ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ನವೆಂಬರ್‌ ಪು. 31
  • ನಿಮಗೆ ಗೊತ್ತಿತ್ತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ ಗೊತ್ತಿತ್ತಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಅನುರೂಪ ಮಾಹಿತಿ
  • ನೀವೊಬ್ಬ ವಿಶ್ವಾಸಾರ್ಹ ಮನೆವಾರ್ತೆಯವರು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ವ್ಯಾವಹಾರಿಕ ವಿವೇಕದಿಂದ ಭವಿಷ್ಯಕ್ಕಾಗಿ ಸಿದ್ಧಮಾಡಿ
    ಅತ್ಯಂತ ಮಹಾನ್‌ ಪುರುಷ
  • ನಂಬಿಗಸ್ತ ಮನೆವಾರ್ತೆಯವ ಮತ್ತು ಆಡಳಿತ ಮಂಡಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯಜಮಾನನ ಸ್ವತ್ತುಗಳ ಕಾಳಜಿವಹಿಸುವುದು
    1998 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ನವೆಂಬರ್‌ ಪು. 31
ಪ್ರಾಚೀನ ಈಜಿಪ್ಟಿನ ಮನೆವಾರ್ತೆಯವನೊಬ್ಬ ಕೂಲಿಯಾಳುಗಳ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದಾನೆ

ನಿಮಗೆ ಗೊತ್ತಿತ್ತಾ?

ಬೈಬಲ್‌ ಕಾಲದಲ್ಲಿದ್ದ ಮನೆವಾರ್ತೆಯವರಿಗೆ ಯಾವ ಜವಾಬ್ದಾರಿಯಿತ್ತು?

ಬೈಬಲ್‌ ಕಾಲದಲ್ಲಿ ಮನೆವಾರ್ತೆಯವನು ಬೇರೊಬ್ಬನ ಮನೆಯನ್ನು ಅಥವಾ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದನು ಅಥವಾ ಅದರ ಮೇಲ್ವಿಚಾರಣೆ ಮಾಡುತ್ತಿದ್ದನು.

ಯಾಕೋಬನ ಮಗನಾದ ಯೋಸೇಫನು ಈಜಿಪ್ಟ್‌ ದೇಶದಲ್ಲಿ ದಾಸನಾಗಿದ್ದಾಗ ಅವನು ತನ್ನ ಧಣಿಯ ಮನೆ ಮತ್ತು ಆಸ್ತಿಯನ್ನು ನೋಡಿಕೊಳ್ಳುವ ಮನೆವಾರ್ತೆಯವನಾದನು. ಸ್ವತಃ ಅವನ ಧಣಿಯೇ “ತನ್ನ ಆಸ್ತಿಯನ್ನೆಲ್ಲಾ ಯೋಸೇಫನ ವಶಕ್ಕೆ ಒಪ್ಪಿಸಿದನು.” (ಆದಿ. 39:2-6) ಕೆಲವು ವರ್ಷಗಳ ನಂತರ ಯೋಸೇಫನು ಈಜಿಪ್ಟ್‌ ದೇಶದ ಉನ್ನತ ಅಧಿಕಾರಿಯಾದಾಗ ತನ್ನ ಮನೆ ಮತ್ತು ಆಸ್ತಿಯನ್ನು ನೋಡಿಕೊಳ್ಳಲು ಒಬ್ಬ ಮನೆವಾರ್ತೆಯವನನ್ನು ನೇಮಿಸಿದನು.—ಆದಿ. 44:4.

ಯೇಸುವಿನ ಸಮಯದಲ್ಲಿ ಹೆಚ್ಚಾಗಿ ಜಮೀನ್ದಾರರು ತಮ್ಮ ಜಮೀನುಗಳ ಹತ್ತಿರ ವಾಸಿಸುತ್ತಿರಲಿಲ್ಲ, ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಹಾಗಾಗಿ ಅವರು ತಮ್ಮ ಜಮೀನುಗಳ ಕೆಲಸವನ್ನು ನೋಡಿಕೊಳ್ಳಲು ಮನೆವಾರ್ತೆಯವನನ್ನು ನೇಮಿಸುತ್ತಿದ್ದರು.

ಮನೆವಾರ್ತೆಯ ಕೆಲಸ ಮಾಡುವವನು ಎಂಥ ವ್ಯಕ್ತಿಯಾಗಿರಬೇಕಿತ್ತು? ಒಂದನೇ ಶತಮಾನದ ರೋಮನ್‌ ಬರಹಗಾರನಾದ ಕಾಲ್ಯಮೆಲ್ಲ ಪ್ರಕಾರ ಮೇಲ್ವಿಚಾರಕನಾಗಿ ಅಥವಾ ಮನೆವಾರ್ತೆಯವನಾಗಿ ಯಾರನ್ನು ನೇಮಿಸಲಾಗುತ್ತಿತ್ತೋ ಅವನಿಗೆ ಜಮೀನು “ಕೆಲಸ ಮಾಡುವುದಕ್ಕೆ ಗೊತ್ತಿರಬೇಕಿತ್ತು.” ಅವನು “ಕೂಲಿಯಾಳುಗಳಿಂದ ಚೆನ್ನಾಗಿ ಕೆಲಸ ಮಾಡಿಸಬೇಕಿತ್ತು, ಅದೇ ಸಮಯದಲ್ಲಿ ಅವರ ಜೊತೆ ಕ್ರೂರವಾಗಿ ನಡಕೊಳ್ಳಬಾರದಿತ್ತು.” ಕಾಲ್ಯಮೆಲ್ಲ ಹೇಳಿದ್ದು: “ಎಲ್ಲಕ್ಕಿಂತ ಹೆಚ್ಚಾಗಿ ಮನೆವಾರ್ತೆಯವನು ತನಗೆ ಎಲ್ಲಾ ಗೊತ್ತು, ಯಾರೂ ತನಗೆ ಏನೂ ಹೇಳಬೇಕಾಗಿಲ್ಲ ಎಂದು ಯೋಚಿಸುವ ವ್ಯಕ್ತಿಯಾಗಿರಬಾರದಿತ್ತು. ಹೊಸ-ಹೊಸ ವಿಷಯಗಳನ್ನು ಕಲಿಯುವುದಕ್ಕೆ ಆಸಕ್ತಿ ತೋರಿಸುವವನಾಗಿರಬೇಕಿತ್ತು.”

ಕ್ರೈಸ್ತ ಸಭೆಯಲ್ಲಿ ನಡೆಯುತ್ತಿದ್ದ ಕೆಲವು ಚಟುವಟಿಕೆಗಳನ್ನು ವಿವರಿಸಲು ದೇವರ ವಾಕ್ಯ ಮನೆವಾರ್ತೆಯವನ ಉದಾಹರಣೆಯನ್ನು ಬಳಸಿದೆ. ಉದಾಹರಣೆಗೆ, ಕ್ರೈಸ್ತರು ‘ದೇವರ ಅಪಾತ್ರ ದಯೆಯ ಉತ್ತಮ ಮನೆವಾರ್ತೆಯವರಾಗಿದ್ದು’ ತಮಗೆ ದೇವರು ಕೊಟ್ಟ ಸಾಮರ್ಥ್ಯವನ್ನು “ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ” ಉಪಯೋಗಿಸುವಂತೆ ಅಪೊಸ್ತಲ ಪೇತ್ರನು ಪ್ರೋತ್ಸಾಹಿಸಿದ್ದಾನೆ.—1 ಪೇತ್ರ 4:10.

ಯೇಸು ಕೂಡ ಮನೆವಾರ್ತೆಯವನ ಉದಾಹರಣೆಯನ್ನು ಉಪಯೋಗಿಸಿ ಮಾತಾಡಿದ್ದಾನೆ. ಅದು ಲೂಕ 16:1-8 ರಲ್ಲಿದೆ. ತಾನು ರಾಜನಾಗಿ ಬರುವ ಸಾನ್ನಿಧ್ಯದ ಸೂಚನೆಯ ಕುರಿತು ಪ್ರವಾದನೆ ತಿಳಿಸುವಾಗ ಯೇಸು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಅಥವಾ ‘ನಂಬಿಗಸ್ತ ಮನೆವಾರ್ತೆಯವನನ್ನು’ ನೇಮಿಸುವೆನು ಎಂದು ತನ್ನ ಶಿಷ್ಯರಿಗೆ ಮಾತು ಕೊಟ್ಟಿದ್ದನು. ಈ ಮನೆವಾರ್ತೆಯವನ ಮುಖ್ಯ ಕೆಲಸ ಅಂತ್ಯಕಾಲದಲ್ಲಿ ಕ್ರಿಸ್ತನ ಹಿಂಬಾಲಕರಿಗೆ ನಿರಂತರವಾಗಿ ಆಧ್ಯಾತ್ಮಿಕ ಆಹಾರ ಕೊಡುವುದೇ ಆಗಿದೆ. (ಮತ್ತಾ. 24:45-47; ಲೂಕ 12:42) ಇಂದು ಆ ನಂಬಿಗಸ್ತ ಮನೆವಾರ್ತೆಯವನು ನಮ್ಮ ನಂಬಿಕೆಯನ್ನು ಬಲಪಡಿಸುವ ಸಾಹಿತ್ಯಗಳನ್ನು ತಯಾರಿಸಿ ಲೋಕವ್ಯಾಪಕವಾಗಿ ಕೊಡುತ್ತಿದ್ದಾನೆ. ಇದನ್ನು ಪಡೆಯುತ್ತಿರುವ ನಾವು ಎಷ್ಟು ಕೃತಜ್ಞರಾಗಿರಬೇಕಲ್ವಾ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ