ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 19 ಪು. 50-ಪು. 51 ಪ್ಯಾ. 2
  • ಮೊದಲ ಮೂರು ಶಿಕ್ಷೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೊದಲ ಮೂರು ಶಿಕ್ಷೆಗಳು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಮೋಶೆ-ಆರೋನರು ಫರೋಹನನ್ನು ಭೇಟಿಯಾಗುತ್ತಾರೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಮುಂದಿನ ಆರು ಶಿಕ್ಷೆಗಳು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಯೆಹೋವನೆಂಬವನು ಯಾರು?
    ಕಾವಲಿನಬುರುಜು—1993
  • ಮೋಶೆ ಮತ್ತು ಆರೋನರು—ದೇವರ ವಾಕ್ಯದ ಧೀರ ಘೋಷಕರು
    ಕಾವಲಿನಬುರುಜು—1996
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 19 ಪು. 50-ಪು. 51 ಪ್ಯಾ. 2
ಫರೋಹನ ಮುಂದೆ ಮೋಶೆ ಮತ್ತು ಆರೋನ ನಿಂತಿದ್ದಾರೆ

ಪಾಠ 19

ಮೊದಲ ಮೂರು ಶಿಕ್ಷೆಗಳು

ಇಸ್ರಾಯೇಲ್ಯರು ಗುಲಾಮರಾಗಿ ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದರು. ಯೆಹೋವನು ಮೋಶೆ ಆರೋನನನ್ನು ಫರೋಹನ ಹತ್ತಿರ ಕಳುಹಿಸಿ ‘ಕಾಡಲ್ಲಿ ನನ್ನನ್ನು ಆರಾಧಿಸಲು ನನ್ನ ಜನರನ್ನು ಹೋಗಲು ಬಿಡು ಎಂದು ಯೆಹೋವನು ಹೇಳಿದ್ದಾನೆ ಅನ್ನಿರಿ’ ಎಂದನು. ಆಗ ಫರೋಹನು ಅಹಂಕಾರದಿಂದ ‘ನಾನು ಯೆಹೋವನು ಹೇಳಿದ್ದನ್ನು ಕೇಳುವುದಿಲ್ಲ, ಅವರನ್ನು ಬಿಡಲ್ಲ’ ಅಂದನು. ಆಮೇಲೆ ಇಸ್ರಾಯೇಲ್ಯರಿಗೆ ಇನ್ನೂ ಜಾಸ್ತಿ ಕಷ್ಟ ಕೊಡಲು ಶುರು ಮಾಡಿದ. ಆಗ ಯೆಹೋವನು ಫರೋಹನಿಗೆ ಪಾಠ ಕಲಿಸಿದನು. ಹೇಗೆ ಗೊತ್ತಾ? ಈಜಿಪ್ಟಿನ ಮೇಲೆ ಹತ್ತು ಶಿಕ್ಷೆಗಳನ್ನು ತರುವ ಮೂಲಕ. ಯೆಹೋವನು ಮೋಶೆಗೆ ‘ಫರೋಹ ನನ್ನ ಮಾತನ್ನು ಕೇಳುತ್ತಿಲ್ಲ. ನಾಳೆ ಬೆಳಿಗ್ಗೆ ಅವನು ನೈಲ್‌ ನದಿಯ ಹತ್ತಿರ ಬರುತ್ತಾನೆ. ನೀನು ಅಲ್ಲಿಗೆ ಹೋಗಿ, ಇಸ್ರಾಯೇಲ್ಯರನ್ನು ಹೋಗಲು ಬಿಡದೇ ಇದ್ದದ್ದರಿಂದ ನೈಲ್‌ ನದಿಯ ನೀರೆಲ್ಲಾ ರಕ್ತವಾಗುವುದು ಎಂದು ಹೇಳು’ ಅಂದನು. ಮೋಶೆ ಯೆಹೋವನ ಮಾತಿಗೆ ವಿಧೇಯನಾಗಿ ಫರೋಹನ ಹತ್ತಿರ ಹೋದನು. ಫರೋಹ ನೋಡ ನೋಡುತ್ತಿದ್ದಂತೆ ಆರೋನ ತನ್ನ ಕೋಲಿಂದ ನೀರನ್ನು ಹೊಡೆದನು. ಆಗ ನೀರೆಲ್ಲಾ ರಕ್ತವಾಯಿತು. ಅದರಲ್ಲಿರುವ ಮೀನುಗಳೆಲ್ಲಾ ಸತ್ತು, ಕೆಟ್ಟ ವಾಸನೆ ಬರಲು ಶುರುವಾಯಿತು. ನೈಲ್‌ ನದಿಯಲ್ಲಿ ಕುಡಿಯೋಕೆ ಒಳ್ಳೆ ನೀರು ಸ್ವಲ್ಪವೂ ಉಳಿಯಲಿಲ್ಲ. ಇಷ್ಟಾದರೂ ಫರೋಹ ಬುದ್ಧಿ ಕಲಿಯಲಿಲ್ಲ. ಅವನು ಇಸ್ರಾಯೇಲ್ಯರನ್ನು ಹೋಗಲು ಬಿಡಲಿಲ್ಲ.

ಏಳು ದಿನದ ನಂತರ ಯೆಹೋವನು ಮೋಶೆಗೆ ‘ನೀನು ನನ್ನ ಜನರನ್ನು ಬಿಡದಿದ್ದರೆ ಇಡೀ ದೇಶದಲ್ಲೆಲ್ಲ ಕಪ್ಪೆಗಳು ತುಂಬ್ಕೊಳ್ಳುತ್ತೆ ಎಂದು ಫರೋಹನಿಗೆ ಹೇಳು’ ಅಂದನು. ಆರೋನನು ತನ್ನ ಕೋಲನ್ನು ಚಾಚಲು ಇಡೀ ದೇಶ ಕಪ್ಪೆಗಳಿಂದ ತುಂಬಿತು. ಮನೆ, ಹಾಸಿಗೆ, ಪಾತ್ರೆ ಎಲ್ಲೆಲ್ಲೂ ಬರೀ ಕಪ್ಪೆಗಳೇ! ಆಗ ಫರೋಹ ಮೋಶೆಗೆ ‘ಶಿಕ್ಷೆಯನ್ನು ನಿಲ್ಲಿಸುವಂತೆ ಯೆಹೋವನಿಗೆ ಬೇಡಿಕೊ. ಆಗ ನಾನು ಇಸ್ರಾಯೇಲ್ಯರನ್ನು ಬಿಡುತ್ತೇನೆ’ ಅಂತ ಮಾತು ಕೊಟ್ಟ. ಆಗ ಯೆಹೋವನು ಶಿಕ್ಷೆಯನ್ನು ನಿಲ್ಲಿಸಿದನು. ಆಮೇಲೆ ಈಜಿಪ್ಟಿನವರು ಸತ್ತ ಕಪ್ಪೆಗಳನ್ನು ಅಲ್ಲಲ್ಲಿ ಗುಡ್ಡೆಹಾಕಿದ್ರು. ಇಡೀ ದೇಶದಲ್ಲಿ ಕೆಟ್ಟ ವಾಸನೆ ತುಂಬಿತು. ಆದರೆ ಈಗಲೂ ಫರೋಹ ಇಸ್ರಾಯೇಲ್ಯರನ್ನು ಹೋಗಲು ಬಿಡಲಿಲ್ಲ.

ಇದಾದ ಮೇಲೆ ಯೆಹೋವನು ಮೋಶೆಗೆ ‘ಆರೋನನು ಕೋಲಿನಿಂದ ಭೂಮಿಯನ್ನು ಹೊಡೆಯಲಿ. ಆಗ ಅದರ ಧೂಳು ಸೊಳ್ಳೆಗಳಾಗಿ ಅಥವಾ ಕಚ್ಚುವ ಚಿಕ್ಕ ಕೀಟಗಳಾಗುವವು’ ಎಂದನು. ಆರೋನ ಕೋಲನ್ನು ಚಾಚಲು ತಕ್ಷಣ ಎಲ್ಲಾ ಕಡೆ ಸೊಳ್ಳೆಗಳು ತುಂಬಿ ಹೋದವು. ಆಗ ಫರೋಹನ ಸ್ವಂತ ಜನರೇ ‘ಈ ಶಿಕ್ಷೆ ದೇವರಿಂದಲೇ ಬಂದಿದೆ’ ಅಂತ ಹೇಳಿದರು. ಆದರೆ ಫರೋಹ ಮಾತ್ರ ಇಸ್ರಾಯೇಲ್ಯರನ್ನು ಕಳುಹಿಸಲೇ ಇಲ್ಲ.

ಈಜಿಪ್ಟಿನಲ್ಲಿ ಬಂದ ಹತ್ತು ಶಿಕ್ಷೆಗಳಲ್ಲಿ ಮೊದಲ ಮೂರು ಶಿಕ್ಷೆಗಳು: ನೈಲ್‌ ನದಿ ರಕ್ತವಾಗಿದ್ದು, ಕಪ್ಪೆಗಳಿಂದ ಕಾಟ ಮತ್ತು ಸೊಳ್ಳೆಗಳಿಂದ ಬಂದ ಶಿಕ್ಷೆ

“ನನಗೆ ಎಷ್ಟು ಶಕ್ತಿಬಲ ಇದೆ ಅಂತ ಅವ್ರಿಗೆ ತೋರಿಸ್ತೀನಿ, ಅದನ್ನ ಅವ್ರಿಗೆ ಅರ್ಥ ಮಾಡಿಸ್ತೀನಿ, ನನ್ನ ಹೆಸ್ರು ಯೆಹೋವ ಅಂತ ಆಗ ಅವ್ರಿಗೆ ಗೊತ್ತಾಗುತ್ತೆ.”—ಯೆರೆಮೀಯ 16:21

ಪ್ರಶ್ನೆಗಳು: ಮೊದಲ ಮೂರು ಶಿಕ್ಷೆಗಳು ಯಾವುವು? ಯೆಹೋವನು ಈ ಶಿಕ್ಷೆಗಳನ್ನು ಯಾಕೆ ತಂದನು?

ವಿಮೋಚನಕಾಂಡ 5:1-18; 7:8–8:19; ನೆಹೆಮೀಯ 9:9, 10

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ