“ಶುದ್ಧಭಾಷೆ” ಜಿಲ್ಲಾ ಅಧಿವೇಶನಕ್ಕೆ ಬನ್ನಿರಿ
ಭಾಷೆಗಳಲ್ಲಿನ ವ್ಯತ್ಯಾಸಗಳು ಬಾಬೇಲಿನ ದಿನಗಳಿಂದ ಒಂದು ವಿಭಜಿಸುವ ಶಕ್ತಿಯಾಗಿರುತ್ತದೆ. ಅಲ್ಲಿ ಯೆಹೋವನು ಮಾನವ ಕುಲದ ಭಾಷೆಯನ್ನು ಗಲಿಬಿಲಿಸಿ, ‘ಒಂದು ಗೋಪುರವನ್ನು ಕಟ್ಟಿ ತಮಗಾಗಿ ಒಂದು ದೊಡ್ಡ ಹೆಸರನ್ನು’ ಮಾಡಲಿದ್ದ ಜನರ ಉದ್ದೇಶವನ್ನು ಭಗ್ನಗೊಳಿಸಿದ್ದನು. (ಆದಿಕಾಂಡ 11:4) ಭಾಷೆಯಲ್ಲಿನ ಭಿನ್ನತೆಗಳು ಎಷ್ಟು ವಿಭಜನಕಾರಿ ಎಂಬದನ್ನು ಬೆಲ್ಜಿಯಮ್ನಲ್ಲಿ ನಡೆದ ಘಟನೆಯು ತೋರಿಸುತ್ತದೆ. ಹಲವಾರು ವರ್ಷಗಳ ಹಿಂದೆ ಲೋವೆನ್ನ ಕ್ಯಾಥ್ಲಿಕ್ ಯುನಿವರ್ಸಿಟಿಯು ಭಾಷೆಗನುಸಾರ ಇಬ್ಭಾಗವಾಗಿ ಹೋಯಿತು.
ಮನುಷ್ಯರಲ್ಲಿ ಭೇದಗಳಾಗಲು ಕಾರಣವಾಗುವವುಗಳಲ್ಲಿ ಭಾಷೆಯು ಕೇವಲ ಒಂದು. ರಾಷ್ಟ್ರೀಯತೆ, ಕುಲ, ವಿದ್ಯಾಭ್ಯಾಸ ಮತ್ತು ಆರ್ಥಿಕ ಮಟ್ಟವು ಬೇರೆ ಕಾರಣಗಳು. ಆದರೆ ಯೆಹೋವನ ಸಾಕ್ಷಿಗಳು ಈ ಎಲ್ಲಾ ವಿಭಜಿಸುವ ಅಂಶಗಳನ್ನು ಜಯಿಸಲು ಕಾರ್ಯ ನಡಿಸಿದ್ದಾರೆ ಮತ್ತು ನಿಜವಾಗಿ ಐಕ್ಯರಾಗಿದ್ದಾರೆ.
ಕಳೆದ, ಬೇಸಗೆಯು, ಪೋಲೆಂಡ್ನ ಶೋರ್ಜಾವ್ (ಕಾಟೋವಿಸ್ ಹತ್ತಿರ), ಪೋಜ್ಞಾನ್ ಮತ್ತು ವಾರ್ಸೋ ನಗರಗಳಲ್ಲಿ ಈ ಐಕ್ಯತೆಯ ಒಂದು ಗಮನಾರ್ಹ ಪ್ರದರ್ಶನವನ್ನು ಕಂಡಿತು. 37 ದೇಶಗಳಿಂದ ಕಡಿಮೆಪಕ್ಷ ಸುಮಾರು 20 ಬೇರೆ ಬೇರೆ ಭಾಷೆಗಳನ್ನಾಡುವ ಸಾಕ್ಷಿಗಳು ಅಲ್ಲಿ ಉಪಸ್ಥಿತರಿದ್ದರು. ಆದರೂ, ಒಂದು ಗಮನಾರ್ಹ ಐಕ್ಯತೆಯು ಅವರೆಲ್ಲರಿಂದ ವ್ಯಕ್ತಪಡಿಸಲ್ಪಟ್ಟಿತ್ತು. ಇದಕ್ಕೆ ಕಾರಣ? ಅವರೆಲ್ಲರು ಶಾಸ್ತ್ರೀಯ ಸತ್ಯತೆಯ “ಶುದ್ಧ ಭಾಷೆ” ಯನ್ನಾಡುತ್ತಿದ್ದದ್ದೇ. ಇದು ಚೆಫನ್ಯ 3:9 ರಲ್ಲಿ ಪ್ರವಾದನಾ ರೂಪವಾಗಿ ರೂಪವಾಗಿ ಮುಂತಿಳಿಸಲ್ಪಟ್ಟಿತ್ತು: “ಆಗ ಅವರೆಲ್ಲರೂ ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ನಾನು [ಯೆಹೋವ ದೇವರು] ಶುದ್ಧಿ ಮಾಡುವೆನು.
ಆದ್ದರಿಂದ ಸಕಾರಣವಾಗಿಯೇ ನಮ್ಮ 1990 ರ ಅಧಿವೇಶನಗಳಿಗೆ “ಶುದ್ಧ ಭಾಷೆ” ಎಂಬ ಮೇಲ್ವಿಷಯವಿರುವದು. ಮಾನವ ಅಸಂಪೂರ್ಣತೆಯಿಂದ. ಸೈತಾನನ ದುಷ್ಟಲೋಕದ ಪ್ರಭಾವಗಳಿಂದ ಮತ್ತು ಪಿಶಾಚ ಹಾಗೂ ದೆವ್ವಗಳ ಕುಟಿಲ ಕೃತ್ಯಗಳಿಂದಾಗಿ “ಶುದ್ಧ ಭಾಷೆ” ಯನ್ನಾಡುವುದು ಯಾವಾಗಲೂ ಪ್ರವೃತ್ತಿಗಳ ವಿರುದ್ಧವಾಗಿ ನಾವು ಯಾವಾಗಲೂ ಎಚ್ಚರವಾಗಿರತಕ್ಕದ್ದು.
ಈ ಶುದ್ಧ ಭಾಷೆಯನ್ನು ದೇವರು ನಮಗೆ ಕೊಟ್ಟಿರುವುದೇಕೆ? ನಾವು ಯೆಹೋವನನ್ನು “ಹೆಗಲು ಹೆಗಲಾಗಿ” ಸೇವಿಸಲಿಕ್ಕಾಗಿಯೇ. ಬೇರೆ ಭಾಷಾಂತರಗಳು ದೇವರನ್ನು “ಒಂದೇ ನೊಗದ ಕೆಳಗೆ” (ದಿ ಜೆರೂಸಲೇಮ್ ಬೈಬಲ್), “ಒಂದೇ ಸಮ್ಮತಿಯಿಂದ” (ಮೊಫಾಟ್), “ಒಂದೇ ಒಡಂಬಡಿಕೆಯಿಂದ” (ಅಮೆರಿಕನ್ ಟ್ರಾನ್ಸ್ಲೇಶನ್), ಮತ್ತು “ಆತನ ಸೇವೆಯಲ್ಲಿ ಸಹಕರಿಸಿ” (ಬೈಯಿಂಗ್ಟನ್) ಸೇವಿಸುವ ಅರ್ಥಗಳನ್ನು ಕೊಡುತ್ತವೆ.
ಈ ಅಧಿವೇಶಗಳಲ್ಲಿ ನೀಡಲಾಗುವ ಭಾಷಣಗಳು, ದೃಶ್ಯಗಳು, ಅನುಭವಗಳು, ಭಾಷಣಮಾಲೆಗಳು ಮತ್ತು ಬೈಬಲ್ ನಾಟಕಗಳ ಮೂಲಕ ನಾವು ಶುದ್ಧಭಾಷೆಯನ್ನು ಇನ್ನೂ ನಿರರ್ಗಳವಾಗಿ ಮಾತಾಡಲು ಪ್ರೋತ್ಸಾಹಿಸಲ್ಪಡುವೆವು ಹಾಗೂ ಪ್ರೇರಿಸಲ್ಪಡುವೆವು. ನಮ್ಮ ಸಹೋದರರೊಂದಿಗೆ ಇನ್ನೂ ಪರಿಣಾಮಕಾರಿಯಾಗಿ ಮತ್ತು ಅನ್ಯೋನ್ಯತೆಯಲ್ಲಿ ಸೇವಿಸಲು ನಾವು ನಡಿಸಲ್ಪಡುವೆವು.
ಈ ಅಧಿವೇಶನಗಳು ಗುರುವಾರ ಅಪರಾಹ್ನ 1.00 ಘಂಟೆಯ ಸ್ವಲ್ಪ ನಂತರವೇ ಆರಂಭಗೊಂಡು ಆದಿತ್ಯವಾರ ಮದ್ಯಾಹ್ನ ಸಾಧಾರಣ 4.00 ಘಂಟೆಗೆ ಮುಕ್ತಾಯವಾಗುವವು. ಆರಂಭದ ಸಂಗೀತದಿಂದ ಆದಿತ್ಯವಾರ ಮದ್ಯಾಹ್ನದ ಮುಕ್ತಾಯ ಪ್ರಾರ್ಥನೆಯ ತನಕ ಎಲ್ಲಾ ಭಾಗಗಳಿಗೆ ಹಾಜರಿರಲು ಈಗಲೇ ಏರ್ಪಾಡು ಮಾಡಿರಿ.
ನಿಮ್ಮ ಬೈಬಲ್ ಮತ್ತು ಸಂಗೀತ ಪುಸ್ತಕಗಳನ್ನು ತನ್ನಿರಿ ಮತ್ತು ನೋಟ್ಸ್ ಬರೆಯಲು ತಯಾರಾಗಿರ್ರಿ. ಒಂದು ಒಳ್ಳೆಯ ಆತ್ಮಿಕ ಹಸಿವೆಯೊಂದಿಗೆ ನೀವು ಬರುವುದಾದರೆ ಶುದ್ಧ ಭಾಷೆಯನ್ನಾಡಲು ಹಾಗೂ ಯೆಹೋವನನ್ನು ಸೇವಿಸಲು ಇನ್ನೂ ಹೆಚ್ಚು ಸನ್ನದ್ಧರಾಗಿ ಹಿಂತೆರಳುವಿರಿ.
ಅಧಿವೇಶನಗಳ ದಿವಸ ಹಾಗೂ ವಿಳಾಸಗಳ ಕುರಿತಾದ ಮಾಹಿತಿಗಾಗಿ ನಿಮ್ಮ ವಠಾರದಲ್ಲಿರುವ ಯೆಹೋವನ ಸಾಕ್ಷಿಗಳ ಸ್ಥಳೀಯ ಸಭೆಯನ್ನು ಸಂಪರ್ಕಿಸಿರಿ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. (w90 2/15)