ಸುಸ್ವಾಗತ “ಜ್ಯೋತಿ ವಾಹಕರು” ಜಿಲ್ಲಾ ಅಧಿವೇಶನಗಳಿಗೆ
ಸೃಷ್ಟಿಯ ದಿನಗಳ ಅತಿ ಮೊದಲನೆಯ ದಿನವು ತಾನೇ ಭೂಮಿಯ ಸಂಬಂಧದಲ್ಲಿ ಬೆಳಕಿನ ನಿರ್ಮಾಣವನ್ನು ಕಂಡಿತ್ತು. ಯೆಹೋವ ದೇವರು ಹೀಗಂದದ್ದನ್ನು ನಾವು ಓದುತ್ತೇವೆ: “ಆಗ ದೇವರು ಬೆಳಕಾಗಲಿ ಅನ್ನಲು ಬೆಳಕಾಯಿತು.” (ಆದಿಕಾಂಡ 1:3) ಇದು ಅಪೊಸ್ತಲ ಯೋಹಾನನು ಏನು ಬರೆದನೋ ಅದಕ್ಕೆ ಹೊಂದಿಕೆಯಾಗಿದೆ: “ದೇವರು ಬೆಳಕಾಗಿದ್ದಾನೆ; ಮತ್ತು ಆತನ ಅನ್ಯೋನ್ಯತೆಯಲ್ಲಿ ಎಷ್ಟುಮಾತ್ರವೂ ಕತ್ತಲೆಯಿಲ್ಲ.”—1 ಯೋಹಾನ 1:5.
ದೇವರ ಕುಮಾರನು ತನ್ನ ತಂದೆಯೊಂದಿಗೆ ಅನ್ಯೋನ್ಯತೆಯಲ್ಲಿ ಇದದ್ದರಿಂದ, ಯೇಸು ಒಮ್ಮೆ ಹೀಗಂದದರ್ದಲ್ಲಿ ಆಶ್ಚರ್ಯವೇನಿಲ್ಲ: “ನಾನು ಲೋಕಕ್ಕೆ ಬೆಳಕಾಗಿದ್ದೇನೆ.” (ಯೋಹಾನ 9:5) ಯೆಹೋವ ದೇವರಲ್ಲಿ ಮತ್ತು ಆತನ ಮಗನಲ್ಲಿ ನಂಬಿಕೆಯನ್ನು ಇಡುವ ಮೂಲಕ ನಾವು ಕತ್ತಲೆಯೊಳಗಿಂದ ಹೊರಟು ಬೆಳಕಿಗೆ ಬರಬಲ್ಲೆವು. ಯೇಸು ಸಹ ದೃಢೀಕರಿಸಿದ್ದು: “ನನ್ನನ್ನು ನಂಬುವ ಒಬ್ಬನಾದರೂ ಕತ್ತಲಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 12:46) ಆದ್ದರಿಂದ ಯೇಸು ತನ್ನ ನಿಜ ಹಿಂಬಾಲಕರ ಕುರಿತಾಗಿ ಸರಿಯಾಗಿಯೇ ಹೇಳಿದ್ದು: “ನೀವು ಲೋಕಕ್ಕೆ ಬೆಳಕಾಗಿದ್ದೀರಿ. . . . ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.”—ಮತ್ತಾಯ 5:14, 16.
“ನಂಬಿಗಸ್ತನೂ ವಿವೇಕಿಯೂ ಆದ ಆಳಿ”ನಿಂದ ಸ್ಪಷ್ಟ ಮಾಡಲ್ಪಟ್ಟ ದೇವರ ವಾಕ್ಯದ ತಿಳುವಳಿಕೆಯಾದ ಸತ್ಯವು ನಮ್ಮಲ್ಲಿರುವುದು ಅದೆಂಥ ಒಂದು ಆಶೀರ್ವಾದವು! (ಮತ್ತಾಯ 24:45-47) ಒಂದು ತ್ರಯೈಕ್ಯ ನಂಬಿಕೆಯಿಂದ ನಾವು ಇನ್ನು ಮುಂದೆ ತಬ್ಬಿಬ್ಬಾಗೆವು; ಸರ್ವಶಕ್ತನೂ ಪ್ರೀತಿಸ್ವರೂಪನೂ ಆದ ದೇವರು ದುಷ್ಟತನ ಮತ್ತು ಹಿಂಸಾಚಾರಕ್ಕೆ ಅನುಮತಿಸುವುದೇಕೆಂಬ ವಿಷಯದಲ್ಲಿ ಇನ್ನು ಮುಂದೆ ಗಲಿಬಿಲಿ ನಮಗಿಲ್ಲ; ಮೃತರ ಸ್ಥಿತಿಯ ಕುರಿತಾಗಿ ನಮಗೆ ಇನ್ನು ಮುಂದೆ ಯಾವ ಸಂಶಯವೂ ಇಲ್ಲ. ಆ ಬೆಳಕು ನಮಗೆ ನಿರೀಕ್ಷೆಯನ್ನು, ರಾಜ್ಯ ನಿರೀಕ್ಷೆಯನ್ನು ಕೊಟ್ಟಿದೆ. ನಿರ್ಮಾಣಿಕನು ಎಂಥಾ ಅದ್ಭುತಕರ ದೇವರು ಎಂಬದನ್ನು ತಿಳಿಯಪಡಿಸಿದೆ. ಸತ್ಯದ ಬೆಳಕು ನಮಗೆ ಪ್ರಥಮವಾಗಿ ನಾವು ಯಾವ ಉದ್ದೇಶದ ಸೇವೆಗಾಗಿ ನಿರ್ಮಿಸಲ್ಪಟ್ಟೆವೋ ಅದನ್ನು ಅಂದರೆ ನಮ್ಮ ನಿರ್ಮಾಣಿಕನಾದ ಯೆಹೋವ ದೇವರನ್ನು ಘನಪಡಿಸುವ ಉದ್ದೇಶವನ್ನು ನಮ್ಮ ಜೀವಿತಕ್ಕೆ ಕೊಟ್ಟಿರುತ್ತದೆ. ಇದನ್ನು ನಾವು ಮಾಡುವುದು ಜ್ಯೋತಿ ವಾಹಕರಾಗಿ ಇರುವ ಮೂಲಕ. ಜ್ಯೋತಿ ವಾಹಕರಾಗಿರುವುದು ಒಂದು ಮಹಾ ಗೌರವ ಮತ್ತು ಸುಯೋಗವಾಗಿದೆ, ಆದರೆ ಅದು ಒಂದು ಗಂಭೀರವಾದ ಜವಾಬ್ದಾರಿಕೆಯೂ ಹೌದು. ಆ ಹಂಗನ್ನು ಚೆನ್ನಾಗಿ ಪೂರೈಸಲು, ಯೆಹೋವನು ನಮಗೆ ಕೊಡುವ ಎಲ್ಲಾ ಸಹಾಯದ ಉಪಯೋಗವನ್ನು ಮಾಡುವ ಅಗತ್ಯ ನಮಗಿದೆ. ಆದ್ದರಿಂದ ನಮ್ಮ 1992ರ ಜಿಲ್ಲಾ ಅಧಿವೇಶನಗಳಿಗೆ “ಜ್ಯೋತಿ ವಾಹಕರು” ಜಿಲ್ಲಾ ಅಧಿವೇಶನಗಳು ಎಂಬ ಹೆಸರಿರುವುದು ಅದೆಷ್ಟು ಉಚಿತವು!
ನಮ್ಮ ನೈಪುಣ್ಯಗಳನ್ನು ಮತ್ತು ಜ್ಯೋತಿ ವಾಹಕರೋಪಾದಿ ನಮ್ಮ ಗಣ್ಯತೆಯನ್ನು ಹೆಚ್ಚಿಸಲು, ಆರಂಭದ ಸಂಗೀತದಿಂದ ಸಮಾಪ್ತಿಯ ಪ್ರಾರ್ಥನೆಯ ತನಕ ಉಪಸ್ಥಿತರಿರುವ ಮೂಲಕ, ಈ ಅಧಿವೇಶನಗಳಲ್ಲಿ ಕಡಿಮೆಪಕ್ಷ ಒಂದಲ್ಲಾದರೂ ಹಾಜರಿರಲು ನಾವು ಬಯಸುವೆವು. ಮತ್ತು ಭಾಷಣಗಳಲ್ಲಿ, ಇಂಟರ್ವ್ಯೂಗಳಲ್ಲಿ, ಅನುಭವಗಳಲ್ಲಿ ಅಥವಾ ಡ್ರಾಮಾದಲ್ಲಿ, ಹೀಗೆ ವೇದಿಕೆಯಿಂದ ಹೇಳಲ್ಪಡುವ ಎಲ್ಲವುಗಳಿಗೆ ನಾವು ನಿಕಟವಾದ ಗಮನವನ್ನು ಕೊಡ ಬಯಸುವೆವು. ನೋಟ್ಸ್ ಬರಕೊಳ್ಳುವ ಮೂಲಕ ನಮ್ಮ ಜ್ಞಾಪಕವನ್ನು ಅನಂತರ ಮರುಕಳಿಸಲು ಸಾಧ್ಯವಾಗುತ್ತದೆ ಮಾತ್ರವಲ್ಲ ಏನು ಹೇಳಲ್ಪಡುತ್ತದೋ ಅದರ ಮೇಲೆ ಏಕಾಗ್ರತೆಯನ್ನಿಡಲು ಬಹಳ ಸಹಾಯವಾಗುತ್ತದೆ. ಹೌದು, ಅಧಿವೇಶನದ ಕಾರ್ಯಕ್ರಮದಲ್ಲೆಲ್ಲಾ, ‘ನಾವು ಹೇಗೆ ಕಿವಿಗೊಡಬೇಕು’ ಎಂಬದರ ಕಡೆಗೆ ಲಕ್ಷ್ಯಕೊಡಲು ನಾವು ಬಯಸಬೇಕು.—ಲೂಕ 8:18.