ನಿಮಗೆ ನೆನಪಿದೆಯೆ?
ಇತ್ತೀಚಿಗಿನ ಕಾವಲಿನಬುರುಜು ಸಂಚಿಕೆಗಳಿಗೆ ಜಾಗ್ರತೆಯ ಗಮನವನ್ನು ನೀವು ಕೊಟ್ಟಿದ್ದೀರೋ? ಹಾಗಿದ್ದರೆ, ಕೆಳಗಿನವುಗಳನ್ನು ನೆನಪಿಸಿಕೊಳ್ಳುವುದು ನಿಮಗೆ ಆಸಕ್ತಿಕರವಾಗಿರುವುದೆಂದು ನೀವು ಕಾಣುವಿರಿ:
▫ ಮನುಷ್ಯ ಮತ್ತು ಪ್ರಾಣಿಗಳ ಮಧ್ಯೆ ಇರುವ ಪ್ರಧಾನ ವ್ಯತ್ಯಾಸವೇನು?
ಒಂದು ಪ್ರಧಾನ ವ್ಯತ್ಯಾಸವು ಮಾನವ ಮಿದುಳಿನ ರಚನೆ, ಸಾಮರ್ಥ್ಯ ಮತ್ತು ಕೆಲಸಗಳಲ್ಲಿ ಕೇಂದ್ರೀಕೃತವಾಗಿದೆ. ಪ್ರಾಣಿಗಳಲ್ಲಿ ಮಿದುಳಿನ ಹೆಚ್ಚು ಕಡಮೆ ಎಲ್ಲ ಕೆಲಸಗಳನ್ನು ಯಾವುದನ್ನು ಹುಟ್ಟರಿವಿನ ವಿವೇಕವೆಂದು ಕರೆಯಲಾಗಿದೆಯೋ ಅದರಲ್ಲಿ ಗೊತ್ತು ಮಾಡಿ ಇಡಲಾಗಿದೆ. ಆದರೆ ಮಾನವರಲ್ಲಿ ಹೀಗಿಲ್ಲ. ದೇವರು ಮಾನವರಿಗೆ ಸ್ವತಂತ್ರ ಇಚ್ಫೆಯ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. (ಜ್ಞಾನೋಕ್ತಿ 30:24--28)—4⁄15, ಪುಟ 5.
▫ ಇಸ್ರಾಯೇಲ್ಯರ ದೇವಾಲಯಾರಾಧನೆಯಲ್ಲಿ ಹಾಡುವಿಕೆ ಯಾವ ಭಾಗವನ್ನು ವಹಿಸಿತು?
ಸಂಗೀತಕ್ಕೆ, ಅದರಲ್ಲೂ ಹಾಡುಗಾರರಿಗೆ ಆರಾಧನೆಯಲ್ಲಿ ಒಂದು ಪ್ರಾಮುಖ್ಯ ಸ್ಥಾನವಿತ್ತು, ಆದರೆ ಧರ್ಮಶಾಸ್ತ್ರದ ಹೆಚ್ಚು ಮಹತ್ವದ ವಿಷಯಗಳನ್ನು ಮನಸ್ಸಿನಲ್ಲಿ ತುಂಬುವರೆ ಅಲ್ಲ, ಬದಲಿಗೆ ಆರಾಧನೆಗಾಗಿ ಸಮರ್ಪಕವಾದ ಮನೋಭಾವವನ್ನು ಒದಗಿಸಲಿಕ್ಕಾಗಿ. ಇಸ್ರಾಯೇಲ್ಯರು ಯೆಹೋವನನ್ನು ಉತ್ಸಾಹದ ವಿಧದಲ್ಲಿ ಆರಾಧಿಸುವಂತೆ ಇದು ಸಹಾಯ ಮಾಡಿತು. (1 ಪೂರ್ವಕಾಲವೃತ್ತಾಂತ 23:4, 5; 25:7)—5⁄1, ಪುಟಗಳು 10, 11.
▫ ಮಕ್ಕಳಿಗೆ ಶೈಶವದಿಂದ ಯಾವ ರೀತಿಯ ಗಮನ ಅಗತ್ಯ?
ಒಂದು ನವಜಾತ ಮಗುವಿಗೆ ಹೆತ್ತವರು ಬಹುಮಟ್ಟಿಗೆ ಸತತವಾದ ಗಮನವನ್ನು ಕೊಡಬೇಕಾಗುತ್ತದೆ. ಪೌಲನು ಬರೆದುದು: “ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು . . . ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕವ್ತಾಗಿವೆ.” (2 ತಿಮೊಥೆಯ 3:15) ಹೀಗೆ ತಿಮೊಥೆಯನು ಪಡೆದ ಹೆತ್ತವರ ಗಮನವು, ಶೈಶವದಿಂದಲೂ, ಆತ್ಮಿಕ ರೀತಿಯದ್ದು ಸಹ ಆಗಿತ್ತು.—5⁄15, ಪುಟ 11.
▫ ಬೈಬಲು ಸರ್ವ ಮಾನವಕುಲಕ್ಕಾಗಿ ದೇವರ ಸಂದೇಶವನ್ನೊಳಗೊಂಡಿದೆ ಎಂಬುದಕ್ಕೆ ನಾಲ್ಕು ರುಜುವಾತಿನ ಶ್ರೇಣಿಗಳು ಯಾವುವು?
(1)ಲಭ್ಯತೆ. ಜಗತ್ತಿನ ಜನಸಂಖ್ಯೆಯಲ್ಲಿ ಸುಮಾರು 98 ಪ್ರತಿಶತಕ್ಕೆ ಬೈಬಲು ಲಭ್ಯ. (2) ಐತಿಹಾಸಿಕತೆ. ಬೈಬಲು ಐತಿಹಾಸಿಕ ನಿಜತ್ವಗಳನ್ನು—ರುಜುಮಾಡಲಾಗದ ಪುರಾಣಗಳಲ್ಲ—ಒಳಗೊಂಡಿದೆ. (3) ಪ್ರಾಯೋಗಿಕತೆ. ಅದರ ಆಜ್ಞೆಗಳು ಮತ್ತು ಮೂಲತತ್ವಗಳು ಅವುಗಳಿಗೆ ಅಂಟಿಕೊಳ್ಳುವವರಿಗೆ ಪ್ರಯೋಜನವನ್ನು ತರುವ ಜೀವನ ರೀತಿಯನ್ನು ಇಡುತ್ತವೆ. (4) ಪ್ರವಾದನೆ. ಅದು ಭವಿಷ್ಯತ್ತಿನಲ್ಲಿ ಏನು ನಡೆಯುವುದೆಂದು ವಿವರವಾಗಿ ತಿಳಿಸುವ ಒಂದು ಗ್ರಂಥ.—6⁄1, ಪುಟಗಳು 8, 9.
▫ ಸರಿಯಾದ ಧರ್ಮವನ್ನು ತಿಳಿಯುವುದರೊಂದಿಗೆ ಯಾವ ಜವಾಬ್ದಾರಿಯೂ ಇರುತ್ತದೆ?
ನಾವು ಸರಿಯಾದ ಧರ್ಮವನ್ನು ಗುರುತಿಸಿದಾಗ, ನಮ್ಮ ಜೀವನಗಳನ್ನು ಅದರ ಸುತ್ತಲೂ ಕಟ್ಟಬೇಕು. ಅದು ಒಂದು ಜೀವನ ರೀತಿ. (ಕೀರ್ತನೆ 119:105; ಯೆಶಾಯ 2:3)—6⁄1, ಪುಟ 13.
▫ ಬೈಬಲಿನ ವೈಯಕ್ತಿಕ ಅಭ್ಯಾಸ ಅಷ್ಟು ಆವಶ್ಯಕವೇಕೆ?
ದೇವರ ಸೇವಕರೆಲ್ಲರೂ ದೇವರ ವಾಕ್ಯದ ಸತ್ಯದ ಹೊಸ ಮತ್ತು ಹೆಚ್ಚು ಆಳವಾದ ಸಂಗತಿಗಳನ್ನು ಕಂಡುಹಿಡಿಯುವ ಮೂಲಕ ತಮ್ಮ ಸಂತೋಷವನ್ನೂ ಬಲವನ್ನೂ ದಿನೇದಿನೇ ನವೀಕರಿಸುವುದು ಅಗತ್ಯ. ಈ ವಿಧದಲ್ಲಿ ಅವರು ತಮ್ಮನ್ನು ಆತ್ಮಿಕವಾಗಿ ಹುರಿದುಂಬಿಸಿಕೊಳ್ಳುತ್ತಾರೆ.—6⁄15, ಪುಟ 8.
▫ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ “ಪಾಪ” ಎಂಬ ಪದವು ಏನನ್ನು ಅರ್ಥೈಸುತ್ತದೆ?
ಬೈಬಲಿನಲ್ಲಿ “ಪಾಪ” ವನ್ನು ಸೂಚಿಸಲು ಸಾಮಾನ್ಯವಾಗಿ ಉಪಯೋಗಿಸಲ್ಪಟ್ಟಿರುವ ಹೀಬ್ರು ಮತ್ತು ಗ್ರೀಕ್ ಪದಗಳು ಅವುಗಳ ಕ್ರಿಯಾಪದದ ರೂಪಗಳಲ್ಲಿ, ಗುರಿ, ಗುರುತು, ಯಾ ಗುರಿಹಲಗೆಯನ್ನು ಮುಟ್ಟಲು ತಪ್ಪುವ ಅರ್ಥದಲ್ಲಿ “ಗುರಿ ತಪ್ಪು” ಎಂಬ ಅರ್ಥವನ್ನು ಕೊಡುತ್ತವೆ. ಪ್ರಥಮ ಮಾನವ ಜೊತೆಯು ದೇವರ ಮಹಿಮೆಯ ಗುರಿಯನ್ನು, ಅವರನ್ನು ದೇವರ ಸ್ವರೂಪದಲ್ಲಿ ನಿರ್ಮಿಸಿದ ಉದ್ದೇಶದ ಗುರಿಯನ್ನು ಮುಟ್ಟದೆ ಹೋಯಿತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅವರು ಪಾಪ ಮಾಡಿದರು. (ಆದಿಕಾಂಡ 2:17; 3:6)—6⁄15, ಪುಟ 12.
▫ ಧರ್ಮಭ್ರಷ್ಟ ಸಾಹಿತ್ಯಗಳನ್ನು ಓದುವುದು ತೀರಾ ಅವಿವೇಕವೇಕೆ?
ಕೆಲವು ಧರ್ಮಭ್ರಷ್ಟ ಸಾಹಿತ್ಯಗಳು “ನಯದ ನುಡಿ” ಮತ್ತು “ಕಲ್ಪನೆಯ ಮಾತುಗಳ” ಮೂಲಕ ಸುಳ್ಳನ್ನು ನೀಡುತ್ತವೆ. (ರೋಮಾಪುರ 16:17, 18; 2 ಪೇತ್ರ 2:3) ಧರ್ಮಭ್ರಷ್ಟ ಬರಹಗಳೆಲ್ಲ ಕೇವಲ ಟೀಕಿಸುತ್ತವೆ ಮತ್ತು ಕೆಡವಿ ಹಾಕುತ್ತವೆ. ಯಾವುದೂ ಆತ್ಮೋನ್ನತಿ ಮಾಡುವುದಿಲ್ಲ.—7⁄1, ಪುಟ 12.
▫ ಗ್ರೀಸ್ ದೇಶ ನಾಗರಿಕತೆಯ ತೊಟ್ಟಿಲಾಗಿತ್ತೊ?
ಪುರಾತನ ಗ್ರೀಸಿನಲ್ಲಿ ಪ್ರಜಾಪ್ರಭುತ್ವವು ಕೇವಲ ಕೆಲವೇ ನಗರರಾಜ್ಯಗಳಲ್ಲಿ ಆಚರಣೆಯಲ್ಲಿತ್ತು, ಮತ್ತು ಅಲಿಯ್ಲೂ ಗಂಡಸರು ಮಾತ್ರ ಮತದಾನ ಮಾಡಿದರು. ಜನಸಂಖ್ಯೆಯಲ್ಲಿ ಐದರಲ್ಲಿ ನಾಲ್ಕು ಭಾಗ ಬಿಡಲ್ಪಟ್ಟಿತ್ತೆಂದು ಇದರ ಅರ್ಥ. ಇದು ಜನಪ್ರಿಯ ಪರಮಾಧಿಕಾರ ಅಥವಾ ಪ್ರಜಾಪ್ರಭುತ್ವವಲ್ಲವೆಂದೇ ಹೇಳಬೇಕು!—7⁄1, ಪುಟ 16.
▫ ಕ್ರೈಸ್ತ ವಿವಾಹವನ್ನು ಯಾವುದು ಏಳಿಗೆ ಹೊಂದುವಂತೆ ಮಾಡುತ್ತದೆ?
ಪತಿ, ಪತ್ನಿಯರು ದಾಂಪತ್ಯದ ದೇವರ ವೀಕ್ಷಣವನ್ನು ಗೌರವಿಸಿ, ಆತನ ವಾಕ್ಯದ ಮೂಲಸೂತ್ರಗಳಿಗನುಸಾರ ಜೀವಿಸಲು ಪ್ರಯತ್ನಿಸುವಾಗ. (ಎಫೆಸ 5:21-33)—7⁄15, ಪುಟ 10.
▫ ನಿಮ್ಮ ಕುಟುಂಬ ಅಭ್ಯಾಸವು ಹೇಗೆ ಸಂತೋಷಕರವಾಗಬಲ್ಲದು?
ಎಲ್ಲ ಮಕ್ಕಳನ್ನು ಒಳಗೂಡಿಸಲು ಪ್ರಯತ್ನಿಸಿರಿ. ಸಕಾರಾತ್ಮಕರೂ ಭಕ್ತಿವೃದ್ಧಿ ಮಾಡುವವರೂ ಆಗಿದ್ದು, ಅವರ ಭಾಗವಹಿಸುವಿಕೆಗಾಗಿ ನಿಮ್ಮ ಮಕ್ಕಳನ್ನು ಪ್ರಶಂಸಿಸಿರಿ. ವಿಷಯವನ್ನು ಕೇವಲ ಆವರಿಸದೆ ನಿಮ್ಮ ಮಕ್ಕಳ ಹೃದಯವನ್ನು ಸ್ಪರ್ಶಿಸಲು ಪ್ರಯತ್ನಿಸಿರಿ.—7⁄15, ಪುಟ 18.
▫ “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇದ್ದೇವೆಂದು ಜನರು ಹೇಳುವಾಗ,” ಎಂಬ ಹೇಳಿಕೆಯಲ್ಲಿ ಏನು ಸೂಚಿಸಲ್ಪಡುತ್ತದೆ? (1 ಥೆಸಲೊನೀಕ 5:3)
ಜನಾಂಗಗಳು ‘ಸಮಾಧಾನ ಮತ್ತು ಭದ್ರತೆ’ ಯನ್ನು ಸಾಧಿಸುತ್ತವೆಂದು ಬೈಬಲು ಹೇಳುವುದಿಲ್ಲವೆಂಬುದನ್ನು ಗಮನಿಸಿರಿ. ಆದರೆ ಅವರು ಅದರ ವಿಷಯ ಒಂದು ಅದ್ವಿತೀಯ ವಿಧದಲ್ಲಿ, ಇದುವರೆಗೆ ಭಾವಿಸದಿದ್ದ ರೀತಿಯಲ್ಲಿ ಆಶಾವಾದಿತ್ವ ಮತ್ತು ನಿಶಿತ್ಚಾಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಮಾತಾಡುವರು. ಶಾಂತಿ ಮತ್ತು ಭದ್ರತೆಯನ್ನು ಸಾಧಿಸುವ ಸಂಭವಗಳು ಹಿಂದೆಂದಿಗಿಂತಲೂ ಹೆಚ್ಚು ಸಮೀಪದಲ್ಲಿವೆಯೆಂದು ತೋರಿಬರುವುದು.—8⁄1, ಪುಟ 6.
▫ ಯೆಹೋವನು ವಿವೇಚನಾಶಕ್ತಿಯನ್ನು ಪ್ರದರ್ಶಿಸಿದ ಮೂರು ವಿಧಗಳನ್ನು ಹೆಸರಿಸಿರಿ.
ತಾನು ಕ್ಷಮಿಸಲು ಸಿದ್ಧನು ಎಂದು ಯೆಹೋವನು ತೋರಿಸಿದ್ದಾನೆ. (ಕೀರ್ತನೆ 86:5) ಹೊಸ ಸನ್ನಿವೇಶಗಳು ಎದ್ದಾಗ, ತಾನು ಉದ್ದೇಶಿಸಿದ ಕಾರ್ಯಾಚರಣೆಯನ್ನು ಬದಲಾಯಿಸಲು ಆತನು ಸಿದ್ಧನಾಗಿದ್ದಾನೆ. (ಯೋನ, ಅಧ್ಯಾಯ 3 ನೋಡಿ.) ಅಲ್ಲದೆ, ತನ್ನ ಅಧಿಕಾರ ನಿರ್ವಹಣೆಯಲ್ಲಿ ತಾನು ವಿವೇಚನಾ ಶಕ್ತಿಯುಳ್ಳವನು ಎಂದು ಆತನು ತೋರಿಸಿದ್ದಾನೆ. (1 ಅರಸು 22:19-22)—8⁄1, ಪುಟಗಳು 12-14.