ಯುದ್ಧರಹಿತವಾದ ಒಂದು ಜಗತ್ತು—ಯಾವಾಗ?
ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನವು ಅಕ್ಟೋಬರ್ 24, 1945 ರಂದು ಕಾರ್ಯರೂಪಕ್ಕೆ ತರಲ್ಪಟ್ಟಿತು. ಲೋಕ ಶಾಂತಿಗಾಗಿ ಮಾನವರಿಂದ ಎಂದೂ ರಚಿಸಲ್ಪಟ್ಟಿರುವವುಗಳಲ್ಲಿ ಅತ್ಯಂತ ವ್ಯಾಪಕವಾದ ಯೋಜನೆ ಅದಾಗಿದೆ. ಅದರ ಆರಂಭದ 51 ಸದಸ್ಯ ರಾಷ್ಟ್ರಗಳೊಂದಿಗೆ ವಿಶ್ವ ಸಂಸ್ಥೆಯು, ಲೋಕದ ಇತಿಹಾಸದಲ್ಲೇ ಅತಿ ದೊಡ್ಡದಾದ ಅಂತಾರಾಷ್ಟ್ರೀಯ ಸಂಘವಾಯಿತು. ಮತ್ತೂ, ಪ್ರಥಮ ಬಾರಿ, ಒಂದು ಅಂತಾರಾಷ್ಟ್ರೀಯ ಸಂಘವು ಶಾಂತಿ ಮತ್ತು ಭದ್ರತೆಯನ್ನು ಕಾರ್ಯಾಚರಣೆಗೆ ತರಲು ಮತ್ತು ಯುದ್ಧವಿಲ್ಲದ ಒಂದು ಲೋಕವನ್ನು ತರಲು ಒಂದು ಸೈನ್ಯವನ್ನು ಪಡೆಯಲಿತ್ತು.
ಇಂದು, 185 ಸದಸ್ಯ ರಾಷ್ಟ್ರಗಳೊಂದಿಗೆ, ವಿಶ್ವ ಸಂಸ್ಥೆಯು ಎಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದೆ. ಹಾಗಿರುವಾಗ, ಇತಿಹಾಸದಲ್ಲಿ ಅತಿ ಶಕ್ತಿಶಾಲಿಯಾಗಿರುವ ಅಂತಾರಾಷ್ಟ್ರೀಯ ಸಂಘವು ತನ್ನ ಉದಾತ್ತ ಧ್ಯೇಯಗಳನ್ನು ಪೂರ್ಣವಾಗಿ ಪೂರೈಸಲು ಏಕೆ ತಪ್ಪಿಹೋಗಿದೆ?
ಧರ್ಮ—ಒಂದು ಮಹತ್ತಾದ ಅಡಚಣೆ
ಲೋಕ ವ್ಯವಹಾರಗಳಲ್ಲಿ ಧರ್ಮವು ವಹಿಸುವ ಪಾತ್ರವು ಒಂದು ಪ್ರಧಾನ ಸಂಕ್ಲಿಷ್ಟತೆಯಾಗಿದೆ. ಲೋಕದ ಪ್ರಮುಖ ಧರ್ಮಗಳು, ವಿಶ್ವ ಸಂಸ್ಥೆಯ ಆರಂಭದಂದಿನಿಂದ ಅದಕ್ಕೆ ತಮ್ಮ ಬೆಂಬಲದ ಭಾಷೆಯನ್ನು ಕೊಟ್ಟಿದ್ದಾರೆಂಬುದು ನಿಜ. ಅದರ 50ನೇ ವಾರ್ಷಿಕೋತ್ಸವಕ್ಕೆ ಸೂಚಿಸುತ್ತಾ, ಪೋಪ್ ಜಾನ್ ಪೌಲ್ II, ವಿಶ್ವ ಸಂಸ್ಥೆಯ ಕುರಿತಾಗಿ “ಶಾಂತಿಯನ್ನು ಪ್ರವರ್ಧಿಸಿ ಕಾಪಾಡಲು ಸಮಾನತೆಯಿಲ್ಲದ ಉತ್ಕೃಷ್ಟ ಉಪಕರಣ” ವಾಗಿ ಮಾತಾಡಿದರು. ಧಾರ್ಮಿಕ ಮುಖಂಡರ ಭೌಗೋಲಿಕ ಸಮುದಾಯದಿಂದ ಅವರ ಭಾವನೆಗಳು ಹಂಚಿಕೊಳ್ಳಲ್ಪಡುತ್ತವೆ. ಆದರೆ ಧರ್ಮ ಮತ್ತು ಸರಕಾರದ ನಡುವಿನ ಈ ಔಚಿತ್ಯ ಜ್ಞಾನದ ಸಂಬಂಧವು, ಧರ್ಮವು ವಿಶ್ವ ಸಂಸ್ಥೆಗೆ ಒಂದು ಅಡಚಣೆಯೂ ಒಂದು ಪೀಡೆಯೂ ಆಗಿರುತ್ತದೆಂಬ ವಾಸ್ತವಾಂಶವನ್ನು ಮುಚ್ಚಿಡಲಸಾಧ್ಯ.
ಹಲವಾರು ಶತಮಾನಗಳ ವರೆಗೆ ಧರ್ಮವು ರಾಷ್ಟ್ರೀಯ ದ್ವೇಷ, ಯುದ್ಧಗಳು ಮತ್ತು ಸಮೂಹನಾಶಗಳನ್ನು ಪ್ರವರ್ಧಿಸುವುದರಲ್ಲಿ ಅಥವಾ ಬೆಂಬಲಿಸುವುದರಲ್ಲಿ ಒಂದು ಪ್ರಧಾನ ಪಾತ್ರವನ್ನು ವಹಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಧಾರ್ಮಿಕ ಹುರುಪಿನ ಸೋಗಿನಲ್ಲಿ, ನೆರೆಯವರು ಒಬ್ಬರು ಇನ್ನೊಬ್ಬರನ್ನು ಕೊಂದಿದ್ದಾರೆ. ಬಾಲ್ಕನ್ ಪ್ರದೇಶದ ಯುದ್ಧದ ಸಂಬಂಧದಲ್ಲಿ “ಕುಲಸಂಬಂಧಿತ ಶುಚಿಗೊಳಿಸುವಿಕೆ” ಎಂಬ ಪದವು ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಆದಾಗಲೂ, ಅವರಲ್ಲಿ ಹೆಚ್ಚಿನವರಿಗೆ ಒಂದೇ ಕುಲಸಂಬಂಧಿತ ಮೂಲವಿರುವ ಕಾರಣದಿಂದ, ಅಲ್ಲಿರುವ ಅನೇಕರಿಗೆ ಒಬ್ಬರು ಇನ್ನೊಬ್ಬರ ಕಡೆಗಿರುವ ದ್ವೇಷವು, ಜಾತಿಯ ಮೇಲೆ ಆಧರಿತವಾಗಿರುವದಕ್ಕಿಂತ, ಧಾರ್ಮಿಕ ಸಂಬಂಧಗಳ ಮೇಲೆ ಆಧರಿತವಾಗಿದೆ. ಹೌದು, ಹಿಂದಿನ ಯೂಗೋಸ್ಲವಿಯದಲ್ಲಿನ ರಕ್ತಪಾತದ ಹೊಣೆಗಾರಿಕೆಯಲ್ಲಿ ಹೆಚ್ಚಿನದನ್ನು ಧರ್ಮವು ಸ್ವೀಕರಿಸಲೇಬೇಕು, ಮತ್ತು ವಿಶ್ವ ಸಂಸ್ಥೆಯು ಅದನ್ನು ನಿಲ್ಲಿಸಲು ಶಕವ್ತಾಗಿಲ್ಲ.
“ಧಾರ್ಮಿಕ ಹೋರಾಟಗಳು ವೃದ್ಧಿಯಾಗುತ್ತಿರುವ ಶೀತಲ ಯುದ್ಧದ ನಂತರದ ಲೋಕವೊಂದರಲ್ಲಿ, ಅದು ಉಂಟುಮಾಡುವ ಕ್ಲೇಶದ ಹೊರತೂ, ಧರ್ಮ ಮತ್ತು ಸಮೂಲನಾಶದ ಒಂದು ಪರೀಕ್ಷೆಯು ನಮ್ಮ ಹೆಚ್ಚು ತುರ್ತಿನ ಆದ್ಯತೆಗಳಲ್ಲಿ ಒಂದಾಗಿರಬಹುದು” ಎಂದು ಧರ್ಮದ ಕುರಿತಾಗಿ ಒಬ್ಬ ಕಾಲೇಜ್ ಪ್ರೊಫೆಸರ್ ಇತ್ತೀಚೆಗೆ ತಕ್ಕದ್ದಾಗಿಯೇ ತಿಳಿಸಿದರು. ಧರ್ಮವು ಲೋಕ ಶಾಂತಿಗಾಗಿರುವ ಪ್ರಯತ್ನಗಳನ್ನು ಹೇಗೆ ತಡೆಯುತ್ತಿದೆಯೆಂಬ ಒಂದು ಹೊಸ ಅರಿವು ಇಂದು ಸುವ್ಯಕ್ತವಾಗಿದೆ.
1981ರ ಒಂದು ಯುಎನ್ ಠರಾವು ತಿಳಿಸಿದ್ದು: “ಲೋಕದ ಕೆಲವು ಕ್ಷೇತ್ರಗಳಲ್ಲಿ ಇನ್ನೂ ಪ್ರತ್ಯಕ್ಷವಾಗಿರುವ ಅಸಹಿಷ್ಣುತೆಯ ಪ್ರದರ್ಶನಗಳ ಮತ್ತು ಧರ್ಮ ಅಥವಾ ನಂಬಿಕೆಯ ವಿಷಯಗಳಲ್ಲಿನ ಭೇದಭಾವದ ಅಸ್ತಿತ್ವದಿಂದ ಚಿಂತಿತರು, ಅದರ ಎಲ್ಲಾ ರೂಪಗಳಲ್ಲಿ ಮತ್ತು ಪ್ರದರ್ಶನೆಗಳಲ್ಲಿ ಅಂತಹ ಅಸಹಿಷ್ಣುತೆಯ ಕ್ಷಿಪ್ರ ನಿರ್ಮೂಲನಕ್ಕಾಗಿ ಮತ್ತು ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ಪಕ್ಷಪಾತವನ್ನು ತಡೆಗಟ್ಟಲು ಮತ್ತು ಹೋರಾಡಲು ಆವಶ್ಯಕವಾದ ಎಲ್ಲಾ ಕ್ರಮಗಳನ್ನು ಸ್ವೀಕರಿಸಲು ನಿರ್ಧರಿತರು.”
ಅವರ ಠರಾವಿಗೆ ಹೊಂದಿಕೆಯಲ್ಲಿ, ವಿಶ್ವ ಸಂಸ್ಥೆಯು 1995ನ್ನು ಸಹಿಷ್ಣುತೆಯ ವರ್ಷವಾಗಿರುವುದಾಗಿ ಘೋಷಿಸಿದೆ. ಆದಾಗಲೂ, ವಾಸ್ತವಿಕವಾಗಿ ಮಾತಾಡುವುದಾದರೆ, ಧರ್ಮದಿಂದ ವಿಭಜಿತವಾಗಿರುವ ಒಂದು ಲೋಕದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಸಾಧಿಸುವುದು ಎಂದಾದರೂ ಸಾಧ್ಯವಾದೀತೊ?
ಧರ್ಮದ ಭವಿಷ್ಯ
ಪ್ರಕಟನೆಯ ಬೈಬಲ್ ಪುಸ್ತಕದಲ್ಲಿನ ಒಂದು ಪ್ರವಾದನೆಯು ಉತ್ತರವನ್ನು ಒದಗಿಸುತ್ತದೆ. ಒಬ್ಬ “ರಾಣಿಯಾಗಿ” ಕುಳಿತುಕೊಳ್ಳುವ ಮತ್ತು “ಭೂರಾಜರ ಮೇಲೆ ಅಧಿಕಾರ ಹೊಂದಿರುವ” ಒಬ್ಬ ಸಾಂಕೇತಿಕ “ಮಹಾ ಜಾರಸ್ತ್ರೀಯ” ಕುರಿತಾಗಿ ಅದು ಮಾತಾಡುತ್ತದೆ. ಈ ಜಾರಸ್ತ್ರೀಯು “ಲಜ್ಜಾಹೀನ ಸುಖಭೋಗದಲ್ಲಿ” ಜೀವಿಸುತ್ತಾಳೆ ಮತ್ತು ಲೋಕದ ಸರಕಾರಗಳೊಂದಿಗೆ ಸಂಬಂಧಗಳನ್ನು ಹೊಂದಿರುತ್ತಾಳೆ. ಈ ಸರಕಾರಗಳು, ಯಾವುದರ ಮೇಲೆ ಆ ಜಾರಸ್ತ್ರೀಯು ಹಾಯಾಗಿ ಸವಾರಿ ಮಾಡುತ್ತಾಳೋ ಆ ಒಂದು “ಕಡುಗೆಂಪು ಬಣ್ಣದ ಕಾಡು ಮೃಗ” ವಾಗಿ ಚಿತ್ರಿಸಲ್ಪಟ್ಟಿವೆ. (ಪ್ರಕಟನೆ 17:1-5, 18; 18:7, NW) “ಮಹಾ ಬಾಬೆಲ್” ಎಂದು ಪ್ರಸಿದ್ಧವಾಗಿದ್ದು, ಈ ಶಕ್ತಿಶಾಲಿ ಮತ್ತು ಅನೈತಿಕ ಸ್ತ್ರೀಯು, ವಿಗ್ರಹಾರಾಧಕ ಧರ್ಮದ ಪೋಷಣ ಸ್ಥಾನವಾಗಿರುವ ಪುರಾತನ ಬಾಬೆಲನ್ನು ಅನುಸರಿಸಿ ಹೆಸರಿಸಲ್ಪಟ್ಟಿದೆ. ಯೋಗ್ಯವಾಗಿಯೇ, ಆ ಜಾರಸ್ತ್ರೀಯು ಇಂದು, ಸರಕಾರಗಳ ವ್ಯವಹಾರಗಳೊಂದಿಗೆ ಬೆಸೆದಿರುವ ಲೋಕದ ಎಲ್ಲಾ ಧರ್ಮಗಳನ್ನು ಪ್ರತಿನಿಧಿಸುತ್ತಾಳೆ.
ಸಕಾಲದಲ್ಲಿ, ದೇವರು ಕಾಡುಮೃಗದ ಮಿಲಿಟರಿ ಸಂಘಟನಗಳ ಹೃದಯಗಳಲ್ಲಿ ಕ್ರಿಯೆಗೈಯುವ ವಿಚಾರವನ್ನು ಹಾಕುವನೆಂದು, ದಾಖಲೆಯು ಹೇಳುತ್ತಾ ಮುಂದುವರಿಯುತ್ತದೆ. ಇವು “ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” (ಪ್ರಕಟನೆ 17:16)a ಹೀಗೆ ಯೆಹೋವ ದೇವರು ತಾನೇ, ಸುಳ್ಳು ಧರ್ಮವನ್ನು ತೆಗೆದುಹಾಕುವ ಒಂದು ಕಾರ್ಯಾಚರಣೆಯೊಳಗೆ ಶಕ್ತಿಶಾಲಿ ರಾಷ್ಟ್ರಗಳನ್ನು ಕೌಶಲದಿಂದ ನಡೆಸುವನು. ಲೋಕವ್ಯಾಪಕ ಧಾರ್ಮಿಕ ವ್ಯವಸ್ಥೆಯ, ಅದರ ಸುಖಭೋಗದ ಮಂದಿರಗಳು ಮತ್ತು ಆರಾಧನಾ ಕ್ಷೇತ್ರಗಳೊಂದಿಗೆ ಸಂಪೂರ್ಣವಾಗಿ ಧ್ವಂಸವಾಗಲಿರುವುದು. ಆಗ ಶಾಂತಿ ಮತ್ತು ಭದ್ರತೆಯನ್ನು ಸ್ಥಾಪಿಸಲಿಕ್ಕಿರುವ ಧಾರ್ಮಿಕ ಅಡಚಣೆಯು ತೆಗೆಯಲ್ಪಟ್ಟಿರುವುದು. ಆದರೆ ಆಗಲೂ, ಭೂಮಿಯ ಮೇಲೆ ನಿಜ ಶಾಂತಿ ಮತ್ತು ಭದ್ರತೆಯಿರುವುದೋ?
ಅಪರಿಪೂರ್ಣ ಮಾನವ ಸ್ವಭಾವ
ಧರ್ಮವನ್ನು ನಿರ್ಮೂಲಗೊಳಿಸುವುದು, ಯುದ್ಧರಹಿತವಾದ ಒಂದು ಜಗತ್ತಿಗೆ ನಡಿಸುವುದೆಂಬದಕ್ಕೆ ಯಾವುದಾದರೂ ಖಾತರಿ ಇದೆಯೊ? ಇಲ್ಲ. ವಿಶ್ವ ಸಂಸ್ಥೆಯು ಒಂದು ಹಾಸ್ಯವ್ಯಂಗ್ಯ ಸನ್ನಿವೇಶವನ್ನು ಎದುರಿಸುವುದನ್ನು ಮುಂದುವರಿಸುವುದು. ಒಂದು ಕಡೆ, ಜನರು ಶಾಂತಿ ಮತ್ತು ಭದ್ರತೆಯನ್ನು ಬಯಸುತ್ತಾರೆ. ಆದರೂ, ಇನ್ನೊಂದು ಕಡೆ, ಶಾಂತಿ ಮತ್ತು ಭದ್ರತೆಗಾಗಿ ಅತಿ ದೊಡ್ಡ ಬೆದರಿಕೆಯನ್ನು ಒಡ್ಡುವವರು ಜನರೇ ಆಗಿದ್ದಾರೆ. ಎಲ್ಲಾ ಕಲಹಗಳ ಮತ್ತು ಯುದ್ಧಗಳ ಮೂಲದಲ್ಲಿರುವ ದ್ವೇಷ, ಹೆಮ್ಮೆ, ಆತ್ಮ ದುರಭಿಮಾನ, ಸ್ವಾರ್ಥತೆ ಮತ್ತು ಅಜ್ಞಾನಗಳು ಮಾನವ ಲಕ್ಷಣಗಳಾಗಿವೆ.—ಯಾಕೋಬ 4:1-4.
ನಮ್ಮ ದಿನದಲ್ಲಿ ಜನರು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ” ಆಗಿರುವರೆಂದು ಬೈಬಲ್ ಮುಂತಿಳಿಸಿತ್ತು.—2 ತಿಮೊಥೆಯ 3:1-4.
“ಲೋಕವು ಒಂದು ಸಾಮಾಜಿಕ ಮತ್ತು ನೈತಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ, ಇದು ಅನೇಕ ಸಮಾಜಗಳಲ್ಲಿ ಅಪರಿಮಿತ ಪ್ರಮಾಣದ್ದಾಗಿದೆ” ಎಂದು ಸೆಕ್ರಿಟರಿ ಜೆನೆರಲ್ ಬೂಟ್ರೋಸ್ ಬೂಟ್ರೋಸ್-ಗಾಲಿ ಅಂಗೀಕರಿಸಿದರು. ಯಾವುದೇ ಪ್ರಮಾಣದ ರಾಜತಾಂತ್ರಿಕ ಕೌಶಲಗಳು ಅಪರಿಪೂರ್ಣ ಮಾನವ ಸ್ವಭಾವದ ಹಾನಿಕರ ಲಕ್ಷಣಗಳನ್ನು ತಟಸ್ಥೀಕರಿಸಸಾಧ್ಯವಿಲ್ಲ.—ಆದಿಕಾಂಡ 8:21ನ್ನು ಹೋಲಿಸಿ; ಯೆರೆಮೀಯ 17:9.
ಯೇಸು ಕ್ರಿಸ್ತನು—ಶಾಂತಿಯ ಪ್ರಭು
ಸ್ಪಷ್ಟವಾಗಿಗಿ, ವಿಶ್ವ ಸಂಸ್ಥೆಗೆ ಲೋಕ ಶಾಂತಿಯನ್ನು ತರುವ ಸಾಮರ್ಥ್ಯವಿಲ್ಲ. ಅವರ ಉಚ್ಚ ಗುರಿಗಳ ಹೊರತೂ, ಅದರ ಸದಸ್ಯರು ಮತ್ತು ಬೆಂಬಲಿಗರು ಎಲ್ಲರೂ ಅಪರಿಪೂರ್ಣ ಮಾನವರಾಗಿದ್ದಾರೆ. “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂದು ಬೈಬಲ್ ಹೇಳುತ್ತದೆ. (ಯೆರೆಮೀಯ 10:23) ಇದಲ್ಲದೆ, ದೇವರು ಎಚ್ಚರಿಸುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡಶಕ್ತನಲ್ಲ.”—ಕೀರ್ತನೆ 146:3.
“ಶಾಂತಿಯ ಪ್ರಭು” ಆಗಿರುವ ತನ್ನ ಮಗನ ಮೂಲಕ ಯೆಹೋವ ದೇವರು ಏನನ್ನು ಪೂರೈಸಲಿರುವನೆಂದು ಬೈಬಲು ಮುಂತಿಳಿಸುತ್ತದೆ. ಯೆಶಾಯ 9:6, 7 ತಿಳಿಸುವುದು: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು. . . . ಅವನ ಅಭಿವೃದ್ಧಿಯಾಗುವುದು, . . . ನಿತ್ಯ ಸಮಾಧಾನವಿರುವುದು.”
ಆಶಾಭಂಗಗೊಂಡ ಪ್ರಯತ್ನಗಳ 50 ವರ್ಷಗಳ ಬಳಿಕ ಲೋಕದ ರಾಷ್ಟ್ರಗಳು ಬಳಲಿಹೋಗಿವೆ. ಬಲು ಬೇಗನೇ ಅವು ಜಾರಸ್ತ್ರೀಯಂತಹ ಧಾರ್ಮಿಕ ಸಂಘಗಳನ್ನು ನಾಶಮಾಡುವವು. ಅನಂತರ “ರಾಜಾಧಿರಾಜನೂ ಕರ್ತರ ಕರ್ತನೂ” ಆಗಿರುವ ಯೇಸು ಕ್ರಿಸ್ತನು ಮತ್ತು ಅವನ ಸ್ವರ್ಗೀಯ ಹೋರಾಟಗಾರರ ಸೈನ್ಯವು ಎಲ್ಲಾ ಮಾನವ ಸರಕಾರಗಳನ್ನು ವಿಲೀನ ಮಾಡಿ, ದೇವರ ಸಾರ್ವಭೌಮತೆಯನ್ನು ತಿರಸ್ಕರಿಸುವವರೆಲ್ಲರನ್ನು ಕೊಲ್ಲುವುದು. (ಪ್ರಕಟನೆ 19:11-21; ದಾನಿಯೇಲ 2:44ನ್ನು ಹೋಲಿಸಿರಿ.) ಈ ಮಾಧ್ಯಮದ ಮೂಲಕ ಯೆಹೋವ ದೇವರು ಯುದ್ಧರಹಿತವಾದ ಒಂದು ಜಗತ್ತನ್ನು ತರಲಿರುವನು.
[ಅಧ್ಯಯನ ಪ್ರಶ್ನೆಗಳು]
a ಮಹಾ ಬಾಬೆಲಿನ ಕುರಿತಾಗಿರುವ ಪ್ರಕಟನೆಯ ಪ್ರವಾದನೆಯ ಒಂದು ಆಳವಾದ ಅಧ್ಯಯನಕ್ಕಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ, ಇವರಿಂದ 1994 ರಲ್ಲಿ ಪ್ರಕಾಶಿಸಲ್ಪಟ್ಟ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!, ಎಂಬ ಪುಸ್ತಕದ 33 ರಿಂದ 37 ಅಧ್ಯಾಯಗಳನ್ನು ನೋಡಿರಿ.
[ಪುಟ 7 ರಲ್ಲಿರುವ ಚೌಕ]
ವಿಶ್ವ ಸಂಸ್ಥೆಯ ಕುರಿತಾದ ಕ್ರೈಸ್ತ ನೋಟ
ಬೈಬಲ್ ಪ್ರವಾದನೆಯಲ್ಲಿ, ಮಾನವ ಸರಕಾರಗಳು ಹೆಚ್ಚಾಗಿ ಕಾಡು ಮೃಗಗಳಿಂದ ಸಂಕೇತಿಸಲ್ಪಟ್ಟಿವೆ. (ದಾನಿಯೇಲ 7:6, 12, 23; 8:20-22) ಈ ಕಾರಣದಿಂದ ಕಾವಲಿನಬುರುಜು ಪತ್ರಿಕೆಯು, ಅನೇಕ ದಶಕಗಳಿಂದ ಪ್ರಕಟನೆ ಪುಸ್ತಕದ 13 ಮತ್ತು 17 ನೆಯ ಅಧ್ಯಾಯಗಳ ಕಾಡುಮೃಗಗಳನ್ನು ಇಂದಿನ ಲೌಕಿಕ ಸರಕಾರಗಳೊಂದಿಗೆ ಗುರುತಿಸಿದೆ. ಪ್ರಕಟನೆ ಪುಸ್ತಕದ ಅಧ್ಯಾಯ 17 ರಲ್ಲಿ ಏಳು ತಲೆಗಳು ಮತ್ತು ಹತ್ತು ಕೊಂಬುಗಳುಳ್ಳ ಕಡುಗೆಂಪು ಬಣ್ಣದ ಮೃಗವಾಗಿ ಚಿತ್ರಿಸಲ್ಪಟ್ಟಿರುವ, ವಿಶ್ವ ಸಂಸ್ಥೆಯನ್ನು ಇದು ಒಳಗೊಳ್ಳುತ್ತದೆ.
ಆದಾಗಲೂ, ಈ ಶಾಸ್ತ್ರೀಯ ಸ್ಥಾನವು, ಸರಕಾರಗಳ ಅಥವಾ ಅವರ ಅಧಿಕಾರಿಗಳ ಕಡೆಗೆ ಯಾವುದೇ ವಿಧದ ಅಗೌರವವನ್ನು ಮನ್ನಿಸುವುದಿಲ್ಲ. ಬೈಬಲ್ ಸ್ಪಷ್ಟವಾಗಿಗಿ ತಿಳಿಸುವುದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು. ಆದದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮಕವನ್ನು ಎದುರಿಸುತ್ತಾನೆ; ಎದುರಿಸುವವರು ಶಿಕ್ಷೆಗೊಳಗಾಗುವರು.”—ರೋಮಾಪುರ 13:1, 2.
ಇದಕ್ಕನುಸಾರವಾಗಿ, ಕಟ್ಟುನಿಟ್ಟಿನ ರಾಜಕೀಯ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳು, ಮಾನವ ಸರಕಾರಗಳೊಂದಿಗೆ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಎಂದೂ ಕ್ರಾಂತಿಯನ್ನು ಉತ್ತೇಜಿಸುವುದಿಲ್ಲ ಅಥವಾ ಅಸಹಕಾರ ಚಳುವಳಿಗಳಲ್ಲಿ ಭಾಗವಹಿಸುವುದಿಲ್ಲ. ಇದಕ್ಕೆ ಬದಲಾಗಿ, ಮಾನವ ಸಮಾಜದಲ್ಲಿ ನ್ಯಾಯ ಪರಿಪಾಲನೆ ಮತ್ತು ಶಿಸ್ತನ್ನು ಕಾಪಾಡಿಕೊಂಡು ಬರಲು ಯಾವುದೊ ಒಂದು ರೀತಿಯ ಸರಕಾರವು ಅವಶ್ಯವೆಂದು ಅವರು ಅಂಗೀಕರಿಸುತ್ತಾರೆ.—ರೋಮಾಪುರ 13:1-7; ತೀತ 3:1.
ಯೆಹೋವನ ಸಾಕ್ಷಿಗಳು ಲೋಕದ ಇತರ ಸರಕಾರೀ ವ್ಯವಸ್ಥಾಪನೆಗಳನ್ನು ವೀಕ್ಷಿಸುವಂತೆಯೇ ವಿಶ್ವ ಸಂಸ್ಥೆಯನ್ನು ವೀಕ್ಷಿಸುತ್ತಾರೆ. ವಿಶ್ವ ಸಂಸ್ಥೆಯು ದೇವರ ಅನುಮತಿಯಿಂದಲೇ ಅಸ್ತಿತ್ವದಲ್ಲಿರುವುದನ್ನು ಮುಂದುವರಿಸುತ್ತಿದೆಯೆಂದು ಅವರು ಅಂಗೀಕರಿಸುತ್ತಾರೆ. ಬೈಬಲಿಗೆ ಹೊಂದಿಕೆಯಲ್ಲಿ, ಯೆಹೋವನ ಸಾಕ್ಷಿಗಳು ಎಲ್ಲ ಸರಕಾರಗಳಿಗೆ ಯೋಗ್ಯವಾದ ಗೌರವವನ್ನು ಸಲ್ಲಿಸುತಾರ್ತೆ ಮತ್ತು ತಾವು ದೇವರಿಗೆ ವಿರುದ್ಧವಾಗಿ ಪಾಪಮಾಡುವುದನ್ನು ಆ ವಿಧೇಯತೆಯು ಕೇಳಿಕೊಳ್ಳದಿರುವ ತನಕ ಅವರು ಅವುಗಳಿಗೆ ವಿಧೇಯರಾಗುತ್ತಾರೆ.—ಅ. ಕೃತ್ಯಗಳು 5:29.