ಗಿಲ್ಯಾದ್ ಶಿಕ್ಷಣದ ಆಶೀರ್ವಾದಗಳು ಲೋಕವ್ಯಾಪಕವಾಗಿ ಹಬ್ಬುತ್ತವೆ
ಈಹಳೇ ಲೋಕದಲ್ಲಿ ಶಿಕ್ಷಣಕ್ಕೆ ಕೇವಲ ಸೀಮಿತ ಬೆಲೆಯಿದೆ. ಅದು ಹೆಚ್ಚಾಗಿ ದೇವರ ಸತ್ಯದ ಬದಲಿಗೆ ಮಾನವ ಕಲ್ಪನೆಗಳ ಮೇಲೆ ಆಧರಿತವಾಗಿರುವದರಿಂದ, ಅದು ಜೀವಿತದಲ್ಲಿ ನಿಜ ಉದ್ದೇಶವನ್ನು ಒದಗಿಸಲಾರದು. ಆದರೆ ಗಿಲ್ಯಾದ್ ಶಾಲೆಯು ಬೇರೆಯಾಗಿದೆ. ಗಿಲ್ಯಾದ್ನ 93 ನೆಯ ತರಗತಿಯ ಪದವೀಧರತೆಯಲ್ಲಿ ತನ್ನ ಪೀಠಿಕಾರೂಪದ ಹೇಳಿಕೆಗಳಲ್ಲಿ, ಆಡಳಿತ ಮಂಡಲಿಯ ಥಿಯೊಡರ್ ಜ್ಯಾರೆಕ್, ಈ ಶಾಲೆಯು ನಿಜ ಸಾರವುಳ್ಳ ಶಿಕ್ಷಣವನ್ನು ಒದಗಿಸುತ್ತದೆ ಎಂದು ಹೇಳಿದರು. ಕೀರ್ತನೆ 119:160 ಹೇಳುವಂತೆ, “ನಿನ್ನ [ದೇವರ] ವಾಕ್ಯದ ಸಾರಾಂಶವು ಸತ್ಯವೇ.” ಹೀಗೆ ಮಹಾ ಉತ್ಸಾಹದಿಂದ ಸುಮಾರು 6,000 ಸಭಿಕರು ಸಪ್ಟಂಬರ 13, 1992 ರಲ್ಲಿ ಪದವೀಧರತೆಯ ಕಾರ್ಯಕ್ರಮಕ್ಕೆ ಕಿವಿಗೊಟ್ಟರು.
ವಾಚ್ಟವರ್ ಫಾರ್ಮ್ಸ್ ಕಮಿಟಿಯ ಲಾನ್ ಶಿಲ್ಲಿಂಗ್ ಇವರಿಂದ ಕೊಡಲ್ಪಟ್ಟ ಬೆಳಗ್ಗಿನ ಮೊದಲನೆಯ ಭಾಷಣವು, “ಲೋಕವನ್ನೂ ಅದರ ಅಧಿಪತಿಯನ್ನೂ ಜಯಿಸುತ್ತಾ ಹೋಗಿರಿ” ಎಂಬ ಶೀರ್ಷಿಕೆಯದ್ದಾಗಿತ್ತು. ಸಹೋದರ ಶಿಲ್ಲಿಂಗ್ ಪ್ರಕಟನೆ 12:11 ಕ್ಕೆ ಕೇಂದ್ರೀಕರಿಸುತ್ತಾ, ಆ ವಚನವು ತೋರಿಸುವಂಥ ಮೂರು ರೀತಿಯ ಜಯಿಸುವಿಕೆಯನ್ನು ತಿಳಿಸಿದರು: (1) ಕುರಿಯಾದಾತನ ರಕ್ತದಿಂದ, (2) ಸಾಕ್ಷಿಕೊಡುವ ಮೂಲಕವಾಗಿ, ಮತ್ತು (3) ಸ್ವ-ತ್ಯಾಗದ ಭಾವವುಳ್ಳವರಾಗುವ ಮೂಲಕ. ಯೆಹೋವನ ಸೇವಕರಲ್ಲಿ ಅನೇಕರು ಅಂಥ ಒಂದು ಆತ್ಮವನ್ನು ತೋರಿಸಿದ್ದಾರೆ ಮತ್ತು ತಮ್ಮ ಕರ್ತವ್ಯನಿಷ್ಠೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಮರಣವನ್ನು ಸಹ ಎದುರಿಸಲು ಸಿದ್ಧರಾಗಿದ್ದರು ಎಂಬ ಜ್ಞಾಪಕವನ್ನು ವಿದ್ಯಾರ್ಥಿಗಳಿಗೆ ಅವರು ಕೊಟ್ಟರು.
“ನಿಮ್ಮ ಉತ್ತಮ ವಿಶ್ವಾಸಪಾತ್ರತೆಯನ್ನು ಕಾಪಾಡಿಕೊಳ್ಳಿರಿ” ಎಂಬ ಮುಖ್ಯ ವಿಷಯವು ಆಡಳಿತ ಮಂಡಲಿಯ ಜೋನ್ ಇ. ಬಾರ್ ಇವರಿಂದ ವಿಕಸಿಸಲ್ಪಟ್ಟಿತು. ತಮ್ಮ ವ್ಯಕ್ತಿಸಹಜ ಬೆಚ್ಚನೆಯ ದ್ವನಿಯಿಂದ ಅವರು, ಯೆಹೋವ ಮತ್ತು ಆತನ ಸೇವಕರ ನಡುವಣ ಪರಸ್ಪರ ವಿಶ್ವಾಸಪಾತ್ರತೆಯನ್ನು ಒಂದು ಒಳ್ಳೆಯ ವಿವಾಹದಲ್ಲಿ ವಿಕಸಿಸಲ್ಪಡುವ ವಿಶ್ವಾಸಪಾತ್ರತೆಗೆ ಹೋಲಿಸಿದರು. 2 ತಿಮೊಥೆಯ 1:12, 13 ರ ವಿಷಯಗಳನ್ನು ಉಪಯೋಗಿಸುತ್ತಾ, ಬೈಬಲಿನಲ್ಲಿ “ಸ್ವಸ್ಥಬೋಧನಾವಾಕ್ಯಗಳ ಮಾದರಿ” ಯನ್ನು ಪ್ರಿಯವಾಗಿಟ್ಟುಕೊಳ್ಳುವ ಮೂಲಕ ತಮ್ಮ ವಿಶ್ವಾಸಪಾತ್ರತೆಯನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಅವರು ಪ್ರೇರೇಪಿಸಿದರು. ವೈಯಕ್ತಿಕ ಅಭ್ಯಾಸವನ್ನು ದೈನಂದಿನದ ಕಾಲತಖ್ತೆಯ ಪ್ರಾಮುಖ್ಯ ಭಾಗವಾಗಿ ಮಾಡುವುದನ್ನು ಅವರು ಒತ್ತಿಹೇಳಿದರು ಮತ್ತು ಕೂಟಗಳಲ್ಲಿ ಅವರ ಉತ್ತರಗಳೆಂದೂ ಯಥಾಕ್ರಮದ್ದಾಗಿರುವಂತೆ ಬಿಟ್ಟುಬಿಡದೆ ಅವುಗಳನ್ನು ಯಾವಾಗಲೂ ಅರ್ಥಪೂರ್ಣವಾಗಿ ಮಾಡುವಂತೆ ಅವರು ದಯೆಯಿಂದ ಬುದ್ಧಿಹೇಳಿದರು.
ಸರ್ವಿಸ್ ಡಿಪಾರ್ಟ್ಮೆಂಟ್ ಕಮಿಟಿಯ ವಿಲ್ಯಮ್ ವಾನ್ ಡಿ ವಾಲ್ ಇವರು, “ಕುರಿಸದೃಶ ಜನರಿಗಾಗಿ ಪ್ರೀತಿಯುಕ್ತ ಗಮನವನ್ನು ಪ್ರದರ್ಶಿಸಿರಿ” ಎಂಬ ಮುಂದಿನ ಭಾಷಣವನ್ನು ಕೊಟ್ಟರು. ಒಬ್ಬ ಕುಟುಂಬ ವೈದ್ಯನಲ್ಲಿ ಅವರು ಯಾವುದಕ್ಕಾಗಿ ನೋಡುತ್ತಾರೆಂದು ಅವರು ವಿದ್ಯಾರ್ಥಿಗಳನ್ನು ಕೇಳಿದರು ಮತ್ತು ಅವರು ನೆಚ್ಚುವಂಥ ಅದೇ ಅನುತಾಪ, ಕನಿಕರ ಮತ್ತು ದಯೆಯನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು.
ಆಡಳಿತ ಮಂಡಲಿಯ ಡ್ಯಾನಿಯೆಲ್ ಸಿಡ್ಲಿಕ್, “ದೇವರಿಗೆ ಎಲ್ಲವೂ ಶಕ್ಯವು” ಎಂಬ ಮುಖ್ಯ ವಿಷಯದ ಮೇಲೆ ಹುರಿದುಂಬಿಸುತ್ತಾ ಮಾತಾಡಿದರು. ವೃದ್ಧಾಪ್ಯದಲ್ಲಿ ಒಬ್ಬ ಮಗನನ್ನು ಪಡೆಯುವ ಒಂದು ಅಸಾಧ್ಯವೆಂತ ಕಂಡ ಪ್ರತೀಕ್ಷೆಯ ಬಗ್ಗೆ ಅಬ್ರಹಾಮ ಮತ್ತು ಸಾರ ನಕ್ಕರೆಂಬದನ್ನು ಅವರು ವಿದ್ಯಾರ್ಥಿಗಳಿಗೆ ನೆನಪು ಮಾಡಿದರು. ದೇವರ ಅನೇಕ ಪ್ರವಾದನೆಗಳು ಒಂದು ಮನುಷ್ಯ ದೃಷ್ಟಿಕೋನದಿಂದ ಅಶಕ್ಯವಾಗಿ ತೋರುತ್ತವೆ; ಆದರೆ ದೇವದೂತನು ಅಬ್ರಹಾಮನಿಗೆ ಕೇಳಿದ ಪ್ರಕಾರ, “ಯೆಹೋವನಿಗೆ ಅಸಾಧ್ಯವಾದುದುಂಟೋ?” (ಆದಿಕಾಂಡ 18:14) ಅಸಾಧ್ಯವಾದದ್ದನ್ನು ಮಾಡುವ ದೇವರ ಶಕ್ತಿಯಲ್ಲಿ ನಂಬಿಕೆ ತೋರಿಸುವಂತೆ, ಮತ್ತು ಯಾವ ಶೋಧನೆಗಳನ್ನೇ ಎದುರಿಸಲಿ, ಆ ನಂಬಿಕೆಯನ್ನೆಂದೂ ಕುಂದುವಂತೆ ಅಥವಾ ಕದಲುವಂತೆ ಅವರು ಬಿಡದಂತೆ ವಿದ್ಯಾರ್ಥಿಗಳನ್ನು ಸಹೋದರ ಸಿಡ್ಲಿಕ್ ಪ್ರಬೋಧಿಸಿದರು.
ಬೋಧಕರು ಬುದ್ಧಿವಾದ ನೀಡುತ್ತಾರೆ
ಅನಂತರ ಮಾತಾಡಿದವರು ಇಬ್ಬರು ಗಿಲ್ಯಾದ್ ಬೋಧಕರು. ಮೊದಲಾಗಿ, ಜಾಕ್ ಡಿ. ರೆಡ್ಫರ್ಡ್, “ದೇವರೊಂದಿಗೆ ಒಂದು ಒಳ್ಳೇ ಹೆಸರನ್ನು ಮಾಡುವುದು” ಎಂಬ ಮುಖ್ಯ ವಿಷಯವನ್ನು ವಿಕಸಿಸಿದರು. ಒಂದು ಹೆಸರನ್ನು ಒಳ್ಳೇದಾಗಿ ಅಥವಾ ಕೆಟ್ಟದಾಗಿ ಮಾಡುವುದು ಅದನ್ನು ಧರಿಸಿದಾತನಾದ ವ್ಯಕ್ತಿಯೇ ಎಂದವರು ವಿವೇಚಿಸಿದರು. ಆದಾಮ, ನಿಮ್ರೋದ್, ಇಜಬೇಲ್, ಸೌಲ ಮತ್ತು ಯೂದ ಮುಂತಾದ ಹೆಸರುಗಳನ್ನು, ನೋಹ, ಅಬ್ರಹಾಮ, ರೂತ್, ಪೌಲ ಮತ್ತು ತಿಮೊಥೆಯರಂಥ ಹೆಸರುಗಳೊಂದಿಗೆ ವೈದೃಶ್ಯ ತೋರಿಸಿದರು. ಪ್ರತಿಯೊಂದು ಹೆಸರು ಅದನ್ನು ಧರಿಸಿದಾತನ ಜೀವಿತ ಮಾರ್ಗದಿಂದಾಗಿ ಸಹವಾಸಗಳ ಒಂದು ಸಮೃದ್ಧಿಯನ್ನು ಸಾಧಿಸಿರುತ್ತದೆ. ಇಂದಿನಿಂದ 10, 100, ಅಥವಾ 1,000 ವರ್ಷಗಳ ಮೇಲೆಯೂ ಅವರಿಗೆ ಯಾವ ರೀತಿಯ ಹೆಸರು ಇರುವುದು—ಕೆಲಸಗಳ್ಳ ಅಥವಾ ದೂರುವವನದ್ದೋ, ಅಥವಾ ಒಂದು ನಂಬಿಗಸ್ತ ಮಿಷನೆರಿಯದ್ದೋ? ಎಂದವರು ವಿದ್ಯಾರ್ಥಿಗಳನ್ನು ಕೇಳಿದರು. ಸಮಸ್ಯೆಗಳ ಬದಲಿಗೆ ಪರಿಹಾರಗಳ ಮೇಲೆ ಮತ್ತು ಧ್ಯೇಯಗಳ ಮೇಲೆ ಕೇಂದ್ರೀಕರಿಸಿರಿ, ಎಂದು ಅವರು ಬುದ್ಧಿಹೇಳಿದರು ಅವರಿಗೆ.
“ನೀವು ನಿಮ್ಮ ನಂಬಿಕೆಯನ್ನು ಎಷ್ಟು ಚೆನ್ನಾಗಿ ಕಾಯುತ್ತೀರಿ?” ಎಂಬ ವಿಚಾರ ಪ್ರೇರಕ ಮುಖ್ಯ ವಿಷಯವು ಯುಲಿಸೀಸ್ ವಿ. ಗ್ಲಾಸ್ ಇವರಿಂದ ವಿಕಸಿಸಲ್ಪಟ್ಟಿತು. ದೃಢವಾದ ನಂಬಿಕೆಯನ್ನು, ಯಾವಾಗಲೂ ಸರಿ ದಾರಿಗೆ ಕೈತೋರಿಸುವ ಒಂದು ಒಳ್ಳೇ ದಿಕ್ಸೂಚಿಗೆ ಅವರು ಹೋಲಿಸಿದರು. ಒಂದು ಮೋಟಾರು ಗಾಡಿಯ ದಿಕ್ಸೂಚಿಯು, ಭೂಮಿಯಿಂದ ಮಾತ್ರವಲ್ಲದೆ ಇತರ ಅಯಸ್ಕಾಂತತೆಯ ಕ್ಷೇತ್ರಗಳಿಂದ ಪ್ರಭಾವಿಸಲ್ಪಡಬಹುದು, ಮತ್ತು ಅಂಥ ಕ್ಷೇತ್ರಗಳನ್ನು ನಿಶ್ಶಕ್ತಮಾಡುವ ಅಗತ್ಯವಿದೆ. ತದ್ರೀತಿಯಲ್ಲಿ, ನಾವು ಬಿಟ್ಟುಕೊಟ್ಟಲ್ಲಿ, ಈ ಹಳೇ ಲೋಕವು ನಮ್ಮ ನಂಬಿಕೆಯನ್ನು ಓಲಾಡಿಸಬಲ್ಲ ಮತ್ತು ನಿರ್ಬಲಗೊಳಿಸಬಲ್ಲ ಅನೇಕ ಪ್ರಭಾವಗಳನ್ನು ಉತ್ಪಾದಿಸುತ್ತದೆ. ಅಂಥ ಪ್ರಭಾವಗಳ ವಿರುದ್ಧವಾಗಿ ತರಗತಿಯನ್ನು ಎಚ್ಚರಿಸುತ್ತಾ, ಇತರರ ಮನೋಭಾವನೆ ಮತ್ತು ಅನಿಸಿಕೆಗಳೆಡೆಗೆ ಅವರ ಕೋಮಲ ಅರಿವಿಗಾಗಿಯೂ ಸಹೋದರ ಗ್ಲಾಸ್ ಅವರನ್ನು ಹೊಗಳಿದರು.
ಬೆಳಗ್ಗಿನ ಕೊನೆಯ ಭಾಷಣವು ಆಡಳಿತ ಮಂಡಲಿಯ ಒಬ್ಬ ಸದಸ್ಯರಾದ ಆಲ್ಬರ್ಟ್ ಡಿ. ಶ್ರೋಡರ್ ಇವರಿಂದ ಕೊಡಲ್ಪಟ್ಟಿತು. ಹಿಂದೆ 1943 ರಲ್ಲಿ ಅವರು ಶಾಲೆಯ ರೆಜಿಸ್ಟ್ರಾರರಾಗಿ ಸೇವೆಮಾಡುತ್ತಿದ್ದಾಗ ಒಂದನೆಯ ತರಗತಿಯು ತೋರಿಸಿದ್ದ ಅದೇ ಮಿಷನೆರಿ ಹುರುಪನ್ನು ಪ್ರದರ್ಶಿಸಿದಕ್ಕಾಗಿ ಅವರನ್ನು ಹೊಗಳುತ್ತಾ, “ಮಿಷನೆರಿ ಹುರುಪನ್ನು ಕಾಪಾಡು” ವಂತೆ ಅವರು ವಿದ್ಯಾರ್ಥಿಗಳಿಗೆ ಉತ್ತೇಜನ ಕೊಟ್ಟರು. ಅವರು ಜನಾಭಿಮುಖರಾಗಿದ್ದರು, ದೇವರಾತ್ಮದಿಂದ ಮಾರ್ಗದರ್ಶಿಸಲ್ಪಡ ಬಯಸಿದ್ದ ಸ್ವಾಭಾವಿಕವಾಗಿ ಸಾರುವವರು ಅವರಾಗಿದ್ದರೆಂದು ಅವರು ಗಮನಿಸಿದರು. ವೈಯಕ್ತಿಕ ಅಭ್ಯಾಸದಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ನ ಪೂರ್ಣ ಉಪಯೋಗವನ್ನು ಮಾಡುತ್ತಾ ಆ ಆತ್ಮವನ್ನು ಬೆಳೆಸುತ್ತಾ ಇರ್ರಿ ಎಂದವರು ಪ್ರೇರೇಪಿಸಿದರು. ದೃಷ್ಟಾಂತಕ್ಕಾಗಿ ಕೀರ್ತನೆ 24 ರ ವಚನ-ವಚನ ಚರ್ಚೆಯೊಂದಿಗೆ ಅವರು ಸಮಾಪ್ತಿಗೊಳಿಸಿದರು.
ಅನಂತರ, ಗಿಲ್ಯಾದ್ ವಿದ್ಯಾರ್ಥಿಗಳು ಗಿಲ್ಯಾದ್ ಪದವೀಧರರಾದರು! ಅವರ ಮಿಷನೆರಿ ನೇಮಕಗಳು ಗಟ್ಟಿಯಾಗಿ ಓದಲ್ಪಟ್ಟಂತೆ, ಅವರ ಡಿಪೋಮ್ಲಗಳನ್ನು, ಸಭಿಕರ ಬಹಳಷ್ಟು ಕರತಾಡನದೊಂದಿಗೆ ಅವರಿಗೆ ನೀಡಲಾಯಿತು.
ಮಧ್ಯಾಹ್ನದಲ್ಲಿ, ಫ್ಯಾಕ್ಟರಿ ಕಮಿಟಿಯ ಕ್ಯಾಲ್ವಿನ್ ಚೈಕ್, ವಾಚ್ಟವರ್ ಅಭ್ಯಾಸವನ್ನು ನಡಿಸಿದರು. ಒಂದು ಉಲ್ಲಾಸಭರಿತ ವಿದ್ಯಾರ್ಥಿ ಕಾರ್ಯಕ್ರಮವು ಹಿಂಬಾಲಿಸಿತು, ಐದು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕ್ಷೇತ್ರದಲ್ಲಿ ಸಿಕ್ಕಿದ ಅನುಭವಗಳು ಅದರಲ್ಲಿ ಸೇರಿದ್ದವು ಮತ್ತು ಅವರಿಗೆ ನೇಮಕವಾದ ಕೆಲವು ದೇಶಗಳ ಸ್ಲೈಡ್ಸ್ನ್ನೂ ತೋರಿಸಲಾಯಿತು. ಅದಲ್ಲದೆ, ಒಬ್ಬ ವೃದ್ಧ ದಂಪತಿಗಳ ಸಾಕ್ಷತ್ ದರ್ಶನ ಮಾಡಿಸಲಾಯಿತು ಮತ್ತು ಅವರು ಮಿಷನೆರಿಗಳಾಗಿ ಅನೇಕ ವರ್ಷಗಳಿಂದ ಪಡೆದ ವಿವೇಕ ಮತ್ತು ಅನುಭವಗಳಲ್ಲಿ ಕೆಲವನ್ನು ಅವರು ಹಂಚಿದರು. ಮೋಸಹೋಗಬೇಡಿರಿ ಯಾ ದೇವರನ್ನು ಅಣಕಿಸಬೆಡಿರಿ ಎಂಬ ಶೀರ್ಷಿಕೆಯ ಸಮಯೋಚಿತ ನಾಟಕದಿಂದ ಅಪರಾಹ್ನವು ಕೊನೆಗೊಂಡಿತು.
ದೇವರ ಸತ್ಯದಲ್ಲಿ ಕೊಡಲ್ಪಟ್ಟ ಶಿಕ್ಷಣವು ಏನನ್ನು ಮಾಡಬಲ್ಲದು ಎಂದು ಕಾಣಲು ಸಭಿಕರು ಅತ್ಯುಲ್ಲಾಸಪಟ್ಟರು ಮತ್ತು ಅಂಥ ಶಿಕ್ಷಣದ ಪ್ರಯೋಜನಗಳು ಲೋಕವ್ಯಾಪಕವಾಗಿ ಅನುಭವಿಸಲ್ಪಡುತ್ತಾ ಇರುವುವೆಂದು ತಿಳಿಯಲು ಸಂತೋಷಪಟ್ಟರು. ಹೀಗೆ ಈ 48 ಮಿಷನೆರಿಗಳು ತಮ್ಮ ನೇಮಕಗಳಿಗೆ ಚದರಿಹೋಗುವಾಗ, ಈ ನಂಬಿಗಸ್ತ ಜನರು ಅವರು ಹೋಗುವಲ್ಲೆಲ್ಲಾ ದೇವಜನರಿಗೆ ಒಂದು ಆಶೀರ್ವಾದವಾಗಿ ಇರುವರೆಂಬ ಹೃದಯಪೂರ್ವಕ ನಿರೀಕ್ಷೆ ಮತ್ತು ಭರವಸೆಯನ್ನು ವ್ಯಕ್ತಪಡಿಸುತ್ತಾ, ಅನೇಕ ಪ್ರಾರ್ಥನೆಗಳು ಅವರನ್ನು ಹಿಂಬಾಲಿಸುತ್ತಿರುವುವು.
[ಪುಟ 19 ರಲ್ಲಿರುವ ಚೌಕ]
ತರಗತಿಯ ಅಂಕಿ ಅಂಶಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 7
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 18
ವಿದ್ಯಾರ್ಥಿಗಳ ಸಂಖ್ಯೆ: 48
ವಿವಾಹಿತ ದಂಪತಿಗಳ ಸಂಖ್ಯೆ: 24
ಸರಾಸರಿ ವಯಸ್ಸು: 32:8
ಸತ್ಯದಲ್ಲಿ ಸರಾಸರಿ ವರ್ಷಗಳು: 15.3
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 10.4
[ಪುಟ 20 ರಲ್ಲಿರುವ ಚೌಕ]
ಗಿಲ್ಯಾದ್ ಎಕ್ಸ್ಟೆನ್ಷನ್ ತರಗತಿ ಪದವಿಪಡೆಯಿತು
ಜೂನ್ 21, 1992 ರಲ್ಲಿ, 24 ಮಿಷನೆರಿಗಳ ಒಂದು ಗುಂಪು ಜರ್ಮನಿಯ ಸೆಲ್ಟರ್ಸ್⁄ಟೌನಸ್ನಲ್ಲಿ ಗಿಲ್ಯಾದ್ ಎಕ್ಸ್ಟೆನ್ಷನ್ ಸ್ಕೂಲ್ನ ನಾಲ್ಕನೆಯ ತರಗತಿಯಿಂದ ಪದವಿಪಡೆಯಿತು. ಈ ತರಗತಿಯಲ್ಲಿ, ಏಳು ದೇಶಗಳಿಂದ ಬಂದ 11 ವಿವಾಹಿತ ದಂಪತಿಗಳು ಮತ್ತು 2 ಅವಿವಾಹಿತ ಸಹೋದರಿಯರು ಕೂಡಿದ್ದರು, ಅವರ ಸರಾಸರಿ ವಯಸ್ಸು 32 ವರ್ಷಗಳು, ದೀಕ್ಷಾಸ್ನಾನವಾಗಿ 14 ವರ್ಷಗಳಾಗಿದ್ದವು, ಮತ್ತು ಪೂರ್ಣ ಸಮಯದ ಸೌವಾರ್ತಿಕ ಕಾರ್ಯದಲ್ಲಿ 8.5 ವರ್ಷಗಳ ಸೇವೆ ಮಾಡಿದ್ದರು. ಆ ಪದವೀಧರತೆಗೆ 2,000 ಕ್ಕಿಂತಲೂ ಹೆಚ್ಚು ಮಂದಿ ಹಾಜರಾದರು.
“ಚೆದರುತ್ತಾ ಹೋಗುವ ಒಬ್ಬನಿದ್ದಾನೆ, ಆದರೂ ಅವನು ವೃದ್ಧಿಯಾಗುತ್ತಾನೆ” (NW), ಎಂದನ್ನುವ ಜ್ಞಾನೋಕ್ತಿ 11:24 ರ ಒಂದು ಚರ್ಚೆಯೊಂದಿಗೆ, ಸಹೋದರ ಜ್ಯಾರೆಕ್ ಕಾರ್ಯಕ್ರಮವನ್ನು ಆರಂಭಿಸಿದರು. ವಿದ್ಯಾರ್ಥಿಗಳು ಸ್ವಲ್ಪದರಲ್ಲಿಯೇ ಚೆದರಿ ಹೋಗಲಿದ್ದಾರೆ ಮತ್ತು ಖಂಡಿತವಾಗಿಯೂ ಅಭಿವೃದ್ಧಿಯನ್ನು ಪ್ರವರ್ಧಿಸುವರೆಂದು ಅವರು ಗಮನಿಸಿದರು.
ಜರ್ಮನ್ ಬ್ರಾಂಚ್ ಕಮಿಟಿಯ ಕಾರ್ಡಿನೇಟರ್ ರಿಚರ್ಡ್ ಕೆಲ್ಸೀ, ಸರ್ವಿಸ್ ಡಿಪಾರ್ಟ್ಮೆಂಟ್ನ ವುಲ್ಫ್ಗ್ಯಾಂಗ್ ಗ್ರುಪ್ಪ್, ಬ್ರಾಂಚ್ ಕಮಿಟಿಯ ಸದಸ್ಯರೇ ಆದ ವರ್ನರ್ ರಡ್ಕೀ ಮತ್ತು ಎಡ್ಮಂಡ್ ಏನ್ಸಟೆಡ್, ಮತ್ತು ಇಬ್ಬರು ಬೋಧಕರಾದ ಡಿರಿಚ್ಚ್ ಫಾರ್ಸ್ಟರ್ ಮತ್ತು ಲೋಥರ್ ಕೋಮರ್ ಇವರಿಂದ ಉತ್ತೇಜಕ ಶಾಸ್ತ್ರೀಯ ಭಾಷಣಗಳು ಕೊಡಲ್ಪಟ್ಟವು. ಆಡಳಿತ ಮಂಡಲಿಯ ಆಲ್ಬರ್ಟ್ ಶ್ರೋಡರ್, “ಆತ್ಮಿಕ ರತ್ನಗಳ ಆನ್ವೇಷಕರಾಗಿರುವುದನ್ನು ಮುಂದರಿಸಿರಿ” ಎಂಬ ಶೀರ್ಷಿಕೆಯ ಆಸಕ್ತಿಭರಿತ ವೈಶಿಷ್ಟ್ಯಸೂಚಕ ಉಪನ್ಯಾಸವನ್ನು ಕೊಟ್ಟರು. ಕಾರ್ಯಕ್ರಮದ ಪರಮಾವಧಿಯು, ಆಫ್ರಿಕ, ಮಧ್ಯ ಅಮೆರಿಕ, ಮತ್ತು ಪೂರ್ವ ಯೂರೋಪಿನ 11 ದೇಶಗಳಿಗೆ ನೇಮಕಗಳ ಕೊಡುವಿಕೆಯಾಗಿತ್ತು, ತದನಂತರ, ಆಡಳಿತ ಮಂಡಲಿಗೆ ಹೃದಯಪೂರ್ವಕ ಗಣ್ಯತೆಯನ್ನು ವ್ಯಕ್ತಪಡಿಸಿದ ತರಗತಿಯ ಒಂದು ಪತ್ರವನ್ನು ಪದವೀಧರನೊಬ್ಬನು ಓದಿದನು.
[ಪುಟ 18 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ 93 ನೆಯ ಪದವೀಧರತೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಲೆಕ್ಕಿಸಲ್ಪಟ್ಟಿವೆ ಮತ್ತು ಹೆಸರುಗಳು ಪ್ರತಿ ಸಾಲಿನ ಎಡದಿಂದ ಬಲಕ್ಕೆ ನಮೂದಿಸಲ್ಪಟ್ಟಿವೆ.
(1) ಹಿಟ್ಸ್ಮ್ಯಾನ್, ಸಿ.; ವೆಸ್ಟ್, ಪಿ.; ಎವನ್ಸ್, ಡಿ.; ಹಿಪ್ಸ್, ಎಮ್.; ಸಿಮೊನೆಲಿ, ಎನ್.; ವುಡ್, ಎಸ್.; ಕಾರ್ಕಲ್, ಎಮ್.; ಫೋರ್ಲ್ಸ್, ಸಿ.; ಥಾಮಸ್, ಜೆ. (2) ಜೋನ್ಸ್, ಎಮ್.; ನಿಸ್ಸಿನನ್, ಜೆ.; ಸ್ಪಾನೆನ್ಬರ್ಗ್, ಎಮ್.; ಜ್ಯಾಕರಿ, ಕೆ.; ರ್ಯಾವ್ನ್, ಜಿ.; ಬ್ಯಾಕ್ಮ್ಯಾನ್, ಎಮ್.; ವೆಟರ್ಟ್ಗ್ರೆನ್, ಎ.; ಎವನ್ಸ್, ಡಿ.; ಫೋರ್ಲ್ಸ್, ಆರ್.; ಕ್ಯಾಪೊರೆಲ್, ಜಿ. (3) ಸಿಮೊನೆಲಿ, ಎನ್.; ರ್ಯಾಕ್ಸ್ಟೈನರ್, ಎಮ್.; ರ್ಯಾಕ್ಸ್ಟೈನರ್, ಎಮ್.; ರುಯ್ಜ್-ಎಸ್ಪರ್ಜ, ಎಲ್.; ಗರ್ಬಿಗ್, ಬಿ.; ಸಿಮ್ಸನ್, ಸಿ.; ಜ್ಯಾನ್ವಿಚ್, ಸಿ.; ಜ್ಯಾಕರಿ, ಬಿ.; ರಿಕ್ಕೆಟ್ಸ್, ಎಲ್. (4) ಸಿಮ್ಸನ್, ಜೆ.; ಬ್ಯಾಕ್ಮ್ಯಾನ್, ಜೆ.; ಕಾರ್ಕಲ್, ಜಿ.; ಗರ್ಬಿಗ್, ಎಮ್.; ರಿಕ್ಕೆಟ್ಸ್, ಬಿ.; ಬ್ಯಾಗರ್-ಹ್ಯಾನ್ಸನ್, ಎಲ್.; ಜೋನ್ಸ್, ಎ.; ಜ್ಯಾನ್ವಿಚ್, ಕೆ.; ರ್ಯಾವ್ನ್, ಜೆ.; ಹಿಪ್ಸ್, ಸಿ. (5) ಸ್ಪಾನೆನ್ಬರ್ಗ್, ಎಸ್; ಹಿಟ್ಸ್ಮ್ಯಾನ್, ಎ.; ಕ್ಯಾಪೊರೆಲ್, ಎಲ್.; ರುಯ್ಜ್-ಎಸ್ಪರ್ಜ, ಎಸ್.; ಥಾಮಸ್, ಆರ್.; ಬ್ಯಾಗರ್-ಹ್ಯಾನ್ಸನ್, ಬಿ.; ವುಡ್, ಎಮ್.; ವೆಸ್ಟ್, ಎಮ್.; ವೆಟರ್ಟ್ಗ್ರೆನ್, ಸಿ.; ನಿಸ್ಸಿನನ್, ಇ.