ಗಿಲ್ಯಾದ್ ತರಬೇತು—ಅತಿಪರಿಶುದ್ಧವಾದ ನಂಬಿಕೆಯಲ್ಲಿ
“ನಮ್ಮ ವಿದ್ಯಾರ್ಥಿಗಳು ಅತಿಪರಿಶುದ್ಧವಾದ ನಂಬಿಕೆಯಲ್ಲಿ ಒಳ್ಳೇ ತರಬೇತನ್ನು ಹೊಂದಿರುತ್ತಾರೆ.” ಇವು, ಸಪ್ಟಂಬರ 12, 1933 ರ ಆದಿತ್ಯವಾರದಂದು ಜರಗಿದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ 95 ನೆಯ ತರಗತಿಯ ಪದವಿ ವಿತರಣ ಕಾರ್ಯಕ್ರಮದ ಉದ್ಘಾಟನಾ ಹೇಳಿಕೆಗಳಾಗಿದ್ದವು. ಆ ಬೆಳಗಾತ ಜರ್ಸಿ ಸಿಟಿ ಎಸೆಂಬ್ಲಿ ಹಾಲ್ನಲ್ಲಿ ನೆರೆದ 4,614 ಆಮಂತ್ರಿತ ಅತಿಥಿಗಳು ಮತ್ತು ಬೆತೆಲ್ ಕುಟುಂಬ ಸದಸ್ಯರು ಜಾರ್ಜ್ ಗ್ಯಾಂಗಸ್ರವರಿಂದ ಆರಂಭದ ಪ್ರಾರ್ಥನೆಗೆ ನಡಿಸಲ್ಪಟ್ಟರು. ಸಹೋದರ ಗ್ಯಾಂಗಸ್ 65 ವರ್ಷಗಳಿಂದ ಬೆತೆಲ್ ಸದಸ್ಯರಾಗಿದ್ದಾರೆ ಮತ್ತು 97 ವರ್ಷ ವಯಸ್ಸಿನಲ್ಲಿ ಅವರು ಆಡಳಿತ ಮಂಡಲಿಯ ಅತ್ಯಂತ ಹಿರಿಯ ಸದಸ್ಯರು.
ಕಾರ್ಯಕ್ರಮದ ಅಧ್ಯಕ್ಷರು ಮತ್ತು ಆಡಳಿತ ಮಂಡಲಿಯವರೂ ಆಗಿರುವ ಆಲ್ಬರ್ಟ್ ಶ್ರೋಡರ್, ಹೇಳಿದ್ದು: “ಐದು ತಿಂಗಳುಗಳ ವರೆಗೆ ಗಿಲ್ಯಾದ್ ವ್ಯಾಸಂಗವು ಅತಿಪರಿಶುದ್ಧವಾದ ನಂಬಿಕೆಯ ಮೇಲೆ ಆಧಾರಿತವಾಗಿತ್ತು.” ಆದರೆ, “ಅತಿಪರಿಶುದ್ಧವಾದ ನಂಬಿಕೆ” ಎಂದರೇನು? ಯೂದ 20 ರಲ್ಲಿ ತಿಳಿಸಲ್ಪಟ್ಟ ಈ “ಅತಿಪರಿಶುದ್ಧವಾದ ನಂಬಿಕೆ” ಯು ಬೈಬಲ್ ಸತ್ಯದ ಇಡೀ ಶ್ರೇಣಿಯಾಗಿದೆ ಎಂದವರು ವಿವರಿಸಿದರು. ಹೀಗೆ ಗಿಲ್ಯಾದ್ ವ್ಯಾಸಂಗವು ಅದರ ಪ್ರಧಾನ ಪಠ್ಯಪುಸ್ತಕ, ಯೆಹೋವನ ವಾಕ್ಯವಾದ ಬೈಬಲ್ನ ಮೇಲೆ, ಆಧಾರಿತವಾಗಿದೆ.
ವಿದ್ಯಾರ್ಥಿಗಳು ಅಧಿಕ ಉಪದೇಶ ಪಡೆಯುತ್ತಾರೆ
“ಜ್ಞಾನಿಗಳ ಪ್ರಭಾವದಿಂದ ಪ್ರಯೋಜನ ಹೊಂದುವುದು,” ಎಂಬ ಮುಖ್ಯ ವಿಷಯದ ಮೇಲೆ ಮಾತಾಡಿದ ಮೊದಲನೆಯ ಭಾಷಣಗಾರರೇ ವಾಚ್ಟವರ್ ಫಾರ್ಮ್ಸ್ ಕಮಿಟಿಯ ಜಾನ್ ಸ್ಟ್ಯುಫ್ಲೋಟನ್. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 13:20) ಗಿಲ್ಯಾದ್ ವ್ಯಾಸಂಗದಲ್ಲಿ ವಿದ್ಯಾರ್ಥಿಗಳು ಬೈಬಲ್ ಅಧ್ಯಯನದಲ್ಲಿ 900 ಕ್ಕಿಂತಲೂ ಹೆಚ್ಚು ತಾಸುಗಳನ್ನು ಕಳೆದಿರುತ್ತಾರೆ. ಸಹೋದರ ಸ್ಟ್ಯುಫ್ಲೋಟನ್ ವಿದ್ಯಾರ್ಥಿಗಳನ್ನು ಕೇಳಿದ್ದು: “ಯೆಹೋವನ ಪ್ರಭಾವವು ಭವಿಷ್ಯತ್ತಿನಲ್ಲಿ ನಿಮ್ಮನ್ನು ಹೇಗೆ ಪ್ರಭಾವಿಸಲಿದೆ? ನೀವು 17 ಕೋಟಿ ಒಟ್ಟು ಜನಸಂಖ್ಯೆಯ 18 ದೇಶಗಳಿಗೆ ಹೋಗಲಿದ್ದೀರಿ. ಹೀಗಿರಲಾಗಿ ನೀವು ಆ ಜನರ ಮೇಲೆ ಹೇಗೆ ಪ್ರಭಾವ ಬೀರುವಿರಿ?” ಅಪರಿಮಿತ ಜ್ಞಾನದ ಮೂಲನಾದ ಯೆಹೋವನ ಜ್ಞಾನವನ್ನು ಪ್ರತಿಬಿಂಬಿಸುವ ಮೂಲಕ, ಇತರರು ಯೆಹೋವನ ಆರಾಧಕರಾಗುವಂತೆ ಹೊಸ ಮಿಷನೆರಿಗಳು ಸಹಾಯ ಮಾಡಶಕ್ತರಾಗುವರು.
ಆಡಳಿತ ಮಂಡಲಿಯ ಲೈಡ್ ಬ್ಯಾರಿಯವರಿಂದ ವಿಕಸಿಸಲ್ಪಟ್ಟ, “ಎಲ್ಲರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗುವದು” ಎಂಬುದು ಹಿಂಬಾಲಿಸಿದ ಭಾಷಣದ ಮುಖ್ಯ ವಿಷಯವಾಗಿತ್ತು. (1 ಕೊರಿಂಥ 9:22, ಕಿಂಗ್ ಜೇಮ್ಸ್ ವರ್ಷನ್) ಸುಮಾರು 45 ವರ್ಷಗಳ ಹಿಂದೆ, ಸಹೋದರ ಬ್ಯಾರಿ ಸ್ವತಃ ಗಿಲ್ಯಾದ್ನ 11 ನೆಯ ತರಗತಿಯ ಒಬ್ಬ ವಿದ್ಯಾರ್ಥಿಯಾಗಿದ್ದರು. ಈಗ 95 ನೆಯ ತರಗತಿಯು, ಪರದೇಶದಲ್ಲಿ ವರ್ಷಗಳ ಅನುಭವ ಹೊಂದಿರುವ ಈ ಮಾಜಿ ಮಿಷನೆರಿಯಿಂದ ಪ್ರಾಯೋಗಿಕ ಹಿತೋಪದೇಶ ಪಡೆಯುವುದನ್ನು ಗಣ್ಯಮಾಡಿತು. ಸ್ಥಳಿಕ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಮತ್ತು ದೇಶ ಭಾಷೆಯನ್ನು ಕಲಿಯುವ ಮೂಲಕ ತಮ್ಮ ಹೊಸ ವಿದೇಶ ಟೆರಿಟೊರಿಯ ಜನರೊಂದಿಗೆ ತಡವಿಲ್ಲದೆ ಗುರುತಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಉತ್ತೇಜನ ಕೊಟ್ಟರು. ಸ್ಥಳಿಕ ಜನರೊಂದಿಗೆ ನಿಕಟ ಸಹವಾಸದಲ್ಲಿ ರಾಜ್ಯ ಕಾರ್ಯವನ್ನು ಮಾಡುವ ಮೂಲಕ ಹಾಗೂ ಯುಕ್ತವಾದಾಗಲೆಲ್ಲಾ ಅವರ ಪದ್ಧತಿಗಳನ್ನು ಕಲಿತುಕೊಳ್ಳುವ ಮತ್ತು ಸ್ವೀಕರಿಸುವ ಮೂಲಕ ಇದನ್ನು ಉತ್ತಮವಾಗಿ ಮಾಡಸಾಧ್ಯವಿದೆ ಎಂದವರು ಹೇಳಿದರು.
ಅನಂತರ, ಫ್ಯಾಕ್ಟರಿ ಕಮಿಟಿಯ ಡೀನ್ ಸಾಂಗರ್, “ಸಾಮಾನ್ಯ ಕರ್ತವ್ಯದಿಂದ ಬಿಡುಗಡೆ ಹೊಂದಿರಿ” ಎಂಬ ಕುತೂಹಲವನ್ನೆಬ್ಬಿಸುವ ಮುಖ್ಯ ವಿಷಯದ ಮೇಲೆ ಮಾತಾಡಿದರು. ಪ್ರಾಪಂಚಿಕ ಚಿಂತೆಗಳಿಂದ ಮುಕ್ತರಾಗಿದ್ದು, ಮಾಡಲ್ಪಡಬೇಕಾದ ದೇವಪ್ರಭುತ್ವ ಕಾರ್ಯದ ಮೇಲೆ ಏಕಾಗ್ರತೆಯಿಟ್ಟು ಒಂದು ಕೇಂದ್ರೀಕೃತವಾದ ಸಾಮಾನ್ಯ ಜೀವಿತವನ್ನು ಜೀವಿಸುವುದರ ಅರ್ಥವೇನೆಂಬದು, 35 ಕ್ಕಿಂತಲೂ ಹೆಚ್ಚು ವರ್ಷಗಳನ್ನು ಪೂರ್ಣ-ಸಮಯದ ಸೇವೆಯಲ್ಲಿ ಕಳೆದಿರುವ ಸಹೋದರ ಸಾಂಗರ್ ತಿಳಿದಿದ್ದಾರೆ. ಮತ್ತು ಅದು ವಿದ್ಯಾರ್ಥಿಗಳಿಗೆ ಅವರ ಬುದ್ಧಿವಾದದ ಸಾರವಾಗಿತ್ತು. ತಮ್ಮ ವಿಶೇಷ ನೇಮಕಕ್ಕಾಗಿ ತಮ್ಮನ್ನು ಪೂರ್ಣವಾಗಿ ಮೀಸಲಾಗಿಡುವುದಕ್ಕೋಸ್ಕರ ಯೆಹೋವನ ಆಲಯದ ಗಾಯಕರು ಬೇರೆ ಲೇವಿಯರಿಗೆ ಸಾಮಾನ್ಯವಾಗಿದ್ದ ಕೆಲಸಗಳಿಂದ ಬಿಡುಗಡೆ ಹೊಂದಿದ್ದರು. (1 ಪೂರ್ವಕಾಲವೃತ್ತಾಂತ 9:33) ಅಂತೆಯೇ, ಗಿಲ್ಯಾದ್ ಮಿಷನೆರಿಗಳು ತಮ್ಮ ವಿಶೇಷ ಸೇವೆಯ ಮೇಲೆ ಏಕಾಗ್ರತೆ ಇಡುವಂತೆ ಐಹಿಕ ಕೆಲಸದಂಥ ಸಾಮಾನ್ಯ ವಿಷಯಗಳಿಂದ ಬಿಡುಗಡೆ ಹೊಂದಿರುತ್ತಾರೆ. ಸಹೋದರ ಸಾಂಗರ್ ಈ ಬುದ್ಧಿವಾದದಿಂದ ಸಮಾಪ್ತಿಗೊಳಿಸಿದರು: “ನಿಮ್ಮ ಹೊರನೋಟವನ್ನು ಕೇಂದ್ರೀಕರಿಸಿಕೊಳ್ಳಿರಿ ಮತ್ತು ನಿಮ್ಮ ಜೀವನವನ್ನು ಸಾಮಾನ್ಯವಾಗಿಡಿರಿ. ಸಾಮಾನ್ಯ ಕರ್ತವ್ಯಗಳಿಂದ ಬಿಡುಗಡೆ ಹೊಂದಿದವರೋಪಾದಿ ನಿಮ್ಮ ಜವಾಬ್ದಾರಿಯು ಯೆಹೋವನನ್ನು ಸ್ತುತಿಸುತ್ತಾ, ಹಗಲಿರುಳೂ ಆ ಕಾರ್ಯದಲ್ಲಿರುವುದೇ ಆಗಿದೆ.”
“ಜೀವಿತದಲ್ಲಿ ಅತ್ಯುತ್ತಮವಾದುದನ್ನು ಪಡೆಯುವಂತೆ ಇತರರಿಗೆ ಕಲಿಸುವುದು” ಎಂಬ ಮುಖ್ಯ ವಿಷಯದಲ್ಲಿ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಡ್ಯಾನಿಯೆಲ್ ಸಿಡ್ಲಿಕ್ ಅನಂತರ ಮಾತಾಡಿದರು. “ಬೋಧನೆಯನ್ನು ಕಲಿಸುವುದು ಮಾತ್ರವೇ ಅಲ್ಲ, ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಜನರು ಜೀವನವನ್ನು ತರುವಂತೆ ಅವರೇನು ಮಾಡಬೇಕೆಂದು ಅವರಿಗೆ ತೋರಿಸಲು ಸಾಕಷ್ಟು ಧೈರ್ಯವುಳ್ಳವರಾಗಿರುವಂತೆಯೂ” ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹನೆ ಕೊಟ್ಟರು. ಒಳ್ಳೇ ಬೋಧಕರು ಪ್ರೇರೇಪಿಸಬೇಕು ಮತ್ತು ಪ್ರಚೋದಿಸಬೇಕು. “ಕೇವಲ ನಿಯಮಗಳನ್ನೂ ವಿಧಿಗಳನ್ನೂ ಕಲಿಸುವ ಬದಲಿಗೆ ಕ್ರಿಸ್ತೀಯ ಮೌಲ್ಯಗಳನ್ನು ಜನರು ವಿಕಸಿಸುವಂತೆ ಮನಸ್ಸುಕೊಡಿರಿ” ಎಂದರವರು, ಮತ್ತು ಕೊನೆಯಲ್ಲಿ ಕೂಡಿಸಿದ್ದು: “ಎಲ್ಲದಕ್ಕಿಂತಲೂ ಹೆಚ್ಚಾಗಿ, ಪ್ರಿಯ ಸಹೋದರರೇ, ನೀವು ನಿಮಗೆ ಮತ್ತು ಇತರರಿಗೆ ಪ್ರೀತಿಸುವುದು ಹೇಗೆಂದು ಕಲಿಸಿಕೊಳ್ಳಿರಿ ಮತ್ತು ಕಲಿಸಿರಿ, ಯಾಕಂದರೆ ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—1 ಕೊರಿಂಥ 13:1-3; ಕೊಲೊಸ್ಸೆ 3:14.
ಸುಮಾರು ಐದು ತಿಂಗಳ ತರಬೇತಿನ ಅನಂತರ, ವಿದ್ಯಾರ್ಥಿಗಳಿಗೆ ಅವರ ಇಬ್ಬರು ಉಪದೇಶಕರು ವಿಶೇಷ ಮೆಚ್ಚಿನವರಾದರು. ಸ್ವತಃ ಮಾಜಿ ಮಿಷನೆರಿಯಾಗಿದ್ದ ಜ್ಯಾಕ್ ರೆಡ್ಫರ್ಡ್, “ನೀವು ಯೋಗ್ಯ ಆಯ್ಕೆ ಮಾಡಿದ್ದೀರಿ” ಎಂಬ ವಿಷಯದ ಮೇಲೆ ಮೊದಲಾಗಿ ಮಾತಾಡಿದರು. ಪುರಾತನ ಯೆಹೂದ್ಯ ಜಗತ್ತಿನಲ್ಲಿ, ಕ್ರೈಸ್ತ ಅಪೊಸ್ತಲನಾಗಿ ಪರಿಣಮಿಸುವ ಮುಂಚೆ, ಅಪೊಸ್ತಲ ಪೌಲನಿಗೆ ಸ್ಥಾನ, ಪ್ರತಿಷ್ಠೆ, ಪ್ರಾಬಲ್ಯ ಮತ್ತು ಆರ್ಥಿಕ ಭದ್ರತೆಗಳಿದ್ದವು. ಆದರೆ ಇವೆಲ್ಲವನ್ನು “ಕಸ,” ಅಥವಾ, ಫಿಲಿಫ್ಸ್ ತರ್ಜುಮೆಗನುಸಾರ, “ಒಂದಷ್ಟು ಕಚಡ” ಎಂದು ಪೌಲನು ಬಣ್ಣಿಸಿದನು. ಅವನ ಹೃದಯವು ಶುಶ್ರೂಷೆಯಲ್ಲಿತ್ತು ಮತ್ತು ಅವನು ಯೋಗ್ಯ ಆಯ್ಕೆಯನ್ನು ಮಾಡಿದನು. ಇದಕ್ಕೆ ವೈದೃಶ್ಯದಲ್ಲಿ, ಇಂದಿನ ಮಾನವ ಕುಲದ ಅಧಿಕಾಂಶ ಜನರು ತಾವು ಪ್ರಾಪಂಚಿಕ ಸ್ವತ್ತುಗಳನ್ನು ನಿತ್ಯ ಜೀವಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿ ಪರಿಗಣಿಸುವವರೆಂದು ಜೀವಿತದಲ್ಲಿನ ತಮ್ಮ ಆಯ್ಕೆಗಳ ಮೂಲಕ ತೋರಿಸುತ್ತಾರೆ. ಗಿಲ್ಯಾದ್ ಮಿಷನೆರಿಗಳು ಯೋಗ್ಯ ಆಯ್ಕೆಯನ್ನು ಮಾಡಿರುತ್ತಾರೆ. ಜ್ಯಾಕ್ ರೆಡ್ಫರ್ಡ್ ಹೀಗೆ ಹೇಳುವ ಮೂಲಕ ಸಮಾಪ್ತಿಗೊಳಿಸಿದರು: “ಮಿಷನೆರಿ ಸೇವೆಗೆ ತುಲನೆಯಾಗುವ ಯಾವುದನ್ನೂ ಪಿಶಾಚನ ಲೋಕವು ನಿಮಗೆ ನೀಡಲಾರದು. ಆ ಅಮೂಲ್ಯ ಸುಯೋಗವನ್ನು ಪರಿಪಾಲಿಸಿರಿ, ಮತ್ತು ಲೋಕವು ಅದರ ಕಚಡ ವನ್ನು ಪರಿಪಾಲಿಸಲಿ!”
ಕಳೆದ 32 ವರ್ಷಗಳಿಂದ, ಯುಲಿಸೀಜ್ ಗ್ಲಾಸ್, ಒಬ್ಬ ಗಿಲ್ಯಾದ್ ಉಪದೇಶಕರಾಗಿದ್ದಾರೆ. ಅವರು ತನ್ನ ಭಾಷಣವನ್ನು ಕೀರ್ತನೆ 1:3 ರ ಮೇಲೆ ಆಧಾರಿಸುತ್ತಾ, “ದೇವರು ಮಾತ್ರವೇ ಒಂದು ಮರವನ್ನು ಮಾಡಶಕ್ತನು” ಎಂಬ ಮುಖ್ಯ ವಿಷಯದೊಂದಿಗೆ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಕೆಲವು ಬುದ್ಧಿವಾದವನ್ನು ಕೊಟ್ಟರು. ದೇವರಿಂದ ರಚಿಸಲ್ಪಟ್ಟ ಒಂದು ಮರದ ರಚನೆಯನ್ನು ಆಧುನಿಕ ತಂತ್ರಕಲೆಯೆಂದೂ ಸ್ಪರ್ಧಿಸಶಕ್ತವಾಗಿಲ್ಲ. ಒಂದು ರೀತಿಯಲ್ಲಿ, ನಿಜ ಕ್ರೈಸ್ತರು ಯೆಹೋವನಿಂದ ನೆಡಲ್ಪಟ್ಟ ಮತ್ತು ನೀರುಹಾಯಿಸಲ್ಪಟ್ಟ ಮರಗಳಂತಿದ್ದಾರೆ. ಐದು ತಿಂಗಳುಗಳಿಂದ ವಿದ್ಯಾರ್ಥಿಗಳು, ಆತ್ಮಿಕ ತೋಪಿನ ಅಥವಾ ಪ್ರಮೋದವನದ ಮರಗಳಂತೆ “ದೇವರ ವಾಕ್ಯದಲ್ಲಿನ ಜೀವದಾಯಕ ನೀರುಗಳ ಒರತೆಯಿಂದ ಕ್ರಮವಾಗಿ ನೀರು ಹಾಯಿಸಲ್ಪಟ್ಟಿದ್ದಾರೆ,” ಎಂದು ಸಹೋದರ ಗ್ಲಾಸ್ ಗಮನಿಸಿದರು. ಆದರೂ, ಮಿಷನೆರಿಗಳೋಪಾದಿ ಅವರು, “ಯಾವುದೇ ಹಾನಿಯ ವಿರುದ್ಧವಾಗಿ ತಮ್ಮ ಆತ್ಮಿಕ ಬೇರುವ್ಯೂಹವನ್ನು” ಕಾದುಕೊಳ್ಳಬೇಕಾಗಿದೆ. ‘ಯೆಹೋವನಿಂದ ಬರುವ ಜೀವದಾಯಕ ನೀರನ್ನು ಕುಡಿಯುತ್ತಾ ಮುಂದರಿಯಿರಿ ಯಾಕಂದರೆ ಯೆಹೋವನು ಮಾತ್ರವೇ ಒಂದು ಮರವನ್ನು ಮಾಡಶಕ್ತನು’ ಎಂದು ಅವರು ಪ್ರಬೋಧಿಸಲ್ಪಟ್ಟರು.
ಕೊನೆಯ ಭಾಷಣವು ಆಡಳಿತ ಮಂಡಲಿಯ ಒಬ್ಬ ಸದಸ್ಯರಾದ ಕ್ಯಾರಿ ಬಾರ್ಬರ್ರಿಂದ ಕೊಡಲ್ಪಟ್ಟಿತು. ಪೂರ್ಣ ಸಮಯದ ಸೇವೆಯಲ್ಲಿ 70 ವರ್ಷಗಳನ್ನು ಕಳೆದ ಸಹೋದರ ಬಾರ್ಬರ್, “ಯೆಹೋವನಿಗೆ ಸಂಪೂರ್ಣ ಭಕ್ತಿಯನ್ನು ಸಲ್ಲಿಸಿರಿ” ಎಂಬ ವಿಷಯದ ಮೇಲೆ ಭರವಸೆಯಿಂದ ಮಾತಾಡಶಕ್ತರಾಗಿದ್ದರು. ಮಾನವ ಕುಲದ ವಿಶಾಲ ಜನಸಮೂಹವು ಯೆಹೋವನಿಗೆ ಸಂಪೂರ್ಣ ಭಕ್ತಿಯನ್ನು ಸಲ್ಲಿಸಿರುವುದಿಲ್ಲ. (ಧರ್ಮೋಪದೇಶಕಾಂಡ 5:9) ಆದರೂ, ಸಹೋದರ ಬಾರ್ಬರ್ ಸೂಚಿಸಿದ ಪ್ರಕಾರ, ನಮ್ಮ ಅಸಂಪೂರ್ಣತೆಯ ಮಧ್ಯೆಯೂ, “ದೇವರಿಗೆ ಪೂರ್ಣ ಭಕ್ತಿಯನ್ನು ತೋರಿಸುವವರಾಗಿರುವುದು ತೀರ ಶಕ್ಯ.” ಅವರು ಕೂಡಿಸಿದ್ದು: “‘ ನಾನು ಅದನ್ನು ಮಾಡುವಂತೆ ಮಾಡಿದ್ದು ಪಿಶಾಚನು’ ಎಂದು ಯಾರೊಬ್ಬನೂ ನಿಜವಾಗಿ ಹೇಳಶಕ್ತನಲ್ಲ.” ಆದರೆ ನಾವು ಅವನನ್ನು ವಿರೋಧಿಸಲು ತಪ್ಪಿದರೆ ಪಿಶಾಚನು ನಮ್ಮನ್ನು ಸೋಲಿಸಬಲ್ಲನು. (ಯಾಕೋಬ 4:7) ಸೈತಾನನನ್ನು ಮತ್ತು ಅವನ ಲೋಕವನ್ನು ವಿರೋಧಿಸುವ ಮತ್ತು ಯೆಹೋವನಿಗೆ ಸಂಪೂರ್ಣ ಭಕ್ತಿಯನ್ನು ಕೊಡುವ ಪ್ರಾಮುಖ್ಯ ವಿಧಾನವು ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದೇ ಆಗಿದೆ.
ಮಿಷನೆರಿಗಳಾಗಿ ನೇಮಕಹೊಂದಿದ್ದು
ಎಲ್ಲಾ 46 ವಿದ್ಯಾರ್ಥಿಗಳು ಮಿಷನೆರಿಗಳಾಗಿ ಅಧಿಕೃತ ನೇಮಕ ಹೊಂದುವುದರೊಂದಿಗೆ ಮುಂಜಾನೆಯ ಕಾರ್ಯಕ್ರಮವು ಮುಕ್ತಾಯವಾಯಿತು. “ಎಲ್ಲಾ ಜನರ ನಡುವೆ ಸುಚಿತ್ತವನ್ನು ಪ್ರವರ್ಧಿಸುತ್ತಾ, ಶಾಶ್ವತ ಶಾಂತಿಯ ಪರವಾಗಿ ಮತ್ತು ಪರಿಪೂರ್ಣ ನಿಯಮ ಮತ್ತು ನೀತಿಯ ಪರವಾಗಿ ಕಾರ್ಯನಡಿಸುವ ಶೈಕ್ಷಣಿಕ ಕಾರ್ಯದಲ್ಲಿ ಭಾಗವಹಿಸಲು ವಿಶೇಷ ಯೋಗ್ಯತೆ ಪಡೆದವ” ರೆಂದು ಅಂಶಿಕವಾಗಿ ತಿಳಿಸಿದ ಪ್ರಶಸ್ತಿಪತ್ರವನ್ನು 23 ದಂಪತಿಗಳು ಪಡೆದರು. ನೇಮಕವನ್ನು ಪಡೆದ 18 ದೇಶಗಳಲ್ಲಿ ಈ ಉದಾತ್ತ ನಿಯೋಗವನ್ನು ಪೂರೈಸಲು ಗಿಲ್ಯಾದಿನ ಈ 95 ನೆಯ ತರಗತಿಯು ಖಂಡಿತವಾಗಿಯೂ ಪ್ರಯತ್ನವನ್ನು ಮಾಡಲಿರುವುದು. ನೇಮಕಗಳು ಲೋಕ ವ್ಯಾಪಕವಾಗಿದ್ದು ಏಷ್ಯಾ, ಆಫ್ರಿಕ, ಯೂರೋಪ್, ಲ್ಯಾಟಿನ್ ಅಮೆರಿಕ, ಮತ್ತು ಕ್ಯಾರಿಬಿಯನ್ ದೇಶಗಳನ್ನೊಳಗೊಂಡಿವೆ.
ಅಪರಾಹ್ನದಲ್ಲಿ, ಸರ್ವಿಸ್ ಡಿಪಾರ್ಟ್ಮೆಂಟ್ ಕಮಿಟಿಯ ಚಾರ್ಲ್ಸ್ ವುಡಿಯವರಿಂದ ನಡಿಸಲ್ಪಟ್ಟ ಸಂಕ್ಷಿಪ್ತ ಕಾವಲಿನಬುರುಜು ಅಭ್ಯಾಸದ ಅನಂತರ, ಹೊಸ ಗಿಲ್ಯಾದ್ ಪದವೀಧರರು, “ಗಿಲ್ಯಾದ್ ನಮ್ಮನ್ನು ಮಿಷನೆರಿಗಳಾಗಿ ಕಲಿಸಲು ತಯಾರಿಸಿಯದೆ” ಎಂಬ ಮುಖ್ಯ ವಿಷಯದೊಂದಿಗೆ ತಮ್ಮ ವಿದ್ಯಾರ್ಥಿ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮವು “ನಮ್ಮನ್ನು ಎದುರಿಸುವ ಆಯ್ಕೆಗಳು” ಎಂಬ ಡ್ರಾಮಾದೊಂದಿಗೆ ಕೊನೆಗೊಂಡಿತು.
ಈ ಹುರಿದುಂಬಿಸುವ ಕಾರ್ಯಕ್ರಮದ ಅನಂತರ, ಹೊಸ ಮಿಷನೆರಿಗಳು “ಅತಿಪರಿಶುದ್ಧವಾದ ನಂಬಿಕೆ” ಯಲ್ಲಿ ಇತರರೊಂದಿಗೆ ಪಾಲಿಗರಾಗಲು ಭೂಮಿಯ ನಾಲ್ಕೂ ಮೂಲೆಗಳಿಗೆ ಕಳುಹಿಸಲ್ಪಡಲು ಈಗ ತಯಾರಾಗಿ ನಿಂತಿರುತ್ತಾರೆ.
[ಪುಟ 26 ರಲ್ಲಿರುವ ಚೌಕ]
ತರಗತಿ ಸಂಖ್ಯಾಸಂಗ್ರಹಣಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 7
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 18
ವಿದ್ಯಾರ್ಥಿಗಳ ಸಂಖ್ಯೆ: 46
ವಿವಾಹಿತ ದಂಪತಿಗಳ ಸಂಖ್ಯೆ: 23
ಸರಾಸರಿ ಪ್ರಾಯ: 30.06
ಸತ್ಯದಲ್ಲಿ ಸರಾಸರಿ ವರ್ಷಗಳು: 12.92
ಪೂರ್ಣ-ಸಮಯ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 9.4
[ಪುಟ 26 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ ಪದವಿ ಪಡೆದ 95 ನೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಲೆಕ್ಕಿಸಲ್ಪಟ್ಟಿವೆ, ಮತ್ತು ಹೆಸರುಗಳು ಪ್ರತಿಯೊಂದು ಸಾಲಿನಲ್ಲಿ ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಬ್ಯೂಲೊ, ಡಿ.; ಡಾನ್ಜೆ, ವಿ.; ಇನೆಸ್, ಎಸ್.; ಫಲ್ಕ್, ಎನ್.; ಬಿಲಿಂಗ್ಸ್ಬಿ, ಎಮ್.; ಹಾಡ್ನಾಟ್, ಎಲ್.; ನ್ಯೂಗ್ರೆನ್, ಬಿ.; ಎರಿಕ್ಸನ್, ಎಲ್. (2) ಬೋಕರ್, ಜೆ.; ಥಾಮಸ್, ಎಮ್.; ಸ್ಟೆಡ್ಮೆನ್, ಎಸ್.; ಬಿಲಿಂಗ್ಸ್ಬಿ, ಡಿ.; ವಾ, ಐ.; ಪರ್ವಿಸ್, ಎಮ್.; ಲೆಟ್ರೆಲ್, ಎಮ್. (3) ಯಾಕಾಬ್ಸನ್, ಟಿ.; ಬೋಕರ್, ಜೆ.; ಮಾರ್ಟೀನೆಜ್, ಎಲ್.; ನೀಲ್ಸನ್, ಇ.; ಪರ್ವಿಸ್, ಪಿ.; ಹೋಲ್ಟ್, ಎಲ್.; ಲಾರ್ಸನ್, ಎಮ್.; ಜೋನ್ಸ್, ಎಲ್.; ನೂಮೀನನ್, ಪಿ.; ನೂಮೀನನ್, ಎಚ್.; ಬ್ಯೂಲೊ, ಎಮ್.; ಓಲ್ಸನ್, ಡಬ್ಲ್ಯೂ.; ಹೋಲ್ಟ್, ಎಸ್.; ಡಾನ್ಜೆ, ಜಿ.; ಡೇಜಾರ್ಡೆನ್, ಸಿ.; ಡೇಜಾರ್ಡೆನ್, ಡಿ. (5) ಲಾರ್ಸನ್, ಕೆ.; ಮಾರ್ಟೀನೆಜ್, ಡಿ.; ನ್ಯೂಗ್ರೆನ್, ಪಿ.; ವಾ, ಪಿ.; ಜೋನ್ಸ್, ಡಿ.; ಹಾಡ್ನಾಟ್, ಜೆ.; ಥಾಮಸ್, ಜಿ. (6) ಇನೆಸ್, ಬಿ.; ಫಲ್ಕ್, ಆರ್.; ಎರಿಕ್ಸನ್, ಎ.; ನೀಲ್ಸನ್, ಎಸ್.; ಸ್ಟೆಡ್ಮೆನ್, ಜೆ.; ಓಲ್ಸನ್, ಕೆ.; ಯಾಕಾಬ್ಸನ್, ಎಫ್.; ಲೆಟ್ರೆಲ್, ಜೆ.