ಸುವಾರ್ತೆಯನ್ನು ನೀಡುವದು—ವೈಯಕ್ತಿಕ ನಿಶ್ಚಯದೊಂದಿಗೆ
1 ಥೆಸಲೋನಿಕ ಸಭೆಯ ಪ್ರಯಾಸದ ಕೆಲಸವನ್ನು ನೆನಪಿಗೆ ತರುತ್ತಾ ಅಪೋಸ್ತಲನಾದ ಪೌಲನು ಅವರಿಗಂದದ್ದು: “ನಾವು ಸಾರಿದ ಸುವಾರ್ತೆ ನಿಮ್ಮಲ್ಲಿ ಬರೀ ಮಾತಾಗಿ ಬಾರದೆ ಶಕಿಯ್ತೊಡನೆಯೂ ಪವಿತ್ರಾತ್ಮದೊಡನೆಯೂ ಬಹು ನಿಶ್ಚಯದೊಡನೆಯೂ ಬಂತೆಂಬದನ್ನೂ ಬಲ್ಲೆವು. . .ಮತ್ತು ನೀವು ನಮ್ಮನ್ನೂ ಕರ್ತನಾದ ಯೇಸುವನ್ನೂ ಅನುಸರಿಸುವವರಾದಿರಿ.” (1 ಥೆಸ. 1:5, 6) ಹೌದು, ಪೌಲ ಮತ್ತು ಅವನ ಸಂಗಡಿಗರಿಗೆ ಹಾಗೂ ಥೆಸಲೋನಿಕದ ಸಭೆಗೆ ತಾವು ದೇವರನ್ನು ಯೋಗ್ಯವಾಗಿ ಆರಾಧಿಸುತ್ತೇವೆಂಬ ನಿಶ್ಚಯತೆ ಇತ್ತು. ಈ ನಿಶ್ಚಯತೆಯು ಅವರ ಮಾತುಗಳಲ್ಲಿ ಪ್ರತಿಬಿಂಬಿಸಿತ್ತು. ನಮ್ಮ ಶುಶ್ರೂಷೆಯು ಸಹಾ ಬಲವಾದ ವೈಯಕ್ತಿಕ ನಿಶ್ಚಯತೆಯನ್ನು ಪ್ರತಿಬಿಂಬಿಸಬೇಕು.
ಹೃದಯದೊಳಗಿಂದ ಮಾತಾಡಿರಿ
2 ನಮ್ಮ ಶುಶ್ರೂಷೆಯಲ್ಲಿ ವೈಯಕ್ತಿಕ ನಿಶ್ಚಯತೆಯನ್ನು ಪ್ರತಿಬಿಂಬಿಸುವದು ಹೇಗೆ? ಮೂಲದಲ್ಲಿ ಅದು ನಮ್ಮ ಹೃದಯದಲ್ಲಿ ಏನಿದೆಯೋ ಅದನ್ನು ವ್ಯಕ್ತಪಡಿಸುವಿಕೆಯಲ್ಲಿ ಒಳಗೂಡಿದೆ. ನಾವು ಸುವಾರ್ತೆಯನ್ನು ನೀಡುವ ವಿಧಾನವು ನಾವೇನನ್ನು ಹೇಳುತ್ತೇವೋ ಅದನ್ನು ನಿಜವಾಗಿ ನಂಬುವವರೆಂದು ತೋರಿಸತಕ್ಕದ್ದು. ನಾವು ಹೃದಯದಿಂದ ಮಾತಾಡುವುದಾದರೆ ನಮ್ಮ ಪ್ರಾಮಾಣಿಕತೆ ಮತ್ತು ವೈಯಕ್ತಿಕ ನಿಶ್ಚಯತೆ ಹೊರಸೂಸುವುದು. “ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಹೊರಡುವು” ದಷ್ಟೇ.—ಲೂಕ 6:45.
3 ವೈಯಕ್ತಿಕ ನಿಶ್ಚಯತೆಯನ್ನು ನಾವು ಪ್ರತಿಬಿಂಬಿಸಬೇಕಾದರೆ ಸತ್ಯದ ಕಡೆಗೆ ಮತ್ತು ಯೆಹೋವನ ಸಂಸ್ಥೆಯ ಕಡೆಗೆ ನಮಗೆ ಆಳವಾದ ಗಣ್ಯತೆಯು ಇರಬೇಕು. ಸತ್ಯವನ್ನು ಪಡೆದಾದ ಮೇಲೆ, ಇತರರು ಅದನ್ನು ಕಲಿಯುವಂತೆ ನೆರವಾಗುವುದು ನಮ್ಮ ಜವಾಬ್ದಾರಿಕೆಯು. ಈ ವಿಷಯಗಳ ಕುರಿತು ಖಂಡಿತಭಾವದಿಂದ ಯೋಚಿಸುವದರಿಂದ ಸತ್ಯವನ್ನು ನಿಶ್ಚಯತೆಯಿಂದ ನೀಡಲು ನಾವು ಪ್ರೇರಿಸಲ್ಪಡುವೆವು. ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡಿದರಲ್ಲಿ ನಮಗಾಗಿ ಒಳ್ಳೇ ಮಾದರಿಯನ್ನು ಯೇಸು ಇಟ್ಟಿದ್ದಾನೆ.—ಯೋಹಾ. 4:21-24.
4 ನಾವು ಪುಸ್ತಕ ನೀಡುವ ರೀತಿಯು ಸಹಾ ನಾವು ಹೃದಯದಿಂದ ಮಾತಾಡುತ್ತೇವೋ ಇಲ್ಲವೋ ಎಂಬದನ್ನು ಸೂಚಿಸುತ್ತದೆ. ಸುವಾರ್ತೆ ನೀಡುವಾಗ ನಾವು ನೀಡುವ ಪುಸ್ತಕದ ಒಳ್ಳೇ ಪರಿಚಯವು ನಮಗಿರಬೇಕು ಮತ್ತು ಮನೆಯವನ ಆಸಕ್ತಿಯನ್ನೆಬ್ಬಿಸುವಂತೆ ವಿಶಿಷ್ಟ ಲೇಖನವನ್ನು ಆರಿಸಿಕೊಳ್ಳಬೇಕು.
ವಿಲಕ್ಷಣತೆಯಿಂದ ದೂರವಿರ್ರಿ
5 ಕೆಲವು ಸಾರಿ ನಿರ್ದಿಷ್ಟ ವಿಲಕ್ಷಣತೆಯು ನಮ್ಮ ಪ್ರಾಮಾಣಿಕತೆ ಮತ್ತು ನಿಶ್ಚಯತೆಯ ಬಗ್ಗೆ ಮನೆಯವನು ಸಂದೇಹಿಸುವಂತೆ ಮಾಡುತ್ತದೆ. ಅನಾವಶ್ಯಕವಾಗಿ ನಮ್ಮ ಪುಸ್ತಕದ ಕಡೆಗೇ ನೋಡುತ್ತಿರುವುದು ಅಥವಾ ಮನೆಯವನೊಂದಿಗೆ ಮಾತಾಡುವಾಗ ದೃಷ್ಟಿಯನ್ನು ಅತ್ತಿತ್ತ ಅಲೆದಾಡಿಸುವಿಕೆಯು ನಾವು ಪ್ರಾಮಾಣಿಕರಲ್ಲದ ಅಭಿಪ್ರಾಯವನ್ನು ಕೊಡ ಸಾಧ್ಯವಿದೆ. ಮಾತಾಡುವಾಗ ನಾವು ಮನೆಯವನನ್ನು ನೋಡಬೇಕು. ಅದು ನಾವೇನನ್ನು ಹೇಳುತ್ತೇವೋ ಅದನ್ನು ನಂಬುತ್ತೇವೆಂದು ಸೂಚಿಸುತ್ತದೆ.
6 ಮುಖಭಾವ ಸಹಾ ಮಹತ್ವದ್ದು ಯಾಕೆಂದರೆ ಅದು ಸಾಮಾನ್ಯವಾಗಿ ನಮ್ಮ ಹೃದಯದಲ್ಲೇನಿದೆಂದು ಪ್ರಕಟಿಸುತ್ತದೆ. ದೃಢ ನಿಶ್ಚಯತೆ ಮತ್ತು ಮನೆಯವನಲ್ಲಿ ಯಥಾರ್ಥ ಆಸಕ್ತಿ ನಮ್ಮ ಮೋರೆಯಲ್ಲಿ ತೋರಿಬರಬೇಕು.
7 ನಮ್ಮ ಮಾತಿನ ಆಯ್ಕೆಯು ಸಹಾ ನಮ್ಮ ಬಗ್ಗೆ ಮನೆಯವನ ಭಾವವನ್ನು ಬಹಳವಾಗಿ ಪ್ರಭಾವಿಸುತ್ತದೆ. “ಹಾಗೆಂತ ನನ್ನೆಣಿಕೆ” ಮತ್ತು “ಹಾಗಿರಬಹುದು” ಎಂಬ ಹೇಳಿಕೆಯನ್ನು ನಾವು ಪದೇ ಪದೇ ಪ್ರಯೋಗಿಸಿದರೆ ನಾವೇನನ್ನುತ್ತೇವೋ ಆ ಬಗ್ಗೆ ನಮಗೇ ಖಾತ್ರಿಯಿಲವ್ಲೆಂದು ಮನೆಯವನು ನೆನಸಾನು. ನಾವು ಆರಿಸುವ ಮಾತುಗಳು ನಮ್ಮಲ್ಲಿರುವ ನಿಶ್ಚಯತೆಯನ್ನು ಪ್ರತಿಬಿಂಬಿಸಬೇಕು.—ಮತ್ತಾಯ 7:28, 29 ಹೋಲಿಸಿ.
8 ವೈಯಕ್ತಿಕ ನಿಶ್ಚಯದೊಡನೆ ಸುವಾರ್ತೆ ನೀಡಲು ನೀವು ಪ್ರಯಾಸ ಪಟ್ಟು ಕೆಲಸ ಮಾಡಿದಲ್ಲಿ, “ಕರ್ತನ ಸೇವೆಯಲ್ಲಿ ನೀವು ಪಡುವ ಪ್ರಯಾಸವು ನಿಶ್ಪಲವಾಗದು” ಎಂಬ ಆಶ್ವಾಸನೆಯು ನಿಮಗಿರುವುದು.—1 ಕೊರಿ. 15:58.