ರಾಜ್ಯ ಘೋಷಕರು ವರದಿ ಮಾಡುವುದು
ಭಾರತದಲ್ಲಿ ಅವರ ಬೆಳಕು ಪ್ರಕಾಶಿಸುವಂತೆ ಬಿಡುವುದು
ಭಾರತದಲ್ಲಿ ರಾಜ್ಯದ ಸುವಾರ್ತೆಯು 11,524 ಹರ್ಷಭರಿತ ಸಾಕ್ಷಿಗಳಿಂದ ಸಾರಲ್ಪಡುತ್ತಿದೆ. (ಮತ್ತಾಯ 24:14) 1991 ರ ಸೇವಾ ವರ್ಷದ ಸಮಯದಲ್ಲಿ ದೀಕ್ಷಾಸ್ನಾನ ಹೊಂದಿದ 1,066 ಮಂದಿ ತಮ್ಮ ಬೆಳಕನ್ನು ಇತರರಿಗೆ ಪ್ರಕಾಶಿಸುವ ರಾಜ್ಯ ಘೋಷಕರಾಗಿದ್ದಾರೆ. ಕ್ರಿಸ್ತನ ಮರಣದ ಸ್ಮಾರಕಾಚರಣೆಗೆ 28,866 ಮಂದಿ ಹಾಜರಾದದ್ದನ್ನು ಕಾಣಲು ನಾವೆಲ್ಲರೂ ಎಷ್ಟು ಸಂತೋಷಪಟ್ಟೆವು!
▫ ಅನೇಕರು ಅವಿಧಿ ಸಾಕ್ಷಿಯ ಮೂಲಕ ರಾಜ್ಯದ ನಿರೀಕ್ಷೆಯನ್ನು ಮೊದಲಾಗಿ ಕಲಿಯುತ್ತಾರೆ. ಉದಾಹರಣೆಗೆ, ಒಬ್ಬ ಸಾಕ್ಷಿಯು, ಯಾರು ಸಹ ಬಡಗಿಗಳಾಗಿದ್ದರೋ ಆ ತನ್ನ ಸಹೋದ್ಯೋಗಿಗಳಿಗೆ ರಾಜ್ಯದ ಕುರಿತು ತಿಳಿಸಿದನು. ಒಬ್ಬ ಸಹೋದ್ಯೋಗಿಯು ಪ್ರತಿಕ್ರಿಯೆಯನ್ನು ತೋರಿಸಿ, ತನ್ನ ಬೆಳಕು ತನ್ನ ಕುಟುಂಬಕ್ಕೆ ಮತ್ತು ಮಿತ್ರರಿಗೆ ಪ್ರಕಾಶಿಸುವಂತೆ ಬಿಡಲು ಪ್ರಾರಂಭಿಸಿದನು. ಇವರು ಸಂತೋಷಭರಿತರಾಗಿ ಈ ಆಶ್ಚರ್ಯಕರ ರಾಜ್ಯದ ಸಂದೇಶವನ್ನು ಇತರರಿಗೆ ದಾಟಿಸಿದರು. ವರದಿಗಳಿಗೆ ಅನುಸಾರವಾಗಿ, ಕೆಲವೇ ವರ್ಷಗಳಲ್ಲಿ, ‘ 30 ಕ್ಕಿಂತಲೂ ಹೆಚ್ಚು ವ್ಯಕ್ತಿಗಳು ಸತ್ಯವನ್ನು ಸ್ವೀಕರಿಸಿದರು.’ ತಮ್ಮ ಬೆಳಕು ಪ್ರಕಾಶಿಸುವಂತೆ ಬಿಟ್ಟದ್ದಕ್ಕಾಗಿ ಯೆಹೋವನು ಅವನನ್ನು ಮತ್ತು ಅವನ ಹೊಸ ಆತ್ಮಿಕ ಸಹೋದರರನ್ನು ಆಶೀರ್ವದಿಸಿದನು.
▫ ಇನ್ನೊಂದು ಸಭೆಯ ಒಬ್ಬ ಯುವ ಸಹೋದರನು ಶಾಲೆಯಲ್ಲಿ ಜತೆ ವಿದ್ಯಾರ್ಥಿಗಳಿಗೆ ಅವಿಧಿ ಸಾಕ್ಷಿಯನ್ನು ನೀಡಿದ ಮೂಲಕ ತನ್ನ ಬೆಳಕು ಪ್ರಕಾಶಿಸುವಂತೆ ಬಿಟ್ಟನು. ಅವರಲ್ಲಿ ಕೆಲವರು ರಾಜ್ಯದ ನಿರೀಕ್ಷೆಯಲ್ಲಿ ಆಸಕ್ತರಿದ್ದರು, ಮತ್ತು ಅವನು ಬೈಬಲನ್ನು ಹೆಚ್ಚಾಗಿ ಮಧ್ಯರಾತ್ರಿಯು ಕಳೆಯುವ ತನಕವೂ ಅವರಿಗೆ ವಿವರಿಸುತ್ತಿದ್ದನು. ಕ್ಯಾತೊಲಿಕನಾಗಿದ್ದ ಒಬ್ಬನು, ಸಾಕ್ಷಿಗಳೊಂದಿಗೆ ಸಹವಾಸ ಮುಂದರಿಸಿದರೆ ಕಟು ಫಲಿತಾಂಶಗಳ ಬರುವುವೆಂದು ಪಾದ್ರಿಯಿಂದ ಎಚ್ಚರಿಸಲ್ಪಟ್ಟರೂ, ಸತ್ಯಕ್ಕಾಗಿ ದೃಢ ಸ್ಥಾನವನ್ನು ತಕ್ಕೊಂಡನು. ವಿದ್ಯಾರ್ಥಿಗಾದರೋ ತಾನು ಸಾಕ್ಷಿಗಳಿಂದ ಬೈಬಲ್ ಸತ್ಯವನ್ನು ಕಲಿಯುತ್ತಿದ್ದೇನೆಂಬ ಖಾತರಿಯಾಗಿತ್ತು ಮತ್ತು ಅವನು ಜ್ಞಾನವನ್ನು ಪಡೆಯುವುದನ್ನು ಮುಂದರಿಸಿದನು. ತಕ್ಕ ಸಮಯದಲ್ಲಿ ಅವನಿಗೆ ದೀಕ್ಷಾಸ್ನಾನವಾಯಿತು ಮತ್ತು ಅವನೀಗ ಸಭೆಯಲ್ಲಿ ಒಬ್ಬ ಶುಶ್ರೂಷ ಸೇವಕನಾಗಿ ಕೆಲಸ ಮಾಡುತ್ತಿದ್ದಾನೆ. ಸತ್ಯದ ಆಶ್ಚರ್ಯಕರವಾದ ಬೆಳಕಿನ ಮೂಲಕ ಬರುವ ನಿರೀಕ್ಷೆಯಲ್ಲಿ ಅವನು ಉಲ್ಲಾಸಿಸುತ್ತಾನೆ!—ರೋಮಾಪುರ 12:12.
▫ ಈ ಯುವ ಸಾಕ್ಷಿಗೆ ಕಿವಿಗೊಟ್ಟ ಇನ್ನೊಬ್ಬನು ಒಬ್ಬ ಖ್ಯಾತ ವಿದ್ಯಾರ್ಥಿಯಾಗಿದ್ದನು, ಇವನು ನಾಸ್ತಿಕನು, ದೇವರನ್ನು ನಂಬುತ್ತೇವೆಂದು ಹೇಳುವವರನ್ನು ಗೇಲಿಮಾಡುತ್ತಿದ್ದನು, ಆದರೆ ಒಂದು ದಿನ ಅವನು ಚರ್ಚೆಯಲ್ಲಿ ಭಾಗಿಯಾದನು ಮತ್ತು ಅನೇಕ ಪ್ರಶ್ನೆಗಳನ್ನು ಕೇಳಿದನು. ತನ್ನೆಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳು ಸಿಕ್ಕಿದ್ದನ್ನು ಕಂಡಾಗ ಅವನು ಆಶ್ಚರ್ಯಗೊಂಡನು ಮತ್ತು ಬೈಬಲ್ ದೇವರ ವಾಕ್ಯ ಎಂಬ ತೀರ್ಮಾನಕ್ಕೆ ಬಂದನು. ಬೈಬಲಿನ ಜ್ಞಾನದಲ್ಲಿ ಅವನು ಪ್ರಗತಿ ಮಾಡಿದನು ಮತ್ತು ಕೊನೆಗೆ ದೀಕ್ಷಾಸ್ನಾನ ಹೊಂದಿದನು. ಅವನ ಹಿಂದೂ ತಂದೆಯು ಅವನನ್ನು ಮನೆಯಿಂದ ಹೊರಗೆ ಹಾಕುವಷ್ಟರ ಮಟ್ಟಿಗೂ ಅವನನ್ನು ವಿರೋಧಿಸಿದನು. ಆದರೆ, ಅವನ ಇಬ್ಬರು ಮಾಂಸಿಕ ಸಹೋದರರು ಮತ್ತು ಅವನ ಇಬ್ಬರು ಮಿತ್ರರು ಸತ್ಯವನ್ನು ಸ್ವೀಕರಿಸಿ, ದೀಕ್ಷಾಸ್ನಾನವನ್ನು ಪಡೆದಾಗ ಈ ಯುವಕನು ಸತ್ಯಕ್ಕಾಗಿ ತಕ್ಕೊಂಡ ದೃಢ ನಿಲುವಿಗೆ ಬಹುಮಾನ ಸಿಕ್ಕಿತು. ಅವನ ಸಹೋದರರಲ್ಲಿ ಒಬ್ಬನು ಈಗ ಭಾರತದ ಬ್ರಾಂಚ್ ಅಫೀಸಿನಲ್ಲಿ ಸೇವೆ ಮಾಡುತ್ತಿದ್ದಾನೆ.
▫ ಒಬ್ಬ ವಿದ್ಯಾರ್ಥಿ ಸಂಘಟನೆಗಾರನು ಸಹ ಈ ಯುವ ಸಾಕ್ಷಿಯೊಂದಿಗೆ ಚರ್ಚೆಯಲ್ಲಿ ಭಾಗಿಯಾದನು. ಅವನು ಎಡೆಬಿಡದೆ ಧೂಮಪಾನ ಮಾಡುವವನು ಮತ್ತು ತೀರಾ ಕುಡುಕನಾಗಿದ್ದನು. ಒಮ್ಮೆ ಅವನು, ಸಾಕ್ಷಿಯಿಂದ ಸತ್ಯ ಕಲಿತಿದ್ದ ಇಬ್ಬರು ಜತೆ ವಿದ್ಯಾರ್ಥಿಗಳಿಗೆ ಪೆಟ್ಟುಹಾಕಲು ಬಯಸಿದ್ದನು. ಸತ್ಯವನ್ನು ಸ್ವೀಕರಿಸಿದ್ದ ಕಾರಣ ಅವರು ಕಾಲೇಜ್ ಮುಷ್ಕರದಲ್ಲಿ ಸೇರಲು ನಿರಾಕರಿಸಿದ್ದರು ಮತ್ತು ಈ ವಿದ್ಯಾರ್ಥಿ ಸಂಘಟನೆಗಾರನಿಂದ ನಡಿಸಲ್ಪಟ್ಟಿದ್ದ ಒಂದು ರಕ್ತ ಸಂಗ್ರಹಣ ಚಟುವಟಿಕೆಯ ಸಮಯದಲ್ಲಿ ರಕ್ತ ದಾನವನ್ನೂ ಮಾಡಲಿಲ್ಲ. ಈ ಯುವಕನು ಈಗ ಯೆಹೋವನ ಬೆಳಕು-ವಾಹಕ ಸಾಕ್ಷಿಯಾಗಿರಲು ಸಂತೋಷಿಸುತ್ತಾನೆ.
▫ ಎಲ್ಲಾ ಒಟ್ಟಿಗೆ, ಮೊದಲಾಗಿ ತನ್ನ ಬೆಳಕು ಪ್ರಕಾಶಿಸುವಂತೆ ಬಿಟ್ಟ ಆ ವಿದ್ಯಾರ್ಥಿಯು, ಅವಿಧಿ ಸಾಕ್ಷಿಯನ್ನು ನೀಡಿದ ಮೂಲಕ ತನ್ನ ಸಮಾನಸ್ಥರಾದ 15 ಮಂದಿಗೆ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ನೆರವಾಗುವುದರಲ್ಲಿ ಸಾಧಕನಾದನು.
ಈ ವಿಶಾಲ ದೇಶದಲ್ಲಿ ಅನೇಕರು ದೇವರ ಹೊಸ ಲೋಕದ ಕುರಿತ ಬೈಬಲ್ ನಿರೀಕ್ಷೆಯನ್ನು ಸ್ವೀಕರಿಸಿ, ತನ್ನ ರಾಜ್ಯದ ಕೆಳಗೆ ಸದಾ ಜೀವಿಸುವುದಕ್ಕಾಗಿ ಯೆಹೋವ ದೇವರು ಒಟ್ಟುಗೂಡಿಸುತ್ತಿರುವ ಲೋಕ-ವ್ಯಾಪಕ ಸಹೋದರತ್ವವನ್ನು ಸೇರುವುದನ್ನು ಕಾಣುವುದು ಸಂತೋಷವೇ ಸರಿ.