ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 17-18
ದೀನತೆ ಇರೋ ಸಹೋದರರು ಬೇರೆಯವರಿಗೆ ತರಬೇತಿ, ಜವಾಬ್ದಾರಿ ಕೊಡ್ತಾರೆ
ಅನುಭವ ಇರೋ ಸಹೋದರರು ಯೌವನಸ್ಥ ಸಹೋದರರಿಗೆ ತರಬೇತಿ ಕೊಡಬೇಕು ಮತ್ತು ಜವಾಬ್ದಾರಿಗಳನ್ನ ವಹಿಸಬೇಕು. ಆಗ ಅವರಲ್ಲಿ ದೀನತೆ, ಪ್ರೀತಿ ಮತ್ತು ಮುಂದಾಲೋಚನೆ ಇದೆ ಅಂತ ಗೊತ್ತಾಗುತ್ತೆ. ಬೇರೆಯವರಿಗೆ ತರಬೇತಿ ಮತ್ತು ಜವಾಬ್ದಾರಿಯನ್ನ ಕೊಡೋದು ಹೇಗೆ?
ಹೆಚ್ಚಿನ ಜವಾಬ್ದಾರಿ ಕೊಟ್ರೆ ಅದನ್ನ ಮಾಡೋ ಸಾಮರ್ಥ್ಯ ಇರೋ ಸಹೋದರರನ್ನ ಆರಿಸಿಕೊಳ್ಳಿ
ಕೆಲಸ ವಹಿಸಿದಾಗ ಅದನ್ನ ಹೇಗೆ ಮಾಡಬೇಕು ಅಂತನೂ ಸ್ಪಷ್ಟವಾಗಿ ತಿಳಿಸಿ
ಆ ಕೆಲಸ ಮಾಡಲು ಹಣ, ಸಾಧನಗಳು ಅಥವಾ ಬೇರೆ ಯಾವ ಸಹಾಯ ಬೇಕಿದ್ರೂ ಕೊಡಿ
ಕೊಟ್ಟ ಕೆಲಸದ ಬಗ್ಗೆ ಅವರಿಗೆ ಆಗಾಗ ಕೇಳ್ತಾ ಇರಿ. ಅವರು ಆ ಕೆಲಸನಾ ಮಾಡಿ ಮುಗಿಸ್ತಾರೆ ಅನ್ನೋ ಭರವಸೆ ನಿಮಗಿದೆ ಅಂತ ಹೇಳಿ
ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಬೇರೆಯವರಿಗೆ ಯಾವ ಜವಾಬ್ದಾರಿಗಳನ್ನ ಕೊಡಬಹುದು?’