೇ ವಿಷಯವನ್ನು ಪ್ರದರ್ಶಿಸಬಾರದೆಂದು ಆ ಪತ್ರವು ವಿವರಿಸಿತು. ಪತ್ರಿಕಾ ಜಾಹೀರಾತುಗಳಿಗಾಗಿ 150 ಲಕ್ಷ ಡಾಲರುಗಳನ್ನು ವ್ಯಯಿಸುವ ಈ ಕಂಪನಿಯು, “ಯೋಗ್ಯವಾದ ಸಂಪಾದಕೀಯ ಪರಿಸರವನ್ನು” ನಿರೀಕ್ಷಿಸುವುದು ಆಶ್ಚರ್ಯಕರವಾದ ಸಂಗತಿಯಾಗಿರುವುದಿಲ್ಲ.

ವಧುವಿನ ಹೊಸ ಉಡುಪುಗಳ ಕುರಿತು ಜಾಹೀರಾತು ನೀಡುವ ಪತ್ರಿಕೆಗಳು, ವಧುವಿನ ಸೆಕೆಂಡ್‌ಹ್ಯಾಂಡ್‌ (ಬಳಸಲ್ಪಟ್ಟ) ಉಡುಪುಗಳಿಗಾಗಿ ಜಾಹೀರಾತುಗಳನ್ನು ಸ್ವೀಕರಿಸುವುದಿಲ್ಲವೆಂಬುದು ಆಶ್ಚರ್ಯಕರವಲ್ಲ. ಅದೇ ರೀತಿಯಲ್ಲಿ, ಸ್ಥಿರಾಸ್ತಿಯ ದಳ್ಳಾಳಿಯ ಕುರಿತು ಜಾಹೀರಾತು ನೀಡುವ ವಾರ್ತಾಪತ್ರಿಕೆಗಳು, ಒಬ್ಬ ದಳ್ಳಾಳಿಯಿಲ್ಲದೆ ಮನೆ ಖರೀದಿಸುವ ವಿಧವನ್ನು ನಿಮಗೆ ತಿಳಿಸುವುದಿಲ್ಲವೆಂಬುದು ಆಶ್ಚರ್ಯಕರವಲ್ಲ. ತದ್ರೀತಿಯಲ್ಲಿ, ಸಿಗರೇಟ್‌ ಅಥವಾ ಲಾಟರಿಗಳನ್ನು ಜಾಹೀರುಪಡಿಸುವ ಮಾಧ್ಯಮಗಳು, ಧೂಮಪಾನ ಇಲ್ಲವೆ ಜೂಜಾಟವನ್ನು ಟೀಕಿಸದಿದ್ದಾಗ, ಅದು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬಾರದು.

ಗ್ರಾಹಕ ಸಂಸ್ಕೃತಿ

ಆದುದರಿಂದ ಜಾಹೀರಾತಿನ ಪ್ರಭಾವಶಕ್ತಿಯು, ಸರಕುಗಳ ಮಾರಾಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಗ್ರಾಹಕನ ಜೀವನ ಶೈಲಿಯನ್ನು, ಅಂದರೆ ಭೌತಿಕ ವಸ್ತುಗಳ ಮೇಲೆ ಕೇಂದ್ರೀಕರಿಸುವ ಒಂದು ಭೌಗೋಲಿಕ ಸಂಸ್ಕೃತಿಯನ್ನು ಪ್ರವರ್ಧಿಸುತ್ತದೆ.

ಅದರಲ್ಲಿ ಯಾವ ತಪ್ಪಾದರೂ ಇದೆಯೊ? ನೀವು ಯಾರನ್ನು ಕೇಳುತ್ತೀರೊ, ಉತ್ತರವು ಅವರ ಮೇಲೆ ಅವಲಂಬಿಸಿರುತ್ತದೆ. ಜನರು ವಸ್ತುಗಳನ್ನು ಖರೀದಿಸಲು ಹಾಗೂ ಅವುಗಳನ್ನು ಪಡೆಯಲು ಇಷ್ಟಪಡುತ್ತಾರೆಂದು, ಮತ್ತು ಜಾಹೀರಾತುಗಳು ಅವರ ಅಭಿರುಚಿಗಳಿಗೆ ಪೂರಕವಾಗಿವೆ ಎಂದು ಜಾಹೀರಾತುಗಾರರು ತರ್ಕಿಸುತ್ತಾರೆ. ಅಲ್ಲದೆ, ಜಾಹೀರಾತುಗಳು, ಕೆಲಸಗಳನ್ನು ಸೃಷ್ಟಿಸುತ್ತವೆ, ಕ್ರೀಡೆಗಳು ಹಾಗೂ ಕರಕುಶಲಗಳನ್ನು ಪ್ರಾಯೋಜಿಸುತ್ತವೆ, ಹೆಚ್ಚಿನ ಖರ್ಚಿಲ್ಲದೆ ಮಾಹಿತಿಯನ್ನು ಒದಗಿಸುತ್ತವೆ, ಸ್ಪರ್ಧೆಯನ್ನು ಉತ್ತೇಜಿಸುತ್ತವೆ, ಉತ್ಪಾದನೆಗಳ ದರ್ಜೆಯನ್ನು ಉತ್ತಮಗೊಳಿಸುತ್ತವೆ, ಬೆಲೆಗಳನ್ನು ಕಡಿಮೆ ಮಟ್ಟದಲ್ಲಿ ಇಡುತ್ತವೆ, ಮತ್ತು ಜನರು ವಸ್ತುಗಳನ್ನು ಖರೀದಿಸುವಾಗ, ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡುವಂತೆ ಶಕ್ತರನ್ನಾಗಿಸುತ್ತವೆ ಎಂದು ಅವರು ಹೇಳುತ್ತಾರೆ.

ಜಾಹೀರಾತುಗಳು ಕೊನೆಯಿಲ್ಲದ ಬಯಕೆಗಳನ್ನು ಮನಸ್ಸಿನಲ್ಲಿ ಸೃಷ್ಟಿಸುತ್ತಾ ಮತ್ತು ಪೋಷಿಸುತ್ತಾ, ಜನರು ತಮ್ಮಲ್ಲಿ ಇರುವಂತಹ ವಸ್ತುಗಳಿಂದ ಅತೃಪ್ತರಾಗುವಂತೆ ಮಾಡುತ್ತವೆಯೆಂದು ಇತರರು ಪ್ರತಿಪಾದಿಸುತ್ತಾರೆ. ಸಂಶೋಧಕ ಆ್ಯಲನ್‌ ಡ್ಯೂರಿಂಗ್‌ ಬರೆಯುವುದು: “ನಮ್ಮ ಯುಗದಂತೆ ಜಾಹೀರಾತುಗಳು, ಕ್ಷಣಿಕ, ಭೋಗಾತ್ಮಕ, ಕಲ್ಪನೆಗಳಿಂದ ತುಂಬಿದ, ಮತ್ತು ಪ್ರಚಲಿತ ಫ್ಯಾಷನ್‌ಗಳಿಂದ ವಿನ್ಯಾಸಿಸಲ್ಪಟ್ಟವುಗಳಾಗಿವೆ. ಅವು ವ್ಯಕ್ತಿಯನ್ನು ಮಹಿಮೆಪಡಿಸುತ್ತವೆ, ವೈಯಕ್ತಿಕ ಅಭಿವೃದ್ಧಿಗೆ ಉಪಭೋಗವೇ ಮಾರ್ಗವೆಂಬ ವಿಚಾರವನ್ನು ಆದರ್ಶಪ್ರಾಯವಾಗಿ ಮಾಡುತ್ತವೆ, ಮತ್ತು ಒಬ್ಬನ ಸುಸ್ಥಿತಿಯನ್ನು ರೂಪಿಸುವ ಶಕ್ತಿಯೇ ತಾಂತ್ರಿಕ ಪ್ರಗತಿಯಾಗಿದೆ ಎಂಬುದನ್ನು ದೃಢೀಕರಿಸುತ್ತವೆ.”

ನಿಮ್ಮ ಮೇಲೆ ಅದು ಬೀರುವ ಪ್ರಭಾವ

ನಮ್ಮ ವ್ಯಕ್ತಿತ್ವ ಮತ್ತು ನಮ್ಮ ಅಪೇಕ್ಷೆಗಳನ್ನು ರೂಪಿಸಲು, ಜಾಹೀರಾತುಗಳು ಸಹಾಯ ಮಾಡುತ್ತವೊ? ಬಹುಶಃ ಮಾಡುತ್ತವೆ. ಆದರೆ, ಆ ಪ್ರಭಾವವು ಹೆಚ್ಚೊ ಕಡಿಮೆಯೊ ಎಂಬುದು ಇತರ ಪ್ರಭಾವಗಳ ಮೇಲೆ ಅವಲಂಬಿಸುತ್ತದೆ.

ನಾವು ಬೈಬಲ್‌ ತತ್ವಗಳು ಮತ್ತು ಮೌಲ್ಯಗಳಿಂದ ಮಾರ್ಗದರ್ಶಿಸಲ್ಪಡುವುದಾದರೆ, ಭೌತಿಕ ವಸ್ತುಗಳನ್ನು ಪಡೆದುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲವೆಂಬುದನ್ನು ನಾವು ಗ್ರಹಿಸುವೆವು. ಎಷ್ಟೆಂದರೂ, ದೇವರು ಅಬ್ರಹಾಮ, ಯೋಬ, ಸೊಲೊಮೋನ, ಮತ್ತು ಇತರರಿಗೆ ಹೇರಳವಾದ ಸಂಪತ್ತು ನೀಡಿ, ಆಶೀರ್ವದಿಸಿದನು.

ಮತ್ತೊಂದು ಕಡೆಯಲ್ಲಿ, ನಾವು ಶಾಸ್ತ್ರೀಯ ತತ್ವಗಳನ್ನು ಅನುಸರಿಸುವುದಾದರೆ, ಭೌತಿಕ ವಸ್ತುಗಳಿಗಾಗಿರುವ ಅಂತ್ಯರಹಿತ ಅನ್ವೇಷಣೆಯಲ್ಲಿ, ಅಭಿವೃದ್ಧಿ ಮತ್ತು ಸಂತೋಷವನ್ನು ಅರಸುವವರಲ್ಲಿ ಕಂಡುಬರುವ ಅತೃಪ್ತಿಯಿಂದ ನಾವು ದೂರವಿರುವೆವು. “ಬಳಲಿಹೋಗುವ ವರೆಗೂ ಖರೀದಿ ಮಾಡಿರಿ” ಎಂಬುದು ಬೈಬಲಿನ ಸಂದೇಶವಾಗಿರುವುದಿಲ್ಲ. ಬದಲಿಗೆ ಅದು ನಮಗೆ ಹೇಳುವುದು:

ದೇವರಲ್ಲಿ ಭರವಸೆಯಿಡಿರಿ. “ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂತಲೂ” ಆಜ್ಞಾಪಿಸು.—1 ತಿಮೊಥೆಯ 6:17.

ಸಂತೃಪ್ತರಾಗಿರಿ. “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.”—1 ತಿಮೊಥೆಯ 6:7, 8.

ಮಿತಭಾವದವರಾಗಿರಿ. “ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.”—1 ತಿಮೊಥೆಯ 2:9, 10.

ದೈವಿಕ ವಿವೇಕವು ಧನಕ್ಕಿಂತ ಶ್ರೇಷ್ಠವಾದುದು ಎಂದು ತಿಳಿದುಕೊಳ್ಳಿರಿ. “ಜ್ಞಾನವನ್ನು ಪಡೆಯುವವನು ಧನ್ಯನು, ವಿವೇಕವನ್ನು ಸಂಪಾದಿಸುವವನು ಭಾಗ್ಯವಂತನು. ಅದರ ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ. ಅದರ ಬೆಲೆಯು ಹವಳಕ್ಕಿಂತಲೂ ಹೆಚ್ಚು, ನಿನ್ನ ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ, ಜ್ಞಾನವೆಂಬಾಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ, ಎಡಗೈಯಲ್ಲಿ ಧನವೂ ಘನತೆಯೂ ಉಂಟು. ಆಕೆಯ ದಾರಿಗಳು ಸುಖಕರವಾಗಿವೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೇ. ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.”—ಜ್ಞಾನೋಕ್ತಿ 3:13-18.

ದಾನಕೊಡುವ ಅಭ್ಯಾಸವನ್ನು ಮಾಡಿಕೊಳ್ಳಿರಿ. “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.”—ಅ. ಕೃತ್ಯಗಳು 20:35.

ಈ ಲೇಖನಮಾಲೆಯು ತಾನೇ ಒಂದು ರೀತಿಯ ಜಾಹೀರಾತು ಆಗಿದ್ದು, ಆತ್ಮಿಕ ಮೌಲ್ಯಗಳು ಭೌತಿಕ ಮೌಲ್ಯಗಳ ನಿಮಿತ್ತ ಬದಿಗೆ ತಳ್ಳಲ್ಪಡಬಾರದೆಂಬ ವಿಚಾರವನ್ನು “ಪ್ರವರ್ಧಿಸುವ” ಜಾಹೀರಾತೆಂದು ಒಬ್ಬರು ವಾದಿಸಬಹುದು. ಆ ತೀರ್ಮಾನವು ಸರಿಯೆಂದು ನೀವು ನಿಸ್ಸಂದೇಹವಾಗಿಯೂ ಒಪ್ಪಿಕೊಳ್ಳುವಿರಿ.

[ಪುಟ 9 ರಲ್ಲಿರುವ ಚೌಕ]

ದೇವರ ರಾಜ್ಯವನ್ನು ಜಾಹೀರುಪಡಿಸುವುದು

ಮನವೊಪ್ಪಿಸುವಂತಹ ಸಂದೇಶದೊಂದಿಗೆ ಜನರ ಬಳಿಗೆ ಹೋಗುವ ಅತ್ಯುತ್ತಮ ವಿಧಗಳಲ್ಲಿ ಒಂದು ಯಾವುದಾಗಿದೆ? ಜಾಹೀರಾತು: ತತ್ವಗಳು ಮತ್ತು ಆಚರಣೆ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಒಂದು ಆದರ್ಶಪ್ರಾಯ ಲೋಕದಲ್ಲಿ, ಪ್ರತಿಯೊಬ್ಬ ಉತ್ಪಾದಕನು, ಮಾರಾಟಕ್ಕಿರುವ ಉತ್ಪಾದನೆ ಇಲ್ಲವೆ ಸೇವೆಯ ಕುರಿತು ಪ್ರತಿಯೊಬ್ಬ ಗ್ರಾಹಕನೊಂದಿಗೆ ಮುಖಾಮುಖಿಯಾಗಿ ಮಾತಾಡಲು ಶಕ್ತನಾಗಿರುವನು.” ಸತ್ಯ ಕ್ರೈಸ್ತರು ಸ್ವಯಂಸೇವಕರೋಪಾದಿ, ಈ ವಿಧದಲ್ಲಿ ದೇವರ ರಾಜ್ಯವನ್ನು ಸುಮಾರು 2,000 ವರ್ಷಗಳಿಂದ ಘೋಷಿಸುತ್ತಿದ್ದಾರೆ. (ಮತ್ತಾಯ 24:14; ಅ. ಕೃತ್ಯಗಳು 20:20) ಜನರನ್ನು ಸಂಪರ್ಕಿಸುವ ಈ ವಿಧಾನವನ್ನು ಹೆಚ್ಚಿನ ವ್ಯಾಪಾರಗಳು ಏಕೆ ಬಳಸುವುದಿಲ್ಲ? ಆ ಪುಸ್ತಕವು ವಿವರಿಸುವುದು: “ಅದು ತುಂಬ ದುಬಾರಿಯಾಗಿದೆ. ಸೇಲ್ಸ್‌ ಜನರು ಮಾಡುವ ಪ್ರತಿಯೊಂದು ಭೇಟಿಯ ಬೆಲೆ 150 ಡಾಲರುಗಳಿಗಿಂತಲೂ ಹೆಚ್ಚಾಗಿರಸಾಧ್ಯವಿದೆ.” ಕ್ರೈಸ್ತರಾದರೊ ದೇವರ ರಾಜ್ಯವನ್ನು ಸ್ವಯಂಸೇವಕರೋಪಾದಿ “ಜಾಹೀರುಪಡಿಸುತ್ತಾರೆ.” ಏಕೆಂದರೆ ಅದು ಅವರ ಆರಾಧನೆಯ ಒಂದು ಭಾಗವಾಗಿದೆ.

[ಪುಟ 8 ರಲ್ಲಿರುವ ಚಿತ್ರ]

“ಬಳಲಿಹೋಗುವ ವರೆಗೂ ಖರೀದಿ ಮಾಡಿರಿ” ಎಂಬುದು ಬೈಬಲಿನ ಸಂದೇಶವಾಗಿರುವುದಿಲ್ಲ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ