ಭಾಗ 5—ಪರಿಚಯ
ಕೆಂಪು ಸಮುದ್ರ ದಾಟಿ 2 ತಿಂಗಳು ಆದ ಮೇಲೆ ಇಸ್ರಾಯೇಲ್ಯರು ಸಿನಾಯಿ ಬೆಟ್ಟಕ್ಕೆ ಬಂದರು. ಅಲ್ಲಿ ಯೆಹೋವನು, ಇಸ್ರಾಯೇಲ್ಯರು ತನಗೆ ವಿಶೇಷ ಜನಾಂಗವಾಗಲು ಅವರೊಟ್ಟಿಗೆ ಒಂದು ಒಪ್ಪಂದವನ್ನ ಮಾಡಿಕೊಂಡನು. ಅವರನ್ನು ಸಂರಕ್ಷಿಸಿ ಅವರಿಗೆ ಬೇಕಾದ ಎಲ್ಲವನ್ನೂ ಕೊಟ್ಟನು. ಉದಾಹರಣೆಗೆ ತಿನ್ನಲು ಮನ್ನ ಕೊಟ್ಟ, ಅವರ ಬಟ್ಟೆ ಹರಿದು ಹೋಗದಂತೆ ನೋಡಿಕೊಂಡ, ವಾಸಿಸಲು ಸುರಕ್ಷಿತವಾದ ಸ್ಥಳವನ್ನೂ ಕೊಟ್ಟ. ನೀವೊಬ್ಬ ಹೆತ್ತವರಾಗಿದ್ದರೆ, ಯೆಹೋವನು ಯಾಕೆ ಇಸ್ರಾಯೇಲ್ಯರಿಗೆ ಆಜ್ಞೆಗಳನ್ನು ಕೊಟ್ಟನು? ಪವಿತ್ರ ಡೇರೆ ಮತ್ತು ಪುರೋಹಿತ ಏರ್ಪಾಡು ಯಾಕೆ ಮಾಡಿದನು? ಎಂದು ನಿಮ್ಮ ಮಕ್ಕಳು ಅರ್ಥಮಾಡಿಕೊಳ್ಳಲು ಸಹಾಯಮಾಡಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ದೀನರಾಗಿರುವುದು ಮತ್ತು ಯಾವಾಗಲೂ ಯೆಹೋವನಿಗೆ ನಿಷ್ಠರಾಗಿರುವುದರ ಮಹತ್ವವನ್ನು ಒತ್ತಿಹೇಳಿ.