ಅದೃಷ್ಟದಲ್ಲಿ ನಂಬಿಕೆಯು ನಿಮ್ಮ ಬಾಳನ್ನು ಆಳುತ್ತದೆಯೆ?
ಸಪ್ಟಂಬರ 1988 ರಲ್ಲಿ ಆಪತ್ತು ಥಟ್ಟನೆ ಬಡಿಯಿತು. ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಮುಖಜ ಭೂಮಿಯಲ್ಲಿ ದಯಾ-ರಹಿತ ಜಲರಾಶಿ 30 ಅಡಿ ಮೇಲೆ ಉಕ್ಕಿಬಂದು ಬಾಂಗ್ಲಾದೇಶದ ಮುಕ್ಕಾಲು ಭಾಗವನ್ನು ಆವರಿಸಿತು. ಸಾವಿರಾರು ಜನರು ಮುಳುಗಿ ಸತ್ತು ಹೋದರು. 3 ಕೋಟಿ 70 ಲಕ್ಷ ಜನರು ಮನೆಯಿಲ್ಲದವರಾದರು. 40,000 ಮೈಲಿಗಿಂತಲೂ ಉದ್ದದ ರಸ್ತೆಗಳು ಕಾಣದೆ ಹೋದವು.
ಇಂಥ ನೆರೆಗಳು ಪದೇ ಪದೇ ಬಾಂಗ್ಲಾದೇಶವನ್ನು ಮುಳುಗಿಸಿರುವುದರಿಂದ ಒಂದು ವಾರ್ತಾಪತ್ರಿಕೆ ಈ ದೇಶವನ್ನು “ದುರದೃಷ್ಟದ ಮುಖಜ ಭೂಮಿ” ಎಂದು ಕರೆಯಿತು. ಈ ಚಿತ್ರಣ, ಅನೇಕರು ಇಂಥ ಮಹಾ ವಿಪತ್ತುಗಳನ್ನು ಯಾವ ವೀಕ್ಷಣದಲ್ಲಿ ನೋಡುತ್ತಾರೆಂದು ತೋರಿಸುತ್ತದೆ: ದುರದೃಷ್ಟ ಯಾ ಅದೃಷ್ಟ.
ಇತರರು ಅದೃಷವ್ಟು ಬಾಳನ್ನು ಆಳುವುದಿಲ್ಲವೆಂದು ಹೇಳಬಹುದಾದರೂ ಅದೃಷ್ಟವಾದವು ಭೂವ್ಯಾಪಕವಾಗಿದೆ. ಹಾಗಾದರೆ ಇಷ್ಟೊಂದು ಜನರು ಅದೃಷವ್ಟನ್ನೇಕೆ ನಂಬುತ್ತಾರೆ ಮತ್ತು ಅದೃಷ್ಟವಾದವೆಂದರೇನು?
ಧರ್ಮದ ಪಾತ್ರ
“ಅದೃಷ್ಟ” ಎಂಬ ಪದವು ಲ್ಯಾಟಿನಿನ ಫ್ಯಾಟಮ್ ಅಂದರೆ “ಮಾತಾಡಲಾಗಿರುವ ವಿಷಯ” ಎಂಬುದರಿಂದ ಬಂದಿದೆ.a ಘಟನೆಗಳನ್ನು ಮೊದಲಾಗಿಯೆ ನಿಶ್ಚಯಿಸಲಾಗಿದೆ ಮತ್ತು ಇದನ್ನು ಬದಲಾಯಿಸಲು ಮನುಷ್ಯರಿಗೆ ಶಕಿಯ್ತಿಲ್ಲ ಎಂದು ಅದೃಷ್ಟವಾದಿಗಳ ನಂಬಿಕೆ. ಈ ದೃಷ್ಟಿಕೋನವನ್ನು ವಿವಿಧ ಧರ್ಮಗಳು ಕೂಡ ಹರಡಿಸಿ ತಮ್ಮ ವಿಶ್ವಾಸಿಗಳಲ್ಲಿ ಕೋಟಿಗಟ್ಟಲೆ ಜನರ ಹೊರನೋಟಗಳನ್ನು ಅದರಂತೆ ರೂಪಿಸಿವೆ. ಲೋಕದ ಮೂರು ಅತಿ ದೊಡ್ಡ ಧರ್ಮಗಳ ಪರೀಕ್ಷೆಯು, ಅದೃಷವ್ಟು ಹಿಂದು ದೇವಸ್ಥಾನ, ಇಸ್ಲಾಮಿನ ಮಸೀದಿ ಮತ್ತು ಕ್ರೈಸ್ತ ಪ್ರಪಂಚದ ಚರ್ಚುಗಳಷ್ಟೆ ವೈವಿಧ್ಯದ ಮುಖಭಾವವನ್ನು ಧರಿಸಿಕೊಂಡಿದೆ ಎಂದು ತೋರಿಸುತ್ತದೆ.
ಜಗತ್ತಿನ 90 ಕೋಟಿ ಮುಸಲ್ಮಾನರು, ಅದೃಷವ್ಟು (ಕಿಸ್ಮತ್) ದೈವೇಷ್ಟದಿಂದ ನಿಶ್ಚಯಿಸಲ್ಪಡುತ್ತದೆಂದು ನಂಬುತ್ತಾರೆ.b ಕುರಾನ್ ಗ್ರಂಥ ಹೇಳುವುದು: “ಅಸ್ತಿತ್ವಕ್ಕೆ ಬರುವ ಮೊದಲೆ ಗ್ರಂಥದಲ್ಲಿ ಬರೆಯದಿರುವ. . . ಯಾವ ಕೆಡುಕೂ ಭೂಮಿಯ ಮೇಲೆ ಸಂಭವಿಸುವುದಿಲ್ಲ.” “ಮತ್ತು ಅಲ್ಲಾನ ಅನುಮತಿಯ ವಿನಹ ಆತ್ಮವು ಸಾಯುವುದಿಲ್ಲ; ಷರತ್ತು ನಿಶ್ಚಯಿಸಲ್ಪಟ್ಟಿದೆ.”—ಸೂರಾ 57:22; 3:145.
ಕರ್ಮವು ಲೋಕದ ಸುಮಾರು 70 ಕೋಟಿ ಹಿಂದುಗಳ ಜೀವನವನ್ನು ಪ್ರಭಾವಿಸುವ—ಅದೃಷ್ಟದ ಇನ್ನೊಂದು ಮುಖ—ಕಾರಣ ಕಾರ್ಯಭಾವವೆಂಬ ನಿಯಮ. ಒಬ್ಬ ಹಿಂದುವಿನ ಈಗಿನ ಜೀವಿತದಲ್ಲಿ ನಡೆಯುವ ಕಾರ್ಯಗಳು ಅವನ ಹಿಂದಿನ ಜನ್ಮದ ಕೃತ್ಯಗಳಿಂದ ನಿರ್ಣಯಿಸಲ್ಪಟ್ಟಿವೆ ಎಂದು ನಂಬಲಾಗುತ್ತದೆ. ಗರುಡ ಪುರಾಣವೆಂಬ ಪುರಾತನ ಹಿಂದು ಗ್ರಂಥವು ಹೇಳುವುದು: “ಈ ಸ್ವಯಮಿನ ಹಿಂದಿನ ಅಸ್ತಿತ್ವದ ಕೃತ್ಯಗಳು ಮುಂದಿನ ಶರೀರಿಯ ಪ್ರಕೃತಿಯನ್ನು ಮತ್ತು ಅದು ಬಲಿಬೀಳಲಿರುವ ಕಾಯಿಲೆಗಳ ಪ್ರಕೃತಿಯನ್ನು—ಅದು ಶಾರೀರಿಕವಾಗಲಿ ಮಾನಸಿಕವಾಗಲಿ—ನಿರ್ಧರಿಸುತ್ತದೆ. . . ಮನುಷ್ಯನಿಗೆ ಜೀವನದಲ್ಲಿ ಯಾವುದು ವಿಧಿಸಲ್ಪಟ್ಟಿದೆಯೆ ಅದೇ ದೊರಕುತ್ತದೆ.”
ಹಾಗಾದರೆ, ಸುಮಾರು 170 ಕೋಟಿ ಕ್ರೈಸ್ತ ಪ್ರಪಂಚದ ಸದಸ್ಯರ ವಿಷಯವೇನು? ಕೆಲವರು ಅದೃಷ್ಟದ ಸ್ಥಾನದಲ್ಲಿ ದೇವರನ್ನು ಮತ್ತು ಅದೃಷ್ಟವಾದದ ಸ್ಥಾನದಲ್ಲಿ ಆದಿ ನಿರ್ಧಾರವನ್ನು ಭರ್ತಿ ಮಾಡಿದ್ದಾರೆಂದು ಒಪ್ಪಿಕೊಳ್ಳೋಣ. ಆದರೆ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಎಂಡ್ ಎಥಿಕ್ಸ್ ಒಪ್ಪಿಕೊಳ್ಳುವುದು: “ಕ್ರೈಸ್ತತ್ವವು. . . ಅದೃಷ್ಟದ ನಂಬಿಕೆಯಿಂದ ಪೂರ್ಣ ಸ್ವತಂತ್ರವಾಗಿದೆಯೆಂದು ಹೇಳಸಾಧ್ಯವಿಲ್ಲ. ಕೆಲವು ಪಂಗಡಗಳು ಇನ್ನೂ 16ನೆಯ ಶತಮಾನದ ಸುಧಾರಕ ಮಾರ್ಟಿನ್ ಲೂಥರನ ಮಾತುಗಳನ್ನು ಪ್ರತಿಧ್ವನಿಸುತ್ತವೆ. ಅವನು ಒಮ್ಮೆ, ಮನುಷ್ಯನು “ಮರದ ತುಂಡು, ಬಂಡೆ, ಮಣ್ಣಿನ ಮುದ್ದೆ ಮತ್ತು ಉಪ್ಪಿನ ಕಂಬದಷ್ಟೆ ಅಸ್ವತಂತ್ರನು” ಎಂದು ಹೇಳಿದನು.
ನಾಣ್ಯವನ್ನು ಮೇಲಕ್ಕೆ ಚಿಮ್ಮುವುದು ಮತ್ತು ನಕ್ಷತ್ರ ವಾಚನ
ಇಂಥ ಬಗ್ಗದ ಅಭಿಪ್ರಾಯಗಳು ಈಗ ಕ್ರೈಸ್ತ ಪ್ರಪಂಚದ ಮುಖ್ಯ ಪಂಗಡಗಳ ನಂಬಿಕೆಗಳ ಹಿನ್ನೀರಿಗೆ ಬಿದ್ದಿವೆಯಾದರೂ, ಒಬ್ಬ ದೇವತಾ ಶಾಸ್ತ್ರಜ್ಞನು, ಅದರ ಅನೇಕ ಸದಸ್ಯರು ಈ ನಂಬಿಕೆಯನ್ನು “ಅದರ ಐಹಿಕ ರೂಪದಲ್ಲಿ” ಅಂಗೀಕರಿಸುತ್ತಾರೆಂದು ಒಪ್ಪಿಕೊಳ್ಳುತ್ತಾನೆ. ಈ ರೂಪದಲ್ಲಿ ಅದೃಷವ್ಟು ಕ್ಷಣಿಕವಾದ ನಸುನಗೆ ಬೀರಿ, ಭಾಗ್ಯವೆಂಬ ಹೆಸರನ್ನು ತೆಗೆದುಕೊಳ್ಳಬಹುದು. ಅನೇಕರು ಒಮ್ಮೊಮ್ಮೆ ನಾಣ್ಯವನ್ನು ಮೇಲಕ್ಕೆ ಚಿಮ್ಮಿ ಭಾಗ್ಯ ಯಾ ಅದೃಷ್ಟಕ್ಕೆ ವಿನಂತಿ ಮಾಡಿಕೊಳ್ಳುವುದನ್ನು ನೀವು ನೋಡಿದ್ದಿರಬಹುದು. ಇದೊಂದು ಕೇವಲ ಪದ್ಧತಿಯೆಂದು ಹೇಳಿ ಅದನ್ನು ಅವರು ದಾಟಿಸಬಹುದಾದರೂ ಅವರು ಅದನ್ನು ಮಾಡುತ್ತ ಮುಂದುವರಿಯುತ್ತಾರೆ. ಮತ್ತು ಒಮ್ಮೊಮ್ಮೆ ಅದು ಕೆಲಸ ನಡೆಸುತ್ತದೆಂದು ಅವರಿಗೆ ಕಾಣಬಹುದು. ದೃಷ್ಟಾಂತಕ್ಕೆ, ಅಮೆರಿಕದಲ್ಲಿ ಜೀವಿಸಿದ್ದ ಒಬ್ಬನಿಗೆ ಲಾಟರಿ ಟಿಕೆಟನ್ನು ಕೊಂಡ ಮೇಲೆ, ಅಧ್ಯಕ್ಷರ ಚಿತ್ರ ಮೇಲ್ಬದಿಯಲ್ಲಿದ್ದ ಒಂದು ನಾಣ್ಯ ಸಿಕ್ಕಿತೆಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತು. ಅವನಂದದ್ದು: “ನನಗೆ ಈ ಚಿತ್ರ ಮೇಲ್ಬದಿಯಲ್ಲಿದ್ದ ನಾಣ್ಯ ಸಿಕ್ಕಿದಾಗೆಲ್ಲ ಒಳ್ಳೆಯದೆ ಸಂಭವಿಸಿದೆ.” ಈ ಸಂದರ್ಭದಲ್ಲಿ ಅವನಿಗೆ 27.5 ಮಿಲ್ಯ ಡಾಲರ್ ಲಭಿಸಿತು. ಹಾಗಾದರೆ ಭಾಗ್ಯ ಯಾ ಅದೃಷ್ಟದಲ್ಲಿ ಅವನಿಗಿದ್ದ ನಂಬಿಕೆ ಕಡಮೆಯಾಗಿದೆಯೆಂದು ನೀವೆಣಿಸುತ್ತೀರೊ?
ಕೆಲವರು ನಾಣ್ಯ ಚಿಮ್ಮುವ ಕುರಿತು ಒಳಗೊಳಗೆ ನಗಬಹುದು. ಆದರೂ ಅವರ ಭವಿಷ್ಯ ನಕ್ಷತ್ರಗಳ ಚಲನೆಯಿಂದ ಆದಿ ನಿರ್ಧರಿಸಲ್ಪಟ್ಟಿದೆ—ಅದೃಷ್ಟದ ಇನ್ನೊಂದು ಮುಖ—ಎಂದು ಅವರು ನಂಬಬಹುದು. ಉತ್ತರ ಅಮೆರಿಕದಲಿಯ್ಲೆ ಸುಮಾರು 1,200 ವೃತ್ತಪತ್ರಕೆಗಳಲ್ಲಿ ಜೋತಿಷದ ಅಂಕಣಗಳಿವೆ. ಒಂದು ಸಂಖ್ಯಾಸಂಗ್ರಹಣ, ಅಮೆರಿಕದ ಯುವಜನರಲ್ಲಿ 55 ಪ್ರತಿಶತ, ಜೋತಿಷವು ಕಾರ್ಯಸಾಧಕವೆಂದೆಣಿಸುತ್ತಾರೆಂದು ತೋರಿಸಿತು.
ಹೌದು, ಅದನ್ನು ಕಿಸ್ಮತ್, ಕರ್ಮ, ದೇವರು, ಭಾಗ್ಯ ಯಾ ನಕ್ಷತ್ರ—ಹೀಗೆ ಏನೆಂದು ಕರೆದರೂ ಅದೃಷ್ಟದಲ್ಲಿ ನಂಬಿಕೆ ಭೂವ್ಯಾಪಕವಾಗಿದೆ. ದೃಷ್ಟಾಂತಕ್ಕೆ, ಇಲ್ಲಿ ಕೊಡಲಾಗಿರುವ ಎಲ್ಲ ಐತಿಹಾಸಿಕ ವ್ಯಕ್ತಿಗಳಲ್ಲಿ ಕೇವಲ ಒಬ್ಬನೆ ಅದೃಷ್ಟವಾದದಲ್ಲಿ ನಂಬಲಿಲ್ಲವೆಂದು ನಿಮಗೆ ತಿಳಿದಿತ್ತೆ? ಅದು ಯಾರು? ಮತ್ತು ಅದೃಷ್ಟದ ಕುರಿತ ಅವನ ದೃಷ್ಟಿಕೋನ ನಿಮ್ಮನ್ನು ಹೇಗೆ ಪ್ರಭಾವಿಸಬಲ್ಲದು? (w90 8/15)
[ಅಧ್ಯಯನ ಪ್ರಶ್ನೆಗಳು]
a ದಿ ಎನ್ಸೈಕ್ಲೊಪೀಡಿಯಾ ಆಫ್ ದ ರಿಲಿಜನ್, ತನ್ನ 5ನೇ ಸಂಚಿಕೆ 290ನೇ ಪುಟದಲ್ಲಿ ಹೇಳುವುದು: “ಅದೃಷ್ಟ. ಲ್ಯಾಟಿನಿನ ಫ್ಯಾಟಮ್ ಎಂಬುದರಿಂದ ಬಂದಿದ್ದು (ಹೇಳಲ್ಪಟ್ಟ ಒಂದು ವಿಷಯ, ಒಂದು ಪ್ರವಾದನಾ ಘೋಷಣೆ, ದಿವ್ಯವಾಣಿ, ಒಂದು ದೈವಿಕ ನಿರ್ಧಾರ ಆಗಿರುತ್ತದೆ.)”
b “ಕಿಸ್ಮತ್—ಸರ್ವ-ಶಕನ್ತ ಚಿತ್ತಕ್ಕೆ ಸೂಚಿಸಲ್ಪಟ್ಟಿರುವುದರಲ್ಲಿ ಮಾತ್ರವೇ ಇದು ಅದೃಷದ್ಟಿಂದ ಬೇರೆಯಾಗಿದೆ. ಈ ಎರಡಕ್ಕೆ ವಿರುದ್ಧವಾಗಿ ಮಾನವನು ಮಾಡುವ ಎಲ್ಲಾ ಅಪ್ಪೀಲುಗಳೂ ವ್ಯರ್ಥವು.”—ಹೇಸ್ಟಿಂಗ್ಸ್ ಎನ್ಸೈಕ್ಲೊಪೀಡಿಯಾ ಅಫ್ ರಿಲಿಜನ್ ಎಂಡ್ ಎಥಿಕ್ಸ್, ಸಂಚಿಕೆ 5, ಪುಟ 774.
[ಪುಟ 4 ರಲ್ಲಿರುವ ಚೌಕ]
ಅದೃಷ್ಟವಾದದಲ್ಲಿ ಯಾರು ನಂಬಿದರು?
ಮಸ್ಕರೀಪುತ್ರ ಗೋಸಾಲ ಯೇಸು ಕ್ರಿಸ್ತ
ಭಾರತದ ಸನ್ಯಾಸಿ, ಸಾ.ಶಾ.ಪೂ. ಕ್ರೈಸ್ತತ್ವದ ಸ್ಥಾಪಕ, ಸಾ.ಶ.
6ನೆಯ⁄5ನೆಯ ಶತಮಾನ. 1ನೆಯ ಶತಮಾನ.
ಝೀನೊ ಆಫ್ ಸಿಟಿಯಮ್ ಜಾಹ್ಮ್, ಸಫ್ವಾನ್ನ ಪುತ್ರ
ಗ್ರೀಕ್ ತತ್ವಜ್ಞಾನಿ, ಸಾ.ಶಾ.ಪೂ. ಮುಸ್ಲಿಮ್ ಬೋಧಕ, ಸಾ.ಶ.
4ನೆಯ⁄3ನೆಯ ಶತಮಾನ. 8ನೆಯ ಶತಮಾನ.
ಪ್ಯೂಬಿಯ್ಲಸ್ ವರ್ಜಿಲಿಯಸ್ ಮಾರೊ ಜಾನ್ ಕ್ಯಾಲ್ವಿನ್
ರೋಮನ್ ಕವಿ, ಸಾ.ಶಾ.ಪೂ. ಫ್ರೆಂಚ್ ದೇವತಾ ಶಾಸ್ತ್ರಜ್ಞ
1ನೆಯ ಶತಮಾನ. ಮತ್ತು ಸುಧಾರಕ, ಸಾ.ಶ.
16ನೆಯ ಶತಮಾನ.