ರಹಾಬ್—ನಂಬಿಕೆಯ ಕ್ರಿಯೆಗಳಿಂದ ನೀತಿವಂತಳಾಗಿ ನಿರ್ಣಯಿಸಲ್ಪಟ್ಟಳು
ತುಸು ಊಹಿಸಿಕೊಳ್ಳಿರಿ! ಒಬ್ಬ ವೇಶ್ಯೆಯು ದೇವರ ದೃಷ್ಟಿಕೋನದಿಂದ ನೀತಿವಂತಳಾಗಿ ನಿರ್ಣಯಿಸಲ್ಪಟ್ಟದ್ದನ್ನು. “ಎಂದಿಗೂ ಸಾಧ್ಯವಿಲ್ಲ!” ಎಂದು ಅನೇಕರು ಉದ್ಗರಿಸಾರು. ಆದರೂ, ಪುರಾತನ ಕಾನಾನ್ಯ ಪಟ್ಟಣವಾದ ಯೆರಿಕೋವಿನ ವೇಶ್ಯೆ ರಹಾಬಳಿಗೆ ಸಂಭವಿಸಿದ್ದು ಅದೇ.
ಬೈಬಲ್ ಲೇಖಕ ಯಾಕೋಬನು ದಾಖಲಿಸಿದ್ದು: “ಮನುಷ್ಯನು ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೇ ಹೊರತು ಬರೀ ನಂಬಿಕೆಯಿಂದಲವ್ಲೆಂದು ನೋಡುತ್ತೀರಿ. ಅದೇ ರೀತಿಯಾಗಿ ಸೂಳೆಯಾದ ರಹಾಬಳು ಗೂಢಚಾರರನ್ನು ಮನೆಯಲ್ಲಿ ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಕಳುಹಿಸಿದರ್ದಲ್ಲಿ ಕ್ರಿಯೆಗಳಿಂದಲೇ ನೀತಿವಂತಳೆಂಬ ನಿರ್ಣಯವನ್ನು ಹೊಂದಿದ್ದಾಳಲ್ಲವೇ. ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.” (ಯಾಕೋಬ 2:24-26) ರಹಾಬಳು ನೀತಿವಂತಳೆಂಬ ನಿರ್ಣಯವನ್ನು ಹೊಂದಿದ್ದೇಕೆ? ದೇವರೊಂದಿಗೆ ಅಂಥ ಒಂದು ಸುಯೋಗದ ನಿಲುವು ಅನುಗ್ರಹಿಸಲ್ಪಡಲಿಕ್ಕಾಗಿ ಆಕೆ ಮಾಡಿದ್ದೇನು?
ಇಸ್ರಾಯೇಲ್ಯರು ಬರುತ್ತಿದ್ದಾರೆ!
ನಾವು ಸಾ.ಶ.ಪೂ. 1473ರ ವರ್ಷಕ್ಕೆ ಹಿಂತಿರುಗೋಣ. ಹಿನ್ನೆಲೆಯನ್ನು ಕಣ್ಣಮುಂದೆ ಚಿತ್ರಿಸಿಕೊಳ್ಳಿರಿ. ಯೆರಿಕೋ ಬಲವಾದ ಕೋಟೆಕೊತ್ತಳಗಳಿಂದ ಭದ್ರವಾಗಿದೆ. ಊರುಗೋಡೆಯ ಮೇಲೆ ಸೂಳೆ ರಹಾಬಳ ಮನೆ ನೆಲೆಸಿದೆ. ಈ ಅನುಕೂಲ ಸ್ಥಳದಿಂದ ಅವಳು, ಪೂರ್ವಾಭಿಮುಖವಾಗಿ ಯೊರ್ದನ್ ಹೊಳೆಯ ದಡಮೀರಿ ಹರಿಯುವ ನೀರನ್ನು ನೋಡಶಕ್ತಳಾಗಿರುವದು ಸಂಭವನೀಯ. (ಯೆಹೋಶುವ 3:15) ಅದರ ಪೂರ್ವ ತೀರದಲ್ಲಿ 6,00,000 ಕ್ಕಿಂತಲೂ ಹೆಚ್ಚು ಸೇನಾ ಬಲದೊಂದಿಗೆ ಇಸ್ರಾಯೇಲ್ಯರು ಪಾಳೆಯ ಮಾಡಿರುವದನ್ನು ಅಕೆ ಅವಲೋಕಿಸಲೂಬಹುದು. ಅವರು ಕೇವಲ ಕೆಲವೇ ಕಿಲೊಮೀಟರ್ ದೂರದಲ್ಲಿದ್ದಾರೆ!
ಯುದ್ಧದಲ್ಲಿ ಇಸ್ರಾಯೇಲ್ಯರ ವೀರಕೃತ್ಯಗಳ ಕುರಿತು ರಹಾಬ್ ಕೇಳಿದ್ದಳು. ಯೆಹೋವನ ಮಹಾ ಶಕ್ತಿಯ ಪ್ರದರ್ಶನಗಳ ಕುರಿತು, ವಿಶೇಷವಾಗಿ ಕೆಂಪು ಸಮುದ್ರದ ಮೂಲಕ ಇಸ್ರಾಯೇಲ್ಯರಿಗಾಗಿ ಪಲಾಯನ ದಾರಿಯನ್ನು ತೆರೆದುದರ ಕುರಿತು ಸಹ ಆಕೆ ಕೇಳಿದ್ದಳು. ಹೀಗಿರಲಾಗಿ, ಉಕ್ಕಿಹರಿಯುತ್ತಿದ್ದ ಯೊರ್ದನ್ ಹೊಳೆಯ ನೀರು ಯಾವ ತಡೆಗಟ್ಟೂ ಆಗಿರದು ನಿಶ್ಚಯ. ಇದೊಂದು ಸಂದುಕಟ್ಟಿನ ಸಮಯ! ರಹಾಬಳು ಹೇಗೆ ಪ್ರತಿಕ್ರಿಯಿಸುವಳು?
ರಹಾಬ್ ತನ್ನ ನಿಲುವನ್ನು ತಕ್ಕೊಳ್ಳುತ್ತಾಳೆ
ತಡವಿಲ್ಲದೆ, ರಹಾಬಳು ಇಬ್ಬರು ಅನಿರೀಕ್ಷಿತ ಸಂದರ್ಶಕರನ್ನು—ಇಸ್ರಾಯೇಲ್ಯ ಪಾಳೆಯದ ಗೂಢಚಾರರನ್ನು ಎದುರುಗೊಳ್ಳುತ್ತಾಳೆ. ಅವರು ಉಳುಕೊಳ್ಳಲು ಸ್ಥಳ ಹುಡುಕುತ್ತಾರೆ, ಮತ್ತು ಅವಳು ಅವರನ್ನು ತನ್ನ ಮನೆಯೊಳಗೆ ಸೇರಿಸಿಕೊಳ್ಳುತ್ತಾಳೆ. ಆದರೆ ಅವರು ಬಂದಿರುವ ಸುದ್ದಿಯು ಯೆರಿಕೋವಿನ ಅರಸನಿಗೆ ಮುಟ್ಟುತ್ತದೆ. ಅವರನ್ನು ಕೈದು ಮಾಡಲು ಅರಸನು ಬೇಗನೆ ತನ್ನ ನಿಯಮ ವಿಧಾಯಕ ಅಧಿಕಾರಿಗಳನ್ನು ಕಳುಹಿಸುತ್ತಾನೆ.—ಯೆಹೋಶುವ 2:1, 2.
ಅರಸನ ಆಳುಗಳು ಬರುವುದರೊಳಗೆ, ರಹಾಬಳು ಯೆಹೋವ ದೇವರಿಗಾಗಿ ತನ್ನ ನಿಲುವನ್ನು ತಕ್ಕೊಂಡಿದ್ದಳು. “ನಿನ್ನ ಮನೆಯಲ್ಲಿಳುಕೊಂಡಿರುವ ಮನುಷ್ಯರನ್ನು ತಂದೊಪ್ಪಿಸು” ಎಂದು ನಿರ್ಬಂಧಿಸಿದರು ಅರಸನ ಆಳುಗಳು. ರಹಾಬಳು ಗೂಢಚಾರರನ್ನು ಮಾಳಿಗೆಯ ಮೇಲೆ ಒಣಗಲು ಹಾಕಿದ್ದ ಅಗಸೆ ಕಾಂಡಗಳ ಹೊರೆಗಳಲ್ಲಿ ಅಡಗಿಸಿಟಿದ್ಟಳ್ದು. ಅವಳನ್ನುವುದು: “ಆ ಮನುಷ್ಯರು ನನ್ನ ಬಳಿಗೆ ಬಂದದ್ದು ನಿಜ; ಅವರು ಎಲ್ಲಿಯವರೆಂದು ನನಗೆ ಗೊತ್ತಿದ್ದಿಲ್ಲ. ಊರುಬಾಗಲನ್ನು ಮುಚ್ಚುವ ಹೊತ್ತಿನಲ್ಲಿ ಕತ್ತಲೊಳಗೆ ಹೊರಟುಹೋದರು. ಎಲ್ಲಿಗೆ ಹೋದರೆಂಬದೂ ಗೊತ್ತಿಲ್ಲ. ಬೇಗನೆ ಅವರನ್ನು ಬೆನ್ನಟ್ಟಿರಿ; ನಿಮಗೆ ಸಿಕ್ಕಾರು.” (ಯೆಹೋಶುವ 2:3-5) ಅರಸನ ಆಳುಗಳು ಹಾಗೆಯೇ ಮಾಡುತ್ತಾರೆ—ಆದರೆ ನಿಷ್ಫಲ.
ರಹಾಬಳು ಶತ್ರುಗಳ ದಾರಿತಪ್ಪಿಸಿಬಿಟ್ಟಳು. ಯೆಹೋವನಲ್ಲಿ ತನ್ನ ನಂಬಿಕೆಯನ್ನು ಕ್ರಿಯೆಯಲ್ಲಿ ಪ್ರದರ್ಶಿಸಲು ಅವಳು ಆ ಕೂಡಲೆ ಅಧಿಕ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾಳೆ. ಆಕೆ ಮಾಳಿಗೆಯ ಮೇಲೆ ಹತ್ತಿ, ಗೂಢಚಾರರಿಗೆ ಅನ್ನುವುದು: “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿರುವದನ್ನು ಬಲ್ಲೆನು.” ದೇಶದ ನಿವಾಸಿಗಳೆಲ್ಲಾ ಭಯಭೀತರಾಗಿದ್ದಾರೆಂದು ರಹಾಬಳು ಒಪ್ಪಿಕೊಳ್ಳುತ್ತಾಳೆ ಯಾಕಂದರೆ ನಾಲ್ವತ್ತು ವರ್ಷಗಳ ಹಿಂದೆ ಇಸ್ರಾಯೇಲ್ಯರ ಮುಂದೆ ದೇವರು “ಕೆಂಪು ಸಮುದ್ರವನ್ನು ಬತ್ತಿಸಿಬಿಟ್ಟದ್ದನ್ನು” ಅವರು ಕೇಳಿದ್ದರು. ಅಮೋರಿಯರ ಅರಸರಿಬ್ಬರನ್ನು ಇಸ್ರಾಯೇಲ್ಯರು ನಿರ್ಮೂಲ ಮಾಡಿದ್ದು ಸಹ ಜನರಿಗೆ ಗೊತ್ತಿದೆ. ಅದನ್ನು “ಕೇಳಿ ನಮ್ಮ ಎದೆಯೊಡೆದು ಹೋಯಿತು; ನಿಮ್ಮನ್ನು ಎದುರಿಸುವ ಧೈರ್ಯವು ಒಬ್ಬನಲ್ಲಿಯೂ ಇಲ್ಲ. ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು,” ಅನ್ನುತ್ತಾಳೆ ರಹಾಬಳು.—ಯೆಹೋಶುವ 2:8-11.
ರಹಾಬ್ ಬೇಡಿಕೊಳ್ಳುತ್ತಾಳೆ: “ಆದದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತು ಕೊಟ್ಟು ನಾನು ನಿಮಗೆ ದಯೆತೋರಿಸಿದಂತೆ ನೀವೂ ನನ್ನ ತಂದೆಯ ಮನೆಯವರಿಗೆ ನನ್ನ ತಂದೆತಾಯಿಗಳನ್ನೂ ಸಹೋದರಸಹೋದರಿಯರನ್ನೂ ಅವರಿಗಿರುವದೆಲ್ಲವನ್ನೂ ನಾಶಮಾಡದೆ ಉಳಿಸುವದಾಗಿಯೂ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಬೇಕು.”—ಯೆಹೋಶುವ 2:12, 13.
ಆ ಮನುಷ್ಯರು ಒಪ್ಪುತ್ತಾರೆ ಮತ್ತು ಏನು ಮಾಡಬೇಕೆಂದು ರಹಾಬಳಿಗೆ ತಿಳಿಸುತ್ತಾರೆ. ಗೂಢಚಾರರನ್ನು ಯೆರಿಕೋ ಗೋಡೆಯ ಹೊರಗೆ ನೆಲಕ್ಕಿಳಿಸಲು ಉಪಯೊಗಿಸಿದ ಕೆಂಪು ದಾರವನ್ನು ಅವಳು ತನ್ನ ಕಿಟಿಕಿಯಿಂದ ತೂಗಹಾಕಬೇಕು. ಅವಳ ಕುಟುಂಬವನ್ನು ಅವಳು ತನ್ನ ಮನೆಯಲ್ಲಿ ಒಟ್ಟುಸೇರಿಸಬೇಕು, ಅವರು ಸಂರಕ್ಷಣೆಗಾಗಿ ಅಲ್ಲಿಯೇ ಉಳಿಯಬೇಕು. ಹೊರಟು ನಿಂತ ಗೂಢಚಾರರಿಗೆ ರಹಾಬಳು ದೇಶದ ವಿನ್ಯಾಸದ ಕುರಿತು ಸಹಾಯಕರ ಮಾಹಿತಿಯನ್ನು ಕೊಡುತ್ತಾಳೆ ಮತ್ತು ಅವರನ್ನು ಬೆನ್ನಟ್ಟುವವರನ್ನು ತಪ್ಪಿಸಿಕೊಳ್ಳುವ ವಿಧಾನವನ್ನು ಹೇಳಿಕೊಡುತ್ತಾಳೆ. ಗೂಢಚಾರರು ಹಾಗೆಯೇ ಮಾಡುತ್ತಾರೆ. ಕೆಂಪು ದಾರವನ್ನು ಪ್ರದರ್ಶಿಸಿದ ಅನಂತರ ಮತ್ತು ತನ್ನ ಮನೆವಾರ್ತೆಯ ಸದಸ್ಯರನ್ನು ಒಟ್ಟುಗೂಡಿಸಿದ ಮೇಲೆ, ರಹಾಬಳು ಅಧಿಕ ಬೆಳವಣಿಗೆಗಳಿಗಾಗಿ ಕಾಯುತ್ತಾಳೆ.—ಯೆಹೋಶುವ 2:14-24.
ರಹಾಬಳು ಮಾಡಿದ್ದೇನು? ಅವಳ ನಂಬಿಕೆಯು ಸರ್ವಶಕ್ತನಾದ ಯೆಹೋವ ದೇವರಲ್ಲೇ ನೆಲೆಸಿರುತ್ತದೆಂದು ಆಕೆ ರುಜುಪಡಿಸಿದಳಲ್ಲಾ! ಆತನ ಮಟ್ಟಗಳಿಂದಲೇ ಆಕೆ ಜೀವಿಸುವಳು. ಹೌದು, ಮತ್ತು ಅಂಥ ನಂಬಿಕೆಯ ಕ್ರಿಯೆಗಳಿಗಾಗಿ ನೀತಿವಂತಳೆಂಬ ನಿರ್ಣಯವನ್ನು ಹೊಂದಲಿರುವಳು.
ಕುಸಿದು ಬಿದ್ದವು ಗೋಡೆಗಳು
ಕೆಲವು ವಾರಗಳು ದಾಟುತ್ತವೆ. ಯಾಜಕರೊಂದಿಗೆ ಜತೆಗೂಡುತ್ತಾ—ಕೆಲವರು ಟಗರಿನ ಕೊಂಬುಗಳೊಂದಿಗೆ, ಇನ್ನು ಕೆಲವರು ಒಡಂಬಡಿಕೆಯ ಪವಿತ್ರ ಮಂಜೂಷದೊಂದಿಗೆ—ಇಸ್ರಾಯೇಲ್ಯ ಭಟರು ಯೆರಿಕೋವನ್ನು ಸುತ್ತುತ್ತಾರೆ. ಈಗ ಆರು ದಿನಗಳಿಂದ ದಿನಕ್ಕೊಮ್ಮೆ ಅವರಿದನ್ನು ಮಾಡುತ್ತಿದ್ದಾರೆ. ಆದರೆ, ಈ ಏಳನೆಯ ದಿನದಲ್ಲಿ, ಅವರು ಈವಾಗಲೇ ಪಟ್ಟಣವನ್ನು ಆರು ಸಾರಿ ಸುತ್ತಿ ಆಗಿಯದೆ. ಅವರು ಪುನಃ ಸುತ್ತಲು ಹೋಗುತ್ತಿದ್ದಾರೆ!
ಏಳನೆಯ ಸುತ್ತು ಮುಗಿಯಿತು, ಕೊಂಬುಗಳ ದೀರ್ಘವಾದ ಧ್ವನಿಗಳು ವಾತಾವರಣವನ್ನು ತುಂಬುತ್ತವೆ. ಇಸ್ರಾಯೇಲ್ಯರೀಗ ಮಹತ್ತರವಾಗಿ ಆರ್ಭಟಿಸುತ್ತಾರೆ. ಆಗ, ಯೆರಿಕೋವಿನ ಸಂರಕ್ಷಣಾ ಗೋಡೆಗಳು ಗಡಗಡನೆ ಗುಡುಗುತ್ತಾ ಕುಸಿದು ಬೀಳುವಂತೆ ಯೆಹೋವನು ಮಾಡುತ್ತಾನೆ. ರಹಾಬಳ ಮನೆಯನ್ನು ಆಧಾರಿಸಿರುವ ಭಾಗವು ಮಾತ್ರವೇ ಬೀಳದೆ ನಿಂತಿರುತ್ತದೆ. ಉಳಿದ ಪಟ್ಟಣವೂ ಅದರ ನಿವಾಸಿಗಳೂ ನಾಶವಾಗಿ ಹೋಗುತ್ತಾರೆ. ಅವಳ ನಂಬಿಕೆಯು ಕ್ರಿಯೆಗಳಿಂದ ರುಜುಪಡಿಸಿದ್ದಾಗಿ, ಆ ಪಶ್ಚಾತ್ತಾಪಿ ಸೂಳೆಯು ಅವಳ ಮನೆಯವರೊಂದಿಗೆ ಕಾಪಾಡಿ ಉಳಿಸಲ್ಪಟ್ಟಳು, ಮತ್ತು ಅವಳು ಯೆಹೋವನ ಜನರೊಂದಿಗೆ ವಾಸಿಸಲು ತೊಡಗುತ್ತಾಳೆ.—ಯೆಹೋಶುವ 6:1-25.
ರಹಾಬಳ ಗುಣಗಳೆಡೆಗೆ ಒಂದು ನೋಟ
ರಹಾಬಳು ಅತಿ ಲಾಲನೆಗೊಳಗಾದ ಸೋಮಾರಿ ಸ್ತ್ರೀಯಾಗಿರಲಿಲ್ಲ, ಯಾಕಂದರೆ ಅವಳ ಮಾಳಿಗೆಯ ಮೇಲೆ ಅಗಸೆ ಸಸ್ಯದ ಕಾಂಡಗಳು ಬಿಸಿಲಲ್ಲಿ ಒಣಗಿಸಲ್ಪಡುತ್ತಿದ್ದವು. ಅಗಸೆ ನಾರುಗಳು ನಾರುಬಟ್ಟೆಯನ್ನು ಮಾಡಲು ಉಪಯೋಗಿಸಲ್ಪಡುತ್ತವೆ. ರಹಾಬಳ ಮನೆಯಲ್ಲಿ ಕೆಂಪು ದಾರದ ಒಂದು ಸಂಗ್ರಹ ಕೂಡ ಇತ್ತು. (ಯೆಹೋಶುವ 2:6, 18) ಹೀಗೆ ನಾರುಬಟ್ಟೆಯ ಉತ್ಪಾದನೆಯಲ್ಲಿ ಅವಳು ತೊಡಗಿದ್ದಿರಬಹುದು ಮತ್ತು ರಂಗುಹಾಕುವ ಕಲೆಯು ಆಕೆಗೆ ತಿಳಿದಿದ್ದಿರಲೂಬಹುದು. ಹೌದು, ರಹಾಬಳು ಉದ್ಯೋಗಶೀಲ ಸ್ತ್ರೀಯಾಗಿದ್ದಳು. ಎಲ್ಲದಕ್ಕಿಂತಲೂ ಹೆಚ್ಚಾಗಿ, ಯೆಹೋವನೆಡೆಗೆ ಪೂಜ್ಯಭಾವದ ಭಯವನ್ನು ಅಕೆ ಹೊಂದಿದವಳಾಗಿದ್ದಳು.—ಹೋಲಿಸಿರಿ ಜ್ಞಾನೋಕ್ತಿ 31:13, 19, 21, 22, 30.
ರಹಾಬಳ ಬೇರೆ ಕಸಬಿನ ಕುರಿತೇನು? ಅವಳು ಕೇವಲ ಒಂದು ಭೋಜನ ವಸತಿಗೃಹದ ಯಜಮಾನಿಯಾಗಿರಲಿಲ್ಲ. ಇಲ್ಲ, ಶಾಸ್ತ್ರಗ್ರಂಥವು ಅವಳನ್ನು ಒಬ್ಬ ಸೂಳೆಯನ್ನು ನಿರ್ದೇಶಿಸುವ ಹೀಬ್ರು ಮತ್ತು ಗ್ರೀಕ್ ಶಬ್ದಗಳನ್ನುಪಯೋಗಿಸುವ ಮೂಲಕ ಗುರುತುಪಡಿಸುತ್ತದೆ. ಉದಾಹರಣೆಗಾಗಿ, ಹೀಬ್ರು ಪದವಾದ ಜೋನಾಹ್’ ಯಾವಾಗಲೂ ಒಂದು ನಿಷಿದ್ಧ ಸಂಬಂಧಕ್ಕೆ ಸಂಬಂಧಿಸಿರುತ್ತದೆ. ಸಂಭವನೀಯವಾಗಿ, ಕಾನಾನ್ಯರಲ್ಲಿ ವೇಶ್ಯಾವೃತ್ತಿಯು ಒಂದು ಅಪಖ್ಯಾತಿಯ ವ್ಯಾಪಾರವಾಗಿರಲಿಲ್ಲ.
ಯೆಹೋವನು ಒಬ್ಬ ವೇಶ್ಯೆಯನ್ನು ಉಪಯೋಗಿಸಿದ್ದು ಆತನ ಮಹಾ ಕರುಣೆಯನ್ನು ಪ್ರದರ್ಶಿಸುತ್ತದೆ. ಹೊರಗಣ ತೋರಿಕೆಗಳು ನಮ್ಮನ್ನು ಮೋಸಗೊಳಿಸಬಲ್ಲವು ಆದರೆ, ದೇವರು “ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ಆದಕಾರಣ, ತಮ್ಮ ಸೂಳೆಗಾರಿಕೆಗಾಗಿ ಪಶ್ಚಾತ್ತಾಪಪಡುವ ಸುಹೃದಯಿಗಳಾದ ವೇಶ್ಯೆಯರು ಯೆಹೋವ ದೇವರ ಕ್ಷಮೆಯನ್ನು ಪಡೆಯಬಲ್ಲರು. (ಹೋಲಿಸಿರಿ ಮತ್ತಾಯ 21:23, 31, 32.) ರಹಾಬಳು ಸ್ವತಃ ಪಾಪದೊಳಗಿಂದ ದೈವಿಕ ಮೆಚ್ಚಿಗೆಯನ್ನು ಹೊಂದುವ ಒಂದು ನೀತಿಯುಳ್ಳ ಮಾರ್ಗಕ್ಕೆ ತಿರುಗಿಕೊಂಡಳು.
ಇಸ್ರಾಯೇಲ್ಯ ಗೂಢಚಾರರು ದೇವರ ನಿಯಮಕ್ಕನುಸಾರ ಜೀವನ ನಡಿಸಿದ್ದರಾದ್ದರಿಂದ, ಅನೈತಿಕ ಕಾರಣಗಳಿಗಾಗಿ ಅವರು ರಹಾಬಳ ಮನೆಯಲ್ಲಿ ಉಳುಕೊಂಡಿರಲಿಲ್ಲ. ಅವರ ಕಾರಣವು ಏನಾಗಿರಬಹುದೆಂದರೆ ಒಬ್ಬ ವೇಶ್ಯೆಯ ಮನೆಯಲ್ಲಿ ಅವರ ಉಪಸ್ಥಿತಿಯಿಂದಾಗಿ ಸಂಶಯವೇಳುವ ಸಂಭವನೀಯತೆ ಕಡಿಮೆ. ಊರಗೋಡೆಯ ಮೇಲೆ ಅದರ ನೆಲೆಯು ಸಹ ಪಲಾಯನವನ್ನು ಸುಲಭ ಮಾಡುವುದು. ಯಾರ ಹೃದಯವು, ಇಸ್ರಾಯೇಲ್ಯರೊಂದಿಗೆ ದೈವಿಕ ವ್ಯವಹಾರಗಳ ವರದಿಗಳಿಂದಾಗಿ ಎಷ್ಟು ಯುಕ್ತವಾಗಿ ಪ್ರಭಾವಿಸಿತ್ತೆಂದರೆ ಅವಳು ಪಶ್ಚಾತ್ತಾಪಪಟ್ಟು ತನ್ನ ಮಾರ್ಗಗಳನ್ನು ಬದಲಾಯಿಸಿದಳೋ ಆ ಒಬ್ಬ ಪಾಪಿಯ ಬಳಿಗೆ ಅವರನ್ನು ಯೆಹೋವನೇ ನಡಿಸಿದನೆಂಬದು ವ್ಯಕ್ತ. ಇಸ್ರಾಯೇಲ್ಯರು ಕಾನಾನ್ಯರನ್ನು ಅವರ ಅನೈತಿಕ ಪದ್ಧತಿಗಳಿಗಾಗಿ ನಾಶಮಾಡಬೇಕೆಂಬ ದೇವರ ಹೇಳಿಕೆ, ಹಾಗೂ ರಹಾಬಳ ಮೇಲೆ ಮತ್ತು ಯೆರಿಕೋ ಮೇಲಣ ವಿಜಯದ ಮೇಲೆ ಆತನ ಆಶೀರ್ವಾದವು, ಗೂಢಚಾರರು ಅನೈತಿಕತೆಯನ್ನು ನಡಿಸಲಿಲ್ಲವೆಂಬದನ್ನು ಸ್ಪಷ್ಟಪಡಿಸುತ್ತದೆ.—ಯಾಜಕಕಾಂಡ 18:24-30.
ಗೂಢಚಾರರನ್ನು ಬೆನ್ನಟ್ಟಿದವರಿಗೆ ರಹಾಬಳು ನುಡಿದ ಮೋಸಗೊಳಿಸುವ ಮಾತುಗಳ ಕುರಿತೇನು? ದೇವರು ಅವಳ ನಡವಳಿಯನ್ನು ಒಪ್ಪಿದನು. (ಹೋಲಿಸಿರಿ ರೋಮಾಪುರ 14:4.) ತನ್ನ ನಂಬಿಕೆಗೆ ಪುರಾವೆಯನ್ನು ನೀಡುತ್ತಾ, ಆಕೆ ಆತನ ಸೇವಕರನ್ನು ರಕ್ಷಿಸುವುದಕ್ಕಾಗಿ ಕೇಡಿಗೆ ತಲೆಗೊಟ್ಟಳು. ದುರುದ್ದೇಶವುಳ್ಳ ಸುಳ್ಳಾಡುವಿಕೆಯು ಯೆಹೋವನ ದೃಷ್ಟಿಯಲ್ಲಿ ಕೆಟ್ಟದಾಗಿದ್ದರೂ, ಯಾರು ಅದಕ್ಕೆ ಅನರ್ಹರೋ ಆ ಜನರಿಗೆ ಸತ್ಯ ಮಾಹಿತಿಯನ್ನು ಹೊರಗೆಡಹುವ ಹಂಗಿಗೆ ಒಬ್ಬ ವ್ಯಕ್ತಿಯು ಒಳಗಾಗಿರುವುದಿಲ್ಲ. ಹಾಗೆ ಮಾಡುವುದು ಅನಾವಶ್ಯಕವಾದ ಹಾನಿಯನ್ನು ತರಬಹುದಾಗಿದದ್ದರಿಂದ, ಯೇಸು ಕ್ರಿಸ್ತನು ಕೂಡ ಪೂರ್ಣ ವಿವರಗಳನ್ನು ಅಥವಾ ನೇರವಾದ ಉತ್ತರಗಳನ್ನು ಕೊಡಲಿಲ್ಲ. (ಮತ್ತಾಯ 7:6. 15:1-6; 21:23-27; ಯೋಹಾನ 7:3-10) ಶತ್ರು ಅಧಿಕಾರಿಗಳನ್ನು ತಪ್ಪುದಾರಿಗೆ ನಡಿಸಿದ ರಹಾಬಳ ನಡೆವಳಿಯನ್ನು ಆ ತಿಳಿವಳಿಕೆಯಲ್ಲಿ ವೀಕ್ಷಿಸಬೇಕಾಗಿದೆ.
ರಹಾಬಳಿಗೆ ದೊರೆತ ಪ್ರತಿಫಲ
ನಂಬಿಕೆಯನ್ನು ತೋರಿಸಿದಕ್ಕಾಗಿ ರಹಾಬಳಿಗೆ ಪ್ರತಿಫಲವು ದೊರೆಯಿತೋ? ಯೆರಿಕೋವಿನ ನಾಶನದ ಸಮಯದಲ್ಲಿ ಆಕೆಯ ರಕ್ಷಣೆಯು ನಿಶ್ಚಯವಾಗಿಯೂ ಯೆಹೋವನಿಂದ ಬಂದ ಆಶೀರ್ವಾದವಾಗಿತ್ತು. ತದನಂತರ ಆಕೆ, ಯೆಹೂದ ಕುಲದ ಕುಲಪತಿ ನಹತೋನನ ಮಗನಾದ ಸಲ್ಮೊನ್ (ಸಲ್ಮ) ನನ್ನು ಮದುವೆಯಾದಳು. ದೇವಭಕ್ತ ಬೋವಜನ ಹೆತ್ತವರೋಪಾದಿ ಸಲ್ಮೊನ್ ಮತ್ತು ರಹಾಬ್, ಇಸ್ರಾಯೇಲಿನ ಅರಸ ದಾವೀದನ ಕುಲಕ್ಕೆ ನಡಿಸಿದ ವಂಶಾವಳಿಗೆ ಒಂದು ಸಂಬಂಧವನ್ನು ಕೂಡಿಸಿದರು. (1 ಪೂರ್ವಕಾಲವೃತ್ತಾಂತ 2:3-15; ರೂತಳು 4:20-22) ಮತ್ತಾಯನು ಬರೆದ ಯೇಸು ಕ್ರಿಸ್ತನ ವಂಶಾವಳಿಯಲ್ಲಿ ಹೆಸರಿಸಲ್ಪಟ್ಟ ಕೇವಲ ನಾಲ್ವರು ಸ್ತ್ರೀಯರಲ್ಲಿ ಮಾಜಿ ಸೂಳೆ ರಹಾಬಳು ಒಬ್ಬಳಾಗಿರುವುದು, ಅಧಿಕ ಗಮನಾರ್ಹವಾಗಿದೆ. (ಮತ್ತಾಯ 1:5, 6) ಯೆಹೋವನಿಂದ ಎಂತಹ ಒಂದು ಆಶೀರ್ವಾದ!
ಇಸ್ರಾಯೇಲ್ಯಳಲ್ಲದಿದ್ದರೂ ಮತ್ತು ಹಿಂದೊಮ್ಮೆ ವೇಶ್ಯೆಯಾಗಿದ್ದರೂ, ಯೆಹೋವನಲ್ಲಿ ತನಗೆ ಪೂರ್ಣ ನಂಬಿಕೆ ಇದೆಯೆಂಬದನ್ನು ತನ್ನ ಕ್ರಿಯೆಗಳಿಂದ ರುಜುಪಡಿಸಿದ ಸ್ತ್ರೀಯಾದ ರಹಾಬಳು ಒಂದು ಮಹತ್ತಾದ ಮಾದರಿಯಾಗಿದ್ದಾಳೆ. (ಇಬ್ರಿಯ 11:30, 31) ಯಾರಲ್ಲಿ ಕೆಲವರು ವೇಶ್ಯಾವೃತ್ತಿಯ ಜೀವನವನ್ನು ತ್ಯಜಿಸಿರುತ್ತಾರೋ ಆ ಇತರರಂತೆಯೇ, ಅವಳು ಇನ್ನೂ ಬೇರೊಂದು ಪ್ರತಿಫಲವನ್ನು—ಭೂಪ್ರಮೋದವನದಲ್ಲಿನ ಜೀವಕ್ಕಾಗಿ ಸತ್ತವರೊಳಗಿಂದ ಪುನರುತ್ಥಾನವನ್ನು ಹೊಂದಲಿರುವಳು. (ಲೂಕ 23:43) ಕ್ರಿಯೆಗಳಿಂದ ಬೆಂಬಲಿಸಲ್ಪಟ್ಟ ಅವಳ ನಂಬಿಕೆಯ ಕಾರಣ, ರಹಾಬಳು ನಮ್ಮ ಪ್ರೀತಿಯುಳ್ಳ ಮತ್ತು ಕ್ಷಮಾಶೀಲ ಸ್ವರ್ಗೀಯ ತಂದೆಯಿಂದ ಮೆಚ್ಚಿಗೆಯನ್ನು ಸಂಪಾದಿಸಿದಳು. (ಕೀರ್ತನೆ 130:3, 4) ಮತ್ತು ನಿಶ್ಚಯವಾಗಿಯೂ ಆಕೆಯ ಉತ್ತಮ ಉದಾಹರಣೆಯು, ನಿತ್ಯ ಜೀವಕ್ಕಾಗಿ ಯೆಹೋವ ದೇವರ ಕಡೆಗೆ ನೋಡುವಂತೆ ನೀತಿಯನ್ನು ಪ್ರೀತಿಸುವವರೆಲ್ಲರಿಗೆ ಉತ್ತೇಜನವನ್ನು ಒದಗಿಸುತ್ತದೆ.
[ಪುಟ 23 ರಲ್ಲಿರುವ ಚಿತ್ರ]
ರಹಾಬಳು ನೀತಿವಂತಳಾಗಿ ನಿಣಯಿಸಲ್ಪಟ್ಟದ್ದು, ಅವಳಲ್ಲಿ ನಂಬಿಕೆಯಿತ್ತೆಂಬದನ್ನು ಅವಳ ಕ್ರಿಯೆಗಳು ರುಜುಪಡಿಸಿದರಿಂದಲೇ
[ಪುಟ 24 ರಲ್ಲಿರುವ ಚಿತ್ರಗಳು]
ಪ್ರಾಚೀನ ಶೋಧನ ಶಾಸ್ತ್ರಜ್ಞರು ಪ್ರಾರಂಭದ ಗೋಡೆಯ ಒಂದು ಚಿಕ್ಕ ಭಾಗವೂ ಸೇರಿರುವ, ಪುರಾತನ ಯೆರಿಕೋವಿನ ಅವಶೇಷಗಳನ್ನು ಅಗೆದು ತೆಗೆದಿದ್ದಾರೆ
[ಕೃಪೆ]
Pictorial Archive (Near Eastern History) Est.