ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 2/15 ಪು. 7
  • ‘ಅಲ್ಲಲ್ಲಿ ಸೋಂಕು ರೋಗಗಳು’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಅಲ್ಲಲ್ಲಿ ಸೋಂಕು ರೋಗಗಳು’
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ವೈರಸ್‌ ಅಪಾಯ—ನಿಭಾಯಿಸುವ ಉಪಾಯ
    ಇತರ ವಿಷಯಗಳು
  • ಕೊಲೆಗಡುಕ ವೈರಸ್‌ ಸಾಯಿರನ್ನು ಬಾಧಿಸುತ್ತದೆ
    ಎಚ್ಚರ!—1996
  • ಏಡ್ಸ್‌—ಅದರೊಂದಿಗೆ ಹೋರಾಡುವ ವಿಧ
    ಎಚ್ಚರ!—1998
  • ಏಯ್ಡ್ಸ್‌ ಹದಿಹರೆಯದವರಿಗೆ ಆಪತ್ಕಾಲ
    ಎಚ್ಚರ!—1992
ಇನ್ನಷ್ಟು
ಕಾವಲಿನಬುರುಜು—1992
w92 2/15 ಪು. 7

‘ಅಲ್ಲಲ್ಲಿ ಸೋಂಕು ರೋಗಗಳು’

ಸೋಂಕು ರೋಗಗಳು ಅಸಾಮಾನ್ಯವಾದ ಪ್ರಮಾಣದಲ್ಲಿ ಸಂಭವಿಸುವವು ಎಂಬದು [ಯೇಸು ಕ್ರಿಸ್ತನ] ಸಾನಿಧ್ಯತೆ ಮತ್ತು ವಿಷಯಗಳ ವ್ಯವಸ್ಥೆಯ ಅಂತ್ಯದ ಸೂಚನೆಯಾಗಿ” ಮುಂತಿಳಿಸಲಾದ ಒಂದು ಚಿಹ್ನೆಯಾಗಿತ್ತು. (ಮತ್ತಾಯ 24:3) ಮತ್ತಾಯ ಮತ್ತು ಮಾರ್ಕನ ದಾಖಲೆಗಳಲ್ಲಿ ತಿಳಿಸಲ್ಪಡದ ಈ ವಿವರವನ್ನು ಸುವಾರ್ತಾ ಲೇಖಕನಾದ ಲೂಕನು ಸೇರಿಸಿದ್ದಾನೆ. (ಮತ್ತಾಯ ಅಧ್ಯಾಯ 24 ಮತ್ತು 25; ಮಾರ್ಕ ಅಧ್ಯಾಯ 13) ಕಡೇ ದಿನಗಳಲ್ಲಿ ಸೋಂಕು ರೋಗಗಳು ಮತ್ತು ಭೀಕರವಾದ ಜಾಡ್ಯಗಳು “ಅಲ್ಲಲ್ಲಿ” ಒಂದರ ಹಿಂದೊಂದು ಸಂಭವಿಸಲಿಕ್ಕಿದ್ದವು. (ಲೂಕ 1:3; 21:11) ಅಂಥ ರೋಗಗಳು ಎಲ್ಲಿಂದ ಬರ ಸಾಧ್ಯವಿದೆ?

“ಹಲವಾರು ತರದ ನಂಜುರೋಗಗಳು ಉಷ್ಣವಲಯಗಳಲ್ಲಿ ಅಡಗಿಕೊಂಡಿರುವುದು ವಿಜ್ಞಾನಿಗಳಿಗೆ ತಿಳಿದಿರುತ್ತದೆ—ನಿಸರ್ಗದ ಶಕ್ತಿಗಳು ಅದನ್ನು ಪ್ರವರ್ಧಿಸಿದ್ದಲ್ಲಿ—ಏಯ್ಡ್ಸ್‌ ಜಾಡ್ಯದಿಂದ ಸಂಭವನೀಯವಾಗಿ ಉಂಟಾಗುವದಕ್ಕಿಂಲೂ ಹೆಚ್ಚು ಜೀವನಷ್ಟವನ್ನು ಅವು ಬರಮಾಡಬಲ್ಲವು,” ಎಂದು ಸಯನ್ಸ್‌ ನ್ಯೂಸ್‌ ಪತ್ರಿಕೆಯು ತಿಳಿಸುತ್ತದೆ. “ಲೋಕದ ಸೋಂಕು ರೋಗ ತಪಶೀಲು ಪಟ್ಟಿಯು ಅಚಲವಾಗಿ ನಿಂತರೂ ಸಹಾ, ಸಂಶೋಧಕರು ಹೇಳುವದು, ಉಷ್ಣವಲಯಗಳಲ್ಲಿ ಈವಾಗಲೇ ಇರುವ ಸಾಕಷ್ಟು ಸೋಂಕಿನ ‘ಕಿಚ್ಚು-ಬಲವು’ ಭೂಮಿಯ ಜನಸಂಖ್ಯೆಯ ಬಹು ಭಾಗವನ್ನು ನಿರ್ಮೂಲಗೊಳಿಸಬಲ್ಲದು.

ನಮ್ಮೀ ಯುಗವನ್ನು ಅಧಿಕ ಭೇದ್ಯವಾಗಿ ಮಾಡುವಂಥಾದ್ದು ಭೂಮಿಯ ಹೊರಹುಮ್ಮುವ ಜನಸಂಖ್ಯೆ ಮತ್ತು ಜನನಿಬಿಡ ಲೋಕದ ಅತ್ಯಧಿಕ ಆವಶ್ಯಕತೆಗಳೇ. “ಜೀವ-ಘಾತಕವಾದ ಸೋಂಕು ರೋಗಗಳ ಹರಡುವಿಕೆಯು ಹೆಚ್ಚಾಗಿ ಮಾನವರು ಅಸಂಶೋಧಿತ ಪ್ರದೇಶಗಳಿಗೆ ಸ್ಥಲಾಂತರಿಸುವಾಗ, ಅಥವಾ ಗ್ರಾಮೀಣ ಜೀವನ ಪರಿಸ್ಥಿತಿಗಳು ಹೊಸ ಸೋಂಕುಗಳ ಸಮೂಹವನ್ನೇ ಉಂಟುಮಾಡುವಷ್ಟು ಕೆಟ್ಟುಹೋಗುವಾಗ ಹರಡುತ್ತವೆ,” ಎಂದು ಸಯನ್ಸ್‌ ನ್ಯೂಸ್‌ ಹೇಳುತ್ತದೆ. ಹಿಂದೆ ಎಟಕಲಾಗದ ರೋಗ-ಸೋಂಕಿದ ಪ್ರದೇಶಗಳನ್ನು ಮನುಷ್ಯರು ಇಂದು ಕ್ರಮಾಗತವಾಗಿ ಪ್ರವೇಶಿಸ ತೊಡಗಿದಂತೆ, ಹೊಸ ಹೊಸ ಸೋಂಕು ರೋಗಗಳು ಹುಟ್ಟುತ್ತವೆ. ಭೌಗೋಲಿಕವಾಗಿ ಹವಾಮಾನದ ನಮೂನೆಗಳು ಬದಲಾಗುವಾಗ ಮತ್ತು ಕ್ರಿಮಿಕೀಟಗಳು ತಮ್ಮ ವಲಯವನ್ನು ವಿಸ್ತರಿಸುವಾಗಲೂ ಇದೇ ರೀತಿ ಸಂಭವಿಸುತ್ತದೆ. “ಇಷ್ಟಲ್ಲದೇ,” ಪತ್ರಿಕೆಯು ಅನ್ನುವುದು, “ರಕ್ತಪೂರಣ ಮತ್ತು ಅಂಗ ಸ್ಥಲಾಂತರವೇ ಮುಂತಾದ ಆಧುನಿಕ ವೈದ್ಯಕೀಯ ತಂತ್ರ ಜ್ಞಾನಗಳು, ರೋಗದ ಸೋಂಕುಗಳಿಗೆ ಮಾನವ ಸಮೂಹದ ನಡುವೆ ಹರಡಲಿಕ್ಕಾಗಿ ಒಂದು ಹೊಸ ವಾಹನ ಸೌಕರ್ಯವನ್ನು ಒದಗಿಸಿರುತ್ತವೆ. ಅದೇ ರೀತಿಯಲ್ಲಿ ಸಾಮಾಜಿಕ ಮತ್ತು ನೀತಿವರ್ತನೆಗಳಲ್ಲಿ—ಧನಿಕರೂ ಪ್ರಸಿದ್ಧರೂ ಆದ ವ್ಯಕ್ತಿಗಳ ಲೋಕಸಂಚಾರದ ಓಡಾಟಗಳಿಂದ ಹಿಡಿದು ಅಮಲೌಷಧಿ ವ್ಯಸನಿಗಳ ಸೂಜಿ-ಹಿಸ್ಸೆಯ ತನಕದ—ಬದಲಾವಣೆಗಳೂ ಅದಕ್ಕೆ ಕಾರಣವಾಗಿವೆ.

“ಜನನಿವಾಸವಿಲ್ಲದ ಕ್ಷೇತ್ರಗಳಲ್ಲಿ ಇರುವ ರೋಗಸೋಂಕುಗಳ ಚಿಕ್ಕಚಿಕ್ಕ ತಂಡಗಳ ಸ್ಪಷ್ಟ ಮಾದರಿಗಳು ಭವಿಷ್ಯದಲ್ಲಿ ಅವುಗಳ ಮಹತ್ತಾದ ಹರಡುವಿಕೆಯನ್ನು ಮುನ್ಸೂಚಿಸಬಲ್ಲದು,” ಎಂದು ಲೇಖನವು ಮತ್ತೂ ಹೇಳಿದೆ. ದೃಷ್ಟಾಂತಗಳು: ಹಿಂದೆ ಅಜ್ಞಾತವಾಗಿದ್ದ [ಹಸುರು ಕೋತಿ ರೋಗವೆಂದೂ ಕರೆಯಲ್ಪಡುವ] ಮಾರ್ಬರ್ಗ್‌ ಸೋಂಕು ರೋಗವು, 1960ರ ಕೊನೆಯ ಸುಮಾರಿಗೆ ಪಶ್ಚಿಮ ಜರ್ಮನಿಯ ಹಲವಾರು ವಿಜ್ಞಾನಿಗಳನ್ನು ಬಾಧಿಸಿದ್ದ ಮಾರಕ ಉಷ್ಣವಲಯದ ಅಂಟುಜಾಡ್ಯವಾಗಿದೆ; ರಿಫ್ಟ್‌ವ್ಯಾಲಿ ಜ್ವರವನ್ನು ಉಂಟುಮಾಡುವ ಸೋಂಕು 1977ರಲ್ಲಿ ಈಜಿಪ್ಟಿನಲ್ಲಿ ಲಕ್ಷಾಂತರ ಜನರನ್ನು ಬಾಧಿಸಿತ್ತು ಮತ್ತು ಸಾವಿರಾರು ಜನರನ್ನು ಸಾಯಿಸಿತ್ತು; ಉಷ್ಣವಲಯದ ಇಬಾಲ [ಮಾರ್ಬರ್ಗ್‌ನಂಥ] ಸೋಂಕು ರೋಗವು 1976ರಲ್ಲಿ, ಝೈರೆ ಮತ್ತು ಸುಡಾನ್‌ನಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ತಗಲಿತು ಮತ್ತು ಸುಮಾರು 500 ಮಂದಿಯನ್ನು ಕೊಂದಿತು, ಅವರಲ್ಲಿ ಹೆಚ್ಚಿನವರು ಆ ರೋಗಿಗಳನ್ನು ಉಪಚರಿಸಿದ ಡಾಕ್ಟರ್‌ಗಳು ಮತ್ತು ನರ್ಸ್‌ಗಳಾಗಿದ್ದರು.

ವಿಪತ್ಕಾರಕ ಸೋಂಕು ಆಕ್ರಮಣಗಳ ಕುರಿತು ಮುಂದಾಗಿ ಕಾಲಜ್ಞಾನ ನುಡಿಯುವುದು ಅತ್ಯಪರೂಪ. “ಉದಾಹರಣೆಗೆ, 1918ರಲ್ಲಿ, ಭೂಸುತ್ತಲೂ ಹರಡಿದ್ದ ಒಂದು ಹೊಸತರದ ಬಹುನಂಜಿನ ಜ್ವರಕೂಡಿದ ನೆಗಡಿಯು ಸುಮಾರು 200 ಲಕ್ಷ ಜನರನ್ನು ಬಲಿತಕ್ಕೊಂಡಿತ್ತು” ಎನ್ನುತ್ತದೆ ಸಯನ್ಸ್‌ ನ್ಯೂಸ್‌. “ಪ್ರಾಯಶಃ ಹಿಂದೆ ಆಫ್ರಿಕಾದ ಕೋತಿಗಳಲ್ಲಿ ಮಾತ್ರವೇ ಇದ್ದ ಒಂದು ಸೋಂಕು ಇತ್ತೀಚೆಗೆ ಮನುಷ್ಯರಲ್ಲೂ ತಲೆದೋರಿರುವುದು ಲೋಕವನ್ನು ಪುನಃ ಅಕಸ್ಮಾತ್ತಾಗಿ ಹಿಡಿದೆಬ್ಬಿಸಿಯದೆ. ಜಾಗತಿಕ ಆರೋಗ್ಯ ಸಂಸ್ಥೆಯ ಅಂದಾಜಿಗೆ ಅನುಸಾರ, ಏಯ್ಡ್ಸ್‌ ರೋಗದಿಂದ 149 ದೇಶಗಳಲ್ಲಿ 50 ಲಕ್ಷದಿಂದ 1 ಕೋಟಿ ಜನರು ಈಗ ಪೀಡಿತರಾಗಿದ್ದಾರೆ. ಇತ್ತೀಚೆಗೆ ಹರಡಿರುವ ಈ ವ್ಯಾಧಿಗಳಿಗೆ ಈ ಎಲ್ಲಾ ಗಮನವನ್ನು ಸೆಳೆದಾದ ಮೇಲೆಯೂ, ಇನ್ನೂ ಹೆಚ್ಚು ಭೀಕರವಾದ ರೋಗಗಳು ನಮ್ಮನ್ನು ಕಾದಿವೆ ಎಂಬ ಭೀತಿಯನ್ನು ಹೆಚ್ಚಿನ ಸೋಂಕು ರೋಗತಜ್ಞರು ವ್ಯಕ್ತಪಡಿಸಿದ್ದಾರೆ.”

ಸೋಂಕು ರೋಗಗಳು ಸಂಕಟಕರವಾಗಿರುವುದಷ್ಟೇ ಅಲ್ಲ, ರಾಜ್ಯದ ಮಹಿಮೆಯಲ್ಲಿ ಕ್ರಿಸ್ತನ ಪ್ರತ್ಯಕ್ಷತೆಯ ಸೂಚನೆಗಳಾದ ಯುದ್ಧಗಳು, ಬರಗಳು, ದೊಡ್ಡ ಭೂಕಂಪಗಳು ಮುಂತಾದವುಗಳೊಂದಿಗಿನ ಒಂದು ಸಂಘಟಿತ ಚಿಹ್ನೆಯೂ ಆಗಿರುತ್ತದೆ. (ಮಾರ್ಕ 13:8; ಲೂಕ 21:10, 11) ಈ ವೈಶಿಷ್ಟ್ಯಗಳು ಸಂತೋಷಪಡತಕ್ಕ ಒಂದು ಕಾರಣವೂ ಆಗಿರುತ್ತವೆ ಯಾಕೆಂದರೆ ಲೂಕನು ಯೇಸುವಿನ ಮಾತುಗಳನ್ನು ಕೂಡಿಸಿದ್ದು: “ಆದರೆ ಇವು ಸಂಭವಿಸ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.”—ಲೂಕ 21:28. (w-91 11/15)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ