ಬೈಬಲ್ ದೇವರ ಪ್ರೇರಿತ ಕೊಡುಗೆ ಏಕೆಂಬದಕ್ಕೆ ಕಾರಣ
“ದೇವರು ಪ್ರೀತಿ” ಎಂಬದಾಗಿ ಬೈಬಲು ಹೇಳುತ್ತದೆ ಮತ್ತು ವಿವೇಕವೂ ಶಕ್ತಿಯೂ ಆತನಿಗೆ ಸೇರಿದ್ದೆಂದು ತಿಳಿಸುತ್ತದೆ. (1 ಯೋಹಾನ 4:8; ಯೋಬ 12:13; ಯೆಶಾಯ 40:26) “ಆತನು ನಡಿಸುವದೆಲ್ಲಾ ನ್ಯಾಯ” ಎಂದು ನಮಗನ್ನುತ್ತದೆ. (ಧರ್ಮೋಪದೇಶಕಾಂಡ 32:4) ಬೈಬಲಿಗೆ ಅನುಸಾರವಾಗಿ, ದೇವರು ದಯೆ ಮತ್ತು ಕನಿಕರದಂಥ ಗುಣಗಳನ್ನು ಸಹ ಪ್ರದರ್ಶಿಸುತ್ತಾನೆ.—ವಿಮೋಚನಕಾಂಡ 34:6; ರೋಮಾಪುರ 9:15.
ಬೈಬಲ್ ಅಂಥ ಗುಣಗಳನ್ನು ದೇವರಿಗೆ ಸೇರಿದ್ದೆಂದು ಹೇಳುವುದರಿಂದ, ಹುಡುಕಾಡುವ ಮಾನವರನ್ನು ಆತನ ಬಳಿಗೆ ಸೆಳೆಯುತ್ತದೆ. ಈ ಪುಸ್ತಕವು ಸೃಷ್ಟಿ ಕ್ರಿಯೆ, ಪಾಪ ಮತ್ತು ಮರಣದ ಮೂಲ, ಮತ್ತು ದೇವರೊಂದಿಗೆ ಸಮಾಧಾನವಾಗುವ ಸಾಧನದ ಕುರಿತಾಗಿ ತಿಳಿಸುತ್ತದೆ. ಪರದೈಸವು ಭೂಮಿಗೆ ಪುನಃಸ್ಧಾಪನೆಗೊಳ್ಳುವ ಮನಮೋಹಕ ನಿರೀಕ್ಷೆಯನ್ನು ಅದು ನೀಡುತ್ತದೆ. ಆದರೆ ಬೈಬಲ್ ದೇವರ ಪ್ರೇರಿತ ಕೊಡುಗೆ ಎಂಬದಾಗಿ ರುಜುಮಾಡಲ್ಪಟ್ಟರೆ ಮಾತ್ರವೇ ಇವೆಲ್ಲವೂ ಬೆಲೆಯುಳ್ಳದ್ದಾಗಿರಬಲ್ಲವು.
ಬೈಬಲ್ ಮತ್ತು ವಿಜ್ಞಾನ
ಬೈಬಲು ಠೀಕೆಯನ್ನು ಸ್ಥಿರತೆಯಿಂದ ಜಯಿಸಿರುತ್ತದೆ. ದೃಷ್ಟಾಂತಕ್ಕಾಗಿ, ಅದನ್ನು ತೆರೆದ ಮನದಿಂದ ಓದಿದಾಗ, ಅದು ನಿಜ ವಿಜ್ಞಾನದೊಂದಿಗೆ ಸಹಮತದಲ್ಲಿರುವುದು ಕಂಡುಬಂದಿದೆ. ಬೈಬಲ್ ಒಂದು ಆತ್ಮಿಕ ಮಾರ್ಗದರ್ಶಕವಾಗಿ ತಯಾರಿಸಲ್ಪಟ್ಟಿದೆಯೇ ಹೊರತು ವಿಜ್ಞಾನದ ಪಠ್ಯ ಪುಸ್ತಕವಾಗಿ ಅಲ್ಲವೆಂಬದು ನಿಶ್ಚಯ. ಆದರೆ ಬೈಬಲ್ ವೈಜ್ಞಾನಿಕ ನಿಜತ್ವಗಳನ್ನು ಒಪ್ಪುತ್ತದೋ ಎಂಬದನ್ನು ನಾವು ನೋಡೋಣ.
ದೇಹರಚನೆ: ಒಂದು ಮನುಷ್ಯ ಭ್ರೂಣದ ‘ಇಂದ್ರಿಯಗಳೆಲ್ಲವು’ “ಬರೆಯಲ್ಪಟ್ಟವು” ಎಂದು ಬೈಬಲ್ ನಿಷ್ಕೃಷ್ಟವಾಗಿ ತಿಳಿಸುತ್ತದೆ. (ಕೀರ್ತನೆ 139:13-16) ಮಿದುಳು, ಹೃದಯ, ಶ್ವಾಸಕೋಶಗಳು, ಕಣ್ಣುಗಳು—ಮತ್ತು ಬೇರೆಲ್ಲಾ ಇಂದ್ರಿಯಗಳು ತಾಯಿಯ ಗರ್ಭದಲ್ಲಿ ಫಲಿತ ತತ್ತಿಯ ತಳಿಶಾಸ್ತ್ರದ ನಿಯಮದಲ್ಲಿ ‘ಬರೆಯಲ್ಪಟ್ಟಿವೆ.’ ಈ ಅಂಗಗಳಲ್ಲಿ ಪ್ರತಿಯೊಂದು ಯೋಗ್ಯ ಸಮಯದಲ್ಲಿ ಗೋಚರಿಸುವುದಕ್ಕಾಗಿ ಆಂತರಿಕ ಕಾಲತಖ್ತೆಯು ಈ ನಿಯಮದಲ್ಲಿ ಅಡಕವಾಗಿದೆ. ತುಸು ಯೋಚಿಸಿರಿ! ಮಾನವ ಶರೀರದ ವಿಕಸನದ ಕುರಿತ ಈ ನಿಜತ್ವವು ವಿಜ್ಞಾನಿಗಳು ತಳಿಶಾಸ್ತ್ರದ ನಿಯಮವನ್ನು ಸಂಶೋಧಿಸುವ ಸುಮಾರು 3,000 ವರ್ಷಗಳ ಮುಂಚೆಯೇ ಬೈಬಲ್ನಲ್ಲಿ ದಾಖಲೆಯಾಗಿತ್ತು.
ಪ್ರಾಣಿ ಜೀವ: ಬೈಬಲ್ಗೆ ಅನುಸಾರವಾಗಿ, “ಮೊಲವು ಮೆಲುಕು ಹಾಕುವಂಥದು.” (ಯಾಜಕಕಾಂಡ 11:6) ಫ್ರಾನ್ಸ್ವಾ ಬಾರಿಯ್ಲರ್ (ದ ನೇಚ್ಯುರಲ್ ಹಿಸ್ಟರಿ ಆಫ್ ಮ್ಯಾಮಲ್ಸ್, 1964, ಪುಟ 41) ಹೇಳುವುದು: “‘ಅಲ್ಪಾಹಾರ’ ದ ಹವ್ಯಾಸ ಅಥವಾ ಆಹಾರವನ್ನು ಒಂದಾವರ್ತಿಯ ಬದಲಿಗೆ ಎರಡಾವರ್ತಿ ಕರುಳಿನ ಮೂಲಕ ದಾಟಿಸುವುದು ಮೊಲ ಮತ್ತು ಕುಂದಿಲಿಗಳಲ್ಲಿ ಸರ್ವ ಸಾಮಾನ್ಯ ಪ್ರಕೃತಿ ಘಟನೆಯಾಗಿದೆ. ಸಾಕಿದ ಕುಂದಿಲಿಗಳು ಸಾಮಾನ್ಯವಾಗಿ ತಮ್ಮ ರಾತ್ರಿಯ ಹಿಕ್ಕೆಯನ್ನು ಜಗಿಯದೆ ನುಂಗಿಬಿಡುತ್ತವೆ, ಅದು ಬೆಳಿಗ್ಗೆ ಅವುಗಳ ಹೊಟ್ಟೆಯಲ್ಲಿರುವ ಎಲ್ಲಾ ಆಹಾರದ ಸುಮಾರು ಅರ್ಧದಷ್ಟು ಪ್ರಮಾಣದಲ್ಲಿರುತ್ತದೆ. ವನದಲ್ಲಿ ಕುಂದಿಲಿಗಳ ಅಲ್ಪಾಹಾರವು ದಿನಕ್ಕೆ ಎರಡಾವರ್ತಿ ಸಂಭವಿಸುತ್ತದೆ, ಮತ್ತು ಇದೇ ಹವ್ಯಾಸವು ಯೂರೋಪಿಯನ್ ಮೊಲಕ್ಕೂ ಇದೆ ಎಂದು ವರದಿಯಾಗಿದೆ.” ಈ ವಿಷಯದಲ್ಲಿ, ಮ್ಯಾಮಲ್ಸ್ ಆಫ್ ದ ವರ್ಲ್ಡ್ (ಇ.ಪಿ. ವಾಕರ್ರಿಂದ, 1964, ಸಂಪುಟ II ಪುಟ 647) ಹೇಳುವುದು: “ಮೆಲುಕು ಹಾಕುವ ಸಸ್ತನಿಗಳಲ್ಲಿ ‘ಮೇವನ್ನು ಮೆಲುಕಾಡುವಿಕೆಗೆ’ ಇದು ಸಮಾನವಾಗಿರಬಹುದು.”
ಅಗೆತಶಾಸ್ತ್ರ: ಕಲ್ಲಿನ ಹಲಗೆಗಳು, ಮಣ್ಣಿನ ಪಾತ್ರೆಗಳು, ಶಿಲಾಬರಹ ಮುಂತಾದವುಗಳ ಸಂಶೋಧನೆಗಳು ಬೈಬಲಿನ ಅರಸರನ್ನು, ನಗರಗಳನ್ನು ಮತ್ತು ಜನಾಂಗಗಳನ್ನು ಸಜೀವವಾಗಿ ಮಾಡಿವೆ. ದೃಷ್ಟಾಂತಕ್ಕಾಗಿ, ಬೈಬಲಲ್ಲಿ ತಿಳಿಸಲ್ಪಟ್ಟ ಹಿತ್ತೀಯರಂಥ ಜನರು ನಿಜವಾಗಿ ಅಸ್ತಿತ್ವದಲಿದ್ದರು. (ವಿಮೋಚನಕಾಂಡ 3:8) ಬೈಬಲ್ ಕಮ್ಸ್ ಎಲೈವ್ ಎಂಬ ತನ್ನ ಪುಸ್ತಕದಲ್ಲಿ, ಸರ್ ಚಾರ್ಲ್ಸ್ ಮಾರ್ಸ್ಟನ್ ಹೇಳಿದ್ದು: “ಯಾರು ಬೈಬಲ್ನಲ್ಲಿ ಜನಸಾಮಾನ್ಯರ ನಂಬಿಕೆಯನ್ನು ದುರ್ಬಲಗೊಳಿಸಿದ್ದಾರೋ ಮತ್ತು ಅದರ ಅಧಿಕಾರವನ್ನು ಶಿಥಿಲಗೊಳಿಸಿದ್ದಾರೋ ಅವರು ಸ್ವತಃ ಸಂಶೋಧಿತವಾದ ರುಜುವಾತಿನಿಂದ ತಾವಾಗಿಯೇ ಶಿಥಿಲವಾಗಿ ಹೋಗಿದ್ದಾರೆ ಮತ್ತು ಅವರ ಅಧಿಕಾರವು ನಶಿಸಿಹೋಗಿದೆ. ಎಲೆಗುದಲ್ದಿಯು ನಾಶಕಾರಕ ಠೀಕೆಯನ್ನು ಸಂದೇಹಾಸ್ಪದ ನಿಜತ್ವಗಳ ಹೊಲದಿಂದ ಅಂಗೀಕೃತ ಕಲ್ಪನೆಯಾಗಿ ಹೊರತಂದಿದೆ.”
ಅಗೆತ ಶಾಸ್ತ್ರವು ಅನೇಕ ವಿಧಾನಗಳಲ್ಲಿ ಬೈಬಲಿಗೆ ಬೆಂಬಲ ಕೊಟ್ಟಿದೆ. ದೃಷ್ಟಾಂತಕ್ಕಾಗಿ, ಆದಿಕಾಂಡ 10 ನೆಯ ಅಧ್ಯಾಯದಲ್ಲಿನ ಸ್ಥಳಗಳನ್ನು ಮತ್ತು ಹೆಸರುಗಳನ್ನು ಸಂಶೋಧನೆಗಳು ದೃಢೀಕರಿಸಿವೆ. ಎಲ್ಲಿ ಅಬ್ರಹಾಮನು ಜನಿಸಿದ್ದನೋ ಆ ವಾಣಿಜ್ಯ ಮತ್ತು ಧಾರ್ಮಿಕ ಕೇಂದ್ರವಾದ ಕಸೀಯ್ದ ಪಟ್ಟಣ ಊರ್ನ್ನು ಅಗೆತ ಶಾಸ್ತ್ರಜ್ಞರು ಅನಾವರಣ ಮಾಡಿದ್ದಾರೆ. (ಆದಿಕಾಂಡ 11:27-31) ಯೆರೂಸಲೇಮಿನ ಆಗ್ನೇಯ ಭಾಗದಲ್ಲಿ ಗಿಹೋನ್ ತೊರೆಯ ಮೇಲ್ಗಡೆ ಅರಸ ದಾವೀದನಿಂದ ಸ್ವಾಧೀನಪಡಿಸಲ್ಪಟ್ಟಿದ್ದ ಯೆಬೂಸಿಯರ ಪಟ್ಟಣವನ್ನು ಅಗೆತ ಶಾಸ್ತ್ರಜ್ಞರು ಕಂಡುಕೊಂಡರು. (2 ಸಮುವೇಲ 5:4-10) ಅರಸನಾದ ಹಿಜ್ಕೀಯನ ಕಾಲುವೆ ಅಥವಾ ನಾಲೆಯ ಒಂದು ಕಡೆಯಲ್ಲಿ ಕೆತ್ತಲ್ಪಟ್ಟಿದ್ದ ಶಿಲೋವ ಲೇಖವು 1880 ರಲ್ಲಿ ಕಂಡುಹಿಡಿಯಲ್ಪಟ್ಟಿತು. (2 ಅರಸು 20:20) ಸಾ.ಶ.ಪೂ. 539 ರಲ್ಲಿ ಮಹಾ ಕೋರೆಷನಿಂದಾದ ಬಾಬೆಲಿನ ಪತನವು, ನೆಬೊನೈಡಸ್ ಕ್ರಾನಿಕಲ್ನಲ್ಲಿ ತಿಳಿಸಲ್ಪಟ್ಟದ್ದಾಗಿ ಸಾ.ಶ. 19 ನೆಯ ಶತಮಾನದಲ್ಲಿ ಸಂಶೋಧಿಸಲ್ಪಟ್ಟಿತ್ತು. ಪರ್ಸಿಪೊಲಿಸನ ಸ್ಮಾರಕಲೇಖಗಳು ಮತ್ತು ಶೂಷನ್ ಅಥವಾ ಸೂಸದಲ್ಲಿ ಸಾ.ಶ. 1880 ಮತ್ತು 1890 ರ ನಡುವೆ ಕಂಡುಕೊಳ್ಳಲ್ಪಟ್ಟ ರಾಜ ಕ್ಸರ್ಕ್ಸೀಸ್ (ಅಹಷ್ವೇರೋಷ್) ನ ಅರಮನೆಯು, ಎಸ್ತೇರಳ ಪುಸ್ತಕದಲ್ಲಿ ಕೊಡಲ್ಪಟ್ಟ ವಿವರಗಳನ್ನು ದೃಢೀಕರಿಸಿದೆ. ಕೈಸರೈಯದ ಒಂದು ರೋಮನ್ ನಾಟಕಶಾಲೆಯ ಅವಶೇಷಗಳಲ್ಲಿ 1961 ರಲ್ಲಿ ಕಂಡುಕೊಂಡ ಒಂದು ಸ್ಮಾರಕಲೇಖನವು, ಯೇಸುವನ್ನು ಕಂಭಕ್ಕೆ ಜಡಿಯುವಂತೆ ಒಪ್ಪಿಸಿಕೊಟ್ಟ ರೋಮನ್ ಗವರ್ನರ್ ಪೊಂತ್ಯ ಪಿಲಾತನ ಅಸ್ತಿತ್ವವನ್ನು ರುಜುಪಡಿಸಿದೆ.—ಮತ್ತಾಯ 27:11-26.
ಖಗೋಲ ಶಾಸ್ತ್ರ: ಸುಮಾರು 2,700 ವರ್ಷಗಳ ಹಿಂದೆ—ಭೂಮಿಯು ಉರುಟಾಗಿದೆ ಎಂದು ಜನಸಾಮಾನ್ಯರು ತಿಳುಕೊಳ್ಳುವ ಮುಂಚೆ—ಪ್ರವಾದಿ ಯೆಶಾಯನು ಬರೆದದ್ದು: “ಆಕಾಶದಲ್ಲಿ [ಭೂಮಿಯ ವೃತ್ತದ ಮೇಲೆ, NW] ಆತನು ಆಸೀನನಾಗಿದ್ದಾನೆ.” (ಯೆಶಾಯ 40:22) ಇಲ್ಲಿ “ವೃತ್ತವಾಗಿ” ತರ್ಜುಮೆಯಾದ ಹಿಬ್ರೂ ಪದ ಚಗ್ನ್ನು “ಗೋಳ” ಎಂದೂ ಅನುವಾದಿಸಬಹುದು. (ಎ ಕನ್ಕಾರ್ಡನ್ಸ್ ಆಫ್ ದ ಹಿಬ್ರೂ ಆ್ಯಂಡ್ ಕ್ಯಾಲ್ಡೀ ಸ್ರಿಪ್ಚರ್ಸ್, ಬಿ. ಡೇವಿಡ್ಸನ್ ರಿಂದ) ಅದಲ್ಲದೆ, ಭೂ ದಿಗಂತದ “ವೃತ್ತ” ವು ಬಾಹ್ಯಾಂತರಾಳದಿಂದ ಮತ್ತು ಕೆಲವೊಮ್ಮೆ ಬಹಳ ಎತ್ತರದ ವಿಮಾನ ಸಂಚಾರದಲ್ಲಿ ಸ್ಪಷ್ಟವಾಗಿಗಿ ತೋರಿಬರುತ್ತದೆ. ದೇವರು “ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ” ಎಂದು ಯೋಬ 26:7 ಪ್ರಾಸಂಗಿಕವಾಗಿ ನುಡಿದದೆ. ಇದು ಸರಿ, ಏಕೆಂದರೆ ಭೂಮಿಗೆ ಯಾವ ದೃಶ್ಯ ಆಧಾರವೂ ಇರುವುದಿಲ್ಲವೆಂದು ಜ್ಯೋತಿಶಾಸ್ತ್ರಜ್ಞರಿಗೆ ತಿಳಿದದೆ.
ಸಸ್ಯವಿಜ್ಞಾನ: “ಸಾಸಿವೆಕಾಳು . . . ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ” ಎಂದು ಯೇಸು ಕ್ರಿಸ್ತನು ಹೇಳಿದ್ದ ಕಾರಣ ಬೈಬಲ್ ಸರಿಯಲ್ಲವೆಂದು ಕೆಲವರು ತಪ್ಪಾಗಿ ತೀರ್ಮಾನಿಸುತ್ತಾರೆ. (ಮಾರ್ಕ 4:30-32) ಕಪ್ಪು ಸಾಸಿವೆ ಗಿಡ (Brassica nigra ಅಥವಾ Sinapis nigra) ದ ಕಾಳನ್ನು ಉದ್ದೇಶಿಸಿ ಹೇಳಿರುವುದು ಸಂಭವನೀಯ ಯಾಕಂದರೆ ಆ ಕಾಳಿನ ಸುತ್ತಳತೆ ಬರೇ 1 ರಿಂದ 1.6 ಮಿಲಿಮೀಟರ್. ಸೀತೆ ಹೂವಿನ ಗಿಡದ ಬೀಜಗಳಂತೆ ಪುಡಿಯಷ್ಟು ಚಿಕ್ಕದಾದ ಬೀಜಗಳಿವೆಯಾದರೂ, ಸೀತೆಹೂವಿನ ಸಸಿಯನ್ನು ಬೆಳೆಸುವವರೊಂದಿಗೆ ಯೇಸು ಮಾತಾಡಿರಲಿಲ್ಲ. ಸ್ಥಳಿಕ ರೈತರಿಂದ ನೆಡಲ್ಪಡುವ ವಿವಿಧ ರೀತಿಯ ಬೀಜಗಳಲ್ಲಿ ಸಾಸಿವೆ ಕಾಳು ಅತ್ಯಂತ ಚಿಕ್ಕದೆಂದು ಆ ಗಲಿಲಾಯದ ಯೆಹೂದ್ಯರಿಗೆ ತಿಳಿದಿತ್ತು. ಯೇಸು ದೇವರ ರಾಜ್ಯದ ಕುರಿತು ಮಾತಾಡುತ್ತಿದ್ದನು, ಸಸ್ಯವಿಜ್ಞಾನದ ಒಂದು ಪಾಠವನ್ನು ಕಲಿಸತ್ತಿರಲಿಲ್ಲ.
ಭೂವಿಜ್ಞಾನ: ಬೈಬಲ್ನ ಸೃಷ್ಟಿ ದಾಖಲೆಯ ಕುರಿತಾಗಿ, ಪ್ರಖ್ಯಾತ ಭೂವಿಜ್ಞಾನಿ ವಾಲೆಸ್ ಪ್ರ್ಯಾಟ್ ಹೇಳಿದ್ದು: “ಭೂಮಿಯ ಮೂಲ ಮತ್ತು ಅದರಲ್ಲಿ ಜೀವದ ವಿಕಸನದ ಕುರಿತು ನಮ್ಮ ಆಧುನಿಕ ವಿಚಾರವನ್ನು, ಆದಿಕಾಂಡ ಪುಸ್ತಕವು ಉದ್ದೇಶಿಸಿದಂತಹ ಒಂದು ಸಾಮಾನ್ಯ, ಗ್ರಾಮೀಣ ಜನತೆಗೆ ಸಂಕ್ಷೇಪವಾಗಿ ವಿವರಿಸುವಂತೆ ಭೂವಿಜ್ಞಾನಿಯಾದ ನನ್ನನ್ನು ಕೇಳಲ್ಪಟ್ಟಲ್ಲಿ, ನಾನು ಆದಿಕಾಂಡ ಒಂದನೆಯ ಅಧ್ಯಾಯದ ಭಾಷಾ ವಿಧಾನವನ್ನೇ ನಿಕಟವಾಗಿ ಹಿಂಬಾಲಿಸುವೆನಲ್ಲದೆ ಬೇರೆ ಹೆಚ್ಚೇನೂ ಉತ್ತಮವನ್ನು ಮಾಡಲಾರೆನು.” ಆದಿಕಾಂಡದಲ್ಲಿನ ಘಟನಾವಳಿಗಳ ಕ್ರಮವು—ಸಾಗರಗಳ ಮೂಲ, ನೆಲದ ತೋರಿಬರುವಿಕೆ, ಮತ್ತು ಜಲಜೀವಿಗಳು, ಪಕ್ಷಿಗಳು ಮತ್ತು ಸಸ್ತನಿ ಪ್ರಾಣಿಗಳ ತೋರಿಬರುವಿಕೆ—ಮೂಲತಃ ಭೂವಿಜ್ಞಾನ ಸಮಯದ ಪ್ರಧಾನ ವಿಭಾಗಗಳ ಕ್ರಮಾನುಗತಿಯಲ್ಲಿದೆ ಎಂದು ಪ್ರ್ಯಾಟ್ ಗಮನಿಸಿದನು.
ವೈದ್ಯಶಾಸ್ತ್ರ: ದ ಫಿಸಿಶಿಯನ್ ಎಕ್ಸಾಮಿನ್ಸ್ ದ ಬೈಬಲ್ ಎಂಬ ತನ್ನ ಪುಸ್ತಕದಲ್ಲಿ ಸಿ. ರೈಮರ್ ಸ್ಮಿಥ್ ಬರೆದದ್ದು: “ವೈದ್ಯಕೀಯ ಚಿಕಿತ್ಸೆಯ ದೃಷ್ಟಿಕೋನದಲ್ಲಿ ಬೈಬಲ್ ಅಷ್ಟು ನಿಷ್ಕ್ರಷ್ಟವಾಗಿರುವುದು ನನಗೆ ಅತ್ಯಾಶ್ಚರ್ಯ. . . . ಹುಣ್ಣುಗಳು, ಗಾಯಗಳು ಇತ್ಯಾದಿಗಳಿಗೆ ತಿಳಿಸಲ್ಪಟ್ಟ ಔಷಧೋಪಚಾರವು ಆಧುನಿಕ ಮಟ್ಟಗಳಲ್ಲೂ ಸರಿಯಾದದ್ದಾಗಿದೆ. . . . ಅನೇಕ ಮೂಢನಂಬಿಕೆಗಳಾದ—ಬಕೈ ಮರದ ಬೀಜವನ್ನು ಜೇಬಿನಲ್ಲಿಟ್ಟರೆ ಸಂಧಿವಾತ ಬರುವುದಿಲ್ಲ; ನೆಲಗಪ್ಪೆಯನ್ನು ಹಿಡಿಯುವದರಿಂದ ಬೊಕ್ಕೆಗಳು ಬೀಳುತ್ತವೆ; ಕುತ್ತಿಗೆಯ ಸುತ್ತ ಕೆಂಪು ಶಾಲನ್ನು ಹೊದಿಯುವದರಿಂದ ಗಂಟಲು ನೋವು ವಾಸಿಯಾಗುತ್ತದೆ; ಹಿಂಗಿನ ಚಿಕ್ಕ ಚೀಲವನ್ನು ಧರಿಸುವುದರಿಂದ ರೋಗಗಳು ತಡೆಯಲ್ಪಡುತ್ತವೆ; ಮಗುವು ಅಸೌಖ್ಯ ಬಿದ್ದಾಗಲೆಲ್ಲಾ ಅದಕ್ಕೆ ಹುಳವೆದಿದ್ದೆ ಎಂತ ಹೇಳುವುದು—ಇತ್ಯಾದಿಗಳಲ್ಲಿ ಅನೇಕರು ಇನ್ನೂ ನಂಬಿಕೆಯಿಡುತ್ತಾರೆ. ಆದರೆ ಬೈಬಲ್ನಲ್ಲಿ ಇಂಥ ಯಾವುವೇ ಹೇಳಿಕೆಗಳು ಕಂಡುಬರುವುದಿಲ್ಲ. ಇದು ತಾನೇ ಗಮನಾರ್ಹವು ಮತ್ತು ಅದರ ದೈವಿಕ ಮೂಲಕ್ಕೆ ನನಗಿರುವ ಇನ್ನೊಂದು ರುಜುವಾತು.”
ಚಾರಿತ್ರಿಕ ವಿವರಗಳಲ್ಲಿ ನಂಬಲರ್ಹತೆ
ಎ ಲಾಯರ್ ಎಕ್ಸಾಮಿನ್ಸ್ ದ ಬೈಬಲ್ ಎಂಬ ತನ್ನ ಪುಸ್ತಕದಲ್ಲಿ ವಕೀಲ ಅರ್ವಿನ್ ಎನ್ ಲಿಂಟನ್ ಅವಲೋಕಿಸಿದ್ದು: “ರಂಜನ ಸಾಹಿತ್ಯ ಕೃತಿಗಳು, ಕಲ್ಪನಾ ಕಥೆಗಳು ಮತ್ತು ಸುಳ್ಳು ಸಾಕ್ಷಿಯು, ಒಂದು ದೂರದ ಸ್ಥಳದಲ್ಲಿ ಮತ್ತು ಅನಿರ್ದಿಷ್ಟ ಸಮಯದಲ್ಲಿ ತಿಳಿಸಲ್ಪಟ್ಟ ಘಟನೆಗಳನ್ನು ಒಂದು ಗೊತ್ತಾದ ಪ್ರದೇಶಕ್ಕೆ ನಮೂದಿಸಲು ಜಾಗ್ರತೆ ವಹಿಸುತ್ತವೆ ಮತ್ತು ಹೀಗೆ ಲಾಯರುಗಳಾದ ನಾವು ಒಳ್ಳೇ ವಕಾಲತಿನ ಕುರಿತು ಕಲಿಯುವ ಮೊದಲನೆ ನಿಯಮವಾದ ‘ಒಂದು ಪ್ರಕಟನೆಯು ಅದರ ಸ್ಥಳ ಮತ್ತು ಸಮಯವನ್ನು ಕೊಡಲೇಬೇಕು’ ಎಂಬದನ್ನು ಮುರಿಯುವಾಗ, ಬೈಬಲ್ ವಿವರಣೆಗಳಾದರೋ ತಿಳಿಸಿದ ವಿಷಯಗಳ ತಾರೀಕು ಮತ್ತು ಸ್ಥಳವನ್ನು ಅತ್ಯಂತ ನಿಖರವಾಗಿ ನಿರೂಪಿಸಿವೆ.”
ಈ ವಿಷಯವನ್ನು ರುಜುಪಡಿಸಲು ಲಿಂಟನ್ ಲೂಕ 3:1, 2 ನ್ನು ಉದಾಹರಿಸಿದ್ದಾನೆ. ಯೇಸು ಕ್ರಿಸ್ತನು ತನ್ನ ಶುಶ್ರೂಷೆಯನ್ನು ಯಾವಾಗ ಆರಂಭಿಸಿದನೆಂದು ಸ್ಥಾಪಿಸುವುದಕ್ಕೆ ಸುವಾರ್ತಾ ಲೇಖಕನು ಅಲ್ಲಿ ಕೆಲವು ಅಧಿಕಾರಿಗಳ ಕುರಿತು ತಿಳಿಸಿರುವನು. ಲೂಕನು ವಿವರಣೆಗಳನ್ನು ಈ ಮಾತುಗಳಲ್ಲಿ ಒದಗಿಸಿರುವುದನ್ನು ಗಮನಿಸಿರಿ: “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ ಪೊಂತ್ಯಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಉಪರಾಜನೂ ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ ಅನ್ನನೂ ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ದೇವರ ವಾಕ್ಯವುಂಟಾಯಿತು.”
ಈ ರೀತಿಯ ವಿವರಗಳಿಂದ ಬೈಬಲ್ ತುಂಬಿಹೋಗಿದೆ. ಅಷ್ಟಲ್ಲದೆ, ಸುವಾರ್ತೆಗಳಂತಹ ಅದರ ಭಾಗಗಳು ಯೆಹೂದಿ, ಗ್ರೀಕ್ ಮತ್ತು ರೋಮನ್ ಸಂಸ್ಕೃತಿಯು ಬಹಳವಾಗಿ ವಿಕಸಿತಗೊಂಡಿದ್ದ ಒಂದು ಅವಧಿಯಲ್ಲಿ ಬರೆಯಲ್ಪಟ್ಟವು. ಅದು ವಕೀಲರುಗಳ, ಲೇಖಕರ ಮತ್ತು ಕಾರ್ಯಭಾರಿಗಳೇ ಮುಂತಾದವರ ಸಮಯವಾಗಿತ್ತು. ಹಾಗಾದರೆ ನಿಶ್ಚಯವಾಗಿಯೂ ಸುವಾರ್ತೆಗಳಲ್ಲಿ ಮತ್ತು ಬೈಬಲಿನ ಇತರ ಭಾಗಗಳಲ್ಲಿದ್ದ ವಿವರಗಳು ಸತ್ಯವಾಗಿರದಿದ್ದಲ್ಲಿ, ಅವು ಕೃತ್ರಿಮವೆಂಬದಾಗಿ ಬಯಲಾಗುತ್ತಿದ್ದವು. ಆದರೆ ಐಹಿಕ ಇತಿಹಾಸಗಾರರು ಯೇಸು ಕ್ರಿಸ್ತನ ಅಸ್ತಿತ್ವವೇ ಮುಂತಾದ ವಿಷಯಗಳನ್ನು ದೃಢೀಕರಿಸಿದ್ದಾರೆ. ಉದಾಹರಣೆಗಾಗಿ, ಯೇಸು ಮತ್ತು ಆತನ ಹಿಂಬಾಲಕರ ಕುರಿತು ರೋಮನ್ ಚರಿತ್ರೆಗಾರ ಟ್ಯಾಸಿಟಸ್ ಬರೆದದ್ದು: “ಯಾರಿಂದ [ಕ್ರೈಸ್ತರು] ಎಂಬ ಹೆಸರು ಮೂಲತಃ ಬಂದಿದೆಯೇ ಆ ಕ್ರಿಸ್ಟಸ್, ನಮ್ಮ ಪ್ರಾಂತ್ಯಾಧಿಕಾರಿಗಳಲ್ಲಿ ಒಬ್ಬನಾದ ಪೊಂತ್ಯ ಪಿಲಾತನ ಕೈಯಿಂದ ತಿಬೇರಿಯನ ಆಳಿಕೆಯ ಕಾಲದಲ್ಲಿ ಕಠಿಣವಾದ ಶಿಕ್ಷೆಯನ್ನು ಅನುಭವಿಸಿದ್ದನು.” (ಆ್ಯನಲ್ಸ್, ಬುಕ್ XV, 44) ಬೈಬಲ್ನ ಚಾರಿತ್ರಿಕ ನಿಷ್ಕೃಷ್ಟತೆಯು ಅದು ಮಾನವ ಕುಲಕ್ಕೆ ದೇವರ ಕೊಡುಗೆ ಎಂಬದನ್ನು ರುಜುಪಡಿಸಲು ನಮಗೆ ಸಹಾಯ ಮಾಡುತ್ತದೆ.
ಅತ್ಯಂತ ಮಹತ್ತಾದ ರುಜುವಾತು
ಅಗೆತ ಶಾಸ್ತ್ರ, ಖಗೋಲಶ್ಶಾಸ್ತ್ರ, ಇತಿಹಾಸ ಮತ್ತು ಇತರ ಜ್ಞಾನರಂಗಗಳು ಬೈಬಲನ್ನು ಬೆಂಬಲಿಸುತ್ತವೆಯಾದರೂ, ಅಂಥ ದೃಢೀಕರಣದ ಮೇಲೆ ಅದರ ಮೇಲಿನ ನಂಬಿಕೆಯು ಆಧಾರಿತವಲ್ಲ. ಬೈಬಲ್ ನಮಗಾಗಿ ಪ್ರೇರಿತ ದೇವರ ಕೊಡುಗೆ ಎಂಬದನ್ನು ರುಜುಪಡಿಸುವ ಅನೇಕ ರುಜುವಾತುಗಳಲ್ಲಿ, ಅದರ ಪ್ರವಾದನೆಗಳ ನೆರವೇರಿಕೆಗಿಂತ ಮಹತ್ತಾದ ರುಜುವಾತನ್ನು ನೀಡ ಸಾಧ್ಯವಿಲ್ಲ.
ಯೆಹೋವ ದೇವರು ನಿಜ ಪ್ರವಾದನೆಯ ಮೂಲನು. ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಆತನಂದದ್ದು: “ಇಗೋ, ಮೊದಲನೆಯ ಸಂಗತಿಗಳು ನೆರವೇರಿವೆ, ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ; ಅವು ತಲೆದೋರುವ ಮುಂಚೆ ಅವುಗಳನ್ನು ನಿಮಗೆ ತಿಳಿಸುತ್ತೇನೆ.” (ಯೆಶಾಯ 42:9) ಅದಲ್ಲದೆ ಬೈಬಲ್ ಲೇಖಕರು ದೇವರಿಂದ ಆತನ ಆತ್ಮದ ಮೂಲಕವಾಗಿ ಪ್ರೇರಿಸಲ್ಪಟ್ಟರು ಎಂದು ಬೈಬಲ್ ತಿಳಿಸುತ್ತದೆ. ಉದಾಹರಣೆಗೆ, ಕ್ರೈಸ್ತ ಅಪೊಸ್ತಲ ಪೌಲನು ಬರೆದದ್ದು: “ಎಲ್ಲಾ ಶಾಸ್ತ್ರ ವಚನಗಳು ದೈವ ಪ್ರೇರಿತವಾಗಿವೆ.” (2 ತಿಮೊಥಿ 3:16, NW) ಅಪೊಸ್ತಲ ಪೇತ್ರನು ಬರೆದದ್ದು: “ಶಾಸ್ತ್ರದಲ್ಲಿರುವ ಯಾವ ಪ್ರವಾದನಾ ವಾಕ್ಯವೂ ಕೇವಲ ಮಾನುಷ ಬುದಿಯ್ಧಿಂದ ವಿವರಿಸತಕ್ಕಂಥದ್ದಲ್ಲವೆಂಬದನ್ನು ಮುಖ್ಯವಾಗಿ ತಿಳಿದುಕೊಳ್ಳಿರಿ. ಯಾಕಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:20, 21) ಆದುದರಿಂದ ನಾವು ಬೈಬಲ್ ಪ್ರವಾದನೆಯ ಕಡೆಗೆ ತಿರುಗೋಣ.
ಬೈಬಲಿನಲ್ಲಿರುವ ನೂರಾರು ಪ್ರವಾದನೆಗಳಲ್ಲಿ, ಪುರಾತನ ಮಧ್ಯಪೂರ್ವದಲ್ಲೆಲ್ಲಾ 15 ಶತಕಗಳಿಗಿಂತಲೂ ಹೆಚ್ಚು ಕಾಲದಿಂದ ನಡುಕವನ್ನು ಹುಟ್ಟಿಸಿದ್ದ ಅಶ್ಯೂರ್ಯ ರಾಜಧಾನಿ “ರಕ್ತಮಯಪುರಿ” ನಿನೆವೆಯ ಕುರಿತಾದದ್ದು ಕೂಡಿರುತ್ತವೆ. (ನಹೂಮ 3:1) ಆದರೂ, ನಿನೆವೆಯು ಅಧಿಕಾರದ ಶಿಖರದಲ್ಲಿದ್ದಾಗ, ಬೈಬಲ್ ಮುಂತಿಳಿಸಿದ್ದು: “[ದೇವರು] ನಿನೆವೆಯನ್ನು ಹಾಳುಮಾಡಿ ಮರುಭೂಮಿಯಂತೆ ಒಣಗಿಸಿಬಿಡುವನು. ಜನಾಂಗಗಳ ಪಶುಗಳೆಲ್ಲಾ ಮಂದೆಮಂದೆಯಾಗಿ ಅದರ ಮಧ್ಯದಲ್ಲಿ ಮಲಗಿಕೊಳ್ಳುವವು; ಕೊಕ್ಕರೆಯೂ ಮುಳ್ಳು ಹಂದಿಯೂ ಅದರ ಬೋದಿಗೆಗಳಲ್ಲಿ ವಾಸಮಾಡಿಕೊಳ್ಳುವವು. ಕಿಟಿಕಿಗಳಲ್ಲಿ ಚಿಲಿಪಿಲಿಗಾನವು ಕೇಳಿಸುವದು; ಹೊಸ್ತಿಲುಗಳಲ್ಲಿ ಹಾಳುಬಡಿಯುವದು; ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವುದು.” (ಚೆಫನ್ಯ 2:13, 14) ಇಂದು ಸಂದರ್ಶಕರು ಪುರಾತನ ನಿನೆವೆಯಿದ್ದ ನಿರ್ಜನ ಸ್ಥಳವನ್ನು ಕಲ್ಲುಮಣ್ಣುಗಳ ಒಂದು ದಿಬ್ಬವು ಮಾತ್ರ ಗುರುತಿಸುವುದನ್ನು ಕಾಣುತ್ತಾರೆ. ಅದಲ್ಲದೆ, ಮುಂತಿಳಿಸಲ್ಪಟ್ಟ ಪ್ರಕಾರ, ಕುರಿಮಂದೆಗಳು ಅದರಲ್ಲಿ ಮೇಯುತ್ತಿವೆ.
ದರ್ಶನದಲ್ಲಿ ದೇವರ ಪ್ರವಾದಿಯಾದ ದಾನಿಯೇಲನು ಎರಡು ಕೊಂಬಿನ ಒಂದು ಟಗರನ್ನು ಮತ್ತು ಕಣ್ಣುಗಳ ನಡುವೆ ವಿಶೇಷವಾದ ಒಂದು ಕೊಂಬಿದ್ದ ಹೋತವನ್ನು ಕಾಣುತ್ತಾನೆ. ಹೋತವು ಟಗರನ್ನು ಹಾದು ಅದರ ಎರಡು ಕೊಂಬುಗಳನ್ನು ಮುರಿದುಬಿಡುತ್ತದೆ. ತದನಂತರ ಹೋತದ ದೊಡ್ಡ ಕೊಂಬು ಮುರಿಯಲ್ಪಡುತ್ತದೆ ಮತ್ತು ಅದರ ಸ್ಥಾನದಲ್ಲಿ ಬೇರೆ ನಾಲ್ಕು ಕೊಂಬುಗಳು ಮೊಳೆಯುತ್ತವೆ. (ದಾನಿಯೇಲ 8:1-8) ದೇವದೂತ ಗಬ್ರಿಯೇಲನು ವಿವರಿಸುವುದು: “ನೀನು ನೋಡಿದ ಆ ಎರಡು ಕೊಂಬಿನ ಟಗರು ಮೇದ್ಯಯ ಮತ್ತು ಪಾರಸಿಯ ರಾಜ್ಯ. ಆ ಹೋತವು ಗ್ರೀಕ್ ರಾಜ್ಯ. ಅದರ ಕಣ್ಣುಗಳ ನಡುವಣ ದೊಡ್ಡ ಕೊಂಬು ಆ ರಾಜ್ಯದ ಮೊದಲನೆಯ ರಾಜ. ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವದಿಲ್ಲ.” (ದಾನಿಯೇಲ 8:20-22) ಇತಿಹಾಸವು ರುಜುಪಡಿಸಿದ ಪ್ರಕಾರ, ಎರಡು ಕೊಂಬಿನ ಟಗರು—ಮೇದ್ಯಯ ಮತ್ತು ಪಾರಸಿಯ ರಾಜ್ಯ—“ಗ್ರೀಸಿನ ರಾಜ” ನಿಂದ ದೊಬ್ಬಲ್ಪಟ್ಟಿತು. ಒಂದು “ದೊಡ್ಡ ಕೊಂಬು” ಇದ್ದ ಸಾಂಕೇತಿಕ ಹೋತವು ವ್ಯಕ್ತಿಶಃ ಮಹಾ ಅಲೆಕ್ಸಾಂಡರನಾಗಿದ್ದನು. ಅವನ ಮರಣದ ಅನಂತರ, ಅವನ ನಾಲ್ವರು ಸೇನಾಪತಿಗಳು ತಮ್ಮನ್ನು “ನಾಲ್ಕು ರಾಜ್ಯಗಳ” ಅಧಿಕಾರದಲ್ಲಿ ಸ್ಥಾಪಿಸಿಕೊಂಡ ಮೂಲಕ ಆ “ದೊಡ್ಡ ಕೊಂಬಿನ” ಸ್ಥಾನಪಲ್ಲಟ ಮಾಡಿದರು.
ಹಿಬ್ರೂ ಶಾಸ್ತ್ರದಲ್ಲಿ (“ಹಳೇ ಒಡಂಬಡಿಕೆ”) ಹಲವಾರು ಪ್ರವಾದನೆಗಳು ಯೇಸು ಕ್ರಿಸ್ತನ ಸಂಬಂಧದಲ್ಲಿ ನೆರವೇರಿವೆ. ಇವುಗಳಲ್ಲಿ ಕೆಲವು, ಕ್ರೈಸ್ತ ಗ್ರೀಕ್ ಶಾಸ್ತ್ರ (“ಹೊಸ ಒಡಂಬಡಿಕೆ”) ದ ದೈವ ಪ್ರೇರಿತ ಲೇಖಕರಿಂದ ಆತನಿಗೆ ಅನ್ವಯಿಸಲ್ಪಟ್ಟಿವೆ. ಉದಾಹರಣೆಗೆ, ಸುವಾರ್ತಾ ಲೇಖಕನಾದ ಮತ್ತಾಯನು ಕನ್ನಿಕೆಯ ಮೂಲಕ ಯೇಸುವಿನ ಜನನ, ಆತನಿಗೆ ಒಬ್ಬ ಮುಂದೂತನ ಇರುವಿಕೆ, ಕತ್ತೇಮರಿಯನ್ನು ಹತ್ತಿ ಯೆರೂಸಲೇಮಿನ ಅವನ ಪ್ರವೇಶ ಮುಂತಾದ ಶಾಸ್ತ್ರೀಯ ಪ್ರವಾದನೆಗಳ ನೆರವೇರಿಕೆಯನ್ನು ತಿಳಿಸಿರುತ್ತಾನೆ. (ಮತ್ತಾಯ 1:18-23; 3:1-3; 21:1-9ನ್ನು ಯೆಶಾಯ 7:14; 40:3; ಜೆಕರ್ಯ 9:9 ಕ್ಕೆ ಹೋಲಿಸಿರಿ.) ಅಂಥ ನೆರವೇರಿದ ಪ್ರವಾದನೆಗಳು ಬೈಬಲ್ ನಿಜವಾಗಿಯೂ ದೇವರ ಪ್ರೇರಿತ ಕೊಡುಗೆ ಎಂಬದನ್ನು ರುಜುಪಡಿಸಲು ಸಹಾಯ ಮಾಡುತ್ತವೆ.
ಬೈಬಲ್ ಪ್ರವಾದನೆಗಳ ಪ್ರಚಲಿತ ನೆರವೇರಿಕೆಯು ನಾವು “ಕಡೇ ದಿನಗಳಲ್ಲಿ” ಜೀವಿಸುತ್ತಿದ್ದೇವೆಂಬುದನ್ನು ರುಜುಪಡಿಸುತ್ತದೆ. (2 ತಿಮೊಥಿ 3:1-5) ಅಸಾಮಾನ್ಯ ಪ್ರಮಾಣಗಳಲ್ಲಿ ಯುದ್ಧಗಳು, ಬರಗಳು, ಸೋಂಕುರೋಗಗಳು ಮತ್ತು ಭೂಕಂಪಗಳು ಯೇಸುವಿನ ರಾಜ್ಯಾಧಿಕಾರದ “ಸಾನ್ನಿಧ್ಯ”ದ “ಸೂಚನೆ” ಯ ಭಾಗವಾಗಿರುತ್ತವೆ. ಆ ಸೂಚನೆಯಲ್ಲಿ ಸ್ಥಾಪಿತ ರಾಜ್ಯವನ್ನು ಸಾರುತ್ತಿರುವ ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳ ವಿಶ್ವವ್ಯಾಪಕ ಚಟುವಟಿಕೆಯೂ ಸೇರಿರುತ್ತದೆ. (ಮತ್ತಾಯ 24:3-14; ಲೂಕ 21:10, 11) ಈಗ ನೆರವೇರುತ್ತಿರುವ ಬೈಬಲ್ ಪ್ರವಾದನೆಯು, ಕ್ರಿಸ್ತನ ಕೈಕೆಳಗಿನ ದೇವರ ಸ್ವರ್ಗೀಯ ರಾಜ್ಯವು ವಿಧೇಯ ಮಾನವರಿಗಾಗಿ ಶೀಘ್ರದಲ್ಲೇ ನಿತ್ಯ ಸಂತೋಷದ ಒಂದು ಹೊಸ ಲೋಕವನ್ನು ತರಲಿದೆ ಎಂಬ ಆಶ್ವಾಸನೆಯನ್ನು ಸಹ ನಮಗೆ ಕೊಡುತ್ತದೆ.—2 ಪೇತ್ರ 3:13; ಪ್ರಕಟನೆ 21:1-5.
“ನೆರವೇರಿದ ಬೈಬಲ್ ಪ್ರವಾದನೆಗಳು” ಎಂಬ ಮೇಲಿನ ತಖ್ತೆಯು ಪಟ್ಟಿಮಾಡಬಲ್ಲ ನೂರಾರು ಬೈಬಲ್ ಪ್ರವಾದನೆಗಳಲ್ಲಿ ಕೆಲವನ್ನು ಮಾತ್ರವೇ ನೀಡಿರುತ್ತದೆ. ಇವುಗಳಲ್ಲಿ ಕೆಲವು ನೆರವೇರಿಕೆಗಳು ಶಾಸ್ತ್ರಗ್ರಂಥದಲ್ಲಿ ತಾವೇ ಸೂಚಿಸಲ್ಪಟ್ಟಿವೆ, ಆದರೆ ವಿಶೇಷ ಗಮನಾರ್ಹವು ಇಂದು ನೆರವೇರುತ್ತಾ ಇರುವ ಪ್ರವಾದನೆಗಳು.
ನಿರ್ದಿಷ್ಟ ಲೋಕ ವ್ಯಾಪಕ ವಿಕಸನಗಳು ಬೈಬಲ್ನಲ್ಲಿ ಮುಂತಿಳಿಸಲ್ಪಟ್ಟಿರುವುದನ್ನು ನೀವು ಗಮನಿಸಿರಬಹುದು. ಆದರೆ ಅಧಿಕ ಸಂಶೋಧನೆಯನ್ನು ಯಾಕೆ ಮಾಡಬಾರದು? ನೀವು ವಿನಂತಿಸಿದಲ್ಲಿ ಅಧಿಕ ವಿವರಗಳನ್ನು ಕೊಡಲು ಯೆಹೋವನ ಸಾಕ್ಷಿಗಳು ಸಂತೋಷ ಪಡುವರು. ಮತ್ತು ಮಹೋನ್ನತನ ಮತ್ತು ಆತನ ಉದ್ದೇಶಗಳ ಕುರಿತ ಜ್ಞಾನಕ್ಕಾಗಿ ನಿಮ್ಮ ಆನ್ವೇಷಣೆಯು, ಬೈಬಲ್ ನಿಜವಾಗಿಯೂ ದೇವರ ಪ್ರೇರಿತ ಕೊಡುಗೆ ಎಂಬ ಖಾತರಿಯನ್ನು ನಿಮಗೆ ಕೊಡುವಂತಾಗಲಿ.
[ಪುಟ 7 ರಲ್ಲಿರುವ ಚಿತ್ರ]
ನೆರವೇರಿದ ಬೈಬಲ್ ಪ್ರವಾದನೆಗಳು
ಪ್ರವಾದನೆ ನೆರವೇರಿಕೆ
ಆದಿಕಾಂಡ 49:10 ಯೆಹೂದವು ಇಸ್ರಾಯೇಲಿನ ರಾಜವಂಶವಾಗಿ
ಮಾಡಲ್ಪಟ್ಟದ್ದು (1 ಪೂರ್ವಕಾಲ 5:2; ಇಬ್ರಿಯ 7:14)
ಚೆಫನ್ಯ 2:13, 14 ನಿನೆವೆಯು ಸುಮಾರು ಸಾ.ಶ.ಪೂ. 632
ರಲ್ಲಿ ನಿರ್ಜನವಾದದ್ದು
ಯೆರೆಮೀಯ 25:1-11; ಯೆರೂಸಲೇಮಿನ ಪತನವು 70
ಯೆಶಾಯ 39:6 ವರ್ಷಗಳ ನಿರ್ಜನತೆಯನ್ನು
ಪ್ರಾರಂಭಿಸುತ್ತದೆ (2 ಪೂರ್ವಕಾಲ 36:17-21;
ಯೆಶಾಯ 13:1, 17-22; ಕೋರೆಷನು ಬಾಬೆಲನ್ನು ಜಯಿಸುತ್ತಾನೆ;
44:24-28; 45:1, 2 ಯೆಹೂದ್ಯರು ಸ್ವದೇಶಕ್ಕೆ ಹಿಂತಿರುಗುತ್ತಾರೆ
ದಾನಿಯೇಲ 8:3-8, 20-22 ಮೇದ್ಯಯ-ಪಾರಸಿಯವು ಮಹಾ
ಅಲೆಕ್ಸಾಂಡರನಿಂದ ಸೋಲಿಸಲ್ಪಟ್ಟದ್ದು ಮತ್ತು ಗ್ರೀಕ್
ಸಾಮ್ರಾಜ್ಯವು ವಿಭಾಗಗೊಂಡದ್ದು
ಯೆಶಾಯ 7:14; ಮೀಕ 5:2 ಬೆತ್ಲೆಹೇಮಿನಲ್ಲಿ ಕನ್ಯೆಯಲ್ಲಿ
ಯೇಸುವಿನ ಜನನ (ಮತ್ತಾಯ 1:18-23; 2:1-6)
ದಾನಿಯೇಲ 9:24-26 ಮೆಸ್ಸೀಯನಾಗಿ ಯೇಸುವಿನ ಅಭಿಷೇಕವು
(ಸಾ.ಶ. 29) (ಲೂಕ 3:1-3, 21-23)
ಯೆಶಾಯ 9:1, 2 ಯೇಸುವಿನ ಜ್ಞಾನೋದಯಿಸುವ ಶುಶ್ರೂಷೆ
ಗಲಿಲಾಯದಲ್ಲಿ ಪ್ರಾರಂಭಿಸುತ್ತದೆ (ಮತ್ತಾಯ 4:12-23)
ಯೆಶಾಯ 53:4, 5, 12 ವಿಮೋಚನೆಯ ಯಜ್ಞವಾಗಿ ಯೇಸುವಿನ
ಮರಣ (ಮತ್ತಾಯ 20:28; 27:50)
ಕೀರ್ತನೆ 22:18 ಯೇಸುವಿನ ಬಟ್ಟೆಗೆಳಿಗಾಗಿ ಚೀಟುಹಾಕಿದ್ದು
ಲೂಕ 19:41-44; 21:20-24 ರೋಮನರಿಂದ ಯೆರೂಸಲೇಮಿನ
ನಾಶನ (ಸಾ.ಶ. 70)
ಲೂಕ 21:10, 11; “ಕಡೇ ದಿನಗಳನ್ನು” ಸೂಚಿಸಿದ ಅಸಾಮಾನ್ಯ
ಮತ್ತಾಯ 24:3-13; ಯುದ್ಧಗಳು, ಬರಗಳು, ಭೂಕಂಪಗಳು,
2 ತಿಮೊಥಿ 3:1-5 ಅಂಟುಜಾಡ್ಯಗಳು, ನಿಯಮರಾಹಿತ್ಯತೆ
ಮುಂತಾದವುಗಳು
ಮತ್ತಾಯ 24:14; ಯೆಹೋವನ ಸಾಕ್ಷಿಗಳಿಂದ,
ಯೆಶಾಯ 43:10; ದೇವರ ರಾಜ್ಯವು ಸ್ಥಾಪನೆಯಾಗಿದೆ
ಕೀರ್ತನೆ 2:1-9 ಮತ್ತು ವಿರೋಧಿಗಳೆಲ್ಲರನ್ನು ಬೇಗನೇ
ಜಯಿಸಲಿದೆ ಎಂಬ ವಿಶ್ವವ್ಯಾಪಕ ಘೋಷಣೆ
ಮತ್ತಾಯ 24:21-34; ಯೆಹೋವನ ಸಾಕ್ಷಿಗಳ ಅಂತರ್ರಾಷ್ಟ್ರೀಯ
ಪ್ರಕಟನೆ 7:9-17 ಕುಟುಂಬವು ದೇವರನ್ನು ಆರಾಧಿಸುವುದು
ಮತ್ತು “ಮಹಾ ಸಂಕಟವನ್ನು”
ಪಾರಾಗುವುದಕ್ಕೆ ಸಿದ್ಧತೆ ಮಾಡುವುದು
[ಪುಟ 8 ರಲ್ಲಿರುವ ಚಿತ್ರ]
ಯುದ್ಧಗಳು, ಬರಗಳು, ಅಂಟುಜಾಡ್ಯಗಳು, ಮತ್ತು ಭೂಕಂಪಗಳು ಇಂದು ತಮ್ಮ ಬಲಿಯನ್ನು ತಕ್ಕೊಳ್ಳುತ್ತಿವೆ, ಆದರೆ ಶಾಂತಿ ಮತ್ತು ಸಂತೋಷದ ಒಂದು ಹೊಸ ಲೋಕವು ದೃಶ್ಯಗೋಚರವಾಗುತ್ತಾ ಇದೆ