ಅಂತರ್ರಾಷ್ಟ್ರೀಯ ಭದ್ರತೆಗಾಗಿ ಮಾನವನ ಯೋಜನೆಗಳು
“ಇದೆಲ್ಲವೂ ಮುಗಿದ ಮೇಲೆ, ನಾವು ಶಮನ ಮಾಡುವವರಾಗ ಬಯಸುತ್ತೇವೆ. ಯಾವುದನ್ನು ನಾನು ಒಂದು ಹೊಸ ಲೋಕ ವ್ಯವಸ್ಥೆಯೆಂದು ಆಶಾವಾದಿಯಾಗಿ ಕರೆಯಬಹುದೋ ಅದನ್ನು ಸುಗಮಗೊಳಿಸಲು ನಮ್ಮಿಂದ ಶಕ್ಯವಾದ ಎಲ್ಲವನ್ನು ಮಾಡಲು ಇಚ್ಛಿಸುವೆವು.”—ಅಮೆರಿಕನ್ ಪ್ರೆಸಿಡೆಂಟ್ ಜಾರ್ಜ್ ಬುಷ್, ಜನವರಿ 1991, ಇರಾಕ್ನೊಂದಿಗೆ ಯುದ್ಧ ಪ್ರಾರಂಭಿಸಿದ ತುಸು ಸಮಯದ ಅನಂತರ.
ಪ್ರೆಸಿಡೆಂಟ್ ಜಾರ್ಜ್ ಬುಷ್ರವರ ಒಂದು ಹೊಸ ಲೋಕ ವ್ಯವಸ್ಥೆಯ, ಜನಾಂಗಕ್ಕೆ ಸ್ವಾತಂತ್ರ್ಯ ಮತ್ತು ನ್ಯಾಯ ಪಡೆಯುವುದಕ್ಕೆ ಒಂದು ಸಾಮುದಾಯಿಕ ಜವಾಬ್ದಾರಿಕೆ ಇದೆ ಎಂಬ ನೇಮವಿಧಿ ಮತ್ತು ನಂಬಿಕೆಯನ್ನು ಒತ್ತಿಹೇಳುತ್ತದೆ. ಶೀತ ಯುದ್ಧದ ಅಂತ್ಯದೊಂದಿಗೆ ಒಂದು ಹೊಸ ಯುಗವು ಹೊರಬರುತ್ತಾ ಇದೆ.”—ಅಸ್ಟ್ರೇಲಿಯದಲ್ಲಿ ಅಮೆರಿಕನ್ ರಾಯಭಾರಿ, ಆಗಸ್ಟ್ 1991.
“ಇಂದು ಭೂಗೋಲದ ಸುತ್ತಲೂ ವಿಕಸಿಸುತ್ತಿರುವ ಪ್ರಜಾಧಿಪತ್ಯದ ನಾಟಕವನ್ನು ನಾನು ಕಾಣುವಾಗ, ಪ್ರಾಯಶಃ—ಪ್ರಾಯಶಃ ಆ ಹೊಸ ಲೋಕಕ್ಕೆ ನಾವು ಎಂದಿಗಿಂತಲೂ ಹೆಚ್ಚು ಹತ್ತಿರವಿದ್ದೇವೆ.”—ಅಮೆರಿಕನ್ ಪ್ರೆಸಿಡೆಂಟ್ ಜಾರ್ಜ್ ಬುಷ್, ಸಪ್ಟಂಬರ 1991.
ಅನೇಕ ಲೋಕ ಧುರೀಣರು, ಪ್ರೆಸಿಡೆಂಟ್ ಬುಷ್ರವರಂತೆ, ಭವಿಷ್ಯದ ಕುರಿತು ಗೆಲವಿನ ನೋಟದಿಂದ ಮಾತಾಡುತ್ತಾರೆ. ಅವರ ಅಶಾವಾದಕ್ಕಾಗಿ ಸಕಾರಣವು ಅಲ್ಲಿದೆಯೇ? 2ನೆಯ ಲೋಕ ಯುದ್ಧದಂದಿನಿಂದ ಫಟನೆಗಳು ಅಂಥ ಆಶಾವಾದಕ್ಕೆ ಒಂದು ಆಧಾರವನ್ನು ಕೊಡುತ್ತವೋ? ರಾಜನೀತಿಜ್ಞರು ಅಂತರ್ರಾಷ್ಟ್ರೀಯ ಭದ್ರತೆಯನ್ನು ತರಶಕ್ತರು ಎಂದು ನೀವೆಣಿಸುತ್ತೀರೋ?
ಮನುಷ್ಯನ ಮಹಾ ಯೋಜನೆಗಳು
“ಎರಡನೆಯ ಲೋಕ ಯುದ್ಧದ ಕೊನೆಯ ಎರಡು ವರ್ಷಗಳಲ್ಲಿ,” ಗುಡ್ಬೈ ವಾರ್ ಟೆಲಿವಿಷನ್ ಸಾಕ್ಷ್ಯಚಿತ್ರವು ವಿವರಿಸಿದ್ದು, “ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ಪ್ರತಿತಿಂಗಳು ಕೊಲ್ಲಲ್ಪಟ್ಟರು.” ಆ ಸಮಯದಲ್ಲಿ, ಅಂಥ ಒಂದು ಯುದ್ಧವು ಪುನಃ ಸಂಭವಿಸುವುದನ್ನು ತಡೆಯುವ ಒಂದು ಯೋಜನೆಯ ತೀವ್ರಾಗತ್ಯವನ್ನು ಜನಾಂಗಗಳು ಕಂಡವು. ಯುದ್ಧವು ಇನ್ನೂ ನಡಿಯುತ್ತಿರುವಾಗಲೇ, 50 ಜನಾಂಗಗಳ ಪ್ರತಿನಿಧಿಗಳು ಅಂತರ್ರಾಷ್ಟ್ರೀಯ ಭದ್ರತೆಗಾಗಿ ಮನುಷ್ಯನಿಂದ ಹಿಂದೆಂದೂ ಯೋಜಿಸಲಾಗಿರದ ಒಂದು ಅತ್ಯಂತ ಮಹತ್ತಾದ ಯೋಜನೆಯನ್ನು ಉತ್ಪಾದಿಸಿದರು: ಅದೇ ಸಂಯುಕ್ತ ರಾಷ್ಟ್ರ ಸಂಘ ಸನ್ನದು. ಆ ಸನ್ನದಿನ ಪೀಠಿಕೆಯು, “ಮುಂದಿನ ತಲೆಮಾರುಗಳನ್ನು ಯುದ್ಧದ ಪೀಡೆಯಿಂದ ಕಾಪಾಡುವ” ನಿರ್ಧಾರವನ್ನು ವ್ಯಕ್ತಪಡಿಸಿತು. ಸಂಯುಕ್ತ ರಾಷ್ಟ್ರ ಸಂಘದ ಭಾವೀ ಸದಸ್ಯರು “ಅಂತರ್ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು [ತಮ್ಮ] ಬಲವನ್ನು ಏಕೀಕರಿಸಲಿಕ್ಕಿದ್ದರು.”
ನಾಲ್ವತ್ತೊಂದು ದಿನಗಳ ಅನಂತರ, ಒಂದು ವಿಮಾನವು ಜಪಾನಿನ ಹಿರೋಶಿಮದ ಮೇಲೆ ಒಂದು ಬಾಂಬನ್ನು ಹಾಕಿತು. ಅದು ನಗರದ ಮಧ್ಯೆ ಸ್ಫೋಟನಗೊಂಡು 70,000ಕ್ಕಿಂತಲೂ ಹೆಚ್ಚು ಜನರನ್ನು ಸಾಯಿಸಿತು. ಆ ಸ್ಫೋಟನ ಮತ್ತು ಅದನ್ನು ಹಿಂಬಾಲಿಸಿ ಮೂರು ದಿನಗಳ ಅನಂತರ ನಾಗಸಾಕಿಯ ಮೇಲೆ ಹಾಕಲ್ಪಟ್ಟ ಇನ್ನೊಂದು ಬಾಂಬ್, ಜಪಾನಿನೊಂದಿಗಿನ ಯುದ್ಧವನ್ನು ಪರಿಣಾಮಕಾರಿಯಾಗಿ ಅಂತ್ಯಗೊಳಿಸಿತು. ಜಪಾನಿನ ಮಿತ್ರ ರಾಷ್ಟ್ರವಾದ ಜರ್ಮನಿಯು ಮೇ 7, 1945ರಲ್ಲಿ ಶರಣಾಗತವಾಗಿದದ್ದರಿಂದ, 2 ನೆಯ ಲೋಕ ಯುದ್ಧವು ಹೀಗೆ ಮುಕ್ತಾಯಗೊಂಡಿತು. ಆದರೂ, ಅದು ಯುದ್ಧವೆಲ್ಲವುಗಳ ಅಂತ್ಯವಾಗಿತ್ತೋ?
ಅಲ್ಲ. 2 ನೆಯ ಲೋಕ ಯುದ್ಧದಂದಿನಿಂದ 150 ಕ್ಕಿಂತಲೂ ಹೆಚ್ಚು ಚಿಕ್ಕ ಯುದ್ಧಗಳು 1 ಕೋಟಿ 9 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಲಿಯಾಗಿ ತಕ್ಕೊಂಡಿರುತ್ತವೆ. ಸ್ಪಷ್ಟವಾಗಿಗಿ, ಸಂಯುಕ್ತ ರಾಷ್ಟ್ರ ಸಂಘದ ಮಹಾ ಯೋಜನೆಯು ಅಂತರ್ರಾಷ್ಟ್ರೀಯ ಭದ್ರತೆಯನ್ನು ಇನ್ನೂ ತಂದಿರುವುದಿಲ್ಲ. ಏನು ತಪ್ಪಾಯಿತು?
ಶೀತಲ ಯುದ್ಧ
ಸಂಯುಕ್ತ ರಾಷ್ಟ್ರ ಸಂಘದ ಯೋಜಕರು ಹಿಂದಣ 2 ನೆಯ ಲೋಕ ಯುದ್ಧದ ಮಿತ್ರ ರಾಷ್ಟ್ರಗಳ ನಡುವೆ ಶೀಘ್ರವಾಗಿ ವಿಕಸಿತಗೊಂಡ ಪ್ರತಿಸ್ಪರ್ಧೆಯನ್ನು ಮುನ್ನೋಡಲು ತಪ್ಪಿಹೋದರು, ಈ ಪ್ರಭುತ್ವ ಹೋರಾಟದಲ್ಲಿ ಅನೇಕ ರಾಜ್ಯಗಳು ಪಕ್ಷವನ್ನು ತಕ್ಕೊಂಡವು, ಇದನ್ನು ಶೀತಲ ಯುದ್ಧವೆಂದು ಕರೆಯಲಾಯಿತು ಮತ್ತು ಇದು ಅಂಶಿಕವಾಗಿ ಕಮ್ಯೂನಿಸ್ಟ್ ಮತ್ತು ಪ್ರಜಾಪ್ರಭುತ್ವದ ನಡುವಣ ಹೋರಾಟವಾಗಿತ್ತು. ಯುದ್ಧವನ್ನು ನಿಲ್ಲಿಸಲು ತಮ್ಮ ಸೇನೆಗಳನ್ನು ಏಕೀಕರಿಸುವ ಬದಲಾಗಿ, ಎರಡು ರಾಷ್ಟ್ರಗಳ ಬಣಗಳು ದೇಶೀಯ ಹೋರಾಟಗಳಲ್ಲಿ ವಿರುದ್ಧಪಕ್ಷಗಳನ್ನು ಬೆಂಬಲಿಸಿದರು ಮತ್ತು ಈ ರೀತಿಯಲ್ಲಿ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕಗಳಲ್ಲಿ ಒಬ್ಬರೊಂದಿಗೊಬ್ಬರು ಯುದ್ಧನಡಿಸಿದರು.
1960 ರ ಕೊನೆಯಲ್ಲಿ ಶೀತಯುದ್ಧವು ದ್ರವೀಕರಿಸ ತೊಡಗಿತು. ಯಾವುದು ಹೆಲ್ಸಿಂಕಿ ಒಪ್ಪಂದವೆಂದು ಕರೆಯಲ್ಪಟ್ಟಿತೋ ಅದಕ್ಕೆ 35 ರಾಷ್ಟ್ರಗಳು, ರಶ್ಯಾ ಮತ್ತು ಅಮೆರಿಕಗಳೂ ತಮ್ಮತಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಜೊತೆಸೇರಿ, 1975 ರಲ್ಲಿ ಸಹಿಮಾಡಿದಾಗ, ಆ ದ್ರವೀಕರಣವು ತುತ್ತತುದಿಗೇರಿತು. ಎಲ್ಲರೂ “ಶಾಂತಿ ಮತ್ತು ಭದ್ರತೆ”ಗಾಗಿ ಕಾರ್ಯನಡಿಸಲು ಮತ್ತು “ಯಾವುದೇ ರಾಜ್ಯದ ಸೀಮಾ ಸಮಗ್ರತೆ ಮತ್ತು ರಾಜಕೀಯ ಸ್ವಾತಂತ್ರ್ಯದ ವಿರುದ್ಧ . . . ಬೆದರಿಕೆ ಹಾಕುವುದರಿಂದ ಅಥವಾ ಬಲ ಪ್ರಯೋಗ ಮಾಡುವುದರಿಂದ ಅಥವಾ ಸಂಯುಕ್ತ ರಾಷ್ಟ್ರ ಸಂಘದ ಉದ್ದೇಶಗಳೊಂದಿಗೆ ಬೇರೆ ಯಾವುದೇ ರೀತಿಯಲ್ಲಿ ಅಸಂಗತವಾಗಿ ನಡೆಯುವುದರಿಂದ ದೂರವಿರುವೆವು,” ಎಂದು ವಚನವಿತ್ತರು.
ಆದರೆ ಈ ವಿಚಾರಗಳು ಫಲಕಾರಿಯಾಗಲಿಲ್ಲ. 1980 ರ ಆರಂಭದೊಳಗೆ, ಪ್ರಬಲ ರಾಷ್ಟ್ರಗಳ ನಡುವಣ ಹೋರಾಟವು ಪುನಃ ತೀವ್ರವಾಗ ತೊಡಗಿತು. ವಿಷಯಗಳು ಎಷ್ಟು ಕೆಟ್ಟುಹೋದವೆಂದರೆ 1982ರಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಹೊಸ ಚುನಾಯಿತ ಸೆಕ್ರಿಟರಿ-ಜನರಲ್ ಡಾ. ಹವೀಅರ್ ಪೇರಸ್ ಡಕೇಯ್ವರ್, ತಮ್ಮ ಸಂಘದ ವೈಫಲ್ಯವನ್ನು ಒಪ್ಪಿಕೊಂಡರು ಮತ್ತು ಒಂದು “ಹೊಸ ಅಂತರ್ರಾಷ್ಟ್ರೀಯ ಅರಾಜಕತೆಯ” ಕುರಿತು ಎಚ್ಚರಿಕೆ ಕೊಟ್ಟರು.
ಆದರೂ ಇಂದು, ಸಂಯುಕ್ತ ರಾಷ್ಟ್ರ ಸಂಘದ ಸೆಕ್ರಿಟರಿ-ಜನರಲ್ ಮತ್ತು ಇತರ ಮುಖಂಡರುಗಳು ಆಶಾವಾದವನ್ನು ವ್ಯಕ್ತಪಡಿಸುತ್ತಾರೆ. ವಾರ್ತಾ ವರದಿಗಳು “ಶೀತಯುದ್ಧಾನಂತರದ ಯುಗ”ಕ್ಕೆ ಉಲ್ಲೇಖನೆ ಮಾಡುತ್ತವೆ. ಈ ಬದಲಾವಣೆಯು ಉಂಟಾದದ್ದು ಹೇಗೆ?
“ಶೀತಲ ಯುದ್ಧಾನಂತರದ ಯುಗ”
ಯೂರೋಪಿನಲ್ಲಿ 35-ರಾಷ್ಟ್ರಗಳ ಒಂದು ಅಧಿವೇಶನವು ಭದ್ರತೆ ಮತ್ತು ಸಹಕಾರವನ್ನು ಚರ್ಚಿಸುವರೆ ಕೂಡಿಬಂದದ್ದು ಒಂದು ಗಮನಾರ್ಹ ವಿಷಯವಾಗಿತ್ತು. 1975 ರ ಹೆಲ್ಸಿಂಕಿ ಒಪ್ಪಂದಕ್ಕೆa ತಮ್ಮ ವಚನಬದ್ಧತೆಯನ್ನು ಮರುದೃಢೀಕರಿಸಲು ಅವರು ಸಪ್ಟಂಬರ 1986 ರಲ್ಲಿ ಸ್ಟಾಕ್ಹಾಮ್ ಪ್ರಮಾಣಪತ್ರ ಎಂದು ಕರೆಯಲ್ಪಟ್ಟ ಪತ್ರಕ್ಕೆ ಸಹಿಮಾಡಿದರು. ಸ್ಟಾಕ್ಹಾಮ್ ಪ್ರಮಾಣಪತ್ರದಲ್ಲಿ ಮಿಲಿಟರಿ ಚಟುವಟಿಕೆಗಳ ಮೇಲ್ವಿಚಾರ ನಡಿಸುವ ಅನೇಕ ನಿಯಮಗಳು ಅಡಕವಾಗಿವೆ. “ಕಳೆದ ಮೂರು ವರ್ಷಗಳ ಫಲಿತಾಂಶಗಳು ಉತ್ತೇಜಕವಾಗಿವೆ ಮತ್ತು ಪೂರೈಸಲ್ಪಟ್ಟ ವಿಷಯಗಳು ಸ್ಟಾಕ್ಹಾಮ್ ಪ್ರಮಾಣಪತ್ರದ ಲಿಖಿತ ಹಂಗುಗಳಿಗಿಂತಲೂ ಹೆಚ್ಚಾಗ ತೊಡಗಿವೆ,” ಎಂದು SIPRI (ಸ್ಟಾಕ್ಹಾಮ್ ಇಂಟರ್ನೇಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್) ತನ್ನ 1990 ವರ್ಷಪುಸ್ತಕ ದಲ್ಲಿ ವರದಿ ಮಾಡಿದೆ.
ಅನಂತರ 1987 ರಲ್ಲಿ, ಪ್ರಬಲ ರಾಷ್ಟ್ರಗಳು, 500 ಮತ್ತು 5,500 ಕಿಲೊಮೀಟರ್ ದೂರ ಹಾರಶಕ್ತನಾದ ನೆಲದಿಂದೆಸೆಯುವ ತಮ್ಮೆಲ್ಲಾ ಕ್ಷಿಪಣಿಗಳನ್ನು ನಾಶಮಾಡಲು ಆವಶ್ಯಪಡಿಸುವ ಒಂದು ಗಮನಾರ್ಹ ಒಪ್ಪಂದಕ್ಕೆ ಬಂದವು. “ಕ್ಷಿಪಣಿಗಳ ಮತ್ತು ಲಾಂಚರ್ಗಳ ಭೌತಿಕ ನಷ್ಟಪಡಿಸುವಿಕೆಯು ಕಾಲತಖ್ತೆಗೆ ಅನುಸಾರ ನಡೆಯಲಿದೆ ಮತ್ತು ಒಪ್ಪಂದದ ಷರತ್ತುಗಳು ಪ್ರತಿ ಪಕ್ಷದಿಂದ ಅವಕ್ಕೆ ಹೊಂದಿಕೆಯಾಗಿ ಅವಲೋಕಿಸಲ್ಪಡುತ್ತಿವೆ,” ಎನ್ನುತ್ತದೆ SIPRI.
ಪರಮಾಣು ಯುದ್ಧದ ಕೇಡನ್ನು ಕಡಿಮೆಗೊಳಿಸುವ ಬೇರೆ ಕ್ರಮಗಳನ್ನೂ ಕೈಕೊಳ್ಳಲಾಗಿದೆ. ಉದಾಹರಣೆಗಾಗಿ, 1988 ರಲ್ಲಿ ಪ್ರಬಲ ರಾಷ್ಟ್ರಗಳು “ಅಂತರ್ ಭೂಖಂಡ ಉತ್ಕ್ಷೇಪ ಕ್ಷಿಪಣಿ ಮತ್ತು ಜಲಾಂತರ್ನೌಕೆಯಿಂದೆಸೆಯುವ ಉತ್ಕ್ಷೇಪ ಕ್ಷಿಪಣಿಯ” ಕುರಿತಾದ ಒಂದು ಒಪ್ಪಂದಕ್ಕೆ ಸಹಿಮಾಡಿದರು. ಅಂಥ ಶಸ್ತ್ರಗಳನ್ನು ಎಸೆಯುವ ಮುಂಚೆ, ಪ್ರತಿ ಪಕ್ಷವು ಇನ್ನೊಂದು ಪಕ್ಷಕ್ಕೆ “ಅದನ್ನೆಸೆಯಲು ಯೋಜಿಸಿದ ತಾರೀಕು, ಎಸೆಯುವ ಕ್ಷೇತ್ರ ಮತ್ತು ಅದು ಅಪ್ಪಳಿಸುವ ಜಾಗದ ಕುರಿತು 24 ತಾಸುಗಳ ಮುಂಚೆ” ತಿಳಿಸತಕ್ಕದ್ದು. SIPRI ಅನುಸಾರವಾಗಿ, ಇಂಥ ಒಪ್ಪಂದಗಳು “ಸ್ಥಳೀಕ ಘಟನೆಗಳನ್ನು ಲೋಕವ್ಯಾಪಕ ಪರಮಾಣು ಯುದ್ಧವಾಗಿ ಮಾರ್ಪಡಿಸುವುದರಿಂದ ಕಾರ್ಯತಃ ನಿಲ್ಲಿಸುತ್ತವೆ.”
ಈ ಮಧ್ಯೆ ಅಂತರ್ರಾಷ್ಟ್ರೀಯ ಭದ್ರತೆಯನ್ನು ಪ್ರಗತಿಮಾಡುವ ಯೋಜನೆಗಳು ವೇಗವಾಗಿ ಮುಂದರಿದವು. ವಾಷಿಂಗ್ಟನ್ನಲ್ಲಿ ಮೇ 1990 ರಲ್ಲಿ ನಡೆದ ಪ್ರಬಲ ರಾಷ್ಟ್ರಗಳ ಒಂದು ಅಧಿವೇಶನದಲ್ಲಿ ರಶ್ಯಾದ ಪ್ರೆಸಿಡೆಂಟ್ ಮಿಕೈಲ್ ಗೊರ್ಬಚೆವ್ ಯೂರೋಪಿಯನ್ ಜನಾಂಗಗಳ ಎರಡು ಬಣಗಳು ಒಂದು ಶಾಂತಿ ಸಂಧಾನಕ್ಕೆ ಸಹಿಮಾಡುವ ಪ್ರಸ್ತಾಪವನ್ನು ಮುಂತಂದರು. ಜುಲೈಯಲ್ಲಿ NATO (ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರನ್ಗೈಜೇಷನ್) ವಿನ 16 ಪಾಶ್ಚಿಮಾತ್ಯ ಜನಾಂಗಗಳು ಲಂಡನ್ನಲ್ಲಿ ಕೂಡಿಬಂದವು. ಮಿಕೈಲ್ ಗೊರೊಬಚೆವ್ರ ಪ್ರಸ್ತಾಪಕ್ಕೆ ಅವರ ಪ್ರತಿವರ್ತನೆ ಏನಾಗಿತ್ತೆಂದರೆ ಎರಡೂ ಪಕ್ಷಗಳು “ಇನ್ನು ಮುಂದೆ ನಾವು ಶತ್ರುಗಳಲ್ಲ, ಮತ್ತು ಬೆದರಿಕೆ ಹಾಕುವುದನ್ನು ಅಥವಾ ಬಲವನ್ನುಪಯೋಗಿಸುವುದನ್ನು ಬಿಟ್ಟುಬಿಡುವ ನಮ್ಮ ಹೇತುವನ್ನು ದೃಢೀಕರಿಸುವೆವು ಎಂದು ಗಂಭೀರವಾಗಿ ಹೇಳುವ ಸಂಯುಕ್ತ ಘೋಷಣೆಗೆ” ಸಹಿ ಮಾಡಬೇಕು ಎಂದಾಗಿತ್ತು. ಇದನ್ನು ಆಫ್ರಿಕದ ಒಂದು ವಾರ್ತಾಪತ್ರಿಕೆಯ ಮುಖಪುಟದ ತಲೆಪಂಕ್ತಿಯು “ಲೋಕಶಾಂತಿಗಾಗಿ ಒಂದು ದಾಟುಗಾಲು” ಎಂದು ವರ್ಣಿಸಿತ್ತು.
ಅನಂತರ ಹೆಲ್ಸಿಂಕಿಯ ಫಿನ್ಲೆಂಡ್ನಲ್ಲಿ ನಡೆದ ಪ್ರಧಾನ ರಾಷ್ಟ್ರಗಳ ಒಂದು ಅಧಿವೇಶನಕ್ಕೆ ತುಸು ಮುಂಚೆ ಅಮೆರಿಕ ಸರಕಾರದ ಒಬ್ಬ ಪ್ರತಿನಿಧಿಯು, “[ಮಧ್ಯಪೂರ್ವದಲ್ಲಿ] ಒಂದು ಯುದ್ಧದ ಸಂಭವನೀಯತೆಯು ಲೋಕ ಶಾಂತಿಗಾಗಿ ಒಂದು ಹೊಸ ಗುಂಪು ಯೋಜನೆಯನ್ನು ಮುನ್ನುಗ್ಗಿಸಿದೆ” ಎಂದು ಹೇಳಿದನು. ಇರಾಕ್ ಕುವೈಟ್ನ್ನು ಆಕ್ರಮಿಸಿದಾಗ ಶಾಂತಿಗೆ ಒಂದು ಹಿಮ್ಮೆಟ್ಟು ದೊರಕಿತು ಮತ್ತು ಮಧ್ಯಪೂರ್ವದ ದೇಶಗಳಿಗೆಲ್ಲಾ ಯುದ್ಧವು ಹರಡುವ ಗಂಡಾಂತರ ಅಲ್ಲಿರುವಂತೆ ಕಂಡಿತು. ಆದರೆ ಸಂಯುಕ್ತ ರಾಷ್ಟ್ರ ಸಂಘದ ಅಧಿಕಾರದ ಕೆಳಗೆ, ಅಮೆರಿಕದಿಂದ ನಡಿಸಲ್ಪಟ್ಟ ಒಂದು ಅಂತರ್ರಾಷ್ಟ್ರೀಯ ಪಡೆಯು ಆಕ್ರಮಣಗೈದ ಸೇನೆಗಳನ್ನು ಅವರ ಸ್ವಂತ ದೇಶಕ್ಕೆ ಹಿಂದಟ್ಟಿತು. ಆ ಯುದ್ಧದಲ್ಲಿ ಪ್ರದರ್ಶಿಸಲ್ಪಟ್ಟ ಅಂತರಾಷ್ಟ್ರೀಯ ಉದ್ದೇಶ ಐಕ್ಯತೆಯು ಸಹಕಾರದ ಒಂದು ಹೊಸ ಯುಗವು ಮೂಡಿಯದೆ ಎಂದು ನಿರೀಕ್ಷಿಸುವುದಕ್ಕೆ ಕೆಲವರನ್ನು ಉತ್ತೇಜಿಸಿಯದೆ.
ಅಂದಿನಿಂದ ಲೋಕ ಘಟನೆಗಳು ಇನ್ನಷ್ಟು ವಿಕಾಸಗೊಂಡಿವೆ. ವಾಸ್ತವದಲ್ಲಿ ಒಮ್ಮೆ ಸೋವಿಯೆಟ್ ರಶ್ಯಾ ಏನಾಗಿತ್ತೋ ಅದು ತಾನೇ ನಾಟಕೀಯ ಬದಲಾವಣೆಯನ್ನು ಹೊಂದಿದೆ. ಬಾಲಿಕ್ಟ್ ರಾಜ್ಯಗಳು ತಮ್ಮ ಸ್ವಾತಂತ್ರ್ಯವನ್ನು ಘೋಷಿಸುವಂತೆ ಬಿಡಲ್ಪಟ್ಟವು ಮತ್ತು ರಶ್ಯಾದ ಇತರ ಪ್ರಜಾಪ್ರಭುತ್ವಗಳು ಅವರ ಮಾದರಿಯನ್ನು ಅನುಸರಿಸಿದವು. ಕೇಂದ್ರೀಯ ಕಮ್ಯೂನಿಸ್ಟ್ ಅಧಿಕಾರದ ಕೆಳಗೆ ಆಖಂಡವಾಗಿದ್ದಂತೆ ತೋರಿದ್ದಂಥ ದೇಶಗಳಲ್ಲಿ ಕುಲಸಂಬಂಧವಾದ ಪ್ರತಿಸ್ಪರ್ಧೆಗಳು ಮೇಲಕ್ಕೆ ಬಂದವು. ಈ ಮಧ್ಯೆ, ಪೂರ್ವ ಯೂರೋಪಿಯನ್ ದೇಶಗಳು ತೀವ್ರ ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸುವರೆ ತಮ್ಮ ಹಿಂದಿನ ಶತ್ರುಗಳನ್ನು ಸಹಾಯಕ್ಕಾಗಿ ಕೋರಿದವು.
ಲೋಕದ ರಾಜಕೀಯ ರಂಗದ ಈ ತೀವ್ರ ಬದಲಾವಣೆಗಳು ಸಂಯುಕ್ತ ರಾಷ್ಟ್ರ ಸಂಘಟನೆಗಾಗಿ ಸಂದರ್ಭದ ದಾರಿಯನ್ನು ತೆರೆದವು. ಈ ಸಂಬಂಧದಲ್ಲಿ ದ ನ್ಯೂಯೋರ್ಕ್ ಟೈಮ್ಸ್ ಹೇಳಿದ್ದು: “ಲೋಕವ್ಯಾಪಕ ಬಿಕ್ಕಟ್ಟುಗಳ ಶಮನವು ಮತ್ತು ಅಮೆರಿಕ ಮತ್ತು ರಶ್ಯಾಗಳ ನಡುವಣ ಸಹಕಾರದ ಹೊಸ ಭಾವವು, ವಿಶ್ವ ಸಂಸ್ಥೆಗೆ ಅಂತರ್ರಾಷ್ಟ್ರೀಯ ಕಾರ್ಯಾದಿಗಳಲ್ಲಿ ಒಂದು ಹೊಸ, ಹೆಚ್ಚು ಪ್ರಭಾವಯುಕ್ತವಾದ ಪಾತ್ರದ ಅರ್ಥದಲ್ಲಿರ ಸಾಧ್ಯವಿದೆ.”
ಈ 47 ವರ್ಷ ಪ್ರಾಯದ ಸಂಸ್ಥೆಯು ಏನೆಲ್ಲಾ ಮಾಡಬಲ್ಲದೆಂದು ತೋರಿಸುವ ಸಮಯವು ಕೊನೆಗೆ ಬಂದಿದೆಯೇ? ಅಮೆರಿಕವು ಯಾವುದನ್ನು “ಶಾಂತಿ, ಸ್ವಾತಂತ್ರ್ಯ ಮತ್ತು ಸಮೃದ್ಧಿಯ ಒಂದು ಹೊಸ ಶಕ, ಒಂದು ಹೊಸ ಧರ್ಮಯುಗ” ಎಂದು ಕರೆದಿದೆಯೇ ಅದನ್ನು ನಾವು ನಿಜವಾಗಿಯೂ ಪ್ರವೇಶಿಸುತ್ತಿದ್ದೇವೋ? (w92 3/1)
[ಅಧ್ಯಯನ ಪ್ರಶ್ನೆಗಳು]
a ಈ ಒಪ್ಪಂದವು ಕೆನಡಾ, ಅಮೆರಿಕ, ರಶ್ಯಾ ಮತ್ತು ಬೇರೆ 32 ದೇಶಗಳವರಿಂದ ಹೆಲ್ಸಿಂಕಿಯಲ್ಲಿ ಸಹಿಮಾಡಲ್ಪಟ್ಟ ಶಾಂತಿ ಕರಾರುಗಳಲ್ಲಿ ಮೊದಲನೆಯದ್ದು ಮತ್ತು ಅತ್ಯಂತ ಮಹತ್ವದ್ದು. ಮುಖ್ಯ ಒಪ್ಪಂದದ ಅಧಿಕೃತ ಹೆಸರು ಯೂರೋಪಿನಲ್ಲಿ ಭದ್ರತೆ ಮತ್ತು ಸಹಕಾರದ ಮೇಲಣ ಅಧಿವೇಶನದ ಅಂತಿಮ ಶಾಸನವಾಗಿದೆ. ಅದರ ಪ್ರಧಾನ ಗುರಿಯು ಪೂರ್ವ ಮತ್ತು ಪಶ್ಚಿಮದ ನಡುವಣ ಅಂತರ್ರಾಷ್ಟ್ರೀಯ ಬಿಕ್ಕಟ್ಟನ್ನು ಕಡಿಮೆಗೊಳಿಸುವುದೇ.—ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ.