ಪ್ರಕೃತಿಗಾಗುತ್ತಿರುವ ಶೋಷಣೆಗೆ ಒಂದು ಅಂತ್ಯ
ಬ್ರಿಟನಿನ ಎಚ್ಚರ! ಪತ್ರಿಕೆಯ ಸುದ್ದಿಗಾರರಿಂದ
“ಕಳೆದ 25 ವರ್ಷಗಳಲ್ಲಿ ಮೂರನೇ ಒಂದಂಶದಷ್ಟು ಪ್ರಾಕೃತಿಕ ಜಗತ್ತನ್ನು ಮಾನವ ಚಟುವಟಿಕೆಗಳು ನಾಶಗೊಳಿಸಿವೆ.”
ಈ ರೀತಿಯಾಗಿ ಪ್ರಕೃತಿಯ ಲೋಕವ್ಯಾಪಕ ನಿಧಿಯು ವರದಿಸುತ್ತದೆ. ಈ ಬೆಚ್ಚಿಬೀಳಿಸುವ ಸಂಖ್ಯಾಸಂಗ್ರಹಣವು, ಲೋಕಪರಿಸರದ ಹೊಸ ಸಂಖ್ಯಾಸಂಗ್ರಹಣ ವಿಶ್ಲೇಷಣೆಯಾದ, ಲಿವಿಂಗ್ ಪ್ಲ್ಯಾನೆಟ್ ಇಂಡೆಕ್ಸ್ ಬಿಡುಗಡೆಯಾದಾಗ ಬಯಲಾಯಿತು.
ಭೂಗ್ರಹದ ಶೇಕಡ 10ರಷ್ಟು ಅರಣ್ಯ ಪ್ರದೇಶಗಳು ಅವನತಿಯಾಗಿವೆಯೆಂದು ಪರಿಸರ ಸಂರಕ್ಷಕರು ವರದಿಸಿದ್ದಾರೆ. ಆದರೆ ಈ ಅಂಕೆಯು, ಉಷ್ಣವಲಯದ ಮಳೆಗಾಡುಗಳು ಮತ್ತು ಶುಷ್ಕ ಪ್ರದೇಶದ ಅರಣ್ಯಗಳಿಗಾಗುವ ಭಾರಿ ನಷ್ಟವನ್ನು ಪೂರ್ತಿಯಾಗಿ ತಿಳಿಸುವುದಿಲ್ಲ. ಇದರೊಂದಿಗೆ ವನ್ಯಜೀವಿಗಳಿಗಾಗುವ ನಷ್ಟವನ್ನಂತೂ ಹೇಳಬೇಕಾಗಿಯೇ ಇಲ್ಲ, ಬಹುಶಃ ಅದು ಶೇಕಡ 10 ಪ್ರತಿಶತಕ್ಕಿಂತಲೂ ಹೆಚ್ಚಿರಬಹುದೆಂದು ಲಂಡನ್ನಿನ ದ ಇಂಡಿಪೆಂಡೆಂಟ್ ಎಂಬ ವಾರ್ತಾಪತ್ರಿಕೆಯು ಗಮನಿಸುತ್ತದೆ. ಕಡಲ ಪರಿಸರವು ಶೇಕಡ 30ರಷ್ಟು ನಷ್ಟವನ್ನು ಅನುಭವಿಸಿದೆ ಎಂಬುದು ಅಟ್ಲಾಂಟಿಕ್ ಸಾಗರದ ಬ್ಲೂಫಿನ್ ಟೂನ ಮೀನುಗಳು ಮತ್ತು ಏಷ್ಯಾದ ಸಾಗರಗಳಲ್ಲಿರುವ ಲೆದರ್ ಬ್ಯಾಕ್ ಕಡಲಾಮೆಗಳಂತಹ ಜಲಚರಗಳು ಮರೆಯಾಗುತ್ತಿರುವುದರಲ್ಲಿ ವ್ಯಕ್ತವಾಗುತ್ತದೆ. ಇದಕ್ಕಿಂತಲೂ ತೀರ ವಿಷಾದಕರ ಸಂಗತಿಯೆಂದರೆ, ಸೀನೀರಿನ ಜೀವಿಪರಿಸರ ವ್ಯವಸ್ಥೆಯ ಇಂಡೆಕ್ಸ್ನಲ್ಲಿ 50 ಪ್ರತಿಶತದಷ್ಟು ಇಳಿತವಾಗಿದೆ. ಕೃಷಿ ಮತ್ತು ಕೈಗಾರಿಕಾ ಮಾಲಿನ್ಯದಲ್ಲಾಗಿರುವ ಹೆಚ್ಚಳದೊಂದಿಗೆ, ಅತ್ಯಧಿಕ ನೀರಿನ ಉಪಯೋಗವೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ದೂರಲಾಗಿದೆ.
“ಪ್ರಾಕೃತಿಕ ಜೀವಿಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದು, ಕೇವಲ ಶ್ರೀಮಂತರು ಮಾತ್ರ ಖರೀದಿಸಲು ಸಾಮರ್ಥ್ಯವಿರುವ ಭೋಗದ ವಸ್ತುವಾಗಿಲ್ಲ, ಬದಲಿಗೆ ಅದು ನಮ್ಮ ಭೂಗ್ರಹದ ಜೀವನಾಧಾರವಾಗಿರುವ ಜೀವ ಪರಿಸರದ ಆಗುಹೋಗುಗಳ ಸಂರಕ್ಷಣೆಯನ್ನು ಖಚಿತಪಡಿಸುವುದಕ್ಕೆ ಬಹಳ ಅತ್ಯಾವಶ್ಯಕವಾಗಿದೆ, ಏಕೆಂದರೆ ನಾವೆಲ್ಲರೂ ನಮ್ಮ ಅಸ್ತಿತ್ವಕ್ಕಾಗಿ ಅವುಗಳನ್ನೇ ಅವಲಂಬಿಸಿದ್ದೇವೆ,” ಎಂದು ಇಂಗ್ಲೆಂಡಿನಲ್ಲಿರುವ ಲಂಡನ್ನಿನ ಕ್ಯೂ ರಾಯಲ್ ಬೊಟಾನಿಕಲ್ ಗಾರ್ಡನ್ಸ್ನ ನಿರ್ದೇಶಕರಾಗಿರುವ ಗಿಲ್ಯನ್ ಪ್ರ್ಯಾನ್ಸ್ ಹೇಳಿಕೆ ನೀಡುತ್ತಾರೆ. ಈ ಭೂಗ್ರಹದ ಪ್ರತಿಯೊಬ್ಬ ಮಾನವನು ಇದರಲ್ಲಿ ಒಳಗೂಡಿದ್ದಾನೆ. ಹಾಗಾದರೆ, ಈ ಭೂಗೋಳದಾದ್ಯಂತ ಒಂದು ನಿರಂತರ ಪರಿಹಾರವನ್ನು ಹೇಗೆ ಸಾಧಿಸಸಾಧ್ಯವಿದೆ?
ಆಸಕ್ತಿಕರವಾಗಿ, ಪ್ರಕಟನೆ ಎಂಬ ಬೈಬಲಿನ ಕೊನೆಯ ಪುಸ್ತಕವು ಲೋಕವನ್ನು ನಾಶಮಾಡುತ್ತಿರುವವರ ಕುರಿತು ತಿಳಿಸುತ್ತದೆ. ಅಂಥವರು ಸ್ವತಃ ನಾಶವಾಗಲಿರುವ ಸಮಯದ ಕುರಿತು ಅದು ಮುಂತಿಳಿಸುತ್ತದೆ. (ಪ್ರಕಟನೆ 11:18) ಪಾರಾಗುವವರು ಯಾರಾದರೂ ಇರುವರೋ? ಹೌದು, ಏಕೆಂದರೆ, ಭೂಪರಿಸರೀಯ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರವಿರುವ ಮತ್ತು ಅದನ್ನು ನೆರವೇರಿಸಲು ಶಕ್ತನಾಗಿರುವ “ಸರ್ವಶಕ್ತನಾದ ದೇವ”ರಾದ ಯೆಹೋವನು ಹಸ್ತಕ್ಷೇಪ ಮಾಡುವ ಮೂಲಕ ಇದು ಬರಲಿದೆ. (ಪ್ರಕಟನೆ 11:17) ಅಂಥ ಒಂದು ಸಮಯದ ಕುರಿತು ಪ್ರಕಟನೆ 21:3 ವರ್ಣಿಸುವುದೇನೆಂದರೆ, ಆಗ ದೇವರು “ಅವರೊಡನೆ [ಮಾನವಕುಲದೊಂದಿಗೆ] ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು.”
‘ಆತನ ಪ್ರಜೆಗಳಲ್ಲಿ’ ನೀವೂ ಒಬ್ಬರಾಗಿದ್ದು, ಇಂದಿನ ಭೂಗೋಳದ ಪರಿಸರದ ಅವನತಿಯು ಪುನಃ ಸರಿಪಡಿಸಲ್ಪಡುವುದನ್ನು ನೋಡುವ ಪ್ರತೀಕ್ಷೆಯನ್ನು ಹೇಗೆ ಹೊಂದುವಿರಿ? 5ನೇ ಪುಟದಲ್ಲಿ ಕೊಡಲ್ಪಟ್ಟಿರುವ ಯಾವುದಾದರೊಂದು ವಿಳಾಸಕ್ಕೆ ಬರೆಯುವ ಮೂಲಕ ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿ. ಇಲ್ಲವೆ, ಮುಂದಿನ ಬಾರಿ ಅವರು ನಿಮ್ಮ ಮನೆಯನ್ನು ಸಂದರ್ಶಿಸುವಾಗ ಅವರೊಂದಿಗೆ ಮಾತನಾಡಿ. ಶೀಘ್ರದಲ್ಲೇ ದೇವರು ಹಸ್ತಕ್ಷೇಪ ಮಾಡುವಾಗ ಸಿದ್ಧವಾಗಿರಲು ಈಗ ನೀವು ಏನು ಮಾಡಬಹುದಾಗಿದೆ ಎಂಬುದನ್ನು ಕಲಿತುಕೊಳ್ಳಲು ಅವರು ನಿಮಗೆ ಸಹಾಯಮಾಡಲು ಸಂತೋಷಿಸುವರು.