ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g99 8/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1999
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1999
  • ಏಕಾಂತತೆಯ ಮಹತ್ವ
    ಎಚ್ಚರ!—1998
  • ನಮ್ಮ ವಾಚಕರಿಂದ
    ಎಚ್ಚರ!—1999
  • ನಮ್ಮ ವಾಚಕರಿಂದ
    ಎಚ್ಚರ!—1999
ಇನ್ನಷ್ಟು
ಎಚ್ಚರ!—1999
g99 8/8 ಪು. 30

ನಮ್ಮ ವಾಚಕರಿಂದ

ಏಕಾಂತತೆ “ಬೈಬಲಿನ ದೃಷ್ಟಿಕೋನ: ಏಕಾಂತತೆಯ ಮಹತ್ವ” (ನವೆಂಬರ್‌ 8, 1998) ಎಂಬ ಲೇಖನವು ವೈಯಕ್ತಿಕವಾಗಿ ನನಗೇ ಅನ್ವಯಿಸುವಂತಿತ್ತು. ನಾನು ಆತ್ಮಿಕವಾಗಿಯೂ ಭಾವನಾತ್ಮಕವಾಗಿಯೂ ಆರೋಗ್ಯದಿಂದಿರಲು ಏಕಾಂತತೆಯು ನನಗೆ ಬಹಳ ಅಗತ್ಯವಿದೆ. ಹೀಗಿದ್ದರೂ, “ಏಕಾಂತತೆಯು, ಕೇವಲ ಭೇಟಿ ನೀಡಿ ಬರಬಹುದಾಗಿರುವಂತಹ ಸ್ಥಳವಾಗಿದೆಯಾದರೂ, ಅಲ್ಲಿಯೇ ಉಳಿದುಕೊಳ್ಳಲು ಅಪಾಯಕರವಾದ ಸ್ಥಳವಾಗಿದೆ” ಎಂಬ ವಿಷಯವನ್ನು ನಾನು ಜ್ಞಾಪಕದಲ್ಲಿಟ್ಟುಕೊಳ್ಳುತ್ತೇನೆ.

ಎಲ್‌. ಜಿ., ಅಮೆರಿಕ

ಒಬ್ಬರನ್ನೊಬ್ಬರು ಪ್ರೀತಿಸುವುದು “ಜನರೆಲ್ಲರೂ ಎಂದಾದರೂ ಒಬ್ಬರನ್ನೊಬ್ಬರು ಪ್ರೀತಿಸುವರೊ?” ಎಂಬುದು (ಜನವರಿ 8, 1999) ನಿಜವಾಗಿಯೂ ಒಂದು ಅತ್ಯುತ್ತಮ ಲೇಖನಮಾಲೆ! ಕೆಲವೊಮ್ಮೆ ಅಸಮಾಧಾನ ಮತ್ತು ದ್ವೇಷದ ಜ್ವಾಲೆಯು ಹೊತ್ತಿ ಉರಿಯುವಂತೆ ಮಾಡುವ ಬಲವಾದ ಪ್ರಚೋದನೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಅದು ನನಗೆ ಸಹಾಯಮಾಡಿದೆ. ತುಂಬ ಉಪಕಾರಗಳು! ನಿಮ್ಮ ಪತ್ರಿಕೆಗಳ ಮೂಲಕ ನನಗೆ ದೊರಕುತ್ತಿರುವ ಪ್ರೋತ್ಸಾಹನೆಯು ಯೆಹೋವ ದೇವರ ಒಬ್ಬ ಸೇವಕನಾಗಲು ಸಹಾಯಮಾಡಬಹುದೆಂದು ನಾನು ನಂಬುತ್ತೇನೆ.

ಜಿ. ಸಿ., ಇಟಲಿ

ಸತ್ಯವನ್ನು ಒಬ್ಬನು ತನ್ನದಾಗಿ ಮಾಡಿಕೊಳ್ಳುವುದು ನಾನು 12 ವರ್ಷದವನು, “ಯುವಜನರು ಪ್ರಶ್ನಿಸುವುದು . . . ನಾನು ಸತ್ಯವನ್ನು ಹೇಗೆ ನನ್ನದಾಗಿ ಮಾಡಿಕೊಳ್ಳಬಲ್ಲೆ?” (ನವೆಂಬರ್‌ 8, 1998) ಎಂಬ ಲೇಖನವನ್ನು ಓದಲು ಸಂತೋಷಿಸಿದೆ. ಈಗ ಶಾಲೆಯು ಪುನಃ ಪ್ರಾರಂಭವಾಗಿರುವುದರಿಂದ, ಕ್ರೈಸ್ತ ಕೂಟಗಳಿಗೆ ತಯಾರಿಮಾಡುವುದು ಸ್ಪಲ್ಪ ಕಷ್ಟವಾಗಿದೆ. ಆದರೆ ನಾನು ಸಮಯವನ್ನು ಖರೀದಿಸಬೇಕು. ಯೆಹೋವನಿಗಾಗಿ ಮಮತೆಯನ್ನು ಬೆಳೆಸಿಕೊಳ್ಳುವಂತೆ ಮತ್ತು ಸತ್ಯದಲ್ಲಿ ಆಳವಾಗಿ ಬೇರೂರುವಂತೆ ಅನೇಕ ಯುವಜನರಿಗೆ ಈ ಲೇಖನವು ಸಹಾಯಮಾಡಲಿದೆಯೆಂದು ನಾನು ನೆನಸುತ್ತೇನೆ.

ಸಿ. ಎಸ್‌., ಪೋರ್ಚುಗಲ್‌

ಸತ್ಯದ ಕುರಿತು, ಒಂದು ವರ್ಷದ ಹಿಂದೆ ಇದೇ ಪ್ರಶ್ನೆಗಳನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ನಾನು ನಿಜವಾಗಿಯೂ ಸತ್ಯವನ್ನು ಪ್ರೀತಿಸಿದೆನೋ ಅಥವಾ ನನ್ನ ಕುಟುಂಬದಿಂದಾಗಿ ಪ್ರೀತಿಸಿದೆನೋ ಎಂಬುದು ನನಗೆ ನಿಶ್ಚಯವಾಗಿರಲಿಲ್ಲ. ಅನಂತರ ನೀವು ಪ್ರೋತ್ಸಾಹಿಸಿದಂತೆಯೇ ನಾನು ಬೈಬಲ್‌ ಸಂಶೋಧನೆಯನ್ನು ಮಾಡುವ ಮೂಲಕ ಅದನ್ನು ರುಜುಪಡಿಸಿಕೊಂಡೆ. ಈಗ ಸತ್ಯವು ನನ್ನದಾಗಿದೆಯೆಂದು ಹೇಳಲು ನಾನು ನಿಜವಾಗಿಯೂ ಸಂತೋಷಿಸುತ್ತೇನೆ. ನಾನು ಒಬ್ಬ ಪೂರ್ಣಸಮಯದ ಸೌವಾರ್ತಿಕಳಾಗುವ ಸಮಯಕ್ಕಾಗಿ ಕಾಯುತ್ತಿದ್ದೇನೆ!

ಎಚ್‌. ಎನ್‌., ಅಮೆರಿಕ

ಕ್ಯಾನ್ಸರಿನ ಯುವ ಬಲಿ ನಾನು 18 ವರ್ಷ ವಯಸ್ಸಿನವಳು. “ಅವನು ಬಿಟ್ಟುಕೊಡಲಿಲ್ಲ” (ನವೆಂಬರ್‌ 8, 1998) ಎಂಬ ಲೇಖನದಲ್ಲಿದ್ದ ಮ್ಯಾತ್‌ ಟಪೀಯೊನ ಅನುಭವಕ್ಕಾಗಿ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಟಪೀಯೊನ ನಂಬಿಕೆ, ಮತ್ತು ಆತ್ಮಿಕ ವಿಷಯಗಳಿಗಾಗಿ ಅವನಲ್ಲಿದ್ದ ಗಣ್ಯತೆ ಮತ್ತು ತುರ್ತುಪ್ರಜ್ಞೆಯಿಂದ ನಾನು ಪ್ರೇರಿಸಲ್ಪಟ್ಟೆ. ಮ್ಯಾತ್‌ನ್ನು ಪ್ರಮೋದವನದಲ್ಲಿ ವೈಯಕ್ತಿಕವಾಗಿ ಸಂಧಿಸಿ ಉಪಕಾರವನ್ನು ತಿಳಿಸುವೆನೆಂದು ನಂಬುತ್ತೇನೆ.

ಇ. ಜಿ. ಜಿ., ಸ್ಪೆಯ್ನ್‌

ನಮ್ಮ ಕುಟುಂಬದ ಪರವಾಗಿ, ಈ ಲೇಖನಕ್ಕಾಗಿ ಉಪಕಾರಗಳು. ನಮಗೆ ಪ್ರಾಯದ ಮಕ್ಕಳಿರುವುದರಿಂದ, ಅವರೊಂದಿಗೆ ಮ್ಯಾತ್‌ ಟಪೀಯೊನ ನಂಬಿಕೆಯ ಉದಾಹರಣೆಯನ್ನು ಪರಿಗಣಿಸುವುದನ್ನು ನಾವು ಹೆಚ್ಚು ಪ್ರಯೋಜನಕಾರಿಯಾಗಿ ಕಂಡುಕೊಂಡೆವು. ವೈಯಕ್ತಿಕವಾಗಿ ಮತ್ತು ಕುಟುಂಬವಾಗಿ ನಮ್ಮ ಆದ್ಯತೆಗಳನ್ನು ವಿಶ್ಲೇಷಿಸಿ ನೋಡುವ ಸಂದರ್ಭವನ್ನು ಇದು ನಮಗೆ ಒದಗಿಸಿತು.

ಎಮ್‌. ಎಫ್‌. ಎನ್‌. ಜಿ., ಬ್ರೆಸಿಲ್‌

ಈ ಲೇಖನವು ನಮ್ಮಂತಹ ಯುವಜನರಿಗೆ ಹೇರಳವಾದ ಪ್ರೋತ್ಸಾಹವನ್ನು ನೀಡಿತು. ಏಕೆಂದರೆ, ತನ್ನ ಅಸ್ವಸ್ಥತೆಯ ಎದುರಿನಲ್ಲೂ ಯೆಹೋವನ ಕುರಿತು ಮಾತಾಡುವುದನ್ನು ಎಂದೂ ನಿಲ್ಲಿಸದ ಒಬ್ಬ ಯುವಕನ ಹುರುಪನ್ನು ಈ ಲೇಖನವು ಎತ್ತಿತೋರಿಸಿತು.

ಡಿ. ಎಮ್‌., ಇಟಲಿ

ಮ್ಯಾತ್‌ ಟಪೀಯೊ ಭಯಂಕರವಾದ ನಿರ್ಬಲತೆಗಳನ್ನು ಎದುರಿಸುತ್ತಿದ್ದರೂ, ಅವನು ಯೆಹೋವನನ್ನು ಸೇವಿಸಲು ಮತ್ತು ಸ್ತುತಿಸಲು ಸಾಧ್ಯವಾಗುವಂತೆ ಜೀವಿಸಲಿಕ್ಕಾಗಿ ಹೋರಾಡಿದನು. ಒಳ್ಳೆಯ ಆರೋಗ್ಯವಿರುವ ನಮಗೆ ಇದೊಂದು ಉತ್ತಮ ಪಾಠವಾಗಿದೆ.

ಡಿ. ಪಿ., ಪೋರ್ಟರೀಕೊ

ಯಾರು ತನ್ನ 14 ವರ್ಷ ವಯಸ್ಸಿನಲ್ಲಿ ಮಿದುಳಿನ ಗಡ್ಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತೊ ಆ ಮ್ಯಾತ್‌ನ ಕುರಿತ ಲೇಖನವು ನನ್ನ ಗಮನವನ್ನು ಸೆರೆಹಿಡಿಯಿತು. ಅವನ ಕೊನೆಯ ಮಾತುಗಳಲ್ಲಿ ಕೆಲವು “ಯೆಹೋವನ ಕುರಿತು ಸಾಕ್ಷಿನೀಡುವುದನ್ನು ಮಾತ್ರ ಎಂದಿಗೂ ನಿಲ್ಲಿಸಬೇಡಿರಿ,” ಎಂಬುದಾಗಿತ್ತು. ಇದು ನಾನು ಬಿಟ್ಟುಕೊಡದಿರುವಂತೆ ಪ್ರೋತ್ಸಾಹಿಸಿತು ಮತ್ತು ಬೈಬಲನ್ನು ಅಭ್ಯಾಸಿಸುವುದು ಹಾಗೂ ಜೀವಕ್ಕೆ ನಡೆಸುವ ಜ್ಞಾನವನ್ನು ಪಡೆದುಕೊಳ್ಳುವುದು ಎಷ್ಟೊಂದು ಪ್ರಾಮುಖ್ಯವಾಗಿದೆ ಎಂಬುದನ್ನು ಅರಿತುಕೊಳ್ಳಲು ನನಗೆ ಸಹಾಯಮಾಡಿತು!

ಡಿ. ವಿ., ಫಿಲಿಪ್ಪೀನ್ಸ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ