ಯಾರಾದರೂ ಕರೆದರೆ, ನೀವು ಉತ್ತರಿಸುತ್ತೀರೋ?
ಶೀನೀಚಿ ಟೋಹಾರರಿಂದ ಹೇಳಲ್ಪಟ್ಟಂತೆ
ನನ್ನ ಜೀವನದ ಪ್ರಥಮ ಭಾಗದಲ್ಲಿ ನಾನು ದೇವರಿಗೆ ಮೊರೆಯಿಡಲೂ ಇಲ್ಲ, ಆತನ ಮಾರ್ಗದರ್ಶನೆಗಾಗಿ ನೋಡಲೂ ಇಲ್ಲ. ನನ್ನ ಅಜ್ಜಅಜ್ಜಿ ಜಪಾನಿನಿಂದ ಹವಾಯಿಗೆ ವಲಸೆ ಹೋಗಿದ್ದರು. ಮತ್ತು ನನ್ನ ಹೆತ್ತವರು ಬೌದ್ಧರಾಗಿದ್ದರು. ಅವರು ತಮ್ಮ ವಿಶ್ವಾಸದಲ್ಲಿ ಹೆಚ್ಚು ಕ್ರಿಯಾಶೀಲರಿದಿಲ್ದದ್ಲ ಕಾರಣ, ನಾನು ಬೆಳೆದ ಹಾಗೆ ದೈವತ್ವದ ವಿಚಾರಗಳು ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿಗಿ ಕಾಣಿಸಲಿಲ್ಲ.
ಆ ಮೇಲೆ ನಾನು ವಿಕಾಸವಾದವನ್ನು ಕಲಿತೆ ಮತ್ತು ದೇವರಲ್ಲಿ ನಂಬುವದು ಎಷ್ಟು ಮೂರ್ಖತನವೆಂದು ಆಲೋಚಿಸ ತೊಡಗಿದೆ. ಏನೇ ಆದರೂ ನನ್ನ ವಿಧಿವಿಹಿತ ಶಿಕ್ಷಣವು ಪ್ರಗತಿಯಾದಂತೆ, ವಿಜ್ಞಾನ ತರಗತಿಗಳು ಖಗೋಳಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರಗಳನ್ನು ನನಗೆ ಪರಿಚಯಿಸಿದವು. ರಾತ್ರಿಯಲ್ಲಿ ಆಕಾಶದಲ್ಲಿರುವ ನಕ್ಷತ್ರಗಳನ್ನು ಎವೆಯಿಕ್ಕದೆ ನೋಡಿ ಅಲ್ಲಿ ಅವು ಹೇಗೆ ಬಂದವು ಎಂದು ಆಶ್ಚರ್ಯಪಡುತ್ತಿದ್ದೆ. ನನ್ನೊಳಗಿಂದ ಕ್ಷೀಣಸ್ವರವು ಕೇಳಲಾರಂಭಿಸಿತು: ‘ಇವೆಲ್ಲವುಗಳನ್ನು ಒಬ್ಬ ದೇವರಿರಬಹುದೊ?’ ಆ ಅದೃಶ್ಯ ಸ್ಥಾನದಲ್ಲಿ ಯಾರಾದರೊಬ್ಬರು ಇರಲೇಬೇಕೆಂದು ನನಗನಿಸಹತ್ತಿತು. ನನ್ನ ಹೃದಯವು ‘ಈ ದೇವರು ಯಾರು?’ ಎಂದು ಕೇಳಲಾರಂಭಿಸಿತು.
ಮಾಧ್ಯಮಿಕ ಶಾಲೆಯಿಂದ ತೇರ್ಗಡೆಯಾದ ನಂತರ ಅಕ್ಕಿಯ ಮದ್ಯ ತಯಾರಿಸುವಲ್ಲಿ ಯಂತ್ರಕರ್ಮಿಯಾದ ನಾನು ಸಬ್ವಂಧನದಲ್ಲಿದ್ದ ಹಾಗೇ ಕಂಡುಬಂತು, ಮತ್ತು ದೇವರ ಬಗ್ಗೆ ಇದ್ದ ಪ್ರಶ್ನೆಯನ್ನು ಧ್ಯಾನಿಸಲು ನನಗೆ ಸಮಯವಿದ್ದಿಲ್ಲ. ಸ್ವಲ್ಪದರಲ್ಲಿ ನಾನು ಮಸಾಕೊಳನ್ನು ಭೇಟಿಯಾದೆ. ಅವಳು 1937 ರಲ್ಲಿ ನನ್ನ ಮಡದಿಯಾದಳು. ಕ್ರಮೇಣ ನಾವು ಮೂವರು ಮಕ್ಕಳಿಂದ ಆಶೀರ್ವದಿಸಲ್ಪಟ್ಟೆವು. ಮಸಾಕೊ ಎಂತಹ ನಂಬಿಗಸ್ತ ಜೊತೆಗಾರ್ತಿ ಮತ್ತು ಕಷ್ಟಪಟ್ಟು ಕೆಲಸ ಮಾಡುವ ತಾಯಿಯಾಗಿ ಪರಿಣಮಿಸಿದ್ದಾಳೆ!
ಈಗ ನನಗೆ ಕುಟುಂಬವಿದ್ದ ಕಾರಣ ಭವಿಷ್ಯತ್ತಿನ ಬಗ್ಗೆ ಗಂಭೀರತೆಯಿಂದ ಯೋಚಿಸಿದೆ. ಮತ್ತೆ ಹೊರಗಡೆ ಹೋಗಿ ನಕ್ಷತ್ರಗಳೆಡೆ ಎವೆಯಿಕ್ಕದೆ ನೋಡಲಾರಂಭಿಸಿದೆ. ದೇವರಿದ್ದಾನೆ ಎಂದು ನನಗೆ ಮಂದಟ್ಟಾಗಿತ್ತು. ಆ ದೇವರ್ಯಾರೆಂದು ತಿಳಿದಿರದಿದ್ದರೂ, ಹೇಗೂ ಆಗಲಿ ಆತನನ್ನು ಕರೆಯಲಾರಂಭಿಸಿದೆ. ‘ಅಲ್ಲಿ ಎಲ್ಲಿಯಾದರೂ ಇರುವದಾದರೆ, ದಯವಿಟ್ಟು ನನ್ನ ಕುಟುಂಬಕ್ಕೆ ಸಂತೋಷದಿಂದ ನಡೆಯುವ ಮಾರ್ಗವನ್ನು ಕಂಡುಕೊಳ್ಳಲಿಕ್ಕೆ ಸಹಾಯಮಾಡು’ ಎಂದು ಪದೇ ಪದೇ ಬೇಡಿಕೊಂಡೆ.
ನನ್ನ ಕರೆಯು ಕೊನೆಗೆ ಉತ್ತರಿಸಲ್ಪಟ್ಟಿತು
ಮದುವೆಯಾದಂದಿನಿಂದ ನಾವು ನಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದೆವು, ಆದರೆ 1941 ರಿಂದ ನಾವು ಹವಾಯಿಯ ಹಿಲೋವಿನಲ್ಲಿ, ಸ್ವಾವಲಂಬಿಗಳಾಗಿ ಜೀವಿಸಲಾರಂಭಿಸಿದೆವು. ನಮ್ಮ ಹೊಸ ಮನೆಯಲ್ಲಿ ನೆಲೆಸಿದ ಕೆಲವೇ ದಿನಗಳಲ್ಲಿ, 1941 ಡಿಸೆಂಬರ್ 7 ರಂದು ಜಪಾನ್, ಪರ್ಲ್ ಹಾರ್ಬರ್ ಮೇಲೆ ಆಕ್ರಮಣ ಮಾಡಿತು. ಇದು ಬಿಕ್ಕಟ್ಟಿನ ಸಮಯವಾದುದರಿಂದ ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರು.
ಪರ್ಲ್ ಹಾರ್ಬರ್ನ ಆಕ್ರಮಣದ ಒಂದು ತಿಂಗಳಿನ ನಂತರ ನಾನು ನನ್ನ ಕಾರನ್ನು ಹೊಳಪಿಸುತ್ತಿರುವಾಗ ಒಬ್ಬ ಮನುಷ್ಯನು ನನ್ನನ್ನು ಸಮೀಪಿಸಿ ಚಿಲ್ಡ್ರನ್ ಎಂಬ ಪುಸ್ತಕವನ್ನು ನನಗೆ ನೀಡಿದನು. ಆತನು ತನ್ನನ್ನು ರಾಲ್ಫ್ ಗಾರುಟ್ ಎಂಬ ಯೆಹೋವನ ಸಾಕ್ಷಿಗಳ ಶುಶ್ರೂಷಕನೆಂದು ಪರಿಚಯಿಸಿಕೊಂಡನು. ಆತನು ಹೇಳುವದು ಅರ್ಥವಾಗುತ್ತಿರಲಿಲವ್ಲಾದರೂ ದೇವರ ಮೇಲಿನ ಆಸಕ್ತಿಯಿಂದಾಗಿ ಆತನು ಕೊಟ್ಟ ಪುಸ್ತಕವನ್ನು ಸ್ವೀಕರಿಸಿದೆ. ಮುಂದಿನ ವಾರ ರಾಲ್ಫ್ ಹಿಂದಿರುಗಿ ನನಗೆ ಬೈಬಲ್ ಅಧ್ಯಯನವನ್ನು ನೀಡಿದನು. ನಾನು ಬೈಬಲಿನ ಬಗ್ಗೆ ಕೇಳಿದ್ದರೂ, ನಿಜವಾಗಿ ಅದನ್ನು ನೋಡಿದ್ದು ಮೊದಲ ಬಾರಿಯಾಗಿತ್ತು. ನಾನು ಬೈಬಲ್ ಅಧ್ಯಯನವನ್ನು ಅಂಗೀಕರಿಸಿದೆ. ಮತ್ತು ನನ್ನ ಹೆಂಡತಿ, ಮತ್ತು ಅವಳ ಚಿಕ್ಕ ತಂಗಿ ನನ್ನ ಜೊತೆಗೂಡಿದರು.
ಬೈಬಲು ದೇವರ ವಾಕ್ಯವೆಂಬ ಸತ್ಯವು ನನ್ನನ್ನು ನಿಜವಾಗಿಯೂ ಪ್ರಭಾವಿಸಿತು. (2 ತಿಮೊಥೆಯ 3:16, 17) ಯೆಹೋವನಿಗೆ ಒಂದು ಉದ್ದೇಶವಿತ್ತೆಂಬುದು ಇನ್ನೂ ಆಶ್ಚರ್ಯಕರವಾಗಿತ್ತು. ನಾನು ಮುನ್ನೋಡುತ್ತಿದ್ದ ನಿರ್ಮಾಣಿಕನು ಈತನೇ ಆಗಿದ್ದನು! (ಯೆಶಾಯ 45:18) ಕಳೆದುಕೊಂಡ ಮೂಲ ಪ್ರಮೋದವನವನ್ನು ಇದೇ ಭೂಮಿಯ ಮೇಲೆ ಪುನಃ ಸ್ಥಾಪಿಸುವದನ್ನು ಮತ್ತು ನಾವು ಅದರ ಭಾಗಿಗಳಾಗಿರಬಹುದೆಂದು ಕೇಳಿ ರೋಮಾಂಚಗೊಂಡೆವು. (ಪ್ರಕಟನೆ 21:1-4) ದೇವರಿಗೆ ಕೊಟ್ಟ ನನ್ನ ಕರೆಗೆ ಇದೇ ಉತ್ತರವಾಗಿತ್ತು!
ನಾವು ಹೊಸದಾಗಿ ಕಂಡುಕೊಂಡ ಸತ್ಯದ ಬಗ್ಗೆ ಪ್ರತಿಯೊಬ್ಬರೊಂದಿಗೆ ಮಾತಾಡಿದೆವು. ನಮ್ಮ ಹೆತ್ತವರು ನಾವು ಹುಚ್ಚರಾಗಿದ್ದೇವೆಂದು ತಿಳಿದರೂ ನಮ್ಮನ್ನು ನಿರುತ್ಸಾಹಗೊಳಿಸಲಿಲ್ಲ. ಮೂರು ತಿಂಗಳ ಆಳವಾದ ಅಧ್ಯಯನದ ನಂತರ ನಾನು ಮತ್ತು ನನ್ನ ಹೆಂಡತಿಯು ಏಪ್ರಿಲ್ 19, 1942 ರಂದು ಯೆಹೋವ ದೇವರಿಗೆ ಸಮರ್ಪಣೆಯ ಗುರುತಾಗಿ ದೀಕ್ಷಾಸ್ನಾನ ಮಾಡಿಸಿಕೊಂಡೆವು. ನಮ್ಮೊಂದಿಗೆ ಬೈಬಲ್ ಅಧ್ಯಯನದಲ್ಲಿ ಜೊತೆಗೂಡಿದ ಮಸಾಕೊಳ ಕಿರಿಯ ತಂಗಿ ಯೋಶಿ, ಮತ್ತು ಅವಳ ಗಂಡ ಜೆರಿ ನಮ್ಮೊಂದಿಗೆ ದೀಕ್ಷಾಸ್ನಾನ ಹೊಂದಿದರು. ನಮಗೆ ಪವಿತ್ರ ಶಾಸ್ತ್ರದ ಸೀಮಿತವಾದ ಜ್ಞಾನವೇ ಇದ್ದರೂ, ದೇವರ ಸೇವೆಯಲ್ಲಿ ಮುಂದೆ ಸಾಗಲು ಅದು ಸಾಕಾಗಿತ್ತು.
ಎರಡನೇ ಮಹಾಯುದ್ಧವು ಇನ್ನೂ ಉಗ್ರವಾದ ಸ್ಥಿತಿಯಲ್ಲಿದುದ್ದರಿಂದ ಈ ಲೋಕಾಂತ್ಯವು ತುಂಬ ಹತ್ತಿರದಲ್ಲಿದೆಯೆಂದು ನೆನಸಿದೆವು. ನಾನು ಮತ್ತು ನನ್ನ ಹೆಂಡತಿ ಇದರ ಬಗ್ಗೆ ಜನರಿಗೆ ಎಚ್ಚರಿಕೆ ಅಗತ್ಯವಿದೆಯೆಂದು ಭಾವಿಸಿದೆವು. ಇದರ ಬಗ್ಗೆ ಗಾರುಟ್ ನಮಗೆ ಒಳ್ಳೆ ಮಾದರಿಯಾಗಿದ್ದರು. ರಾಲ್ಫ್ ಮತ್ತು ಅವರ ಹೆಂಡತಿ ಪಯನೀಯರರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಯೆಹೋವನ ಸಾಕ್ಷಿಗಳ ಪೂರ್ಣಾವಧಿಯ ಶುಶ್ರೂಷಕರಾಗಿದ್ದರು. ನಮ್ಮನ್ನು ರಾಲ್ಫ್ರ ಪರಿಸ್ಥಿತಿಯೊಂದಿಗೆ ಹೋಲಿಸಿದೆನು. ಅವರಿಗೆ ಹೆಂಡತಿ ಮತ್ತು ನಾಲ್ವರು ಮಕ್ಕಳಿದ್ದರು. ನನಗೆ ಹೆಂಡತಿ ಮತ್ತು ಕೇವಲ ಮೂವರೇ ಮಕ್ಕಳಿದ್ದರು. ಆತನಿಗೆ ಮಾಡಸಾಧ್ಯವಿರುವಲ್ಲಿ ನನಗೂ ಅದನ್ನು ಮಾಡ ಸಾಧ್ಯವಿರುವುದು. ನಾವು ದೀಕ್ಷಾಸ್ನಾನ ಹೊಂದಿದ ತಿಂಗಳಲ್ಲಿಯೇ ಪಯನೀಯರ ಸೇವೆಗೆ ಅರ್ಜಿಯನ್ನು ಸಲ್ಲಿಸಿದೆವು.
ನಾನು ಪಯನೀಯರನಾಗಿ ಸ್ವೀಕೃತವಾಗುವ ಮುಂಚೆ ನನ್ನ ಅನಗತ್ಯದ ವಸ್ತುಗಳಾದ ಸೀಲ್ಟ್ ಗಿಟಾರ್, ಸ್ಯಾಕ್ಸೊಫೋನ್, ಮತ್ತು ಪಿಟೀಲನ್ನು ಮಾರಿದೆ. ನಾನು ಸಂಗೀತದಲ್ಲಿ ಬಹಳ ಉತ್ಸುಕನಾಗಿದ್ದೆ. ಆದರೆ ಚಿಕ್ಕ ಹಾರ್ಮೋನಿಕವನ್ನು ಬಿಟ್ಟು ಎಲ್ಲವನ್ನು ತ್ಯಜಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ಅಕ್ಕಿಯ ಮದ್ಯ ತಯಾರಿಸುವ ಕೆಲಸವು ಆಕರ್ಷಕವಾಗಿ ಕಾಣಿಸಲಿಲ್ಲ. (ಫಿಲಿಪ್ಪಿ 3:8) ನಾನು ಒಂದು ಟ್ರೇಲರನ್ನು ತಯಾರಿಸಿದೆ. ಮತ್ತು ಯೆಹೋವನ ಸೇವೆಯಲ್ಲಿ ನನ್ನನ್ನು ಉಪಯೋಗಿಸುವ ನನ್ನ ವಿನಂತಿಗೆ ಉತ್ತರಕೊಡುವನೊ ಎಂದು ಕಾಯುತ್ತಾ ಇದ್ದೆ. ನನಗೆ ಬಹಳ ಕಾಲ ಕಾಯಬೇಕಾಗಿರಲಿಲ್ಲ. ನಾವು 1942, ಜೂನ್ 1 ರಂದು ಪಯನೀಯರರೆಂದು ಪರಿಗಣಿಸಲ್ಪಟ್ಟೆವು. ನಾವು ನೆಟ್ಟಗೆ ಯೆಹೋವನ ಪೂರ್ಣಾವಧಿಯ ಸೇವೆಗೆ ಹೋದೆವು. ಮತ್ತು ಆ ನಿರ್ಣಯಕ್ಕೆ ನಾವು ಎಂದೂ ವಿಷಾದ ವ್ಯಕ್ತಪಡಿಸಿದ್ದಿಲ್ಲ.
ಹವಾಯಿಯಲ್ಲಿ ಪಯನೀಯರ ಸೇವೆ
ಗಾರುಟ್ರೊಂದಿಗೆ ನಾವು ಹವಾಯಿ, ಪ್ರಸಿದ್ಧ ಕಾಫಿ ಪ್ರದೇಶವಾದ ಕೋನ, ಮತ್ತು ಕೌ ಜತೆಗೆ ಬಿಗ್ ಐಲೆಂಡ್ಗಳನ್ನು ಆವರಿಸಿದೆವು. ಆ ದಿನಗಳಲ್ಲಿ ನಾವು ಫೋನೊಗ್ರಾಫ್ನೊಂದಿಗೆ ಕೆಲಸ ಮಾಡಿದೆವು. ಅವು ಭಾರವಾಗಿದ್ದರೂ ನಾವು ಇನ್ನೂ ಯೌವನಸ್ಥರೂ ಬಲವುಳ್ಳವರೂ ಆಗಿದ್ದೆವು. ಆದುದರಿಂದ ಒಂದು ಕೈಯಲ್ಲಿ ಪೋನೊಗ್ರಾಪ್, ಮತ್ತೊಂದು ಕೈಯಲ್ಲಿ ಪುಸ್ತಕಗಳ ಚೀಲವನ್ನು ಹಿಡಿದು ಕಾಫಿಕ್ಷೇತ್ರದಲ್ಲಿ, ತೋಪಿನಲ್ಲಿ, ಮತ್ತು ಪ್ರತಿಯೊಂದು ಸ್ಥಳದಲ್ಲಿ ನಮ್ಮ ಸಂದೇಶವನ್ನು ಕೇಳುವ ಜನರ ಬಳಿಗೆ ನಡೆಸುವ ಯಾವುದೇ ಕಾಲುದಾರಿಯನ್ನು ಹಿಂಬಾಲಿಸುತ್ತಿದ್ದೆವು. ಬಳಿಕ, ಇಡೀ ದ್ವೀಪವನ್ನು ಆವರಿಸಿದ ನಂತರ ನಾವು ಬಿಗ್ ಐಲೆಂಡಿನ ಕೊಹಾಲಾಕ್ಕೆ ನೇಮಿಸಲ್ಪಟ್ಟೆವು. ಕೊಹಾಲಾವು ಒಂದು ಸಣ್ಣ ಕಬ್ಬಿನ ತೋಟವಾಗಿತ್ತು, ಅದು ಕಾಕಸಸ್, ಫಿಲಿಪ್ಪೀನ್ಸ್, ಚೀನಾ, ಹವಾಯಿ, ಜಪಾನ್, ಮತ್ತು ಪೋರ್ಚುಗಲ್ನ ಜನರಿಂದ ತುಂಬಿತ್ತು. ಪ್ರತೀ ಗುಂಪಿಗೂ ಸ್ವಂತ ಪದ್ಧತಿಗಳು, ವಿಚಾರಗಳು, ರುಚಿಗಳು, ಮತ್ತು ಧರ್ಮಗಳಿದ್ದವು.
ನಾನು ಒಮ್ಮೆ ಪಯನೀಯರಿಂಗ್ ಪ್ರಾರಂಭ ಮಾಡಿದ ನಂತರ, ಮತ್ತೆ ನಾನೆಂದೂ ಲೌಕಿಕ ಉದ್ಯೋಗವನ್ನು ತಕ್ಕೊಳ್ಳಲಿಲ್ಲ. ಕೆಲವು ಕಾಲ ನಮ್ಮ ಉಳಿತಾಯದಲ್ಲಿ ಜೀವಿಸಿದೆವು, ಅಗತ್ಯವು ಹೆಚ್ಚಿದಂತೆ, ನಾನು ಭರ್ಜಿಯಿಂದ ಮೀನು ಹಿಡಿಯಲಿಕ್ಕೆ ಹೋದೆ. ಆಶ್ಚರ್ಯಕರವಾಗಿ, ನಾನು ಯಾವಾಗಲೂ ಕೆಲವು ಮೀನುಗಳೊಂದಿಗೆ ಮನೆಗೆ ಬರುತ್ತಿದ್ದೆ. ಮತ್ತು ರಸ್ತೆಯ ಪಕ್ಕದಲ್ಲಿರುವ ಕಾಡುಪಲ್ಯಗಳು, ಗಿಡಮೂಲಿಕೆಗಳು, ರಾತ್ರಿಯೂಟದಲ್ಲಿ ನಮ್ಮ ತಟ್ಟೆಗಳಲ್ಲಿ ಶೋಭಿಸುತ್ತಿದ್ದವು. ವಿದ್ಯುನ್ಮುಲಾಮಿನ ತಗಡಿನಿಂದ ಭಟ್ಟಿಯನ್ನು ತಯಾರಿಸಿದೆ. ಮಸಾಕೊ ರೊಟ್ಟಿಯನ್ನು ಸುಡಲು ಕಲಿತಳು. ಅದು, ನಾನು ತಿಂದಿದ್ದ ರೊಟ್ಟಿಯಲ್ಲಿ ಅತ್ಯುತ್ತಮ ರೊಟ್ಟಿಯಾಗಿತ್ತು.
ನಾವು 1943 ರಲ್ಲಿ ಕ್ರೈಸ್ತ ಅಧಿವೇಶನಕ್ಕಾಗಿ ಹೊನಲುಲುಗೆ ಹೋದಾಗ, ಆಗಿನ ಹವಾಯಿ ಶಾಖಾ ಮೇಲ್ವಿಚಾರಕರಾದ ಡಾನಲ್ಡ್ ಹ್ಯಾಸ್ಲೆಟ್, ನಾವು ಅಲ್ಲಿಗೆ ಬರುವಂತೆ ಮತ್ತು ವಾಚ್ ಟವರ್ ಸೊಸೈಟಿಯ ಗ್ಯಾರೇಜ್ ಮೇಲೆ ಕಟ್ಟಲಾದ ಚಿಕ್ಕ ಕೊಠಡಿಯಲ್ಲಿ ವಾಸಿಸುವಂತೆ, ನಮ್ಮನ್ನು ಆಮಂತ್ರಿಸಿದರು. ನನ್ನನ್ನು ಶಾಖೆಯ ಸಂಪತ್ತನ್ನು ನೋಡಿಕೊಳ್ಳುವ ಸಲುವಾಗಿ ದ್ವಾರಪಾಲಕನಾಗಿ ನೇಮಿಸಲಾಯಿತು. ಅಲ್ಲಿಂದಲೇ ನಾನು ಐದು ವರ್ಷಗಳ ವರೆಗೆ ಪಯನೀಯರ ಸೇವೆ ಮಾಡುವದರಲ್ಲಿ ಆನಂದಿಸಿದೆ.
ಅನಿರೀಕ್ಷಿತ ಕರೆ
ವಿದೇಶ ಸೇವೆಗಾಗಿ ಮಿಷನೆರಿಗಳನ್ನು ತರಬೇತಿಗೊಳಿಸುವ ಶಾಲೆಯನ್ನು 1943 ರಲ್ಲಿ ಸೊಸೈಟಿಯು ಆರಂಭಿಸಿದೆ ಎಂದು ನಾವು ಕೇಳಿದೆವು. ಅದಕ್ಕೆ ಹಾಜರಾಗಲು ನಮಗೆಷ್ಟು ಸಂತೋಷವಿತ್ತು! ಆದರೆ ಮಕ್ಕಳಿದ್ದ ಕುಟುಂಬಗಳನ್ನು ಆಹ್ವಾನಿಸದ ಕಾರಣ ನಾವು ಆ ವಿಚಾರವನ್ನೇ ಬಿಟ್ಟುಬಿಟ್ಟೆವು. ಆದರೆ 1947ರಲ್ಲಿ ಸಹೋದರ ಹ್ಯಾಸ್ಲೆಟ್, ಜಪಾನಿನಲ್ಲಿ ವಿದೇಶ ಸೇವೆ ಸಲ್ಲಿಸಲು ಯಾರಾದರೂ ಹವಾಯಿಯವರು ಇಷ್ಟಪಡುವಲ್ಲಿ ಸೊಸೈಟಿಗೆ ತಿಳಿಯಬೇಕಾಗಿದೆ ಎಂದು ನನಗೆ ತಿಳಿಸಿದರು. ನಮ್ಮ ಯೋಚನೆಯೇನು ಎಂದು ನಮ್ಮನ್ನವರು ಕೇಳಿದರು. ಯೆಶಾಯನ ಹಾಗೆ “ನನ್ನನ್ನು ಕಳುಹಿಸು,” ಅಂದೆ. (ಯೆಶಾಯ 6:8) ನನ್ನ ಹೆಂಡತಿಯೂ ಹಾಗೆಯೇ ಅಂದಳು. ಯೆಹೋವನ ಕರೆಗೆ ಉತ್ತರಿಸಲಿಕ್ಕೆ ನಾವು ಹಿಂಜರಿಯಲಿಲ್ಲ.
ನಾವು ವಾಚ್ಟವರ್ ಬೈಬಲ್ ಸ್ಕೂಲ್ ಆಪ್ ಗಿಲ್ಯಾದ್ಗೆ ಮಿಷನೆರಿಗಳ ತರಬೇತಿಗೆ ಹಾಜರಾಗಲು ಆಹ್ವಾನಿಸಲ್ಪಟ್ಟೆವು. ಆಹ್ವಾನವು ನಮ್ಮ ಮೂವರು ಯುವ ಮಕ್ಕಳನ್ನೊಳಗೂಡಿತ್ತು. ಡಾನಲ್ಡ್ ಮತ್ತು ಮೇಬ್ಲ್ ಹ್ಯಾಸ್ಲೆಟ್, ಜೆರಿ ಮತ್ತು ಯೋಶಿ ಟೋಮಾ, ಮತ್ತು ಎಲ್ಸಿ ಟನಿಗಾವಾ, ಈ ಐವರು ಸಹ ಆಹ್ವಾನಿಸಲ್ಪಟ್ಟರು. 1948ರ ಚಳಿಗಾಲದಲ್ಲಿ ನಾವೆಲ್ಲ ಒಟ್ಟುಗೂಡಿ ನ್ಯೂ ಯಾರ್ಕಿಗೆ ಪ್ರಯಾಣ ಬೆಳೆಸಿದೆವು.
ನಾವು ಬಸ್ಸಿನಲ್ಲಿ ಭೂಖಂಡವನ್ನು ದಾಟಿದೆವು. ಮೂರು ದಿನಗಳ ಬಸ್ ಪಯಣದ ನಂತರ ನಾವೆಲ್ಲ ಆಯಾಸಗೊಂಡಿದೆವ್ದು. ಸಹೋದರ ಹ್ಯಾಸ್ಲೆಟ್ ನಾವೆಲ್ಲ ದಣಿವಾರಿಸಿಕೊಂಡು, ಒಂದು ರಾತ್ರಿ ಹೋಟೆಲ್ನಲ್ಲಿ ಉಳಿಯುವಂತೆ ಸಲಹೆ ನೀಡಿದರು. ನಾವು ಬಸ್ಸಿನಿಂದ ಕೆಳಗಿಳಿಯುತಲ್ತೇ ಒಬ್ಬನು ನಮ್ಮನ್ನು ಸಮೀಪಿಸಿ ಕೂಗಿದ್ದು: “ಜಪಾನೀಯರು! ಅವರಿಗೆ ಗುಂಡಿಕ್ಕಲಿಕ್ಕೆ ನಾನು ಮನೆಗೆ ಹೋಗಿ ಬಂದೂಕನ್ನು ತರುತ್ತೇನೆ!”
“ಅವರು ಜಪಾನೀಯರಲ್ಲ,” ಸಹೋದರ ಹ್ಯಾಸ್ಲೆಟ್ ಎಂದರು. “ಅವರು ಹವಾಯಿಯವರು. ನಿನಗೆ ವ್ಯತ್ಯಾಸ ತಿಳಿಯುವುದಿಲ್ಲವೊ?” ನಾವು ಅವರ ತುರ್ತರಿವಿನ ಹೇಳಿಕೆಯಿಂದ ರಕ್ಷಿಸಲ್ಪಟ್ಟೆವು.
ನಾವು ನಿಜವಾಗಿಯೂ ಗಿಲ್ಯಾದಿನ 11 ನೆಯ ಕ್ಲಾಸಿನ ಭಾಗವಾಗಿದ್ದೆವೊ? ಇದು ಒಂದು ಸೋಜಿಗದ ಕನಸಿನ ಹಾಗೇ ಕಂಡಿತು. ಬೇಗನೆ ಇದು ನೈಜ ಘಟನೆಯಾಯಿತು. ಜಪಾನಿನಲ್ಲಿ ಮಿಷನೆರಿ ಸೇವೆ ಸಲ್ಲಿಸಲು ಸಾಧ್ಯವಾಗುವಂತೆ, ತರಬೇತಿ ನೀಡಲು ಆಗಿನ ಅಧ್ಯಕ್ಷರಾದ ನೇತನ್ ಏಚ್. ನಾರ್ರವರು ನಮ್ಮ ಕ್ಲಾಸಿನಲ್ಲಿ 25 ವಿದ್ಯಾರ್ಥಿಗಳನ್ನು ಆಯ್ಕೆಮಾಡಿದರು. ಈ ವಿದ್ಯಾರ್ಥಿಗಳ ಗುಂಪಿಗೆ ಭಾಷೆಯನ್ನು ಕಲಿಸಲು ನನ್ನನ್ನು ನೇಮಕ ಮಾಡಲಾಯಿತು. ನಾನು ಭಾಷೆಯಲ್ಲಿ ನಿಪುಣನಲ್ಲದ ಕಾರಣ ಅದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಹೇಗೊ ನಾವೆಲ್ಲ ಪಾರಾದೆವು!
ಆ ಸಮಯದಲ್ಲಿ ನಮ್ಮ ಮಗ ಲಾಯ್ಗೆ ಹತ್ತು ವರ್ಷ, ಹೆಣ್ಣುಮಕ್ಕಳು ತೆಲ್ಮಾ, ಮತ್ತು ಸ್ಯಾಲಿ ಎಂಟು ಮತ್ತು ಆರು ವರ್ಷದವರಾಗಿದ್ದರು. ನಾವು ಶಾಲೆಯಲ್ಲಿರುವಾಗ ಅವರಿಗೇನು ಸಂಭವಿಸಿತು? ಅವರೂ ಶಾಲೆಗೆ ಹೋದರು! ಅವರು ಬೆಳಿಗ್ಗೆ ಬಸ್ಸಿನಲ್ಲಿ ತೆರಳಿ ಸಾಯಂಕಾಲ ಮರಳಿ ಅದರಲ್ಲಿ ಬರುತ್ತಿದ್ದರು. ಮಕ್ಕಳು ಶಾಲೆಯಿಂದ ಮನೆಗೆ ಮರಳಿದ ನಂತರ ಲಾಯ್ ಸಹೋದರರೊಟ್ಟಿಗೆ ಸೊಸೈಟಿಯ ಫಾರ್ಮ್ನಲ್ಲಿ ಕೆಲಸ ಮಾಡಿದನು, ತೆಲ್ಮಾ ಮತ್ತು ಸ್ಯಾಲಿ ಲಾಂಡ್ರಿಯಲ್ಲಿ ಕರವಸ್ತ್ರಗಳನ್ನು ಮಡಚುವ ಕೆಲಸ ಮಾಡಿದರು.
ಅಜ್ಞಾತ ವಿಷಯಕ್ಕೆ ಮನಸ್ಸನ್ನು ಹೊಂದಿಸಿಕೊಳ್ಳುವುದು
ಆಗಸ್ಟ್ 1, 1948 ರಂದು ನಾವು ಗಿಲ್ಯಾದ್ ಪದವೀಧರರಾದ ಬಳಿಕ ನಮ್ಮ ನೇಮಕಕ್ಕಾಗಿ ಕಾತರದಿಂದಿದೆವ್ದು. ಸಹೋದರ ಹ್ಯಾಸ್ಲೆಟ್ ಮಿಷನೆರಿಗಳಿಗೆ ನಿವಾಸವನ್ನು ನೋಡಲಿಕ್ಕಾಗಿ ಮುಂದಾಗಿಯೇ ಹೋದರು. ಅವರು ಟೋಕಿಯೊದಲ್ಲಿ ಎರಡಂತಸ್ತಿನ ಮನೆಯನ್ನು ಕಂಡುಕೊಂಡ ನಂತರ, 1949 ಆಗಸ್ಟ್ 20 ರಲ್ಲಿ, ನಮ್ಮ ಕುಟುಂಬವು ನಮ್ಮ ಭಾವೀ ಬೀಡಿಗೆ ಹೊರಟಿತು.
ಜಪಾನ್ ತಲಪುವದಕ್ಕೆ ಮೊದಲೇ ಆಗಾಗ್ಗೆ ನಾನು ಈ ಪೌರಸ್ತ್ಯ ದೇಶದ ಬಗ್ಗೆ ಯೋಚಿಸುತ್ತಿದ್ದೆ. ಜಪಾನೀಯರು ಮಾನವ ದೊರೆಗಳಿಗೆ ಮತ್ತು ಚಕ್ರವರ್ತಿಗೆ ತೋರಿಸುವ ನಿಷ್ಠೆಯನ್ನು ನಾನು ಅವಲೋಕಿಸಿದೆ. ಅನೇಕ ಜಪಾನೀಯರು ಈ ಮಾನವ ಪ್ರಭುಗಳಿಗೆ ತಮ್ಮ ಪ್ರಾಣವನ್ನೇ ಕೊಟ್ಟರು. ಎರಡನೇ ಮಹಾಯುದ್ಧದ ಸಮಯದಲ್ಲಿ ಕಾಮಿಕಾಜೆ ವಿಮಾನ ಚಾಲಕರು ವಿಮಾನವನ್ನು ವೈರಿ ಹಡಗುಗಳ ಹೊಗೆಕೊಳವೆಗೆ ಗುರಿಯಿಟ್ಟು ತಮ್ಮ ದೊರೆಗಾಗಿ ಪ್ರಾಣತೆತ್ತರು. ನಾನು ಯೋಚಿಸುತ್ತಿದ್ದುದನ್ನು ನೆನಸಬಲ್ಲೆ. ಜಪಾನೀಯರು ಮಾನವದೊರೆಗಳಿಗೆ ಇಷ್ಟು ನಂಬಿಗಸ್ತರಾದರೆ, ಅವರು ನಿಜ ದೇವರಾದ ಯೆಹೋವನನ್ನು ಕಂಡುಕೊಂಡರೆ ಏನು ಮಾಡಿಯಾರು?
ನಾವು ಜಪಾನನ್ನು ತಲುಪಿದಾಗ ಅಲ್ಲಿ ಕೇವಲ ಏಳು ಮಿಷನೆರಿಗಳು ಇದ್ದರು. ಮತ್ತು ಇಡೀ ದೇಶದಲ್ಲಿ ಕೆಲವೇ ಪ್ರಚಾರಕರಿದ್ದರು. ನಾವು ಕೆಲಸವನ್ನು ಪ್ರಾರಂಭಿಸಿದೆವು. ನಾನು ಭಾಷಾ ಜ್ಞಾನಕ್ಕಾಗಿ ತುಂಬ ಹೆಣಗಾಡಿದೆ ಮತ್ತು ತಮ್ಮ ಹೃದಯಗಳಲ್ಲಿಯೇ ದೇವರಿಗಾಗಿ ಬೇಡಿಕೊಳ್ಳುವ ಅನೇಕರನ್ನು ಸಂಧಿಸಿ ಬೈಬಲ್ ಅಧ್ಯಯನಗಳನ್ನು ಪ್ರಾರಂಭಿಸಲು ಶಕ್ತನಾದೆ. ಪ್ರಾರಂಭದಲ್ಲಿ ಬೈಬಲಭ್ಯಾಸವನ್ನು ಮಾಡಿದ ಅನೇಕ ವಿದ್ಯಾರ್ಥಿಗಳು ಇಂದಿನ ವರೆಗೂ ನಂಬಿಗಸತ್ತೆಯಿಂದ ಮುಂದರಿದಿದ್ದಾರೆ.
ನಮ್ಮ ಮಕ್ಕಳೊಂದಿಗೆ ಮಿಷನೆರಿ ಸೇವೆ
ಮೂವರು ಚಿಕ್ಕಮಕ್ಕಳೊಂದಿಗೆ ಮಿಷನೆರಿ ಸೇವೆಯನ್ನು ನಾವು ಹೇಗೆ ನಿರ್ವಹಿಸಿದೆವು? ಒಳ್ಳೇದು, ಯೆಹೋವನು ಇದೆಲ್ಲದರ ಹಿಂದಿದ್ದ ಶಕ್ತಿಯಾಗಿದ್ದನು. ನಾವು ಸೊಸೈಟಿಯಿಂದ ಒಂದು ಚಿಕ್ಕ ಖರ್ಚುಭರ್ತಿಯನ್ನು ಪಡೆಯುತ್ತಿದ್ದೆವು. ಮಸಾಕೊ ಮಕ್ಕಳಿಗಾಗಿ ಬಟ್ಟೆಯನ್ನು ಹೊಲಿದಳು. ಇದರೊಟ್ಟಿಗೆ ನಮ್ಮ ಹೆತ್ತವರಿಂದ ನಮಗೆ ಸ್ವಲ್ಪ ಸಹಾಯ ದೊರಕುತ್ತಿತ್ತು.
ಲಾಯ್ ಕಿರಿಯ ಮಾಧ್ಯಮಿಕ ಶಾಲೆಯಿಂದ ತೇರ್ಗಡೆ ಹೊಂದಿದ ನಂತರ ಕೆಲವು ಕಾಲ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಜಪಾನ್ ಶಾಖೆಯಲ್ಲಿ ಸೇವೆ ಸಲ್ಲಿಸಿದನು. ಆದರೆ ಅನಾರೋಗ್ಯದ ಕಾರಣದಿಂದಾಗಿ ಚಿಕಿತ್ಸೆಗಾಗಿ ಹವಾಯಿಗೆ ಮರಳಲು ನಿರ್ಣಯಿಸಿದನು. ಈಗ ಅವನು ಮತ್ತು ಅವನ ಹೆಂಡತಿಯು ನಂಬಿಗಸತ್ತೆಯಿಂದ ಕ್ಯಾಲಿಫೋರ್ನಿಯಾದಲ್ಲಿ ಯೆಹೋವನ ಸೇವೆ ಮಾಡುತ್ತಿದ್ದಾರೆ. ಅವರ ಮದುವೆಯ ಪರಿಣಾಮವಾಗಿ ನಾವು ನಾಲ್ವರು ನಂಬಿಗಸ್ತ ಮೊಮ್ಮಕ್ಕಳನ್ನು ಪಡೆದು ಆಶೀರ್ವದಿಸಲ್ಪಟ್ಟೆವು. ಅವರೆಲ್ಲ ದೀಕ್ಷಾಸ್ನಾನ ಹೊಂದಿದ್ದಾರೆ, ಮತ್ತು ಅವರಲ್ಲೊಬ್ಬನು ತನ್ನ ಪತ್ನಿಯೊಂದಿಗೆ ಯೆಹೋವನ ಸಾಕ್ಷಿಗಳ ಜಾಗತಿಕ ಪ್ರಧಾನ ಕಾರ್ಯಾಲಯವಿರುವ ಬ್ರೂಕ್ಲಿನ್ ಬೆತೆಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.
ನಮ್ಮ ಹೆಣ್ಣುಮಕ್ಕಳಾದ ತೆಲ್ಮಾ, ಮತ್ತು ಸ್ಯಾಲಿ, ಬೆಳೆದ ನಂತರ ಅವರಿಗೆ ಮಿಷನೆರಿ ಸ್ಥಾನವನ್ನು ನೀಡಲಾಯಿತು. ತೆಲ್ಮಾ ಸದ್ಯಕ್ಕೆ ಟೊಯಾಮಾ ನಗರದಲ್ಲಿ ಮಿಷನೆರಿಯಾಗಿ ಸೇವೆ ಸಲ್ಲಿಸುತಿದ್ತಾಳ್ದೆ. ಸ್ಯಾಲಿ, ರಾನ್ ಟ್ರಾಸ್ಟ್ ಎಂಬ ಮಿಷನೆರಿ ಸಹೋದರನನ್ನು ಮದುವೆಯಾದಳು. ಅವರು ಜಪಾನಿನಲ್ಲಿ ಮಿಷನೆರಿಗಳಾಗಿ ಸಂಚರಣೆಯ ಕಾರ್ಯದಲ್ಲಿ 25 ವರ್ಷಗಳಿಗಿಂತಲೂ ಹೆಚ್ಚುಕಾಲ ಸೇವೆ ಸಲ್ಲಿಸಿದ್ದಾರೆ.
ಉತ್ತರದಿಂದ ದಕ್ಷಿಣಕ್ಕೆ
ಟೋಕಿಯೊದಲ್ಲಿ ಎರಡು ವರ್ಷ ಕಳೆದ ಬಳಿಕ ನಾವು ಒಸಾಕೊಗೆ 2 ವರ್ಷಗಳಿಗಾಗಿ ಕಳುಹಿಸಲ್ಪಟ್ಟೆವು. ಅಲ್ಲಿಂದ ನಮ್ಮ ಮುಂದಿನ ನೇಮಕ ಉತ್ತರದ ಸೆಂಡೈಗೆ ಕೊಂಡೊಯ್ಯಿತು. ಅಲ್ಲಿ ಆರು ವರ್ಷಗಳ ಕಾಲ ನಾವು ಸೇವೆ ಸಲ್ಲಿಸಿದೆವು. ಸೆಂಡೈನಲ್ಲಿ ಕಳೆದ ವರ್ಷಗಳು, ಜಪಾನಿನ ಅತ್ಯುತ್ತರ ತುದಿಯಲ್ಲಿರುವ ಹೊಕೈಡೊ ದ್ವೀಪಕ್ಕೆ ಸಿಕ್ಕಿರುವ ನೇಮಕಕ್ಕೆ ನಮ್ಮನ್ನು ಸಿದ್ಧಗೊಳಿಸಿತು. ನಮ್ಮ ಹೆಣ್ಣು ಮಕ್ಕಳಿಗೆ ಮಿಷನೆರಿಯ ಸ್ಥಾನ ದೊರಕಿದ್ದು ಹೊಕೈಡೊವಿನಲ್ಲಿಯೆ. ಮತ್ತು ಕೆಲವು ಸಲ ಸೊನ್ನೆಗಿಂತ ಕೆಳಗೆ ಹೋಗುವ ಚಳಿಗಾಲದ ತಾಪಮಾನಕ್ಕೆ ಹೊಂದಿಕೊಂಡಿರಬೇಕಾದ್ದದ್ದೂ ಅಲಿಯ್ಲೆ. ಉಷ್ಣವಲಯದ ಹವಾಯಿಯ ನಂತರ ಇದೊಂದು ದೊಡ್ಡ ಬದಲಾವಣೆಯಾಗಿತ್ತು!
ಬಳಿಕ ಒಂದು ದಿನ ನನಗೆ ಸೊಸೈಟಿಯಿಂದ ಪತ್ರದ ರೂಪದಲ್ಲಿ ಒಂದು ಹೊಸ ಕರೆಯು ಕೇಳಿಸಿತು. ಅದು ನನ್ನನ್ನು ಅಮೆರಿಕದ ಅಧೀನದಲ್ಲಿ ಇನ್ನೂ ಇದ್ದ ಒಕಿನಾವದಲ್ಲಿ ಹೊಸ ಶಾಖಾ ಕಚೇರಿಯನ್ನು ತೆರೆಯಲು ಕೇಳಿಕೊಂಡಿತು. ಜಪಾನಿನ ಉತ್ತರದ ತಂಪಾದ ತುದಿಯಿಂದ ಈಗ ಜಪಾನಿನ ದಕ್ಷಿಣ ತುದಿಯ, ಪ್ರಾಂತಕ್ಕೆ ಸಾಗುವದು ದೊಡ್ಡ ಆಹ್ವಾನವನ್ನು ಮುಂದಿಟ್ಟ ಹಾಗಿತ್ತು. ಈಗ ನಾನೇನು ಮಾಡಿಯೇನು? ಅಯೋಗ್ಯನೆಂದು ಅನಿಸಿದರೂ, 1965 ರ ನೊವೆಂಬರ್ನಲ್ಲಿ ಎಂದಿನಂತೆ ನನ್ನ ನಂಬಿಗಸ್ತ ಪತ್ನಿಯೊಂದಿಗೆ ಒಕಿನಾವ ತಲುಪಿದೆ. ಜಪಾನಿನ ಜೀವಿತದ ಹಾಗೇ ಒಕಿನಾವದ ಜೀವಿತವು ಇದ್ದೀತೊ? ಸಂಸ್ಕೃತಿಯ ಬಗ್ಗೆ ಏನು? ಯೆಹೋವನ ರಕ್ಷಣೆಯ ಸಂದೇಶಕ್ಕೆ ಜನರು ಕಿವಿಗೊಟ್ಟಾರೊ?
ನಾವು ಒಕಿನಾವ ತಲುಪಿದಾಗ ಅಲ್ಲಿ 200 ಕ್ಕಿಂತಲೂ ಕಡಿಮೆ ಪ್ರಚಾರಕರಿದ್ದರು. ಈಗ 2,000 ಕ್ಕಿಂತಲೂ ಹೆಚ್ಚಾಗಿದ್ದಾರೆ. ಆರಂಭದ ದಿನಗಳಲ್ಲಿ ನಾನು ಅಂಶಕಾಲಿಕ ಸಂಚಾರ ಮೇಲ್ವಿಚಾರಕನೂ, ಅಂಶಕಾಲಿಕ ಶಾಖಾ ಮೇಲ್ವಿಚಾರಕನೂ ಆಗಿದ್ದೆ. ದ್ವೀಪಗಳ ಮಧ್ಯೆ ಮಾಡಿದ ಸಂಚಾರ ಅಲ್ಲಿಯ ಎಲ್ಲ ಸಹೋದರರೊಂದಿಗೆ ಹತ್ತಿರದ ಸಂಬಂಧ ಬೆಳೆಸಲಿಕ್ಕೆ ಸಹಾಯ ಮಾಡಿತು, ಮತ್ತು ಅವರಿಗೆ ಮಾಡಿದ ಸೇವೆಯನ್ನು ನಾನು ಒಂದು ಸುಯೋಗವೆಂದೆಣಿಸಿದೆ.
ಸಮಸ್ಯೆ ಮುಕ್ತವೋ?
ನಮ್ಮ ಮಿಷನೆರಿ ಜೀವಿತವು ನಿಶ್ಚಯವಾಗಿಯೂ ಸಮಸ್ಯೆ ಮುಕ್ತವಾಗಿರಲಿಲ್ಲ. ಮಸಾಕೊ, 1968 ರಲ್ಲಿ ಅಮೆರಿಕದಲ್ಲಿ ರಚೆಯಲ್ಲಿದ್ದಾಗ ಕಾಯಿಲೆಗೊಳಗಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂತು. ಅವಳ ಕರುಳಿನಿಂದ ಗಡ್ಡೆಯನ್ನು ತೆಗೆಯಲಾಯಿತು. ಮತ್ತು ಅವಳು ಗಮನಾರ್ಹ ರೀತಿಯಲ್ಲಿ ಚೇತರಿಸಿಕೊಂಡಳು. ನಮಗೆ ಮೆಡಿಕಲ್ ಇನ್ಷೂರನ್ಸ್ ಇಲ್ಲದ ಕಾರಣ ಪ್ರಾಯಶಃ ನಮ್ಮ ನೇಮಕಕ್ಕೆ ಮರಳಿ ಹೋಗಲಿಕ್ಕಿಲ್ಲ ಎಂದು ಚಿಂತೆಗೊಳಗಾದೆವು. ನಮಗೆ ಆಶ್ಚರ್ಯವಾಗುವಂತೆ, ನಂಬಿಕೆಯಲ್ಲಿದ್ದ ಗೆಳೆಯರು ಎಲ್ಲದರ ಚಿಂತೆಯನ್ನು ವಹಿಸಿಕೊಂಡರು.
ನನ್ನ ಬಗ್ಗೆ ಹೇಳುವದಾದರೆ, ಮಧುಮೂತ್ರಕ್ಕೆ ಸಾಮಾನ್ಯವಾಗಿ ಸಂಬಂಧಿಸಿದ ತೊಂದರೆಗಳಿಂದ ಈಗ ಜೀವಿಸುತ್ತಿದ್ದೇನೆ. ನಾನು ಕುರುಡನಲ್ಲಿದ್ದಿದರೂ ನನ್ನ ದೃಷ್ಟಿಯು ಗಂಭೀರವಾಗಿ ದುರ್ಬಲಗೊಂಡಿದೆ. ಆದರೆ ಯೆಹೋವನ ಪ್ರೀತಿ ದಯೆಗಳಿಂದ ವಾಚ್ಟವರ್ ಮತ್ತು ಅವೇಕ್!ನ ಟೇಪ್ರೆಕಾರ್ಡಿಂಗ್ಗಳನ್ನು ಕೇಳುತ್ತಾ ನನಗೆ ಅಧ್ಯಾತ್ಮಿಕ ಆಹಾರವನ್ನು ಕ್ರಮವಾಗಿ ತೆಗೆದುಕೊಳ್ಳಸಾಧ್ಯವಾಗುತ್ತಿದೆ. ನಂಬಿಕೆಯಲ್ಲಿರುವ ಸಹೋದರ ಸಹೋದರಿಯರು ಸಹ ನನಗಾಗಿ ಅನೇಕ ವಿಷಯಗಳನ್ನು ಓದುವದರ ಮೂಲಕ ಸಹಾಯ ಮಾಡುತ್ತಾರೆ.
ನನ್ನ ದುರ್ಬಲವಾದ ದೃಷ್ಟಿಯಿಂದ ನಾನು ಬಹಿರಂಗ ಭಾಷಣ ಕೊಡುವದನ್ನು ಹೇಗೆ ಮುಂದುವರಿಸ ಸಾಧ್ಯವಿತ್ತು? ಮೊದಲು ಭಾಷಣವನ್ನು ಟೇಪ್ ಮಾಡಿದೆ, ನಂತರ ಧ್ವನಿಪದ್ಧತಿಯ ಮೂಲಕ ಕೇಳಿಸಿ ನಾನು ಮೂಕಾಭಿನಯ ಮಾಡಿದೆ. ಆದರೂ, ನನ್ನ ಮಗಳ ಸಲಹೆಗನುಸಾರ ನಾನು ಇದರಲ್ಲಿ ಪ್ರಗತಿ ಮಾಡಿದೆ. ನಾನು ಈಗ ನನ್ನ ಭಾಷಣವನ್ನು ಚಿಕ್ಕ ಟೇಪ್ರೆಕಾರ್ಡ್ನಲ್ಲಿ ರೆಕಾರ್ಡ್ ಮಾಡುತ್ತೇನೆ. ಅದನ್ನು ಇಯರ್ಪೋನ್ಗಳ ಮೂಲಕ ಕೇಳುತ್ತ ಭಾಷಣವನ್ನು ಕೊಡುತ್ತೇನೆ.
ನಾವು ಗಂಭೀರ ಸಮಸ್ಯೆಗಳನ್ನು ಎದುರಿಸಿದಾಗೆಲ್ಲ ಯೆಹೋವನಿಗೆ ಮೊರೆ ಇಡಲು ಮರೆಯಲಿಲ್ಲ. ಕಟ್ಟಕಡೆಗೆ, ಸಮಸ್ಯೆಗಳನ್ನು ಬಗೆಹರಿಸಲು ಯೆಹೋವನಿಂದ ಬಂದ ಆಶೀರ್ವಾದಗಳು ನಾವು ಎದುರಿಸಿದ ಸಮಸ್ಯೆಗಳಿಗಿಂತ ಹೆಚ್ಚಾಗಿ ತೋರಿ ಬಂದವು. ಆತನಿಗೆ ಕೃತಜ್ಞತೆ ತೋರಿಸುವ ಏಕ ಮಾರ್ಗವು ಆತನ ಸೇವೆಯನ್ನು ಮುಂದುವರಿಸುವುದೇ ಆಗಿತ್ತು.
ಒಕಿನಾವದಲ್ಲಿ 23 ವರ್ಷಗಳ ನಂತರ, ಜಪಾನ್ಗೆ ಮೊದಲಾಗಿ ಕಾಲಿಟ್ಟಾಗ ಸೇವೆ ಮಾಡಿದ ಪ್ರಕೃತಿ ಲಕ್ಷಣಗಳುಳ್ಳ ಸ್ಥಳಕ್ಕೆ ನಮ್ಮನ್ನು ಪುನಃ ನೇಮಿಸಲಾಯಿತು. ಸೊಸೈಟಿಯ ಮುಖ್ಯ ಕಾರ್ಯಾಲಯ ಮತ್ತು ಅತಿ ದೊಡ್ಡ ಮಿಷನೆರಿ ಗೃಹವು ಅನೇಕ ವರ್ಷಗಳ ಹಿಂದೆ ಸಹೋದರ ಹ್ಯಾಸ್ಲೆಟ್ರು ಕೊಂಡು ಕೊಂಡ ಮೊದಲಿನ ಎರಡಂತಸ್ತಿನ ಕಟ್ಟಡದಲಿಯ್ಲೆ ಇದೆ.
ನಾನು ಮತ್ತು ಮಸಾಕೊ ಅಲ್ಲದೆ ನಮ್ಮ 11 ಜನ ಸಂಬಂಧಿಕರು ಈಗ ಜಪಾನ್ನಲ್ಲಿ ಮಿಷನೆರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಷಿಂಟೋ ಮತ್ತು ಬೌದ್ಧ ಸಂಸ್ಕೃತಿಗಳ ಆಧೀನದಲ್ಲಿರುವ ಈ ನಾಡಿನಲ್ಲಿ ಯೆಹೋವನು ತಂದ ಬೆಳವಣಿಗೆಯನ್ನು ಕಾಣುವದು ಮಹಾ ಸದವಕಾಶವೆಂದು ಎಲ್ಲರೂ ನೆನಸುತ್ತಾರೆ. ಜಪಾನಿನಲ್ಲಿ ಆರಂಭದಲ್ಲಿ ಕೆಲಸವು ಚಿಕ್ಕ ಪ್ರಮಾಣದಲ್ಲಿದ್ದರೂ, ಯೆಹೋವನ ಶಕಿಯ್ತಿಂದ ಇಂದು ಅವರು 1,67,000 ಸುವಾರ್ತೆ ಸಾರುವ ಪ್ರಚಾರಕರಿರುವ “ರಾಷ್ಟ್ರ”ವಾಗಿ ಪರಿಣಮಿಸಿದ್ದಾರೆ.—ಯೆಶಾಯ 60:22.
ನಾನು ದೇವರಿಗೆ ಮೊರೆ ಇಟ್ಟಾಗ ಆತನು ನನಗೆ ಉತ್ತರವನ್ನು ದಯಪಾಲಿಸಿದನು. ಆತನು ನನ್ನನ್ನು ಆಹ್ವಾನಿಸಿದಾಗ ನಾನು ಸಕಾರಾತ್ಮವಾಗಿ ಉತ್ತರಿಸಿದೆ. ನಾವು ಏನನ್ನು ಮಾಡಬೇಕಿತ್ತೊ ಕೇವಲ ಅಷ್ಟನ್ನೇ ಮಾಡಿದ್ದೇವೆಂದು ನನ್ನ ಮತ್ತು ನನ್ನ ಹೆಂಡತಿಯ ಅನಿಸಿಕೆ. ನಿಮ್ಮ ಬಗ್ಗೆ ಏನು? ನಿಮ್ಮ ಸೃಷ್ಟಿಕರ್ತನು ನಿಮ್ಮನ್ನು ಕರೆದಾಗ ನೀವು ಉತ್ತರಿಸುವಿರೋ?
[ಪುಟ 28 ರಲ್ಲಿರುವ ಚಿತ್ರ]
ಟೋಹಾರರು ಹವಾಯಿಯಲ್ಲಿ ಅವರ ಕೆಲವು ಪಯನೀಯರ ಸಂಗಾತಿಗಳೊಂದಿಗೆ, 1942 ರಲ್ಲಿ
[ಪುಟ 29 ರಲ್ಲಿರುವ ಚಿತ್ರ]
ಗಿಲ್ಯಾದ್ನಲ್ಲಿ ಟೋಹಾರ ಮಕ್ಕಳು 1948 ರಲ್ಲಿ
[ಪುಟ 31 ರಲ್ಲಿರುವ ಚಿತ್ರ]
ಕರೆಗೆ ಉತ್ತರಿಸಿದ್ದಕ್ಕಾಗಿ ಸಂತೋಷಿತರಾದ, ಶೀನಿಚಿ ಮತ್ತು ಮಸಾಕೊ ಟೋಹಾರ ಮಿಷನೆರಿ ಕೆಲಸದಲ್ಲಿ 43 ವರ್ಷಗಳನ್ನು ಪೂರ್ಣಗೊಳಿಸಿರುತ್ತಾರೆ