ರಾಜ್ಯ ಘೋಷಕರ ವರದಿ
ಬೈಬಲ್ ಸತ್ಯವು ಬೊಲಿವಿಯದ ಒಬ್ಬಾಕೆ ಕ್ರೈಸ್ತ ಸಂನ್ಯಾಸಿನಿ (Nun) ಯನ್ನು ಬಿಡುಗಡೆಮಾಡಿತು
ಪ್ರಾಮಾಣಿಕ ಹೃದಯದ ಅನೇಕರು ಸುಳ್ಳು ಧರ್ಮದಿಂದ ಪಲಾಯನಗೈಯುತ್ತಿದ್ದಾರೆ, ಬೈಬಲ್ ಸತ್ಯಗಳನ್ನು ಕಲಿಯುತ್ತಿದ್ದಾರೆ ಮತ್ತು ಸತ್ಯ ದೇವರಾದ ಯೆಹೋವನನ್ನು ಆರಾಧಿಸಲು ಬರುತ್ತಿದ್ದಾರೆ. ಬೊಲಿವಿಯದ ಸುಮಾರು 7,600 ಕ್ಕಿಂತಲೂ ಹೆಚ್ಚು ಮಂದಿ ಹಾಗೆ ಮಾಡಿರುತ್ತಾರೆ, ಅವರಲ್ಲಿ ಒಬ್ಬಾಕೆ ನನ್ ಸಹ ಕೂಡಿದ್ದಾಳೆ.
ಕೇವಲ ಒಂಭತ್ತು ವರ್ಷ ಪ್ರಾಯದಲ್ಲಿರುವಾಗಲೇ ಎಮ್—— ಗೆ ಒಬ್ಬ ಯೆಹೋವನ ಸಾಕ್ಷಿಯ ಮೊದಲ ಸಂಪರ್ಕವಾಗಿತ್ತು. ಸಾಕ್ಷಿಯು ಅವಳ ಮನೆಯನ್ನು ಸಂದರ್ಶಿಸಿದಾಗ ಅವಳು ಬಾಗಲಿಗೆ ಬಂದಿದ್ದಳು ಮತ್ತು ಯೆಹೋವ ಎಂಬ ದೈವಿಕ ನಾಮವು ಉಚ್ಚರಿಸಲ್ಪಟ್ಟದ್ದನ್ನು ಮೊತ್ತಮೊದಲಾಗಿ ಕೇಳಿದಳು. ಅದನ್ನು ವರ್ಷಗಳ ತನಕ ಅವಳಿಗೆ ಮರೆಯಲಾಗಲಿಲ್ಲ.
ಕುಟುಂಬದಲ್ಲಿ ಅವಳೊಬ್ಬಳೇ ಹುಡುಗಿಯಾಗಿದದ್ದರಿಂದ ಅವಳು ನನ್ ಆಗಬೇಕೆಂದು ನಿರ್ಣಯಿಸಲಾಯಿತು. “ದೇವರ ಸೇವೆಯಲ್ಲಿ ಇರಲಿಕ್ಕಿದ್ದೇನೆಂದು ತಿಳಿದು ನನಗೆಷ್ಟು ಸಂತೋಷವಾಗಿತ್ತು—ಕಡಿಮೆ ಪಕ್ಷ, ಹಾಗೆಂದು ನಾನು ನೆನಸಿದ್ದೆನು,” ಎನ್ನುತ್ತಾಳೆ ಎಮ್——. ಆದರೆ ಕಾನ್ವೆಂಟ್ನಲ್ಲಿ ನಡಿಸಲ್ಪಡುತ್ತಿದ್ದ ಅನ್ಯಾಯ ಮತ್ತು ಪಕ್ಷಪಾತವನ್ನು ಕಂಡಾಗ ಅವಳ ಸಂತೋಷವು ಬರಿಯ ಭ್ರಾಂತಿಯಾಗಿ ಪರಿಣಮಿಸಿತು. ಅವಳನ್ನುವುದು: “ಆ ಖಿನ್ನತೆಯ ಕೆರಳಿಕೆಗಳನ್ನು, ಮತ್ತು ದೇವರು ಪ್ರೀತಿಯಲ್ಲ, ನಿಷ್ಕರುಣೆಯಿಂದ ಶಿಕ್ಷಿಸುವಾತನು ಎಂಬ ನೋಟವನ್ನು ನನ್ನಲ್ಲಿ ಉಂಟುಮಾಡಿದ್ದ ಆ ತೀರಾ ಯಾತನಾಮಯ ದೈಹಿಕ ಮತ್ತು ಆತ್ಮಿಕ ಹೊಡೆತಗಳನ್ನು ಪ್ರಾಯಶಃ ನಾನೆಂದೂ ಮರೆಯಲಿಕ್ಕಿಲ್ಲ.”
ಅವಳು ಮುಂದುವರಿಸುವುದು: “ನಾನು ನನ್ ಆಗಿ ಪರಿಣಮಿಸಿದ ಸಮಯದೊಳಗೆ ಸಹ, ಬೈಬಲ್ನಲ್ಲಿ ಯೆಹೋವ ಎಂಬ ಹೆಸರನ್ನು ಕಂಡುಕೊಳ್ಳುವುದರಲ್ಲಿ ವೈಫಲ್ಯಪಡೆದೆ. ಕೇವಲ ‘ಯಾವೇ’ ನನಗೆ ಸಿಕ್ಕಿತು ಮತ್ತು ಅದು ನನ್ನನ್ನು ಗಾಬರಿಗೊಳಿಸಿತು. ಯೆಹೋವನ ಕುರಿತು ಮಾತಾಡುವ ಆ ಜನರಿಗಾಗಿ ಹುಡುಕಲು ಒಂದು ದಿನ ನಾನು ಹೊರಗೂ ಹೋದೆ, ಆದರೆ ನನಗೆ ಅವರು ಸಿಕ್ಕಲೇ ಇಲ್ಲ.
“ಸಮಯ ದಾಟಿತು, ಒಂದು ದಿನ ನಾನು ನನ್ನ ಕುಟುಂಬದ ಮನೆಗೆ ಹೋಗುತ್ತಿದ್ದಾಗ, ‘ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ’ ಎಂಬ ಬೋರ್ಡು ಕಣ್ಣಿಗೆ ಬಿತ್ತು.’ ಅವರು ಸುಳ್ಳು ಪ್ರವಾದಿಗಳು ಎಂಬದನ್ನು ನಾನು ಅವರಿಗೆ ತಿಳಿಸಬಯಸಿದ್ದೆ, ಆದರೆ ಹೋಲ್ನಲ್ಲಿ ಯಾರೂ ಇರಲಿಲ್ಲ. ಭಾನುವಾರ ನಾನು ತಿರುಗಿ ಬಂದೆನು. ಒಂದು ಕೂಟವು ನಡಿಯುತಿತ್ತು, ಮತ್ತು ವಿಶೇಷ ರೀತಿಯ ಉಡುಪನ್ನು ತೊಟ್ಟ ಒಬ್ಬ ನನ್ ಉಪಸ್ಥಿತಳಿದ್ದದ್ದನ್ನು ಕಂಡು ಕೆಲವರಿಗೆ ಆಶ್ಚರ್ಯವಾದಂತೆ ತೋರಿತು. ಕೂಟದ ನಂತರ, ಬೇಗನೇ ಎದ್ದು ಹೊರಡಲು ಪ್ರಯತ್ನಿಸಿದೆ. ಆದಾಗ್ಯೂ, ಸಾಕ್ಷಿಗಳಲ್ಲಿ ಒಬ್ಬಳು ನನ್ನನ್ನು ವಂದಿಸಿದಳು, ಆದ್ದರಿಂದ ನಾನು ಅವಳನ್ನು ಕೇಳಿದ್ದು, ‘ಆ ಪವಿತ್ರನ ನಾಮವನ್ನು ಧರಿಸಿಕೊಳ್ಳುವ ಮೂಲಕ ದೇವದೂಷಣೆಯನ್ನು ನೀವು ಮಾಡುವುದೇಕೆ?’ ನನ್ನ ಪ್ರಶ್ನೆಯು ಒಂದು ಬೈಬಲ್ ಚರ್ಚೆಗೆ ನಡಿಸಿತು, ಮತ್ತು ಅವಳು ನನ್ನನ್ನು ನನ್ನ ಕುಟುಂಬದ ಮನೆಯಲ್ಲಿ ಸಂದರ್ಶಿಸುವಂತೆ ನಾನು ಏರ್ಪಾಡುಗಳನ್ನು ಮಾಡಿದೆ. ನನ್ನ ಹೆತ್ತವರು ಅವಳನ್ನು ಓಡಿಸಿಬಿಟ್ಟರು. ಆದರೂ ಎರಡು ತಿಂಗಳ ನಂತರ ನಾವು ಪುನಃ ಭೇಟಿಯಾದೆವು ಮತ್ತು ಒಂದು ಬೈಬಲಭ್ಯಾಸಕ್ಕಾಗಿ ಅವಳ ಮನೆಗೆ ನನ್ನನ್ನು ಕರೆದಳು. ಕ್ರೈಸ್ತರು ದೇವರ ಹೆಸರನ್ನು ಉಪಯೋಗಿಸಬೇಕು ಎಂಬದನ್ನು ಸಿದ್ಧಪಡಿಸುತ್ತಾ, ಆಕೆ ತೋರಿಸಿದ ಮಾಹಿತಿಯಿಂದ ನಾನು ತೀರಾ ಪ್ರಭಾವಿತಳಾದೆನು. ನನ್ ಆದ ನನಗೆ ಕಲಿಸಲ್ಪಟ್ಟಿದ್ದ ಎಲ್ಲಾ ವ್ಯರ್ಥ ಸಂಗತಿಗಳನ್ನು ತ್ಯಜಿಸಿಬಿಡಲು ಆ ರುಜುವಾತು ನನಗೆ ಬೇಕಾದ ಬಲವನ್ನು ಕೊಟ್ಟಿತು.
“ಕಾನ್ವೆಂಟಿನಲ್ಲಿ ನನ್ನ ಜೀವನದ ಕುರಿತು ಅನೇಕ ವಿಷಯಗಳು ನನಗೆ ನೆನಪಾಗುತ್ತವೆ. ದೃಷ್ಟಾಂತಕ್ಕೆ, ಒಮ್ಮೆ ನನಗೆ ತಿನ್ನಲು ಹೆಚ್ಚು ತಿಂಡಿ ಬೇಕಿತ್ತು. ಆದ್ದರಿಂದ ಸ್ವಲ್ಪ ತಿಂಡಿಯನ್ನು ಕಳುಹಿಸುವಂತೆ ನನ್ನ ಹೆತ್ತವರಿಗೆ ಪತ್ರ ಬರೆದೆ, ಪತ್ರಗಳು ಕಾನ್ವೆಂಟಿನಲ್ಲಿ ತೆರೆದು ಪರೀಕ್ಷಿಸಲ್ಪಡುತ್ತವೆಂತ ನನಗೆ ಗೊತ್ತಿರಲಿಲ್ಲ. ಮುಂದಿನ ಊಟದ ವೇಳೆ ನನ್ನ ಮುಂದೆ ರೊಟ್ಟಿ ಮತ್ತು ಜೆಲಿಯ್ಲ ದೊಡ್ಡ ಪಾಲನ್ನು ಇಡಲಾಗಿತ್ತು ಮತ್ತು ಅದೆಲ್ಲವನ್ನು ತಿನ್ನುವಂತೆ ಬಲಾತ್ಕರಿಸಲಾಯಿತು. ನನಗೆ ಊಟ ತುಂಬಾ ಹೆಚ್ಚಾಗಿತ್ತು. ಇದನ್ನು ನನ್ನ ಸ್ನೇಹಿತೆಯರಿಗೆ ತಿಳಿಸಿದೆ, ನನಗೆ ತಿನ್ನಲಾಗದ ರೊಟ್ಟಿಯನ್ನು ಚೂರುಚೂರು ಮಾಡಿ ನೆಲದ ಮೇಲೆ ಚೆದರಿಸಿಬಿಡು ಎಂದು ಸೂಚಿಸಿದಳು ಒಬ್ಬಳು. ನಾನು ಹಾಗೆ ಮಾಡಿದಾಗ ಒಬ್ಬ ನನ್ ಕೂಡಲೇ ನನ್ನನ್ನು ಹಿಡಿದೆಳೆದು ನೆಲದ ಮೇಲೆ ಉರುಳಿಸಿ, ನಾಲಗೆಯಿಂದ ಇಡೀ ನೆಲವನ್ನು ನೆಕ್ಕಿ ತೆಗೆಯುವಂತೆ ಕಟ್ಟಾಜ್ಞೆ ವಿಧಿಸಿದಳು. ಕೋಣೆಯು ದೊಡ್ಡದಾಗಿತ್ತು. ಆಜ್ಞೆಯನ್ನು ಪಾಲಿಸುತ್ತಿದ್ದಾಗ, ಕಿಸಿಕಿಸಿ ನಗು ಮತ್ತು ಚೇಷ್ಟೆಗಳೆಷ್ಟೋ ನನ್ನ ಕಿವಿಗೆ ಬಿದ್ದವು—ಸ್ವಲ್ಪವೂ ಕನಿಕರ ತೋರಿಸಲ್ಪಡಲಿಲ್ಲ.
“ಅವೆಲ್ಲವುಗಳಿಂದ ಬಿಡುಗಡೆಯಾಗಿರುವುದು ಅದೆಷ್ಟು ಆಶ್ಚರ್ಯಕರವೆಂಬದನ್ನು ನಾನೀಗ ಕಾಣುತ್ತೇನೆ. ನಿರೀಕ್ಷಿಸಲ್ಪಡುವ ಪ್ರಕಾರ, ಈ ಬಿಡುಗಡೆಯಲ್ಲಿ ತ್ಯಾಗಗಳು ಒಳಗೂಡಿದ್ದವು. ಒಂದನೆಯದಾಗಿ, ನನ್ನ ತಂದೆ ನನ್ನನ್ನು ಮನೆಯಿಂದ ಹೊರಗಟ್ಟಿದರು. ಆದರೂ, ಕಾನ್ವೆಂಟನ್ನು ಬಿಡುವ ಮುಂಚೆ ಇತರ ಯುವ ನನ್ಗಳಿಗೆ ಸತ್ಯವನ್ನು ಕಲಿಯುವಂತೆ ನೆರವಾಗುವ ಸುಯೋಗ ನನಗೆ ಸಿಕ್ಕಿತು. ನಮ್ಮಲ್ಲಿ ಕೆಲವರು ನಮ್ಮ ಜೀವಗಳನ್ನು ಯೆಹೋವ ದೇವರಿಗೆ ಸಮರ್ಪಿಸಿದ್ದೇವೆಂದು ತಿಳಿಸಲು ನಾನು ಸಂತೋಷ ಪಡುತ್ತೇನೆ!
“ನಾನು ಕಾನ್ವೆಂಟನ್ನು ಬಿಟ್ಟ ನಂತರ, ಒಳ್ಳೇ-ವೇತನದ ಆದರೆ ಸಮಯ-ಬಳಸುವ ಉದ್ಯೋಗಗಳನ್ನು ನಾನು ಏಕೆ ನಿರಾಕರಿಸುತ್ತೇನೆಂದು ನನ್ನ ತಂದೆಗೆ ತಿಳುಕೊಳ್ಳಲು ಕಷ್ಟವಾಗಿತ್ತು. ನನಗಾದರೋ ದೇವರ ಸೇವೆಗಾಗಿ ಹೆಚ್ಚು ಸಮಯ ಬೇಕಿತ್ತು. ನಾನೀಗ ಒಬ್ಬ ಕ್ರಮದ ಪಯನೀಯರಳಾಗಿ ಸೇವೆ ಮಾಡುತ್ತಿದ್ದು ಒಂದು ಅಸಂಕೀರ್ಣ ಆದರೂ ಅತ್ಯಂತ ಪ್ರತಿಫಲದಾಯಕ ಜೀವನವನ್ನು ನಡಿಸುತ್ತಿದ್ದೇನೆ. ಮತ್ತು ನನ್ನ ತಾಯಿ ಮತ್ತು ನನ್ನ ಅಣ್ಣಂದಿರು ಯೆಹೋವನ ಸೇವೆಯಲ್ಲಿ ನನ್ನೊಂದಿಗೆ ಜತೆಗೂಡಿರುವುದು ನನ್ನ ಮಹಾನಂದವೇ ಸರಿ.”
ನಿಜವಾಗಿಯೂ ಬೈಬಲ್ ಸತ್ಯವು ಈ ಲೋಕದ ಸುಳ್ಳು ಧಾರ್ಮಿಕ ವ್ಯವಸ್ಥೆಯಿಂದ ಜನರನ್ನು ಬಿಡುಗಡೆ ಮಾಡುತ್ತದೆ ಮತ್ತು ಅದು ಬಾಳುವ ಸಂತೋಷ ಮತ್ತು ಸಂತುಷ್ಟಿಯನ್ನು ತರುತ್ತದೆ.—ಯೋಹಾನ 8:32. (w92 5⁄1)