ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 4/06 ಪು. 31
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—2006
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ನಿಮ್ಮ ತಾಯಿಗೆ ಆಭಾರಿಗಳಾಗಿರಿ”
  • ಮೂಢನಂಬಿಕೆಯು ಹೆಚ್ಚುತ್ತಾ ಇದೆ
  • ಆಧುನಿಕ ದಾಸತ್ವ
  • ನಿಲ್ಲಿಸಲ್ಪಟ್ಟಿರುವ ಕಾರುಗಳೊಳಗಿನ ತಾಪಮಾನ
  • ಒಂದು ಮಾರಕ ಮೈತ್ರಿ
    ಎಚ್ಚರ!—1998
  • ಕ್ಷಯರೋಗದ—ಹೋರಾಟದಲ್ಲಿ ಒಂದು ನವೀನ ನಿರೋಧಕ
    ಎಚ್ಚರ!—1999
  • ವಿಜಯ ಮತ್ತು ವಿಷಾದಾಂತ
    ಎಚ್ಚರ!—1998
  • ಕ್ಷಯರೋಗವು ಪುನರಾಕ್ರಮಿಸುತ್ತದೆ!
    ಎಚ್ಚರ!—1996
ಇನ್ನಷ್ಟು
ಎಚ್ಚರ!—2006
g 4/06 ಪು. 31

ಜಗತ್ತನ್ನು ಗಮನಿಸುವುದು

◼ ಅಂದಾಜಿಗನುಸಾರ ಇಸವಿ 2000ದಲ್ಲಿ ಜಗದ್ವ್ಯಾಪಕವಾಗಿ ಕ್ಷಯರೋಗದ 83 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಮತ್ತು ಸುಮಾರು 20 ಲಕ್ಷ ಕ್ಷಯರೋಗಿಗಳು ಸತ್ತುಹೋದರು. ಇವರಲ್ಲಿ ಹೆಚ್ಚಿನವರು ಕಡಿಮೆ ಸಂಬಳ ದೊರೆಯುವ ದೇಶಗಳಲ್ಲಿರುವವರು ಆಗಿದ್ದರು.​—⁠ಮೆಡಿಕಲ್‌ ಜರ್ನಲ್‌ ಆಫ್‌ ಆಸ್ಟ್ರೇಲಿಯ. (g 1/06)

◼ “ಮೂವತ್ತು ವರ್ಷ ಪ್ರಾಯದಲ್ಲಿ ಧೂಮಪಾನಿಯಾಗಿರುವುದು, ಒಬ್ಬ ಪುರುಷನ ಜೀವನಾಯುಷ್ಯವನ್ನು 5 1/2 ವರ್ಷ ಕಡಿಮೆಮಾಡುತ್ತದೆ ಮತ್ತು ಸ್ತ್ರೀಯ ಜೀವನಾಯುಷ್ಯವು 6 1/2 ವರ್ಷ ಕಡಿಮೆಯಾಗುತ್ತದೆ” ಎಂದು ಆಕ್ಚುಅರೀಸ್‌ ಸಂಸ್ಥೆಯು ತಯಾರಿಸಿರುವ ಜೀವನ ಪಟ್ಟಿಯು ತೋರಿಸುತ್ತದೆ. ಆದರೆ 30ನೇ ವಯಸ್ಸಿನಲ್ಲಿ ಧೂಮಪಾನವನ್ನು ನಿಲ್ಲಿಸಿದರೆ, ತಂಬಾಕಿಗೆ ಸಂಬಂಧಪಟ್ಟ ರೋಗದಿಂದ ಸಾಯುವ ಅಪಾಯವು ತುಂಬ ಕಡಿಮೆಯಾಗುತ್ತದೆ.​—⁠ದ ಟೈಮ್ಸ್‌, ಇಂಗ್ಲೆಂಡ್‌.

◼ ಇಸವಿ 2004ರಲ್ಲಿ ಜಾಗತಿಕವಾಗಿ ತೈಲ ಬಳಕೆಯು ಪ್ರತಿ ದಿನದ 3.4 ಪ್ರತಿಶತದಿಂದ 8.24ರ ವರೆಗೆ ಏರಿತು. ಈ ಏರಿಕೆಯಲ್ಲಿ ಬಹುಮಟ್ಟಿಗೆ ಅರ್ಧಕ್ಕೆ ಕಾರಣ ಯುನೈಟೆಡ್‌ ಸ್ಟೇಟ್ಸ್‌ ಮತ್ತು ಚೈನಾ ಆಗಿದೆ. ಯುನೈಟೆಡ್‌ ಸ್ಟೇಟ್ಸ್‌ ಪ್ರತಿದಿನ 2.05 ಕೋಟಿ ಬ್ಯಾರಲ್‌ಗಳ ತೈಲ ಮತ್ತು ಚೀನಾ 66 ಲಕ್ಷ ಬ್ಯಾರಲ್‌ಗಳನ್ನು ಬಳಸುತ್ತವೆ.​—⁠ವೈಟಲ್‌ ಸೈನ್ಸ್‌ 2005, ವರ್ಲ್ಡ್‌ವಾಚ್‌ ಇನ್‌ಸ್ಟಿಟ್ಯೂಟ್‌. (g 2/06)

“ನಿಮ್ಮ ತಾಯಿಗೆ ಆಭಾರಿಗಳಾಗಿರಿ”

ಶಾಲೆಗೆ ಹೋಗುತ್ತಿರುವ ವಯಸ್ಸಿನ ಇಬ್ಬರು ಮಕ್ಕಳಿರುವ ಮನೆಯಲ್ಲೇ ಉಳಿಯುವ ಕೆನಡದ ತಾಯಿಯೊಬ್ಬಳು ಮಾಡುವ ಎಲ್ಲ ಕೆಲಸಕ್ಕಾಗಿ ಸಂಬಳವನ್ನು ಕೊಡಬೇಕಾಗಿರುತ್ತಿದ್ದಲ್ಲಿ, ಓವರ್‌ಟೈಮ್‌ ಸಂಬಳವನ್ನು ಸೇರಿಸಿ ಅವಳ ವಾರ್ಷಿಕ ಆದಾಯವು 1,63,852 (ಕೆನೇಡಿಯನ್‌) ಡಾಲರುಗಳು (ಸುಮಾರು 58 ಲಕ್ಷ ರೂಪಾಯಿ) ಆಗಿರುತ್ತಿತ್ತೆಂದು ದುಡಿಮೆ ವಿಶ್ಲೇಷಕರು ಅಂದಾಜುಮಾಡುತ್ತಾರೆ. ಈ ಸಂಖ್ಯೆಯನ್ನು ಸದ್ಯದ ಸರಾಸರಿ ಸಂಬಳ ಮತ್ತು “ಪ್ರತಿ ವಾರ ನೂರು ತಾಸುಗಳ ಕೆಲಸ, ಅಂದರೆ ಆರು ದಿನ 15 ತಾಸುಗಳು ಮತ್ತು ಒಂದು ದಿನ 10 ತಾಸುಗಳ ಕೆಲಸದ” ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂದು ವ್ಯಾಂಕೂವರ್‌ ಸನ್‌ ವಾರ್ತಾಪತ್ರಿಕೆಯು ಹೇಳುತ್ತದೆ. ಮನೆಯಲ್ಲೇ ಇರುವ ತಾಯಿಯೊಬ್ಬಳ ಜವಾಬ್ದಾರಿಗಳಲ್ಲಿ ಶಿಶುಆರೈಕೆ, ಶಿಕ್ಷಕಿ, ಡ್ರೈವರ್‌, ಮನೆನಿರ್ವಾಹಕಿ, ಅಡಿಗೆಯವಳು, ನರ್ಸ್‌ ಮತ್ತು ಸರ್ವಸಾಮಾನ್ಯ ದುರಸ್ತಿ ಕೆಲಸಗಾರನು ಮಾಡುವ ಕೆಲಸಗಳು ಸೇರಿರುತ್ತವೆ. ಆ ವಾರ್ತಾಪತ್ರಿಕೆಯು ಈ ಮುಂದಿನ ಬುದ್ಧಿವಾದವನ್ನು ನೀಡಿತು: “ನಿಮ್ಮ ತಾಯಿಗೆ ಆಭಾರಿಗಳಾಗಿರಿ; ಅವಳಿಗೆ ಬಹುಶಃ ಕಡಿಮೆ ಸಂಬಳ ಸಿಗುತ್ತಿರಬಹುದು.” (g 2/06)

ಮೂಢನಂಬಿಕೆಯು ಹೆಚ್ಚುತ್ತಾ ಇದೆ

“ತಂತ್ರಜ್ಞಾನ ಮತ್ತು ವಿಜ್ಞಾನದ ಈ ಕಾಲದಲ್ಲೂ, ಮೂಢನಂಬಿಕೆಯು ಅದರ ಪ್ರಭಾವವನ್ನು ಕಳೆದುಕೊಂಡಿಲ್ಲ” ಎಂದು ಜರ್ಮನ್‌ ಅಭಿಪ್ರಾಯ ಸಮೀಕ್ಷೆಯ ಸಂಸ್ಥೆಯಾಗಿರುವ ‘ಆಲೆನ್ಸ್‌ಬಾಕ್‌’ ವರದಿಸುತ್ತದೆ. “ಒಳ್ಳೇ ಅಥವಾ ಕೆಟ್ಟ ಶಕುನಗಳಲ್ಲಿನ ವಿಚಾರಹೀನ ನಂಬಿಕೆಯು ಈಗಲೂ ಜನರಲ್ಲಿದೆ ಮತ್ತು ವಾಸ್ತವಾಂಶವೇನೆಂದರೆ ಇಪ್ಪತ್ತೈದು ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ಈಗ ಹೆಚ್ಚು ಜನಪ್ರಿಯವಾಗಿದೆ” ಎಂದು ದೀರ್ಘಕಾಲದ ವರೆಗೆ ನಡೆಸಲ್ಪಟ್ಟ ಒಂದು ಸಮೀಕ್ಷೆಯು ತೋರಿಸಿದೆ. 1970ರ ದಶಕದಲ್ಲಿ, ಉಲ್ಕೆಗಳು ತಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆಂದು 22 ಪ್ರತಿಶತ ಮಂದಿ ನಂಬುತ್ತಿದ್ದರು. ಈಗ 40 ಪ್ರತಿಶತ ಮಂದಿ ನಂಬುತ್ತಾರೆ. ಇಂದು, 3 ಮಂದಿ ವಯಸ್ಕರಲ್ಲಿ ಕೇವಲ ಒಬ್ಬನು ಮೂಢನಂಬಿಕೆಯ ಎಲ್ಲ ವಿಧಗಳನ್ನು ತಿರಸ್ಕರಿಸುತ್ತಾನೆ. ಜರ್ಮನ್‌ ವಿಶ್ವವಿದ್ಯಾಲಯದ 1,000 ಮಂದಿ ವಿದ್ಯಾರ್ಥಿಗಳ ನಡುವೆ ನಡೆಸಲ್ಪಟ್ಟ ಇನ್ನೊಂದು ಅಧ್ಯಯನವು ಪ್ರಕಟಿಸಿದ್ದೇನೆಂದರೆ ಅವರಲ್ಲಿ ಮೂರರಲ್ಲೊಬ್ಬನು, ಕಾರುಗಳಲ್ಲಿ ಇಲ್ಲವೆ ಕೀ ಚೈನ್‌ಗಳಲ್ಲಿರುವ ಅದೃಷ್ಟ ರಕ್ಷಾವಸ್ತುಗಳಲ್ಲಿ ಭರವಸೆಯಿಡುತ್ತಾನೆ. (g 1/06)

ಆಧುನಿಕ ದಾಸತ್ವ

“ಕಡಿಮೆಪಕ್ಷ 1.23 ಕೋಟಿ ಜನರು ಜಗತ್ತಿನಾದ್ಯಂತ ಕಡ್ಡಾಯ ದುಡಿಮೆಯ ಸೆರೆಯಲ್ಲಿದ್ದಾರೆ” ಎಂದು ವಿಶ್ವ ಸಂಸ್ಥೆಯ ‘ಅಂತಾರಾಷ್ಟ್ರೀಯ ದುಡಿಮೆ ಸಂಸ್ಥೆ’ (ಐ.ಎಲ್‌.ಓ.) ನಡೆಸಿರುವ ಸಮೀಕ್ಷೆಯು ವರದಿಸುತ್ತದೆ. ಇವುಗಳಲ್ಲಿ, 24 ಲಕ್ಷಕ್ಕಿಂತಲೂ ಹೆಚ್ಚು ಮಂದಿ, ಮನುಷ್ಯರ ಮಾರಾಟದ ಬಲಿಗಳಾಗಿದ್ದಾರೆ. ಕಡ್ಡಾಯ ದುಡಿಮೆ, ಅಂದರೆ ಬಲಾತ್ಕಾರ ಇಲ್ಲವೆ ಬೆದರಿಕೆಯೊಡ್ಡಿ ಮಾಡಿಸಲಾಗುವ ಅನೈಚ್ಛಿಕ ಕೆಲಸಗಳ ಉದಾಹರಣೆಗಳು, ವೇಶ್ಯಾವಾಟಿಕೆ, ಮಿಲಿಟರಿ ಸೇವೆ ಮತ್ತು ಜೀತದಾಳು ದುಡಿಮೆಗಳಾಗಿವೆ. ಇವುಗಳಲ್ಲಿ ಕಾರ್ಮಿಕರು ಕಡಿಮೆ ವೇತನ ಇಲ್ಲವೆ ವೇತನವೇ ಇಲ್ಲದೆ ಕೆಲಸಮಾಡಬೇಕಾಗುತ್ತದೆ. ಯಾಕೆಂದರೆ ಅವರ ಸಂಬಳವನ್ನು ಅವರ ಯಾವುದೊ ಸಾಲವನ್ನು ತೀರಿಸಲಿಕ್ಕಾಗಿ ಹಿಡಿದಿಡಲಾಗುತ್ತದೆ. ಐ.ಎಲ್‌.ಓ. ನಿರ್ದೇಶಕರಾದ ಜೆನರಲ್‌ ಹ್ವಾನ್‌ ಸೋಮಾವ್ಯಾ ಹೇಳುವ ಪ್ರಕಾರ ಅಂಥ ದುಡಿಮೆಯು, “ಜನರ ಮೂಲಭೂತ ಹಕ್ಕುಗಳನ್ನು ಮತ್ತು ಘನತೆಯನ್ನು ಅವರಿಂದ ಕಸಿದುಕೊಳ್ಳುತ್ತದೆ.”

ನಿಲ್ಲಿಸಲ್ಪಟ್ಟಿರುವ ಕಾರುಗಳೊಳಗಿನ ತಾಪಮಾನ

ಇಸವಿ 2004ರಲ್ಲಿ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ನಿಲ್ಲಿಸಲ್ಪಟ್ಟಿರುವ ವಾಹನಗಳೊಳಗೆ ಬಿಡಲ್ಪಟ್ಟಿದ್ದ ಮಕ್ಕಳು ಒಳಗಿನ ಉಷ್ಣಸ್ಥಿತಿಯಿಂದಾಗಿ ಸತ್ತುಹೋದ 35 ಪ್ರಕರಣಗಳಿದ್ದವೆಂದು ಪೀಡಿಆ್ಯಟ್ರಿಕ್ಸ್‌ ವಾರ್ತಾಪತ್ರಿಕೆಯು ಹೇಳುತ್ತದೆ. ಹೊರಗಿನ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿರುವಾಗ, ವಾಹನದೊಳಗಿನ ತಾಪಮಾನವು ಬೇಗನೆ 57ರಿಂದ 68 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದೆಂದು ನಡೆಸಲ್ಪಟ್ಟಿರುವ ಅಧ್ಯಯನಗಳು ತೋರಿಸುತ್ತವೆ. ಹೊರಗಿನ ತಾಪಮಾನವು 22 ಡಿಗ್ರಿ ಆಗಿರುವಾಗಲೂ, ಒಂದು ಕಾರ್‌ನೊಳಗಿನ ತಾಪಮಾನವು 22 ಡಿಗ್ರಿ ಹೆಚ್ಚಾಗಸಾಧ್ಯವಿದೆ. ಮತ್ತು ಹೆಚ್ಚಾಗಿ ಇದು ವಾಹನವನ್ನು ನಿಲ್ಲಿಸಿ 15ರಿಂದ 30 ನಿಮಿಷಗಳೊಳಗೆ ನಡೆಯುತ್ತದೆ. ಕಿಟಕಿಗಳನ್ನು ನಾಲ್ಕು ಸೆಂಟಿಮೀಟರ್‌ ಅಗಲ ತೆರೆದಿಡುವುದು ಅಥವಾ ಕಾರನ್ನು ನಿಲ್ಲಿಸುವ ಮುಂಚೆ ಏರ್‌ ಕಂಡಿಷನ್‌ ಅನ್ನು ಸ್ವಲ್ಪ ಹೊತ್ತು ಆನ್‌ ಮಾಡುವುದು ಯಾವುದೇ ವ್ಯತ್ಯಾಸವನ್ನು ಮಾಡಲಿಲ್ಲ. ಇಂಥ ಗಂಡಾಂತರಗಳ ಬಗ್ಗೆ ಸಾರ್ವಜನಿಕ ಅರಿವು ಜೀವಗಳನ್ನು ಉಳಿಸಬಲ್ಲದೆಂಬುದು ಆ ಲೇಖನದ ಲೇಖಕರ ಅಭಿಪ್ರಾಯ. (g 3/06)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ