ಹೆಚ್ಚಿನ ಚಟುವಟಿಕೆಯ ಹೊಸ್ತಿಲಲ್ಲಿ ನಿಂತುಕೊಂಡಿರುವುದು
“ಅಲ್ಲಿ ಸ್ಪರ್ಧಾತ್ಮಕ ಮನೋಭಾವವಿರಲಿಲ್ಲ. ಪ್ರತಿಯೊಬ್ಬರೂ ಸಫಲತೆಯನ್ನು ಪಡೆಯಬೇಕೆಂದು ಎಲ್ಲರೂ ಬಯಸಿದರು” ಎಂಬುದಾಗಿ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 105ನೆಯ ತರಗತಿಯಲ್ಲಿದ್ದ ತಮ್ಮ ಜೊತೆ ವಿದ್ಯಾರ್ಥಿಗಳ ಕುರಿತು ರಿಚರ್ಡ್ ಮತ್ತು ಲೂಸೀಅ ಹೇಳಿದರು. “ನಾವೆಲ್ಲರೂ ಬಹಳ ಭಿನ್ನವಾಗಿದ್ದರೂ, ನಮ್ಮ ದೃಷ್ಟಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಮೂಲ್ಯನು.” ಲೋಯೆಲ್ ಎಂಬ ಸಹಪಾಠಿಯು ಅದನ್ನು ಒಪ್ಪಿಕೊಳ್ಳುತ್ತಾ ಹೇಳಿದ್ದು: “ನಾವು ಒಬ್ಬರಿಗೊಬ್ಬರು ಹತ್ತಿರವಾಗಲು, ನಮ್ಮಲ್ಲಿರುವ ಭಿನ್ನತೆಗಳೇ ಸಹಾಯ ಮಾಡಿದವು.”
ಸೆಪ್ಟೆಂಬರ್ 12, 1998ರಂದು ಪದವಿಪ್ರಾಪ್ತಿ ಪಡೆದ ತರಗತಿಯು ನಿಜವಾಗಿಯೂ ವೈವಿಧ್ಯಮಯವಾಗಿತ್ತು. ರಾಜ್ಯದ ಪ್ರಚಾರಕರಿಗಾಗಿ ಹೆಚ್ಚಿನ ಅಗತ್ಯವಿದ್ದ ಸ್ಥಳಗಳಲ್ಲಿ ಕೆಲವು ವಿದ್ಯಾರ್ಥಿಗಳು ಪಯನೀಯರ್ ಸೇವೆ ಮಾಡಿದ್ದರು; ಇನ್ನೂ ಕೆಲವರು ತಮ್ಮ ಸ್ವಂತ ಊರುಗಳಲ್ಲೇ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸಿದ್ದರು. ಮ್ಯಾಟ್ಸ್ ಮತ್ತು ರೋಸ್-ಮರೀ ಎಂಬ ದಂಪತಿಗಳಂತೆ ಕೆಲವರು, ಈ ಶಾಲೆಗೆ ಬರುವ ಮುಂಚೆ ಇಂಗ್ಲಿಷ್ ಭಾಷೆಯ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು ಬಹಳ ಪರಿಶ್ರಮಪಟ್ಟರು. ವಿದ್ಯಾರ್ಥಿಗಳಲ್ಲಿ ಅನೇಕರು ಮಿಷನೆರಿ ಸೇವೆಯ ಕುರಿತು ಚಿಕ್ಕಂದಿನಿಂದ ಆಲೋಚಿಸುತ್ತಿದ್ದರು. ಒಬ್ಬ ದಂಪತಿಗಳು 12 ಬಾರಿ ಅರ್ಜಿ ಸಲ್ಲಿಸಿದವರಾಗಿದ್ದು, 105ನೆಯ ತರಗತಿಗೆ ಆಮಂತ್ರಣವನ್ನು ಪಡೆದುಕೊಂಡಾಗ ಬಹಳವಾಗಿ ಸಂತೋಷಿಸಿದರು.
ಇಪ್ಪತ್ತು ವಾರಗಳ ತೀವ್ರಗತಿಯಲ್ಲಿ ನಡೆದ ತರಬೇತಿಯು ಬಹಳ ಬೇಗನೆ ಮುಗಿದುಹೋಯಿತು. ದಿನಗಳು ಎಷ್ಟು ಬೇಗನೆ ಉರುಳಿಹೋದವೆಂದರೆ, ವಿದ್ಯಾರ್ಥಿಗಳು ತಮ್ಮ ಕೊನೆಯ ಲಿಖಿತ ಪರೀಕ್ಷೆಯನ್ನು ನೀಡಿ, ತಮ್ಮ ಕೊನೆಯ ಮೌಖಿಕ ವರದಿಯನ್ನು ಒಪ್ಪಿಸಿದಾಗ, ತರಗತಿಯು ಪೂರ್ಣಗೊಂಡಿತ್ತು ಎಂಬುದನ್ನು ಅವರು ಕೂಡಲೇ ಗ್ರಹಿಸಿದರು. ಪದವಿಪ್ರಾಪ್ತಿಯ ದಿನವು ಆಗಮಿಸಿತ್ತು.
ಕಾರ್ಯಕ್ರಮದ ಅಧ್ಯಕ್ಷರೂ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರೂ ಆದ ಆಲ್ಬರ್ಟ್ ಶ್ರೋಡರ್, ಈಗಾಗಲೇ ಗಿಲ್ಯಡ್ ತರಬೇತಿಯನ್ನು ಪಡೆದುಕೊಂಡಿದ್ದ 7,000ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹಿಂಬಾಲಿಸಲಿದ್ದ ತರಗತಿಯು, “ಬೈಬಲ್ ಶಿಕ್ಷಣದ ಕ್ಷೇತ್ರದಲ್ಲಿ ಹೆಚ್ಚಿನ ಚಟುವಟಿಕೆಯ ಹೊಸ್ತಿಲಲ್ಲಿ ನಿಂತುಕೊಂಡಿ”ದೆ ಎಂಬುದನ್ನು ಅವರಿಗೆ ಮರುಜ್ಞಾಪಿಸಿದರು. ಅಂತಾರಾಷ್ಟ್ರೀಯ ಅಧಿವೇಶನಗಳ ಸಂಬಂಧದಲ್ಲಿ ದೀರ್ಘಸಮಯದ ಮಿಷನೆರಿಗಳು ಮುಖ್ಯಕಾರ್ಯಾಲಯಗಳನ್ನು ಸಂದರ್ಶಿಸಿದಾಗ, ಅವರೊಂದಿಗೆ ಸಹವಾಸಿಸುವ ಅಪೂರ್ವ ಅವಕಾಶದಲ್ಲಿ ವಿದ್ಯಾರ್ಥಿಗಳು ಆನಂದಿಸಿದರೆಂದು ಅವರು ಕೂಡಿಸಿ ಹೇಳಿದರು.
ಸಹೋದರ ಶ್ರೋಡರ್, ಬೆತೆಲ್ ಕಾರ್ಯಾಚರಣೆಗಳ ಸಮಿತಿಯಲ್ಲಿರುವ ಮ್ಯಾಕ್ಸ್ ಲಾರ್ಸನ್ ಅವರನ್ನು ಪರಿಚಯಿಸಿದರು. “ನಿತ್ಯಜೀವಕ್ಕೆ ನಡೆಸುವ ಶಿಕ್ಷಣ” ಎಂಬ ಮುಖ್ಯವಿಷಯದ ಮೇಲೆ ಅವರು ಮಾತಾಡಿದರು. ಸಹೋದರ ಲಾರ್ಸನ್ ಜ್ಞಾನೋಕ್ತಿ 1:5ನ್ನು ಉದ್ಧರಿಸಿದರು. ಅದು ಹೇಳುವುದು: “ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು, ವಿವೇಕಿಯು [ಮತ್ತಷ್ಟು] ಉಚಿತಾಲೋಚನೆಯುಳ್ಳವನಾಗುವನು.” ಒಬ್ಬ ಪ್ರಭಾವಕಾರಿ ಮಿಷನೆರಿ ಆಗಿರಲು ಕೌಶಲವು ಅತ್ಯಗತ್ಯವಾಗಿದೆ. ಕೌಶಲಭರಿತ ಪುರುಷರು ರಾಜರ ಮುಂದೆ ನಿಲ್ಲುತ್ತಾರೆ. (ಜ್ಞಾನೋಕ್ತಿ 22:29) ಐದು ತಿಂಗಳುಗಳ ಕಾಲ ಉಪದೇಶ ಪಡೆದುಕೊಂಡ ಬಳಿಕ, ಈ ವಿದ್ಯಾರ್ಥಿಗಳು ಅತ್ಯಂತ ಮಹಾನ್ ರಾಜರುಗಳಾದ ಯೆಹೋವ ದೇವರು ಮತ್ತು ಕ್ರಿಸ್ತ ಯೇಸುವನ್ನು ಪ್ರತಿನಿಧಿಸಲು ಸುಸಜ್ಜಿತರಾಗಿದ್ದಾರೆ.
“ಯೆಹೋವನ ಹೃದಯವು ಹರ್ಷಿಸುವಂತೆ ಸಹಾಯ ಮಾಡಿರಿ” ಎಂಬ ವಿಷಯದ ಮೇಲೆ, ಸೇವಾ ವಿಭಾಗದ ಡೇವಿಡ್ ಓಲ್ಸನ್ ತದನಂತರ ಮಾತಾಡಿದರು. ಅವರು ಕೇಳಿದ್ದು: “ದೇವರ ಹೃದಯವು ಹರ್ಷಿಸುವಂತೆ ಅಪರಿಪೂರ್ಣ ಮಾನವರು ಏನು ಮಾಡಸಾಧ್ಯವಿದೆ?” ಇದಕ್ಕೆ ಉತ್ತರವೇನು? ಅವರು ಆತನನ್ನು ನಂಬಿಗಸ್ತರಾಗಿ, ನಿಷ್ಠಾವಂತರಾಗಿ, ಮತ್ತು ಆನಂದದಿಂದ ಸೇವಿಸಬಲ್ಲರು. ಆತನಿಗೆ ಸಲ್ಲಿಸುವ ಸೇವೆಯಲ್ಲಿ ಜನರು ಆನಂದಿಸಬೇಕೆಂದು ಯೆಹೋವನು ಬಯಸುತ್ತಾನೆ. ನಾವು ದೇವರ ಚಿತ್ತವನ್ನು ಆನಂದದಿಂದ ಮಾಡುವಾಗ, ಆತನ ಹೃದಯವು ಸಂತೋಷದಿಂದ ತುಂಬಿತುಳುಕುತ್ತದೆ. (ಜ್ಞಾನೋಕ್ತಿ 27:11) ಗಿಲ್ಯಡ್ನ 104ನೆಯ ತರಗತಿಯಿಂದ ಪದವಿಪ್ರಾಪ್ತಿ ಹೊಂದಿದ ಒಬ್ಬ ಮಿಷನೆರಿ ದಂಪತಿಗಳಿಂದ ಬಂದ ಪತ್ರವನ್ನು ಸಹೋದರ ಓಲ್ಸನ್ ಓದಿದರು. ಅವರು ತಮ್ಮ ಹೊಸ ನೇಮಕದಲ್ಲಿ ಆನಂದಿಸುತ್ತಿದ್ದಾರೊ? ತಮ್ಮ ಸಭೆಯ ಕುರಿತು ಬರೆಯುತ್ತಾ ಅವರು ಹೇಳುವುದು: “ನಮ್ಮಲ್ಲಿ 140 ಪ್ರಚಾರಕರಿದ್ದಾರೆ. ಆದರೆ ನಮ್ಮ ಕೂಟದ ಸರಾಸರಿ ಹಾಜರಿಯು 250ರಿಂದ 300 ಆಗಿದೆ. ನಾವು ಬಹಳವಾಗಿ ಆನಂದಿಸುವ ಕಾರ್ಯವು ಕ್ಷೇತ್ರ ಸೇವೆಯಾಗಿದೆ. ನಮ್ಮಿಬ್ಬರಲ್ಲಿ ಪ್ರತಿಯೊಬ್ಬರಿಗೆ ನಾಲ್ಕು ಬೈಬಲ್ ಅಧ್ಯಯನಗಳಿವೆ, ಮತ್ತು ಕೆಲವರು ಈಗಾಗಲೇ ಕೂಟಗಳಿಗೆ ಬರುತ್ತಿದ್ದಾರೆ.”
ಆಡಳಿತ ಮಂಡಲಿಯ ಸದಸ್ಯರಾದ ಲೈಮನ್ ಸ್ವಿಂಗಲ್, “ನಿಮ್ಮ ಆಶೀರ್ವಾದಗಳ ಕುರಿತು ಪರ್ಯಾಲೋಚಿಸಲು ಒಂದಿಷ್ಟು ಸಮಯವನ್ನು ತೆಗೆದುಕೊಳ್ಳಿರಿ” ಎಂಬ ವಿಷಯದ ಮೇಲೆ ಮಾತಾಡಿದರು. ಗಿಲ್ಯಡ್ ತರಬೇತಿಯು ಅನೇಕ ಆಶೀರ್ವಾಗಳನ್ನು ತಂದಿತ್ತು. ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವಂತೆ, ಯೆಹೋವನ ಸಂಸ್ಥೆಯ ಕಡೆಗೆ ಹೆಚ್ಚಿನ ಗಣ್ಯತೆಯನ್ನು ಬೆಳೆಸಿಕೊಳ್ಳುವಂತೆ, ಮತ್ತು ದೀನಭಾವದಂತಹ ಅತ್ಯಾವಶ್ಯಕ ಗುಣಗಳನ್ನು ವಿಕಸಿಸಿಕೊಳ್ಳುವಂತೆ ಅದು ಸಹಾಯ ಮಾಡಿತ್ತು. “ಇಲ್ಲಿ ಬಂದು ಉಪದೇಶಕ್ಕೆ ಕಿವಿಗೊಡುತ್ತಾ ಸಮಯವನ್ನು ವ್ಯಯಿಸುವುದು ದೈನ್ಯಗೊಳಿಸುವ ಅನುಭವವಾಗಿದೆ. ಯೆಹೋವನನ್ನು ಮಹಿಮೆಪಡಿಸಲು ನೀವು ಸುಸಜ್ಜಿತರಾಗಿ ಇಲ್ಲಿಂದ ಹೋಗುವಿರಿ” ಎಂಬುದಾಗಿ ಸಹೋದರ ಸ್ವಿಂಗಲ್ ಕೂಡಿಸಿ ಹೇಳಿದರು.
“ನಿಮ್ಮ ಆನಂದವು ಮಹತ್ತರವಾದದ್ದಾಗಿರುವಾಗ ಚಿಂತಿಸುವ ಅಗತ್ಯವೇನು?” ಎಂಬುದು ಆಡಳಿತ ಮಂಡಲಿಯ ಸದಸ್ಯರಾದ ಡ್ಯಾನಿಯಲ್ ಸಿಡ್ಲಿಕ್ ಅವರ ಭಾಷಣದ ಶೀರ್ಷಿಕೆಯಾಗಿತ್ತು. ಸಮಸ್ಯೆಗಳು ಏಳುವಾಗ, ಶಾಸ್ತ್ರವಚನಗಳಿಂದ ಮಾರ್ಗದರ್ಶನವನ್ನು ಹುಡುಕಿರೆಂದು ಅವರು ಪ್ರೋತ್ಸಾಹಿಸಿದರು. ಮತ್ತಾಯ 6ನೆಯ ಅಧ್ಯಾಯದಿಂದ ಕೆಲವು ಆಯ್ದ ವಚನಗಳನ್ನು ಉಪಯೋಗಿಸುತ್ತಾ ಇದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ಸಹೋದರ ಸಿಡ್ಲಿಕ್ ದೃಷ್ಟಾಂತಿಸಿದರು. ನಂಬಿಕೆಯ ಕೊರತೆಯು, ಆಹಾರ ಮತ್ತು ಬಟ್ಟೆಬರೆಗಳಂತಹ ಐಹಿಕ ವಿಷಯಗಳ ಕುರಿತು ಚಿಂತಿಸುವಂತೆ ಮಾಡಸಾಧ್ಯವಿದೆ. ಆದರೆ, ನಮ್ಮ ಅಗತ್ಯಗಳನ್ನು ಯೆಹೋವನು ಬಲ್ಲನು. (ಮತ್ತಾಯ 6:25, 30) ಚಿಂತಿಸುವುದು ಸಮಸ್ಯೆಗಳಿಗೆ ಹೆಚ್ಚನ್ನು ಕೂಡಿಸುವುದೇ ಹೊರತು ಮತ್ತೇನನ್ನೂ ಮಾಡಲಾರದು. (ಮತ್ತಾಯ 6:34) ಇದಕ್ಕೆ ಬದಲಾಗಿ, ಒಂದಿಷ್ಟು ಯೋಜನೆಯು ಅಗತ್ಯವಾಗಿದೆ. (ಲೂಕ 14:28ನ್ನು ಹೋಲಿಸಿರಿ.) ಸಹೋದರ ಸಿಡ್ಲಿಕ್ ವಿವರಿಸಿದ್ದು: “ಭವಿಷ್ಯದ ಕುರಿತು ಗಂಭೀರವಾಗಿ ಪರಿಗಣಿಸಬಾರದೆಂದು ಹೇಳುವ ಬದಲಿಗೆ ಅದರ ಕುರಿತು ವಿನಾ ಕಾರಣ ಚಿಂತಿಸುವುದನ್ನೇ ಯೇಸು ನಿಷೇಧಿಸುತ್ತಾನೆ. ಕಳವಳಗೊಂಡಾಗ ಕಾರ್ಯಪ್ರವೃತ್ತರಾಗುವುದೇ ಅತ್ಯುತ್ತಮವಾದ ಚಿಕಿತ್ಸೆಗಳಲ್ಲಿ ಒಂದಾಗಿದೆ. ಆದುದರಿಂದ, ಕಳವಳಗೊಂಡಾಗ ಸತ್ಯದ ಕುರಿತು ಮಾತಾಡಲಾರಂಭಿಸುವುದೇ ಬುದ್ಧಿವಂತಿಕೆಯ ವಿಷಯವಾಗಿದೆ.”
ಶಿಕ್ಷಕರಿಂದ ಬೀಳ್ಕೊಡುವ ಸಲಹೆ
ಗಿಲ್ಯಡ್ ಶಿಕ್ಷಕಮಂಡಲಿಯ ಮೂವರು ಸದಸ್ಯರು ತದನಂತರ ಮಾತಾಡಿದರು. “ಯೆಹೋವನಿಗೆ ನೀವು ಏನನ್ನು ತಿರುಗಿ ಕೊಡುವಿರಿ?” ಎಂಬ ವಿಷಯದ ಮೇಲೆ ಕಾರ್ಲ್ ಆ್ಯಡಮ್ಸ್ ಪ್ರಥಮವಾಗಿ ಮಾತಾಡಿದರು. ಅವರ ಭಾಷಣವು 116ನೆಯ ಕೀರ್ತನೆಯ ಮೇಲಾಧಾರಿತವಾಗಿತ್ತು. ಇದನ್ನು ಯೇಸು ತನ್ನ ಮರಣದ ಹಿಂದಿನ ರಾತ್ರಿಯಂದು ಹಾಡಿದ್ದಿರಬಹುದು. (ಮತ್ತಾಯ 26:30, ಪಾದಟಿಪ್ಪಣಿ) “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” ಎಂಬ ನುಡಿಗಳನ್ನು ಹಾಡಿದಾಗ, ಯೇಸುವಿನ ಮನಸ್ಸಿನಲ್ಲಿ ಯಾವ ವಿಚಾರಗಳಿದ್ದರಬಹುದು? (ಕೀರ್ತನೆ 116:12) ಯೆಹೋವನು ಯೇಸುವಿಗಾಗಿ ತಯಾರಿಸಿದ್ದ ಪರಿಪೂರ್ಣ ದೇಹದ ಕುರಿತು ಅವನು ಯೋಚಿಸುತ್ತಿದ್ದಿರಬಹುದು. (ಇಬ್ರಿಯ 10:5) ಮರುದಿನ ತನ್ನ ಪ್ರೀತಿಯ ಆಳದ ಪ್ರಮಾಣವಾಗಿ, ಯೇಸು ಆ ಶರೀರವನ್ನು ಯಜ್ಞವಾಗಿ ಅರ್ಪಿಸಲಿದ್ದನು. 105ನೆಯ ತರಗತಿಯ ವಿದ್ಯಾರ್ಥಿಗಳು ಕಳೆದ ಐದು ತಿಂಗಳುಗಳಿಂದ ಯೆಹೋವನ ಒಳ್ಳೆಯತನದ ರುಚಿನೋಡಿದ್ದರು. ಈಗ ತಮ್ಮ ಮಿಷನೆರಿ ನೇಮಕಗಳಲ್ಲಿ ಕಷ್ಟಪಟ್ಟು ಕೆಲಸಮಾಡುವ ಮೂಲಕ, ದೇವರಿಗಾಗಿರುವ ತಮ್ಮ ಪ್ರೀತಿಯನ್ನು ಅವರು ತೋರಿಸಲಿದ್ದಾರೆ.
“ಸರಿಯಾದುದನ್ನು ಮಾಡುತ್ತಾ ಮುಂದುವರಿಯಿರಿ” ಎಂದು, ಗಿಲ್ಯಡ್ ಶಿಕ್ಷಕರಲ್ಲಿ ಎರಡನೆಯವರಾದ ಮಾರ್ಕ್ ನೂಮ್ಯಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಐಗುಪ್ತದಲ್ಲಿ ದಾಸನಾಗಿ ಮಾರಲ್ಪಟ್ಟ ಯೋಸೇಫನು, 13 ವರ್ಷಗಳ ಕಾಲ ಅನ್ಯಾಯವನ್ನು ಸಹಿಸಿಕೊಂಡನು. ದೇವರಿಗೆ ಅವನು ಸಲ್ಲಿಸುತ್ತಿದ್ದ ಸೇವೆಯನ್ನು, ಇತರರ ತಪ್ಪುಗಳು ನಿಲ್ಲಿಸುವಂತೆ ಅವನು ಬಿಟ್ಟುಕೊಟ್ಟನೊ? ಇಲ್ಲ, ಸರಿಯಾದುದನ್ನು ಅವನು ಮಾಡುತ್ತಾ ಮುಂದುವರಿದನು. ತರುವಾಯ, ದೇವರ ನೇಮಿತ ಸಮಯದಲ್ಲಿ, ಯೋಸೇಫನು ತನ್ನ ಕಷ್ಟಗಳಿಂದ ಪಾರಾದನು. ಸೆರೆಮನೆವಾಸದಿಂದ ಅವನು ಅರಮನೆಯಲ್ಲಿ ವಾಸಿಸತೊಡಗಿದನು. (ಆದಿಕಾಂಡ, 37-50ನೆಯ ಅಧ್ಯಾಯಗಳು) ಆಮೇಲೆ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಕೇಳಿದ್ದು: “ಮಿಷನೆರಿ ನೇಮಕದಲ್ಲಿ ನಿಮಗಿದ್ದ ನಿರೀಕ್ಷೆಗಳು ನೆರವೇರದಿದ್ದಲ್ಲಿ, ನೀವು ಆ ಸೇವೆಯನ್ನು ಬಿಟ್ಟುಬಿಡುವಿರೊ? ನೀವು ಹತಾಶೆಗೆ ವಶವಾಗುವಿರೊ? ಇಲ್ಲವೆ, ನೀವು ಯೋಸೇಫನಂತೆ ತಾಳಿಕೊಳ್ಳುವಿರೊ?”
ಕೊನೆಯದಾಗಿ, ಗಿಲ್ಯಡ್ ಶಾಲೆಯ ರಿಜಿಸ್ಟ್ರಾರ್ ಆದ ವಾಲಸ್ ಲಿವರೆನ್ಸ್, “ರಾಜನನ್ನು ಮತ್ತು ರಾಜ್ಯವನ್ನು ಪ್ರಕಟಿಸಿರಿ” ಎಂಬ ವಿಷಯವನ್ನು ತರಗತಿಯ ಸದಸ್ಯರೊಂದಿಗೆ ಸ್ವಾರಸ್ಯಕರವಾಗಿ ಚರ್ಚಿಸಿದರು. ಮನೆಯಿಂದ ಮನೆಗೆ, ಅಂಗಡಿಯಿಂದ ಅಂಗಡಿಗೆ, ಮತ್ತು ಬೀದಿಗಳಲ್ಲಿ ಸಾಕ್ಷಿನೀಡುತ್ತಿದ್ದಾಗ ತಮಗಾದ ಅನುಭವಗಳನ್ನು ಕೆಲವು ವಿದ್ಯಾರ್ಥಿಗಳು ತಿಳಿಸಿದರು. ಬೇರೆ ಭಾಷೆಯಲ್ಲಿ ಮಾತಾಡಿದ ಜನರಿಗೆ ತಾವು ಸಾಕ್ಷಿನೀಡಿದ ವಿಷಯವನ್ನು ಇತರರು ಹೇಳಿದರು. ವಿಭಿನ್ನ ಧಾರ್ಮಿಕ ಹಿನ್ನೆಲೆಗಳ ಜನರಿಗೆ ಸಾಕ್ಷಿನೀಡುವ ವಿಧವನ್ನು ಇನ್ನೂ ಇತರರು ತೋರಿಸಿಕೊಟ್ಟರು. ಮಿಷನೆರಿ ಕ್ಷೇತ್ರದಲ್ಲಿನ ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸಲು ಎಲ್ಲ ಪದವೀಧರರು ಉತ್ಸುಕರಾಗಿದ್ದರು.
ಆನಂದಿತ ದೀರ್ಘಸಮಯದ ಮಿಷನೆರಿಗಳು
“ಮಿಷನೆರಿ ಸೇವೆಯಿಂದ ಬರುವ ಆನಂದಭರಿತ ಫಲಿತಾಂಶಗಳು” ಎಂಬ ಶೀರ್ಷಿಕೆಯ ಮುಂದಿನ ಭಾಗವು ರಾಬರ್ಟ್ ವಾಲನ್ ಅವರಿಂದ ಪ್ರಸ್ತುತಗೊಳಿಸಲ್ಪಟ್ಟಿತು. ಅನುಭವಸ್ಥ ಮಿಷನೆರಿಗಳೊಂದಿಗೆ ಆತ್ಮೋನ್ನತಿ ಮಾಡುವ ಸಹವಾಸದಲ್ಲಿ ಪಾಲ್ಗೊಂಡ ಮುಖ್ಯಕಾರ್ಯಾಲಯದ ಸಿಬ್ಬಂದಿಯಲ್ಲಿ ನಾಲ್ವರು ಸಹೋದರರ ಇಂಟರ್ವ್ಯೂ ಅದರಲ್ಲಿ ಸೇರಿತ್ತು. ಹೊಸ ಭಾಷೆಯನ್ನು ಕಲಿತುಕೊಳ್ಳುವುದು, ಮತ್ತೊಂದು ಸಂಸ್ಕೃತಿಗೆ ಹೊಂದಿಕೊಳ್ಳುವುದು, ಇಲ್ಲವೆ ಬೇರೆಯಾದ ಹವಾಗುಣಕ್ಕೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲವೆಂದು ಆ ಮಿಷನೆರಿಗಳು ಮನಃಪೂರ್ವಕವಾಗಿ ಒಪ್ಪಿಕೊಂಡರು. ಮನೆಯಿಂದ ದೂರವಾದ ವೇದನೆಯನ್ನೂ ಅವರು ಸಹಿಸಿಕೊಳ್ಳಬೇಕಿತ್ತು. ಕೆಲವೊಮ್ಮೆ ಆರೋಗ್ಯದ ಸಮಸ್ಯೆಗಳೆದ್ದವು. ಇವೆಲ್ಲವುಗಳ ಮಧ್ಯೆಯೂ ಮಿಷನೆರಿಗಳು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಂಡರು, ಮತ್ತು ಅವರ ಪಟ್ಟುಬಿಡದ ಪ್ರಯತ್ನವು ಆಶೀರ್ವದಿಸಲ್ಪಟ್ಟಿತು. ಕೆಲವರು ಅನೇಕ ಜನರಿಗೆ ಯೆಹೋವನ ಜ್ಞಾನವನ್ನು ನೀಡಿದ್ದರು. ಇತರರು ತಮ್ಮ ದೇಶಗಳಲ್ಲಿನ ರಾಜ್ಯದ ಅಭಿವೃದ್ದಿಗೆ ಹಲವಾರು ಬೇರೆ ವಿಧಗಳಲ್ಲಿ ನೆರವು ನೀಡಿದ್ದರು.
ಆಡಳಿತ ಮಂಡಲಿಯ ಸದಸ್ಯರಾದ ಕ್ಯಾರಿ ಬಾರ್ಬರ್ ಕೊನೆಯ ಭಾಷಣಕಾರರಾಗಿದ್ದರು. ಅವರು, “ದೇವರ ಜೀವನ ಮಾರ್ಗ” ಎಂಬ ಅಧಿವೇಶನ ಕಾರ್ಯಕ್ರಮದ ಮುಖ್ಯಾಂಶಗಳನ್ನು ವಿಮರ್ಶಿಸಿದರು. “ಯೆಹೋವನೊಂದಿಗಿನ ನಿಮ್ಮ ಸಂಬಂಧದ ಮೇಲೆ ಅಧಿವೇಶನ ಕಾರ್ಯಕ್ರಮವು ಯಾವ ಪ್ರಭಾವವನ್ನು ಬೀರಿತು?” ಎಂಬುದಾಗಿ ಅವರು ಸಭಿಕರನ್ನು ಕೇಳಿದರು. ಲೋಕದ ಮಾರ್ಗವನ್ನು ಅನುಸರಿಸುವವರಿಗಾಗುವ ವಿಪತ್ಕಾರಕ ಅಂತ್ಯವನ್ನು ದೇವರ ಮಾರ್ಗವನ್ನು ಅನುಸರಿಸುವವರಿಗಾಗುವ ಆಶೀರ್ವದಿತ ಫಲಿತಾಂಶಗಳೊಂದಿಗೆ ಭಾಷಣಕಾರರು ಹೋಲಿಸಿದರು. ಮೆರಿಬಾದಲ್ಲಿ ಮೋಶೆಯು ಮಾಡಿದ ತಪ್ಪನ್ನು ಉಲ್ಲೇಖಿಸುತ್ತಾ ಅವರು ಎಚ್ಚರಿಸಿದ್ದು: “ವ್ಯಕ್ತಿಯೊಬ್ಬನು ಅನೇಕ ವರ್ಷಗಳ ಕಾಲ ನಂಬಿಗಸ್ತಿಕೆಯಿಂದ ಸೇವೆಮಾಡಿದರೂ, ಯೆಹೋವನು ತನ್ನ ನೀತಿವಂತ ನಿಯಮಗಳ ಕ್ಷುಲ್ಲಕ ಉಲ್ಲಂಘನೆಯನ್ನೂ ಗಂಭೀರವಾಗಿ ಪರಿಗಣಿಸುವನು.” (ಅರಣ್ಯಕಾಂಡ 20:2-13) ಎಲ್ಲೆಡೆಯೂ ಇರುವ ದೇವರ ಎಲ್ಲ ಸೇವಕರು, ತಮ್ಮ ಅಮೂಲ್ಯವಾದ ಸೇವಾ ಸುಯೋಗಗಳನ್ನು ಬಿಗಿಯಾಗಿ ಹಿಡಿದುಕೊಳ್ಳಲಿ!
ವಿದ್ಯಾರ್ಥಿಗಳು ತಮ್ಮ ಪದವಿಯ ಪ್ರಶಸ್ತಿಪತ್ರಗಳನ್ನು ಸ್ವೀಕರಿಸುವ ಸಮಯವು ಆಗಮಿಸಿತ್ತು. ತರುವಾಯ, ವಿದ್ಯಾರ್ಥಿಗಳು ಪಡೆದಿದ್ದ ತರಬೇತಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದ ಒಂದು ಪತ್ರವನ್ನು ತರಗತಿಯ ಪ್ರತಿನಿಧಿಯು ಓದಿದನು. ಸಮಾಪ್ತಿಯ ಗೀತೆ ಹಾಗೂ ಹೃತ್ಪೂರ್ವಕವಾದ ಪ್ರಾರ್ಥನೆಯ ತರುವಾಯ, ಪದವಿಪ್ರಾಪ್ತಿಯ ಕಾರ್ಯಕ್ರಮವು ಮುಗಿಯಿತು. ಆದರೆ 105ನೆಯ ತರಗತಿಗೆ, ಇದು ಕೇವಲ ಒಂದು ಆರಂಭ ಮಾತ್ರ, ಏಕೆಂದರೆ ಹೊಸ ಮಿಷನೆರಿಗಳು “ಹೆಚ್ಚಿನ ಚಟುವಟಿಕೆಯ ಹೊಸ್ತಿಲಲ್ಲಿ ನಿಂತುಕೊಂಡಿ”ದ್ದರು.
[ಪುಟ 23 ರಲ್ಲಿರುವ ಚೌಕ]
ತರಗತಿಯ ಅಂಕೆಸಂಖ್ಯೆಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 9
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 17
ವಿದ್ಯಾರ್ಥಿಗಳ ಸಂಖ್ಯೆ: 48
ವಿವಾಹಿತ ದಂಪತಿಗಳ ಸಂಖ್ಯೆ: 24
ಸರಾಸರಿ ವಯಸ್ಸು: 33
ಸತ್ಯದಲ್ಲಿ ಸರಾಸರಿ ವರ್ಷಗಳು: 16
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12
[ಪುಟ 24 ರಲ್ಲಿರುವ ಚೌಕ]
ಅವರು ಪೂರ್ಣಸಮಯದ ಸೇವೆಯನ್ನು ಆರಿಸಿಕೊಂಡರು
“ನಾನು ಚಿಕ್ಕವನಾಗಿದ್ದಾಗ, ಪಯನೀಯರ್ ಸೇವೆ ಮಾಡುವ ಯೋಜನೆಗಳೇ ನನಗಿರಲಿಲ್ಲ” ಎಂಬುದಾಗಿ, 105ನೆಯ ತರಗತಿಯ ಪದವೀಧರರಾದ ಬೆನ್ ಹೇಳುತ್ತಾರೆ. ಅವರು ಕೂಡಿಸಿ ಹೇಳುವುದು: “ವಿಶೇಷ ಸಾಮರ್ಥ್ಯಗಳು ಮತ್ತು ಉತ್ತಮ ಪರಿಸ್ಥಿತಿಗಳಿರುವವರು ಮಾತ್ರ ಪಯನೀಯರ್ ಸೇವೆ ಮಾಡಬಹುದೆಂದು ನಾನು ನೆನಸಿದೆ. ಆದರೆ ನಾನು ಕ್ಷೇತ್ರ ಸೇವೆಯಲ್ಲಿ ಬಹಳವಾಗಿ ಆನಂದಿಸಿದೆ. ತರುವಾಯ, ಪಯನೀಯರನಾಗಿರುವುದು ಶುಶ್ರೂಷೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವುದನ್ನೇ ಅರ್ಥೈಸುತ್ತದೆಂದು ನನಗೆ ಒಂದು ದಿನ ತಿಳಿಯಿತು. ಆಗ, ನಾನೊಬ್ಬ ಪಯನೀಯರನಾಗಬಹುದೆಂದು ನನಗೆ ತಿಳಿದುಬಂದಿತು.”
“ನಮ್ಮ ಮನೆಯಲ್ಲಿ ಪೂರ್ಣ ಸಮಯದ ಸೇವಕರನ್ನು ಬಹಳವಾಗಿ ಗೌರವಿಸಲಾಗುತ್ತಿತ್ತು,” ಎಂಬುದಾಗಿ ಲೂಸೀಅ ಹೇಳುತ್ತಾರೆ. ಮಿಷನೆರಿಗಳು ಅವರ ಸಭೆಯನ್ನು ಸಂದರ್ಶಿಸಿದಾಗಲೆಲ್ಲ ಉಂಟಾಗುವ ಹರ್ಷೋಲ್ಲಾಸವನ್ನು ಅವರು ಜ್ಞಾಪಿಸಿಕೊಳ್ಳುತ್ತಾರೆ. “ನಾನು ದೊಡ್ಡವಳಾದಂತೆ, ಪೂರ್ಣ ಸಮಯದ ಸೇವೆಯು ನನ್ನ ಯೋಜನೆಗಳ ಒಂದು ಭಾಗವಾಗಿರಲಿತ್ತೆಂದು ಆಗಲೇ ನಿರ್ಧರಿಸಲಾಗಿತ್ತು” ಎಂದು ಅವರು ಹೇಳುತ್ತಾರೆ.
ಥೀಅಡಿಸ್ 15 ವರ್ಷದವರಾಗಿದ್ದಾಗ ಅವರ ತಾಯಿ ಅಸುನೀಗಿದರು. ಅವರು ಹೇಳುವುದು: “ಆ ಸಮಯದಲ್ಲಿ ಸಭೆಯು ನನ್ನನ್ನು ಬಹಳವಾಗಿ ಬೆಂಬಲಿಸಿತು. ಆದುದರಿಂದ ನಾನು ನನ್ನನ್ನೇ ಹೀಗೆ ಕೇಳಿಕೊಂಡೆ, ‘ನನ್ನ ಗಣ್ಯತೆಯನ್ನು ತೋರಿಸಲು ನಾನು ಏನು ಮಾಡಸಾಧ್ಯವಿದೆ?’” ಇದು ಅವರನ್ನು ಪೂರ್ಣ ಸಮಯದ ಸೇವೆಗೆ ಮತ್ತು ಈಗ ಮಿಷನೆರಿ ಸೇವೆಗೆ ನಡೆಸಿತು.
[ಪುಟ 25 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಪದವಿಪ್ರಾಪ್ತರಾಗುತ್ತಿರುವ 105ನೆಯ ತರಗತಿ
ಕೆಳಗಿಣ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು ಪ್ರತಿ ಸಾಲಿನಲ್ಲಿ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ
(1) ಸ್ಯಾಂಪ್ಸನ್, ಎಮ್.; ಬ್ರೌನ್, ಐ.; ಹೆಗ್ಲೀ, ಜಿ.; ಅಬೂಯನ್, ಈ.; ಡೇಬ್ವಾ, ಎಮ್.; ಪೂರ್ಟೀ, ಪಿ. (2) ಕಾಸಮ್, ಜಿ.; ಲಿಂಬರ್ಗ್, ಆರ್.; ಡ್ಯಾಪೂಸೋ, ಎ.; ಟೇಲರ್, ಸಿ.; ಲಫೆವ್ರ, ಕೆ.; ವಾಕರ್, ಎಸ್. (3) ಬೇಕರ್, ಎಲ್.; ಪೆಲಸ್, ಎಮ್.; ವೋಗನ್, ಈ.; ಬೋಅನ, ಸಿ.; ಆ್ಯಸ್ಪ್ಲಂಡ್, ಜೆ.; ಹೈಲ, ಜೆ. (4) ಪೂರ್ಟೀ, ಟಿ.; ವಿಟೆಕರ್, ಜೆ.; ಪಾಮರ್, ಎಲ್.; ನಾರ್ಟನ್, ಎಸ್.; ಗೇರಿಂಗ್, ಎಮ್.; ಹೈಲ, ಡಬ್ಲ್ಯೂ. (5) ವಾಕರ್, ಜೆ.; ಬೋಅನ, ಎ.; ಗ್ರೂನ್ವೆಲ್ಡ್, ಸಿ.; ವಾಷಿಂಗ್ಟನ್, ಎಮ್.; ವಿಟೆಕರ್, ಡಿ.; ಅಬೂಯನ್, ಜೆ. (6) ಗೇರಿಂಗ್, ಡಬ್ಲ್ಯೂ.; ವಾಷಿಂಗ್ಟನ್, ಕೆ.; ಪೆಲಸ್, ಎಮ್.; ಡೇಬ್ವಾ, ಆರ್.; ಹೆಗ್ಲೀ, ಟಿ.; ಆ್ಯಸ್ಪ್ಲಂಡ್, ಎ. (7) ವೋಗನ್, ಬಿ.; ಲಫೆವ್ರ, ಆರ್.; ಟೇಲರ್, ಎಲ್.; ಬ್ರೌನ್, ಟಿ.; ಗ್ರೂನ್ವೆಲ್ಡ್, ಆರ್.; ಪಾಮರ್, ಆರ್. (8) ನಾರ್ಟನ್, ಪಿ.; ಸ್ಯಾಂಪ್ಸನ್, ಟಿ.; ಬೇಕರ್, ಸಿ.; ಲಿಂಬರ್ಗ್, ಎಮ್.; ಕಾಸಮ್, ಎಮ್.; ಡ್ಯಾಪೂಸೋ, ಎಮ್.