ಪಾಠ 4
ವಚನಗಳ ಪರಿಚಯ
ಮತ್ತಾಯ 22:41-45
ಏನು ಮಾಡಬೇಕು: ಒಂದು ವಚನ ಓದುವ ಮುಂಚೆ ನಿಮ್ಮ ಕೇಳುಗರ ಮನಸ್ಸನ್ನು ಸಿದ್ಧಪಡಿಸಿ.
ಹೇಗೆ ಮಾಡಬೇಕು:
ಒಂದು ವಚನವನ್ನು ಯಾಕೆ ಓದಬೇಕೆಂದಿದ್ದೀರಿ ಎಂದು ಯೋಚಿಸಿ. ವಚನದಲ್ಲಿ ನೀವು ಒತ್ತಿಹೇಳಲಿರುವ ಅಂಶದ ಕಡೆ ಕೇಳುಗರ ಗಮನ ಹೋಗುವ ರೀತಿಯಲ್ಲಿ ಪ್ರತಿ ವಚನವನ್ನು ಪರಿಚಯಿಸಿ.
ನಿಮ್ಮ ಬೋಧನೆಗೆ ಬೈಬಲ್ ಆಧಾರವಾಗಿರಲಿ. ದೇವರಲ್ಲಿ ನಂಬಿಕೆ ಇರುವ ಜನರ ಜೊತೆ ಮಾತಾಡುವಾಗ, ಬೈಬಲನ್ನು ದೇವರ ವಾಕ್ಯ ಎಂದು ಹೇಳಿ. ಆಗ ನೀವು ಹೇಳುತ್ತಿರುವುದು ಮನುಷ್ಯರ ವಿಚಾರಗಳಲ್ಲ ಎಂದು ಗೊತ್ತಾಗುತ್ತದೆ.
ವಚನದ ಬಗ್ಗೆ ಆಸಕ್ತಿ ಹುಟ್ಟಿಸಿ. ಒಂದು ಪ್ರಶ್ನೆಯನ್ನು ಕೇಳಿ, ಉತ್ತರವನ್ನು ವಚನದಿಂದ ತೋರಿಸಿ. ಒಂದು ಸಮಸ್ಯೆಯ ಬಗ್ಗೆ ಹೇಳಿ, ಪರಿಹಾರವನ್ನು ವಚನದಿಂದ ತೋರಿಸಿ. ಒಂದು ತತ್ವವನ್ನು ಹೇಳಿ, ಅದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಘಟನೆಯನ್ನು ಬೈಬಲಿಂದ ತೋರಿಸಿ.