ಆತ್ಮಿಕ ಗುರಿಗಳ ಕಡೆಗೆ ನೀವು ಕುಟುಂಬವಾಗಿ ಕಾರ್ಯನಡಿಸುತ್ತೀರೋ?
1 ಸಮರ್ಪಿತ ಜನರೋಪಾದಿ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವ ಗುರಿಯು ನಮಗಿದೆ. ನಿತ್ಯಜೀವದ ಬಹುಮಾನವನ್ನು ಪಡೆಯಲು ಸಹಾ ನಾವು ಆತುರದಿಂದ ಎದುರು ನೋಡುತ್ತಿದ್ದೇವೆ. ಆದರೆ ನಾವು ನಮ್ಮ ಸ್ವಂತ ನಂಬಿಗಸ್ತಿಕೆ ಮತ್ತು ರಕ್ಷಣೆಯಲ್ಲಿ ಮಾತ್ರವೇ ಆಸಕ್ತರ
ಲ್ಲ ನಿಶ್ಚಯ. ಇತರರು ಸಹಾ ಆ ಗುರಿಗಳನ್ನು ಮುಟ್ಟುವಂತೆ ನೆರವಾಗಲು ನಾವು ಬಯಸುತ್ತೇವೆ, ವಿಶೇಷವಾಗಿ ನಮ್ಮ ಸ್ವಂತ ಕುಟುಂಬಕ್ಕೆ ಸಹಾಯ ಮಾಡಲು ನಾವು ಬಯಸಬೇಕು.—ಯೋಹಾ. 1:40, 41; 1 ತಿಮೊ. 5:8.
2 ಪರ್ವತವನ್ನು ಹೇಗೆ ಹೆಜ್ಜೆ ಹೆಜ್ಜೆಯಾಗಿ ಹೇಗೆ ಹತ್ತಲಾಗುತ್ತದೋ ಹಾಗೆಯೇ, ನಮ್ಮ ಕ್ರೈಸ್ತ ಮಾರ್ಗಕ್ರಮದಲ್ಲಿ ನಾವು ಹೆಜ್ಜೆ ಹೆಜ್ಜೆಯಾಗಿ ಪ್ರಗತಿಯನ್ನು ಮಾಡ ಸಾಧ್ಯವಿದೆ. ಇದಕ್ಕಾಗಿ ನಾವು ನಮಗಾಗಿ ಆತ್ಮಿಕ ಗುರಿಗಳನ್ನು ಇಡುತ್ತೇವೆ. ಇದು ವ್ಯಕ್ತಿಪರರಿಗೆ ಸೀಮಿತವಲ್ಲ. ಕುಟುಂಬಗಳು ಸಹಾ ಕೂಟಗಳಲ್ಲಿ, ಕ್ಷೇತ್ರ ಸೇವೆಯಲ್ಲಿ ಮತ್ತು ಕುಟುಂಬ ಅಭ್ಯಾಸದ ಸಂಬಂಧದಲ್ಲಿ ಗುರಿಗಳನ್ನಿಡಬಹುದು. ಅಲ್ಲಿ ಪ್ರಗತಿಗಳನ್ನು ಮಾಡಲಿದೆಯೇ? ಕುಟುಂಬದ ನಿರ್ದಿಷ್ಟ ಸದಸ್ಯರಿಗೆ ಪೂರ್ಣ ಸಮಯದ ಸೇವಾ ಗುರಿಯನ್ನು ಮುಟ್ಟುವಂತೆ ಸಹಾಯ ಮಾಡಬಹುದೋ? ನಿರ್ಧರಿಸಿದ ಗುರಿಗಳನ್ನು ಮುಟ್ಟುವಂತೆ ಒಂದು ಕುಟುಂಬ ಚರ್ಚೆಯು ಸಹಾಯ ಮಾಡೀತು. ಅವನ್ನು ಮುಟ್ಟಿದ ಮೇಲೆ, ಇತರ ದೇವಪ್ರಭುತ್ವ ಗುರಿಗಳನ್ನು ಇಡ ಸಾಧ್ಯವಿದೆ. ಹೀಗೆ, ಹೆಜ್ಜೆ ಹೆಜ್ಜೆಯಾಗಿ ಆತ್ಮಿಕ ಪ್ರಗತಿಗಳನ್ನು ಮಾಡ ಸಾಧ್ಯವಾಗುತ್ತದೆ.
ಕೂಟಗಳು
3 ಕೂಟಗಳಿಗೆ ಸಮಯಕ್ಕೆ ಸರಿಯಾಗಿ ಬರುವ ಗುರಿಯನ್ನಿಡುವ ಅಗತ್ಯವು ಕೆಲವು ಕುಟುಂಬಗಳಿಗಿರಬಹುದು. ದೊಡ್ಡ ಕುಟುಂಬಗಳಿಗೆ, ಕಷ್ಟದ ಕೆಲಸಗಳ ಕಾಲತಖ್ತೆ ಇರುವವರಿಗೆ, ಅಥವಾ ಪ್ರಯಾಣ ಮಾಡಲು ವಾಹನಾದಿಗಳ ಸಮಸ್ಯೆ ಇರುವವರಿಗೆ ಇದೊಂದು ನಿಜ ಪಂಥಾಹ್ವಾನವಾಗಬಲ್ಲದು. ಪರಸ್ಪರ ಸಹಕಾರ ಮತ್ತು ಒಳ್ಳೇ ವ್ಯವಸ್ಥಾಪನೆ ಇದಕ್ಕೆ ಆವಶ್ಯಕ.
4 ಕುಟುಂಬವು ಗಮನಿಸಬೇಕಾದ ಇನ್ನೊಂದು ವ್ಯಾವಹಾರ್ಯ ಗುರಿಯು ಕೂಟಗಳಲ್ಲಿ ಉತ್ತರ ಕೊಡುವದೇ. ಕುಟುಂಬದ ಕೆಲವು ಸದಸ್ಯರು ಒಂದು ಚಿಕ್ಕ ಉತ್ತರವನ್ನು ಓದಿಹೇಳಲು ಇಚ್ಛಿಸಬಹುದು. ಆದರೂ, ಒಬ್ಬನ ಸ್ವಂತ ಮಾತುಗಳಲ್ಲಿ ಸಂಕ್ಷಿಪ್ತವಾದ ಮತ್ತು ವಿಶಿಪ್ಟ ಉತ್ತರಗಳನ್ನು ಕೊಡುವದು ಆತ್ಮಿಕ ಪ್ರಗತಿಯನ್ನು ಸೂಚಿಸುತ್ತದೆ ಮತ್ತು ಪ್ರತಿಫಲದಾಯಕ. ತಮ್ಮ ಉತ್ತರಗಳನ್ನು ತಯಾರಿಸುವುದರಲ್ಲಿ ಕುಟುಂಬ ಸದಸ್ಯರು ಒಬ್ಬರಿಗೊಬ್ಬರು ಸಹಾಯ ಮಾಡಬಲ್ಲರು. ದೇವಪ್ರಭುತ್ವ ಶಾಲೆಯಲ್ಲೂ ಪ್ರಗತಿ ಮಾಡಲು ಅವರು ಒಬ್ಬರಿಗೊಬ್ಬರು ನೆರವಾಗಶಕ್ತರು. ಇದರಲ್ಲಿ ಕಿರಿಯ ಕುಟುಂಬ ಸದಸ್ಯರ ಭಾಷಣ ರಿಹರ್ಸ್ಗಳಿಗೆ ಕಿವಿಗೊಡುವದು, ಹೊರಮೇರೆಯನ್ನು ಹೇಗೆ ಉಪಯೋಗಿಸುವದೆಂದು ತೋರಿಸುವದು, ಅವರ ಶಬ್ದ ಉಚ್ಚಾರವನ್ನು ಸರಿಪಡಿಸುವದು ಇತ್ಯಾದಿಗಳು ಸೇರಿರಬಹುದು. ಒಳ್ಳೇ ಶಿಕ್ಷಕನಾಗಿ ಪರಿಣಮಿಸುವ ಅಥವಾ ಉತ್ತಮ ಬಹಿರಂಗ ವಾಚಕನಾಗುವ ಗುರಿಯು, ದಕ್ಷತೆಯ ಪ್ರಯತ್ನಕ್ಕೆ ಅರ್ಹವಾಗಿದೆ.—1 ತಿಮೊ. 4:13.
ಕ್ಷೇತ್ರ ಸೇವೆ
5 ಕೆಲವು ಕುಟುಂಬಗಳಿಗೆ ಕ್ಷೇತ್ರ ಸೇವೆಯಲ್ಲಿ ಕ್ರಮತೆಯನ್ನು ಗಳಿಸುವ ಅಗತ್ಯವಿದೆ. ನಿಮ್ಮ ಇಡೀ ಕುಟುಂಬವು ಪ್ರತಿ ತಿಂಗಳು ಕೆತ್ರ ಸೇವೆಯಲ್ಲಿ ಭಾಗವಹಿಸುತ್ತದೋ? ಸದ್ಯದ ಸಂಭಾಷಣೆಗಾಗಿ ವಿಷಯವನ್ನು ಅಥವಾ ಒಂದು ಹೊಸ ಪತ್ರಿಕಾ ಪ್ರಸಂಗವನ್ನು ಕಲಿಯಲು ಕುಟುಂಬ ಸದಸ್ಯರಿಗೆ ಸಹಾಯ ಮಾಡುವ ವಿಷಯದಲ್ಲೀನು? ಮನೆ ಬೈಬಲಧ್ಯಯನವನ್ನು ಪ್ರಾರಂಭಿಸುವ ಗುರಿಯೂ ಅಲ್ಲಿದೆ ಅಥವಾ ಈವಾಗಲೇ ನಡಿಸುತ್ತಿರುವ ಒಂದು ಅಭ್ಯಾಸವನ್ನು ಹೆಚ್ಚು ಕ್ರಮವಾಗಿ ನಡಿಸುವ ಗುರಿಯನ್ನೂ ಇಡಬಹುದು.
ಕುಟುಂಬ ಅಭ್ಯಾಸ
6 ಕೆಲವು ಕುಟುಂಬಗಳಿಗೆ ಕುಟುಂಬ ಅಭ್ಯಾಸದ ವೇಳಾಪಟ್ಟಿಯನ್ನು ನಂಬಿಗಸ್ತಿಕೆಯಿಂದ ಪಾಲಿಸುವುದು ಒಂದು ನಿಜವಾದ ಪಂಥಾಹ್ವಾನವಾಗಿದೆ. ಕೆಲವು ಸಂದರ್ಭದಲ್ಲಿ ಆ ಅಭ್ಯಾಸವನ್ನು ಪುನ: ನಿಯಮಿಸುವ ಅಗತ್ಯ ಉಂಟಾದೀತು. ಆದರೆ ಇದು ಅನ್ಯಥಾ ಉಪಾಯವಿಲ್ಲದಿದ್ದರೆ ಮಾತ್ರ. ಇನ್ನೊಂದು ಅತ್ಯುತ್ತಮ ಗುರಿಯು, ವಾರದ ಬೈಬಲ್ ವಾಚನ ನೇಮಕವನ್ನು ಕ್ರಮವಾಗಿ ಓದುವದೇ, ಪ್ರಾಯಶಃ ಅದನ್ನು ಕುಟುಂಬ ಅಭ್ಯಾಸದಲ್ಲಿ ಒಳಗೂಡಿಸುವುದು ಕೂಡ. ಹೆಚ್ಚಿನ ಜನರಿಗೆ, ವಾರಕ್ಕಾಗಿ ನೇಮಿತವಾದ ವಾಚನವನ್ನು ಮಾಡಲು ಕೇವಲ 20-25 ನಿಮಿಷಗಳು ಸಾಕು. ಅದು ಒಬ್ಬನ ಶಾಸ್ತ್ರವಚನಗಳ ಜ್ಞಾನಕ್ಕೆ ಹೆಚ್ಚನ್ನು ಕೂಡಿಸಬಲ್ಲದು ಮತ್ತು ಅದು ಪ್ರತಿ ವಾರದ ಬೈಬಲ್ ಹೈಲೈಟ್ಸ್ನ ಪುನರ್ವಿಮರ್ಶೆಯನ್ನು ಅಧಿಕ ಆಸಕ್ತಿಕರವಾಗಿ ಮಾಡುತ್ತದೆ.
7 ಕುಟುಂಬಗಳು ಮತ್ತು ವ್ಯಕ್ತಿಗಳು ತಮಗಾಗಿ ಇಡಬಹುದಾದ ಅನೇಕ ಗುರಿಗಳು ಅಲ್ಲಿವೆ. ಉದಾಹರಣೆಗೆ, ಬೇಗನೇ ಸಹಾಯಕ ಪಯನೀಯರ ಸೇವೆಯನ್ನು ಕುಟುಂಬವಾಗಿ ಮಾಡಲು ಪ್ರಯತ್ನಿಸುವ ವಿಷಯದಲ್ಲೇನು? ಅದಲ್ಲದೆ, ಒಳ್ಳೆಯ ವ್ಯವಸ್ಥಾಪನೆ ಮತ್ತು ಸಹಕಾರದಿಂದ, ಕುಟುಂಬವು ತನ್ನ ಸದಸ್ಯರಲ್ಲಿ ಕಡಿಮೆಪಕ್ಷ ಒಬ್ಬನನ್ನಾದರೂ ಕ್ರಮದ ಪಯನೀಯರನಾಗಿ ಮಾಡಲು ನೆರವಾಗಬಹುದೋ? ಶುಶ್ರೂಷೆ ಸೇವಕನಾಗುವ ಅಥವಾ ಒಬ್ಬ ಹಿರಿಯನಾಗುವ ಗುರಿಯೂ ಅಲ್ಲಿದೆ. ಯುವ ಸಹೋದರರು ಬೆತೆಲ್ ಸೇವೆಯನ್ನು ಗುರಿಯಾಗಿಡಬಹುದು. ಈ ಗುರಿಗಳನ್ನು ಸಾಧಿಸ ಸಾಧ್ಯವಿದೆ, ಆದರೆ ದಕ್ಷತೆ ಮತ್ತು ಪರಿಶ್ರಮದ ಕೆಲಸ ಆವಶ್ಯಕ. ಹೀಗೆ ನಾವು ನಮ್ಮ ವ್ಯಕ್ತಿಪರ ಮತ್ತು ಕುಟುಂಬ ಗುರಿಗಳನ್ನು ಮುಟ್ಟಲು ಶ್ರಮಿಸುವಾಗ, ಯೆಹೋವನ ಸೇವೆಯ ದರ್ಜೆಯೂ ಪ್ರಗತಿಗೊಳ್ಳುವದು; ಇವೆಲ್ಲವೂ ಯೆಹೋವನ ಗೌರವ ಮತ್ತು ಆತನ ಮಹಿಮೆಗಾಗಿಯೇ.—ಕೀರ್ತ. 96:7, 8.