ನಮ್ಮ ಕ್ರೈಸ್ತ ಜೀವನ
ನೀವು ತಯಾರಿದ್ದೀರಾ?
ದಿಢೀರ್ ಅಂತ ವಿಪತ್ತು ಬಂದ್ರೆ ನೀವು ತಯಾರಿದ್ದೀರಾ? ನಾವು ನೆನಸದ ಸಮಯದಲ್ಲಿ ಭೂಕಂಪ, ಚಂಡಮಾರುತ, ಕಾಡ್ಗಿಚ್ಚು ಬಂದು ಎಲ್ಲವನ್ನು ಸರ್ವನಾಶ ಮಾಡಬಹುದು. ಅಷ್ಟೇ ಅಲ್ಲ ಭಯೋತ್ಪಾದಕರ ದಾಳಿ, ಗಲಾಟೆ, ಅಂಟುರೋಗ ಯಾವಾಗ ಬೇಕಾದ್ರೂ ಎಲ್ಲಿ ಬೇಕಾದ್ರೂ ಶುರು ಆಗಬಹುದು. (ಪ್ರಸಂ 9:11) ಇಂಥ ದುರಂತಗಳು ನಾವಿರೋ ಜಾಗದಲ್ಲಿ ಯಾವತ್ತೂ ಆಗಲ್ಲ ಅಂತ ನೆನಸಬಾರದು.
ನಮ್ಮಲ್ಲಿ ಪ್ರತಿಯೊಬ್ಬರೂ ವಿಪತ್ತುಗಳನ್ನು ಎದುರಿಸಲು ಬೇಕಾದ ತಯಾರಿಯನ್ನು ಮಾಡಲೇಬೇಕು. (ಜ್ಞಾನೋ 22:3) ವಿಪತ್ತಿನ ಸಮಯದಲ್ಲಿ ಯೆಹೋವನ ಸಂಸ್ಥೆ ತಕ್ಕಮಟ್ಟಿಗೆ ಸಹಾಯ ನೀಡುತ್ತೆ. ಆದ್ರೂ ಸ್ವಂತ ಹೊರೆ ಹೊತ್ತುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ.—ಗಲಾ 6:5.
ವಿಪತ್ತು ಬರುವ ಮುಂಚೆನೇ ತಯಾರಾಗಿರಿ ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ವಿಪತ್ತಿನ ಸಮಯದಲ್ಲಿ ಯೆಹೋವನ ಸಹಾಯ ಪಡೀಬೇಕಂದ್ರೆ ನಾವೇನು ಮಾಡಬೇಕು?
ನಾವು ಯಾಕೆ . . .
• ವಿಪತ್ತಿಗೆ ಮುಂಚೆ, ವಿಪತ್ತಿನ ಸಮಯದಲ್ಲಿ ಮತ್ತು ವಿಪತ್ತಿನ ನಂತರ ಹಿರಿಯರೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು?
• ಒಂದು ಎಮರ್ಜೆನ್ಸಿ ಬ್ಯಾಗ್ ರೆಡಿ ಇಟ್ಟುಕೊಳ್ಳಬೇಕು?—ಎಚ್ಚರ!17.5-E ಪುಟ 6
• ಮುಂಚೆನೇ ಬೇರೆ ಬೇರೆ ತುರ್ತು ಸನ್ನಿವೇಶಗಳ ಬಗ್ಗೆ ಚರ್ಚಿಸಿ ಅಂಥ ಸಮಯಗಳಲ್ಲಿ ಏನು ಮಾಡಬೇಕು ಅಂತ ನಿರ್ಧರಿಸಬೇಕು?
ವಿಪತ್ತಿನ ಸಮಯದಲ್ಲಿ ನಾವು ಬೇರೆಯವರಿಗೆ ಯಾವ ಮೂರು ವಿಧಗಳಲ್ಲಿ ಸಹಾಯ ಮಾಡಬಹುದು?