ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w93 4/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1993
  • ಅನುರೂಪ ಮಾಹಿತಿ
  • ಆದರ್ಶಪ್ರಾಯವಾದ ಪರಿಹಾರವನ್ನು ಕಂಡುಕೊಳ್ಳುವುದು
    ಎಚ್ಚರ!—1996
  • ಮಾಲಿನ್ಯತೆಯನ್ನು ನಿರ್ಮೂಲಗೊಳಿಸುವುದು ಹೃದಯ ಮತ್ತು ಮನಸ್ಸಿನೊಳಗಿಂದ
    ಕಾವಲಿನಬುರುಜು—1993
  • ದೇವರು ಶುದ್ಧ ಜನರನ್ನು ಪ್ರೀತಿಸುತ್ತಾನೆ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ಮಾಲಿನ್ಯತೆ ಆದರ ಕಾರಣ ಯಾರು?
    ಎಚ್ಚರ!—1991
ಕಾವಲಿನಬುರುಜು—1993
w93 4/1 ಪು. 31

ವಾಚಕರಿಂದ ಪ್ರಶ್ನೆಗಳು

ನಮ್ಮ ಪರಿಸರದ—ನೆಲ, ಸಮುದ್ರ, ಮತ್ತು ವಾಯು—ಮಾಲಿನ್ಯವನ್ನು ನಿಧಾನಿಸುವುದರಲ್ಲಿ ಕ್ರೈಸ್ತರಿಗೆ ಯಾವ ಜವಾಬ್ದಾರಿ ಇದೆ?

ಯೆಹೋವನ ಸಾಕ್ಷಿಗಳೋಪಾದಿ, ನಮ್ಮ ಐಹಿಕ ಗೃಹವನ್ನು ಈಗ ಬಾಧಿಸುತ್ತಿರುವ ಅನೇಕ ಜೀವಿಪರಿಸ್ಥಿತಿಶಾಸ್ತ್ರೀಯ ಸಮಸ್ಯೆಗಳೊಂದಿಗೆ ನಾವು ಆಳವಾದ ಚಿಂತೆಯುಳ್ಳವರಾಗಿದ್ದೇವೆ. ಅಧಿಕಾಂಶ ಜನರಿಗಿಂತಲೂ ಹೆಚ್ಚಾಗಿ, ಈ ಭೂಮಿಯು ಪರಿಪೂರ್ಣ ಮಾನವ ಕುಟುಂಬಕ್ಕೆ ಒಂದು ಪರಿಶುದ್ಧವಾದ, ಆರೋಗ್ಯಕರ ಬೀಡಾಗಿ ಇರುವಂತೆ ಸೃಷ್ಟಿಸಲ್ಪಟ್ಟಿತು ಎಂಬುದನ್ನು ನಾವು ಗಣ್ಯಮಾಡುತ್ತೇವೆ. (ಆದಿಕಾಂಡ 1:31; 2:15-17; ಯೆಶಾಯ 45:18) ಅವನು “ಲೋಕನಾಶಕರನ್ನು ನಾಶಮಾಡು”ವ ದೇವರ ಆಶ್ವಾಸನೆಯು ಕೂಡ ನಮಗಿದೆ. (ಪ್ರಕಟನೆ 11:18) ಆದಕಾರಣ, ನಮ್ಮ ಭೂಗೋಲದ ಮುಂದರಿಯುತ್ತಿರುವ ಮಾನವನ ಹಾಳುಗೆಡುವಿಕೆಗೆ ಅನಾವಶ್ಯಕವಾಗಿ ಕೂಡಿಸುವುದನ್ನು ಹೋಗಲಾಡಿಸಲು ನಾವು ಸಮತೂಕದ, ಸಮಂಜಸವಾದ ಪ್ರಯತ್ನಗಳನ್ನು ಮಾಡುವುದು ಯುಕ್ತವಾಗಿದೆ. ಆದರೂ “ಸಮಂಜಸ” ಶಬ್ದವನ್ನು ಗಮನಿಸಿರಿ. ಜೀವಿಪರಿಸ್ಥಿತಿಶಾಸ್ತ್ರೀಯ ವಿವಾದಾಂಶಗಳು ಮತ್ತು ಆಚರಣೆಗಳು ನಮ್ಮನ್ನು ಜಜ್ಜಿಬಿಡುವ ವ್ಯಾಕುಲತೆಗಳಾಗಲು ಅನುಮತಿಸುವುದರ ವಿರುದ್ಧ ಕಾದುಕೊಳ್ಳುವದು ಕೂಡ ಶಾಸ್ತ್ರೀಯವಾಗಿ ಯುಕ್ತವಾಗಿದೆ.

ಸಾಮಾನ್ಯ ಮಾನವ ಜೀವಿಸುವಿಕೆಯು ಸಹ ಕಚಡಗಳನ್ನು ಉತ್ಪಾದಿಸುತ್ತದೆ. ಉದಾಹರಣೆಗೆ, ಆಹಾರ ಉತ್ಪಾದನೆಗಳ ಬೆಳೆಸುವಿಕೆ, ಪರಿಷ್ಕರಿಸುವಿಕೆ, ಮತ್ತು ತಿನ್ನುವಿಕೆಯು ಕೆಲವೊಮ್ಮೆ ಕಚಡದ ವೃದ್ಧಿಗೆ,—ಅದರಲ್ಲಿ ಹೆಚ್ಚಿನದ್ದು ಜೈವಿಕವಿಘಟನೀಯವಾಗುವ ಸಾಧ್ಯತೆಯಿದ್ದರೂ—ಕಾರಣವಾಗುತ್ತದೆ. (ಕೀರ್ತನೆ 1:4; ಲೂಕ 3:17) ತನ್ನ ಶಿಷ್ಯರಿಗಾಗಿ ಪುನರುತಿಥ್ತ ಯೇಸುವು ಮಾಡಿದ ಸುಟ್ಟ ಮೀನಿನ ಊಟವು ಪ್ರಾಯಶಃ ಸ್ವಲ್ಪ ಹೊಗೆ, ಬೂದಿ, ಮತ್ತು ಮೀನಿನ ಎಲುಬುಗಳನ್ನು ಫಲಿಸಿರಬೇಕು. (ಯೋಹಾನ 21:9-13) ಆದರೆ ಭೂಮಿಯ ಸಜೀವ ಮತ್ತು ನಿರ್ಜೀವ ವ್ಯವಸ್ಥೆಗಳು ಯಾ ಚಕ್ರಗಳು ಅಂತಹವುಗಳನ್ನು ಸಮನ್ವಯಗೊಳಿಸುವಂತೆ ರಚಿಸಲ್ಪಟ್ಟಿವೆ.

ದೇವರ ಜನರು ಜೀವಿಪರಿಸ್ಥಿತಿಶಾಸ್ತ್ರೀಯ ವಿಷಯಗಳ ಕುರಿತು ನಗಣ್ಯಭಾವದವರಾಗಿರಕೂಡದು. ಕಚಡಗಳನ್ನು ತೊಲಗಿಸಲು ತಕ್ಕೊಳ್ಳಬೇಕಾದ ಹೆಜ್ಜೆಗಳನ್ನು, ಜೀವಿಪರಿಸ್ಥಿತಿಶಾಸ್ತ್ರೀಯ ಹಾಗೂ ನೈರ್ಮಲ್ಯಸಂಬಂಧವಾದ ಪ್ರಾಮುಖ್ಯತೆಯಿರುವ ಹೆಜ್ಜೆಗಳನ್ನು ತನ್ನ ಪ್ರಾಚೀನ ಜನರಿಂದ ಯೆಹೋವನು ಅಪೇಕ್ಷಿಸಿದ್ದನು. (ಧರ್ಮೋಪದೇಶಕಾಂಡ 23:9-14) ಮತ್ತು ಭೂಮಿಯನ್ನು ವಿನಾಶಗೊಳಿಸುವವರ ಕಡೆಗೆ ಅವನ ದೃಷ್ಟಿಯನ್ನು ನಾವು ತಿಳಿದಿರುವುದರಿಂದ, ಪರಿಸರವನ್ನು ಶುಭ್ರವಾಗಿಡಲು ನಾವು ಮಾಡಸಾಧ್ಯವಿರುವ ವಿಷಯಗಳನ್ನು ಖಂಡಿತವಾಗಿಯೂ ನಾವು ಅಲಕ್ಷಿಸಬಾರದು. ಕಚಡಗಳನ್ನು ಯಾ ಹಿಪ್ಪೆಗಳನ್ನು, ವಿಶೇಷವಾಗಿ ವಿಷಕಾರಿ ಪದಾರ್ಥಗಳನ್ನು ಯೋಗ್ಯವಾಗಿ ತೊಲಗಿಸುವುದರ ವಿಷಯದಲ್ಲಿ ನಾವಿದನ್ನು ಪ್ರತಿಬಿಂಬಿಸಸಾಧ್ಯವಿದೆ. ಪುನರಾವರ್ತಿಸುವ ಚಕ್ರದ ಪ್ರಯತ್ನಗಳೊಂದಿಗೆ, ಅವುಗಳು ಒಂದು ವೇಳೆ ಕೈಸರನಿಂದ ಆಜ್ಞಾಪಿಸಲ್ಪಟ್ಟಿರುವುದಾದರೆ ಅದಕ್ಕೆ ಕೂಡಿಸಲ್ಪಟ್ಟಿರುವ ಕಾರಣದೊಂದಿಗೆ, ಪ್ರಜ್ಞಾಪೂರ್ವಕವಾಗಿ ಸಹಕರಿಸುವೆವು. (ರೋಮಾಪುರ 13:1, 5) ಮತ್ತು ಕೆಲವು ವ್ಯಕ್ತಿಗಳು ಹೆಚ್ಚಿನ ಹೆಜ್ಜೆಗಳನ್ನು, ಅಂದರೆ ಭೂಮಿಯ ಮೇಲೆ ಯಾ ಸಮುದ್ರಗಳ ಕೆಳಗೆ ಕಚಡಗಳ ಪರ್ವತಕ್ಕೆ ಕೂಡಿಸಬಹುದಾದವುಗಳ ಬದಲು ಜೈವಿಕವಿಘಟನೀಯವಾಗುವ ಉತ್ಪಾದನೆಗಳನ್ನು ಬಳಸಲು ಆಯ್ಕೆಮಾಡುವುದರ ಮೂಲಕ, ತೃಪ್ತಿಯನ್ನು ಪಡೆಯುತ್ತಾರೆ.

ಆದಾಗ್ಯೂ, ಕಾನೂನಿನ ಮೂಲಕ ಅಪೇಕ್ಷಿಸಲ್ಪಡದೆ ಇರುವುದಾದರೆ, ಈ ದಿಸೆಯಲ್ಲಿ ಎಷ್ಟು ದೂರದ ತನಕ ಕ್ರೈಸ್ತನು ಹೋಗುವನು ಎಂಬುದು ಒಂದು ವೈಯಕ್ತಿಕ ಸಂಗತಿಯಾಗಿದೆ. ಅಪರಿಪೂರ್ಣ ಮಾನವರು ಅತಿರೇಕವಾದಿಗಳಾಗುವ ಪಾಶದೊಳಗೆ ಅತಿ ಸುಲಭವಾಗಿ ಬೀಳುತ್ತಾರೆ ಎಂಬುದು ವಾರ್ತಾಮಾಧ್ಯಮಗಳಿಂದ ಸರಳವಾಗಿ ವಿದಿತವಾಗುತ್ತದೆ. ಯೇಸುವಿನ ಹಿತೋಕ್ತಿಯು ಖಂಡಿತವಾಗಿಯೂ ಸುಸಂಗತವಾಗಿದೆ. “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. . . . ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?” (ಮತ್ತಾಯ 7:1, 3) ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವದರಿಂದ, ಇತರ ಅತ್ಯಾವಶ್ಯಕ ಅಂಶಗಳ ನೋಟವನ್ನು ಕಳಕೊಳ್ಳದಂತೆ ನಮಗೆ ಸಹಾಯವಾಗಬಹುದು.

ಪ್ರವಾದಿ ಯೆರೆಮೀಯನು ಬರೆದದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಈ ಸೂತ್ರದ ಅಲಕ್ಷಿಸುವಿಕೆ ಮಾನವ ಕುಲವನ್ನು ಮುಖಾಮುಖಿಯಾಗಿ, 2 ತಿಮೊಥೆಯ 3:1-5, (NW) ರಲ್ಲಿ ಗಮನಿಸಲ್ಪಟ್ಟಂತೆ, “ವ್ಯವಹರಿಸಲು ಕಷ್ಟಕರವಾದ ಸಂಕಟದ ಸಮಯ”ಗಳಿಗೆ ತಂದಿದೆ. ಮತ್ತು ಮಾಲಿನ್ಯತೆಯ ಸಹಿತವಾಗಿ, ಅದರ ಪ್ರಧಾನ ಜೀವಿಪರಿಸ್ಥಿತಿಶಾಸ್ತ್ರೀಯ ಸಮಸ್ಯೆಗಳನ್ನು ನಿವಾರಿಸಲು ಮಾನವ ಪ್ರಯತ್ನಗಳು ಪೂರ್ಣವಾಗಿ ಯಶಸ್ವಿಗೊಳ್ಳುವುದಿಲ್ಲ ಎಂದು ಪ್ರಕಟನೆ 11:18 ರಲ್ಲಿ ದೇವರು ಏನನ್ನು ದಾಖಲಾತಿ ಮಾಡಿದ್ದಾನೋ ಅದು ರುಜುಪಡಿಸುತ್ತದೆ. ಅಲ್ಲಿ, ಇಲ್ಲಿ ಸ್ವಲ್ಪ ಪ್ರಗತಿ ಇರಬಹುದು, ಆದರೆ ಬಾಳುವ ಏಕಮಾತ್ರ ಪರಿಹಾರಕ್ಕೆ ದೇವರ ಹಸ್ತಕ್ಷೇಪದ ಜರೂರಿಯಿದೆ.

ಈ ಕಾರಣಕ್ಕೋಸ್ಕರ ನಾವು ಮೇಲುಮೇಲಿನ ಲಕ್ಷಣಗಳ ನಿವಾರಣೆಗೆ ಪ್ರಯತ್ನಿಸುವ ಬದಲು, ನಮ್ಮ ಪ್ರಯತ್ನ ಮತ್ತು ಸಾಧನ ಸಂಪತ್ತುಗಳನ್ನು ದೈವಿಕ ಪರಿಹಾರದ ಮೇಲೆ ಕೇಂದ್ರೀಕರಿಸುತ್ತೇವೆ. ಇದರಲ್ಲಿ ನಾವು ಯೇಸುವಿನ ಮಾದರಿಯನ್ನು ಅನುಸರಿಸುತ್ತೇವೆ, ಅವನು ತನ್ನ ಶುಶ್ರೂಷೆಯ ಅಧಿಕಾಂಶವನ್ನು ‘ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ’ ವ್ಯಯಿಸಿದನು. (ಯೋಹಾನ 18:37) ಲೋಕಕ್ಕೆ ಉಣಿಸುವ ಬದಲು ಯಾ ವ್ಯಾಪಕ ಪ್ರಮಾಣದ ಸಾಮಾಜಿಕ ಅವ್ಯವಸ್ಥೆಗಳನ್ನು—ಮಾಲಿನ್ಯ ಸಹಿತವಾಗಿ—ಪರಿಹರಿಸುವ ಬದಲು, ಯೇಸು ಮಾನವರನ್ನು ಬಾಧಿಸುವ ಸಮಸ್ಯೆಗಳ ಸಂಪೂರ್ಣ ಪರಿಹಾರದ ಕಡೆಗೆ ನಿರ್ದೇಶಿಸಿದನು.—ಯೋಹಾನ 6:10-15; 18:36.

ನೆಲ, ವಾತಾವರಣ, ಯಾ ನೀರಿನ ಪೂರೈಕೆಗಳನ್ನು ಅನಾವಶ್ಯಕವಾಗಿ ಮಾಲಿನ್ಯಗೊಳಿಸುವುದನ್ನು ಹೋಗಲಾಡಿಸಲು, ಜೊತೆ ಮಾನವರೆಡೆಗಿನ ನಮ್ಮ ಪ್ರೀತಿಯು ನಮ್ಮನ್ನು ನಡಿಸುವಾಗ, ಸತ್ಯಕ್ಕೋಸ್ಕರ ಸಾಕ್ಷಿಯನ್ನು ನೀಡುವುದನ್ನು ನಾವು ಮುಂದರಿಸುವೆವು. ಇದರಲ್ಲಿ ಬೈಬಲ್‌ ಸತ್ಯವನ್ನು ಅನ್ವಯಿಸಲು ಮತ್ತು ಆ ಮೂಲಕ ಹೊಗೆ, ಅತಿರೇಕ ಮದ್ಯಪಾನ, ಯಾ ಹಾನಿಕಾರಕ ಅಮಲೌಷಧಗಳಿಂದ ಅವರ ದೇಹಗಳನ್ನು ಹಾಳುಗೆಡಹುವುದನ್ನು ಹೋಗಲಾಡಿಸಲು ಜನರಿಗೆ ಕಲಿಸುವುದು ಸೇರಿರುತ್ತದೆ. ಲಕ್ಷಾಂತರ ಮಂದಿ ಹೊಸಬರು ಶಿಷ್ಯರಾಗುತ್ತಿದ್ದ ಹಾಗೆ, ಅವರು ನೈರ್ಮಲ್ಯತೆಯ ಹವ್ಯಾಸಗಳನ್ನು ಮತ್ತು ಇತರರ ಕಡೆಗೆ ಪರಿಗಣನೆಯನ್ನು ಕಲಿತಿದ್ದಾರೆ. ಆದುದರಿಂದ ಇಂದಿನ ಮಾಲಿನ್ಯದ ಸಾಮಾನ್ಯ ಸಮಸ್ಯೆಯನ್ನು ನಿಧಾನಿಸುವುದರಲ್ಲಿ ಸಾರುವ ಕಾರ್ಯವು ಅಕ್ಷರಾರ್ಥಕವಾಗಿ ನೆರವನ್ನಿತ್ತಿದೆ. ಆದರೆ ಇನ್ನೂ ಪ್ರಾಮುಖ್ಯವಾಗಿ, ದೇವರು ತನ್ನ ಸತ್ಯಾರಾಧಕರಿಗೆ ಶೀಘ್ರದಲ್ಲಿಯೇ ಒದಗಿಸುವ ಶುಭ್ರವಾದ ಪ್ರಮೋದವನವಾದ ಭೂಮಿಯೊಳಗೆ ಅವರು ಹೊಂದಿಕೊಳ್ಳಲು ಆಗುವಂತೆ, ಕ್ರೈಸ್ತ ಶಿಷ್ಯರು ಈಗ ಅವರ ವ್ಯಕ್ತಿತ್ವವನ್ನು ಮತ್ತು ಹವ್ಯಾಸಗಳನ್ನು ಬದಲಾಯಿಸಿಕೊಳ್ಳಲು ಹೆಣಗಾಡುತ್ತಾರೆ. (w93 1⁄1)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ