ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 6/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ನೀವು “ಯಾಜಕರಾಜ್ಯ” ಆಗುವಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ದೇವರ ಒಡಂಬಡಿಕೆಗಳಿಂದ ನೀವು ಪ್ರಯೋಜನ ಪಡೆಯುವಿರೋ?
    ಕಾವಲಿನಬುರುಜು—1990
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1990
  • ಹೊಸ ಒಡಂಬಡಿಕೆಯ ಮುಖಾಂತರ ಹೆಚ್ಚು ಶ್ರೇಷ್ಠವಾದ ಆಶೀರ್ವಾದಗಳು
    ಕಾವಲಿನಬುರುಜು—1998
ಇನ್ನಷ್ಟು
ಕಾವಲಿನಬುರುಜು—1992
w92 6/1 ಪು. 31

ವಾಚಕರಿಂದ ಪ್ರಶ್ನೆಗಳು

ಒಂದು ಒಡಂಬಡಿಕೆಯು ಸ್ಥಿರೀಕರಿಸಲ್ಪಡಬೇಕಾದರೆ ಒಡಂಬಡಿಕೆಗಾರನು ಸಾಯಲೇ ಬೇಕು ಎಂದು ಇಬ್ರಿಯರಿಗೆ 9:16 ರಲ್ಲಿ ಹೇಳಿಯದೆ. ಆದರೆ ಹೊಸ ಒಡಂಬಡಿಕೆಯನ್ನು ಮಾಡಿದವನು ದೇವರು ಮತ್ತು ಆತನು ಸಾಯಲಿಲ್ಲ. ಹೀಗಿರಲಾಗಿ, ನಾವು ಈ ವಚನವನ್ನು ಹೇಗೆ ಅರ್ಥಮಾಡಬಲ್ಲೆವು?

ಇಬ್ರಿಯರಿಗೆ 9:15-17, (NW)ರಲ್ಲಿ ನಾವು ಹೀಗೆ ಓದುತ್ತೇವೆ: “ಈ ಕಾರಣದಿಂದ ಆತನು [ಕ್ರಿಸ್ತನು] ಒಂದು ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ. ಮೊದಲನೆಯ ಒಡಂಬಡಿಕೆಯ ಕಾಲದಲ್ಲಿ ನಡೆದ ಅಕ್ರಮಗಳ ಪರಿಹಾರಕ್ಕಾಗಿ ಆತನು ಮರಣವನ್ನೂ ಅನುಭವಿಸಿದ್ದರಿಂದ ದೇವರಿಂದ ಕರೆಯಿಸಿಕೊಂಡವರು ವಾಗ್ದಾನವಾಗಿದ್ದ ನಿತ್ಯ ಬಾಧ್ಯತೆಯನ್ನು ಹೊಂದುವುದಕ್ಕೆ ಆತನ ಮೂಲಕ ಮಾರ್ಗವಾಯಿತು. ಎಲ್ಲಿ ಒಂದು ಒಡಂಬಡಿಕೆ ಇದೆಯೇ ಅಲ್ಲಿ [ಮಾನವ] ಒಡಂಬಡಿಕೆಗಾರನ ಮರಣವನ್ನು ಪ್ರಸಿದ್ಧಪಡಿಸುವ ಅಗತ್ಯವಿದೆ. ಯಾಕಂದರೆ ಒಡಂಬಡಿಕೆಯು ಮರಣವಾದ ಮೇಲೆ ಮಾತ್ರ ಸ್ಥಿರೀಕರಿಸಲ್ಪಡುವುದೇ ಹೊರತು [ಮಾನವ] ಒಡಂಬಡಿಕೆಗಾರನು ಜೀವದಿಂದಿರುವಾಗ ಅದೆಂದೂ ಜ್ಯಾರಿಯಲ್ಲಿರದು.”a

ಹೊಸ ಒಡಂಬಡಿಕೆಯನ್ನು ಸಾಕ್ಷ್ಯಾತ್‌ ಮಾಡಿದವನು ಯೆಹೋವನು. ಯೆರೆಮೀಯ 31:31-34ರಲ್ಲಿ, ತನ್ನ ಜನರೊಂದಿಗೆ ಒಂದು ಹೊಸ ಒಡಂಬಡಿಕೆಯನ್ನು ಮಾಡುವನೆಂದು ದೇವರು ತಾನೇ ಸ್ಪಷ್ಟವಾಗಿಗಿ ಮುಂತಿಳಿಸಿದ್ದನು. ಈ ವಚನವನ್ನು ಅಪೊಸ್ತಲ ಪೌಲನು ಇಬ್ರಿಯ 8:8-13ರಲ್ಲಿ ಉಲ್ಲೇಖಿಸಿದ್ದಾನೆ; ಈ ದೈವಿಕ ಒಡಂಬಡಿಕೆಗೆ ಕಾರ್ಯತಃ ದೇವರೇ ಮೂಲನು ಎಂದು ಪೌಲನು ಗಣ್ಯಮಾಡಿದ್ದನೆಂದು ಇದು ಸ್ಫುಟವಾಗಿ ತೋರಿಸುತ್ತದೆ.

ಆದರೂ ಇಬ್ರಿಯ 9ನೆಯ ಅಧ್ಯಾಯದಲ್ಲಿ, ಹೊಸ ಒಡಂಬಡಿಕೆಯ ಸಂಬಂಧದಲ್ಲಿ ಯೇಸು ವಹಿಸಿದ ಹಲವಾರು ಪಾತ್ರಗಳನ್ನು ಪೌಲನು ಚರ್ಚಿಸುತ್ತಾ ಹೋಗಿದ್ದಾನೆ. ಕ್ರಿಸ್ತನು ಈ ಒಡಂಬಡಿಕೆಯ ಮಹಾ ಯಾಜಕನಾಗಿ ಬಂದನು. ಇನ್ನೊಂದು ದೃಷ್ಟಿಕೋನದಲ್ಲಿ, ಯೇಸು ಹೊಸ ಒಡಂಬಡಿಕೆಗಾಗಿ ಯಜ್ಞವಾಗಿದ್ದನು; “ಕ್ರಿಸ್ತನ ರಕ್ತವು” ಮಾತ್ರ “ನಿರ್ಜೀವಕರ್ಮಗಳಿಂದ ನಮ್ಮ ಮನಸ್ಸನ್ನು ಶುದ್ಧೀಕರಿಸ” ಬಲ್ಲದು. ಮೋಶೆಯು ನಿಯಮದೊಡಂಬಡಿಕೆಯ ಮಧ್ಯಸ್ಥನಾಗಿದ್ದ ಹಾಗೆ ಕ್ರಿಸ್ತನು ಸಹ ಹೊಸ ಒಡಂಬಡಿಕೆಯ ಮದ್ಯಸ್ಥನು.—ಇಬ್ರಿಯ 9:11-15.

ದೇವರ ಮತ್ತು ಮನುಷ್ಯರ ನಡುವಣ ಒಡಂಬಡಿಕೆಗಳನ್ನು ಸ್ಥಿರೀಕರಿಸಲು ಒಂದು ಮರಣದ ಅಗತ್ಯವಿತ್ತೆಂದು ಪೌಲನು ತಿಳಿಸಿದ್ದಾನೆ. ನಿಯಮದೊಡಂಬಡಿಕೆಯು ಒಂದು ಮಾದರಿಯಾಗಿದೆ. ಮೋಶೆಯು ಅದರ ಮಧ್ಯಸ್ಥನು, ದೇವರ ಮತ್ತು ಮಾಂಸಿಕ ಇಸ್ರಾಯೇಲ್ಯರ ನಡುವಣ ಈ ಒಪ್ಪಂದವನ್ನು ಪೂರೈಸಿದವನು. ಮೋಶೆಯು ಹೀಗೆ ನಿರ್ಣಾಯಕ ಪಾತ್ರವನ್ನು ವಹಿಸಿದನು ಮತ್ತು ಇಸ್ರಾಯೇಲ್ಯರು ಒಡಂಬಡಿಕೆಯೊಳಗೆ ಬರುವಾಗ ಅವರೊಂದಿಗೆ ವ್ಯವಹಾರ ಮಾಡಿದ್ದ ಮನುಷ್ಯನು ಅವನು. ಹೀಗೆ ಯೆಹೋವನು ಮಾಡಿದ್ದ ನಿಯಮದೊಡಂಬಡಿಕೆಗೆ ಮೋಶೆಯನ್ನು ಮಾನವ ಒಡಂಬಡಿಕೆಗಾರನಾಗಿ ನೋಡ ಸಾಧ್ಯವಿದೆ. ಆದರೆ ಆ ನಿಯಮದೊಡಂಬಡಿಕೆಯು ಜಾರಿಗೆ ಬರಬೇಕಾದರೆ ಮೋಶೆಗೆ ತನ್ನ ಜೀವರಕ್ತವನ್ನು ಸುರಿಸಬೇಕಿತ್ತೋ? ಇಲ್ಲ. ಅದಕ್ಕೆ ಬದಲಿಗೆ ಪಶುಗಳು ನೀಡಲ್ಪಟ್ಟವು, ಅವುಗಳ ರಕ್ತವು ಮೋಶೆಯ ರಕ್ತಕ್ಕೆ ಬದಲಿಯಾಗಿ ನಿಂತವು.—ಇಬ್ರಿಯ 9:18-22.

ಯೆಹೋವ ಮತ್ತು ಆತ್ಮಿಕ ಇಸ್ರಾಯೇಲ್‌ ಜನಾಂಗದ ನಡುವೆ ಮಾಡಲ್ಪಟ್ಟ ಹೊಸ ಒಡಂಬಡಿಕೆಯ ಕುರಿತೇನು? ಆತ್ಮಿಕ ಇಸ್ರಾಯೇಲ್ಯರ ಮತ್ತು ಯೆಹೋವನ ನಡುವೆ ಮಧ್ಯಸ್ಥಗಾರನಾಗಿ, ಮಧ್ಯಸಿಕ್ಥೆ ಮಾಡುವ ಮಹತ್ತಾದ ಪಾತ್ರವು ಕ್ರಿಸ್ತ ಯೇಸುವಿದ್ದಾಗಿತ್ತು. ಯೆಹೋವ ದೇವರು ಈ ಒಡಂಬಡಿಕೆಯ ಮೂಲಕರ್ತನಾಗಿದ್ದರೂ, ಅದು ಕ್ರಿಸ್ತನ ಮೇಲೆ ಆಧಾರಿಸಿತ್ತು. ಯೇಸು ಅದರ ಮಧ್ಯಸ್ಥನು ಮಾತ್ರವಲ್ಲದೆ, ಯಾರು ಈ ಒಡಂಬಡಿಕೆಯೊಳಗೆ ಪ್ರಥಮವಾಗಿ ತಕ್ಕೊಳ್ಳಲ್ಪಡಲಿದ್ದರೋ ಅವರೊಂದಿಗೆ ಆತನು ದೈಹಿಕವಾಗಿ ನೇರ ವ್ಯವಹಾರವನ್ನು ಮಾಡಿದ್ದನು. (ಲೂಕ 22:20, 28, 29) ಅದಲ್ಲದೆ ಆ ಒಡಂಬಡಿಕೆಯನ್ನು ಸ್ಥಿರೀಕರಿಸಲು ಬೇಕಾದ ಯಜ್ಞವನ್ನು ಒದಗಿಸಲಿಕ್ಕೆ ಅವನು ಯೋಗ್ಯತೆ ಪಡೆದಿದ್ದನು. ಈ ಯಜ್ಞವು ಕೇವಲ ಪಶುಗಳದ್ದಲ್ಲ, ಬದಲಿಗೆ ಒಂದು ಪರಿಪೂರ್ಣ ಮಾನವ ಜೀವದ್ದಾಗಿದೆ. ಆದ್ದರಿಂದ ಪೌಲನು ಕ್ರಿಸ್ತನಿಗೆ ಹೊಸ ಒಡಂಬಡಿಕೆಯ ಮಾನವ ಒಡಂಬಡಿಕೆಗಾರನೆಂಬದಾಗಿ ಸೂಚಿಸ ಸಾಧ್ಯವಾಯಿತು. “ಕ್ರಿಸ್ತನು . . . ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವುದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದಾಗ” ಆ ಹೊಸ ಒಡಂಬಡಿಕೆಯು ಸ್ಥಿರೀಕರಿಸಲ್ಪಟ್ಟಿತು.—ಇಬ್ರಿಯ 9:12-14, 24.

ಮೋಶೆ ಮತ್ತು ಯೇಸುವನ್ನು ಮಾನವ ಒಡಂಬಡಿಕೆಗಾರರೆಂದು ಹೇಳುವಲ್ಲಿ, ಅವರಲ್ಲಿ ಯಾರಾದರೂ ಅವರವರ ಒಡಂಬಡಿಕೆಗಳ ಮೂಲಕರ್ತರಾಗಿದ್ದರೆಂದು ಪೌಲನು ಸೂಚಿಸುವುದಿಲ್ಲ. ಕಾರ್ಯತಃ ದೇವರು ಅವುಗಳ ಮೂಲಕರ್ತನು. ಬದಲಿಗೆ ಆ ಇಬ್ಬರು ಮಾನವರು ಅವರವರ ಒಡಂಬಡಿಕೆಗಳನ್ನು ಪೂರೈಸುವುದರಲ್ಲಿ ಮಧ್ಯಸ್ಥರಾಗಿ ಅದರಲ್ಲಿ ನಿಕಟವಾಗಿ ಒಳಗೂಡಿದ್ದರು. ಮತ್ತು ಪ್ರತಿ ಸಂದರ್ಭದಲ್ಲಿ, ಒಂದು ಮರಣದ ಅಗತ್ಯವಿತ್ತು—ಮೋಶೆಗಾಗಿ ಪಶುಗಳು ಬದಲಿಯಾಗಿದ್ದವು, ಮತ್ತು ಯೇಸು ಹೊಸ ಒಡಂಬಡಿಕೆಯಲ್ಲಿರುವವರಿಗಾಗಿ ತನ್ನ ಸ್ವಂತ ಜೀವರಕ್ತವನ್ನು ನೀಡಿದ್ದನು. (w92 3⁄1)

[ಅಧ್ಯಯನ ಪ್ರಶ್ನೆಗಳು]

a “ಒಡಂಬಡಿಕೆಗಾರನು” ಎಂದು ಇಲ್ಲಿ ಉಪಯೋಗಿಸಲ್ಪಟ್ಟ ಎರಡು ಗ್ರೀಕ್‌ ಶಬ್ದಗಳು ಅಕ್ಷರಾರ್ಥವಾಗಿ, “ತನಗಾಗಿ ಒಡಂಬಡಿಕೆಯನ್ನು ಮಾಡಿಕೊಂಡ [ಒಬ್ಬನ],” ಅಥವಾ “ಒಡಂಬಡಿಕೆಯನ್ನು ಮಾಡುತ್ತಿರುವ [ಒಬ್ಬನ] ಎಂದು ತರ್ಜುಮೆಯಾಗಿವೆ.—ದ ಕಿಂಗ್‌ಡಂ ಇಂಟರ್‌ಲಿನಿಅರ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಗ್ರೀಕ್‌ ಸ್ಕ್ರಿಪ್ಚರ್ಸ್‌, ವಾಚ್‌ಟವರ್‌ ಬೈಬಲ್‌ ಎಂಡ್‌ ಟ್ರಾಕ್ಟ್‌ ಸೊಸೈಟಿ ಆಫ್‌ ನ್ಯೂ ಯಾರ್ಕ್‌; ಮತ್ತು ದ ಇಂಟರ್‌ಲಿನಿಯರ್‌ ಗ್ರೀಕ್‌-ಇಂಗ್ಲಿಷ್‌ ನ್ಯೂ ಟೆಸ್ಟಮೆಂಟ್‌, ಡಾ.ಆರ್ಲ್ಪೆಡ್‌ ಮಾರ್ಷಲ್‌ ಇವರಿಂದ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ