ಭಕ್ತಿಯಲ್ಲಿ ಅವರು ಅವಶಿಷ್ಟಗಳನ್ನು ಬಳಸಲು ಕಾರಣ
ಇಟೆಲಿಯ ನೇಪಲ್ಸ್. ನಮ್ಮ ಸಾಮಾನ್ಯ ಶಕದ 18ನೇ ಶತಮಾನದ ಆರಂಭದ ವರ್ಷಗಳಲ್ಲಿ ನೀವಲ್ಲಿ ಇದಿರ್ದೆಂದು ಊಹಿಸಿಕೊಳ್ಳಿರಿ. ಅದರ ಕತೀಡ್ರಲ್ನಲ್ಲಿ, ಐರಿಶ್ ತತ್ವಜ್ಞಾನಿ ಜಾರ್ಜ್ ಬರ್ಕಲೆ ಒಂದು ಪ್ರಖ್ಯಾತ ಧಾರ್ಮಿಕ ಅವಶಿಷ್ಟದ ಮುಂದೆ ನಿಂತಿರುತ್ತಾನೆ. ಅವನು ಸಂದೇಹ ದೃಷ್ಟಿಯಿಂದ ಕ್ಯಾಥ್ಲಿಕ್ ಸಂತನಾದ “ಸಾನ್ ಜನ್ನಾರೊ,” “ಸಂತ” ಜಾನರ್ವಿಯಸ್ನ ರಕ್ತದ ದ್ರವೀಕರಣದ ತೋರಿಕೆಯನ್ನು ನೋಡುತ್ತಾನೆ.
ಈ ಸಂಬಂಧದಲ್ಲಿ ನೇಪೆಲ್ಸ್ ಕೊಂಚವೂ ಬದಲಾಗಿರುವುದಿಲ್ಲ. ದೃಷ್ಟಾಂತಕ್ಕಾಗಿ, ಇತ್ತೀಚಿನ ಒಂದು ಸಂದರ್ಭದ ಕೆಟ್ಟ ಹವೆಯಲ್ಲೂ, ಚರ್ಚು ಪುನಃ ಜನರಿಂದ ಕಿಕ್ಕಿರಿದು ತುಂಬಿತ್ತು, ಪ್ರತ್ಯಕ್ಷವಾಗಿ ಇನ್ನೊಂದು ಅದ್ಭುತವು ಸಂಭವಿಸಿದ್ದಂತೆ ತೋರುತ್ತಿತ್ತು. ಅವಶಿಷ್ಟ ಮತ್ತು ಕಾರ್ಡಿನಲ್ ಆರ್ಚ್ಬಿಶಪರಿಂದ ತರಲ್ಪಟ್ಟ ಮೆರವಣಿಗೆಯನ್ನು ಹರ್ಷೋಲ್ಲಾಸದಿಂದ ಅಭಿನಂದಿಸಲಾಯಿತು. ಹೌದು, “ಸಾನ್ ಜನ್ನಾರೊ”ನ ರಕ್ತವು ದ್ರವೀಕರಿಸುವಂತೆ ತೋರಿದ್ದ ಅನೇಕ ಸಂದರ್ಭಗಳಲ್ಲಿ ಇದು ಇನ್ನೊಂದು. ಈ ಧಾರ್ಮಿಕ ಅವಶಿಷ್ಟವನ್ನು ಒಳಗೂಡಿರುವ ಅದ್ಭುತಗಳು 14ನೇ ಶತಮಾನದಿಂದ ಸಂಭವಿಸುತ್ತಾ ಇವೆಂದು ವರದಿಯಾಗಿದೆ.
ಕ್ಯಾಥ್ಲಿಕ್ ಸಂಪ್ರದಾಯಕ್ಕೆ ಅನುಸಾರ, ಒಂದು ಅವಶಿಷ್ಟವು (ಲ್ಯಾಟಿನ್ ರಿಲಿನ್ಕೆರ್ವ್, “ಹಿಂದೆ ಬಿಟ್ಟು ಹೋಗು” ಎಂದರ್ಥ) ಸಂತನಾದ ಒಬ್ಬ ವ್ಯಕ್ತಿಯಿಂದ ಹಿಂದೆ ಬಿಟ್ಟುಹೋದ ವಸ್ತುವೆಂದು ಪರಿಗಣಿಸಲಾಗುತ್ತದೆ. ಡೆಟ್ಸೆನಾರಿಯೊ ಎಕಿಝ್ಲಿಯಾಸಿಕ್ಟೊ ಹೇಳುವ ಪ್ರಕಾರ, “ಅವಶಿಷ್ಟಗಳು ಖಚಿತಾರ್ಥದಲ್ಲಿ ಆ ಸಂತನ ದೇಹ ಅಥವಾ ದೇಹದ ಭಾಗ ಮತ್ತು ಅವನ ಭಸ್ಮವಾಗಿರುತ್ತದೆ. ವಿಸ್ತಾರಾರ್ಥದಲ್ಲಿ ಅದು ಸಂತನ ದೇಹದ ಸಂಪರ್ಕದೊಳಗೆ ಬಂದ ಒಂದು ವಸ್ತು, ಆದ್ದರಿಂದ ಭಕ್ತಿಗೆ ಅರ್ಹವಾಗಿದೆ.”
ಪೋಪರ ಅಂಗೀಕಾರ
ನಿಸ್ಸಂದೇಹವಾಗಿ, ಅನೇಕರು ಧಾರ್ಮಿಕ ಅವಶಿಷ್ಟಗಳಿಗೆ ಭಕ್ತಿಪೂರ್ವಕ ಮನ್ನಣೆಯನ್ನು ಕೊಡುವುದು ಯಾಕೆಂದರೆ ಅವುಗಳಲ್ಲಿ ಒಳಗೂಡಿದೆಯೆಂದು ಹೇಳಲ್ಪಡುವ ಅದ್ಭುತಗಳ ಕಾರಣದಿಂದಲೇ. ಪೋಪರು ಅದಕ್ಕೆ ಕೊಡುವ ಅಂಗೀಕಾರವು ಕೂಡಾ ಅದರ ಜನಪ್ರಿಯತೆಗೆ ಇನ್ನೊಂದು ಕಾರಣವಾಗಿ ತೋರಿಬರುತ್ತದೆ.
ಕಳೆದ 70 ವರ್ಷಗಳಲ್ಲಿ ಕಡಿಮೆಪಕ್ಷ ನಾಲ್ವರು ಪೋಪರು ಅವಶಿಷ್ಟಗಳಿಗೆ ವಿಶೇಷ ಗಮನವನ್ನು ಕೊಟ್ಟಿರುತ್ತಾರೆ. ಪೋಪ್ ಪಾಯಸ್ XII, ಅವರಿಗಿಂತ ಮೊದಲಿನ ಪಾಯಸ್ XI ನಂತೆ “ಲಿಸಿಯಕ್ಸ್ನ ಸಂತಳ ಅವಶಿಷ್ಟವನ್ನು ತನ್ನೊಂದಿಗೆ ಇಡುತ್ತಿದ್ದರು” ಎಂದು ಒಂದು ಕ್ಯಾಥ್ಲಿಕ್ ಪತ್ರಿಕೆಯು ತಿಳಿಸುತ್ತದೆ. ಅದೇ ರೀತಿ ಪೌಲ್ VI “ಅಪೊಸ್ತಲ [ಥೋಮಸ್]ನ ಒಂದು ಬೆರಳನ್ನು ತನ್ನ ಅಧ್ಯಯನ ಕೊಠಡಿಯ ಮೇಜಿನ ಮೇಲೆ ಇಟ್ಟಿದ್ದರು,” ಮತ್ತು ಜಾನ್ ಪೌಲ್ II “ತನ್ನ ಸ್ವಂತ ಕೊಠಡಿಯಲ್ಲಿ “ಸಂತ ಬೆನಡಿಕ್ಟ್ ಮತ್ತು ಸಂತ ಆ್ಯಂಡ್ರೂ” ಇವರ ಕಳೇಬರಗಳ . . . ಮುರುಕುಗಳನ್ನು ಇಡುತ್ತಾರೆ.”—30 ಜೋರ್ನಿ, ಮಾರ್ಚ್ 1990, ಪುಟ 50.
ಪೋಪರುಗಳ ಇಂಥ ಅನುಮೋದನೆಗಳ ನಡುವೆ ಖಾಸಗಿ ಮತ್ತು ಸಾರ್ವಜನಿಕ ಪೂಜೆಗಾಗಿ ಅವಶಿಷ್ಟಗಳ ಬೇಡಿಕೆಗಳು ಹೆಚ್ಚುತ್ತಿರುವುದೇನೂ ಆಶ್ಚರ್ಯವಲ್ಲ. ಆದರೆ ಧಾರ್ಮಿಕ ಅವಶಿಷ್ಟಗಳಿಗೆ ಭಕ್ತಿಯು ದೇವರನ್ನು ಮೆಚ್ಚಿಸುತ್ತದೋ? (w91 11/15)
[ಪುಟ 3 ರಲ್ಲಿರುವ ಚಿತ್ರ]
ರೆಲಿಕರ್ವಿ, ಧಾರ್ಮಿಕ ಅವಶಿಷ್ಟಗಳು ಕಾದಿಡಲ್ಪಡುವ ಒಂದು ಅವಶಿಷ್ಟ-ಸಂಪುಟ
[ಕೃಪೆ]
Courtesy of The British Museum