ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g99 10/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1999
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1999
  • ನಮ್ಮ ವಾಚಕರಿಂದ
    ಎಚ್ಚರ!—1999
  • ನಮ್ಮ ವಾಚಕರಿಂದ
    ಎಚ್ಚರ!—1998
  • ನಮ್ಮ ವಾಚಕರಿಂದ
    ಎಚ್ಚರ!—1999
ಇನ್ನಷ್ಟು
ಎಚ್ಚರ!—1999
g99 10/8 ಪು. 30

ನಮ್ಮ ವಾಚಕರಿಂದ

ಸುಟ್ಟಗಾಯಗಳಾಗುವುದನ್ನು ತಪ್ಪಿಸುವುದು “ಜಗತ್ತನ್ನು ಗಮನಿಸುವುದು” ಎಂಬ ಲೇಖನದಲ್ಲಿದ್ದ “ಅಡಿಗೆಮಾಡುತ್ತಿರುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು” (ಜನವರಿ 8, 1999) ಎಂಬ ತುಣುಕು ಮಾಹಿತಿಯನ್ನು ಓದಿ ನಾನು ಚಿಂತಿತಳಾದೆ. ಸ್ಟೌವಿನ ಮುಂದಿನ ಬರ್ನರ್‌ಗಳಲ್ಲಿ ಅಡಿಗೆಮಾಡುವುದರ ಕುರಿತು ಸಲಹೆಗಳನ್ನು ನೀಡಿದ್ದ ಒಂದು ವಾರ್ತಾಪತ್ರಕ್ಕೆ ಅದು ಸೂಚಿಸಿತ್ತು. ಆದರೂ, ಹೆತ್ತವರು ಮಕ್ಕಳಿಗೆ ಎಟುಕಲಾರದ ಹಿಂದಿನ ಬರ್ನರ್‌ಗಳನ್ನೇ ಯಾವಾಗಲೂ ಉಪಯೋಗಿಸಬೇಕೆಂದು ನಾನು ಕೇಳಿಸಿಕೊಂಡಿದ್ದ ಸಲಹೆಗೆ ಇದು ತದ್ವಿರುದ್ಧವಾಗಿದೆ.

ಎಮ್‌. ಬಿ., ಇಂಗ್ಲೆಡ್‌

ನಾವು ಈ ಸುರಕ್ಷತೆಯ ಮರುಜ್ಞಾಪನವನ್ನು ಪ್ರಶಂಸಿಸುತ್ತೇವೆ. ನಾವು ವರದಿಸಿದ ಬುದ್ಧಿವಾದವು ಮೂಲತಃ ವೃದ್ಧರಿಗಾಗಿತ್ತು. ಅವರಲ್ಲಿ ಕೆಲವರು ಪಾತ್ರೆಗಳನ್ನು ತೆಗೆಯಲು ಕೈ ಚಾಚುತ್ತಿದ್ದಾಗ ಹಿಂದಿನ ಬರ್ನರ್‌ನಿಂದ ಅವರ ಉದ್ದವಾದ ತೋಳಿರುವ ಉಡುಪಿಗೆ ಬೆಂಕಿಹೊತ್ತಿಕೊಂಡಿದೆ. ಸ್ವಾಭಾವಿಕವಾಗಿಯೇ, ಚಿಕ್ಕ ಮಕ್ಕಳಿರುವ ತಾಯಂದಿರು ಪಾತ್ರೆಗಳನ್ನು ಮಕ್ಕಳ ಕೈಗೆ ಸಿಗದಂಥ ಸ್ಥಳದಲ್ಲಿ ಇಡುತ್ತಾರೆ.—ಸಂಪಾ.

ವಿಶ್ವವಿಪ್ಲವವು ನಾಶಗೊಳಿಸುವುದೋ? ನಾನು ಹತ್ತು ವರ್ಷದವನು. “ಬೈಬಲಿನ ದೃಷ್ಟಿಕೋನ: ಈ ಜಗತ್ತನ್ನು ವಿಶ್ವವಿಪ್ಲವವು ನಾಶಗೊಳಿಸುವುದೋ?” (ಜನವರಿ 8, 1999) ಎಂಬ ಲೇಖನವನ್ನು ಓದಲು ತುಂಬ ಸಂತೋಷಿಸಿದೆ. ಯಾವುದೇ ವಿಶ್ವವಿಪ್ಲವವು ನಮ್ಮ ಗ್ರಹವನ್ನು ವಿನಾಶಗೊಳಿಸದು, ಏಕೆಂದರೆ ಯೆಹೋವನು ನಾವು ಪ್ರಮೋದವನ ಭೂಮಿಯಲ್ಲಿ ಜೀವಿಸುವಂತೆ ಬಯಸುತ್ತಾನೆ ಎಂಬುದನ್ನು ತಿಳಿದುಕೊಳ್ಳುವಂತೆ ಈ ಲೇಖನವು ಸಹಾಯಮಾಡಿತು.

ಜೆ. ಪಿ., ಅಮೆರಿಕ

ಧೂಮಪಾನವನ್ನು ಬಿಟ್ಟುಬಿಡಿ! “ನಾವು ಬಿಟ್ಟುಬಿಟ್ಟೆವು—ನೀವು ಸಹ ಬಿಟ್ಟುಬಿಡಸಾಧ್ಯವಿದೆ!” (ಜನವರಿ 8, 1999) ಇದು ನನಗೆ ವಿಶೇಷ ಲೇಖನವಾಗಿತ್ತು. ಇತ್ತೀಚೆಗೆ ತಾನೇ ನಾನು ಒಬ್ಬ ಧೂಮಪಾನಿಯೊಂದಿಗೆ ಬೈಬಲ್‌ ಅಭ್ಯಾಸವನ್ನು ಮುಗಿಸಿದ್ದೇನೆ. ಆಕೆ ನಮ್ಮ ಎಲ್ಲಾ ಕೂಟಗಳಿಗೆ ಬರುತ್ತಾಳೆ. ಆದರೆ ಅವಳ ಚಟವು, ಆಕೆಯ ಆತ್ಮಿಕ ಪ್ರಗತಿಯ ಮಾರ್ಗಕ್ಕೆ ಅಡಚಣೆಯನ್ನು ಉಂಟುಮಾಡಿದೆ. ಧೂಮಪಾನವನ್ನು ಬಿಟ್ಟುಬಿಡಲು ಸಹಾಯಮಾಡುವ ಇನ್ನಿತರ ಲೇಖನಗಳನ್ನು ನಾನು ಅವಳಿಗೆ ನೀಡಿದ್ದೇನೆ. ಆದರೆ, ಈ ಲೇಖನವು ಅವಳಿಗೆ ಅಡಚಣೆಯಾಗಿರುವ ಚಟವನ್ನು ಜಯಿಸುವಂತೆ ಅಂತಿಮವಾಗಿ ಸಹಾಯಮಾಡಲೆಂದು ನಾನು ಪ್ರಾರ್ಥಿಸುತ್ತೇನೆ.

ಈ. ಕೆ., ಅಮೆರಿಕ

ಹೆತ್ತವರನ್ನು ಕಳೆದುಕೊಂಡಿರುವುದು “ಯುವ ಜನರು ಪ್ರಶ್ನಿಸುವುದು . . . ನನ್ನ ಹೆತ್ತವರಿಲ್ಲದೆ ನಾನು ಹೇಗೆ ಜೀವಿಸಬಲ್ಲೆ?” (ಜನವರಿ 8, 1999) ಎಂಬ ಅತ್ಯುತ್ತಮ ಲೇಖನವನ್ನು ಬರೆದುದಕ್ಕಾಗಿ ನಿಮಗೆ ಉಪಕಾರಗಳು. ನಮ್ಮಂಥ ಯುವಜನರು ಹೆತ್ತವರನ್ನು ಕಳೆದುಕೊಳ್ಳುವುದಾದರೆ ನಮ್ಮನ್ನು ಕಾಪಾಡುವ ಸಾಮರ್ಥ್ಯವು ಯೆಹೋವನಿಗಿದೆ ಎಂಬ ಪುನರಾಶ್ವಾಸನೆಯನ್ನು ನನ್ನಲ್ಲಿ ಉಂಟುಮಾಡಲು ಈ ಲೇಖನವು ಸಹಾಯಮಾಡಿತು. ನಾನು ನನ್ನ ಹೆತ್ತವರನ್ನು ಕಳೆದುಕೊಂಡಿಲ್ಲವಾದರೂ ಅವರಿಗೇನಾದರೂ ಸಂಭವಿಸಿದರೆ ನನ್ನ ಗತಿ ಏನಾಗುವುದೋ ಎಂದು ನಾನು ಅನೇಕವೇಳೆ ಕುತೂಹಲಪಡುತ್ತೇನೆ. ಓರಾಸ್ಯೋನನ ಉತ್ತಮ ಉದಾಹರಣೆಯು ನನ್ನನ್ನು ಬಹಳವಾಗಿ ಹುರಿದುಂಬಿಸಿತು.

ಎಮ್‌. ಜೆ., ಟ್ರಿನಿಡಾಡ್‌

ಏಳು ಮಂದಿ ಪುತ್ರರನ್ನು ಬೆಳೆಸುವುದು “ಏಳು ಮಂದಿ ಪುತ್ರರನ್ನು ಬೆಳೆಸುವ ಪಂಥಾಹ್ವಾನಗಳು ಹಾಗೂ ಆಶೀರ್ವಾದಗಳು” (ಫೆಬ್ರವರಿ 8, 1999) ಎಂಬ ಲೇಖನಕ್ಕಾಗಿ ಉಪಕಾರವನ್ನು ಹೇಳಲು ಈ ಸಂದರ್ಭವನ್ನು ಉಪಯೋಗಿಸದಿರಲು ನನಗೆ ಸಾಧ್ಯವಾಗಲಿಲ್ಲ. ವಿಶೇಷವಾಗಿ ಒಬ್ಬಳು ವಿಧವೆಯಾಗಿರುವಾಗ ಹದಿವಯಸ್ಸಿನ ಮಕ್ಕಳನ್ನು ಬೆಳೆಸುವುದು ನಿಜವಾಗಿಯೂ ಒಂದು ಪಂಥಾಹ್ವಾನವಾಗಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ನನ್ನ ಮಕ್ಕಳ ಜೀವನದಲ್ಲೂ ಈ ಹಂತವನ್ನು ನಾನು ಯಶಸ್ವಿಕರವಾಗಿಸುವುದು ಖಂಡಿತ ಸಾಧ್ಯವಿದೆ ಎಂಬುದನ್ನು ಈ ಲೇಖನ ಬರುವವರೆಗೂ ನಾನು ಗ್ರಹಿಸಿರಲಿಲ್ಲ.

ಎ. ಆರ್‌., ಅಮೆರಿಕ

ನಾನು ಸಹ ಏಳು ಮಕ್ಕಳಿರುವ ಕುಟುಂಬದಿಂದಲೇ ಬಂದವಳು. ಇತ್ತೀಚಿನ ವರೆಗೂ ನಾವೆಲ್ಲರೂ ಯೆಹೋವನನ್ನು ಐಕ್ಯವಾಗಿ ಆರಾಧಿಸುತ್ತಿದ್ದೆವು. ಆದರೆ ಆರು ತಿಂಗಳುಗಳ ಹಿಂದೆ, ನನ್ನ ತಂಗಿಯರಲ್ಲಿ ಒಬ್ಬಳು ಬಹಿಷ್ಕರಿಸಲ್ಪಟ್ಟಳು. ಈ ಲೇಖನವು ನನ್ನ ಕಣ್ಣಿಗೆ ಬಿದ್ದಾಗ, ಯಶಸ್ವಿಕರವಾದ ಕುಟುಂಬದ ಕಥೆಯನ್ನು ಓದಲು ಬಯಸಲಿಲ್ಲ. ಅಸೂಯೆಪಡದೆ ಈ ಲೇಖನದಿಂದ ನಾನು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿದೆ. ನಮ್ಮ ಕುಟುಂಬದಂಹದ್ದೇ ಅನುಭವಗಳನ್ನುಳ್ಳ ಮತ್ತೊಂದು ಕುಟುಂಬವು ಇದೆ ಮತ್ತು ನಮ್ಮ ಸ್ಥಿತಿಯ ಕುರಿತು ಯೆಹೋವನು ಕಾಳಜಿವಹಿಸುವವನಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ನಾನು ಹೆಚ್ಚು ಪ್ರೋತ್ಸಾಹಿಸಲ್ಪಟ್ಟೆ. ತಮ್ಮ ಕಥೆಯನ್ನು ಹಂಚಿಕೊಂಡದ್ದಕ್ಕಾಗಿ ಡಿಕ್‌ಮನ್‌ ಅವರಿಗೆ ಉಪಕಾರವನ್ನು ಸಲ್ಲಿಸಲು ನಾನು ಬಯಸುತ್ತೇನೆ. ಈ ಲೇಖನದಿಂದ ನನ್ನ ಹೆತ್ತವರು ಮತ್ತು ನನ್ನ ತಮ್ಮತಂಗಿಯರು ಬಹಳಷ್ಟು ಉತ್ತೇಜನವನ್ನು ಮತ್ತು ಸಾಂತ್ವನವನ್ನು ಪಡೆದುಕೊಂಡಿರುವರು ಎಂಬ ಭರವಸೆ ನನಗಿದೆ.

ಡಬ್ಲ್ಯೂ. ವೈ., ಜಪಾನ್‌

ಸಿಂಹಗಳು “ಸಿಂಹ—ಆಫ್ರಿಕಾದ ರಾಜಗಾಂಭೀರ್ಯವುಳ್ಳ ಕೇಸರಯುತ ಮಾರ್ಜಾಲ” (ಫೆಬ್ರವರಿ 8, 1999) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರಗಳು. ಅನೇಕ ವರ್ಷಗಳಿಂದ ಸಿಂಹಗಳನ್ನು ನಾನು ಇಷ್ಟಪಡುತ್ತಿದ್ದರಿಂದ ಈ ಲೇಖನವು ನನಗೆ ತುಂಬ ಪ್ರಾಮುಖ್ಯವಾಗಿತ್ತು. ಅವುಗಳ ಸೌಂದರ್ಯ ಮತ್ತು ಕೆಚ್ಚೆದೆಗಾಗಿ ಅವುಗಳನ್ನು ನಾನು ತುಂಬ ಮೆಚ್ಚುತ್ತೇನೆ. ಒಂದು ದಿನ ನಾನು “ಪ್ರಾಯದ ಸಿಂಹ”ದೊಂದಿಗೆ ಇರಲು ಬಯಸುತ್ತೇನೆ.—ಯೆಶಾಯ 11:6-9.

ಈ. ಎ. ಎಸ್‌., ಬ್ರೆಸಿಲ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ