ಗಿಲ್ಯಾದ್ ಪದವೀಧರರು ಮಿಷನೆರಿ ಸೇವಾ ದಾನವನ್ನು ಸ್ವೀಕರಿಸುತ್ತಾರೆ
ಮಾರ್ಚ್ 1, 1992 ರಲ್ಲಿ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ ಪದವಿ ಪಡೆಯುವ 92 ನೆಯ ತರಗತಿಯ 22 ಸದಸ್ಯರು ಒಂದು ದಾನವನ್ನು ಸ್ವೀಕರಿಸಿದರು—ಮಿಷನೆರಿ ಸೇವಾ ದಾನ. ತರಗತಿಯನ್ನು ಸಂಬೋಧಿಸುತ್ತಾ, ಆಡಳಿತ ಮಂಡಲಿಯ ಲಾಯ್ಡ್ ಬ್ಯಾರಿಯವರು ಅಂದದ್ದು: “ಮಹಾ ಆನಂದದಿಂದ ನೀವು ಆ ಅದ್ಭುತಕರವಾದ ದಾನವನ್ನು ಪಡೆಯಿರಿ ಮತ್ತು ಇತರರಿಗೆ ಆನಂದವನ್ನು ತರುವದರಲ್ಲಿ ನೀವು ಅದನ್ನು ಬಳಸಿರಿ.”
ಈ ಪದವೀಧರ ಕಾರ್ಯಕ್ರಮಕ್ಕೆ ನ್ಯೂ ಜೆರ್ಸಿಯ ಜೆರ್ಸಿ ಸಿಟಿ ಎಸೆಂಬ್ಲಿ ಹಾಲ್ನಲ್ಲಿ ಸುಮಾರು 4,662 ಆಮಂತ್ರಿತ ಅತಿಥಿಗಳು ಮತ್ತು ಬೆತೆಲ್ ಕುಟುಂಬದ ಸದಸ್ಯರುಗಳು ಜಮಾಯಿಸಿದ್ದರು. ಇನ್ನು 970 ಮಂದಿ ಬ್ರೂಕ್ಲಿನ್ನಲ್ಲಿ ವಾಚ್ಟವರ್ ಸೊಸೈಟಿಯ ಸವಲತ್ತುಗಳಲ್ಲಿ, ವೊಲ್ಕಿಲ್ ಮತ್ತು ಪ್ಯಾಟರ್ಸನ್ನಲ್ಲಿ ಟೆಲಿಫೊನ್ ಲೈನ್ ಮೂಲಕ ಜೋಡಿಸಲ್ಪಟ್ಟಿದ್ದರು. ಮಿಷನೆರಿ ಸೇವಾ ದಾನವನ್ನು ಉಚ್ಛಮಟ್ಟದ ಮೌಲ್ಯತೆಯಿಂದ ನೋಡಲು ಮತ್ತು ಅದನ್ನು ವಿವೇಕದಿಂದ ಬಳಸಲು ಅವರಿಗೆ ಸಹಾಯವಾಗುವಂಥ ಕೆಲವು ವಿದಾಯ ಹೇಳುವ ಸಲಹೆಗಳನ್ನು ಪದವೀಧರರಿಗೆ ನೀಡಲ್ಪಟ್ಟಾಗ ಎಲ್ಲರೂ ಜಾಗ್ರತೆಯಿಂದ ಆಲಿಸಿದರು.
ಕಾರ್ಯಕ್ರಮವು ಸಂಗೀತ ನಂಬ್ರ 155 “‘ಒಬ್ಬರನ್ನೊಬ್ಬರು ಸುಸ್ವಾಗತಿಸಿರಿ’!” ಎಂಬದನ್ನು ಉತ್ಸಾಹದಿಂದ ಹಾಡುವ ಮೂಲಕ ಉದ್ಘಾಟಿಸಲ್ಪಟ್ಟಿತು. ಅನಂತರ ಗಿಲ್ಯಾದ್ ಶಾಲೆಯ ಅಧ್ಯಕ್ಷರಾದ 98 ವರ್ಷ ವಯಸ್ಸಿನ ಫ್ರೆಡ್ರಿಕ್ ಡಬ್ಲ್ಯೂ. ಫ್ರಾಂಝ್ ಹೃದಯಪೂರಿತ ಪ್ರಾರ್ಥನೆಯನ್ನು ಸಲ್ಲಿಸಿದಾಗ ಎಲ್ಲರೂ ಪ್ರೇರಿತರಾದರು. ಅನಂತರ, ಆಡಳಿತ ಮಂಡಲಿಯ ಅಧ್ಯಕ್ಷರಾದ ಕ್ಯಾರೀ ಬಾರ್ಬರ್ ಪದವೀಧರ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸುಸ್ವಾಗತಿಸುತ್ತಾ, ಹೇಳಿದ್ದು: “ಹೆಚ್ಚು ಗಿಲ್ಯಾದ್ ಮಿಷನೆರಿಗಳ ಜರೂರಿಯು ಇಂದಿಗಿಂತ ಹಿಂದೆಂದೂ ಇರಲಿಲ್ಲ.” ಅವರ ಹೇಳಿಕೆಯ ನಂತರ, ಅವರು ಸಂಕ್ಷಿಪ್ತ, ಸಹಾಯಕಾರಿ ಭಾಷಣಗಳ ಸರಣಿಯನ್ನು ಪ್ರಸ್ತಾಪಿಸಿದರು.
ಬೆತೆಲ್ ಹೋಮ್ ಕಮಿಟಿಯ ಕರ್ಟಿಸ್ ಜಾನ್ಸ್ನ್ ಮೊದಲು ಮಾತಾಡುತ್ತಾ, “ನಿಮ್ಮ ತೋಟದ ಉತ್ತಮ ಜಾಗ್ರತೆ ತಕ್ಕೊಳ್ಳಿರಿ” ಎಂಬ ಶೀರ್ಷಿಕೆಯ ಮೇಲೆ ವಿಕಸಿಸಿದರು. ಈ ಹೊಸ ಮಿಷನೆರಿಗಳು ಅವರ ನೇಮಕಗಳನ್ನು ಪಡೆದಾಗ, ಪ್ರತಿಯೊಬ್ಬನಿಗೆ ಒಂದು ಆತ್ಮಿಕ ತೋಟವನ್ನು ಬೆಳಸಲು ಇರುತ್ತದೆ ಎಂದು ಸಹೋದರ ಜಾನ್ಸ್ನ್ ಗಮನಿಸಿದರು. (1 ಕೊರಿಂಥ 3:9) ಲೋಕವ್ಯಾಪಕವಾಗಿರುವ ಯೆಹೋವನ ಜನರು ಒಂದು ಆತ್ಮಿಕ ತೋಟವಾಗಿದ್ದು, ಎಲ್ಲಾ ಜನಾಂಗಗಳ ಮುಂದೆ ನೀತಿಯನ್ನು ಮತ್ತು ಸ್ತುತಿಯನ್ನು ಬೆಳಸುತ್ತಾರೆ. (ಯೆಶಾಯ 61:11) ‘ಭವಿಷ್ಯದ ನಿಮ್ಮ ಆತ್ಮಿಕ ತೋಟದ ಜತನವನ್ನು ನೀವು ತಕ್ಕೊಳ್ಳುವ ವಿಧ’ ಭಾಷಣಕರ್ತನು ಒತ್ತಿಹೇಳಿದನು, ‘ನಿಮ್ಮ ಮಿಷನೆರಿ ನೇಮಕದ ನಿಮ್ಮ ಯಶಸ್ಸಿನ ಮೇಲೆ ಅವಶ್ಯಕವಾಗಿ ಪ್ರಭಾವ ಬೀರಲಿದೆ.’ ಅವರ ಆತ್ಮಿಕ ತೋಟದ ಉತ್ತಮ ಜಾಗ್ರತೆಯನ್ನು ತಕ್ಕೊಳ್ಳಲು ಅವರಿಗೆ ಯಾವುದು ಸಹಾಯ ಮಾಡುವದು? ‘ಯೆಹೋವನು ನಿಮ್ಮ ಆತ್ಮಿಕ ತೋಟದ ಸುತ್ತಲಿನ ಸುರಕ್ಷೆಯ ಗೋಡೆಯಾಗಿರಬಲ್ಲನು. ಯೋಗ್ಯ ಕಾರ್ಯಗಳನ್ನು ಬೆಳಸಲು ನೀವು ದೃಢಮನಸ್ಕರಾಗಿರುವದಾದರೆ, ಪ್ರಾರ್ಥನೆಯಲ್ಲಿ ಅವನನ್ನು ನಿಕಟವಾಗಿ ಇಟ್ಟುಕೊಳ್ಳಿರಿ, ಮತ್ತು ನಂತರ ನಿಮ್ಮ ಪ್ರಾರ್ಥನೆಗಳಿಗೆ ಅನುಗುಣವಾಗಿ ಕೆಲಸಮಾಡಿರಿ.’
ನಂತರ, ಲಾಯ್ಡ್ ಬ್ಯಾರಿಯವರು “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ” ಎಂಬ ವಿಷಯದ ಮೇಲೆ ಮಾತಾಡಿದರು. (ಫಿಲಿಪ್ಪಿ 4:4) ಜಪಾನಿನಲ್ಲಿ 25 ಕ್ಕಿಂತಲೂ ಹೆಚ್ಚು ವರ್ಷಗಳ ಮಿಷನೆರಿ ಅನುಭವದ ಆಧಾರದಿಂದ, ಮಿಷನೆರಿ ಸೇವಾ ದಾನದಲ್ಲಿ ಸಂತೋಷಿಸಲು ಪದವೀಧರರಿಗೆ ಸಹಾಯ ಮಾಡುವ ಕೆಲವು ವ್ಯಾವಹಾರ್ಯ ಸಲಹೆಗಳು ಅವರೊಡನೆ ಇದ್ದವು. ಅವರು ಅವಲೋಕಿಸಿದ್ದು: ‘ದೇವರ ಸೇವೆಯಲ್ಲಿ ನೀವು ಕಂಡುಕೊಳ್ಳುವ ಸಂತೋಷವು ನಿಮ್ಮ ಅನೇಕ ಒತ್ತಡಗಳನ್ನು ಮತ್ತು ಪ್ರಾಯಶಃ ನಿಮಗೆ ಬರಬಹುದಾದ ಶಾರೀರಿಕ ಸಮಸ್ಯೆಗಳಲ್ಲಿ ಕೆಲವನ್ನು ನಿವಾರಿಸಲು ನಿಮಗೆ ನೆರವಾಗುತ್ತದೆಂದು ನೀವು ಕಂಡುಕೊಳ್ಳಲಿದ್ದೀರಿ.’ (ಜ್ಞಾನೋಕ್ತಿ 17:22) ಅವರು ಇಷ್ಟರ ತನಕ ಅನುಭವಿಸಿದ್ದಕ್ಕಿಂತಲೂ ಬಹಳಷ್ಟು ಭಿನ್ನವಾದ ಪರಿಸ್ಥಿತಿಗಳನ್ನು ಮತ್ತು ಸನ್ನಿವೇಶಗಳನ್ನು ಎದದುರಿಸಲಿಕ್ಕಿರಬಹುದೆಂದು ಅವರು ಪದವೀಧರರಿಗೆ ಜ್ಞಾಪಿಸಿದರು. ಅವರು ಒಂದು ಹೊಸ ಭಾಷೆಯನ್ನು ಕಲಿಯಲಿಕ್ಕಿರಬಹುದು. ‘ಭಾಷೆಯೊಂದನ್ನು ಕಲಿಯಲು ನೀವು ಶ್ರಮಪಡಬೇಕಾದೀತು. ಆದರೆ ಅವರ ಸ್ವಂತ ಭಾಷೆಗಳಲ್ಲಿ ನೀವು ಜನರೊಂದಿಗೆ ಸಂಸರ್ಗ ಮಾಡಲು ಶಕ್ತರಾಗುವಾಗ, ಇದು ಕೂಡ ನಿಮ್ಮ ಸಂತೋಷಕ್ಕೆ ಕೂಡಿಸಬಲ್ಲದು.’
“ನಿಮ್ಮ ಕಣ್ಣುಗಳನ್ನು ಬಹುಮಾನದ ಮೇಲೆ ಇಡಿರಿ” ಎಂಬ ವಿಷಯದ ಮೇಲೆ ವಿಕಸಿಸುತ್ತಾ, ಫ್ಯಾಕ್ಟರಿ ಕಮಿಟಿಯ ಎಲರ್ಡ್ ಟಿಮ್ ನಂತರ ಮಾತಾಡಿದರು. ಬಹುಮಾನವೇನು? ನಿತ್ಯ ಜೀವ! ಅದನ್ನು ಸಂಪಾದಿಸಲು, ನಮ್ಮ ಕಣ್ಣುಗಳು ಅದರ ಮೇಲೆ ಕೇಂದ್ರೀತವಾಗಿರತಕ್ಕದ್ದು. ಭಾಷಣಗಾರರು ಜೀವದೋಟದಲ್ಲಿರುವ ಕ್ರೈಸ್ತರ ಮತ್ತು ಮೊದಲನೆಯ ಶತಮಾನದ ಕ್ರೀಡೆಯ ಸ್ಪರ್ಧೆಗಳ ಓಟಗಾರರ ನಡುವೆ ಇರುವ ಸರಿಹೋಲಿಕೆಗಳನ್ನು ಮತ್ತು ಭಿನ್ನತೆಗಳಲ್ಲಿ ಕೆಲವನ್ನು ಚರ್ಚಿಸಿದರು. ಓಟಗಾರರಂತೆ, ಕ್ರೈಸ್ತರು ಶ್ರಮದಿಂದ ತರಬೇತಿ ಪಡೆಯತಕ್ಕದ್ದು, ನಿಯಮಗಳನ್ನು ಪರಿಪಾಲಿಸತಕ್ಕದ್ದು, ಮತ್ತು ಎಡೆತಡೆಯಾಗುವ ಭಾರಗಳನ್ನು ತಮ್ಮಿಂದ ಕಳಚಿಹಾಕಬೇಕು. ಆದರೆ ಅಕ್ಷರಶಃ ಓಟಗಾರರಂತಿರದೆ, ಕ್ರೈಸ್ತರು ಒಂದು ಜೀವಾವಧಿಯ ಓಟದಲ್ಲಿರುತ್ತಾರೆ ಮತ್ತು ನಿತ್ಯ ಜೀವದ ಬಹುಮಾನವನ್ನು ಅವರು ಗುರಿಯಾಗಿಟ್ಟುಕೊಂಡು ಹೋಗುತ್ತಾರೆ. ಅಲ್ಲಿ ಒಬ್ಬನೇ ಜಯಗಳಿಸಿದವನು ಇರುವದರ ಬದಲು, ಕೊನೆಯ ತನಕ ಜೀವದೋಟದಲ್ಲಿ ಒಡುವ ಎಲ್ಲರೂ ಬಹುಮಾನವನ್ನು ಪಡೆಯುತ್ತಾರೆ. ಸಹೋದರ ಟಿಮ್ ಸಮಾಪ್ತಿಗೊಳಿಸಿದ್ದು: ‘ಜೀವದ ಬಹುಮಾನವನ್ನು ಪಡೆಯಲು, ಬಹುಮಾನ ದಾತನಾದ ಯೆಹೋವನೊಂದಿಗೆ ನಾವು ಸಮಾಧಾನದಿಂದಿರಬೇಕು. ಮತ್ತು ಯೆಹೋವನೊಂದಿಗೆ ಸಮಾಧಾನದಿಂದಿರುವದು ಅಂದರೆ ನಮ್ಮ ಸಹೋದರರೊಂದಿಗೆ ಸಮಾಧಾನದಿಂದಿರಬೇಕಾಗಿದೆ.’
ಆಡಳಿತಮಂಡಲಿಯ ಮಿಲ್ಟನ್ ಜಿ.ಹೆನ್ಶೆಲ್ “ಶಾಸ್ತ್ರಗ್ರಂಥಗಳ ಆದರಣೆಯ ಮೂಲಕ ನಮಗೆ ನಿರೀಕ್ಷೆ ಇದೆ” ಎಂಬ ವಿಷಯದ ಮೇಲೆ ತದನಂತರ ಮಾತಾಡಿದರು. (ರೋಮಾಪುರ 15:4, NW.) ‘ಕಳೆದ ಐದು ತಿಂಗಳುಗಳಲ್ಲಿ’ ಭಾಷಣಗಾರರು ಆರಂಭಿಸಿದ್ದು, ‘ನೀವು ಬೈಬಲಿನೊಂದಿಗೆ ಕಾರ್ಯಮಗ್ನರಾಗಿದ್ದೀರಿ. ಒಂದು ಮಹಾ ನಿಕಟತೆಯು ಕಟ್ಟಲ್ಪಟ್ಟಿದೆ. ನಿಮಗೆ ಬಲವಾದ ನಿರೀಕ್ಷೆ ಇದೆ. ನಿಮ್ಮ ನೇಮಕಗಳಿಗೆ ಹೋಗುವಾಗ, ನಿಮ್ಮ ನಿರೀಕ್ಷೆಯು ಯಾಕೆ ಬಲವಾಗಿರುತ್ತದೆ ಎಂದು ದಯಮಾಡಿ ನೆನಪಿಸಿರಿ. ಅದು ಯಾಕಂದರೆ ನೀವು ಶಾಸ್ತ್ರಗ್ರಂಥಕ್ಕೆ ನಿಕಟವಾಗಿ ನಿಂತಿರುವದರಿಂದಲೇ.’ ನಿರೀಕ್ಷೆಯನ್ನು ಪ್ರೇರಿಸುವ ಬೈಬಲ್ ದಾಖಲೆಯ ಒಂದು ಉದಾಹರಣೆಯನ್ನು ತೋರಿಸಲು, ಭಾಷಣಕರ್ತರು ನ್ಯಾಯಸ್ಥಾಪಕರು ಅಧ್ಯಾಯ 6 ರಿಂದ 8 ನ್ನು ನಿರ್ದೇಶಿಸಿದರು. ಅಲ್ಲಿ ಮಿದ್ಯಾನ್ಯರ ದಬ್ಬಾಳಿಕೆಯಿಂದ ಇಸ್ರಾಯೇಲ್ಯರನ್ನು ಬಿಡಿಸಲು ಗಿದ್ಯೋನನು ಹೇಗೆ ನೇಮಕವನ್ನು ಪಡೆದನೆಂದು ವರ್ಣಿಸಲಾಗಿದೆ. ದಾಖಲೆಯನ್ನು ಮತ್ತು ನಮ್ಮ ದಿನಗಳಿಗೆ ಅದರ ಮಹತ್ವವನ್ನು ಚರ್ಚಿಸಿದ ನಂತರ ಅವರು ಗಮನಿಸಿದ್ದು: ‘ಶಾಸ್ತ್ರಗ್ರಂಥಗಳ ಸಮೀಪಬರಲು ಮತ್ತು ಈ ವಿಷಯಗಳನ್ನು ಯೋಚಿಸಲು ನಿಮಗೆ ಅವಕಾಶವಿರುವಾಗ, ಅದು ನಿಮಗೆ ಚೇತೋಹಾರಿಯಾಗಿರುವದು. ನೀವು ಧೈರ್ಯವನ್ನು ಪಡೆಯುವಿರಿ.’
ವಿದ್ಯಾರ್ಥಿಗಳಿಗೆ ಶಾಲೆಯ ಇಬ್ಬರು ಪ್ರಮುಖ ಬೋಧಕರ ವಿದಾಯಕೋರುವ ಬುದ್ಧಿವಾದವನ್ನು ಆಲಿಸಲು ಎಲ್ಲರೂ ಆತುರತೆಯಿಂದಿದ್ದರು. ಜ್ಯಾಕ್ ರೆಡ್ಫೊರ್ಡ್ “ಸರಿಯಾದ ಸಂಗತಿಯನ್ನು ಮಾಡಿರಿ” ಎಂಬ ವಿಷಯದ ಮೇಲೆ ಮೊದಲು ಮಾತಾಡಿದರು. ಅವರು ಪದವೀಧರರಿಗೆ ಜ್ಞಾಪಿಸಿದ್ದು: ‘ಶಾಸ್ತ್ರವಚನಗಳ ಪ್ರಕಾರ ಸರಿ ಯಾವುದು ಎಂಬ ವಿಷಯದಲ್ಲಿ ಗಿಲ್ಯಾದ್ನಲ್ಲಿ ನಿಮಗೆ ಸಮಗ್ರವಾಗಿ ತರಬೇತಿಯನ್ನೀಯಲಾಗಿದೆ. ಈಗ ಪಂಥಾಹ್ವಾನದ ಮಿಷನೆರಿ ನೇಮಕಗಳಿಗೆ ನೀವು ಹೊರಟು ಹೋಗುತ್ತೀರಿ. ಮತ್ತು ದಾರಿಯಲ್ಲಿ ನೀವು ಪ್ರಾಯಶಃ ಕಷ್ಟಕರವಾದ ಸಮಸ್ಯೆಗಳನ್ನು ಕಂಡುಕೊಳ್ಳುವಿರಿ. ಇದು ಇದ್ದಾಗ್ಯೂ, ಮತ್ತು ನಿಮ್ಮ ಸ್ವಂತ ಭಾವನೆಗಳ ನಡುವೆಯೂ, ನೀವು ಸರಿಯಾದ ಸಂಗತಿಯನ್ನೇ ಮಾಡಶಕ್ತರು ಎಂದು ನಾವು ಬಲ್ಲೆವು.’ ಯಾವುದು ಸಹಾಯ ಮಾಡುತ್ತದೆ? ಒಂದು ವಿಚಾರವೇನಂದರೆ ಇತರರ ಕುರಿತು ಯೋಗ್ಯ ನೋಟವಿರುವದೇ. ಭಾಷಣಕರ್ತರು ಅಂದದ್ದು: ‘ಅಪರಿಪೂರ್ಣತೆಯಿಂದ ಪರಿಪೂರ್ಣತೆಯನ್ನು ನಿರೀಕ್ಷಿಸಬೇಡಿರಿ.’ ಸಂಶೋಧನೆಯ ಸನ್ನಿವೇಶಗಳ ಯೋಗ್ಯ ನೋಟವು ಕೂಡ ಸಹಾಯ ಮಾಡಬಲ್ಲದು. ‘ನಮ್ಮೆಲ್ಲರ ಜೀವಿತಗಳಲ್ಲಿ ಏಳು ಬೀಳುಗಳು ಇರುತ್ತವೆ,’ ಎಂದವರು ಗಮನಿಸಿದರು. ‘ಯಾರೇ ಒಬ್ಬನು ಏರುಗಳನ್ನು ನಿರ್ವಹಿಸಬಲ್ಲನು. ನೀವು ಬೀಳುಗಳನ್ನು ಹೇಗೆ ನಿರ್ವಹಿಸುವಿರಿ ಎಂಬುದರಿಂದ ಮಿಷನೆರಿ ಸೇವೆಯಲ್ಲಿ ನೀವು ಬಾಳುವಿರೋ ಇಲ್ಲವೋ ಎಂಬದು ನಿರ್ಧರಿಸಲ್ಪಡುತ್ತದೆ.’—ಯಾಕೋಬ 1:2-4.
ಶಾಲೆಯ ರೆಜಿಸ್ಟ್ರಾರ್, ಯುಲಿಸೀಸ್ ಗ್ಲಾಸ್, “ಭವಿಷ್ಯಕ್ಕಾಗಿ ಯಾವ ನಿರೀಕ್ಷೆ?” ಎಂಬ ವಿಷಯವನ್ನು ಆರಿಸಿದರು. ತಂದೆಯೋಪಾದಿಯ ಸರ್ವದಲ್ಲಿ, ಅವರ ನಿರೀಕ್ಷೆಯನ್ನು ಉಜ್ವಲವಾಗಿ ಪ್ರಜ್ವಲಿಸುತ್ತಾ ಇಡಲು ಪದವೀಧರರಿಗೆ ಅವರು ಉತ್ತೇಜಿಸಿದರು. (ಜ್ಞಾನೋಕ್ತಿ 13:12) ‘ನಿರೀಕ್ಷೆಯ ನಷ್ಟದ ಆರಂಭವು ಗಮನಕ್ಕೆ ಬರುವದು ಅತಿ ವಿರಳವೇ,’ ಎಂದವರು ವಿವರಿಸಿದರು. ‘ದೇವರೊಂದಿಗಿನ ನಮ್ಮ ಸಂಬಂಧದ ಬದಲಾಗಿ ನಮ್ಮ ಕುರಿತಾಗಿಯೇ ನಾವು ಹೆಚ್ಚು ತಲ್ಲೀನರಾಗುವಂತೆ ಪರಿಸ್ಥಿತಿಗಳು ನಮಗೆ ಕಾರಣವಾಗಬಹುದು. ನಾವು ಅಸ್ವಸ್ಥರಾಗಬಹುದು ಯಾ ಇತರರಿಂದ ಅನಾದರವಾಗಿ ಉಪಚರಿಸಲ್ಪಟ್ಟಿರಬಹುದು. ಇತರರಲ್ಲಿ ನಮಗಿಂತಲೂ ಹೆಚ್ಚಿನ ಲೌಕಿಕ ವಸ್ತುಗಳಿರಬಹುದು, ಯಾ ಅವರಿಗೆ ಶುಶ್ರೂಷೆಯಲ್ಲಿ ಉತ್ತಮ ಫಲಿತಾಂಶ ದೊರಕಬಹುದು, ಮತ್ತು ನಾವು ಹೇಗೋ ಮತ್ಸರಿಗಳಾಗಬಹುದು. ಇಂಥ ಸಂಗತಿಗಳು ಕ್ರಮೇಣ ನಮ್ಮ ಜೊತೆ ಸೇರಿಕೊಂಡರೆ, ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ರಾಜ್ಯ ನಿರೀಕ್ಷೆಯ ವಾಸ್ತವಿಕತೆಯು ಬಲುಬೇಗನೆ ಮಸಕಾಗಬಹುದು, ಮತ್ತು ಜೀವದೋಟದಲ್ಲಿ ನಾವು ತಾಳಿಕೊಳ್ಳುವದನ್ನು ನಿಲ್ಲಿಸಲೂ ಬಹುದು.’ ಏನು ಮಾಡಸಾಧ್ಯವಿದೆ? ‘ನಮ್ಮ ನಿರೀಕ್ಷೆಯನ್ನು ಪುನಶ್ಚೈತನ್ಯಗೊಳಿಸಬೇಕಾದರೆ, ನಿರ್ಧಾರಾತ್ಮಕ ಕ್ರಿಯೆಯನ್ನು ತಕ್ಕೊಳ್ಳತಕ್ಕದ್ದು. ನಮ್ಮ ಮನಸ್ಸುಗಳನ್ನು ಮತ್ತು ಹೃದಯಗಳನ್ನು ದೇವರ ಖಚಿತ ವಾಗ್ದಾನಗಳಿಂದ ತುಂಬಿಸತಕ್ಕದ್ದು ಮತ್ತು ದೇವರ ರಾಜ್ಯದ ವಾಸ್ತವಿಕತೆಯ ಮೇಲೆ ನಮ್ಮ ಪೂರ್ಣ ಗಮನವನ್ನು ತಿರುಗಿಸತಕ್ಕದ್ದು. ಮತ್ತು ಯೆಹೋವನೊಂದಿಗಿನ ನಮ್ಮ ಸಂಸರ್ಗವನ್ನು ನಾವು ಪುನಃ ಸ್ಥಾಪಿಸತಕ್ಕದ್ದು, ಇದು ಖಂಡಿತವಾಗಿಯೂ ಸಂತೋಷಕ್ಕೆ ನಡಿಸುತ್ತದೆ.’
ಆಡಳಿತ ಮಂಡಲಿಯ ಕಾರ್ಲ್ ಕ್ಲೈನ್ ಪದವೀಧರತೆಯ ಭಾಷಣವನ್ನು ನೀಡಿದರು. ಅವರ ವಿಷಯವು “ದೀನರಾಗಿರುವದು ಯಾಕೆ?” ಎಂದಾಗಿತ್ತು. ಮತ್ತು ಆ ಪ್ರಶ್ನೆಗೆ ಉತ್ತರವೇನು? ‘ಯಾಕಂದರೆ ಅದು ಮಾಡಲು ಸರಿಯಾದ ಮತ್ತು ನ್ಯಾಯವಾದ ಸಂಗತಿ, ಮಾಡಬೇಕಾದ ವಿವೇಕದ ಮತ್ತು ಪ್ರೀತಿಯ ಸಂಗತಿ ಆಗಿದೆ,’ ಎಂದು ತನ್ನ ಆರಂಭದ ಮಾತುಗಳಲ್ಲಿ ಅವರು ವಿವರಿಸಿದರು. ನಾವು ಅನುಕರಿಸುವದರಲ್ಲಿ ಉತ್ತಮವನ್ನೇ ಮಾಡಬಹುದಾದ ದೀನತೆಯ ನಾಲ್ಕು ಉದಾಹರಣೆಗಳನ್ನು ಅವರು ಚರ್ಚಿಸುತ್ತಿರುವಂತೆಯೇ, ಸಭಿಕರ ಕುತೂಹಲವು ಕೆರಳಿಸಲ್ಪಟ್ಟಿತು: (1) ಯೆಹೋವ ದೇವರು, ಅಬ್ರಹಾಮನೊಂದಿಗೆ ಮತ್ತು ಮೋಶೆಯೊಂದಿಗೆ ವ್ಯವಹರಿಸುವಾಗ, ಖಂಡಿತವಾಗಿಯೂ ದೀನನಾಗಿದ್ದನು (ಆದಿಕಾಂಡ 18:22-33; ಅರಣ್ಯಕಾಂಡ 14:11-21; ಎಫೆಸ 5:1); (2) ಯೇಸು ಕ್ರಿಸ್ತನು ‘ತನ್ನನ್ನು ತಗ್ಗಿಸಿಕೊಂಡು, ಹಿಂಸಾಕಂಭದ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು’ (ಫಿಲಿಪ್ಪಿ 2:5-8; 1 ಪೇತ್ರ 2:21); (3) ಅಪೊಸ್ತಲ ಪೌಲನು ‘ಬಹು ನಮ್ರತೆಯಿಂದಲೂ ಕಣ್ಣೀರಿನಿಂದಲೂ ಕರ್ತನ ಸೇವೆಯನ್ನು ಮಾಡಿದನು’ (ಅ.ಕೃತ್ಯಗಳು 20:18, 19; 1 ಕೊರಿಂಥ 11:1); ಮತ್ತು (4) ‘ನಮ್ಮಲ್ಲಿ ನಾಯಕತ್ವವನ್ನು ವಹಿಸುವವರು’ ಸೊಸೈಟಿಯ ಮೊದಲ ಅಧ್ಯಕ್ಷರಾದ ಸಹೋದರ ರಸ್ಸೆಲ್ರಂಥವರು, ಅವರು ಒಮ್ಮೆ ಬರೆದದ್ದು: “ನಮ್ಮ ದೀನ ಸಾಮರ್ಥ್ಯಗಳನ್ನು ಬಳಸುವದರಲ್ಲಿ ಕರ್ತನು ಸಂತೋಷಿಸಿದ ಕೆಲಸವು, ಒಂದು ಪ್ರಾರಂಭಿಸುವಿಕೆಯಾಗಿರುವದಕ್ಕಿಂತಲೂ ಕಡಿಮೆಯ, ಪುನಃ ಕಟ್ಟುವ, ಸರಿಹೊಂದಾಣಿಕೆ ಮಾಡುವ, ಅನ್ಯೋನ್ಯತೆಯ ಒಂದು ಕೆಲಸವಾಗಿರುತ್ತದೆ.” (ಇಬ್ರಿಯ 13:7) ದೀನರಾಗಿರುವದರ ಕುರಿತಾಗಿ ಸಹೋದರ ಕ್ಲೈನ್ ಇನ್ನಷ್ಟು ಬಲವಾದ ಕಾರಣಗಳ ಸ್ಥೂಲ ವಿವರಣೆಯನ್ನಿತ್ತರು. ಖಂಡಿತವಾಗಿಯೂ ದೀನರಾಗಿರುವದರ ಕುರಿತಾದ ಸಲಹೆಗಳನ್ನು ಆಲಿಸುವದು, ಪದವೀಧರರಿಗೆ ಅವರ ಮಿಷನೆರಿ ಸೇವಾ ದಾನದ ವಿವೇಕಯುಕ್ತ ಉಪಯೋಗವನ್ನು ಮಾಡಲು ಸಹಾಯ ಮಾಡಲಿದೆ!
ಇವೆಲ್ಲಾ ಹೇಳಿಕೆಗಳ ನಂತರ, ಸಭಾಧ್ಯಕ್ಷರು ಭೂಮಿಯ ಅನೇಕ ಭಾಗಗಳಿಂದ ಬಂದ ಶುಭಾಶಯಗಳಲ್ಲಿ ಪಾಲಿಗರಾದರು. ಅವರ ಡಿಪ್ಲೊಮಗಳನ್ನು ಪಡೆಯುವ ಸಮಯವು ಈಗ ಆಗಮಿಸಿತು. ಅವರು ಏಳು ದೇಶಗಳಿಂದ ಬಂದಿದ್ದರು—ಕೆನಡಾ, ಫಿನ್ಲೆಂಡ್, ಫ್ರಾನ್ಸ್, ಮೊರಿಶಿಯಸ್, ನೆದರ್ಲೆಂಡ್ಸ್, ಸ್ವೀಡನ್, ಮತ್ತು ಅಮೆರಿಕ. ಆದರೆ ಅವರ ಮಿಷನೆರಿ ನೇಮಕಗಳು ಅವರನ್ನು 11 ದೇಶಗಳಿಗೆ ಕೊಂಡೊಯ್ಯುತ್ತವೆ—ಬೊಲಿವಿಯ, ಎಸ್ಟೊನೀಯ, ಗ್ರೆನಾಡ, , ಹೊಂಡ್ಯೂರಸ್, ಹಂಗೆರಿ, ಮೊರಿಶಿಯಸ್, ಪೆರು, ಟೋಗೊ, ಟರ್ಕಿ, ಮತ್ತು ವೆನಸೇಲ್ವಾ.
ಮಧ್ಯ ವಿರಾಮದ ನಂತರ, ಅಪರಾಹ್ನದ ಕಾರ್ಯಕ್ರಮವು ಸರ್ವಿಸ್ ಡಿಪಾರ್ಟ್ಮೆಂಟ್ ಕಮಿಟಿಯ ಜೊಯೆಲ್ ಏಡಮ್ಸ್ರಿಂದ ನಿರ್ವಹಿಸಲ್ಪಟ್ಟ ಒಂದು ಸಂಕ್ಷಿಪ್ತ ವಾಚ್ಟವರ್ ಅಭ್ಯಾಸದೊಂದಿಗೆ ಆರಂಭವಾಯಿತು. ಅದರ ನಂತರ, ಪದವೀಧರರು ಶಾಲಾ ಅವಧಿಯಲ್ಲಿ ಅವರು ಸಂತೋಷಿಸಿದ ಕ್ಷೇತ್ರ ಸೇವೆಯ ಕೆಲವು ಅನುಭವಗಳನ್ನು ನಟಿಸುತ್ತಾ ಪ್ರದರ್ಶಿಸಿದರು. ಕೊನೆಗೆ, ದೇವಪ್ರಭುತ್ವ ಕ್ರಮವನ್ನು ಯಾಕೆ ಗೌರವಿಸತಕ್ಕದ್ದು? ಎಂಬ ನಾಟಕವನ್ನು, ಪದವೀಧರರ ಸಹಿತ, ಸಭಿಕರ ಬಲಪಡಿಸುವಿಕೆಗಾಗಿ ಸಾದರಪಡಿಸಲ್ಪಟ್ಟಿತು.
ನಿಜವಾಗಿಯೂ, ಈ ಪದವೀಧರರು ಅವರಿಗೆ ಮಾತ್ರವಲ್ಲದೆ, ಇತರರಿಗೂ ಸಂತೋಷವನ್ನು ತರಬಹುದಾದ ಮಿಷನೆರಿ ಸೇವಾ ದಾನವನ್ನು ಬಳಸಲು ಸಹಾಯವಾಗುವಂತಹ ಬುದ್ಧಿವಾದ ಮತ್ತು ಉತ್ತೇಜನೆಯೊಂದಿಗೆ ಅವರ ವಿದೇಶಿ ನೇಮಕಗಳಿಗೆ ತೆರಳಿದರು.
[ಪುಟ 22 ರಲ್ಲಿರುವ ಚಿತ್ರ]
ತರಗತಿಯ ಅಂಕಿ ಅಂಶಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 7
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 11
ವಿದ್ಯಾರ್ಥಿಗಳ ಜುಮ್ಲಾ ಸಂಖ್ಯೆ: 22
ಸರಾಸರಿ ವಯಸ್ಸು: 33.4
ಸತ್ಯದಲ್ಲಿ ಸರಾಸರಿ ವರ್ಷಗಳು: 16.7
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 11.8
[ಪುಟ 23 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ 92 ನೆಯ ಪದವೀಧರತೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ, ಸಾಲುಗಳನ್ನು ಮುಂದಿನಿಂದ ಹಿಂದಕ್ಕೆ ಲೆಕ್ಕಿಸಲ್ಪಟ್ಟಿವೆ ಮತ್ತು ಪ್ರತಿ ಸಾಲಿನ ಎಡದಿಂದ ಬಲಕ್ಕೆ ಹೆಸರುಗಳನ್ನು ನಮೂದಿಸಲಾಗಿದೆ.
(1) ಚಾನ್ ಚಿನ್ ವಾ, ಎಮ್.; ಬುಆನ್ಶೊ, ಎನ್.; ಚಾಪ್ಮ್ಯಾನ್, ಬಿ.; ಒಎಸಬ್ಟೆರಿ, ಎ.; ಕೊಲ್, ಎಲ್.; ಜ್ಯಾಕ್ಸನ್, ಕೆ.; ಮೀರ್ವಿಕ್, ಎ.; (2) ಸ್ಮಿತ್, ಜೆ; ವೊಲೆನ್, ಕೆ.; ಚಾಪ್ಮ್ಯಾನ್, ಆರ್.; ಗಾಬರ್, ಎನ್.; ಚಾನ್ ಚಿನ್ ವಾ, ಜೆ.; ಸ್ಮಿತ್, ಸಿ.; ಎಡ್ವಿಕ್, ಎಲ್.; (3) ಬುಆನ್ಶೊ, ಇ.; ಒಎಸಬ್ಟರಿ, ಎಸ್.; ಕೋಲ್, ಕೆ.; ಜ್ಯಾಕ್ಸನ್, ಆರ್.; ಗಾಬರ್, ಎಸ್.; ಎಡ್ವಿಕ್, ವಿ.; ಮೀರ್ವಿಕ್, ಆರ್.; ವೊಲೆನ್, ಜಿ.