ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 12/1 ಪು. 31
  • ನಿಮಗೆ ಜ್ಞಾಪಕವಿದೆಯೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ಜ್ಞಾಪಕವಿದೆಯೆ?
  • ಕಾವಲಿನಬುರುಜು—1991
  • ಅನುರೂಪ ಮಾಹಿತಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1992
  • ನೀವು ತ್ರಯೃಕ್ಯವನ್ನು ನಂಬ ಬೇಕೋ? ಎಂಬ ಬ್ರೋಷರ್‌ಗಾಗಿ ಅಭ್ಯಾಸದ ಪ್ರಶ್ನೆಗಳು
    1990 ನಮ್ಮ ರಾಜ್ಯದ ಸೇವೆ
  • ತ್ರಯೈಕ್ಯ—ಬೈಬಲಿನಲ್ಲಿ ಅದು ಕಲಿಸಲ್ಪಟ್ಟಿದೆಯೇ?
    ಕಾವಲಿನಬುರುಜು—1993
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1992
ಇನ್ನಷ್ಟು
ಕಾವಲಿನಬುರುಜು—1991
w91 12/1 ಪು. 31

ನಿಮಗೆ ಜ್ಞಾಪಕವಿದೆಯೆ?

ಇತ್ತೀಚಿನ ಕಾವಲಿನಬುರುಜು ಸಂಚಿಕೆಗಳಿಗೆ ನೀವು ಜಾಗರೂಕತೆಯ ಆಲೋಚನೆ ಕೊಟ್ಟಿದ್ದೀರೊ? ಹಾಗಿರುವಲ್ಲಿ, ನೀವು ಈ ಕೆಳಗಿನವುಗಳನ್ನು ಪ್ರಾಯಶಃ ಜ್ಞಾಪಿಸಿಕೊಳ್ಳಲು ಸಮರ್ಥರಾಗಿದ್ದೀರಿ:

◻ ಯೆಹೋವನ ಸಾಕ್ಷಿಗಳು ಕಲಿಸುವ ವಿಧ ಮತ್ತು ಕ್ರೈಸ್ತ ಪ್ರಪಂಚದ ಪುರೋಹಿತರು ಕಲಿಸುವ ವಿಧದ ಮಧ್ಯೆ ಯಾವ ದೊಡ್ಡ ವ್ಯತ್ಯಾಸವಿದೆ?

ಯೆಹೋವನ ಜನರು ದೇವರ ವಾಕ್ಯದ ಅಧಿಕಾರದಿಂದ ಬೋಧಿಸುವಾಗ ಕ್ರೈಸ್ತ ಪ್ರಪಂಚದ ಪುರೋಹಿತರು ತಮ್ಮ ಬೋಧನೆಯನ್ನು ಬಾಬೆಲ್‌ ಮತ್ತು ಈಜಿಪ್ಟಿನಿಂದ ಬಂದಿರುವ ವಿಧರ್ಮಿ ಸಂಪ್ರದಾಯಗಳ ಮೇಲೆ ಆಧಾರ ಮಾಡುತ್ತಾರೆ.—11⁄91, ಪುಟ 25.

◻ ಗಲಾತ್ಯ 5:22, 23ರಲ್ಲಿ ಹೇಳಿರುವ ದೇವರಾತ್ಮದ ಒಂಭತ್ತು ಫಲಗಳಲ್ಲಿ ಪ್ರೀತಿ ಮಹತ್ತಮವಾದುದೇಕೆ?

ದೇವರಾತ್ಮದ ಇತರ ಎಂಟು ಫಲಗಳು, ಪ್ರಥಮವಾಗಿ ಹೇಳಿರುವ ಪ್ರೀತಿಯ ರೂಪಗಳು, ಯಾ ವಿವಿಧ ಮುಖಗಳು. ಆತ್ಮದ ಇತರ ಎಲ್ಲ ಫಲಗಳು ಅವಶ್ಯವಾಗಿರುವ ಗುಣಗಳಾದರೂ ನಮ್ಮಲ್ಲಿ ಪ್ರೀತಿಯ ಕೊರತೆಯಿರುವಲ್ಲಿ ಇವುಗಳಿಂದ ನಮಗೆ ಪ್ರಯೋಜನವಾಗದು. (1 ಕೊರಿಂಥ 13:3)—12⁄91, ಪುಟ 14.

◻ ಯೇಸು ತನ್ನ ಶಿಷ್ಯರಿಗೆ, “ನಮ್ಮನ್ನು ಶೋಧನೆಯೊಳಗೆ ಸೇರಿಸ” ಬೇಡ ಎಂದು ಪ್ರಾರ್ಥಿಸಬೇಕೆಂದು ಹೇಳಿದಾಗ ಯಾವ ಅರ್ಥದಲ್ಲಿ ಹೇಳಿದನು? (ಮತ್ತಾಯ 6:13)

ನಾವು ಪಾಪ ಮಾಡುವಂತೆ ಯೆಹೋವನು ನಮ್ಮನ್ನು ಶೋಧನೆಗೊಳಪಡಿಸುತ್ತಾನೆಂದು ಈ ಮಾತುಗಳಿಂದ ಅರ್ಥ ಮಾಡಿಕೊಳ್ಳಬಾರದು. ಬದಲಿಗೆ, ನಾವು ಯೆಹೋವನಿಗೆ ಅವಿಧೇಯರಾಗಲು ಶೋಧನೆ ಯಾ ಒತ್ತಡಕ್ಕೊಳಗಾಗುವಾಗ ಅದಕ್ಕೆ ಬಲಿಬೀಳಲು ಅನುಮತಿಸದಂತೆ ನಾವು ಯೆಹೋವನನ್ನು ಕೇಳಬಹುದು. ತಾಳಲು ತೀರ ಕಠಿಣವಾಗಿರುವ ಯಾವ ಶೋಧನೆಯೂ ನಮ್ಮನ್ನು ಸೋಲಿಸದಂತೆ ನಮ್ಮ ಹೆಜ್ಜೆಗಳನ್ನು ನಡೆಸುವಂತೆ ನಾವು ನಮ್ಮ ಪಿತನನ್ನು ಪ್ರಾರ್ಥಿಸಬಹುದು. (1 ಕೊರಿಂಥ 10:13)—9⁄91, ಪುಟ 20.

◻ ಒಬ್ಬ ವ್ಯಕ್ತಿ ಯಾವಾಗ ದೀಕ್ಷಾಸ್ನಾನ ಹೊಂದಬೇಕು?

ದೀಕ್ಷಾಸ್ನಾನವು ಒಬ್ಬನು ಯೆಹೋವನಿಗೆ ಯೇಸು ಕ್ರಿಸ್ತನ ಮೂಲಕ ದೇವರ ಚಿತ್ತವನ್ನು ಮಾಡಲು ಪೂರ್ಣವಾದ, ಮೀಸಲಲ್ಲದ, ಮತ್ತು ಶರ್ತರಹಿತ ಸಮರ್ಪಣೆಯನ್ನು ಮಾಡುವಾಗ ತೆಗೆದುಕೊಳ್ಳತಕ್ಕ ಹೆಜ್ಜೆಯಾಗಿದೆ.—9⁄91, ಪುಟ 31.

◻ ನೋಹನ ನಂಬಿಕೆ ಜಗತ್ತನ್ನು ಹೇಗೆ ದಂಡನೆಗೆ ಗುರಿ ಮಾಡಿತು? (ಇಬ್ರಿಯ 11:7)

ನೋಹನ ವಿಧೇಯತೆ ಮತ್ತು ನೀತಿಯ ವರ್ತನೆ, ಅವನು ಮತ್ತು ಕುಟುಂಬವಲ್ಲದೆ ಇತರರೂ ತಮ್ಮ ಜೀವನರೀತಿಯನ್ನು ಬದಲಾಯಿಸುತ್ತಿದ್ದಲ್ಲಿ ಜಲಪ್ರಲಯವನ್ನು ಪಾರಾಗುತ್ತಿದ್ದರೆಂದು ತೋರಿಸಿತು. ತನ್ನ ಸ್ವಂತ ಅಪೂರ್ಣ ಶರೀರ, ಸುತ್ತಲಿದ್ದ ಲೋಕ ಮತ್ತು ಪಿಶಾಚನ ಒತ್ತಡದ ಎದುರಿನಲ್ಲೂ ನೋಹನು ದೇವರನ್ನು ಮೆಚ್ಚಿಸುವ ಜೀವನರೀತಿ ಸಾಧ್ಯವೆಂದು ರುಜುಪಡಿಸಿದನು.—10⁄91, ಪುಟ 19.

◻ ಒಬ್ಬ ಕ್ರೈಸ್ತನು ಶಾರೀರಿಕ ರೋಗ, ವ್ಯಾಕುಲ ವ್ಯಾಧಿ ಮತ್ತು ಆರ್ಥಿಕ ಕಷ್ಟಗಳನ್ನು ನಿಭಾಯಿಸುವಾಗ ತನ್ನ ಸಂತೋಷವನ್ನು ಹೇಗೆ ಇಟ್ಟುಕೊಳ್ಳಬಲ್ಲನು?

ದೇವರ ವಾಕ್ಯ ಬೇಕಾದ ಶಮನ ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ. ಕೀರ್ತನೆಗಳನ್ನು ಓದುವಲ್ಲಿ ಯಾ ಕೇಳುವಲ್ಲಿ ಹೆಚ್ಚು ಅವಶ್ಯವಿರುವ ಚೈತನ್ಯ ದೊರೆಯಬಲ್ಲದು. ದಾವೀದನು ನಮಗೆ ಸಲಹೆ ಕೊಟ್ಟದ್ದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರ ಮಾಡುವನು.” ಯೆಹೋವನು ನಿಶ್ಚಯವಾಗಿಯೂ “ಪ್ರಾರ್ಥನೆಯನ್ನು ಕೇಳುವವನು” ಎಂದೂ ಅವನು ನಮಗೆ ಆಶ್ವಾಸನೆ ನೀಡಿದನು. (ಕೀರ್ತನೆ 55:22; 65:2) ಸಾಹಿತ್ಯಗಳು ಮತ್ತು ಸಭಾ ಹಿರಿಯರ ಮೂಲಕ ಯೆಹೋವನ ಸಂಘಟನೆ ನಾವು ಸಮಸ್ಯೆಗಳೊಂದಿಗೆ ಹೆಣಗಾಡುವಂತೆ ಸಹಾಯ ಮಾಡಲು ಸದಾ ಸಿದ್ಧವಿದೆ.—4⁄91, ಪುಟಗಳು 14-15.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ