ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಜೂನ್‌ ಪು. 32
  • ನಿಮಗೆ ನೆನಪಿದೆಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನಿಮಗೆ ನೆನಪಿದೆಯೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಜೂನ್‌ ಪು. 32

ನಿಮಗೆ ನೆನಪಿದೆಯಾ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ನಾವು ಇನ್ನೂ ಚೆನ್ನಾಗಿ ಹಾಡಲು ಯಾವ ನಾಲ್ಕು ವಿಷಯಗಳನ್ನು ಮಾಡಬಹುದು?

ನಮ್ಮ ಗೀತೆ ಪುಸ್ತಕವನ್ನು ಎತ್ತಿಹಿಡಿದು ನೆಟ್ಟಗೆ ನಿಂತು ಹಾಡಬಹುದು. ಸರಿಯಾಗಿ ಉಸಿರಾಡಬೇಕು. ಬಾಯಿಯನ್ನು ದೊಡ್ಡದಾಗಿ ತೆರೆದು ಗಟ್ಟಿಯಾದ ಸ್ವರದಿಂದ ಹಾಡುವಾಗ ಸ್ವರವೆತ್ತಿ ಹಾಡಲು ಸಾಧ್ಯವಾಗುತ್ತದೆ. —w17.11, ಪು. 5.

ಇಸ್ರಾಯೇಲಿನ ಆಶ್ರಯನಗರಗಳು ಯಾವ ಸ್ಥಳಗಳಲ್ಲಿದ್ದವು ಮತ್ತು ಅವುಗಳಿಗೆ ಹೋಗುವ ದಾರಿ ಹೇಗಿದ್ದವು ಎನ್ನುವುದರಲ್ಲಿ ಯಾವ ವಿಷಯಗಳು ನಮ್ಮ ಗಮನ ಸೆಳೆಯುತ್ತವೆ?

ಇಸ್ರಾಯೇಲಿನಲ್ಲಿ ಆಶ್ರಯನಗರಗಳು ಆರು ಕಡೆಗಳಲ್ಲಿದ್ದವು. ಅವುಗಳಿಗೆ ಹೋಗುವ ದಾರಿಯನ್ನು ಒಳ್ಳೇ ಸ್ಥಿತಿಯಲ್ಲಿ ಇಡಲಾಗಿತ್ತು. ಇದರಿಂದಾಗಿ ಒಬ್ಬ ವ್ಯಕ್ತಿ ಆ ನಗರಗಳಿಗೆ ಸುಲಭವಾಗಿ ಮತ್ತು ಬೇಗನೆ ತಲುಪಿ ಆಶ್ರಯ ಪಡೆಯಬಹುದಿತ್ತು.—w17.11, ಪು. 14.

ಕೀರ್ತನೆ 118:22 ಯೇಸುವಿನ ಪುನರುತ್ಥಾನಕ್ಕೆ ಹೇಗೆ ಸೂಚಿಸಿತು?

ಯೆಹೂದ್ಯರು ಯೇಸುವನ್ನು ಮೆಸ್ಸೀಯನೆಂದು ಒಪ್ಪಿಕೊಳ್ಳಲಿಲ್ಲ. ಆತನು ತಮಗೆ ಬೇಡವೆಂದು ಹೇಳಿ ಕೊಂದುಹಾಕಿದರು. ಆತನು ‘ಮುಖ್ಯವಾದ ಮೂಲೆಗಲ್ಲು’ ಆಗಬೇಕಿದ್ದರೆ ಆತನ ಪುನರುತ್ಥಾನವಾಗಲೇ ಬೇಕಿತ್ತು. —w17.12, ಪು. 9-10.

ಮೆಸ್ಸೀಯನ ವಂಶಾವಳಿಯಲ್ಲಿರುವ ಪುರುಷರೆಲ್ಲರೂ ಚೊಚ್ಚಲತನದ ಹಕ್ಕು ಇದ್ದವರಾ?

ಯೇಸುವಿನ ವಂಶಾವಳಿಯಲ್ಲಿದ್ದ ಪುರುಷರಲ್ಲಿ ಕೆಲವರು ಚೊಚ್ಚಲ ಗಂಡುಮಕ್ಕಳಾಗಿದ್ದರು, ಆದರೆ ಎಲ್ಲರೂ ಅಲ್ಲ. ದಾವೀದನು ಇಷಯನ ಮೊದಲ ಮಗನಲ್ಲದಿದ್ದರೂ ಮೆಸ್ಸೀಯನು ದಾವೀದನ ವಂಶದಲ್ಲೇ ಹುಟ್ಟಿದನು.—w17.12, ಪು. 14-15.

ಬೈಬಲಿನಲ್ಲಿ ಯಾವ ವೈದ್ಯಕೀಯ ತತ್ವಗಳಿವೆ?

ಮೋಶೆಯ ಮೂಲಕ ದೇವರು ಕೊಟ್ಟ ನಿಯಮಗಳಿಗನುಸಾರ, ನಿರ್ದಿಷ್ಟ ಕಾಯಿಲೆಗಳಿದ್ದವರನ್ನು ಪ್ರತ್ಯೇಕವಾಗಿ ಇರಿಸಬೇಕಿತ್ತು. ಶವವನ್ನು ಮುಟ್ಟಿದ ನಂತರ ಜನರು ತಮ್ಮನ್ನು ಶುದ್ಧಪಡಿಸಿಕೊಳ್ಳಬೇಕಿತ್ತು. ಮಾನವ ಮಲವನ್ನು ಮಣ್ಣಿನಲ್ಲಿ ಮುಚ್ಚಿಬಿಡಬೇಕಿತ್ತು. ಗಂಡು ಮಗು ಹುಟ್ಟಿದ ಎಂಟನೇ ದಿನದಲ್ಲೇ ಸುನ್ನತಿ ಮಾಡಿಸಬೇಕಿತ್ತು. ಏಕೆಂದರೆ ಆ ದಿನ ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯ ಒಳ್ಳೇದಾಗಿರುತ್ತಿತ್ತು. —wp18.1, ಪು. 7.

ನಾವು ನಮ್ಮನ್ನೇ ಸ್ವಲ್ಪ ಮಟ್ಟಿಗೆ ಪ್ರೀತಿಸುವುದು ತಪ್ಪಲ್ಲ ಯಾಕೆ?

ನಾವು ನಮ್ಮ ನೆರೆಯವರನ್ನು ನಮ್ಮಂತೆಯೇ ಪ್ರೀತಿಸಬೇಕು. (ಮಾರ್ಕ 12:31) ಗಂಡಂದಿರು ‘ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು.’ (ಎಫೆ. 5:28) ಆದರೆ ಸ್ವಪ್ರೇಮ ಹೆಚ್ಚಾದರೆ ಸ್ವಾರ್ಥಿಗಳು ಆಗಿಬಿಡುತ್ತೇವೆ.—w18.01, ಪು. 23.

ಆಧ್ಯಾತ್ಮಿಕವಾಗಿ ಬೆಳೆಯಲು ನಮಗೆ ಯಾವ ಅಂಶಗಳು ಸಹಾಯ ಮಾಡುತ್ತವೆ?

ನಾವು ಬೈಬಲನ್ನು ಅಧ್ಯಯನ ಮಾಡಬೇಕು, ಧ್ಯಾನಿಸಬೇಕು ಮತ್ತು ಕಲಿತ ವಿಷಯಗಳನ್ನು ಅನ್ವಯಿಸಿಕೊಳ್ಳಬೇಕು. ಪವಿತ್ರಾತ್ಮದ ಮಾರ್ಗದರ್ಶನದಂತೆ ನಡೆಯಬೇಕು. ಇತರರು ಕೊಡುವ ಸಹಾಯವನ್ನು ಸ್ವೀಕರಿಸಿ, ಕೃತಜ್ಞತೆ ತೋರಿಸಬೇಕು.—w18.02, ಪು. 26.

ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯಶಾಸ್ತ್ರ ಮತ್ತು ಕಣಿಹೇಳುವ ಆಚಾರಗಳ ಮೊರೆ ಹೋಗಬಾರದು ಯಾಕೆ?

ಇದಕ್ಕೆ ಹಲವಾರು ಕಾರಣಗಳಿವೆ. ಆದರೆ ಮುಖ್ಯ ಕಾರಣವೇನೆಂದರೆ ಈ ಎರಡೂ ಆಚಾರಗಳನ್ನು ಬೈಬಲ್‌ ಖಂಡಿಸುತ್ತದೆ.—wp18.2, ಪು. 4-5.

ನಾವು ಯಾರಿಗಾದರೂ ಊಟಕ್ಕೆ ಬರುತ್ತೇವೆಂದು ಮಾತು ಕೊಟ್ಟ ಮೇಲೆ ಏನು ಮಾಡಬೇಕು?

ಊಟಕ್ಕೆ ಬರುತ್ತೇವೆಂದು ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. (ಕೀರ್ತ. 15:4) ಕ್ಷುಲ್ಲಕ ಕಾರಣಗಳಿಗೆ ಹೋಗದೆ ಇರಬಾರದು. ಯಾಕೆಂದರೆ ಅವರು ನಮಗೋಸ್ಕರ ಕಷ್ಟಪಟ್ಟು ತಯಾರಿಗಳನ್ನು ಮಾಡಿರಬಹುದು.—w18.03, ಪು. 18.

ನೇಮಿತ ಪುರುಷರು ತಿಮೊಥೆಯನಿಂದ ಏನು ಕಲಿಯಬಹುದು?

ತಿಮೊಥೆಯನಿಗೆ ಸಹೋದರರ ಮೇಲೆ ಕಾಳಜಿ ಇತ್ತು ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಟ್ಟನು. ಪವಿತ್ರ ಸೇವೆಯಲ್ಲಿ ತುಂಬ ಶ್ರಮ ಹಾಕಿದನು ಮತ್ತು ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕಿದನು. ತನ್ನನ್ನೇ ತರಬೇತಿಗೊಳಿಸುತ್ತಾ ಇದ್ದನು ಮತ್ತು ಪವಿತ್ರಾತ್ಮದ ಮೇಲೆ ಹೊಂದಿಕೊಂಡನು. ಹಿರಿಯರು ಮತ್ತು ಬೇರೆಯವರು ಕೂಡ ಅವನನ್ನು ಮಾದರಿ ಮಾಡಿಕೊಳ್ಳಬಹುದು.—w18.04, ಪು. 13-14.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ