ಇಷ್ಟೊಂದು ಹತಾಶೆ ಯಾಕೆ?
ನಿರೀಕ್ಷೆ ಒಂದು ಉತ್ತಮ ಜೀವಿತಕ್ಕಾಗಿ—ಕಟ್ಟಕಡೆಗೂ ಸಾಧಿಸಲ್ಪಟ್ಟಿತು! ನವಂಬರ್ 1989 ರಲ್ಲಿ ಬರ್ಲಿನ್ ಗೋಡೆಯು ಉರುಳಿಸಲ್ಪಟ್ಟಾಗ, ಅದನ್ನು ಆಗ ಯಾವುದು ಪೂರ್ವ ಜರ್ಮನಿಯಾಗಿತ್ತೋ ಅದರಲ್ಲಿ ಜೀವಿಸುತಿದ್ದ ಅನೇಕ ಜನರು ನಂಬಿದರು. ಆದಾಗ್ಯೂ, ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯದೊಳಗೆ “ಬಂಡವಾಳಶಾಹಿ ಪ್ರಜಾಪ್ರಭುತ್ವದ ಕ್ರೂರ ಲೋಕದೊಂದಿಗೆ ನಿಭಾಯಿಸುವುದು, ಬರ್ಲಿನ್ ಗೋಡೆಯಿಂದ ಸಂರಕ್ಷಿಸಲ್ಪಟ್ಟ ಜೀವಿತಕ್ಕಿಂತಲೂ ಹೆಚ್ಚು ಕಠಿಣವಾಗಿ ಕಂಡುಬರುತ್ತದೆ” ಎಂದು ಅವರು ದೂರಿದರು. ಫಲಿತಾಂಶ? ಭ್ರಮನಿರಸನ ಮತ್ತು ಬೆಳೆಯುತ್ತಿರುವ ಹತಾಶೆ.
ಗೃಹಸಂಬಂಧಿ ಮತ್ತು ಸಾಮಾಜಿಕ ಹಿಂಸೆಯು ಭದ್ರತೆಯನ್ನು ಅನ್ವೇಷಿಸುತ್ತಾ, ಮನೆಯನ್ನು ತೊರೆಯಲು ಜನರನ್ನು ಬಲಾತ್ಕರಿಸಬಹುದು, ಆದರೆ ಕೆಲವರೇ ಅದನ್ನು ಕಂಡುಕೊಳ್ಳುತ್ತಾರೆ. ಕೆಲವರು ಕೊನೆಗೆ ನಗರದ ರಸ್ತೆಗಳಲ್ಲಿ ಬೀಡುಬಿಟ್ಟಿರುವ ನಿರಾಶ್ರಿತರಾಗಿರುವವರೊಂದಿಗೂಗೆ ಸೇರಿಕೊಂಡಾರು. ಕೆಲವು ದೇಶಗಳಲ್ಲಿ ಇವರಲ್ಲಿ ಹೆಚ್ಚಿನವರು ಕಚೇರಿಯ ಕ್ರಮನಚ್ಚು (ರೆಡ್ ಟೇಪಿಸಂ) ಗಳಲ್ಲಿ ಸಿಲುಕಿಕೊಳ್ಳುವದರೊಂದಿಗೆ ಕೊನೆಗಾಣಿಸಲ್ಪಡುತ್ತಾರೆ. ಉದ್ಯೋಗವೊಂದು ಇಲ್ಲದ ಕಾರಣ, ಮನೆಯನ್ನು ಹೊಂದಲು ಅಸಾಮರ್ಥ್ಯವುಳ್ಳ ಅವರಿಗೆ, ಮನೆಯ ವಿಳಾಸ ಇಲ್ಲದಿರುವುದರ ಕಾರಣ ಉದ್ಯೋಗವನ್ನು ಪಡೆಯಲು ಅಸಾಧ್ಯವಾಗಿದೆ. ಸರಕಾರೀ ಕಲ್ಯಾಣಾಭಿವೃದ್ಧಿ ಸಂಸ್ಥೆಗಳು ನೆರವಾಗಲು ಪ್ರಯತ್ನಿಸುತ್ತವೆ, ಆದರೆ ಸಮಸ್ಯೆಯನ್ನು ಬಗೆಹರಿಸಲು ಸಮಯ ಹಿಡಿಯುತ್ತದೆ. ಆದುದರಿಂದ ನಿರಾಶೆ ಮತ್ತು ಹತಾಶೆಗಳು ತಲೆದೋರುತ್ತವೆ.
ಅನೇಕ ಸ್ತ್ರೀಯರು ಹತಾಶೆಯಿಂದಾಗಿ ನಿಜವಾಗಿಯೂ ವಿಷಮ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಡಿಸಲ್ಪಡುತ್ತಾರೆ. ವಿಮೆನ್ ಆ್ಯಂಡ್ ಕ್ರೈಮ್ ಇನ್ ದ 1990’ಸ್ ವರದಿಯಲ್ಲಿ ಕಾನೂನು ಉಪನ್ಯಾಸಕಿ ಡಾ. ಸೂಸನ್ ಎಡ್ವರ್ಡ್ಸ್ ವಿವರಿಸುವದು: “[ಸೂಳೆಗಾರಿಕೆಯಲ್ಲಿ] ಎಳೆಯ ಸ್ತ್ರೀಯರು ಒಳಗೂಡುವುದು ಆರ್ಥಿಕ ಆವಶ್ಯಕತೆಯ ನೇರ ಫಲಿತಾಂಶವಾಗಿದೆಯೆ ಹೊರತು, ಸ್ವ ಶಿಸ್ತಿನ ಕೊರತೆ ಯಾ ಕುಟುಂಬ ಹಿನ್ನೆಲೆಯ ಕಾರಣದಿಂದಲ್ಲ.” ತದ್ರೀತಿಯಲ್ಲಿ, ಉದ್ಯೋಗವನ್ನು ಹುಡುಕುತ್ತಾ ಮನೆಯನ್ನು ತ್ಯಜಿಸುವ ಯುವಕರಿಗೆ ಅನೇಕ ವೇಳೆ ಯಾವುದೂ ದೊರೆಯುವದಿಲ್ಲ. ಹತಾಶೆಯಿಂದ ಕೆಲವರು, ಆಹಾರ ಮತ್ತು ಆಶ್ರಯಕ್ಕಾಗಿ, ಅವರ ದೇಹಗಳನ್ನು ಸಲಿಂಗಕಾಮಿಗಳಿಗೆ ಒಪ್ಪಿಸುತ್ತಾ ‘ಬಾಡಿಗೆ ಹುಡುಗರಾಗುತ್ತಾರೆ,’ ಹೀಗೆ ಭೃಷ್ಟ ಪಾತಕಿಗಳ ವೃತ್ತದೊಳಿಗಿನ ದಾಳಗಳಾಗುತ್ತಾರೆ.
ನಿಷ್ಠುರವಾದ ರಾಜಕೀಯ ವಾಸ್ತವಿಕತೆಗಳು, ಹಿಂಸಾಚಾರ, ಆರ್ಥಿಕ ಕಷ್ಟಗಳು, ಇವೆಲ್ಲವೂ ಕೆಲವೊಂದು ಮಟ್ಟದ ಹತಾಶೆಯನ್ನು ಕೆರಳಿಸಬಲ್ಲವು ಪ್ರೌಢ ವಿದ್ಯೆಯ ಕಸುಬುದಾರ ಜನರು ಕೂಡ ಇದರಿಂದ ರಕ್ಷಿತರಲ್ಲ, ಯಾಕಂದರೆ ಏರುತ್ತಿರುವ ಹಣಕಾಸಿನ ಸಮಸ್ಯೆಗಳನ್ನು ನಿಭಾಯಿಸುತ್ತಿರುವಾಗ ಅವರ ಸಂಪತ್ಭರಿತ ಜೀವನಶೈಲಿಯನ್ನು ಕಾಪಾಡಲು ಅವರು ಪ್ರಯತ್ನಿಸುತ್ತಾರೆ. ಫಲಿತಾಂಶ? “ಕೇವಲ ದಬ್ಬಾಳಿಕೆಯು ವಿವೇಕಿಯು ಮೂರ್ಖತನದಿಂದ ವರ್ತಿಸುವಂತೆ ಮಾಡಬಹುದು” ಎಂದು ಪುರಾತನ ಕಾಲದ ಅರಸ ಸೊಲೊಮೋನನು ಹೇಳಿದಂತೆ ಇದೆ!a (ಪ್ರಸಂಗಿ 7:7, NW) ನಿಶ್ಚಯವಾಗಿಯೂ, ಏರುತ್ತಿರುವ ಸಂಖ್ಯೆಯವರು ಅತಿ ವಿಪರೀತದ ಪರಿಹಾರ—ಆತ್ಮಹತ್ಯ—ವನ್ನು ತಕ್ಕೊಳ್ಳುವಂತೆ ಹತಾಶೆಯು ನಡಿಸುತ್ತದೆ.
ಅತಿ ವಿಪರೀತ ಮಾರ್ಗ
ಎಳೆಯರಲ್ಲಿ ಆತ್ಮಹತ್ಯದ ಅನೇಕ ವಿದ್ಯಮಾನಗಳು ತೋರಿಸುವದೇನಂದರೆ ಅವರು ಕೂಡ ಹತಾಶೆಯ ವ್ಯಾಧಿಯಿಂದ ಬಾಧಿತರಾಗಿದ್ದಾರೆ. ಒಬ್ಬ ಬ್ರಿಟಿಷ್ ವಾರ್ತಾ ಅಂಕಣಗಾರಳು ಕೇಳಿದ್ದು: “ಹದಿವಯಸ್ಕರ ಅಷ್ಟೊಂದು ಹತಾಶೆಗೆ ನಮ್ಮ ದಿನಗಳಲ್ಲಿ ಕಾರಣವಾಗುವ ವಿಷಯವಾದರೂ ಏನು?” ಸ್ವತಃ ವಿಷ ಸೇವನೆ ಮಾಡಲು ಪ್ರಯತ್ನಿಸಿ, ಆಸ್ಪತ್ರೆಗೆ ಸೇರಿಸಲ್ಪಟ್ಟ 8 ಮತ್ತು 16 ವರ್ಷ ವಯಸ್ಸಿನ ಮಕ್ಕಳ ಅಧ್ಯಯನವೊಂದರಲ್ಲಿ, ಲಂಡನ್ ಇನ್‌ಸ್ಟಿಟ್ಯೂಟ್ ಆಫ್ ಸೈಕಿಆ್ಯಟ್ರಿಯ ಡಾ. ಎರಿಕ್ ಟೆಯ್ಲರ್ ಹೇಳುವದು: “ಮನತಟ್ಟುವ ಒಂದು ಸಂಗತಿಯು ಎಷ್ಟೊಂದು ಮಕ್ಕಳು ವಿಷಯಗಳ ಕುರಿತು ನಿರಾಶೆಯವರೂ, ನಿರೀಕ್ಷಾಹೀನರೂ ಆಗುತ್ತಾರೆ ಎಂಬುದೇ.” ಮರಣಾಂತಿಕವಲ್ಲದಿದ್ದರೂ, ಪ್ರತಿ ವರ್ಷ ಬೇಕುಬೇಕೆಂದೇ ವಿಷ ಸೇವನೆ ಮಾಡುವ 1,00,000 ಕೇಸುಗಳನ್ನು ಬ್ರಿಟನ್ ದಾಖಲಿಸುತ್ತದೆಂದು ಅಂದಾಜುಮಾಡಲಾಗುತ್ತದೆ. ಇದು ಸಹಾಯಕ್ಕಾಗಿರುವ ಉತ್ಕಟ ಮೊರೆಯಾಗಿದೆ.
ಒಂದು ಬ್ರಿಟಿಷ್ ದತ್ತಿ ಸಂಸ್ಥೆಯು ಹತಾಶೆಗೊಳ್ಳುವವರಿಗೆ ಕರುಣಾಮಯ ಕಿವಿಯನ್ನು ನೀಡಲು ಒಂದು ಚಳುವಳಿಯನ್ನು ಆರಂಭಿಸಿದೆ. ಈ ರೀತಿಯಲ್ಲಿ ಅದರ ಸಲಹೆಗಾರರು “ಮರಣಕ್ಕೆ ಬದಲಿಗಳನ್ನು” ತಾವು ನೀಡುತ್ತೇವೆಂದು ವಾದಿಸಿದರು. ಆದರೂ, ಜನರ ಹತಾಶೆಗೆ ಕಾರಣವಾಗುವ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಅಸಾಧ್ಯವೆಂದವರು ಒಪ್ಪುತ್ತಾರೆ.
ಆತ್ಮಹತ್ಯದ ಪ್ರಮಾಣವು “ಸಮಾಜದಲ್ಲಿ ಬುದ್ಧಿಭ್ರಮಣೆಯ ಮಟ್ಟ ಮತ್ತು ಸಾಮಾಜಿಕ ಅಂಟಿಕೊಂಡಿರುವಿಕೆಯ ನ್ಯೂನತೆಯನ್ನು” ಪ್ರತಿಬಿಂಬಿಸುತ್ತದೆ ಎಂದು ದ ಸಂಡೇ ಕಾರಿಸ್ಪಾಂಡಂಟ್ ವಾರ್ತಾಪತ್ರವು ಹೇಳುತ್ತದೆ. ಇಂದು ಅಧಿಕ ಆತ್ಮಹತ್ಯದ ಪ್ರಮಾಣವು ಯಾಕೆ? ವಾರ್ತಾಪತ್ರವು ಹೇಳಿಕೆಯನ್ನಿತ್ತದ್ದು, “ಮನೆಯಿಲ್ಲದಿರುವಿಕೆ, ಏರಿರುವ ಮದ್ಯಪಾನ, ಏಯ್ಡ್ಸ್‌ನ ಬೆದರಿಕೆ ಮತ್ತು ಹುಚ್ಚಾಸ್ಪತ್ರೆಗಳ ಮುಚ್ಚುವಿಕೆ” ಯಂಥ ವಾಸ್ತವಾಂಶಗಳು ಹತಾಶೆಯ ಎಂತಹ ಆಳಕ್ಕೆ ವ್ಯಕ್ತಿಗಳನ್ನು ನಡಿಸುತ್ತವೆಂದರೆ, ಅವರ ಸಮಸ್ಯೆಗಳಿಗೆ ಒಂದೇ ಪರಿಹಾರ ಅವರ ಸ್ವಂತ ಜೀವಗಳನ್ನು ಕೊನೆಗೊಳಿಸುವದಾಗಿದೆ ಎಂದವರು ಭಾವಿಸುತ್ತಾರೆ.
ಹತಾಶೆಯನ್ನು ನಿವಾರಿಸಲು ಏನಾದರೂ ನಿರೀಕ್ಷೆ ಇಲ್ಲಿದೆಯೇ? ಹೌದು! “ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ” ಎಂದೇ ಯೇಸುವಿನ ನವಚೈತನ್ಯ ಕೊಡುವ ಕರೆಯಾಗಿದೆ! (ಲೂಕ 21:28) ಅವನ ಅರ್ಥವೇನಾಗಿತ್ತು? ಯಾವ ನಿರೀಕ್ಷೆ ಅಲ್ಲಿದೆ?
[ಅಧ್ಯಯನ ಪ್ರಶ್ನೆಗಳು]
a ಹ್ಯಾರಿಸ್, ಆರ್ಚರ್, ಮತ್ತು ವಲ್ಟ್‌ಕೆ ಇವರಿಂದ ಸಂಪಾದಿಸಲ್ಪಟ್ಟ ತಿಯಾಲೊಜಿಕಲ್ ವರ್ಡ್‌ಬುಕ್ ಆಫ್ ದಿ ಒಲ್ಡ್ ಟೆಸ್ಟಮೆಂಟ್ ಗನುಸಾರ “ದಬ್ಬಾಳಿಕೆ” ಎಂದು ಇಲ್ಲಿ ತರ್ಜುಮೆಯಾದ ಶಬ್ದದ ಮೂಲ ಭಾಷೆಯ ಉಗಮವು “ಹೇರುವುದು, ತುಳಿಯುವದು, ಮತ್ತು ಕೆಳ ಸ್ಥಾನದಲ್ಲಿರುವವರನ್ನು ಜಜ್ಜುವದು” ಎಂಬುದಕ್ಕೆ ಸಂಬಂಧಿಸಿದೆ.