ಭಾಗ 4—ಪರಿಚಯ
ಈ ಭಾಗದಲ್ಲಿ ನಾವು ಯೋಸೇಫ, ಯೋಬ, ಮೋಶೆ ಹಾಗೂ ಇಸ್ರಾಯೇಲ್ಯರ ಬಗ್ಗೆ ಕಲಿಯುತ್ತೇವೆ. ಸೈತಾನನು ತುಂಬ ಕಷ್ಟಗಳನ್ನು ಕೊಟ್ಟರೂ ಇವರು ತಾಳಿಕೊಂಡರು. ಕೆಲವರು ಅನ್ಯಾಯ, ಸೆರೆವಾಸ, ಗುಲಾಮಗಿರಿ ಅಷ್ಟೇ ಅಲ್ಲ ಸಾವನ್ನೂ ಅನುಭವಿಸಿದರು. ಆದರೂ ಯೆಹೋವನು ಅವರನ್ನು ಬೇರೆಬೇರೆ ವಿಧಗಳಲ್ಲಿ ಕಾಪಾಡಿದನು. ಯೆಹೋವನ ಸೇವಕರು ಎಷ್ಟೇ ಕಷ್ಟ ಬಂದರೂ ನಂಬಿಕೆಯನ್ನು ಮಾತ್ರ ಬಿಡಲಿಲ್ಲ ಎಂದು ನಿಮ್ಮ ಮಗುವಿಗೆ ಮನಗಾಣಿಸಿ.
ಯೆಹೋವನು ಹತ್ತು ಶಿಕ್ಷೆಗಳನ್ನು ತರುವ ಮೂಲಕ ಈಜಿಪ್ಟಿನ ಎಲ್ಲಾ ದೇವ-ದೇವತೆಗಳಿಗಿಂತ ತಾನೇ ಅತ್ಯಂತ ಶಕ್ತಿಶಾಲಿ ಎಂದು ರುಜುಪಡಿಸಿದನು. ಯೆಹೋವನು ತನ್ನ ಜನರನ್ನು ಈ ಹಿಂದೆ ಹೇಗೆ ರಕ್ಷಿಸಿದನು ಹಾಗೂ ಈಗ ಹೇಗೆ ರಕ್ಷಿಸುವನು ಎಂದು ಮಗುವಿಗೆ ಒತ್ತಿಹೇಳಿ.