ಪಾಠ 20
ಸೂಕ್ತವಾದ ಸಮಾಪ್ತಿ
ಪ್ರಸಂಗಿ 12:13, 14
ಏನು ಮಾಡಬೇಕು: ನಿಮ್ಮ ನಿರೂಪಣೆಯ ಕೊನೆಯಲ್ಲಿ, ಕೇಳುಗರು ಕಲಿತ ವಿಷಯವನ್ನು ಒಪ್ಪಿಕೊಂಡು ಅನ್ವಯಿಸಿಕೊಳ್ಳಲು ಪ್ರೋತ್ಸಾಹಿಸಿ.
ಹೇಗೆ ಮಾಡಬೇಕು:
ನೀವು ಮಾತಾಡಿದ ವಿಷಯಕ್ಕೂ ಸಮಾಪ್ತಿಗೂ ಸಂಬಂಧ ಇರಬೇಕು. ಮುಖ್ಯಾಂಶಗಳನ್ನು ಮತ್ತು ಮುಖ್ಯ ವಿಷಯವನ್ನು ಪುನಃ ಹೇಳಿ ಅಥವಾ ಅದನ್ನು ಬೇರೆ ಮಾತುಗಳಲ್ಲಿ ಹೇಳಿ.
ಪ್ರಚೋದಿಸಿ. ಏನು ಮಾಡಬೇಕೆಂದು ಸ್ಪಷ್ಟವಾಗಿ ಹೇಳಿ. ಅದಕ್ಕಿರುವ ಬಲವಾದ ಕಾರಣಗಳನ್ನು ಕೊಡಿ. ನಿಶ್ಚಿತಾಭಿಪ್ರಾಯದಿಂದ ಮಾತಾಡಿ.
ಸರಳವಾಗಿರಲಿ, ಸಂಕ್ಷಿಪ್ತವಾಗಿರಲಿ. ಸಮಾಪ್ತಿಯಲ್ಲಿ ಹೊಸ ಮುಖ್ಯಾಂಶಗಳನ್ನು ತರಬೇಡಿ. ಏನು ಮಾಡಬೇಕೆಂದು ಸಾಧ್ಯವಾದಷ್ಟು ಕಡಿಮೆ ಪದಗಳಲ್ಲಿ ಸ್ಪಷ್ಟವಾಗಿ ಹೇಳಿ.