ನಿರೀಕ್ಷೆಯು ಹತಾಶೆಯನ್ನು ಜಯಿಸುತ್ತದೆ!
ವೆಬ್ಸ್ಟರ್ಸ್ ನೈನ್ತ್ ನ್ಯೂ ಕಾಲೆಜಿಯೆಟ್ ಡಿಕ್ಷನರಿ ಯಲ್ಲಿ, ಹತಾಶೆಯನ್ನು “ನಿರೀಕ್ಷೆಯ ಸಂಪೂರ್ಣ ನಷ್ಟ” ಎಂದು ಅರ್ಥವಿವರಿಸಲಾಗಿದೆ. ಹಾಗಾದರೆ, ಸ್ಪಷ್ಟವಾಗಿಗಿ, ಹತಾಶೆಯನ್ನು ಜಯಿಸಲು ನಮಗೆ ನಿರೀಕ್ಷೆಯ ಅಗತ್ಯವಿದೆ!
ಒಬ್ಬ ನಿರ್ಭಾಗ್ಯ ವ್ಯಕ್ತಿಯು ಪರಿಸ್ಥಿತಿಯ ಒತ್ತಡದಿಂದಾಗಿ ರಸ್ತೆಯ ಪಕ್ಕದಲ್ಲಿ ಜೀವಿಸುವುದಾದರೂ, ಅವನಿಗೆ ನಿರೀಕ್ಷೆ ಇರುವುದಾದರೆ ಅವನು ಸಂಪೂರ್ಣವಾಗಿ ಹತಾಶನಾಗಿರುವದಿಲ್ಲ. ರೋಗಶಯ್ಯೆಯ ಯಾತನೆಯ ಸಂಕಷ್ಟವನ್ನು ಅನುಭವಿಸುವವರಿಗೂ ಕೂಡ ನಿರೀಕ್ಷೆಯು ತಾಳಿಕೊಳ್ಳಲು ಧೈರ್ಯ ಮತ್ತು ಬಲವನ್ನು ಕೊಡಬಲ್ಲದು. ಆದರೆ ನಿರೀಕ್ಷೆಯು ವಿಶ್ವಸನೀಯವಾಗಿರತಕ್ಕದ್ದು! ಇದರ ಅರ್ಥವೇನು?
ನಿರೀಕ್ಷೆಗೆ ಆಧಾರ
ಮೂಲಪಿತೃವಾದ ಅಬ್ರಹಾಮನ ಪತ್ನಿ ಸಾರಳಿಗೆ ಏನು ಸಂಭವಿಸಿತು ಎಂದು ಪರಿಗಣಿಸಿರಿ. ವಯಸ್ಸಿನಲ್ಲಿ 90 ವರ್ಷಕ್ಕೆ ಸಮೀಪಿಸುತ್ತಿರುವಾಗ, ಅವಳು ಇನ್ನೂ ಬಂಜೆಯಾಗಿದಳ್ದು ಮತ್ತು ಮಗುವನ್ನು ಹೆರುವ ವಿಷಯದಲ್ಲಿ ದೀರ್ಘಕಾಲ ಹತಾಶಳಾಗಿದ್ದಳು. ಆದರೂ, ಅವಳ ಗಂಡನು 99 ವರ್ಷದವನಾಗಿದ್ದಾಗ, ವರ್ಷಗಳ ಹಿಂದೆ ತಾನು ಮಾಡಿದ ವಾಗ್ದಾನವನ್ನು ಯೆಹೋವನು ಅವನಿಗೆ ಪುನರುಚ್ಛರಿಸಿದನು—ಅಬ್ರಹಾಮನಿಗೆ ಖಂಡಿತವಾಗಿಯೂ “ಸಂತಾನ” ಯಾ ಬಾಧ್ಯಸ್ಥನು ಇರುವನು. ಇದೊಂದು ವಿಶ್ವಸನೀಯ ವಾಗ್ದಾನವೆಂದು ಅಬ್ರಹಾಮನು ತಿಳಿದಿದ್ದನು. ಅದ್ಭುತವಾಗಿ ಒಂದು ಸಂತೋಷದ ಘಟನೆಯು ಸಂಭವಿಸಿ, ಅವಳು ಇಸಾಕನಿಗೆ ಜನನವನ್ನಿತ್ತಾಗ, ಎಂಥ ಆನಂದವು ಸಾರಳಿಗೆ ಅಗಿದ್ದಿರಬಹುದೆಂದು ಊಹಿಸಿರಿ! (ಆದಿಕಾಂಡ 12:2, 3; 17:1-4, 19; 21:2) ದೇವರಲ್ಲಿನ ಅಬ್ರಹಾಮನ ಭರವಸವು ತಪ್ಪಾಗಿರಲಿಲ್ಲ, ಅಪೊಸ್ತಲ ಪೌಲನು ಕೂಡ ಇದನ್ನು ವಿವರಿಸುತ್ತಾನೆ: “ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು [ಅಬ್ರಹಾಮನು] ದೃಢ ನಂಬಿಕೆಯುಳ್ಳವನಾದನು.”—ರೋಮಾಪುರ 4:20.
ಅವನ ದಿನಗಳಲ್ಲಿ ಕ್ರೈಸ್ತರಾದ ಯೆಹೂದ್ಯರಿಗೆ ಬರೆಯುತ್ತಾ, ಎರಡು ಬಲವಾದ ಕಾರಣಗಳಿಗಾಗಿ ಯೇಸುವಿನ ಮೂಲಕ ರಕ್ಷಣೆಯ ದೇವರ ವಾಗ್ದಾನದ ಮೇಲೆ ಅವರು ಆತುಕೊಳ್ಳಸಾಧ್ಯವಿದೆ ಎಂದು ಪೌಲನು ತರ್ಕಿಸಿದನು. ಅಬ್ರಹಾಮನಿಗೆ ದೇವರ ವಾಗ್ದಾನ ಮತ್ತು ದೈವಿಕ ಪ್ರತಿಜ್ಞೆಯೊಂದಿಗೆ ಅದು ಸೇರಿರುವದನ್ನು ಉಲ್ಲೇಖಿಸುತ್ತಾ, ಅಪೊಸ್ತಲನು ವಾದಿಸುವುದು: “ಮನುಷ್ಯರು ತಮಗಿಂತ ಹೆಚ್ಚಿನವನ ಮೇಲೆ ಆಣೆಯಿಡುತ್ತಾರಷ್ಟೆ; ಮಾತಿಗೆ ಆಣೆಯಿಟ್ಟು ಸ್ಥಿರಪಡಿಸಿದ ಮೇಲೆ ಅವರೊಳಗೆ ವಿವಾದವೇನೂ ಇರುವದಿಲ್ಲ. ಹಾಗೆಯೇ ದೇವರು ತನ್ನ ಸಂಕಲ್ಪವು ನಿಶ್ಚಲವಾದದ್ದೆಂಬದನ್ನು ವಾಗ್ದಾನದ ಫಲಕ್ಕೆ ಬಾಧ್ಯರಾಗುವವರಿಗೆ ಬಹು ಸ್ಪಷ್ಟವಾಗಿಗಿ ತೋರಿಸಬೇಕೆಂದು ಆಣೆಯಿಟ್ಟು ತನ್ನ ಮಾತನ್ನು ಸ್ಥಿರಪಡಿಸಿದನು. ಆಶ್ರಯವನ್ನು ಹೊಂದಬೇಕೆಂದು ಓಡಿಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡುಕೊಂಡವರಾದ ನಮಗೆ ಎರಡು ನಿಶ್ಚಲವಾದ ಆಧಾರಗಳು ಇರುವ ಕಾರಣ ಬಲವಾದ ಧೈರ್ಯವುಂಟಾಯಿತು.” (ಇಬ್ರಿಯ 6:16-18) ಹೌದು, ದೇವರ ವಾಗ್ದಾನಗಳು ಸತ್ಯವೂ, ವಿಶ್ವಾಸಾರ್ಹವೂ ಆಗಿವೆ. ಯೆಹೋವನು ಸರ್ವಶಕ್ತನಾಗಿದ್ದಾನೆ ಮತ್ತು ಅವನ ಸ್ವಂತ ಮಾತುಗಳ ನೆರವೇರಿಕೆಯ ಖಾತರಿಯನ್ನೀಯಲು ಅದ್ವಿತೀಯನಾದ ಸಾಮರ್ಥ್ಯವುಳ್ಳವನೂ ಆಗಿದ್ದಾನೆ.
ನಿರೀಕ್ಷೆ—“ಯೋಗ್ಯವಾದದ್ದೂ ಸ್ಥಿರವಾದದ್ದೂ”
ಕ್ರೈಸ್ತ ನಿರೀಕ್ಷೆಯು “ಯೋಗ್ಯವಾದದ್ದೂ (ಖಂಡಿತವಾದದ್ದೂ, NW ) ಸ್ಥಿರವಾದದ್ದೂ” ಎಂದು ಪೌಲನು ಬರೆದನು. (ಇಬ್ರಿಯ 6:19) ಅವನ ನಿರೀಕ್ಷೆಯು ಎಲ್ಲಿ ಬೇರೂರಿದೆ ಎಂದು ಪೌಲನು ತಿಳಿದಿದ್ದನು. ಅವನು ವಿವರಿಸುವದು: “ಅದು [ನಿರೀಕ್ಷೆಯು] ತೆರೆಯೊಳಗೆ ಪ್ರವೇಶಿಸುವಂಥದು.” (NW ) ಅದರ ಅರ್ಥವೇನು? ಯೆರೂಸಲೇಮಿನಲ್ಲಿದ್ದ ಪುರಾತನ ದೇವಾಲಯವನ್ನು ಪೌಲನು ಸೂಚಿಸುತ್ತಾನೆಂಬುದು ಸ್ಫುಟವಾಗುತ್ತದೆ. ಒಂದು ತೆರೆಯ ಮೂಲಕ ಕಟ್ಟಡದ ಇತರ ಭಾಗಗಳನ್ನು ಪ್ರತ್ಯೇಕಿಸಿದ ಇದರಲ್ಲಿ ಅತಿ ಪರಿಶುದ್ಧ ಸ್ಥಾನವಿತ್ತು. (ವಿಮೋಚನಕಾಂಡ 26:31, 33; ಮತ್ತಾಯ 27:51) ನಿಶ್ಚಯವಾಗಿಯೂ, ಯೆರೂಸಲೇಮಿನಲ್ಲಿದ್ದ ಅಕ್ಷರಾರ್ಥಕ ದೇವಾಲಯವು ಬಹಳ ಕಾಲದ ಹಿಂದೆಯೇ ನಾಶಹೊಂದಿತ್ತು. ಆದುದರಿಂದ, ಇಂದು ಅತಿ ಪರಿಶುದ್ಧ ಸ್ಥಾನ ಯಾವುದನ್ನು ಹೋಲುತ್ತದೆ?
ಸ್ವತಃ ದೇವರು ಸಿಂಹಾಸನಾಸೀನನಾಗಿರುವ ಪರಲೋಕವನ್ನೇ ಹೋಲುತ್ತದೆ! ಯೇಸುವು ಅವನ ದಿವಾರೋಹಣದ ನಂತರ, “ನಿಜವಾದ ದೇವಾಲಯಕ್ಕೆ ಅನುರೂಪಮಾತ್ರವಾದದ್ದಾಗಿಯೂ ಕೈಯಿಂದ ಕಟ್ಟಿದ್ದಾಗಿಯೂ ಇರುವ ಆಲಯದಲ್ಲಿ [ಯೆರೂಸಲೇಮಿನಲ್ಲಿರುವ ದೇವಾಲಯ] ಪ್ರವೇಶಿಸದೆ ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು.” (ಇಬ್ರಿಯ 9:24) ಆದುದರಿಂದ ಹತಾಶೆಯ ವಿರುದ್ಧವಾಗಿ ಹೋರಾಡಲು ನಮಗೆ ಸಹಾಯ ಮಾಡುವ ಕ್ರೈಸ್ತ ನಿರೀಕ್ಷೆಯು, ಮಾನವ ರಾಜಕೀಯಸ್ಥರ ಮೇಲೆ ಆಧಾರಿತವಾಗಿರದೆ, ಸ್ವರ್ಗೀಯ ವ್ಯವಸ್ಥೆಯೊಂದರ ಮೇಲೆ ಆತುಕೊಂಡಿದೆ. ಯಾರನ್ನು ದೇವರು ನೇಮಿಸಿದ್ದಾನೋ, ಯಾರು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತವ್ತಾಗಿ ತನ್ನ ಜೀವವನ್ನು ತೆತ್ತನೋ ಮತ್ತು ನಮ್ಮ ಪರವಾಗಿ ದೇವರ ಮುಂದೆ ಈಗ ಕಾಣಿಸಿಕೊಳ್ಳುತ್ತಿದ್ದಾನೋ ಆ ಯೇಸು ಕ್ರಿಸ್ತನ ಮೇಲೆ ಅದು ಆಧಾರಿತವಾಗಿದೆ. (1 ಯೋಹಾನ 2:1, 2) ಇನ್ನೂ ಹೆಚ್ಚಾಗಿ, ಈ ಪತ್ರಿಕೆಯ ಅಂಕಣಗಳಲ್ಲಿ ಆಗಾಗ್ಗೆ ತೋರಿಸಿದಂತೆ, ಅದೇ ಯೇಸುವು ದೇವರ ಸ್ವರ್ಗೀಯ ರಾಜ್ಯದ ಅರಸನಾಗಿ ಆಳಲು ದೈವಿಕವಾಗಿ ನೇಮಿತನಾದವನಾಗಿದ್ದಾನೆ ಮತ್ತು ಅದನ್ನವನು 1914 ರಿಂದ ಮಾಡುತ್ತಾ ಇದ್ದಾನೆ. ಈ ಸ್ವರ್ಗೀಯ ರಾಜ್ಯವು ಬಲುಬೇಗನೆ ಎಷ್ಟೋ ಜನರನ್ನು ಹತಾಶೆಗೆ ನಡಿಸುವ ಸಂಗತಿಗಳನ್ನು ನಿರ್ಮೂಲಗೊಳಿಸುವದು.
ನಿರೀಕ್ಷೆ—“ನಮ್ಮ ಪ್ರಾಣಕ್ಕೆ ಲಂಗರ”
ಯೇಸುವಿನ ಮೂಲಕ ರಕ್ಷಣೆಯ ಅವರ ನಿರೀಕ್ಷೆಯು ಯೋಗ್ಯಾಧಾರಿತವಾಗಿದೆ ಎಂದು ತನ್ನ ವಾಚಕರಿಗೆ ಮನವರಿಕೆ ಮಾಡಲು, ಪೌಲನು ಒಂದು ಸಾದೃಶ್ಯವನ್ನು ಉಪಯೋಗಿಸುತ್ತಾನೆ. “ಆ ನಿರೀಕ್ಷೆಯು,” ಅವನು ವಿವರಿಸಿದ್ದು, “ನಮ್ಮ ಪ್ರಾಣಕ್ಕೆ ಲಂಗರದ ಹಾಗಿದೆ.”—ಇಬ್ರಿಯ 6:19.
ಪೌಲನಂಥ ಪ್ರಯಾಣಿಕರಿಗೆ ಲಂಗರಗಳ ಒಳ್ಳೆಯ ಪರಿಚಯವಿತ್ತು. ಪ್ರಾಚೀನ ಲಂಗರಗಳು ಆಧುನಿಕದವುಗಳಿಗೆ ಬಹಳಷ್ಟು ಸಮರೂಪದ್ದಾಗಿದ್ದು, ಸಮುದ್ರತಳದ ನೆಲಕಚ್ಚುವಂತೆ ಎರಡು ಹಲ್ಲುಗಳಂಥ ತುದಿಗಳು ಇರುವವುಗಳಾಗಿ, ಅನೇಕ ವೇಳೆ ಕಬ್ಬಿಣದಿಂದ ಮಾಡಲ್ಪಟ್ಟಿದ್ದಾಗಿರುತ್ತಿದ್ದವು. ಸುಮಾರು ಸಾ.ಶ. 58 ರ ವರ್ಷದಲ್ಲಿ ರೋಮಿಗೆ ಹೋಗುವ ದಾರಿಯಲ್ಲಿ, ಪೌಲನ ಹಡಗವು ನೆಲಹತ್ತುವ ಅಪಾಯದಲ್ಲಿತ್ತು. ಆದರೆ ಹಡಗವು ಇನ್ನಷ್ಟು ಕಡಿಮೆ ಆಳದ ನೀರಿಗೆ ಚಲಿಸಿದಾಗ, ನಾವಿಕರು “ಹಡಗಿನ ಹಿಂಭಾಗದಿಂದ ನಾಲ್ಕು ಲಂಗರಗಳನ್ನು ಬಿಟ್ಟರು.” ಆ ಲಂಗರಗಳ ಸಹಾಯದಿಂದ ಹಡಗವು ತುಫಾನಿನಿಂದ ಸುರಕ್ಷಿತವಾಗಿ ಪಾರಾಯಿತು.—ಅ. ಕೃತ್ಯಗಳು 27:29, 39, 40, 44.
ಹಾಗಾದರೆ, ಆರ್ಥಿಕ ಕಷ್ಟಗಳನ್ನು, ದೈಹಿಕ ಯಾ ಭಾವನಾತ್ಮಕ ರೋಗಗಳನ್ನು, ಯಾ ನಿಮ್ಮ ದಾರಿಯಲ್ಲಿ ಬರಬಹುದಾದ ಇತರ ಯಾವುದೇ “ತುಫಾನುಗಳನ್ನು” ನೀವು ಪಾರಾಗಲು ಶಕ್ತರಾಗುವಂತೆ, ನಿಮ್ಮ ನಿರೀಕ್ಷೆಯು ಲಂಗರದಷ್ಟು ಭದ್ರವಾಗಿರಲು ನೀವೇನು ಮಾಡತಕ್ಕದ್ದು? ಮೊದಲಾಗಿ, ಬೈಬಲ್ ವಾಗ್ದಾನಗಳು ಭರವಸಾರ್ಹವಾಗಿವೆ ಎಂದು ಸ್ವತಃ ನೀವೇ ದೃಢಮಾಡಿಕೊಳ್ಳಿರಿ. “ಎಲ್ಲವನ್ನೂ ಪರಿಶೋಧಿಸಿರಿ.” (1 ಥೆಸಲೊನೀಕ 5:21) ಉದಾಹರಣೆಗೆ, ಇನ್ನೊಮ್ಮೆ ಯೆಹೋವನ ಸಾಕ್ಷಿಗಳು ನಿಮ್ಮೊಂದಿಗೆ ಮಾತಾಡುವಾಗ, ಅವರೇನು ಹೇಳುತ್ತಾರೆ ಅದನ್ನು ಆಲಿಸಿರಿ. ನೀವು ವಾಸಿಸುವಲ್ಲಿ ಅವರು ವಿರಳವಾಗಿ ಬರುವುದಾದರೆ, ಹತ್ತಿರದಲ್ಲಿರುವ ರಾಜ್ಯ ಸಭಾಗೃಹದಲ್ಲಿ ಅವರನ್ನು ಹುಡುಕಿರಿ. ಅವರೊಂದಿಗೆ ಸೇರಿಕೊಳ್ಳುವಂತೆ ಅವರು ನಿಮ್ಮನ್ನು ಒತ್ತಾಯಿಸುವದಿಲ್ಲ, ಆದರೆ ಒಂದು ಉಚಿತ ಬೈಬಲ್ ಅಧ್ಯಯನವನ್ನು ಸ್ವೀಕರಿಸುವಂತೆ ನಿಮ್ಮನ್ನು ಆಮಂತ್ರಿಸಲಾಗುವುದು, ನಿಮಗೆ ಯಾವಾಗ ಮತ್ತು ಎಲ್ಲಿ ಅನುಕೂಲವಾಗುತ್ತದೋ, ಆ ಸಮಯದಲ್ಲಿ ಮತ್ತು ಸ್ಥಳದಲ್ಲಿ ಅದನ್ನು ನಡಿಸಲು ಏರ್ಪಡಿಸಲಾಗುವುದು.
ದೇವರು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂಬ ಆಶ್ವಾಸನೆಯನ್ನು ಅಂಥ ಅಧ್ಯಯನವೊಂದು ನಿಮಗೆ ಕೊಡುವುದು. (ಇಬ್ರಿಯ 11:6) ಶೀಘ್ರದಲ್ಲಿಯೇ ಅರಸನಾದ ಕ್ರಿಸ್ತ ಯೇಸುವಿನ ಕೆಳಗಿರುವ ದೇವರ ರಾಜ್ಯವು, ಅಷ್ಟೊಂದು ಹತಾಶೆಗೆ ಇಂದು ಕಾರಣವಾಗಿರುವ ಭ್ರಷ್ಟತೆ ಮತ್ತು ಅಸರಿಸಮಾನತೆಗಳನ್ನು ತೆಗೆಯಲಿರುವದು ಎಂದು ನೀವು ಕಲಿಯಲಿರುವಿರಿ. ಆ ರಾಜ್ಯದ ಕೆಳಗೆ, ಈ ಭೂಮಿಯು ಪ್ರಮೋದವನವಾಗಿ ಸ್ಥಾಪಿಸಲ್ಪಡುವದು, ಮತ್ತು ಅವನನ್ನು ಪ್ರೀತಿಸುವವರಿಗೆ ದೇವರು ನಿತ್ಯ ಜೀವವನ್ನು ಕೊಡುವನು. (ಕೀರ್ತನೆ 37:29; ಪ್ರಕಟನೆ 21:4) ಎಂಥ ಒಂದು ಮಹಿಮೆಯ ನಿರೀಕ್ಷೆ!
ಈ ನಿರೀಕ್ಷೆಯು ಸತ್ಯವೆಂದು ತಿಳಿಯಲು ಬೈಬಲನ್ನು ಜಾಗ್ರತೆಯಿಂದ ಓದಿರಿ. ಅನಂತರ ದೇವರೊಂದಿಗೆ ಒಂದು ನಿಕಟ ವೈಯಕ್ತಿಕ ಸಂಬಂಧವನ್ನು ಬೆಳಸಲು ಕ್ರಿಯೆಗೈಯಿರಿ, ಅಬ್ರಹಾಮನು ಇದ್ದಂತೆಯೇ, ದೇವರ ಸ್ನೇಹಿತರಾಗಿರಿ. (ಯಾಕೋಬ 2:23) ಯೆಹೋವನು “ಪ್ರಾರ್ಥನೆಗಳನ್ನು ಕೇಳುವವನು” ಆಗಿರುವುದರಿಂದ, ನಿಮ್ಮ ಚಿಂತೆಗಳನ್ನು ಅವನಿಗೆ ಹೇಳಿರಿ. ನಿಮ್ಮ ಸಮೀಪಿಸುವಿಕೆಯು ಯಥಾರ್ಥವಾಗಿರುವಾಗ, ನಿಮ್ಮ ಹೊರೆಗಳನ್ನು ಇಳಿಸಲು ಮತ್ತು ಹತಾಶೆಯನ್ನು ಜಯಿಸಲು ನಿಮ್ಮ ಪ್ರಾರ್ಥನೆಯು ನಿಮಗೆ ಸಹಾಯ ಮಾಡುವದು. ನಿಮಗೆ ಸಂಕಟವನ್ನುಂಟು ಮಾಡುವ ಸನ್ನಿವೇಶವನ್ನು ಬದಲಾಯಿಸಲು ದೇವರ ಆತ್ಮವು ಕೂಡ ನಿಮಗೆ ದಾರಿಯೊಂದನ್ನು ತೆರೆಯಬಹುದು.—ಕೀರ್ತನೆ 55:22; 65:2; 1 ಯೋಹಾನ 5:14, 15.
“ಭದ್ರವಾಗಿ ಹಿಡಿದುಕೊಳ್ಳಿರಿ”!
“ಎಲ್ಲವನ್ನೂ ಪರಿಶೋಧಿಸಿರಿ,” ಎಂದು ತನ್ನ ಜತೆ ಶಿಷ್ಯರಿಗೆ ಶಿಫಾರಸು ಮಾಡಿದ ನಂತರ, ಪೌಲನು ಕೂಡಿಸಿದ್ದು: “ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:21) ಇದನ್ನು ಮಾಡುವ ಒಂದು ಮಾರ್ಗವೆಂದರೆ ಕ್ರೈಸ್ತ ನಿರೀಕ್ಷೆಯನ್ನು ಭದ್ರವಾಗಿ ಹಿಡಿದುಕೊಂಡಿರುವವರ ಒಟ್ಟಿಗೆ ಸಹವಾಸ ಕೂಡ ಮಾಡುವದಾಗಿದೆ. ವಿವೇಕಿ ಅರಸ ಸೊಲೊಮೋನನು ಎಚ್ಚರಿಸಿದ್ದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ಪೂರ್ವಾಗ್ರಹವಾಗಲಿ ಯಾ ಮುಜುಗರದ ಭಾವನೆಯಾಗಲಿ, ನೀವು ಒಳ್ಳೆಯ ಸಹವಾಸವನ್ನು ಹುಡುಕುವದನ್ನು ತಡೆಯಲು ಬಿಡಬೇಡಿರಿ. ಉದಾಹರಣೆಗೆ, ಈ ಹಿಂದೆ ನಿರೀಕ್ಷೆಯಿಲ್ಲದಂತಹ ಜನರು, ಈಗ ಯೆಹೋವನ ಸಾಕ್ಷಿಗಳ ನಡುವೆ ಇದ್ದಾರೆ. ಆದರೆ ಬೈಬಲಿನ ಅವರ ಅಧ್ಯಯನದೊಂದಿಗೆ, ಸಹ ವಿಶ್ವಾಸಿಗಳೊಂದಿಗಿನ ಆನಂದಮಯ ಸಹವಾಸವು, ಯೆಹೋವನೊಂದಿಗಿನ ಅವರ ಸಂಬಂಧವನ್ನು ಬಲಗೊಳಿಸಿದೆ ಮತ್ತು ವಿಶ್ವಸನೀಯ, ಲಂಗರದಂಥ ನಿರೀಕ್ಷೆಯನ್ನು ಅವರಿಗೆ ಒದಗಿಸಿದೆ. ಇದು ನಿಜವಾಗಿಯೂ ಹತಾಶೆಯನ್ನು ಜಯಿಸುತ್ತದೋ? ಖಂಡಿತವಾಗಿಯೂ ಅದು ಮಾಡುತ್ತದೆ.
ಆ್ಯನ್ಮರೀಯ ಉದಾಹರಣೆಯನ್ನು ತಕ್ಕೊಳ್ಳಿರಿ, ಗಂಡನ ಕೈಗಳಲ್ಲಿ ಪಾಶವೀಯ ವರ್ತನೆಯಿಂದ ಬಾಧೆಪಡುತ್ತಿದ್ದು, ಅವಳು ಹತಾಶೆಗೆ ನಡಿಸಲ್ಪಟ್ಟಿದ್ದಳು. “ನನ್ನ ಜೀವವನ್ನು ಕೊನೆಗೊಳಿಸಲು ನಾನು ನಿರ್ಧರಿಸಿದೆ,” ಅವಳು ವಿವರಿಸುವದು, “ಏನೋ ಒಂದು ಕಾರಣಕ್ಕಾಗಿ, ಮೊದಲು ದೇವರಿಗೆ ಪ್ರಾರ್ಥನೆಯೊಂದನ್ನು ಮಾಡಲು ನಾನು ನಿರ್ಣಯಿಸಿದೆ. ನಾನು ಹೀಗೆ ಹೇಳಿದ್ದೇನೆಂದು ನನ್ನ ನೆನಪಿಗೆ ಬರುತ್ತದೆ, ‘ನೀನು ನನಗೆ ಯಾಕೆ ಸಹಾಯಮಾಡುವುದಿಲ್ಲ? ಇಷ್ಟೊಂದು ದೀರ್ಘಕಾಲದಿಂದ ನಿನ್ನ ಮೇಲೆ ನಾನು ನಿರೀಕ್ಷಿಸಿಕೊಂಡಿದ್ದೆ, ಆದರೆ ಏನೂ ಪ್ರಯೋಜನವಿಲ್ಲ.’ ಜೀವಿತದಲ್ಲಿ ಏನೂ ಉದ್ದೇಶವಿಲ್ಲ, ಆದುದರಿಂದ ನಾನು ಸಾಯುವುದೇ ಒಳಿತು ಎಂದು ನಾನು ಎಣಿಸುತ್ತಾ ನನ್ನ ಪ್ರಾರ್ಥನೆಯನ್ನು ಸಮಾಪ್ತಿಗೊಳಿಸಿದೆನು. ಆ ಕ್ಷಣದಲ್ಲಿ ಬಾಗಲು ತಟ್ಟಲ್ಪಟ್ಟಿತು. ನಾನದನ್ನು ಅಲಕ್ಷ್ಯಿಸಲು ತೀರ್ಮಾನಿಸಿದೆ, ಯಾರೇ ಆಗಲಿ ಹೇಗೂ ಕೊನೆಗೆ ಅವರು ಹೋಗುವರೆಂದು ನಿರೀಕ್ಷಿಸಿದೆ.
“ತಟ್ಟುವಿಕೆಯು ಮುಂದರಿಯಿತು ಮತ್ತು ನಾನು ಗೊಂದಲಕ್ಕೊಳಗಾದೆ. ನನ್ನ ಕಣ್ಣೀರುಗಳನ್ನು ಒರಸಿದೆ ಮತ್ತು ನಾನು ಮಾಡಲು ತೀರ್ಮಾನಿಸಿದ್ದನ್ನು ಪೂರೈಸಲು ನಾನು ಬೇಗನೆ ಸ್ವತಂತ್ರಳಾಗಲು ನಿರೀಕ್ಷಿಸುತ್ತಾ, ಬಾಗಲಿನಲ್ಲಿ ಯಾರಿದ್ದಾರೆ ಎಂದು ನೋಡಲು ಹೋದೆ. ಆದರೆ,” ಆ್ಯನ್ಮರೀ ಹೇಳುವದು, “ಯೆಹೋವನ ಸಹಾಯದಿಂದ, ಆ ರೀತಿಯಲ್ಲಿ ವಿಷಯಗಳು ಸಂಭವಿಸಲಿಲ್ಲ, ಯಾಕಂದರೆ ನಾನು ಬಾಗಲನ್ನು ತೆರೆದಾಗ, ಅಲ್ಲಿ ಇಬ್ಬರು ಹೆಂಗಸರು ನಿಂತಿರುವುದನ್ನು ಕಂಡೆ. ನಿಜ, ನಾನು ಗಲಿಬಿಲಿಗೊಂಡಿದ್ದೆ, ಮತ್ತು ಅವರು ಏನು ಹೇಳುತ್ತಿದ್ದರೋ ಅದು ನಿಜವಾಗಿ ನನಗೆ ಅರ್ಥವಾಗಲಿಲ್ಲ. ಆದರೆ ಜೀವಿತಕ್ಕೆ ಒಂದು ಉದ್ದೇಶವಿದೆ ಎಂದು ವಿವರಿಸುವ ಒಂದು ಪುಸ್ತಕವನ್ನು ಅವರು ನನಗೆ ನೀಡಿದರು. ಜೀವಿತದಲ್ಲಿ ನನ್ನ ಆಸಕ್ತಿಯನ್ನು ಪುನಃ ಹೊತ್ತಿಸಲು ಅದು ತಾನೇ ನನಗೆ ಅವಶ್ಯವಾಗಿತ್ತು.” ಅವಳೊಂದಿಗೆ ಒಂದು ಕ್ರಮದ ಬೈಬಲ್ ಅಭ್ಯಾಸಕ್ಕಾಗಿ ಅವಳ ಸಂದರ್ಶಕರು ಏರ್ಪಡಿಸಿದರು. ಆ್ಯನ್ಮರೀ ದೇವರ ಸ್ನೇಹಿತಳಾಗಲು ಕಲಿತಳು. ಫಲಿತಾಂಶವಾಗಿ, ಅದು ಅವಳಿಗೆ ಜೀವಿತದಲ್ಲಿ ಉದ್ದೇಶವನ್ನು ನೀಡಿತು. ಈಗ ಅವಳು ದೇವರಲ್ಲಿ ಭರವಸವನ್ನು ಬೆಳಸಲು ಇತರರಿಗೆ ಸಹಾಯ ಮಾಡುತ್ತಿದ್ದಾಳೆ.
ಅದರಲ್ಲಿ ಏನೆಲ್ಲಾ ಒಳಗೂಡಿದೆ ಎಂದು ತಿಳಿಯದೆ ಹತಾಶೆಯ ಅಂತ್ಯವೊಂದನ್ನು ಪ್ರಾಯಶಃ ನೀವು ನಿರೀಕ್ಷಿಸಿರಬಹುದು. ಆದರೆ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ,” ಎಂದು ನೀವೆಂದಾದರೂ ಪ್ರಾರ್ಥಿಸಿರುವುದಾದರೆ, ಸುಹೃದಯದ ಜನರಿಗೆ ಹತಾಶೆಗೆ ನಡಿಸುವ ಎಲ್ಲಾ ವಿಷಯಗಳನ್ನು ನಿರ್ಮೂಲಮಾಡುವ, ಯೇಸು ಕ್ರಿಸ್ತನ ಕೆಳಗಿರುವ ದೇವರ ರಾಜ್ಯದ ಬರೋಣಕ್ಕಾಗಿ ನೀವು ಬೇಡಿದ್ದಿರಿ. (ಮತ್ತಾಯ 6:10) ಬೈಬಲಿನ ನಿಮ್ಮ ವೈಯಕ್ತಿಕ ಅಭ್ಯಾಸ ಮತ್ತು ಅಂಥ ನೆಚ್ಚಿಕೆ ಇರುವ ಇತರರೊಂದಿಗಿನ ನಿಮ್ಮ ಕ್ರಮದ ಸಹವಾಸವು ಯೆಹೋವನ ರಾಜ್ಯವು ಬರುವ ಮತ್ತು ನಮ್ಮ ಪೃಥ್ವಿಯ ಮೇಲೆ ಪ್ರಮೋದವನವನ್ನು ತರುವ ನಿರೀಕ್ಷೆಯ ಮೇಲಿನ ನಿಮ್ಮ ಹಿಡಿತವನ್ನು ಬಲಗೊಳಿಸುವದು. (1 ತಿಮೊಥೆಯ 6:12, 19) ಈ ಪತ್ರಿಕೆಯು ಅದರ ಪ್ರತಿಯೊಂದು ಸಂಚಿಕೆಯಲ್ಲಿ ಈ ಮಹಿಮಾಭರಿತ ನಿರೀಕ್ಷೆಯನ್ನು ಪ್ರಕಟಿಸುತ್ತದೆ. ಹತಾಶೆಯ ವಿರುದ್ಧ ಹೋರಾಡಲು ಹೃದಯಪೂರ್ವಕವಾಗಿ ನಿರೀಕ್ಷೆಯನ್ನು ಸ್ವೀಕರಿಸಿರಿ. ನಿಜವಾಗಿಯೂ, ನಿರೀಕ್ಷೆಯು “ಆಶೆಯನ್ನು ಭಂಗಪಡಿಸುವದಿಲ್ಲ.”—ರೋಮಾಪುರ 5:5.
[ಪುಟ 7 ರಲ್ಲಿರುವ ಚಿತ್ರ]
ಬೈಬಲ್ ಅಭ್ಯಾಸವು ನಮಗೆ “ಪ್ರಾಣಕ್ಕೆ ಲಂಗರದೋಪಾದಿ” ವರ್ತಿಸುವ ನಿರೀಕ್ಷೆಯನ್ನು ನೀಡುತ್ತದೆ