ರಾಜ್ಯ ಘೋಷಕರ ವರದಿ
ಯೆಹೋವನ ಸಾಕ್ಷಿಗಳು ಒಳ್ಳೆ ಫಲಿತಾಂಶದೊಂದಿಗೆ ಅವಿಧಿಯಾಗಿ ಸಾರುತ್ತಾರೆ
ಹೆಚ್ಚಿನ ಜನರಿಗೆ ಬೈಬಲ್ ಸತ್ಯಗಳ ಪರಿಚಯವು ಆದದ್ದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಅವರಿಗೆ ಅವಿಧಿಯಾಗಿ ಸಾರಿದ್ದಾಗಲೇ. ಇದರಲಿ ಸಾಕ್ಷಿಗಳು ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಾರೆ, ಬಾವಿಯ ಬಳಿಯಲ್ಲಿ ನೀರು ಸೇದಲು ಬಂದಿದ್ದ ಒಬ್ಬಾಕೆ ಸಮಾರ್ಯದ ಸ್ತ್ರೀಗೆ ಅವನು ಅವಿಧಿಯಾಗಿ ಸಾರಿದ್ದನು. (ಯೋಹಾನ, ಅಧ್ಯಾಯ 4) ಪೂರ್ವ ಆಫ್ರಿಕದಲ್ಲಿ, ಯೆಹೋವನ ಸಾಕ್ಷಿಗಳಲ್ಲೊಬ್ಬಳು ಒಬ್ಬಾಕೆ ಕ್ಯಾಥ್ಲಿಕ್ ನನ್ (ಸಂನ್ಯಾಸಿನಿ)ಗೆ ಅವಿಧಿಯಾಗಿ ಸಾರಿದಳು. ಏನು ಸಂಭವಿಸಿತ್ತೆಂದು ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸು ವಿವರಿಸುತ್ತದೆ:
▫ ಒಂದು ದಿನ ಬೆಳಗ್ಗೆ ಬೇಗ ಶಹರಕ್ಕೆ ಹೊರಟಿದ್ದ ಒಬ್ಬಾಕೆ ಸಾಕ್ಷಿಗೆ ಒಬ್ಬಾಕೆ ಕ್ಯಾಥ್ಲಿಕ್ ನನ್ ಸಿಕ್ಕಿದಳು. “ದಿನದ ಈ ಹೊತ್ತಿನಲ್ಲಿ ಎಲ್ಲಿಗೆ ಹೊರಟಿರಿ?” ಎಂದು ಪ್ರಶ್ನಿಸಲು ಸಾಕ್ಷಿಯು ಆ ಸಂದರ್ಭವನ್ನುಪಯೋಗಿಸಿದಳು. “ನನ್ನ ದೇವರಿಗೆ ಪ್ರಾರ್ಥನೆ ಮಾಡಲು” ಎಂಬ ಉತ್ತರವು ಸಿಕ್ಕಿತು. “ನಿಮ್ಮ ದೇವರ ಹೆಸರು ನಿಮಗೆ ಗೊತ್ತೋ?” ಎಂದು ಕೇಳಿದಳು ಅವಳು ಅನಂತರ ನನ್ಗೆ. “ಆತನ ಹೆಸರು ದೇವರಂದಲ್ಲವೋ?” ಉತ್ತರಿಸಿದಳು ನನ್. ದೇವರ ಹೆಸರಿನ ಕುರಿತು ಚರ್ಚಿಸಲು ಆ ದಿನ ಮಧ್ಯಾಹ್ನ ಅವಳ ಮನೆಗೆ ಬರುವೆನೆಂದು ಸಾಕ್ಷಿಯು ಹೇಳಿದಳು. ಆ ಸಂಭಾಷಣೆಯ ನಂತರ ನನ್ ತನ್ನ ಚರ್ಚಿಗೆ ಹೋಗಿ, “ಯೆಹೋವ” ಎಂಬ ಪದದ ಅರ್ಥವು ತಿಳಿದದೆಯೆ ಎಂದು ಪಾದ್ರಿಯಲ್ಲೊಬ್ಬನನ್ನು ಕೇಳಿದಳು. “ಅದು ದೇವರ ಹೆಸರು” ಎಂಬ ಉತ್ತರ ಸಿಕ್ಕಿತು. ಪಾದ್ರಿಗೆ ಅದು ತಿಳಿದಿದ್ದರೂ ಅವಳಿಗೆ ಅದನ್ನೆಂದೂ ಕಲಿಸದಕ್ಕಾಗಿ ನನ್ ಅತಿ ಆಶ್ಚರ್ಯಗೊಂಡಳು.
ಸಾಕ್ಷಿಯು ಆ ಸ್ತ್ರೀಯನ್ನು ಒಂಭತ್ತು ದಿನ ಅನುಕ್ರಮವಾಗಿ ಸಂದರ್ಶಿಸಿದಳು ಮತ್ತು ತ್ರಯೈಕ್ಯ, ಆತ್ಮ, ನರಕಾಗ್ನಿ ಮತ್ತು ಮೃತರಿಗಿರುವ ನಿರೀಕ್ಷೆಯ ಕುರಿತು ಕಲಿಸಿದಳು. ಅವಳು ಎಲ್ಲವನ್ನು ಹೀರಿಕೊಂಡಳು ಮತ್ತು ಈ ಎಲ್ಲಾ ಹೊಸ ಬೋಧನೆಗಳ ಕುರಿತು ಆಲೋಚಿಸಲು ಸಮಯ ಕೊಡುವಂತೆ ಕೇಳಿಕೊಂಡಳು. ಎರಡು ವಾರಗಳ ಅನಂತರ ಆಕೆ ಪುನಃ ಸಾಕ್ಷಿಗಳನ್ನು ಸಂಪರ್ಕಿಸಿದಳು ಮತ್ತು ಅಧಿಕ ಚರ್ಚೆಗಳಿಗಾಗಿ ಕೇಳಿಕೊಂಡಳು. ಆ ಸಮಯದೊಳಗೆ ನನ್ ಚರ್ಚನ್ನು ತ್ಯಜಿಸಲು ನಿರ್ಣಯಿಸಿದ್ದಳು ಮತ್ತು ಆ ಮೊದಲೇ ತನ್ನ ಮೂರ್ತಿಗಳನ್ನು, ರೋಝರಿ [ಜಪಮಣಿಮಾಲೆ] ಗಳನ್ನು ಮತ್ತು ಕ್ರೂಜೆಯನ್ನು ನಾಶಮಾಡಿದ್ದಳು. ಪಾದ್ರಿಯು ಅವಳನ್ನು ಹಿಮ್ಮರಳುವಂತೆ ಒತ್ತಾಯಿಸಿದನು, ಆದರೆ ಆಕೆ ಸತ್ಯವನ್ನು ಬಿಡದೆ ಬೆನ್ನಟಲ್ಟು ನಿರ್ಧಾರ ಮಾಡಿದ್ದಳು. ತದನಂತರ ಅವಳಿಗೆ ದೀಕ್ಷಾಸ್ನಾನವಾಯಿತು ಮತ್ತು ತನ್ನ ಅನಾರೋಗ್ಯ ಮತ್ತು ಮುದೀ ವಯಸ್ಸಿನ ನಡುವೆಯೂ ಆಕೆ ಅನೇಕ ತಿಂಗಳುಗಳ ತನಕ ಕ್ರಮದ ಆಕ್ಸಿಲರ್ ಪಯನೀಯರಳಾಗಿ ಸೇವೆಮಾಡಿದಳು.
ಅವಳ ಮನೆ ದೊಡ್ಡದಿದ್ದರಿಂದ, ರಾಜ್ಯ ಸಭಾಗೃಹವಾಗಿ ಉಪಯೋಗಿಸುವಂತೆ ಅವಳು ಅದನ್ನು ಸಭೆಗೆ ನೀಡಿದಳು. ಸಹೋದರರು ಹಳೆಯ ಚಾವಣಿಯನ್ನು ತೆಗೆದು ಹೊಸತು ಹಾಕಿದರು, ಒಳಗಿನ ಗೋಡೆಗಳನ್ನು ಬೀಳಿಸಿ, ಕಟ್ಟಡದ ದೊಡ್ಡ ಭಾಗವನ್ನು ಒಂದು ಆಕರ್ಷಕ ಕೂಟದ ಸ್ಧಳವಾಗಿ ಮಾರ್ಪಡಿಸಿದರು. ಈ ಮಾಜಿ ಕ್ಯಾಥ್ಲಿಕ್ ನನ್ ಹೋಲಿನ ಹಿಂದುಗಡೆ ಒಂದು ಕೋಣೆಯಲ್ಲಿ ವಾಸಿಸುತ್ತಾಳೆ. ಯೆಹೋವನ ಆರಾಧನೆಗಾಗಿ ಈ ದಾನವನ್ನು ಮಾಡಲು ಆಕೆ ಶಕ್ತಳಾದದ್ದಕ್ಕಾಗಿ ಬಹು ಸಂತೋಷದಿಂದಿದ್ದಾಳೆ.
▫ ಅವಿಧಿ ಸಾಕ್ಷಿಯ ವಿವೇಕವನ್ನು ತೋರಿಸುವ ಇನ್ನೊಂದು ಅನುಭವವು ಯುಗಾಂಡದ ಕಂಪಾಲದಿಂದ ಬರುತ್ತದೆ. ಒಂದು ಸರಕಾರಿ ಆಫೀಸಿಗೆ ಹೋಗುತ್ತಿರುವಾಗ ಒಬ್ಬ ಮಿಶನೆರಿ ಸಾಕ್ಷಿಯು ಲಿಫ್ಟ್ನಲ್ಲಿ ತನ್ನೊಂದಿಗಿದ್ದವರೊಂದಿಗೆ ಅವಿಧಿಯಾಗಿ ಮಾತಾಡಿದನು. ಶ್ರೀ. ಎಲ್— ತನಗೆ ನೀಡಲ್ಪಟ್ಟ ಸಾಹಿತ್ಯವನ್ನು ತಕ್ಕೊಳ್ಳಲು ಅಪೇಕ್ಷೆ ಪಟ್ಟನು, ಆದರೆ ಆ ಕ್ಷಣ ಅದನ್ನು ತಕ್ಕೊಳ್ಳಲಾರದೆ ಹೋದನು. ಆದ್ದರಿಂದ ಅವನು ಮಿಶನೆರಿಗೆ ತನ್ನ ಹೆಸರು ಮತ್ತು ಆಫೀಸಿನ ವಿಳಾಸವನ್ನು ಕೊಟ್ಟನು. ತರುವಾಯ ಮಿಶನೆರಿಯು ಆಲ್ಲಿಗೆ ಹೋಗಿ ಶ್ರೀ. ಎಲ್— ಗಾಗಿ ಕೇಳಿದ. ಅವನನ್ನು ಒಳಗೆ ಕರೆಯಲಾಯಿತು ಆದರೆ ಬೇರೊಬ್ಬನು ಬಂದದ್ದನ್ನು ಕಂಡು ಮಿಶನೆರಿಗೆ ಆಶ್ಚರ್ಯವಾಯಿತು. ಆ ಆಫೀಸಿನಲ್ಲಿ ಒಂದೇ ಹೆಸರಿನ ಇಬ್ಬರು ಮನುಷ್ಯರು ಕೆಲಸ ಮಾಡುತ್ತಿದ್ದರು. ಎರಡನೆ ಶ್ರೀ. ಎಲ್— ಗೆ ಒಂದು ಚಿಕ್ಕ ಸಾಕ್ಷಿಯನ್ನು ನೀಡಲಾಯಿತು, ಅವನು ಅಸಾಮಾನ್ಯ ಆಸಕ್ತಿಯನ್ನು ತೋರಿಸಿದಾಗ, ಆ ಮೊದಲನೆಯ ಶ್ರೀ. ಎಲ್— ಆದರೋ ಆಸಕ್ತಿಯನ್ನು ಕಳಕೊಂಡಿದ್ದನು. ಎರಡನೆಯ ಶ್ರೀ. ಎಲ್—ನೊಂದಿಗೆ ಒಂದು ಬೈಬಲ್ ಅಧ್ಯಯನ ಆರಂಭಿಸಲ್ಪಟ್ಟಿತು. ಅವನೀಗ ಒಬ್ಬ ಸ್ನಾನಿತ ಸಾಕ್ಷಿಯು, ಮತ್ತು ಅವನ ಪತ್ನಿ ಮತ್ತು ಮಗನು ದೀಕ್ಷಾಸ್ನಾನದ ಕಡೆಗೆ ಪ್ರಗತಿಯನ್ನು ಮಾಡುತ್ತಿದ್ದಾರೆ.
ಯೇಸು ಕ್ರಿಸ್ತನು ಒಬ್ಬ ಉತ್ತಮ ಕುರುಬನು ಮತ್ತು ನೀತಿಯ ಕಡೆಗೆ ಓಲಿರುವ ಹೃದಯದ ಕುರಿಸದೃಶರನ್ನು ಆತನು ಬಲ್ಲನು. ಅಂಥವರ ಕಡೆಗೆ ತನ್ನ ಹಿಂಬಾಲಕರನ್ನು ಆತನು ಮಾರ್ಗದರ್ಶಿಸುತ್ತಾನೆಂದು ಈ ಅನುಭವಗಳು ತಿಳಿಸುತ್ತವೆ. ಅವಿಧಿಯಾದ ಸಾಕ್ಷಿಯು ಫಲದಾಯಕವಾಗಬಲ್ಲದು!—ಯೋಹಾನ 10:14. (w92 1/1)