ಹಿರಿಯರೇ—ವಹಿಸಿಕೊಡಿರಿ!
ಅವನು ಜೀವಿತದ ತನ್ನ ಅನುಭವದಿಂದ ಹದಗೊಳಿಸಲ್ಪಟ್ಟ ನ್ಯಾಯದ ಒಂದು ತೀವ್ರ ಪ್ರಜ್ಞೆಯಿರುವ ತಾಳ್ಮೆಯ, ದೀನ ಮನುಷ್ಯನಾಗಿದ್ದನು. ಆದುದರಿಂದ ಮೂವತ್ತು ಲಕ್ಷಕ್ಕಿಂತಲೂ ಅಧಿಕ ಪುರುಷರು, ಸ್ತ್ರೀಯರು, ಮತ್ತು ಮಕ್ಕಳು ಸಲಹೆಗಾಗಿ ಭರವಸೆಯೊಂದಿಗೆ ಅವನೆಡೆಗೆ ನೋಡಿದರು. ಅವರನ್ನು ನಿರಾಶೆಗೊಳಿಸದಿರಲು ಅವನು ಪ್ರಯತ್ನಿಸಿದನು. ಬೆಳಿಗ್ಗೆಯಿಂದ ಸಾಯಂಕಾಲದ ತನಕ, ಅವನು ಅವರ ಸಮಸ್ಯೆಗಳನ್ನು ಆಲಿಸಿದನು ಮತ್ತು ಅವರ ಸನ್ನಿವೇಶದಲ್ಲಿ ದೇವರ ನಿಯಮಗಳು ಹೇಗೆ ಅನ್ವಯಿಸಲ್ಪಡುತ್ತವೆಂದು ಕಾಣಲು ಅವರಿಗೆ ತಾಳ್ಮೆಯಿಂದ ನೆರವಾದನು. ಹೌದು, ಕೊಂಚ ಸಮಯಾವಧಿಯ ತನಕ, 3,500 ವರ್ಷಗಳ ಹಿಂದೆ, ಇಸ್ರಾಯೇಲ್ಯರ 12 ಕುಲಗಳ ನ್ಯಾಯತೀರ್ಮಾನವನ್ನು ಒಬ್ಬ ಮನುಷ್ಯನು—ಮೋಶೆ—ಏಕಾಕಿಯಾಗಿ ಮಾಡುತ್ತಿದ್ದನು.
ಆದಾಗ್ಯೂ, ಮೋಶೆಯ ಮಾವನಾದ ಇತ್ರೋವನು ಚಿಂತಿತನಾಗಿದ್ದನು. ಅಂತಹ ನಡಗೆಯ ವೇಗವನ್ನು ಕಾಪಾಡಿಕೊಂಡು ಬರಲು ಮೋಶೆಯು ನಿರೀಕ್ಷಿಸುವುದಾದರೂ ಹೇಗೆ? ಆದುದರಿಂದ ಇತ್ರೋವನು ಘೋಷಿಸಿದ್ದು: “ನೀನು ಮಾಡುವ ಕಾರ್ಯಕ್ರಮವು ಒಳ್ಳೇದಲ್ಲ. ಈ ಕೆಲಸ ಬಹುಕಷ್ಟವಾದದ್ದು; ನೀನೊಬ್ಬನೇ ಅದನ್ನು ನಡಿಸಲಾರಿ; ನೀನೂ ನಿನ್ನ ಸಂಗಡ ಇರುವ ಜನರೂ ನಿಶ್ಚಯವಾಗಿ ಬಳಲಿಹೋಗುವಿರಿ.” (ವಿಮೋಚನಕಾಂಡ 18:17, 18) ಪರಿಹಾರ? ಅವನ ಕೆಲವೊಂದು ಜವಾಬ್ದಾರಿಗಳನ್ನು ಇತರರಿಗೆ ವಹಿಸಿಕೊಡುವಂತೆ ಮೋಶೆಗೆ ಇತ್ರೋವನು ಸಲಹೆಯನ್ನಿತ್ತನು. (ವಿಮೋಚನಕಾಂಡ 18:19-23) ಒಳ್ಳೆಯ ಸಲಹೆ!
ಇಂದು ಕ್ರೈಸ್ತ ಸಭೆಯೊಳಗೆ, ತಾವು ಒಬ್ಬೊಂಟಿಗರಾಗಿ ಪೂರೈಸಲು ಪ್ರಾಯಶಃ ಸಾಧ್ಯವಿಲ್ಲದಷ್ಟನ್ನು ನೋಡಿಕೊಳ್ಳಲು ಪ್ರಯತ್ನಿಸುವ, ಮೋಶೆಯಂತಿರುವ ಅನೇಕ ಹಿರಿಯರು ಇದ್ದಾರೆ. ಅವರು ಕೂಟಗಳನ್ನು ಸಂಸ್ಥಾಪಿಸುತ್ತಾರೆ, ಹಾಗೂ ಕಾರ್ಯಕ್ರಮಗಳನ್ನು ತಯಾರಿಸುತ್ತಾರೆ ಮತ್ತು ಕ್ರಮಬದ್ಧವಾಗಿಯೂ, ಪರಿಣಾಮಕಾರಿಯಾಗಿಯೂ ಪ್ರದರ್ಶಿಸುತ್ತಾರೆ. (1 ಕೊರಿಂಥ 14:26, 33, 40; 1 ತಿಮೊಥೆಯ 4:13) ಸಭೆಯ ವೈಯಕ್ತಿಕ ಸದಸ್ಯರ ಆವಶ್ಯಕತೆಗಳ ಪರಾಮರಿಕೆಯನ್ನು ಕೂಡ ಹಿರಿಯರು ಮಾಡುತ್ತಾರೆ. (ಗಲಾತ್ಯ 6:1; 1 ಥೆಸಲೊನೀಕ 5:14; ಯಾಕೋಬ 5:14) ಅವರು ಅತಿ ಪ್ರಾಮುಖ್ಯವಾದ ರಾಜ್ಯದ ಸುವಾರ್ತೆಯ ಸಾರುವಿಕೆಯ ಕಾರ್ಯದಲ್ಲಿ ಮುಂದಾಳುತನ ವಹಿಸುತ್ತಾರೆ. (ಮತ್ತಾಯ 24:14; ಇಬ್ರಿಯ 13:7) ಸಾರ್ವಜನಿಕರಿಗೆ ಹಂಚಲಿಕ್ಕಾಗಿ ಬೇಕಾಗಿರುವ ಸಾಹಿತ್ಯಗಳು ಸಭೆಯಲ್ಲಿ ದೊರೆಯುವಂತೆಯೂ ಕೂಡ ಅವರು ಏರ್ಪಡಿಸುತ್ತಾರೆ.
ಇದಕ್ಕೆ ಕೂಡಿಸಿ, ಕೆಲವು ಹಿರಿಯರಿಗೆ ಸರ್ಕಿಟ್ ಸಮ್ಮೇಳನದಲ್ಲಿ ಮತ್ತು ಜಿಲ್ಲಾ ಅಧಿವೇಶನಗಳ ಕಾರ್ಯಕ್ರಮಗಳಲ್ಲಿ ಭಾಗಗಳನ್ನು ಕೊಡಲಾಗುತ್ತದೆ. ಅವರು ಸಮ್ಮೇಳನದ ಸಂಸ್ಥಾಪನೆಯ ಸಿಬ್ಬಂದಿಗಳಲ್ಲಿರುತ್ತಾರೆ ಮತ್ತು ಹಾಸ್ಪಿಟಲ್ ಲಿಏಸಾನ್ ಕಮಿಟಿಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಕೆಲವರು ರಾಜ್ಯ ಸಭಾಗೃಹ ಕಟ್ಟೋಣದಲ್ಲೂ ನೆರವನ್ನೀಯುತ್ತಾರೆ. ಮತ್ತು ಇದೆಲ್ಲವೂ, ಅವರ ಕುಟುಂಬದ ಜವಾಬ್ದಾರಿಕೆಗಳ ಮತ್ತು ಆತ್ಮಿಕವಾಗಿ ಸ್ವತಃ ತಮ್ಮನ್ನು ಉಣಿಸಿಕೊಳ್ಳುವ ಅವರ ಆವಶ್ಯಕತೆಯ ಸಹಿತ ಕೂಡಿಸಲ್ಪಟ್ಟದ್ದಾಗಿ ಇರುತ್ತದೆ. (ಹೋಲಿಸಿರಿ ಯೆಹೋಶುವ 1:8; ಕೀರ್ತನೆ 110:3; 1 ತಿಮೊಥೆಯ 3:4, 5; 4:15, 16.) ಇದೆಲ್ಲವನ್ನೂ ಈ ಕ್ರೈಸ್ತ ಪುರುಷರು ಈಡೇರಿಸುವುದು ಹೇಗೆ? ಮೋಶೆಯಂತೆ ಅವರಿಗೆ ಸಹಾಯವು ಬೇಕಾಗಿದೆ. ಅವರು ಇತರರಿಗೆ ವಹಿಸಿಕೊಡಲು ಕಲಿಯತಕ್ಕದ್ದು. ನಿಶ್ಚಯವಾಗಿಯೂ, ಇತರರಿಗೆ ವಹಿಸಿಕೊಡದಿರುವ ವ್ಯಕ್ತಿಯೊಬ್ಬನು ನ್ಯೂನ ಸಂಸ್ಥಾಪಕನಾಗಿದ್ದಾನೆ.
ಇತರರಿಗೆ ತರಬೇತಿ ಮಾಡುವ ಮೂಲ್ಯತೆ
ಇತರರಿಗೆ ಜವಾಬ್ದಾರಿಯನ್ನು ವಹಿಸಿಕೊಡಲು ಇನ್ನೂ ಹೆಚ್ಚಿನ ಕಾರಣಗಳಿವೆ. ತಲಾಂತುಗಳ ಯೇಸುವಿನ ಸಾಮ್ಯದಲ್ಲಿ, ದಣಿಯು ಬಹುದೂರದ ಪ್ರಯಾಣಕ್ಕೆ ಹೋಗುವ ಮೊದಲು, ತನ್ನ ಸೇವಕರನ್ನು ಕರೆಯಿಸಿ ಅವರಿಗೆ ವಿವಿಧ ಮಟ್ಟದ ಜವಾಬ್ದಾರಿಕೆಯನ್ನು ವಹಿಸಿಕೊಟ್ಟನು. (ಮತ್ತಾಯ 25:14, 15) ಹಾಗೆ ಮಾಡುವುದರಿಂದ, ದಣಿಯು ಅನೇಕ ಗುರಿಗಳನ್ನು ಸಾಧಿಸಲು ಶಕ್ತನಾದನು. ಮೊತ್ತ ಮೊದಲಾಗಿ, ಅವನು ದೂರಹೋದಾಗ ಅವನ ಸೇವಕರು ಅವನ ಸ್ಥಾನದಲ್ಲಿ ಕಾರ್ಯನಿರ್ವಹಿಸಿದರು ಮತ್ತು ಅವನು ಇಲ್ಲದಿದ್ದಾಗ ಆವಶ್ಯಕ ಕಾರ್ಯವು ನಿಲ್ಲಿಸಲ್ಪಡಲಿಲ್ಲ. ಎರಡನೆಯದಾಗಿ, ಮಾತುಗಳಿಗಿಂತ ಕಾರ್ಯಗಳು ಹೆಚ್ಚು ಗಟ್ಟಿಯಾಗಿ ಮಾತಾಡುವುದರಿಂದ, ದಣಿಯು ತನ್ನ ಸೇವಕರ ಸಾಮರ್ಥ್ಯಗಳನ್ನು ಮತ್ತು ನಿಷ್ಠೆಗಳನ್ನು ಅವಲೋಕಿಸಶಕ್ತನಾಗಿದ್ದಾನೆ. ಮೂರನೆಯದಾಗಿ, ದಣಿಯು ತನ್ನ ಸೇವಕರಿಗೆ ತುಂಬಾ ಜರೂರಿಯಿರುವ ಅನುಭವವನ್ನು ಗಳಿಸಲು ಅವಕಾಶವೊಂದನ್ನು ಒದಗಿಸಿದನು.
ನಮ್ಮ ದಿನಗಳಲ್ಲಿ ಈ ಸಾಮ್ಯಕ್ಕೆ ಒಂದು ಅರ್ಥವಿದೆ. ಯೇಸುವು ಭೂಮಿಯನ್ನು ಬಿಟ್ಟುಹೋದಾಗ, ಅವನ ಅಭಿಷಿಕ್ತ ಶಿಷ್ಯರಿಗೆ ಜವಾಬ್ದಾರಿಯನ್ನು ವಹಿಸಿಕೊಟ್ಟನು. ಇವರಲ್ಲಿ ಉಳಿದಿರುವವರು ಇನ್ನೂ ರಾಜ್ಯದ ಭೂವ್ಯಾಪಕ ಅಭಿರುಚಿಗಳಿಗಾಗಿ ಜವಾಬ್ದಾರರಾಗಿರುತ್ತಾರೆ. (ಲೂಕ 12:42) ಅಭಿಷಿಕ್ತರ ಆಧುನಿಕ ಪಾರುಪತ್ಯದ ಸಮಯದಲ್ಲಿ, ಯೆಹೋವನ ಆಶೀರ್ವಾದವು ಅವನ ಸಂಸ್ಥೆಯ ಮೇಲೆ ವ್ಯಕ್ತವಾಗುತ್ತದೆ. ಇದರ ಫಲವಾಗಿ, ಅದು ಆಶ್ಚರ್ಯಕರವಾದ ರೀತಿಯಲ್ಲಿ ಅಭಿವೃದ್ಧಿಗೊಂಡಿದೆ. ಯಾಕೆ, ಕಳೆದ ಕೇವಲ ಐದು ವರ್ಷಗಳಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಹೊಸಬರು ನೀರಿನ ದೀಕ್ಷಾಸ್ನಾನದ ಮೂಲಕ ತಮ್ಮ ಸಮರ್ಪಣೆಯನ್ನು ಸಾಂಕೇತಿಕವಾಗಿ ತೋರಿಸಿದ್ದಾರೆ! ಇದರಿಂದಾಗಿ ಸಾವಿರಾರು ಹೊಸ ಸಭೆಗಳು ಮತ್ತು ನೂರಾರು ಹೊಸ ಸರ್ಕಿಟುಗಳು ಉಂಟಾದವು.
ಯೇಸು ಕ್ರಿಸ್ತನು “ನಂಬಿಗಸ್ತನೂ ವಿವೇಕಿಯೂ ಆದ ಆಳಿಗೆ” ಜವಾಬ್ದಾರಿಗಳನ್ನು ವಹಿಸಿಕೊಟ್ಟಂತೆ, ಪ್ರತಿಯಾಗಿ ಅವರು ಸಭೆಯ ಜವಾಬ್ದಾರಿಕೆಗಳನ್ನು “ಬೇರೆ ಕುರಿ”ಗಳ ಹಿರಿಯರುಗಳಿಗೆ ಮತ್ತು ಶುಶ್ರೂಷಾ ಸೇವಕರಿಗೆ ನೇಮಿಸಿಕೊಟ್ಟಿರುತ್ತಾರೆ. (ಮತ್ತಾಯ 24:45-47; ಯೋಹಾನ 10:16) ಆದಾಗ್ಯೂ, ಮಹತ್ತರವಾದ ಬೆಳವಣಿಗೆಯ ಪರಾಮರಿಕೆಯನ್ನು ಮಾಡಲು ಅಧಿಕ ಸಮರ್ಪಿತ ಪುರುಷರುಗಳ ಜರೂರಿಯಿದೆ. ಅವರು ಎಲ್ಲಿಂದ ಬರುವರು? ಹಿರಿಯರು ಅವರನ್ನು ತರಬೇತಿಗೊಳಿಸಬೇಕು. ಆದರೆ ಭರವಸ ತೋರುವ ವ್ಯಕ್ತಿಗಳಿಗೆ ತಕ್ಕದ್ದಾದ ಜವಾಬ್ದಾರಿಗಳನ್ನು ಅವರು ವಹಿಸಿಕೊಡದಿದ್ದರೆ, ಅಂಥ ಪುರುಷರನ್ನು ಹಿರಿಯರು ಹೇಗೆ ತರಬೇತಿಗೊಳಿಸಶಕ್ತರಾಗಿದ್ದಾರೆ? ಎಳೇ ಪುರುಷರ ಸಾಮರ್ಥ್ಯಗಳನ್ನು ಮತ್ತು ನಿಷ್ಠೆಗಳನ್ನು ಅವಲೋಕಿಸಲು ಹಿರಿಯರಿಗೆ ಬೇರೆ ಯಾವ ರೀತಿಯಲ್ಲಿ ಅವಕಾಶವಿದೆ?
ವಹಿಸಿಕೊಡುವುದು ಅಂದರೆ ಅರ್ಥವೇನು?
ಕೆಲವರಿಗೆ, “ವಹಿಸಿಕೊಡುವುದು” ಅಂದರೆ ಭಾರವನ್ನು ಇಳಿಸುವುದು, ಅವರ ಜವಾಬ್ದಾರಿಕೆಗಳನ್ನು ಹೋಗಲಾಡಿಸುವುದು, ನಿರ್ಲಕ್ಷ್ಯಮಾಡುವುದು, ಯಾ ಪರಿತ್ಯಾಗ ಮಾಡುವುದು ಎಂಬರ್ಥದಲ್ಲಿರುತ್ತದೆ. ಆದಾಗ್ಯೂ, ಯೋಗ್ಯವಾಗಿ ಉಪಯೋಗಿಸಿದಾಗ, “ವಹಿಸಿಕೊಡುವುದು” ನಿಜವಾಗಿಯೂ ಜವಾಬ್ದಾರಿಕೆಗಳನ್ನು ನೆರವೇರಿಸುವ ಒಂದು ವಿಧವಾಗಿದೆ. ಇಂಗ್ಲಿಷ್ ಕ್ರಿಯಾಪದ “ವಹಿಸಿಕೊಡು” ಇದನ್ನು “ಇನ್ನೊಬ್ಬರಿಗೆ ನಂಬಿ ಒಪ್ಪಿಸುವುದು; ಒಬ್ಬನ ಪ್ರತಿನಿಧಿಯಾಗಿ ನೇಮಿಸುವುದು; ಜವಾಬ್ದಾರಿಯನ್ನು ಯಾ ಅಧಿಕಾರವನ್ನು ನೇಮಿಸುವುದು” ಎಂದು ಅರ್ಥವಿವರಿಸಲಾಗಿದೆ. ಆದಾಗ್ಯೂ, ವಹಿಸಿಕೊಡುವವನು ಏನು ಮಾಡಲ್ಪಡುತ್ತದೋ ಅದಕ್ಕೆ ಅಂತಿಮ ಜವಾಬ್ದಾರಿಯುಳ್ಳವನಾಗಿ ಉಳಿಯುತ್ತಾನೆ.
ತಾವು ಹತೋಟಿಯನ್ನು ಕಳಕೊಳ್ಳುವೆವು ಎಂದು ಕೆಲವರು ಭಯಪಡುವ ಕಾರಣ ವಹಿಸಿಕೊಡಲು ಕೆಲವರು ಹಿಂಜರಿಯಬಹುದು. ಆದರೂ, ವಹಿಸಿಕೊಡುವುದು ಅಂದರೆ ಹತೋಟಿಯ ನಷ್ಟವೆಂದು ಅರ್ಥವಲ್ಲ. ಅದೃಶ್ಯನೂ, ಸ್ವರ್ಗದಿಂದ ಆಳುವುದಾದರೂ ಕೂಡ, ಕ್ರೈಸ್ತ ಸಭೆಯು ಕ್ರಿಸ್ತ ಯೇಸುವಿನ ಹತೋಟಿಯಲ್ಲಿ ಬಹಳಷ್ಟು ಇದೆ. ಅವನು, ಪ್ರತಿಯಾಗಿ, ಸಭೆಯನ್ನು ಅನುಭವಿ ಪುರುಷರ ಪರಾಮರಿಕೆಯಲ್ಲಿ ನಂಬಿ ಒಪ್ಪಿಸಿರುತ್ತಾನೆ.—ಎಫೆಸ 5:23-27; ಕೊಲೊಸ್ಸೆ 1:13.
ಇತರರು ವಹಿಸಿಕೊಡುವಿಕೆಯಲ್ಲಿ ಅನಾಸಕ್ತಿಯುಳ್ಳವರಾಗಿರಬಹುದು, ಕಾರಣ ತಾವಾಗಿಯೇ ಕೆಲಸವನ್ನು ಬೇಗನೇ ಮಾಡಶಕ್ತರು ಎಂದವರು ಎಣಿಸುತ್ತಾರೆ. ಆದಾಗ್ಯೂ, ಇತರರನ್ನು ತರಬೇತಿಗೊಳಿಸುವ ಮೂಲ್ಯತೆಯನ್ನು ಯೇಸುವು ಮನಗಂಡನು. ಯೇಸುವಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಭೂಮಿಯ ಮೇಲೆ ಬೇರೆ ಯಾರೂ ಕಲಿಸಲಿಲ್ಲ. (ಯೋಹಾನ 7:46) ಆದರೂ, ತನ್ನ ಶಿಷ್ಯರಲ್ಲಿ 70 ಮಂದಿಗೆ ಉಪದೇಶವನ್ನು ಕೊಟ್ಟಾದ ಮೇಲೆ, ಸಾರುವ ಕೆಲಸದಲ್ಲಿ ಅವರನ್ನು ಅವನು ಕಳುಹಿಸಿದನು. ಯೇಸುವಿನ ಕಲಿಸುವ ಸಾಮರ್ಥ್ಯಕ್ಕೆ ಸರಿಸಮವಾಗದಿದ್ದರೂ ಕೂಡ, ಅವರ ಯಶಸ್ವಿಗಳಲ್ಲಿ ಅವರು ಸಂತೋಷಪಟ್ಟು ಹಿಂತೆರಳಿದರು. ಅವರೊಂದಿಗೆ ಯೇಸುವು ಆನಂದಿಸಿದನು ಮತ್ತು ಅವರನ್ನು ಶ್ಲಾಘಿಸಿದನು, ಯಾಕಂದರೆ ಅವನು ಹೋದನಂತರ ಬಹಳ ಕಾಲದ ತನಕ ಅವರು ಕೆಲಸವನ್ನು ಮುಂದರಿಸಲಿದ್ದರು ಮತ್ತು ಅವನು ಒಬ್ಬೊಂಟಿಗನಾಗಿ ಮಾಡಸಾಧ್ಯವಿರುವುದಕ್ಕಿಂತಲೂ ಹೆಚ್ಚನ್ನು ಅವರು ಕಟ್ಟಕಡೆಗೆ ಈಡೇರಿಸಲಿದ್ದರು ಎಂದವನಿಗೆ ತಿಳಿದಿತ್ತು.—ಲೂಕ 10:1-24; ಯೋಹಾನ 14:12.
ವಹಿಸಿಕೊಡುವುದು ಅಂದರೆ ಆವಶ್ಯಕವಾದ ವಿವರಣೆಗಳೊಂದಿಗೆ ಸಹಾಯವನ್ನು ಪಡೆಯುವುದು ಎಂದೂ ಅರ್ಥವಿದೆ. ಯೇಸುವು ಸಾಯಲಿದ್ದ ಒಂದು ದಿನದ ಮುಂಚೆ, ಅವನ ಕೊನೆಯ ಪಸ್ಕಹಬ್ಬದೂಟಕ್ಕಾಗಿ ಆವಶ್ಯಕವಾದ ಏರ್ಪಾಡುಗಳನ್ನು ಮಾಡಲು ಅವನು ಪೇತ್ರ, ಯೋಹಾನರನ್ನು ನೇಮಿಸಿದನು. (ಲೂಕ 22:7-13) ಕುರಿ, ದ್ರಾಕ್ಷಾಮದ್ಯ, ಹುಳಿಯಿಲ್ಲದ ರೊಟ್ಟಿ, ಮತ್ತು ಕಹಿಯಾದ ಪಲ್ಯಗಳನ್ನು ಖರೀದಿಸುವ ಬಗ್ಗೆ ಯೇಸುವು ಚಿಂತಿಸುವ ಜರೂರಿ ಇರಲಿಲ್ಲ; ಯಾ ಪಾತ್ರೆಗಳನ್ನು, ಕಟ್ಟಿಗೆಯನ್ನು, ಮತ್ತು ಅಂತಹವುಗಳನ್ನು ಅವನು ಒಟ್ಟುಗೂಡಿಸಬೇಕಾಗಿಯೂ ಇರಲಿಲ್ಲ. ಪೇತ್ರ, ಯೋಹಾನರು ಈ ವಿವರಣೆಗಳ ಜಾಗ್ರತೆ ತಕ್ಕೊಂಡರು.
ಯೇಸುವಿನ ಮಾದರಿಯನ್ನು ಅವರು ಅನುಕರಿಸುವುದಾದರೆ, ಹಿರಿಯರು ಇಂದು ತದ್ರೀತಿಯ ಪ್ರಯೋಜನಗಳಲ್ಲಿ ಆನಂದಿಸಬಹುದು. ಉದಾಹರಣೆಗೆ, ಬರಲಿರುವ ಸಾಹಿತ್ಯ ನೀಡುವಿಕೆಗಾಗಿ ಆವಶ್ಯಕವಾದ ಒದಗಣೆಗಳಿಗೆ ಆರ್ಡರ್ ಮಾಡುವಂತೆ ಲಿಟರೇಚರ್ ನೋಡಿಕೊಳ್ಳುವವನಿಗೆ ಕೇಳಿಕೊಳ್ಳಬಹುದು. ಕಳೆದ ಸಾಹಿತ್ಯ ನೀಡುವಿಕೆಗಳಲ್ಲಿ ತದ್ರೀತಿಯ ಸಾಹಿತ್ಯಗಳು ಎಷ್ಟೊಂದು ಬಳಸಲ್ಪಟ್ಟಿವೆ ಎಂದು ಅವನ ದಾಖಲೆಗಳನ್ನು ವಿಮರ್ಶಿಸುವಂತೆ ಅವನಿಗೆ ಹೇಳಬಹುದು. ಯೋಗ್ಯವಾದ ಆರ್ಡರ್ ಫಾರ್ಮನ್ನು ತಯಾರಿಸುವ ಮೊದಲು ಸಭೆಯ ಟೆರಿಟೊರಿಯ ಗುಣಲಕ್ಷಣಗಳನ್ನು ಕೂಡ ಅವನು ಪರಿಗಣಿಸಬಹುದು. ಅನಂತರ ಅವನು ಪರಿಶೀಲಿಸಲಿಕ್ಕಾಗಿ ಸಭೆಯ ಸೆಕ್ರಿಟರಿಗೆ ಫಾರ್ಮನ್ನು ಅವನು ಒಪ್ಪಿಸುವನು. ಅವನ ಕೆಲಸವನ್ನು ಲಿಟರೆಚರ್ ಸೇವಕನು ಕಲಿತಾದ ನಂತರ, ಎಷ್ಟರ ತನಕ ಆರ್ಡರ್ ಫಾರ್ಮಿನ ಜುಮ್ಲಾಗಳು ಸಮಂಜಸತೆಯೊಳಗೆ ಇರುತ್ತವೆಯೊ, ಅಷ್ಟರ ತನಕ ಹಿಂದಿನ ದಾಖಲೆಗಳನ್ನು ಎರಡು ಬಾರಿ ತಾಳೆನೋಡುವ ಆವಶ್ಯಕತೆ ಸೆಕ್ರಿಟರಿಗೆ ಇರಕೂಡದು. ಸ್ಪಷ್ಟವಾಗಿಗಿ, ಸರಳವಾದ ಈ ವಹಿಸಿಕೊಡುವಿಕೆಯು ಒಂದು ಲಿಟರೆಚರ್ ಆರ್ಡರ್ ಮಾಡುವುದನ್ನು ಹೆಚ್ಚು ಸುಲಭವಾಗಿ ಮತ್ತು ಸಂಬಂಧಪಟ್ಟವರೆಲ್ಲರಿಗೆ ಸರಳವಾಗಿ ಮಾಡುತ್ತದೆ.
ಇಂತಹ ಭಾವೀ ಪ್ರಯೋಜನಗಳ ನೋಟದಲ್ಲಿ, ಪರಿಣಾಮಕಾರಿಯಾಗಿ ಒಬ್ಬನು ಹೇಗೆ ವಹಿಸಿಕೊಡಬಲ್ಲನು?
ವಹಿಸಿಕೊಡುವ ವಿಧ
ಕೆಲಸವನ್ನು ಸ್ಫುಟಗೊಳಿಸಿರಿ. ಮೊತ್ತಮೊದಲಾಗಿ, ಯಾವ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತದೆ ಎಂದು ಸೃಷ್ಟಗೊಳಿಸಿರಿ. ಯೇಸುವಿನ ಮೊಹರಿಗಳ ಸಾಮ್ಯದಲ್ಲಿ ತನ್ನ ಹತ್ತು ಆಳುಗಳಿಗೆ “ಶ್ರೀಮಂತನಾದ ಒಬ್ಬಾನೊಬ್ಬ ಮನುಷ್ಯನು” ಹೇಳಿದ್ದೇನಂದರೆ “ನಾನು ಬರುವ ತನಕ ವ್ಯಾಪಾರಮಾಡಿಕೊಂಡಿರ್ರಿ.” (ಲೂಕ 19:12, 13) ಅವನ ಮೊಹರಿಯೊಂದಿಗೆ ಲಾಭದಾಯಕ ರೀತಿಯಲ್ಲಿ ವ್ಯಾಪಾರಮಾಡಲು ಮತ್ತು ಅವನು ಹಿಂತೆರಳಿದಾಗ ಅವರ ಸಂಪಾದನೆಯನ್ನು ವರದಿಸುವುದನ್ನು ಅವನು ಆಳುಗಳಿಂದ ನಿರೀಕ್ಷಿಸಿದ್ದನು. ತಾವೇನು ಮಾಡಬೇಕೆಂದು ಅವರಿಗೆ ತಿಳಿದಿತ್ತು. ಆಧುನಿಕ ದಿನದ ರಾಜ್ಯ ಸಭಾಗೃಹದ ಯೋಜನೆಯಲ್ಲಿ ಈ ತತ್ವವು ಹೇಗೆ ಅನ್ವಯಿಸುತ್ತದೆ? ಉದಾಹರಣೆಗಾಗಿ, ಮಾಡನ್ನು ದುರುಸ್ತಿಗೊಳಿಸಲು ನೇಮಿತನಾದ ಸಹೋದರನಿಗೆ, ಸಾಮಾನ್ಯವಾಗಿ ಯಾವ ಸಾಮಗ್ರಿಗಳನ್ನು ಬಳಸಬೇಕು, ಅವುಗಳನ್ನು ಎಲ್ಲಿಂದ ಪಡೆಯ ಬಹುದು, ಮತ್ತು ಹವಾಗುಣ ಅನುಮತಿಸಿದ್ದಲ್ಲಿ ಯಾವಾಗ ಕೆಲಸ ಆರಂಭಿಸಬೇಕು ಇದೆಲ್ಲವನ್ನು ತಿಳಿಸಲಾಗುತ್ತದೆ. ಅಂಥ ನಿರ್ದಿಷ್ಟವಾದ ಮಾರ್ಗದರ್ಶನ ರೀತಿಗಳು ಒಳ್ಳೆಯ ಸಂಸ್ಥಾಪನೆಗಾಗಿ ಕಾರ್ಯನಡಿಸುತ್ತವೆ.
ಕೆಲಸದ ವ್ಯಾಪ್ತಿಯನ್ನು ಮಾತ್ರವಲ್ಲದೆ, ಯಾವ ನಿರ್ಣಯಗಳನ್ನು ವ್ಯಕ್ತಿಯು ಕೈಗೊಳ್ಳಲು ಅನುಮತಿಸಲ್ಪಟ್ಟಿದ್ದಾನೆ ಮತ್ತು ಯಾವ ಸಂಗತಿಗಳನ್ನು ಇತರರಿಗೆ ತಿಳಿಸತಕ್ಕದ್ದು ಎಂದು ಕೂಡ ಸ್ಫುಟಗೊಳಿಸುವುದು ಪ್ರಾಮುಖ್ಯವಾಗಿದೆ. ಮೋಶೆಯು ತನ್ನಿಂದ ನೇಮಕಗೊಂಡವರಿಗೆ, ಚಿಕ್ಕ ವ್ಯಾಜ್ಯಗಳನ್ನು ಅವರು ತೀರ್ಮಾನಿಸಬೇಕು, ಆದರೆ ಕಷ್ಟಕರವಾಗಿರುವುದನ್ನು ಅವನೆಡೆಗೆ ತರತಕ್ಕದ್ದು ಎಂದು ಹೇಳಿದನು.—ವಿಮೋಚನಕಾಂಡ 18:22.
ಜವಾಬ್ದಾರಿಕೆಗಳನ್ನು ನೇಮಿಸಿಕೊಡುವಾಗ, ಒಂದೇ ಕೆಲಸವನ್ನು ಇಬ್ಬರಿಗೆ ಕೊಟ್ಟು ಮೇಲುಸೇರುವೆಯಾಗುವುದನ್ನು ಹೋಗಲಾಡಿಸಬೇಕು. ಒಂದೇ ಕೆಲಸಕ್ಕೆ ಒಬ್ಬರಿಗಿಂತ ಹೆಚ್ಚಿನವರನ್ನು ನೇಮಿಸಿದಾಗ, ಗಲಿಬಿಲಿಯುಂಟಾಗುತ್ತದೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳ ದೊಡ್ಡ ಅಧಿವೇಶನವೊಂದರಲ್ಲಿ ಶುಚಿತ್ವ ಖಾತೆ ಮತ್ತು ಆಹಾರ ಒದಗಣೆಯ ಖಾತೆಗಳೆರಡಕ್ಕೂ, ಆಹಾರದ ಮೇಜುಗಳನ್ನು ಶುಚಿತ್ವಗೊಳಿಸಲು ಹೇಳಿದರೆ, ಯಾ ಎಟೆಂಡೆಂಟ್ ಖಾತೆ ಮತ್ತು ದೀಕ್ಷಾಸ್ನಾನದ ಖಾತೆಗಳೆರಡಕ್ಕೂ, ದೀಕ್ಷಾಸ್ನಾನದ ಸಮಯದಲ್ಲಿ ವೀಕ್ಷಿಸುವವರನ್ನು ಮಾರ್ಗದರ್ಶಿಸಲು ನೇಮಿಸಿದರೆ, ಏನಾಗಬಹುದೆಂದು ಎಣಿಸಿರಿ.
ಸಮರ್ಥರಾದ ಪುರುಷರನ್ನು ಆರಿಸಿರಿ. ಇತ್ರೋವನು ಮೋಶೆಗೆ ಸಲಹೆಯನ್ನಿತ್ತದ್ದು: “ನೀನು ಸ್ವತಃ ಸಮಸ್ತ ಜನರೊಳಗೆ ಸಮಥರೂ, ದೇವ ಭಯವುಳ್ಳವರೂ, ಪ್ರಾಮಾಣಿಕರೂ ಮತ್ತು ಭ್ರಷ್ಟರಲ್ಲದವರೂ ಆದ ಪುರುಷರನ್ನು ಆರಿಸು, ಮತ್ತು ಜನರ ಮೇಲೆ ನೇಮಿಸು.” (ವಿಮೋಚನಕಾಂಡ 18:21, ದ ನ್ಯೂ ಇಂಗ್ಲಿಷ್ ಬೈಬಲ್) ಸ್ಪಷ್ಟವಾಗಿಗಿ, ಪುರುಷನೊಬ್ಬನು ಆತ್ಮಿಕ ಅರ್ಹತೆಗಳನ್ನು ಮುಟ್ಟಿದವನಾಗಿರತಕ್ಕದ್ದು. ಮಾಡಲಿರುವ ಕೆಲಸವನ್ನು ಮಾಡುವುದರಲ್ಲಿ ಒಬ್ಬನು “ಸಮರ್ಥನು” ಎಂದು ನಿರ್ಧರಿಸಲು, ವ್ಯಕ್ತಿತ್ವದ ಸ್ವಭಾವಗಳನ್ನು, ಅನುಭವ, ತರಬೇತಿ, ಮತ್ತು ಹುಟ್ಟುಸಾಮರ್ಥ್ಯಗಳಂತಹ ಅಂಶಗಳಿಗೆ ಗಮನವನ್ನು ಕೊಡತಕ್ಕದ್ದು. ಈ ರೀತಿಯಲ್ಲಿ, ಕ್ರೈಸ್ತನೊಬ್ಬನು ವಿಶೇಷವಾಗಿ ಸೌಜನ್ಯವುಳ್ಳವನೂ, ಆಹ್ಲಾದಕರನೂ, ಸಹಾಯಕಾರಿ ಸ್ವಭಾವದವನೂ ಆಗಿದ್ದಲ್ಲಿ ಪತ್ರಿಕೆ ಕೌಂಟರ್‌ನಲ್ಲಿ ಯಾ ಒಬ್ಬ ಎಟೆಂಡೆಂಟ್‌ನಾಗಿ ಒಳ್ಳೆಯ ಕೆಲಸ ಮಾಡುವ ಸಂಭವವು ಹೆಚ್ಚು. ಅದೇ ಧಾಟಿಯಲ್ಲಿ, ಸಭೆಯ ಸೆಕ್ರಿಟರಿಗೆ ಯಾರಾದರೊಬ್ಬನನ್ನು ಸಹಾಯಕ್ಕಾಗಿ ಆರಿಸುವಾಗ, ಅವನೆಷ್ಟು ಕ್ರಮಬದ್ಧತೆಯುಳ್ಳವನಾಗಿದ್ದಾನೆ ಎಂಬ ವಿಷಯದಲ್ಲಿ ಪರಿಗಣನೆಯನ್ನೀಯುವುದು ಸಮಂಜಸತೆಯದ್ದಾಗಿದೆ. ಅವನು ವಿವರಗಳಿಗೆ ಗಮನವನ್ನೀಯುತ್ತಾನೋ, ಅವನು ಭರವಸಾರ್ಹನೋ, ಮತ್ತು ಗುಟ್ಟನ್ನು ಕಾಪಿಡಲು ಶಕ್ಯತೆಯುಳ್ಳವನೋ? (ಲೂಕ 16:10) ಆವಶ್ಯಕವಾದ ಆತ್ಮಿಕ ಅರ್ಹತೆಗಳ ಜೊತೆಯಲ್ಲಿ ಇಂತಹ ಸಂಗತಿಗಳಿಗೆ ಗಮನವನ್ನೀಯುವುದರಿಂದ, ಕೆಲಸವೊಂದಕ್ಕೆ ಯೋಗ್ಯ ಪುರುಷನನ್ನು ಹೊಂದಿಸಲು ಸಹಾಯವಾಗಬಲ್ಲದು.
ಬೇಕಾಗುವಷ್ಟು ಸಾಧನ ಸಂಪತ್ತುಗಳನ್ನು ಒದಗಿಸಿರಿ. ನೇಮಿಸಲ್ಪಟ್ಟ ಕಾರ್ಯವನ್ನು ಪೂರ್ಣಗೊಳಿಸಲಿಕ್ಕೋಸ್ಕರ ಅವನ ಹತೋಟಿಯಲ್ಲಿ ನಿರ್ದಿಷ್ಟ ಸಾಧನ ಸಂಪತ್ತುಗಳು ಇರುವ ಆವಶ್ಯಕತೆ ಸೇವೆಮಾಡುವವನಿಗೆ ಇದೆ. ಅವನಿಗೆ ಪ್ರಾಯಶಃ ಸಲಕರಣೆಗಳು, ಹಣ, ಯಾ ನೆರವು ಬೇಕಾಗಬಹುದು. ಬೇಕಾಗುವಷ್ಟು ಸಾಧನ ಸಂಪತ್ತುಗಳನ್ನು ಒದಗಿಸಿರಿ. ಉದಾಹರಣೆಗೆ, ರಾಜ್ಯ ಸಭಾಗೃಹದ ಆವಶ್ಯಕವಾದ ದುರುಸ್ತಿಮಾಡಲು ಸಹೋದರನೊಬ್ಬನಿಗೆ ನೇಮಿಸಬಹುದು. ಯಾವುದನ್ನು ಮಾಡಬೇಕೋ ಅದನ್ನು ಅವನಿಗೆ ಹೇಳಲಾಗುತ್ತದೆ ಎಂಬದು ನಿಸ್ಸಂಶಯ, ಆದರೆ ಆಕಸ್ಮಿಕ ಸಾಮಗ್ರಿಗಳಿಗಾಗಿ ಸ್ವಲ್ಪ ನಗದು ಹಣವೂ ಕೂಡ ಅವನಿಗೆ ಬೇಕಾಗಬಹುದು. ಪ್ರಾಯಶಃ ಅವನಿಗೆ ನೆರವು ಬೇಕಾಗಬಹುದು. ಆದುದರಿಂದ ಅವನಿಗೆ ಸಹಾಯ ಮಾಡುವಂತೆ ಹಿರಿಯರು ಇತರರಿಗೆ ಕೇಳಬಹುದು ಯಾ ‘ಇಂಥ ಸಹೋದರನು ಸಭಾಗೃಹದ ಇಂತಿಂಥ ಕೆಲಸವನ್ನು ಮಾಡಲಿರುವನು, ಮತ್ತು ಸಹಾಯಕ್ಕಾಗಿ ನಿಮ್ಮಲ್ಲಿ ಕೆಲವರನ್ನು ಅವನು ಭೇಟಿಯಾಗಲೂ ಬಹುದು’ ಎಂಬಂಥ ಪ್ರಕಟನೆಯನ್ನು ಸಭೆಗೆ ಮಾಡಬಹುದು. ಇಂಥ ಮುಂದಾಲೋಚನೆಯು, ಬೇಕಾಗುವಷ್ಟು ಸಾಧನ ಸಂಪತ್ತುಗಳನ್ನು ಒದಗಿಸದೆ, ಒಂದು ಕೆಲಸಕ್ಕೆ ನೇಮಿಸುವುದನ್ನು ತಡೆಯುತ್ತದೆ. ಒಬ್ಬ ವ್ಯವಸ್ಥಾಪಕ ಸಲಹೆಗಾರನು ಅದನ್ನು “ಅರ್ಧ ವಹಿಸಿಕೊಡಬೇಡಿ” ಎಂಬದಾಗಿ ವ್ಯಕ್ತಪಡಿಸಿದ್ದಾನೆ.
ಜವಾಬ್ದಾರಿಗಳನ್ನು ನೇಮಿಸುವಾಗ, ಕೆಲಸ ಮಾಡುವ ವ್ಯಕ್ತಿಯು ನಿಮ್ಮ ಸ್ಥಾನದಲ್ಲಿ ನಿರ್ವಹಿಸುತ್ತಿದ್ದಾನೆಂದು ಇತರರಿಗೆ ತಿಳಿಸಿರಿ. ನಿಮ್ಮ ಸ್ಥಾನದಲ್ಲಿ ಕ್ರಿಯೆಗೈಯುವ ಅಧಿಕಾರವು ಕೂಡ ಒಂದು ಸಾಧನ ಸಂಪತ್ತು ಆಗಿದೆ. “ಸರ್ವಸಮೂಹದವರ” ಮುಂದೆ ಇಸ್ರಾಯೇಲ್ಯರ ಹೊಸ ನಾಯಕನಾದ ಯೆಹೋಶುವನು ನೇಮಕಪಡೆದನು. “ನಿನಗಿರುವ ಗೌರವವನ್ನು ಅವನಿಗೆ ಕೊಡಬೇಕು” ಎಂದು ಮೋಶೆಗೆ ಆಜ್ಞಾಪಿಸಲಾಯಿತು. (ಅರಣ್ಯಕಾಂಡ 27:18-23) ಸಭೆಯ ಅಳವಡಿಸುವಿಕೆಯಲ್ಲಿ, ನೇಮಿತ ಕೆಲಸದೊಂದಿಗಿನವರ ಪಟ್ಟಿಯೊಂದನ್ನು ಸಭೆಯ ಸಮಾಚಾರ ಫಲಕದ ಮೇಲೆ ಸರಳವಾಗಿ ಅಂಟಿಸುವುದರಿಂದ, ಅದನ್ನು ಪೂರೈಸಬಹುದು.
ಅವರ ತೀರ್ಮಾನಗಳನ್ನು ಬೆಂಬಲಿಸಿರಿ. ಈಗ ನೇಮಿತನಾದವನು ಮಾಡಬೇಕಾದ ಕೆಲಸವನ್ನು ಆರಂಭಿಸಬಲ್ಲನು. ಆದರೂ ನೆನಪಿನಲ್ಲಿಡಿರಿ, ಅವನು ಮಾಡುವ ಉತ್ತಮ ನಿರ್ಣಯಗಳನ್ನು ನೀವು ಬೆಂಬಲಿಸುವುದಾದರೆ, ನೀವು ಪ್ರೋತ್ಸಾಹದ ನಿಜ ಮೂಲವಾಗಬಲ್ಲಿರಿ. ಉದಾಹರಣೆಗೆ, ಹಿರಿಯರಾಗಿರುವ ನೀವು ನೇಮಿಸಲ್ಪಟ್ಟಿರುವ ಸಹೋದರನು ಮಾಡುವುದಕ್ಕಿಂತ ತುಸು ಭಿನ್ನವಾಗಿ, ರಾಜ್ಯ ಸಭಾಗೃಹದ ವೇದಿಕೆಯ ಮೇಲೆ ಮೈಕ್ರೊಫೋನ್‌ಗಳನ್ನು ಮತ್ತು ಪೀಠೋಪಕರಣಗಳನ್ನು ಇಡಲು ಇಷ್ಟಪಡಬಹುದು. ಆದಾಗ್ಯೂ, ವೇದಿಕೆಯ ಜಾಗ್ರತೆ ವಹಿಸುವ ಸಹೋದರನಿಗೆ ಅವನ ಕೆಲಸದಲ್ಲಿ ಸ್ವಲ್ಪ ಸ್ವಾತಂತ್ರ್ಯವು ಕೊಡಲ್ಪಡುವುದಾದರೆ, ಅವನು ಪ್ರಾಯಶಃ ಆತ್ಮವಿಶ್ವಾಸ ಮತ್ತು ಅನುಭವವನ್ನು ಗಳಿಸುವನು. ಇದು ಅಲ್ಲದೆ, ಅವನು ಸಂಗತಿಗಳನ್ನು ಕೂಡ ಉತ್ತಮವಾಗಿ ಮಾಡಲೂಬಹುದು. ಒಬ್ಬ ವ್ಯಾಪಾರ ಸಲಹೆಗಾರನು ಹೇಳಿದ್ದು: “ಕಾರ್ಯವನ್ನು ವಹಿಸಿಕೊಡಿರಿ, ಹೇಗೆ ಅದು ಮಾಡಲ್ಪಡುತ್ತದೆ ಎಂದಲ್ಲ. . . . ಕೆಲವೊಮ್ಮೆ ರಚನಾತ್ಮಕ ಹುಟ್ಟುಸಾಮರ್ಥ್ಯಗಳು ಪ್ರಕಟಗೊಳ್ಳುತ್ತವೆ.”
ಇನ್ನೂ ಹೆಚ್ಚಾಗಿ, ನೇಗಿಲಮೇಲೆ ಕೈಯಿಟ್ಟು ಕೆಲಸಮಾಡುತ್ತಾನೋ ಎಂಬಂತಿರುವ ಸಹೋದರನು ಆಗಿಂದಾಗ್ಗೆ ಒಂದು ನಿರ್ದಿಷ್ಟ ಸನ್ನಿವೇಶದ ಸಮೀಪ ಇರುತ್ತಾನೆ ಮತ್ತು ಅದರೊಂದಿಗಿರುವ ಸಮಸ್ಯೆಗಳನ್ನು ಹೆಚ್ಚು ಚೆನ್ನಾಗಿ ತಿಳಿದು ಕೊಳ್ಳುತ್ತಾನೆ. ಸಮಸ್ಯೆಗಳಿಗೆ ನಿಜವಾಗಿಯೂ ಕಾರ್ಯಸಾಧಕವಾದ ಪರಿಹಾರಗಳೊಂದಿಗೆ ಅವನು ಪ್ರಾಯಶಃ ಪ್ರತಿವರ್ತಿಸುತ್ತಿರಬಹುದು. ವೀಕ್ಷಿಸುತ್ತಿರುವವರಿಗೆ ಗೋಚರವಾಗದ ವಾಸ್ತವಾಂಶಗಳೊಂದಿಗೂ ಅವನು ವ್ಯವಹರಿಸುತ್ತಿರಬಹುದು. ಆದಕಾರಣ, ಒಬ್ಬ ಅನುಭವೀ ಸಹಾಯಕನ ಕುರಿತು ಒಬ್ಬ ಕ್ರೈಸ್ತ ಹಿರಿಯನು ಅಂದದ್ದು: “ಆ ಮಣ್ಣಿನಲ್ಲಿ ಅವನಿಗೆ ಸ್ವಲ್ಪ ಬಂಡೆಗಳಿವೆ ಎಂದು ಅವನು ಹೇಳಿದರೆ, ನಾನವನನ್ನು ನಂಬಬೇಕು.”
ಹೌದು, ಕ್ರೈಸ್ತ ಹಿರಿಯರಿಗೆ ದೊರಕುವ ಅತಿ ಮೂಲ್ಯತೆಯ ಸಾಧನ ಸಂಪತ್ತು, ಯಾವುದೇ ರೀತಿಯಲ್ಲಿ ಮಾರ್ಗದರ್ಶಿಸಲ್ಪಟ್ಟರೆ, ಸಹಾಯಕೊಡಲು ಇಚ್ಛೆಯುಳ್ಳ ಮತ್ತು ಸಮರ್ಥರಾದ ಸಮರ್ಪಿತ ಸ್ತ್ರೀ, ಪುರುಷರೇ. ಹಿರಿಯರೇ, ಈ ಉತ್ಕೃಷ್ಟ ಸಾಮಗ್ರಿಯನ್ನು ನೀವಾಗಿಯೇ ದೊರಕಿಸಿಕೊಳ್ಳಿರಿ! ವಹಿಸಿಕೊಡುವುದು ವಿನಯಶೀಲತೆಯ ಒಂದು ಚಿಹ್ನೆಯಾಗಿದೆ ಮತ್ತು ಒತ್ತಡ ಮತ್ತು ಹತಾಶೆಯನ್ನು ಕಡಿಮೆಮಾಡಬಲ್ಲದು. ಇದರಿಂದ ಕೇವಲ ನೀವು ಹೆಚ್ಚನ್ನು ಮಾಡಲು ಶಕ್ಯರಾಗುವುದು ಮಾತ್ರವಲ್ಲ, ಆದರೆ ಬೇಕಾದಂತಹ ಅನುಭವವನ್ನು ಪಡೆಯಲು ಇತರರಿಗೆ ಅವಕಾಶವನ್ನು ನೀವು ಕೊಡುವಿರಿ.