ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 36 ಪು. 209-ಪು. 211 ಪ್ಯಾ. 1
  • ಮುಖ್ಯ ವಿಷಯವನ್ನು ವಿಕಸಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮುಖ್ಯ ವಿಷಯವನ್ನು ವಿಕಸಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಭಾಷಣದ ಹೊರಮೇರೆಯನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮುಖ್ಯಾಂಶಗಳಿಗೆ ಪ್ರಾಮುಖ್ಯತೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮನಸ್ಸನ್ನು ಕಾಪಾಡಿಕೊಳ್ಳಿ
    2012 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 36 ಪು. 209-ಪು. 211 ಪ್ಯಾ. 1

ಅಧ್ಯಾಯ 36

ಮುಖ್ಯ ವಿಷಯವನ್ನು ವಿಕಸಿಸುವುದು

ನೀವೇನು ಮಾಡುವ ಅಗತ್ಯವಿದೆ?

ನಿಮ್ಮ ಮುಖ್ಯ ವಿಷಯಕ್ಕೆ ಸೂಚಿಸಿರಿ, ಮತ್ತು ಅದನ್ನು ನಿಮ್ಮ ಭಾಷಣದಾದ್ಯಂತ ಬೇರೆ ಬೇರೆ ರೀತಿಯಲ್ಲಿ ವಿಸ್ತರಿಸಿರಿ.

ಇದು ಪ್ರಾಮುಖ್ಯವೇಕೆ?

ಅದು ನಿಮ್ಮ ಭಾಷಣವನ್ನು ಏಕೀಕರಿಸಿ, ನೀವು ಏನು ಹೇಳುತ್ತೀರೋ ಅದನ್ನು ಸಭಿಕರು ಅರ್ಥಮಾಡಿಕೊಂಡು, ಅದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಸಹಾಯಮಾಡುತ್ತದೆ.

ಅನುಭವಿ ಭಾಷಣಕಾರರಿಗೆ ಮುಖ್ಯ ವಿಷಯದ ಬೆಲೆ ಗೊತ್ತಿದೆ. ಅವರು ಭಾಷಣವನ್ನು ತಯಾರಿಸುತ್ತಿರುವಾಗ, ಮುಖ್ಯ ವಿಷಯವು ಅವರೊಂದು ನಿರ್ದಿಷ್ಟ ಮಾಹಿತಿಯ ಕ್ಷೇತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿ, ಅದರ ಕುರಿತು ಹೆಚ್ಚು ಗಾಢವಾಗಿ ಚಿಂತಿಸುವಂತೆ ಸಹಾಯಮಾಡುತ್ತದೆ. ಇದರ ಫಲಿತಾಂಶವೇನಂದರೆ, ಅವರು ಅನೇಕ ಅಂಶಗಳ ಬಗ್ಗೆ ಮೇಲಿಂದ ಮೇಲೆ ಮಾತಾಡುವ ಬದಲಿಗೆ, ಅವರು ತಮ್ಮ ಭಾಷಣದ ವಿಷಯಭಾಗವನ್ನು ಸಭಿಕರಿಗೆ ಹೆಚ್ಚು ಪ್ರಯೋಜನವಾಗುವಂಥ ರೀತಿಯಲ್ಲಿ ವಿಕಸಿಸುತ್ತಾರೆ. ಹೀಗೆ, ಪ್ರತಿಯೊಂದು ಮುಖ್ಯಾಂಶವು ಮುಖ್ಯ ವಿಷಯಕ್ಕೆ ನೇರವಾಗಿ ಜೋಡಿಸಲ್ಪಟ್ಟು, ಅದನ್ನು ವಿಕಸಿಸಲು ನೆರವಾಗುವಾಗ, ಆ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆಯೂ ಅವುಗಳ ವಿಶೇಷತೆಯನ್ನು ಮಾನ್ಯಮಾಡುವಂತೆಯೂ ಸಭಿಕರಿಗೆ ಸಹಾಯ ದೊರೆಯುತ್ತದೆ.

ನಿಮ್ಮ ಮುಖ್ಯ ವಿಷಯವು ನೀವು ಯಾವುದರಿಂದ ನಿಮ್ಮ ವಿಷಯವಸ್ತುವನ್ನು ವಿಕಸಿಸುತ್ತೀರೊ ಅದರ ನಿರ್ದಿಷ್ಟ ದೃಷ್ಟಿಕೋನ ಆಗಿದೆ ಎಂಬ ಸ್ಥಾನವನ್ನು ನೀವು ತೆಗೆದುಕೊಳ್ಳುವುದಾದರೆ, ನಿಮ್ಮ ಭಾಷಣಗಳ ಗುಣಮಟ್ಟವು ಉತ್ತಮಗೊಳ್ಳುವುದನ್ನು ನೀವು ಕಂಡುಕೊಳ್ಳುವಿರಿ. ರಾಜ್ಯ, ಬೈಬಲ್‌ ಮತ್ತು ಪುನರುತ್ಥಾನ ಎಂಬವುಗಳು ಸಾಮಾನ್ಯ ವಿಷಯವಸ್ತುಗಳಾಗಿವೆ. ಈ ವಿಷಯವಸ್ತುಗಳ ಕುರಿತಾಗಿ ವಿವಿಧ ಮುಖ್ಯ ವಿಷಯಗಳನ್ನು ವಿಕಸಿಸಬಹುದು. ಕೆಲವು ಉದಾಹರಣೆಗಳು ಇಲ್ಲಿವೆ: “ರಾಜ್ಯ, ಒಂದು ನೈಜ ಸರಕಾರ,” “ದೇವರ ರಾಜ್ಯವು ಭೂಮಿಯನ್ನು ಪರದೈಸಾಗಿ ಮಾಡುವುದು,” “ಬೈಬಲು ದೇವಪ್ರೇರಿತವಾಗಿದೆ,” “ಬೈಬಲು ನಮ್ಮ ದಿನಗಳಿಗೆ ಪ್ರಾಯೋಗಿಕ ಮಾರ್ಗದರ್ಶಿಯಾಗಿದೆ,” “ಪುನರುತ್ಥಾನವು ದುಃಖಿತರಿಗೆ ನಿರೀಕ್ಷೆಯನ್ನು ನೀಡುತ್ತದೆ,” “ಹಿಂಸೆಯ ಎದುರಿನಲ್ಲಿ ಸ್ಥಿರವಾಗಿ ನಿಲ್ಲುವಂತೆ ಪುನರುತ್ಥಾನದ ನಿರೀಕ್ಷೆಯು ನಮಗೆ ಸಹಾಯಮಾಡುತ್ತದೆ.” ಈ ಎಲ್ಲ ಮುಖ್ಯ ವಿಷಯಗಳನ್ನು ಸಂಪೂರ್ಣವಾಗಿ ಭಿನ್ನವಾದ ರೀತಿಗಳಲ್ಲಿ ವಿಕಸಿಸುವ ಅಗತ್ಯವಿದೆ.

ಬೈಬಲಿನ ಪ್ರಧಾನ ಮುಖ್ಯ ವಿಷಯಕ್ಕೆ ಹೊಂದಿಕೆಯಲ್ಲಿ, ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸು ಕ್ರಿಸ್ತನ ಸಾರುವಿಕೆಯು, “ಪರಲೋಕರಾಜ್ಯವು ಸಮೀಪಿಸಿತು” ಎಂಬ ಮುಖ್ಯ ವಿಷಯವನ್ನು ಎತ್ತಿತೋರಿಸಿತು. (ಮತ್ತಾ. 4:17) ಆ ಮುಖ್ಯ ವಿಷಯವನ್ನು ಹೇಗೆ ವಿಕಸಿಸಲಾಯಿತು? ನಾಲ್ಕು ಸುವಾರ್ತೆಗಳಲ್ಲಿ 110 ಕ್ಕೂ ಹೆಚ್ಚು ಬಾರಿ ಆ ರಾಜ್ಯದ ಕುರಿತು ಸೂಚಿಸಿ ಹೇಳಲಾಗಿದೆ. ಆದರೆ ಯೇಸು ಪದೇ ಪದೇ “ರಾಜ್ಯ” ಎಂಬ ಪದವನ್ನು ಉಪಯೋಗಿಸುವುದಕ್ಕಿಂತಲೂ ಹೆಚ್ಚಿನದನ್ನು ಮಾಡಿದನು. ಅವನು ಏನನ್ನು ಬೋಧಿಸಿದನೊ ಹಾಗೂ ಯಾವ ಅದ್ಭುತಗಳನ್ನು ಮಾಡಿದನೊ ಅವುಗಳ ಮೂಲಕ, ಅಲ್ಲಿ ಉಪಸ್ಥಿತನಿದ್ದ ತಾನು ದೇವಕುಮಾರನು, ಮೆಸ್ಸೀಯನು, ಯೆಹೋವನು ಯಾರಿಗೆ ರಾಜ್ಯವನ್ನು ಕೊಡಲಿದ್ದಾನೊ ಅವನು ಆಗಿದ್ದೇನೆ ಎಂಬುದನ್ನು ಯೇಸು ಸ್ಪಷ್ಟವಾಗಿ ತೋರಿಸಿದನು. ಮತ್ತು ತನ್ನ ಮೂಲಕ ಇತರರು ಆ ರಾಜ್ಯದಲ್ಲಿ ಭಾಗವಹಿಸಲು ದಾರಿಯನ್ನು ತೆರೆಯಲಾಗಿದೆ ಎಂಬುದನ್ನೂ ಯೇಸು ತೋರಿಸಿದನು. ಯಾರಿಗೆ ಆ ಸುಯೋಗವು ಕೊಡಲ್ಪಡುತ್ತದೋ ಅವರು ತೋರಿಸಬೇಕಾದ ಗುಣಗಳನ್ನು ಅವನು ಗುರುತಿಸಿದನು. ತನ್ನ ಬೋಧನೆಗಳಿಂದ ಮತ್ತು ತನ್ನ ಅದ್ಭುತ ಕೃತ್ಯಗಳಿಂದ, ದೇವರ ರಾಜ್ಯವು ಜನರ ಜೀವನಗಳಿಗೆ ಏನನ್ನು ಅರ್ಥೈಸುತ್ತದೆಂಬುದನ್ನು ಅವನು ಸ್ಪಷ್ಟಗೊಳಿಸಿದನು. ಮತ್ತು ದೇವರಾತ್ಮದ ಮೂಲಕ ಅವನು ದೆವ್ವಗಳನ್ನು ಬಿಡಿಸುವುದು, ‘ದೇವರ ರಾಜ್ಯವು’ ಅವನ ಕೇಳುಗರನ್ನು ‘ನಿಜವಾಗಿಯೂ ಬೆನ್ನಟ್ಟಿ ಹಿಡಿದದೆ’ ಎಂಬುದಕ್ಕೆ ರುಜುವಾತಾಗಿದೆ ಎಂದು ಅವನು ಸೂಚಿಸಿದನು. (ಲೂಕ 11:20, NW) ಯೇಸು ತನ್ನ ಹಿಂಬಾಲಕರಿಗೆ ಸಾಕ್ಷಿ ನೀಡುವಂತೆ ನೇಮಿಸಿದ್ದು ಆ ರಾಜ್ಯದ ಸಂಬಂಧದಲ್ಲಿಯೇ.—ಮತ್ತಾ. 10:7; 24:14.

ಸೂಕ್ತವಾದ ಮುಖ್ಯ ವಿಷಯವನ್ನು ಉಪಯೋಗಿಸುವುದು. ಬೈಬಲು ಮುಖ್ಯ ವಿಷಯವನ್ನು ಎಷ್ಟರ ಮಟ್ಟಿಗೆ ವಿಕಸಿಸುತ್ತದೊ ಅದೇ ಪ್ರಮಾಣದಲ್ಲಿ ನೀವೂ ಮಾಡಬೇಕೆಂದು ಹೇಳಲಾಗುವುದಿಲ್ಲವಾದರೂ, ಸೂಕ್ತವಾದ ಮುಖ್ಯ ವಿಷಯವನ್ನು ಹೊಂದಿರುವುದಂತೂ ಅಷ್ಟೇ ಪ್ರಾಮುಖ್ಯವಾಗಿದೆ ಎಂಬುದೇನೊ ಸತ್ಯ.

ಮುಖ್ಯ ವಿಷಯವನ್ನು ಆರಿಸಿಕೊಳ್ಳುವುದು ನಿಮಗೆ ಬಿಡಲ್ಪಟ್ಟಿರುವಲ್ಲಿ, ಪ್ರಥಮವಾಗಿ ನಿಮ್ಮ ಭಾಷಣದ ಉದ್ದೇಶವನ್ನು ಪರಿಗಣಿಸಿರಿ. ಬಳಿಕ, ನಿಮ್ಮ ಹೊರಮೇರೆಯನ್ನು ರೇಖಿಸುವ ಮುಖ್ಯಾಂಶಗಳನ್ನು ನೀವು ಆರಿಸಿಕೊಳ್ಳುವಾಗ, ಅವು ನೀವು ಆರಿಸಿಕೊಂಡಿರುವ ಮುಖ್ಯ ವಿಷಯವನ್ನು ನಿಜವಾಗಿಯೂ ಬೆಂಬಲಿಸುತ್ತವೆಂಬುದನ್ನು ಖಚಿತಪಡಿಸಿಕೊಳ್ಳಿರಿ.

ಮುಖ್ಯ ವಿಷಯವು ನೇಮಿಸಲ್ಪಟ್ಟಿರುವಲ್ಲಿ, ನಿಮ್ಮ ಭಾಷಣದ ವಿಷಯಭಾಗವನ್ನು ಹೇಗೆ ವಿಕಸಿಸಬೇಕೆಂಬುದರ ಕುರಿತು ಅದು ಏನನ್ನು ಸೂಚಿಸುತ್ತದೆಂಬುದನ್ನು ಜಾಗರೂಕತೆಯಿಂದ ವಿಶ್ಲೇಷಿಸಿರಿ. ಅಂತಹ ಮುಖ್ಯ ವಿಷಯದ ಮೌಲ್ಯವನ್ನೂ ಅದರಲ್ಲಿ ಅಡಗಿರುವ ಶಕ್ತಿಯನ್ನೂ ಮಾನ್ಯಮಾಡಲು ಕೊಂಚ ಪ್ರಯತ್ನವು ಬೇಕಾದೀತು. ನೇಮಿತ ಮುಖ್ಯ ವಿಷಯವನ್ನು ವಿಕಸಿಸಲಿಕ್ಕಾಗಿರುವ ವಿಷಯಭಾಗವನ್ನು ನೀವೇ ಆರಿಸಿಕೊಳ್ಳಲಿರುವುದಾದರೆ, ಮುಖ್ಯ ವಿಷಯದ ಮೇಲೆ ಗಮನವು ಕೇಂದ್ರೀಕರಿಸಲ್ಪಡುವಂತೆ ಅದನ್ನು ಜಾಗರೂಕತೆಯಿಂದ ಆಯ್ದುಕೊಳ್ಳಿರಿ. ಆದರೆ ವಿಷಯಭಾಗವು ನಿಮಗೆ ಈಗಾಗಲೇ ಕೊಡಲ್ಪಟ್ಟಿರುವಲ್ಲಿ, ಆಗಲೂ ಅದನ್ನು ಮುಖ್ಯ ವಿಷಯದೊಂದಿಗೆ ಹೊಂದಿಕೆಯಲ್ಲಿ ಹೇಗೆ ಉಪಯೋಗಿಸುವುದೆಂಬುದನ್ನು ನೀವು ವಿಶ್ಲೇಷಿಸುವ ಅಗತ್ಯವಿದೆ. ಆ ವಿಷಯವು ನಿಮ್ಮ ಸಭಿಕರಿಗೆ ಏಕೆ ಪ್ರಾಮುಖ್ಯವೆಂದೂ ಆ ಭಾಷಣವನ್ನು ಕೊಡುವುದರಲ್ಲಿ ನಿಮ್ಮ ಉದ್ದೇಶವು ಏನಾಗಿರಬೇಕೆಂದೂ ನೀವು ಪರಿಗಣಿಸುವ ಅಗತ್ಯವಿದೆ. ನಿಮ್ಮ ಭಾಷಣದಲ್ಲಿ ಯಾವುದನ್ನು ಒತ್ತಿಹೇಳಬೇಕೆಂಬುದನ್ನು ನಿರ್ಧರಿಸಲು ಇದು ನಿಮಗೆ ಸಹಾಯಮಾಡುವುದು.

ಮುಖ್ಯ ವಿಷಯವನ್ನು ಒತ್ತಿಹೇಳುವ ವಿಧ. ಮುಖ್ಯ ವಿಷಯಕ್ಕೆ ಸರಿಯಾದ ಒತ್ತನ್ನು ನೀಡಬೇಕಾದರೆ, ನಿಮ್ಮ ಭಾಷಣದ ವಿಷಯಭಾಗವನ್ನು ಆರಿಸಿಕೊಳ್ಳುವಾಗ ಮತ್ತು ಸಂಘಟಿಸುವಾಗ ನೀವು ಅಸ್ತಿವಾರವನ್ನು ಹಾಕಬೇಕು. ನಿಮ್ಮ ಮುಖ್ಯ ವಿಷಯವನ್ನು ಬೆಂಬಲಿಸುವ ಮಾಹಿತಿಯನ್ನು ಮಾತ್ರ ನೀವು ಉಪಯೋಗಿಸುವಲ್ಲಿ ಮತ್ತು ಒಂದು ಒಳ್ಳೆಯ ಹೊರಮೇರೆಯನ್ನು ತಯಾರಿಸುವುದರಲ್ಲಿ ಒಳಗೂಡಿರುವ ಮೂಲಸೂತ್ರಗಳನ್ನು ನೀವು ಅನುಸರಿಸುವಲ್ಲಿ, ಬಹುಮಟ್ಟಿಗೆ ಅಪ್ರಯತ್ನವಾಗಿ ನೀವು ಮುಖ್ಯ ವಿಷಯವನ್ನು ಒತ್ತಿಹೇಳುವಿರಿ.

ಪುನರಾವರ್ತನೆಯು ಮುಖ್ಯ ವಿಷಯವನ್ನು ಪುಷ್ಟಿಗೊಳಿಸಲು ಸಹಾಯಮಾಡಬಲ್ಲದು. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ, ಒಂದು ಮುಖ್ಯ ವಿಷಯವು, ಇಡೀ ಕೃತಿಯಲ್ಲಿ ಸಾಕಷ್ಟು ಬಾರಿ ಪುನರಾವರ್ತಿಸಲ್ಪಟ್ಟು, ಆ ಕೃತಿಯ ವಿಶಿಷ್ಟ ರಾಗವಾಗಿದೆ. ಈ ರಾಗವು ಸದಾ ಒಂದೇ ರೂಪದಲ್ಲಿ ಕೇಳಿಬರುವುದಿಲ್ಲ. ಕೆಲವೊಮ್ಮೆ ಒಂದೊ ಎರಡೊ ಗೀತಾಂಗ ಭಾಗಗಳನ್ನು ಸೇರಿಸಲಾಗುತ್ತದೆ, ಒಮ್ಮೊಮ್ಮೆ ಮುಖ್ಯ ವಿಷಯವನ್ನು ತುಸು ಬದಲಾಯಿಸಿ ನುಡಿಸಲಾಗುತ್ತದೆ. ಆದರೆ ಹಾಗೊ ಹೀಗೊ ಸಂಗೀತಕಾರನು ತನ್ನ ರಾಗವನ್ನು ಕೌಶಲದಿಂದ ತನ್ನ ಸಂಗೀತ ಕೃತಿಯ ಒಳಗೂ ಹೊರಗೂ, ಹೀಗೆ ಇಡೀ ಸಂಗೀತದಲ್ಲಿ ಹರಡಿಕೊಳ್ಳುವಂತೆ ಹೆಣೆಯುತ್ತಾನೆ. ಭಾಷಣದ ಮುಖ್ಯ ವಿಷಯದಲ್ಲಿಯೂ ಹಾಗೆಯೇ ಇರಬೇಕು. ಮುಖ್ಯ ವಿಷಯದ ಮುಖ್ಯ ಪದಗಳ ಪುನರಾವರ್ತನೆಯು, ಸಂಗೀತ ಕೃತಿಯಲ್ಲಿ ಪುನರಾವರ್ತಿಸಿ ಬರುವ ರಾಗದಂತಿದೆ. ಈ ಪದಗಳ ಸಮಾನಾರ್ಥಕಗಳು ಅಥವಾ ಬೇರೆ ಪದಗಳಲ್ಲಿ ಹೇಳಲ್ಪಡುವ ಮುಖ್ಯ ವಿಷಯವು, ಮುಖ್ಯ ವಿಷಯದ ರೂಪವ್ಯತ್ಯಾಸದಂತೆ ಕಾರ್ಯನಡಿಸುತ್ತದೆ. ಇಂತಹ ವಿಧಾನಗಳ ಉಪಯೋಗವು, ಮುಖ್ಯ ವಿಷಯವನ್ನೇ ಸಭಿಕರು ಜ್ಞಾಪಕದಲ್ಲಿಟ್ಟುಕೊಳ್ಳುವ ಪ್ರಧಾನ ವಿಚಾರವನ್ನಾಗಿ ಮಾಡುವುದು.

ಈ ಮೂಲಸೂತ್ರಗಳು ವೇದಿಕೆಯ ಮೇಲಿಂದ ಕೊಡಲ್ಪಡುವ ಭಾಷಣಗಳಿಗೆ ಮಾತ್ರವಲ್ಲ, ಕ್ಷೇತ್ರ ಶುಶ್ರೂಷೆಯಲ್ಲಿನ ಚರ್ಚೆಗಳಿಗೂ ಅನ್ವಯಿಸುತ್ತವೆ. ಒಂದು ಮುಖ್ಯ ವಿಷಯವು ಎದ್ದುಕಾಣುವಂತೆ ಮಾಡಲ್ಪಡುವಲ್ಲಿ, ತೀರ ಸಂಕ್ಷಿಪ್ತವಾದ ಸಂಭಾಷಣೆಯೂ ಹೆಚ್ಚು ಸ್ಮರಣೀಯವಾಗಿ ಪರಿಣಮಿಸುವುದು. ಒಂದು ಬೈಬಲ್‌ ಅಧ್ಯಯನದಲ್ಲಿ ಕೊಡಲ್ಪಡುವ ಉಪದೇಶದ ಮುಖ್ಯ ವಿಷಯವು ಒತ್ತಿಹೇಳಲ್ಪಟ್ಟಿರುವಲ್ಲಿ, ಅದು ಹೆಚ್ಚು ಸುಲಭವಾಗಿ ಮನಸ್ಸಿಗೆ ಹಿಂದಿರುಗಿ ಬರುವುದು. ಸೂಕ್ತವಾದ ಮುಖ್ಯ ವಿಷಯಗಳನ್ನು ಆರಿಸಿಕೊಂಡು, ಅವುಗಳನ್ನು ವಿಕಸಿಸುವುದರಲ್ಲಿ ನೀವು ಮಾಡುವ ಪ್ರಯತ್ನವು, ಒಬ್ಬ ಭಾಷಣಕಾರರೋಪಾದಿ ಮತ್ತು ದೇವರ ವಾಕ್ಯದ ಒಬ್ಬ ಬೋಧಕರೋಪಾದಿ ನಿಮ್ಮ ಪರಿಣಾಮಕಾರಿತ್ವವನ್ನು ವರ್ಧಿಸಲು ಹೆಚ್ಚಿನದ್ದನ್ನು ಮಾಡುವುದು.

ಪ್ರಮುಖ ಗ್ರಂಥಕೃತಿಯಲ್ಲಿ ಪ್ರಧಾನ ಮುಖ್ಯ ವಿಷಯ

ಒಂದು ಮುಖ್ಯ ವಿಷಯವನ್ನು ಉಪಯೋಗಿಸುವ ಸಂಗತಿಯನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ನಾವು, ಯೆಹೋವ ದೇವರು ಮಾನವ ಲೇಖಕರನ್ನು ಉಪಯೋಗಿಸಿದರೂ, ಬೈಬಲಿನಲ್ಲಿರುವ 66 ಪುಸ್ತಕಗಳಲ್ಲೆಲ್ಲಾ ಒಂದೇ ಒಂದು ಪ್ರಧಾನ ಮುಖ್ಯ ವಿಷಯವನ್ನು ಹೇಗೆ ಹೆಣೆದನೆಂಬುದನ್ನು ಪರಿಶೀಲಿಸುವುದು ಸಹಾಯಕರವಾಗಿರುವುದು. ಆ ಮುಖ್ಯ ವಿಷಯವು, ಮಾನವಕುಲವನ್ನು ಆಳಲು ಯೆಹೋವನಿಗಿರುವ ಹಕ್ಕಿನ ನಿರ್ದೋಷೀಕರಣ ಮತ್ತು ಆತನ ರಾಜ್ಯದ ಮೂಲಕ ಆತನ ಪ್ರೀತಿಯ ಉದ್ದೇಶದ ನೆರವೇರಿಕೆಯಾಗಿದೆ.

ಈ ಮುಖ್ಯ ವಿಷಯವು ಆದಿಕಾಂಡದ ಆರಂಭದ ಅಧ್ಯಾಯಗಳಲ್ಲಿ ಅನಾವರಣಗೊಳ್ಳಲು ಆರಂಭವಾಗಿ, ಆ ಬಳಿಕ ಅದರ ಪಾರ್ಶ್ವಗಳು ಬೈಬಲಿನಾದ್ಯಂತ ವಿಕಸಿಸಲ್ಪಟ್ಟಿವೆ. ದೈವಿಕ ನಾಮಕ್ಕೆ ಪದೇ ಪದೇ, 7,000ಕ್ಕೂ ಹೆಚ್ಚು ಬಾರಿ ಗಮನವನ್ನು ಸೆಳೆಯಲಾಗಿದೆ. ಯೆಹೋವನ ಆಧಿಪತ್ಯದ ನ್ಯಾಯಸಮ್ಮತತೆಯು ಸೃಷ್ಟಿಯ ವೃತ್ತಾಂತದಲ್ಲಿ ತೋರಿಬರುತ್ತದೆ. ಆತನ ಆಧಿಪತ್ಯದ ವಿಷಯದಲ್ಲಿ ಎದ್ದ ಪಂಥಾಹ್ವಾನವನ್ನು, ಅವಿಧೇಯತೆಯ ಧ್ವಂಸಕಾರಕ ಪರಿಣಾಮಗಳೊಂದಿಗೆ ವರದಿಸಲಾಗಿದೆ. ಯೆಹೋವನು ತನ್ನ ಸೃಷ್ಟಿಜೀವಿಗಳೊಂದಿಗೆ ಮಾಡಿದ ವ್ಯವಹಾರಗಳಲ್ಲಿ ಆತನ ಪರಮಪ್ರೀತಿ, ಆತನ ವಿವೇಕ, ಆತನ ನ್ಯಾಯ ಮತ್ತು ಆತನ ಸರ್ವಶಕ್ತಿಯು ಪ್ರದರ್ಶಿಸಲ್ಪಟ್ಟಿದೆ. ದೇವರಿಗೆ ವಿಧೇಯರಾಗಿರುವುದರಿಂದ ಸಿಗುವ ಪ್ರಯೋಜನಗಳು ಮತ್ತು ಅವಿಧೇಯತೆಯ ಫಲಿತಾಂಶವಾಗಿ ಬರುವ ವಿಪತ್ತುಗಳು, ಅಸಂಖ್ಯಾತ ಮಾದರಿಗಳಿಂದ ತೋರಿಸಲ್ಪಟ್ಟಿವೆ. ಪಾಪ ಮತ್ತು ಮರಣವನ್ನು ತೊಡೆದುಹಾಕಲಿಕ್ಕಾಗಿ ಯೇಸು ಕ್ರಿಸ್ತನ ಮೂಲಕ ಯೆಹೋವನು ಮಾಡಿದ ಒದಗಿಸುವಿಕೆಯು ವಿವರಿಸಲ್ಪಟ್ಟಿದೆ ಮತ್ತು ಪ್ರದರ್ಶಿಸಲ್ಪಟ್ಟಿದೆ. ತನ್ನ ಸೃಷ್ಟಿಯ ಮೇಲೆ ಯೆಹೋವನಿಗಿರುವ ನ್ಯಾಯಸಮ್ಮತವಾದ ಆಧಿಪತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುವ ದುಷ್ಟಾತ್ಮಗಳನ್ನೂ ಮಾನವರನ್ನೂ ನಾಶಗೊಳಿಸುವಂಥ ಒಂದು ಸ್ವರ್ಗೀಯ ರಾಜ್ಯದ ವಿವರಣೆಯನ್ನು ಒದಗಿಸಲಾಗಿದೆ. ಈ ಭೂಮಿಯು ಏಕಮಾತ್ರ ಸತ್ಯದೇವರನ್ನು ಪ್ರೀತಿಸಿ ಆರಾಧಿಸುವ ಮತ್ತು ಒಬ್ಬರನ್ನೊಬ್ಬರು ಪ್ರೀತಿಸುವ ಜನರಿಂದ ತುಂಬಿರುವ ಒಂದು ಪರದೈಸವಾಗಬೇಕೆಂಬ ಯೆಹೋವನ ಉದ್ದೇಶವನ್ನು ಈ ರಾಜ್ಯವು ಪೂರೈಸುವುದೆಂಬುದು ಸ್ಪಷ್ಟಗೊಳಿಸಲ್ಪಟ್ಟಿದೆ.

ಇದನ್ನು ಮಾಡುವ ವಿಧ

  • ನಿಮ್ಮ ಭಾಷಣವನ್ನು ತಯಾರಿಸುವಾಗ, ನಿಮ್ಮ ಮುಖ್ಯ ವಿಷಯವನ್ನು ವಿಕಸಿಸಲು ನಿಜವಾಗಿಯೂ ನೆರವಾಗುವಂತಹ ಮುಖ್ಯಾಂಶಗಳನ್ನೂ ಸಮರ್ಥಿಸುವ ವಿವರಗಳನ್ನೂ ಆರಿಸಿಕೊಳ್ಳಿರಿ.

  • ನಿಮ್ಮ ಭಾಷಣ ಕೊಡುವಿಕೆಯನ್ನು ನೀವು ಅಭ್ಯಾಸಮಾಡುವಾಗ, ನೀವು ಮುಖ್ಯ ವಿಷಯವನ್ನು ಎಲ್ಲಿ ಮತ್ತು ಹೇಗೆ ಒತ್ತಿಹೇಳುವಿರೆಂಬುದಕ್ಕೆ ಗಮನಕೊಡಿರಿ. ನೀವು ಅದನ್ನು ಎಲ್ಲಿ ಮಾಡಲು ಯೋಜಿಸುತ್ತೀರೋ ಅಂಥ ಸ್ಥಳಗಳಲ್ಲಿ ನೀವು ನಿಮ್ಮ ಹೊರಮೇರೆಯಲ್ಲಿ ಗುರುತನ್ನು ಹಾಕಲು ಸಹ ಬಯಸಬಹುದು.

  • ಭಾಷಣದ ಸಮಯದಲ್ಲಿ ಆಗಾಗ ನಿಮ್ಮ ಮುಖ್ಯ ವಿಷಯದಿಂದ ಮುಖ್ಯ ಪದಗಳನ್ನೂ ಮುಖ್ಯ ವಿಚಾರಗಳನ್ನೂ ಪುನರಾವರ್ತಿಸಿ ಹೇಳಿರಿ.

ಅಭ್ಯಾಸಪಾಠ: ಕ್ಷೇತ್ರ ಸೇವೆಗಾಗಿ, ಇತ್ತೀಚಿನ ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಒಂದು ನಿರ್ದಿಷ್ಟ ಲೇಖನಕ್ಕೆ ಹೊಂದಿಕೆಯಾಗಿರುವ ಒಂದು ಮುಖ್ಯ ವಿಷಯವನ್ನು ಆರಿಸಿಕೊಳ್ಳಿರಿ. ನಿಮ್ಮ ಪೀಠಿಕೆಯಲ್ಲಿ ಅದರಲ್ಲಿ ಆಸಕ್ತಿಯನ್ನು ಹುಟ್ಟಿಸಲು ಪ್ರಯತ್ನಿಸಿರಿ, ನಿಮ್ಮ ಚರ್ಚೆಯ ಸಮಯದಲ್ಲಿ ಒಂದೆರಡು ಅಂಶಗಳನ್ನು ಉಪಯೋಗಿಸುತ್ತಾ ಅದನ್ನು ವಿಕಸಿಸಿ, ಸಮಾಪ್ತಿಯಲ್ಲಿ ಅದರ ಮಹತ್ವವನ್ನು ಎತ್ತಿಹೇಳಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ