ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಡಿಸೆಂಬರ್‌ ಪು. 9
  • ನಿಮಗೆ ನೆನಪಿದೆಯಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ನೆನಪಿದೆಯಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಅರ್ಥಮಾಡಿಕೊಳ್ಳೋ ದೇವರು ಯೆಹೋವ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • “ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆನು”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ವಿವೇಕದಿಂದ ಬಾಳ ಸಂಗಾತಿಯನ್ನ ಆರಿಸಿಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಡಿಸೆಂಬರ್‌ ಪು. 9

ನಿಮಗೆ ನೆನಪಿದೆಯಾ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಗಮನ ಕೊಟ್ಟು ಓದಿದ್ರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ದೇವರಿಗೆ ನಮ್ಮ ಬಗ್ಗೆ ಪರಾನುಭೂತಿ ಇದೆ ಎನ್ನಲು ಬೈಬಲ್‌ ಯಾವ ಆಧಾರ ಕೊಡುತ್ತದೆ?

ಪ್ರಾಚೀನ ಇಸ್ರೇಲಿನ ಜನರು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ಅವರು ಅನುಭವಿಸುತ್ತಿದ್ದ ಸಂಕಟದ ಬಗ್ಗೆ ದೇವರಿಗೆ ಗೊತ್ತಿತ್ತು ಮತ್ತು ಅವರಿಗೆ ನೋವಾದಾಗ ಆತನಿಗೂ ನೋವಾಯಿತು. (ವಿಮೋ. 3:7; ಯೆಶಾ. 63:9) ನಮ್ಮನ್ನು ದೇವರ ಸ್ವರೂಪದಲ್ಲಿ ರಚಿಸಲಾಗಿದೆ. ಹಾಗಾಗಿ ನಾವು ಸಹ ಪರಾನುಭೂತಿ ಬೆಳೆಸಿಕೊಳ್ಳಬಹುದು. ದೇವರ ಪ್ರೀತಿಗೆ ನಾವು ಯೋಗ್ಯರಲ್ಲ ಅಂತ ಅನಿಸಿದರೂ ನಮ್ಮ ಬಗ್ಗೆ ನಮಗಿಂತ ಚೆನ್ನಾಗಿ ದೇವರಿಗೆ ಗೊತ್ತು. ಆತನಿಗೆ ನಮ್ಮ ಬಗ್ಗೆ ಪರಾನುಭೂತಿ ಇದೆ.—wp18.3, ಪುಟ 8-9.

ಯೇಸುವಿನ ಬೋಧನೆಗಳು ಪೂರ್ವಗ್ರಹವನ್ನು ಜಯಿಸಲು ಜನರಿಗೆ ಹೇಗೆ ಸಹಾಯ ಮಾಡಿದವು?

ಯೇಸುವಿನ ಕಾಲದಲ್ಲಿದ್ದ ಅನೇಕ ಯೆಹೂದಿಗಳಿಗೆ ಪೂರ್ವಗ್ರಹವಿತ್ತು. ಯೇಸು ಜನರಿಗೆ, ದೀನರಾಗಿರುವುದು ತುಂಬ ಮುಖ್ಯ ಎಂದು ಹೇಳಿದನು ಮತ್ತು ತಾವು ಇಂಥ ಜನಾಂಗಕ್ಕೆ ಸೇರಿದವರೆಂದು ಕೊಚ್ಚಿಕೊಳ್ಳುವುದು ಒಳ್ಳೇದಲ್ಲ ಎಂದು ಅರ್ಥಮಾಡಿಸಿದನು. ತನ್ನ ಹಿಂಬಾಲಕರು ಒಬ್ಬರನ್ನೊಬ್ಬರು ಒಡಹುಟ್ಟಿದವರಂತೆ ನೋಡಬೇಕು ಎಂದು ಕಲಿಸಿದನು.—w18.06, ಪುಟ 9-10.

ಮೋಶೆ ವಾಗ್ದತ್ತ ದೇಶಕ್ಕೆ ಹೋಗಲು ದೇವರು ಯಾಕೆ ಅನುಮತಿಸಲಿಲ್ಲ ಅನ್ನುವುದರಿಂದ ನಾವು ಯಾವ ಪಾಠ ಕಲಿಯಬಹುದು?

ಮೋಶೆ ಯೆಹೋವನ ಆಪ್ತ ಸ್ನೇಹಿತನಾಗಿದ್ದನು. (ಧರ್ಮೋ. 34:10) ಅರಣ್ಯದಲ್ಲಿ 40 ವರ್ಷಗಳು ಕಳೆದು ಇನ್ನೇನು ವಾಗ್ದತ್ತ ದೇಶವನ್ನು ಪ್ರವೇಶಿಸುವ ಸಮಯ ಬಂದಾಗ ಜನರು ನೀರಿಲ್ಲ ಎಂದು ಎರಡನೇ ಸಾರಿ ದೂರಿದರು. ದೇವರು ಮೋಶೆಗೆ ಬಂಡೆಯ ಜೊತೆ ಮಾತಾಡಲು ಹೇಳಿದನು. ಆದರೆ ಮೋಶೆ ಬಂಡೆಗೆ ಹೊಡೆದನು. ಯೆಹೋವನಿಗೆ ಮೋಶೆಯ ಮೇಲೆ ಕೋಪ ಬರಲು ಎರಡು ಕಾರಣಗಳು ಇದ್ದಿರಬಹುದು. ಒಂದು, ಮೋಶೆ ಆತನು ಕೊಟ್ಟ ನಿರ್ದೇಶನಗಳನ್ನು ಪಾಲಿಸಲಿಲ್ಲ. ಇನ್ನೊಂದು, ಅದ್ಭುತ ಮಾಡಿದ ಮೇಲೆ ಮೋಶೆ ದೇವರಿಗೆ ಮಹಿಮೆ ಸಲ್ಲಿಸಲಿಲ್ಲ. (ಅರ. 20:6-12) ಯೆಹೋವನ ಮಾತನ್ನು ಕೇಳುವುದು ಮತ್ತು ಆತನಿಗೆ ಮಹಿಮೆ ಸಲ್ಲಿಸುವುದು ಎಷ್ಟು ಪ್ರಾಮುಖ್ಯ ಎಂದು ಈ ವೃತ್ತಾಂತದಿಂದ ನಾವು ಕಲಿಯಬಹುದು.—w18.07, ಪುಟ 13-14.

ನಾವು ಹೇಗೆ ಹೊರತೋರಿಕೆ ನೋಡಿ ತೀರ್ಪು ಮಾಡುವ ತಪ್ಪನ್ನು ಮಾಡಿಬಿಡಬಹುದು?

ಅನೇಕ ಜನರು ಒಬ್ಬ ವ್ಯಕ್ತಿಯ ಜನಾಂಗ ಅಥವಾ ದೇಶ, ಆಸ್ತಿಪಾಸ್ತಿ ಅಥವಾ ವಯಸ್ಸು ನೋಡಿ ಕಣ್ಣಿಗೆ ಕಂಡಂತೆ ತೀರ್ಪು ಮಾಡುತ್ತಾರೆ. ಆದರೆ ದೇವರು ಹೇಗೆ ಬೇರೆಯವರಿಗೆ ಪಕ್ಷಪಾತ ಮಾಡುವುದಿಲ್ಲವೋ ನಾವೂ ಹಾಗೇ ಪಕ್ಷಪಾತ ಮಾಡಬಾರದು. (ಅ. ಕಾ. 10:34, 35)—w18.08, ಪುಟ 8-12.

ವೃದ್ಧ ಕ್ರೈಸ್ತರು ಯಾವ ಕೆಲವು ವಿಧಗಳಲ್ಲಿ ಬೇರೆಯವರಿಗೆ ಸಹಾಯ ಮಾಡಬಹುದು?

ವೃದ್ಧ ಕ್ರೈಸ್ತರಿಗೆ ನೇಮಕ ಬದಲಾಗಿದ್ದರೂ ದೇವರ ದೃಷ್ಟಿಯಲ್ಲಿ ಅವರು ಇನ್ನೂ ಅಮೂಲ್ಯರು. ಅವರು ಬೇರೆಯವರಿಗೆ ತಮ್ಮಿಂದಾದಷ್ಟು ಸಹಾಯವನ್ನು ಈಗಲೂ ಮಾಡಬಹುದು. ಸಭೆಯಲ್ಲಿರುವ ಸಹೋದರ-ಸಹೋದರಿಯರ ಸತ್ಯದಲ್ಲಿಲ್ಲದ ಸಂಗಾತಿಗಳಿಗೆ, ನಿಷ್ಕ್ರಿಯರಿಗೆ ಸಹಾಯ ಮಾಡಬಹುದು. ಬೈಬಲ್‌ ಅಧ್ಯಯನಗಳನ್ನು ನಡೆಸಬಹುದು ಮತ್ತು ಸೇವೆಯಲ್ಲಿ ಹೆಚ್ಚನ್ನು ಮಾಡಬಹುದು.—w18.09, ಪುಟ 8-11.

ಬೋಧನಾ ಸಲಕರಣೆಗಳಲ್ಲಿ ಏನೆಲ್ಲ ಇದೆ?

ಅದರಲ್ಲಿ ಕಾಂಟ್ಯಾಕ್ಟ್‌ ಕಾರ್ಡ್‌ ಮತ್ತು ಆಮಂತ್ರಣ ಪತ್ರಗಳಿವೆ. ಒಳ್ಳೇದಾಗಿ ವಿನ್ಯಾಸಿಸಿರುವ ಎಂಟು ಕರಪತ್ರಗಳಿವೆ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳೂ ಇವೆ. ಕೆಲವು ಕಿರುಹೊತ್ತಗೆಗಳಿವೆ. ಬೈಬಲ್‌ ಬೋಧನೆಗಳ ಮತ್ತು ತತ್ವಗಳ ಬಗ್ಗೆ ಕಲಿಸುವ ಎರಡು ಪುಸ್ತಕಗಳು ಸಹ ಇವೆ. ನಾಲ್ಕು ವಿಡಿಯೋಗಳು ಇವೆ. ಅದರಲ್ಲೊಂದು ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು?—w18.10, ಪುಟ 16.

ಜ್ಞಾನೋಕ್ತಿ 23:23​ರಲ್ಲಿ ಹೇಳಿರುವಂತೆ ಒಬ್ಬ ಕ್ರೈಸ್ತನು ಹೇಗೆ ‘ಸತ್ಯವನ್ನು ಕೊಂಡುಕೊಳ್ಳಬಹುದು’?

ಸತ್ಯ ಕಲಿಯಲು ನಾವು ದುಡ್ಡು ಕೊಡಬೇಕಾಗಿಲ್ಲ. ಆದರೆ ಸತ್ಯವನ್ನು ಕೊಂಡುಕೊಳ್ಳಲು ನಮ್ಮ ಸಮಯವನ್ನು ಕೊಡಬೇಕು ಮತ್ತು ನಮ್ಮ ಪ್ರಯತ್ನವನ್ನು ಹಾಕಬೇಕು.—w18.11, ಪುಟ 4.

ಹೋಶೇಯನು ತನ್ನ ಹೆಂಡತಿ ಗೋಮೆರಳ ಜೊತೆ ನಡಕೊಂಡ ವಿಧದಿಂದ ನಾವೇನು ಕಲಿಯಬಹುದು?

ಗೋಮೆರ ಪದೇಪದೇ ವ್ಯಭಿಚಾರ ಮಾಡಿದರೂ ಹೋಶೇಯನು ಅವಳನ್ನು ಕ್ಷಮಿಸಿದನು ಮತ್ತು ಅವಳ ಜೊತೆನೇ ಬಾಳಿದನು. ಒಬ್ಬ ಕ್ರೈಸ್ತನ ಸಂಗಾತಿ ಅನೈತಿಕತೆ ನಡೆಸಿದರೂ ಆ ಕ್ರೈಸ್ತನು ತನ್ನ ಸಂಗಾತಿಯನ್ನು ಕ್ಷಮಿಸಿದರೆ ಏನೂ ತಪ್ಪಿಲ್ಲ. ತಪ್ಪು ಮಾಡಿರುವ ಸಂಗಾತಿ ಜೊತೆ ಆ ಕ್ರೈಸ್ತನು ಮತ್ತೆ ಲೈಂಗಿಕತೆಯಲ್ಲಿ ಒಳಗೂಡಿದರೆ ತನ್ನ ಸಂಗಾತಿ ಮಾಡಿದ ವ್ಯಭಿಚಾರವನ್ನು ಆಧಾರವಾಗಿಟ್ಟು ವಿಚ್ಛೇದನ ಕೊಡಲು ಸಾಧ್ಯವಿಲ್ಲ.—w18.12, ಪುಟ 13.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ